For Quick Alerts
ALLOW NOTIFICATIONS  
For Daily Alerts

ಪ್ರೋಟೀನ್ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಬಾರದು! ಆರೋಗ್ಯಕ್ಕೆ ಒಳ್ಳೆಯದಲ್ಲ...

|

ಆಹಾರ ಪದಾರ್ಥದ ಸೇವನೆಯ (DRI)ಉಲ್ಲೇಖದ ಪ್ರಕಾರ ಪ್ರತಿ ಕಿಲೋ ಗ್ರಾಂ ದೇಹದ ತೂಕಕ್ಕೆ 0.8 ಗ್ರಾಂ ನಷ್ಟು ಪ್ರೋಟೀನ್ ಅವಶ್ಯಕತೆ ಇರುತ್ತದೆ. ಇದರ ಪ್ರಕಾರ ದಿನಕ್ಕೆ ಒಬ್ಬ ಪುರುಷನಿಗೆ ಸರಾಸರಿ 56 ಗ್ರಾಂ ನಷ್ಟು ಮತ್ತು ಮಹಿಳೆಗೆ ಸರಾಸರಿ 46 ಗ್ರಾಂ ನಷ್ಟು ಪ್ರೋಟೀನ್ ಬೇಕು. ಇದಕ್ಕಿಂತ ಅಧಿಕ ಮಟ್ಟದಲ್ಲಿ ಪ್ರೋಟೀನ್ ತೆಗೆದುಕೊಂಡರೆ ಅದು ದೇಹಕ್ಕೆ ಹಾನಿ ಉಂಟು ಮಾಡುತ್ತದೆ. ಅಗತ್ಯಕ್ಕಿಂತ ಹೆಚ್ಚು ಪ್ರೋಟೀನ್ ದಿನನಿತ್ಯ ಸೇವಿಸುವುದರಿಂದ ದೇಹಕ್ಕಾಗುವ ತೊಂದರೆಯನ್ನು ಇಲ್ಲಿ ನೀಡಲಾಗಿದೆ...

ಕಿಡ್ನಿಗೆ ತೊಂದರೆ

ಕಿಡ್ನಿಗೆ ತೊಂದರೆ

ಪ್ರೋಟೀನ್ ದೇಹಕ್ಕೆ ಹೋಗುವುದರ ಜೊತೆಗೆ ನಾವು ಸಾರಜನಕ ಕೂಡ ದೇಹಕ್ಕೆ ಸೇರುತ್ತದೆ. ನಂತರ ಇದನ್ನು ಕಿಡ್ನಿಯು ರಕ್ತದಿಂದ ಫಿಲ್ಟರ್ ಮಾಡುತ್ತದೆ.ಅಗತ್ಯವಿರುವಷ್ಟು ಪ್ರೋಟೀನ್ ದೇಹಕ್ಕೆ ಸೇರುವುದಾಗ ಕಿಡ್ನಿಯು ಹೆಚ್ಚಿನ ನೈಟ್ರೋಜನ್ ಅನ್ನು ಮೂತ್ರದ ಮೂಲಕ ಹೊರಹಾಕುತ್ತದೆ.ಆದರೆ ಪ್ರೋಟೀನ್ ಅಂಶವಿರುವ ಆಹಾರ ಅಗತ್ಯಕ್ಕಿಂತ ಹೆಚ್ಚು ದೇಹಕ್ಕೆ ಸೇರಿದಾಗ ನೈಟ್ರೋಜೆನ್ ಅನ್ನು ಹೊರಹಾಕಲು ಕಿಡ್ನಿಯ ಮೇಲೆ ಒತ್ತಡ ಬೀರುತ್ತದೆ.ಇದನ್ನು ತಡೆಯದಿದ್ದಲ್ಲಿ ಕಿಡ್ನಿಗೆ ಹಾನಿಯಾಗುತ್ತದೆ.

ಜಠರ ಸಂಬಂಧಿ ರೋಗಗಳಿಗೆ ಪ್ರಚೋದಕ

ಜಠರ ಸಂಬಂಧಿ ರೋಗಗಳಿಗೆ ಪ್ರಚೋದಕ

ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚು ಪ್ರೋಟೀನ್ ಅಂಶವಿರುವ ಆಹಾರವನ್ನು ತೆಗೆದುಕೊಳ್ಳುವುದರಿಂದ ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರಿಸುವಿಕೆ ಕಾಣಿಸಿಕೊಳ್ಳುತ್ತದೆ.ಇದಕ್ಕೆ ಕಾರಣ ಅಗತ್ಯವಿರುವ ನಾರಿನಂಶ ತೆಗೆದುಕೊಳ್ಳದಿರುವುದು,ಇದರಿಂದ ಜಠರ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು.

ದೇಹದ ತೂಕದ ಹೆಚ್ಚಳಕ್ಕೆ ಕಾರಣವಾಗಬಹುದು

ದೇಹದ ತೂಕದ ಹೆಚ್ಚಳಕ್ಕೆ ಕಾರಣವಾಗಬಹುದು

ಪ್ರೋಟೀನ್ ಅಂಶ ಹೇರಳವಾಗಿರುವ ಆಹಾರವನ್ನು ಸೇವಿಸುವುದರಿಂದ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು ನಿಜ.ಆದರೆ ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಆಹಾರ ತೆಗೆದುಕೊಳ್ಳುವುದು ಕೂಡ ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.ಪ್ರೋಟೀನ್ ಹೇರಳ ಆಹಾರ ಅತಿ ಬೇಗ ದೇಹದ ತೂಕ ಇಳಿಕೆಗೆ ಸಹಾಯಕವಾಗುತ್ತದೆ ಆದರೆ ಮೊಟ್ಟೆಯ ಬಿಳಿಭಾಗ ಮತ್ತು ಪ್ರೋಟೀನ್ ಡ್ರಿಂಕ್ಸ್ ಹೆಚ್ಚು ಸೇವಿಸುವುದರಿಂದ ತೂಕ ಹೆಚ್ಚುತ್ತದೆ.ಇತ್ತೀಚೆಗೆ 7000 ಯುವಕರ ಮೇಲೆ ನಡೆಸಿದ ಅಧ್ಯಯನದಲ್ಲಿ ಪ್ರೋಟೀನ್ ಅಧಿಕವಾಗಿರುವ ಆಹಾರ ಸೇವಿಸಿದ ಶೇಖಡಾ 90ರಷ್ಟು ಜನರು,ಕಡಿಮೆ ಪ್ರೋಟೀನ್ ಸೇವಿಸಿದ ಜನರಿಗಿಂತ ತೂಕದಲ್ಲಿ ಹೆಚ್ಚಳವಾಗಿರುವುದು ಕಂಡು ಬಂದಿದೆ.

ಬಾಯಿ ದುರ್ವಾಸನೆ

ಬಾಯಿ ದುರ್ವಾಸನೆ

ಹೌದು,ಕಾರ್ಬೋಹೈಡ್ರೇಟ್ ಆಹಾರವನ್ನು ಕಡಿಮೆ ಸೇವಿಸಿ ಪ್ರೋಟೀನ್ ಹೇರಳ ಆಹಾರವನ್ನು ಹೆಚ್ಚು ಸೇವಿಸುವುದರಿಂದ,ದೇಹವು ಕೆಟೊಸಿಸ್ ಎಂಬ ಹಂತವನ್ನು ತಲುಪುತ್ತದೆ.ಅಂದರೆ ಇದು ದೇಹ ಶಕ್ತಿಗೋಸ್ಕರ ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಬಳಸಿಕೊಳ್ಳುವ ಸ್ಥಿತಿ.ಈ ಸ್ಥಿತಿಯು ದೇಹದ ತೂಕ ಇಳಿಸಿಕೊಳ್ಳುವಲ್ಲಿ ಸಹಾಯಕವಾಗಬಹುದು ಆದರೆ ಬಾಯಿ ದುರ್ವಾಸನೆಗೆ ಕಾರಣವಾಗುತ್ತದೆ.ದೇಹದ ತೂಕ ಅತಿ ಬೇಗ ಕಳೆದುಕೊಳ್ಳುವುದರಿಂದ ಕೆಟೊನಸ್ ಉತ್ಪತ್ತಿಯಾಗಿ ಬಾಯಿ ವಾಸನೆ ಪ್ರಾರಂಭವಾಗುತ್ತದೆ.ನೀವು ಬ್ರಷ್ ಮಾಡಿ,ಪ್ಲಾಸ್ ಬಳಸಿ ಎಷ್ಟೇ ಸ್ವಚ್ಛಗೊಳಿಸಿದರೂ ಬಾಯಿ ದುರ್ವಾಸನೆ ಹೋಗಲಾಡಿಸುವುದು ಕಷ್ಟ.

ಮೂಡ್ ನ ಮೇಲೆ ಪರಿಣಾಮ ಬೀರಬಹುದು

ಮೂಡ್ ನ ಮೇಲೆ ಪರಿಣಾಮ ಬೀರಬಹುದು

ನಾವು ಸೇವಿಸುವ ಆಹಾರ ನಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.ನಮ್ಮ ಮನಸ್ಸನ್ನು ನಿಯಂತ್ರಿಸಲು ಮೆದುಳಿಗೆ ಸೆರೋಟೋನಿನ್ ಎಂಬ ಹಾರ್ಮೋನ್ ಬಿಡುಗಡೆ ಮಾಡಲು ಕಾರ್ಬೋಹೈಡ್ರೇಟ್ ನ ಅವಶ್ಯಕತೆ ಇರುತ್ತದೆ.ಆದರೆ ನಾವು ಈ ಆಹಾರವನ್ನು ಸೇವಿಸದಿದ್ದಲ್ಲಿ ಮನಸ್ಸಿಗೆ ಕಿರಿಕಿರಿ ಅಥವಾ ಖಿನ್ನತೆ ಕೂಡ ಆವರಿಸಬಹುದು.ಆಸ್ಟ್ರೇಲಿಯಾದಲ್ಲಿ ನೆಡೆಸಿದ ಅಧ್ಯಯನದ ಪ್ರಕಾರ ಕಡಿಮೆ ಕಾರ್ಬ್ ಇರುವ ಆಹಾರ ಸೇವಿಸಿದ ಜನರು ಹೆಚ್ಚು ಕಾರ್ಬೋಹೈಡ್ರೇಟೆಡ್ ಆಹಾರವನ್ನು ಸೇವಿಸಿದವರಿಗಿಂತ ಕಿರಿಕಿರಿಯನ್ನು ಹೆಚ್ಚು ಅನುಭವಿಸುತ್ತಾರೆ ಮತ್ತು ತೂಕ ಕೂಡ ಎರಡೂ ವರ್ಗದವರೂ ಒಂದೇ ಪ್ರಮಾಣದಲ್ಲಿ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.

Most Read: ಒಟ್ಟು 12 ರಾಶಿಗಳಲ್ಲಿ, ಈ 5 ರಾಶಿಯವರು ತುಂಬಾನೇ ಸ್ಪರ್ಧಾತ್ಮಕವಾದ ರಾಶಿಚಕ್ರಗಳು

ನಿರ್ಜಲೀಕರಣವಾಗಬಹುದು

ನಿರ್ಜಲೀಕರಣವಾಗಬಹುದು

ಪ್ರೋಟೀನ್ ಅಧಿಕವಾಗಿರುವ ಆಹಾರವು ನೀರಡಿಕೆಯನ್ನು ಹೆಚ್ಚಿಸುತ್ತದೆ.ಆದರೆ ಅಧ್ಯಯನದ ಪ್ರಕಾರ ಅತಿಯಾಗಿ ಪ್ರೋಟೀನ್ ಅಂಶ ದೇಹಕ್ಕೆ ಸೇರುವುದರಿಂದ ದೇಹದಲ್ಲಿ ನಿರ್ಜಲೀಕರಣ(ಡಿ ಹೈಡ್ರೇಶನ್)ಉಂಟಾಗಬಹುದು.ದೇಹದಲ್ಲಿ ಪ್ರೋಟೀನ್ ಅಧಿಕವಾದಾಗ ಹೆಚ್ಚಿನ ನೈಟ್ರೋಜೆನ್ ಅನ್ನು ಹೊರಹಾಕಲು ಕಿಡ್ನಿ ಹೆಚ್ಚು ಪ್ರಯತ್ನಿಸುವುದರಿಂದ ಪದೇ ಪದೇ ಮೂತ್ರ ವಿಸರ್ಜನೆ ಮತ್ತು ಹೆಚ್ಚು ನೀರಿನ ಬಯಕೆ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

English summary

what happens when you eat too much protein

According to The DRI (Dietary Reference Intake), 0.8 grams of protein is required per kilogram of body weight. So this amounts to 56 grams per day for the average sedentary man and 46 grams per day for the average sedentary woman. Therefore, any amount in excess than what is required can prove to be harmful to our body’s functioning.
Story first published: Wednesday, January 16, 2019, 15:24 [IST]
X
Desktop Bottom Promotion