For Quick Alerts
ALLOW NOTIFICATIONS  
For Daily Alerts

ಸಡನ್ ಆಗಿ ಪುರುಷರ ವೀರ್ಯದ ಬಣ್ಣ ಬದಲಾಗಲು ಕಾರಣವೇನು?

|

ದೇಹವು ಅನಾರೋಗ್ಯಕ್ಕೆ ಒಳಗಾದರೆ ಅದರಿಂದ ನಮಗೆ ಹಲವಾರು ಸುಳಿವು ಹಾಗೂ ಸೂಚನೆಗಳು ಸಿಗುವುದು. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಆಗ ನಮಗೆ ಯಾವ ಸಮಸ್ಯೆ ಇದೆ ಎಂದು ಅರ್ಥ ಮಾಡಿಕೊಳ್ಳಬಹುದು. ಪುರುಷರು ಕೂಡ ಕೆಲವೊಂದು ಸಲ ಅನಾರೋಗ್ಯಕ್ಕೆ ಒಳಗಾದರೆ ಆಗ ಕೆಲವೊಂದು ಬದಲಾವಣೆಗಳು ಕಂಡುಬರುವುದು.

ಇದರಲ್ಲಿ ಮುಖ್ಯವಾಗಿ ಪುರುಷರ ವೀರ್ಯವು ಬಿಳಿ ಹಾಗೂ ದಪ್ಪವಾಗಿರುವುದು. ಆದರೆ ಕೆಲವೊಮ್ಮೆ ವೀರ್ಯದ ಬಣ್ಣವು ಅನಿರೀಕ್ಷಿತವಾಗಿ ಕೆಂಪು, ಕಂದು ಬಣ್ಣಕ್ಕೆ ತಿರುಗಿದರೆ ಇದರ ಬಗ್ಗೆ ಕೂಡಲೇ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳುವುದು ಅತ್ಯಗತ್ಯ. ಒಂದು ವೇಳೆ ವೀರ್ಯವು ಬಣ್ಣ ಕಳೆದುಕೊಂಡರೆ ಇದರ ಅರ್ಥ ವೀರ್ಯದಲ್ಲಿ ಏನೋ ಸಮಸ್ಯೆಯಿದೆ ಎಂದು ತಿಳಿದುಕೊಳ್ಳಬೇಕು. ಅಷ್ಟಕ್ಕೂ ವೀರ್ಯವು ಬಣ್ಣ ಬದಲಾಯಿಸಲು ಕಾರಣಗಳು ಏನು? ಮುಂದೆ ಓದಿ

ವೀರ್ಯ ಎಂದರೇನು?

ವೀರ್ಯ ಎಂದರೇನು?

ಇದು ತುಂಬಾ ಸಾಮಾನ್ಯ ಪ್ರಶ್ನೆಯೆಂದು ಅನಿಸಬಹುದು. ಆದರೆ ವೀರ್ಯ ಏನೆಂದು ತಿಳಿದುಕೊಂಡರೆ ಆಗ ಅದರ ಬಣ್ಣವು ಯಾಕೆ ಬದಲಾಗುತ್ತದೆ ಎಂದು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ವೀರ್ಯವನ್ನು ವೃಷಣವು ಸ್ರವಿಸುವುದು, ವೃಷಣನಾಳಸುರಳಿ ರೇತ್ರನಾಳ ಗೆ ಚಲಿಸುವುದು ಮತ್ತು ಇದರ ಬಳಿಕ ಪ್ರೊಸ್ಟೇಟ್ ನಲ್ಲಿರುವಂತಹ ಮೂಲದ್ರವದೊಂದಿಗೆ ಇದು ಸೇರಿಕೊಳ್ಳುವುದು. ಬಲ್ಬೌರೆಥ್ರಲ್ ಮತ್ತು ಮೂತ್ರನಾಳದ ಮೂಲಕವಾಗಿ ಇದು ದೇಹದಿಂದ ಹೊರಗೆ ಬರುವುದು. ವೀರ್ಯವು ಮೂಲ ಕೋಶಕಗಳು, ಪ್ರಾಸ್ಟೇಟ್ ಗ್ರಂಥಿ ವೃಷಣನಾಳಸುರಳಿ, ಮತ್ತು ರೇತ್ರನಾಳದ ದ್ರವದ ಮಿಶ್ರಣವಾಗಿದೆ. ವೀರ್ಯಕ್ಕೆ ಬಿಳಿ ಬಣ್ಣ ಬರಲು ಮೊದಲು ಹೇಳಿರುವಂತಹ ನಾಲ್ಕು ಅಂಶಗಳು ಕಾರಣವಾಗಿದೆ. ಇದನ್ನು ಪ್ರೊಸ್ಟೇಟ್ ಗ್ರಂಥಿಯು ಒದಗಿಸುವುದು. ಬಲ್ಬೌರೆಥ್ರಲ್ ಗ್ರಂಥಿಗಳು ಶುದ್ಧ ಸ್ರವಿಸುವಿಕೆ ಉಂಟು ಮಾಡುವುದು ಮತ್ತು ವೀರ್ಯದ ಉಪಸ್ಥಿತಿಯು ಮೋಡದ ಬಣ್ಣಕ್ಕೆ ಕಾರಣವಾಗುವುದು.

ವೀರ್ಯವು ಬಣ್ಣ ಬದಲಾಯಿಸುವುದು ಯಾಕೆ?

ವೀರ್ಯವು ಬಣ್ಣ ಬದಲಾಯಿಸುವುದು ಯಾಕೆ?

ವೀರ್ಯದ ಬಣ್ಣವು ಬಿಳಿ ಮೋಡದಂತೆ ಇರುವುದು. ಕೆಲವೊಂದು ಪುರುಷರಲ್ಲಿ ನೈಸರ್ಗಿಕವಾಗಿ ಹಳದಿ ಬಣ್ಣವು ಬರುವುದು. ಅದಾಗ್ಯೂ, ಹಳದಿ ವೀರ್ಯವು ಹಠಾತ್ ಆಗಿ ಕಾಣಿಸಿಕೊಂಡರೆ ಆಗ ವೀರ್ಯಕ್ಕೆ ಕಾರಣವಾಗಿರುವಂತಹ ಯಾವುದೇ ಒಂದು ಗ್ರಂಥಿಯಲ್ಲಿ ಅಥವಾ ಅದರ ವಿನ್ಯಾಸದಲ್ಲಿ ಯಾವುದಾದರೂ ಸಮಸ್ಯೆ ಇದೆ ಎಂದು ಹೇಳಬಹುದು. ಇದು ಬೇರೆ ಆರೋಗ್ಯ ಸಮಸ್ಯೆಗಳ ಕಾರಣದಿಂದಲೂ ಆಗಿರಬಹುದು.

Most Read: ಶಿಶ್ನದ ಕ್ಯಾನ್ಸರ್ ಎಂದರೇನು? ಇದರ ರೋಗಲಕ್ಷಣಗಳು ಹಾಗೂ ಚಿಕಿತ್ಸಾ ವಿಧಾನ

ದೀರ್ಘಕಾಲದ ತನಕ ಸ್ಖಲನ ಮಾಡದೇ ಇರುವುದು!

ದೀರ್ಘಕಾಲದ ತನಕ ಸ್ಖಲನ ಮಾಡದೇ ಇರುವುದು!

ಉದಾಹರಣೆಗೆ: ದೀರ್ಘಕಾಲದ ತನಕ ಸ್ಖಲನ ಮಾಡದೆ ಇರುವಂತಹ ಪುರುಷರಲ್ಲಿ ವೀರ್ಯದೊಂದಿಗೆ ಮೂತ್ರವು ಬರಬಹುದು.

ಉರಿಯೂತ ಮತ್ತು ಸೋಂಕಿನಿಂದಾಗಿ ಅಧಿಕ ಮಟ್ಟದ ಬಿಳಿ ರಕ್ತದ ಕಣಗಳು ಉಂಟಾಗಬಹುದು. ಇದು ಕೂಡ ವೀರ್ಯದಲ್ಲಿ ಕಂಡುಬರಬಹುದು. ಹೀಗಾಗಿ ವೀರ್ಯವು ಹಳದಿ ಬಣ್ಣಕ್ಕೆ ತಿರುಗಬಹುದು. ಈ ಪರಿಸ್ಥಿತಿಯನ್ನು ಪಯೋಸ್ಪೆರ್ಮಿಯಾ ಎಂದು ಕರೆಯಲಾಗುತ್ತದೆ ಮತ್ತು ಇದು ಜನನೇಂದ್ರೀಯದ ಸೋಂಕು, ಸ್ವರಕ್ಷಿತ ರೋಗ, ರೇತ್ರ ತಂತುವಿನಲ್ಲಿ ಇರುವ ಗಡ್ಡೆ ಮತ್ತು ಮಧ್ಯಪಾನ, ಮರಿಜುನಾ ಅಥವಾ ತಂಬಾಕು ಸೇವನೆಯಿಂದಲೂ ಹೀಗೆ ಆಗಬಹುದು.

 ಲಿವರ್

ಲಿವರ್

ಯಕೃತ್(ಲಿವರ್) ಅಸಮರ್ಪಕವಾಗಿ ಬಿಲಿರುಬಿನ್ ನ್ನು ವಿಘಟನೆ ಮಾಡಿದ ವೇಳೆ ಕಾಮಾಲೆ ರೋಗವು ಕಂಡುಬರುವುದು. ಕಾಮಾಲೆ ರೋಗ ಬಂದರೆ ಆಗ ಚರ್ಮ ಮತ್ತು ಕಣ್ಣು ಹಳದಿ ಬಣ್ಣಕ್ಕೆ ತಿರುಗುವುದು. ಇಅದೇ ವೇಳೆ ವೀರ್ಯದ ಮೇಲೂ ಪರಿಣಾಮ ಆಗಬಹುದು.

ಲೈಂಗಿಕವಾಗಿ ಕಾಡುವಂತಹ ಕೆಲವೊಂದು ಸೋಂಕುಗಳಾಗಿರುವ ಕ್ಲೆಮೈಡಿಯಾ, ಗೊನೊರಿಯಾ ಮತ್ತು ಹರ್ಪಿಸ್ ಕೂಡ ವೀರ್ಯವನ್ನು ಹಳದಿ ಬಣ್ಣಕ್ಕೆ ತಿರುಗಿಸಬಹುದು.

ಕೆಂಪು, ಕಂದು ಅಥವಾ ಹಸಿರು ಬಣ್ಣ

ಕೆಂಪು, ಕಂದು ಅಥವಾ ಹಸಿರು ಬಣ್ಣ

ಅತೀಯಾದ ಎಣ್ಣೆ ಹಾಕಿರುವಂತಹ ಆಹಾರ ಸೇವನೆ ಮಾಡಿದರೆ ಅದರಿಂದಲೂ ವೀರ್ಯವು ಹಳದಿ ಬಣ್ಣಕ್ಕೆ ತಿರುಗಬಹುದು. ವೀರ್ಯವು ಕೆಂಪು, ಕಂದು ಅಥವಾ ಹಸಿರು ಬಣ್ಣದಲ್ಲಿ ಕಾಣಿಸಬಹುದು. ಕೆಂಪು ಮತ್ತು ಕಂದು ಬಣ್ಣದ ವೀರ್ಯವು ಕಾಣಿಸಿಕೊಳ್ಳಲು ಕಾರಣವೆಂದರೆ ಮೂಲ ಕೋಶಕಗಳಲ್ಲಿ ರಕ್ತನಾಳವು ಹೊಡೆದಿರುವುದು. ಇದರಿಂದ ಸಣ್ಣ ಪ್ರಮಾಣದ ರಕ್ತವು ವೀರ್ಯದಲ್ಲಿ ಸೇರಿಕೊಳ್ಳುವುದು. ಹಸಿರು ಬಣ್ಣದ ವೀರ್ಯವು ಪ್ರೊಸ್ಟೇಟ್ ಅಥವಾ ಪಕ್ಕದ ಅಂಗಾಂಶಗಳಲ್ಲಿ ಕಾಣಿಸಿಕೊಂಡಿರುವ ಸೋಂಕಿನಿಂದಲೂ ಆಗಿರಬಹುದು.

Most Read: ಶೀಘ್ರ ಸ್ಖಲನ ಬಗ್ಗೆ ಇರುವಂತಹ ಸತ್ಯ ಹಾಗೂ ಸುಳ್ಳುಗಳು-ಇವೆಲ್ಲಾ ಸಂಗತಿಗಳು ನಿಮಗೆ ತಿಳಿದಿರಲಿ

ವೀರ್ಯದ ಬಣ್ಣವು ಅಸಾಮಾನ್ಯವಾಗಿರುವುದು ವೈದ್ಯಕೀಯ ಸಮಸ್ಯೆಯೇ?

ವೀರ್ಯದ ಬಣ್ಣವು ಅಸಾಮಾನ್ಯವಾಗಿರುವುದು ವೈದ್ಯಕೀಯ ಸಮಸ್ಯೆಯೇ?

ವೀರ್ಯದ ಬಣ್ಣವು ಹಠಾತ್ ಅಥವಾ ಅಸಾಮಾನ್ಯವಾಗಿದ್ದರೆ ಆಗ ನೀವು ವೈದ್ಯರ ಸಲಹೆ ಪಡೆಯಬೇಕು. ಕಂದು ಅಥವಾ ಕೆಂಪು ಬಣ್ಣದ ವೀರ್ಯವು ಎರಡು ದಿನ ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ಆಗ ನೀವು ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಿ. ತಿಳಿ ಹಳದಿ ಬಣ್ಣದ ವೀರ್ಯವು ಯಾವುದೇ ರೀತಿಯ ವೈದ್ಯಕೀಯ ಸಮಸ್ಯೆಯಲ್ಲ. ಆದರೆ ವೀರ್ಯವು ಕಡು ಹಳದಿ ಬಣ್ಣದ್ದಾಗಿದ್ದರೆ ಆಗ ನೀವು ವೈದ್ಯರನ್ನು ಸಂಪರ್ಕಿಸುವುದು ಅತೀ ಅಗತ್ಯ ಅಥವಾ ಬೇರೆ ಲಕ್ಷಣಗಳಾಗಿರುವಂತಹ ಜ್ವರ, ಚರ್ಮ ಮತ್ತು ಕಣ್ಣುಗಳು ಹಳದಿಯಾಗುವುದು, ಸ್ಖಲನ ವೆಳೆ ನೋವು ಅಥವಾ ದುರ್ವಾಸನೆ ಇದ್ದರೆ ಆಗ ನೀವು ವೈದ್ಯರನ್ನು ಸಂಪರ್ಕಿಸಿ.

ಹೀಗೆ ಮಾಡಿ…

ಹೀಗೆ ಮಾಡಿ…

ವೈದ್ಯರಿಗೆ ಯಾವುದೇ ರೀತಿಯ ಸೋಂಕು ಕಂಡುಬಂದರೆ ಆಗ ವೈದ್ಯರು ಆ್ಯಂಟಿಬಯೋಟಿಕ್ ಅಥವಾ ಆ್ಯಂಟಿ ವೈರಲ್ ಔಷಧಿಗಳನ್ನು ನೀಡಬಹುದು. ಸೋಂಕು ಇರುವಂತಹ ಪುರುಷರು ಸೋಂಕು ಪೂರ್ಣ ಪ್ರಮಾಣದಲ್ಲಿ ಗುಣವಾಗುವ ತನಕ ಯಾವುದೇ ರೀತಿಯ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು. ಹೆಮಟೊಸ್ಪರ್ಮಿಯಾಗೆ ಕಾರಣವೇನೆಂದು ತಿಳಿದುಕೊಂಡರೆ ಆಗ ಅದಕ್ಕೆ ಹಲವಾರು ರೀತಿಯ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿದೆ. ವೀರ್ಯದ ಬಣ್ಣವು ಬದಲಾಗಿದೆ ಎಂದು ನಿಮಗೆ ಅನಿಸಿದರೆ ಆಗ ನೀವು ಹೀಗೆ ಮಾಡಿ...

Most Read: ಪುರುಷರಿಗೆ ಮುಜುಗರ ತರಿಸುವ ಶಿಶ್ನದ ತುರಿಕೆಯ ಸಮಸ್ಯೆಗೆ ಸರಳ ಮನೆಮದ್ದುಗಳು

ವೀರ್ಯದ ಬಣ್ಣವು ಬದಲಾಗಿದೆ ಎಂದು ನಿಮಗೆ ಅನಿಸಿದರೆ ಹೀಗೆ ಮಾಡಿ…

ವೀರ್ಯದ ಬಣ್ಣವು ಬದಲಾಗಿದೆ ಎಂದು ನಿಮಗೆ ಅನಿಸಿದರೆ ಹೀಗೆ ಮಾಡಿ…

•ಪ್ರೊಸ್ಟೇಟ್ ಬಯೊಸ್ಪಿ ಅಥವಾ ಯುರೋಲಾಜಿ ಪ್ರಕ್ರಿಯೆಗೆ ನೀವು ಇತ್ತೀಚೆಗಷ್ಟೇ ಒಳಗಾಗಿದ್ದರೆ ಆಗ ನಿಮಗೆ ಯಾವುದೇ ಚಿಕಿತ್ಸೆಯ ಅಗತ್ಯವು ಇಲ್ಲ. ಕೆಲವು ವಾರಗಳ ಬಳಿಕ ಈ ಕಂದು ವೀರ್ಯವು ಮಾಯವಾಗುವುದು.

•ಆರೋಗ್ಯವಂತ ಹಾಗೂ ಯುವಕರು, ಯಾವುದೇ ಲಕ್ಷಣಗಳು ಇಲ್ಲದೆ ಇದ್ದರೆ ಆಗ ನಿಮ್ಮ ವೀರ್ಯದ ಬಣ್ಣವು ಬೇಗನೆ ಬಿಳಿಯಾಗುವುದು.

•ಹೆಚ್ಚುವರಿ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ. ವೈದ್ಯರು ದೈಹಿಕ ಪರೀಕ್ಷೆ ಮಾಡಬಹುದು ಮತ್ತು ಇತರ ಕೆಲವೊಂದು ಪರೀಕ್ಷೆಗಳಾಗಿರುವ ಮೂತ್ರ ಪರೀಕ್ಷೆ, ಎಸ್ ಟಿಡಿ ಪರಿಖ್ಷೆ, ಪಿಎಸ್ ಎ ಪರೀಕ್ಷೆ ಮಾಡಿಸಬಹುದು. ಇದರಿಂದ ಕಂದು ವೀರ್ಯವು ಬರಲು ನಿಜವಾದ ಕಾರಣವೇನೆಂದು ತಿಳಿದುಬರುವುದು.

ವೀರ್ಯದ ಬಣ್ಣವು ಬದಲಾಗಿದೆ ಎಂದು ನಿಮಗೆ ಅನಿಸಿದರೆ ಹೀಗೆ ಮಾಡಿ…

ವೀರ್ಯದ ಬಣ್ಣವು ಬದಲಾಗಿದೆ ಎಂದು ನಿಮಗೆ ಅನಿಸಿದರೆ ಹೀಗೆ ಮಾಡಿ…

•ಕೆಲವೊಂದು ವೈದ್ಯಕೀಯ ಕಾರಣಗಳಾಗಿರುವಂತಹ ಅಧಿಕ ರಕ್ತದೊತ್ತಡದಿಂದಾಗಿ ವೀರ್ಯದಲ್ಲಿ ರಕ್ತವು ಕಾಣಿಸಿಕೊಳ್ಳುತ್ತಿದ್ದರೆ ಆಗ ವೈದ್ಯರು ಈ ಅನಾರೋಗ್ಯವನ್ನು ನಿವಾರಣೆ ಮಾಡಲು ಚಿಕಿತ್ಸೆ ಹೆಳುವರು.

•ಎಸ್ ಡಿಟಿಯಂತಹ ಸೋಂಕಿಗೆ ಆ್ಯಂಟಿಬಯೋಟಿಕ್ ಸೂಚಿಸಬಹುದು.

•ಉರಿಯೂತವಿದ್ದರೆ ಆಗ ವೈದ್ಯರು ನೋವು ಮತ್ತು ಊತ ಕಡಿಮೆ ಮಾಡಲು ಉರಿಯೂತ ಶಮನಕಾರಿ ಔಷಧಿ ನೀಡಬಹುದು.

ಮೂತ್ರನಾಳ ಅಥವಾ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಿದ್ದರೆ ಆಗ ನಿಮ್ಮ ವೈದ್ಯರು ಯುರೋಲಾಜಿಸ್ಟ್ ನ್ನು ಭೇಟಿಯಾಗುವಂತೆ ಸೂಚಿಸಬಹುದು. ಇದರ ಪ್ರಮುಖ ಲಕ್ಷಣವೆಂದರೆ ಮೂತ್ರವಿಸರ್ಜನೆ ಅಥವಾ ಸ್ಖಲನದ ವೇಳೆ ನೋವು.

English summary

What it mean if a man’s semen color changes?

Changes in semen color are not always a cause for alarm, but men should see their doctor if such changes persist for over a week or if they have other symptoms, such as pain, swelling, fever, chills, or blood in the urine.
Story first published: Thursday, January 24, 2019, 16:17 [IST]
X
Desktop Bottom Promotion