For Quick Alerts
ALLOW NOTIFICATIONS  
For Daily Alerts

ನೋಡಿ ಇದೆಲ್ಲಾ ಕಾರಣದಿಂದಲೂ ಎದೆಯ ಎಡಭಾಗದಲ್ಲಿ ನೋವು ಬರಬಹುದು!!

|

ಎದೆ ನೋವು ಎನ್ನುವುದು ಸಾಮಾನ್ಯವಾಗಿ ಎಲ್ಲರನ್ನು ಚಿಂತೆಗೀಡು ಮಾಡುವುದು. ಯಾಕೆಂದರೆ ಹಿಂದಿನಿಂದಲೂ ಎದೆ ನೋವು ಎಂದರೆ ಅದು ಹೃದಯಾಘಾತ ಬರುವ ಲಕ್ಷಣ ಎಂದು ನಂಬಿಕೊಂಡು ಬರಲಾಗಿದೆ. ಅದರಲ್ಲೂ ಎದೆಯ ಎಡ ಭಾಗದಲ್ಲಿ ನೋವು ಕಾಣಿಸಿಕೊಂಡರಂತೂ ಆತ ಭಯದಿಂದಲೇ ಅರ್ಧ ಜೀವ ಕಳೆದುಕೊಳ್ಳುತ್ತಾನೆ. ಹೀಗಾಗಿ ಎದೆ ನೋವು ಕಾಣಿಸಿಕೊಂಡವರು ಭೀತಿಯಿಂದಲೇ ಅಸ್ವಸ್ಥತೆಗೆ ಒಳಗಾಗುವರು.

chest pain

ಎದೆಯ ಎಡ ಭಾಗದಲ್ಲಿ ಕಾಣಿಸಿಕೊಳ್ಳುವಂತಹ ನೋವಿಗೆ ಬೇರೆ ಹಲವಾರು ಕಾರಣಗಳು ಇರಬಹುದು. ಇದು ಹೃದಯದ ಕಾಯಿಲೆ ಅಥವಾ ಹೃದಯಾಘಾತವೇ ಆಗಿರಬೇಕು ಎಂದೇನಿಲ್ಲ. ಎದೆ ನೋವಿಗೆ ಕೆಲವು ಕಾರಣಗಳು ಏನು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ನೀವು ಎದೆ ನೋವು ಕಾಣಿಸಿಕೊಂಡ ವೇಳೆ ಏನು ಮಾಡಬಹುದು ಎಂದು ಕೂಡ ಹೇಳಲಾಗಿದೆ. ಇದರಿಂದ ಯಾವುದೇ ಭೀತಿಯಿಲ್ಲದೆ ನೀವು ಎದೆ ನೋವಿನ ಸಮಸ್ಯೆ ನಿವಾರಣೆ ಮಾಡಿ. ಎದೆ ನೋವು ಬಂದ ತಕ್ಷಣ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಪರೀಕ್ಷೆಗೆ ಒಳಪಟ್ಟರೆ ಆಗ ದೊಡ್ಡ ಮಟ್ಟದ ಸಮಸ್ಯೆ ನಿವಾರಣೆ ಮಾಡಬಹುದು.

 ಗಂಟಲೂತ ಕಾಣಿಸಿಕೊಳ್ಳುವುದು!!

ಗಂಟಲೂತ ಕಾಣಿಸಿಕೊಳ್ಳುವುದು!!

ಗಂಟಲೂತವು ಒಂದು ರೀತಿಯ ಕಾಯಿಲೆಯಲ್ಲ, ಇದು ಸಾಮಾನ್ಯವಾಗಿ ಹೃದಯದ ಸಮಸ್ಯೆ ಅಥವಾ ಅಪಧಮನಿ ಹೃದಯದ ಕಾಯಿಲೆಯ ಲಕ್ಷಣ ಆಗಿರಬಹುದು. ಗಂಟಲೂತವು ಎದೆನೋವು, ಅಸ್ವಸ್ಥತೆ ಅಥವಾ ರಕ್ತದಿಂದ ಸರಿಯಾಗಿ ಆಮ್ಲಜನಕವು ಸಿಗದೇ ಇರುವಾಗ ಹೃದಯ ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವಂತಹ ಒತ್ತಡ. ನಿಮಗೆ ಇದೇ ವೇಳೆ ಕೈಗಳು, ಭುಜ, ಕುತ್ತಿಗೆ, ಬೆನ್ನು ಮತ್ತು ದವಡೆಯಲ್ಲಿ ಅಸ್ವಸ್ಥತೆ ಕಾಣಿಸಬಹುದು. ಈ ಪರಿಸ್ಥಿತಿಯನ್ನು ಸರಿಯಾಗಿ ಪರೀಕ್ಷೆ ಮಾಡಿಕೊಂಡು ಅದಕ್ಕೆ ಚಿಕಿತ್ಸೆ ನೀಡುವುದು ಅತೀ ಅಗತ್ಯವಾಗಿರುವುದು. ಪರೀಕ್ಷೆ ಮಾಡಿಸುವ ಕೆಲವು ವಿಧಾನಗಳು

*ರಕ್ತ ಪರೀಕ್ಷೆ

*ಎದೆ ಎಕ್ಸ್ ರೇ

*ಎಲೆಕ್ಟ್ರೋಕಾರ್ಡಿಯೋಗ್ರಾಮ್(ಇಕೆಜಿ)

*ಒತ್ತಡದ ಪರೀಕ್ಷೆ

ಹೃದಯಾಘಾತ

ಹೃದಯಾಘಾತ

ಹೃದಯದ ಸ್ನಾಯುಗಳಿಗೆ ಹಾನಿಯಾದ ಸಂದರ್ಭದಲ್ಲಿ ಹೃದಯಾಘಾತವು ಸಂಭವಿಸುವುದು. ಯಾಕೆಂದರೆ ಅದಕ್ಕೆ ಆಮ್ಲಜನಕವಿರುವ ರಕ್ತವು ಸರಿಯಾಗಿ ಸಿಗದೆ ಇರುವುದು. ಕೆಲವೊಂದು ಹೃದಯಾಘಾತವು ಮಧ್ಯಮ ಎದೆನೋವಿನಿಂದ ಆರಂಭವಾಗಿ ನಿಧಾನವಾಗಿ ಹೆಚ್ಚಾಗುವುದು. ಕೆಲವು ಸಂದರ್ಭಧಲ್ಲಿ ಇದು ಥಟ್ಟನೆ ಆರಂಭವಾಗಬಹುದು. ನೋವು ಎದೆಯ ಎಡಭಾಗ ಅಥವಾ ಮಧ್ಯಭಾಗದಲ್ಲಿ ತೀವ್ರವಾಗಿ ಇರಬಹುದು.

ಹೃದಯಾಘಾತದ ಇತರ ಕೆಲವೊಂದು ಲಕ್ಷಣಗಳು ಈ ರೀತಿಯಾಗಿ ಇದೆ

ಹೃದಯಾಘಾತದ ಇತರ ಕೆಲವೊಂದು ಲಕ್ಷಣಗಳು ಈ ರೀತಿಯಾಗಿ ಇದೆ

ಉಸಿರುಗಟ್ಟುವಿಕೆ, ತಡೆಯುವುದು ಅಥವಾ ಎಡದ ಕೈಯಲ್ಲಿ ನೋವಿನಿಂದಾಗಿ ಎದೆಯಲ್ಲಿ ಒತ್ತಡ ಹೆಚ್ಚಾಗುವುದು. ಬಲದ ಕೈಯಲ್ಲಿ ನೋವು ಕಾಣಿಸಿಕೊಂಡು ಇದು ಕುತ್ತಿಗೆ, ದವಡೆ, ಬೆನ್ನು ಅಥವಾ ಹೊಟ್ಟೆಗೆ ವ್ಯಾಪಿಸಬಹುದು.

*ಉಸಿರು ತಡೆಯುವುದು

*ಬೆವರುವಿಕೆ

*ಎದೆ ಉರಿ, ವಾಕರಿಕೆ ಅಥವಾ ವಾಂತಿ

*ಹೊಟ್ಟೆಯಲ್ಲಿ ನೋವು

*ಲಘು ತಲೆನೋವು ಅಥವಾ ತಲೆಸುತ್ತುವಿಕೆ

ಮಯೋಕಾರ್ಡಿಟಿಸ್

ಮಯೋಕಾರ್ಡಿಟಿಸ್

ಎದೆ ನೋವು ಕಾಣಿಸಿಕೊಳ್ಳಲು ಮತ್ತೊಂದು ಕಾರಣವೆಂದರೆ ನಿಮ್ಮ ಹೃದಯದ ಸ್ನಾಯುಗಳಲ್ಲಿ ಉರಿಯೂತ ಕಾಣಿಸಿಕೊಂಡಿರಬಹುದು. ಇದರ ಕೆಲವು ಇತರ ಲಕ್ಷಣಗಳು ಈ ರೀತಿಯಾಗಿ ಇದೆ.

*ಉಸಿರು ಗಟ್ಟುವಿಕೆ

*ಅಸಾಮಾನ್ಯ ಎದೆ ಬಡಿತ

ನಿಶ್ಯಕ್ತಿ

ನಿಶ್ಯಕ್ತಿ

ಮಯೋಕಾರ್ಡಿಟಿಸ್ ಹೃದಯದ ವಿದ್ಯುತ್ ವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು. ಇದು ಹೃದಯವನ್ನು ದುರ್ಬಲಗೊಳಿಸಬಹುದು ಅಥವಾ ಶಾಶ್ವತವಾಗಿ ಹೃದಯದ ಸ್ನಾಯುಗಳಿಗೆ ದೊಡ್ಡ ಮಟ್ಟದ ಹಾನಿ ಉಂಟು ಮಾಡಬಹುದು. ಕೆಲವೊಂದು ಸಂದರ್ಭದಲ್ಲಿ ಯಾವುದೇ ಚಿಕಿತ್ಸೆ ಇಲ್ಲದೆಯೂ ಇದು ನಿವಾರಣೆ ಆಗುವುದು. ಆದರೆ ತೀವ್ರ ರೀತಿಯಾಗಿದ್ದರೆ ಆಗ ಇದಕ್ಕೆ ಚಿಕಿತ್ಸೆಯು ಬೇಕಿರುವುದು. ಕಾರಣ ತಿಳಿದುಕೊಂಡ ಬಳಿಕ ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ.

ಕಾರ್ಡಿಯೊಮಿಯೊಪತಿ

ಕಾರ್ಡಿಯೊಮಿಯೊಪತಿ

ಕಾರ್ಡಿಯೊಮಿಯೊಪತಿ ಎನ್ನುವುದು ಹೃದಯದ ಸ್ನಾಯುಗಳ ಕಾಯಿಲೆ ಅಥವಾ ಹೃದಯವು ಹಿಗ್ಗಿರುವ ಸಮಸ್ಯೆ. ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆ ಇದ್ದರೂ ಕಾರ್ಡಿಯೊಮಿಯೊಪತಿ ಬರಬಹುದು. ಆದರೆ ಇದರಿಂದ ಎದೆ ನೋವು ಕಾಣಿಸಿಕೊಳ್ಳುವುದು. ಇದರ ಇತರ ಲಕ್ಷಣಗಳು ಏನೆಂದರೆ...

*ಉಸಿರಾಟದ ತೊಂದರೆ

*ಬಳಲಿಕೆ

*ಹೃದಯ ಬಡಿತ ಹೆಚ್ಚಾಗುವುದು

*ಹಿಂಗಾಲು, ಪಾದ, ಕಾಲು, ಕೈ ಮತ್ತು ಹೊಟ್ಟೆಯಲ್ಲಿ ಊತ ಕಾಣಿಸಿಕೊಳ್ಳುವುದು, ಇದಕ್ಕೆ ಚಿಕಿತ್ಸೆ ಎಂದರೆ ಔಷಧಿ, ಹೃದಯದ ಕಾರ್ಯ ವಿಧಾನ ಮತ್ತು ಶಸ್ತ್ರಚಿಕಿತ್ಸೆ. ಕೆಲವೊಂದು ಜೀವನಶೈಲಿಯಿಂದಲೂ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.

ಇವುಗಳು ಈ ರೀತಿಯಾಗಿ ಇದೆ

ಇವುಗಳು ಈ ರೀತಿಯಾಗಿ ಇದೆ

*ಉಪ್ಪಿನಾಂಶ ಸೇವನೆ ಕಡಿಮೆ ಮಾಡುವುದು

*ಅತಿಯಾದ ತೂಕ ಇಳಿಸಿಕೊಳ್ಳುವುದು

*ಆಲ್ಕೋಹಾಲ್ ಸೇವನೆ ಕಡೆಗಣಿಸುವುದು

*ನಿಯಮಿತವಾಗಿ ಲಘು ಅಥವಾ ಮಧ್ಯಮ ಹಂತದ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು.

ಪೆರಿಕಾರ್ಡಿಟಿಸ್

ಪೆರಿಕಾರ್ಡಿಟಿಸ್

ಪೆರಿಕಾರ್ಡಿಟಿಸ್ ಎನ್ನುವುದು ಹೃದಯವನ್ನು ಸುತ್ತವರಿದಿರುವಂತಹ ಅಂಗಾಂಶಗಳ ಎರಡು ತೆಳುವಾದ ಪದರ ಆಗಿದೆ. ಈ ಭಾಗವು ಉರಿಯೂತ ಅಥವಾ ಕಿರಿಕಿರಿ ಅನುಭವಿಸಿದರೆ ಆಗ ತೀವ್ರ ರೀತಿಯ ನೋವು ಎದೆಯ ಎಡ ಭಾಗ ಅಥವಾ ಮಧ್ಯ ಭಾಗದಲ್ಲಿ ಕಾಣಿಸಬಹುದು. ಒಂದು ಅಥವಾ ಎರಡು ಭುಜದಲ್ಲಿ ನೋವು ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳು ಹೃದಯಾಘಾತಕ್ಕೆ ಸೂಚನೆಯಾಗಿರಬಹುದು. ಇದು ಲಘುವಾಗಿರಬಹುದು ಮತ್ತು ತನ್ನಷ್ಟಕ್ಕೆ ಅದು ನಿವಾರಣೆ ಆಗಬಹುದು. ಕಾರಣಗಳನ್ನು ತಿಳಿದುಕೊಂಡ ಬಳಿಕ ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ.

ನೋವಿನ ಆಘಾತ

ನೋವಿನ ಆಘಾತ

ನೋವಿನ ಆಘಾತವು ಹಠಾತ್ ಆಗಿ ಬಂದು 10 ನಿಮಿಷಗಳಲ್ಲಿ ಅದು ತೀವ್ರ ಹಂತಕ್ಕೆ ತಲುಪುವುದು. ಎದೆ ನೋವು ಮತ್ತು ಇತರ ಕೆಲವೊಂದು ಲಕ್ಷಣಗಳಿಂದಾಗಿ ಈ ನೋವು ಹೃದಯಾಘಾತದ ಲಕ್ಷಣವನ್ನು ಉತ್ತೇಜಿಸಬಹುದು.

ಎದೆ ನೋವಿನ ಜತೆಗೆ ಕಾಣಿಸುವ ಇತರ ಕೆಲವು ಲಕ್ಷಣಗಳು

*ಉಸಿರಾಟದ ತೊಂದರೆ

*ತೀವ್ರ ಎದೆಉರಿ

*ನಡುಕ ಅಥವಾ ಬಳಲಿಕೆ

*ಬೆವರುವಿಕೆ, ಮೈ ಬಿಸಿ ಏರುವುದು ಅಥವಾ ಚಳಿ

*ವಾಕರಿಕೆ

*ಅವಾಸ್ತವಿಕತೆ ಅಥವಾ ಬೇರ್ಪಡುವಿಕೆ ಭಾವನೆ

*ಉಸಿರು ನಿಲ್ಲಿಸಿದಂತಹ ಭಾವನೆ

*ತೀವ್ರ ಹೆದರಿಕೆ ಅಥವಾ ಕಣ್ಣಲ್ಲಿ ಕತ್ತಲು ಆವರಿಸುವುದು

pulmonary tuberculosis ಅಥವಾ ಕ್ಷಯ

pulmonary tuberculosis ಅಥವಾ ಕ್ಷಯ

pulmonary tuberculosis ಅಥವಾ ಕ್ಷಯ, ನ್ಯುಮೋನಿಯಾ ಜ್ವರ ಮೊದಲಾದವೂ ಎದೆಯ ಒಂದೇ ಬದಿಯಲ್ಲಿ ನೋವನ್ನುಂಟು ಮಾಡುತ್ತವೆ. ಈ ಸೋಂಕುಗಳ ಮೂಲಕ ವಿಶೇಷವಾಗಿ ಶ್ವಾಸಕೋಶದಲ್ಲಿ ಸೋಂಕುಕಾರಕ ದ್ರವ ಅಥವಾ ಕೀವು ಉಂಟಾಗಿ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಸೋಂಕುಗಳ ಮೂಲಕ ಕೆಂಪಗಾಗುವ ಶ್ವಾಸನಾಳಗಳು (bronchiectasis) ಸಹಾ ಎದೆಯ ಒಂದೇ ಭಾಗದಲ್ಲಿ ನೋವು ನೀಡಬಲ್ಲವು.

ಎದೆಯುರಿ

ಎದೆಯುರಿ

ಎದೆಯುರಿಗೆ ಅಜೀರ್ಣತೆ ಪ್ರಮುಖ ಕಾರಣವಾಗಿದೆ. ಅಜೀರ್ಣತೆಯಿಂದ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಕೆಲವು ಅನಿಲಗಳು ಅನ್ನನಾಳದ ಮೂಲಕ ಹೊರಬರಲು ಯತ್ನಿಸುವುದರಿಂದ ಉರಿ ಕಾಣಿಸಿಕೊಳ್ಳುತ್ತದೆ. ಈ ಉರಿ ವಪೆಯನ್ನು ಬಾಧಿಸುವುದರಿಂದ ರೋಗಿಗೆ ಎದೆಯಲ್ಲಿಯೇ ಉರಿಯಾದಂತಹ ಭಾವನೆ ಮೂಡುತ್ತದೆ ಕಾರಣವೇನೇ ಇರಲಿ, ನೋವು ಅಥವಾ ಉರಿ ಕಾಣಿಸಿಕೊಂಡ ತಕ್ಷಣವೇ ವೈದ್ಯರನ್ನು ಕಂಡು ಅಗತ್ಯವಿರುವ ಪರೀಕ್ಷೆಗಳನ್ನು ಮಾಡಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಪರೀಕ್ಷೆಗಳ ಮೂಲಕ ಮಾತ್ರವೇ ಈ ನೋವಿಗೆ ನಿಜವಾದ ಕಾರಣವೇನು ಎಂದು ಕಂಡುಕೊಳ್ಳಬಹುದು.

English summary

What’s Causing Pain in the Left Side of Chest?

If you have a pain on the left side of your chest, your first thought may be that you’re having a heart attack. While chest pain can indeed be a symptom of heart disease or heart attack, that’s not always the case.Continue reading as we explore some causes of chest pain, what the accompanying symptoms might be, and what you should do about it.
X
Desktop Bottom Promotion