For Quick Alerts
ALLOW NOTIFICATIONS  
For Daily Alerts

ಶಿಶ್ನದ ಕ್ಯಾನ್ಸರ್ ಎಂದರೇನು? ಇದರ ರೋಗಲಕ್ಷಣಗಳು ಹಾಗೂ ಚಿಕಿತ್ಸಾ ವಿಧಾನ

|

ಶಿಶ್ನದ ಕ್ಯಾನ್ಸರ್ ಅಥವಾ penile cancer ಎಂಬ ಈ ಸ್ಥಿತಿ ಶಿಶ್ನದ ಹೊರಚರ್ಮದ ಜೀವಕೋಶಗಳು ರೋಗಪೀಡಿತವಾಗಿ ನಿಧಾನವಾಗಿ ಈ ಕಾಯಿಲೆ ಒಳಭಾಗದ ಜೀವಕೋಶಗಳಿಗೆ ವ್ಯಾಪಿಸತೊಡಗುತ್ತದೆ. ಆದರೆ ಒಂದು ವೇಳೆ ಈ ಸ್ಥಿತಿ ಪ್ರಾರಂಭಿಕ ಹಂತದಲ್ಲಿಯೇ ಪತ್ತೆಯಾದರೆ ಇದರ ಚಿಕಿತ್ಸೆಯೂ ಫಲಕಾರಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಅಮೇರಿಕಾದಲ್ಲಿ ಪ್ರತಿವರ್ಷ ಈ ಕ್ಯಾನ್ಸರ್ ನಿಂದ ಪೀಡಿತ ಪುರುಷರ ಸಂಖ್ಯೆ ಸುಮಾರು 2,100. ಒಂದು ವೇಳೆ ನಿಮಗೆ ಅಥವಾ ನಿಮ್ಮ ಆಪ್ತರಲ್ಲಿ ಯಾರಿಗಾದರೂ ಈ ಸ್ಥಿತಿ ಇರುವ ಅನುಮಾನವಿದ್ದರೆ ಈ ಲೇಖನದಲ್ಲಿ ಒದಗಿಸಿರುವ ಮಾಹಿತಿಗಳು ನಿಮಗೆ ಅಮೂಲ್ಯವಾಗಲಿವೆ.....

ಕಾರಣಗಳು

ಕಾರಣಗಳು

ಈ ಕಾಯಿಲೆಗೆ ಏನು ಕಾರಣ ಎಂಬುದನ್ನು ಇದುವರೆಗೆ ತಜ್ಞರಿಗೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಸುನ್ನತಿ ಅಥವಾ ಮುಂದೊಗಲು ತೆಗೆಸಿರದ ಪುರುಷರಲ್ಲಿಯೇ ಈ ಸ್ಥಿತಿ ಅತಿ ಹೆಚ್ಚಾಗಿ ಕಂಡುಬಂದಿದೆ. ಮುಂದೊಗಲ ಅಡಿಯಲ್ಲಿ ಯಾವುದಾದರೂ ಸ್ರಾವ ಸಂಗ್ರಹ ಗೊಂಡರೆ ಹಾಗೂ ಇದನ್ನು ಸ್ವಚ್ಛಗೊಳಿಸದೇ ಹಾಗೇ ಉಳಿದು ಕೊಂಡರೆ ಇಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳು ಇಲ್ಲಿ ಪ್ರಾರಂಭವಾಗುತ್ತವೆ.

ಸಂಶೋಧನೆಗಳ ಪ್ರಕಾರ

ಸಂಶೋಧನೆಗಳ ಪ್ರಕಾರ

ಈ ಬಗ್ಗೆ ನಡೆಸಿದ ಕೆಲವು ಸಂಶೋಧನೆಗಳ ಪ್ರಕಾರ HPVಎಂಬ ಒಂದು ಬಗೆಯ ವೈರಸ್ (HPV (human papillomavirus) ಈ ಕ್ಯಾನ್ಸರ್ ಗೆ ಕಾರಣವಾಗಿರುದು ಕಂಡುಬಂದಿದೆ. ಸಾಮಾನ್ಯವಾಗಿ ಅರವತ್ತು ವರ್ಷ ದಾಟಿದ, ಧೂಮಪಾನಿ ಪುರುಷರಲ್ಲಿ ಈ ಸ್ಥಿತಿ ಹೆಚ್ಚಾಗಿ ಕಂಡುಬರುತ್ತದೆ. ಅಂದರೆ ಇದುವರೆಗೆ ಇವರ ರೋಗ ನಿರೋಧಕ ಶಕ್ತಿ ಈ ತೊಂದರೆಯಿಂದ ರಕ್ಷಿಸುತ್ತಿದ್ದು ಈಗ ಕ್ಷೀಣವಾಗಿರುವ ಮೂಲಕ ಈ ಸ್ಥಿತಿ ಎದುರಾಗಿರುವುದು ಸ್ಪಷ್ಟವಾಗುತ್ತದೆ.

Most Read:ಪುರುಷರೇ, ಶಿಶ್ನದ ಬಗ್ಗೆ ನಿಮಗೆ ತಿಳಿದಿರದ 12 ಸಮಸ್ಯೆಗಳು

ಸೂಚನೆಗಳು

ಸೂಚನೆಗಳು

ಶಿಶ್ನದ ಚರ್ಮದ ಬಣ್ಣ ಬದಲಾಗುವುದು ಈ ತೊಂದರೆಯ ಪ್ರಥಮ ಸೂಚನೆಯಾಗಿದೆ. ಹೆಚ್ಚಾಗಿ ಸುನ್ನತಿಯಾಗಿರದ ಪುರುಷರ ಶಿಶ್ನದ ಮುಂದೊಗಲಿನ ಬಣ್ಣ ಬದಲಾಗತೊಡಗುತ್ತದೆ. ಅಪರೂಪದಲ್ಲಿ ಸುನ್ನತಿಯಾಗಿರುವ ಪುರುಷರ ಶಿಶ್ನದ ತುದಿಯ ಹಾಗೂ ದಂಡದ ಬಣ್ಣ ಬದಲಾಗ ತೊಡಗುತ್ತದೆ.

ಈ ಕಾಯಿಲೆ ಆವರಿಸಿರುವ ಸೂಚನೆಗಳಲ್ಲಿ ಇವು ಪ್ರಮುಖವಾಗಿವೆ

ಈ ಕಾಯಿಲೆ ಆವರಿಸಿರುವ ಸೂಚನೆಗಳಲ್ಲಿ ಇವು ಪ್ರಮುಖವಾಗಿವೆ

*ಶಿಶ್ನದ ತೊಗಲು ದಪ್ಪನಾಗತೊಡಗುವುದು ಅಥವಾ ಬಣ್ಣ ಬದಲಾಗತೊಡಗುವುದು

*ಅಲ್ಲಲ್ಲಿ ಚಿಕ್ಕ ಚಿಕ್ಕ ಗಂಟುಗಳು ಕಾಣಿಸಿಕೊಳ್ಳುವುದು

*ಒಳಭಾಗದಲ್ಲಿ ಚಿಕ್ಕ ಮಣಿ ಇರುವಂತೆ ಚರ್ಮ ಉಬ್ಬು ಕೊಂಡಿರುವಂತೆ ಕಾಣುವುದು

*ನೀಲಿಮಿಶ್ರಿತ ಕಂದು ಬಣ್ಣದ ಚಿಕ್ಕ ಚಿಕ್ಕ ಬೆಳವಣಿಗೆಗಳು ಕಾಣಿಸಿಕೊಳ್ಳುವುದು

*ಮುಂದೊಗಲಿನ ಅಡಿಯಿಂದ ವಾಸನೆಯಿಂದ ಕೂಡಿದ ಸ್ರಾವ ಹೊರಡುವುದು

*ಶಿಶ್ನದ ತೊಗಲಿನಲ್ಲಿ ಕೀವುಗುಳ್ಳೆ ಮೂಡುವುದು, ಕೆಲವೊಮ್ಮೆ ಇದರಿಂದ ರಕ್ತಮಿಶ್ರಿತ ಕೀವು ಸೋರುವುದು ಶಿಶ್ನದ ತುದಿ ಊದಿಕೊಳ್ಳುವುದು

*ಶಿಶ್ನದ ಬುಡದಲ್ಲಿ ಅಥವಾ ಕಿಬ್ಬೊಟ್ಟೆಯ ಭಾಗದ ಅಡಿಯಲ್ಲಿ ಗಂಟುಗಳು ಕಾಣಿಸಿಕೊಳ್ಳುವುದು

ಅಲರ್ಜಿ ಅಥವಾ ಸೋಂಕಿನಿಂದಲೂ ಆಗಿರಬಹುದು!

ಅಲರ್ಜಿ ಅಥವಾ ಸೋಂಕಿನಿಂದಲೂ ಆಗಿರಬಹುದು!

ಆದರೆ ಈ ಸೂಚನೆಗಳಲ್ಲಿ ಕೆಲವಾದರೂ ಇರುವ ಪುರುಷರಿಗೆ ಶಿಶ್ನದ ಕ್ಯಾನ್ಸರ್ ಇರಬೇಕೆಂದೇನಿಲ್ಲ. ಅಲರ್ಜಿಕಾರಕ ಪ್ರತಿಕ್ರಿಯೆ ಅಥವಾ ಸೋಂಕಿನಿಂದಲೂ ಈ ಸೂಚನೆಗಳು ಕಾಣಿಸಿಕೊಳ್ಳಬಹುದು. ಆದರೆ ಕ್ಯಾನ್ಸರ್ ಇಲ್ಲದೇ ಇದ್ದರೂ ಈ ಸೂಚನೆಗಳಲ್ಲಿ ಯಾವುದೇ ಒಂದು ಕಂಡು ಬಂದರೂ ತಕ್ಷಣವೇ ವೈದ್ಯರಿಂದ ತಪಾಸಣೆ ಪಡಿಸಿಕೊಳ್ಳಬೇಕು ಮತ್ತು ಆದಷ್ಟೂ ಶೀಘ್ರವಾಗಿ ಚಿಕಿತ್ಸೆ ಆರಂಭಿಸಬೇಕು.

ತಪಾಸಣೆ

ತಪಾಸಣೆ

ಮೊದಲಾಗಿ, ನಿಮ್ಮ ವೈದ್ಯರು ನೀವು ಒದಗಿಸಿದ ಸೂಚನೆಗಳ ಸಹಿತ ಇತರ ಅಂಶಗಳಿರುವ ಬಗ್ಗೆ ತಪಾಸಣೆ ನಡೆಸುತ್ತಾರೆ ಹಾಗೂ ಕೆಲವು ಪರೀಕ್ಷೆಗಳನ್ನು ಮಾಡಿಸಲು ಸಲಹೆ ಮಾಡಬಹುದು. ಇವುಗಳಲ್ಲಿ ಪ್ರಮುಖವಾದುವೆಂದರೆ:

ಬಯಾಪ್ಸಿ: ವೈದ್ಯರು ಶಿಶ್ನದ ತೊಗಲಿನ ಒಂದು ಅತಿಸೂಕ್ಷ್ಮ ಭಾಗವನ್ನು ಸಂಗ್ರಹಿಸಿ ಪ್ರಯೋಗಶಾಲೆಗೆ ಕಳುಹಿಸಿಕೊಂಡುತ್ತಾರೆ. ಇದರಲ್ಲಿ ಕ್ಯಾನ್ಸರ್ ಪೀಡಿತ ಜೀವಕೋಶಗಳಿವೆಯೇ ಎಂಬುದನ್ನು ಸೂಕ್ತ ಪರೀಕ್ಷೆಗಳ ಮೂಲಕ ಕಂಡುಕೊಳ್ಳಲಾಗುತ್ತದೆ.

Most Read:ಪುರುಷರು ತಮ್ಮ ಶಿಶ್ನಗಳ ಗಾತ್ರವನ್ನು ಹೆಚ್ಚಿಸಿಕೊಳ್ಳಲು ನೈಸರ್ಗಿಕ ಪರಿಹಾರ ಸೂತ್ರಗಳು

ಚಿಕಿತ್ಸೆ

ಚಿಕಿತ್ಸೆ

ಒಂದು ವೇಳೆ ಇದು ಕ್ಯಾನ್ಸರ್ ಆಗಿದ್ದು ಇನ್ನೂ ಪ್ರಾರಂಭಿಕ ಹಂತದಲ್ಲಿದ್ದರೆ, ಚಿಕಿತ್ಸೆ ಹೀಗೆ ಇರಬಹುದು:

*ಶಿಶ್ನದ ಚರ್ಮದ ಮೇಲ್ಭಾಗದಿಂದ ಹಚ್ಚಿಕೊಳ್ಳಲು ಮುಲಾಮು

*ಕೈರೋಥೆರಪಿ: ಅತಿಶೀತಲ ದ್ರವ ಅಥವಾ ಅತಿ ಶೀತವನ್ನು ಒದಗಿಸುವ ಉಪಕರಣದ ಮೂಲಕ ಕ್ಯಾನ್ಸರ್ ಪೀಡಿತ ಭಾಗಕ್ಕೆ ಶೀತವನ್ನು ಒದಗಿಸಿ ಈ ವಾತಾವರಣದಲ್ಲಿ ಕ್ಯಾನ್ಸರ್ ಪೀಡಿತ ಜೀವಕೋಶಗಳು ನಷ್ಟಹೊಂದುವಂತೆ ಮಾಡುವುದು.

*ಮೋಹ್ಸ್ ಸರ್ಜರಿ (Mohs surgery): ಇಲ್ಲಿ ವೈದ್ಯರು ಅತಿಸೂಕ್ಷ್ಮ ಶಸ್ತ್ರಕ್ರಿಯೆಯ ಮೂಲಕ ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನು ನಿವಾರಿಸುತ್ತಾರೆ. ಪ್ರತಿ ಸಾರಿ ಒಂದು ಸೂಕ್ಷ್ಮ ಪದರವನ್ನು ನಿವಾರಿಸುತ್ತಾ ಕ್ರಮೇಣ ಹಲವು ಹಂತಗಳಲ್ಲಿ ಸಂಪೂರ್ಣವಾಗಿ ನಿವಾರಣೆಯಾಗುವವರೆಗೂ ಮುಂದುವರೆಸಲಾಗುತ್ತದೆ.

* ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನೇ ಗುರಿಯಾಗಿಸಿ ಕೊಲ್ಲಲಾಗುವ ಲೇ಼ಸರ್ ಚಿಕಿತ್ಸೆ

*ಸುನ್ನತಿ ಅಥವಾ ಮುಂದೊಗಲನ್ನು ನಿವಾರಿಸುವ ಶಸ್ತ್ರಚಿಕಿತ್ಸೆ. ಒಂದು ವೇಳೆ ಕೇವಲ ಮುಂದೊಗಲಿಗೆ ಮಾತ್ರವೇ ಕ್ಯಾನ್ಸರ್

ತಗುಲಿದ್ದರೆ ಈ ಶಸ್ತ್ರಕ್ರಿಯೆಯನ್ನು ನಡೆಸಲಾಗುತ್ತದೆ.

ಕ್ಯಾನ್ಸರ್ ವಿಪರೀತ ಸ್ಥಿತಿಗೆ ಹರಡಿದ್ದರೆ ಹಾಗೂ ಇನ್ನಷ್ಟು ವೇಗವಾಗಿ ಹರಡುವ ಭೀತಿ ಇದ್ದರೆ

ಕ್ಯಾನ್ಸರ್ ವಿಪರೀತ ಸ್ಥಿತಿಗೆ ಹರಡಿದ್ದರೆ ಹಾಗೂ ಇನ್ನಷ್ಟು ವೇಗವಾಗಿ ಹರಡುವ ಭೀತಿ ಇದ್ದರೆ

ಒಂದು ವೇಳೆ ಕ್ಯಾನ್ಸರ್ ವಿಪರೀತ ಸ್ಥಿತಿಗೆ ಹರಡಿದ್ದರೆ ಹಾಗೂ ಇನ್ನಷ್ಟು ವೇಗವಾಗಿ ಹರಡುವ ಭೀತಿ ಇದ್ದರೆ ಕೆಳಗೆ ವಿವರಿಸಿದವುಗಳಲ್ಲಿ ಒಂದು ಅಥವಾ ಇನ್ನೂ ಹೆಚ್ಚಿನ ವಿಧಾನಗಳನ್ನು ಅನುಸರಿಸಬಹುದು:

* ಕ್ಯಾನ್ಸರ್ ಪೀಡಿತ ಭಾಗದ ಗಂಟನ್ನು ಶಸ್ತ್ರಚಿಕಿತ್ಸೆಯ ಮೂಲಕ ನಿವಾರಿಸುವುದು

* ರೇಡಿಯೇಶನ್ ಅಥವಾ ಖೀಮೋಥೆರಪಿ ಚಿಕಿತ್ಸೆಯ ಮೂಲಕ ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನು ನಷ್ಟಪಡಿಸುವುದು

* ಪೆನೆಕ್ಟೋಮಿ (penectomy)ಅಥವಾ ಕ್ಯಾನ್ಸರ್ ಪೀಡಿತ ಶಿಶ್ನದ ಭಾಗವನ್ನು ಅಥವಾ ವಿಪರೀತ ಸಂದರ್ಭಗಳಲ್ಲಿ, ಅನಿವಾರ್ಯವೆನ್ನಿಸಿದರೆ ಇಡಿಯ ಶಿಶ್ನವನ್ನು ನಿವಾರಿಸುವುದು.

ಹೆಚ್ಚಿನ ಸಂದರ್ಭಗಳಲ್ಲಿ, ಈ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿದ್ದರೆ, ಇದರಿಂದ ರೋಗಿಯ ಲೈಂಗಿಕ ಜೀವನಕ್ಕೇನೂ ಅಡ್ಡಿಯಾಗುವುದಿಲ್ಲ. ಆದರೆ ಖೀಮೋಥೆರಪಿ ಮತ್ತು ರೇಡಿಯೇಶನ್ ಚಿಕಿತ್ಸೆ ಪಡೆಯುವವರು ಕಡ್ಡಾಯ ಬ್ರಹ್ಮಚರ್ಯ ಪಾಲಿಸ ಬೇಕಾಗುತ್ತದೆ. ಈ ಚಿಕಿತ್ಸೆಯ ಅಡ್ಡ ಪರಿಣಾಮಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಳ್ಳಿ.

English summary

What is Penile Cancer? Symptoms and Treatment

Penile cancer starts on the skin cells of the penis and can work its way inside. It’s rare. But it can be treated, especially if it’s found early on.In the U.S., doctors find it in about 2,100 men each year. If you or someone you love has it, you’ll want to know what your options are.
X
Desktop Bottom Promotion