For Quick Alerts
ALLOW NOTIFICATIONS  
For Daily Alerts

ಕ್ರೀಡಾಸಮಯದಲ್ಲಿ ಎದುರಾಗುವ ಗಾಯಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡುವ ವಿಧಾನಗಳು

|

ಕ್ರೀಡೆಯಲ್ಲಿ ಪಾಲ್ಗೊಳ್ಳುವ ಯಾರಿಗೇ ಆದರೂ ಗಾಯ ಮತ್ತು ಪೆಟ್ಟುಗಳಾಗುವ ಸಾಧ್ಯತೆ ಇದ್ದೇ ಇರುತ್ತದೆ ಹಾಗೂ ನೀವು ಕ್ರೀಡಾಪಟುವಾಗಿದ್ದರೆ ಇದುವರೆಗೂ ಕೆಲವಾದರೂ ಪೆಟ್ಟುಗಳನ್ನು ಎದುರಿಸಿಯೇ ಇರುತ್ತೀರಿ. ಅತಿ ಸಾಮಾನ್ಯವಾಗಿ ಎದುರಾಗುವ ತೊಂದರೆಗಳೆಂದರೆ ಉಳುಕು, ಮಂಡಿ ತರಚಿದ ಗಾಯ, ಊದಿಕೊಳ್ಳುವ ಸ್ನಾಯುಗಳು, ಬೆನ್ನುನೋವು ಇತ್ಯಾದಿ.

ಸಾಮಾನ್ಯವಾಗಿ ನೋವು ಎದುರಾದಾಗ ನೋವುನಿವಾರಕ ಗುಳಿಗೆಗಳನ್ನು ಸೇವಿಸುವುದೇ ಹೆಚ್ಚಿನವರ ಪ್ರಥಮ ಆಯ್ಕೆಯಾಗಿರುತ್ತದೆ. ಆದರೆ ಇದರ ಬದಲಿಗೆ ಸುರಕ್ಷಿತವಾದ ಹಾಗೂ ನೈಸರ್ಗಿಕವಾದ ಚಿಕಿತ್ಸೆಯನ್ನು ಮನೆಯಲ್ಲಿಯೇ ಪಡೆಯಬಹುದು. ಬನ್ನಿ, ಯಾವುದೇ ಅಡ್ಡಪರಿಣಾಮವಿಲ್ಲದ ಸುರಕ್ಷಿತ ಏಳು ವಿಧಾನಗಳ ಬಗ್ಗೆ ಇಂದಿನ ಲೇಖನದಲ್ಲಿ ಅರಿಯೋಣ:

ಹರಳೆಣ್ಣೆ

ಹರಳೆಣ್ಣೆ

ಅತಿ ಸ್ನಿಗ್ಧವಾದ ಈ ಎಣ್ಣೆ ನೋವನ್ನು ನಿವಾರಿಸಿ ಗಾಯಗಳನ್ನು ಮಾಗಿಸಲು ನೆರವಾಗುತ್ತದೆ. ಪೆಟ್ಟು ಬಿದ್ದು ಊದಿಕೊಂಡಿರುವ ಭಾಗಕ್ಕೆ ಕೊಂಚವೇ ಬಿಸಿಮಾಡಿದ ಹರಳೆಣ್ಣೆಯನ್ನು ಸವರಿ ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡಿಕೊಳ್ಳವೇಕು ಬಳಿಕ ಚಿಕ್ಕ ಬಟ್ಟೆಯ ತುಂಡನ್ನು ಈ ಭಾಗದ ಮೇಲಿರಿಸಿ ಎಣ್ಣೆ ನಿಮ್ಮ ಬಟ್ಟೆಗಳಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು. ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷವಾದರೂ ಹಾಗೇ ಇರಲು ಬಿಟ್ಟು ಚರ್ಮ ಎಣ್ಣೆಯನ್ನು ಹೀರಿಕೊಳ್ಳುವಂತೆ ಮಾಡಬೇಕು.

Most Read: ಮನೆಯಲ್ಲಿ ಹರಳೆಣ್ಣೆ ಇದ್ದರೆ ಇಷ್ಟೇ ಸಾಕು! ಕೂದಲಿನ ಸಮಸ್ಯೆಗೆ ಇದು ರಾಮಬಾಣ

ಪೆಟ್ರೋಲಿಯಂ ಜೆಲ್ಲಿ

ಪೆಟ್ರೋಲಿಯಂ ಜೆಲ್ಲಿ

ವ್ಯಾಸೆಲಿನ್ ಎಂದೇ ಹೆಚ್ಚು ಜನಪ್ರಿಯವಾಗಿರುವ ಈ ಮೇಣ ತೈಲೋದ್ಯಮದ ಉಪ ಉತ್ಪನ್ನವಾಗಿದೆ. ಒಂದು ವೇಳೆ ಬಿಸಿ ಅಥವಾ ಘರ್ಷಣೆಯಿಂದ ಚರ್ಮದಲ್ಲಿ ಬೊಬ್ಬೆಗಳೆದ್ದರೆ ತಕ್ಷಣವೇ ಕೊಂಚ ಪೆಟ್ರೋಲಿಯಂ ಜೆಲ್ಲಿಯನ್ನು ಸವರಬೇಕು. ಆಗ ಈ ಬೊಬ್ಬೆ ಸುತ್ತಲ ಅಂಗಾಂಶಗಳಿಗೆ ಉಜ್ಜುವುದನ್ನು ತಡೆಗಟ್ಟಬಹುದು. ಸಾಮಾನ್ಯವಾಗಿ ಈ ಮೇಣ ಬಿಳಿಯಾಗಿದ್ದು ಸವರಿದಾಗ ಪಾರದರ್ಶಕವಾಗಿರುತ್ತದೆ. ಸವರಿದ ಬಳಿಕ ಹಾಗೇ ಒಣಗಲು ಬಿಟ್ಟರೆ ಗಾಯ ಮಾಗುವ ಗತಿ ಶೀಘ್ರಗೊಳ್ಳುತ್ತದೆ.

ಅರಿಶಿನ

ಅರಿಶಿನ

ಅರಿಶಿನದ ಉರಿಯೂತ ನಿವಾರಕ ಗುಣದಿಂದಾಗಿ ಸಾವಿರಾರು ವರ್ಷಗಳಿಂದ ಹಲವಾರು ಕಾಯಿಲೆಗಳಿಗೆ ಮದ್ದಿನ ರೂಪದಲ್ಲಿ ಪರಿಗಣಿಸಲು ಸಾಧ್ಯವಾಗಿದೆ. ವಿಶೇಷವಾಗಿ ಪೆಟ್ಟಿನಿಂದಾಗಿ ಎದುರಾಗಿರುವ ಊತವನ್ನು ನಿವಾರಿಸಲು ಹಾಗೂ ಸ್ನಾಯುಗಳ ನೋವನ್ನು ಕಡಿಮೆಗೊಳಿಸಲು ಅರಿಶಿನ ನೆರವಾಗುತ್ತದೆ. ಇಅಕ್ಕಾಗಿ ಅರ್ಧ ಚಿಕ್ಕ ಚಮಚ ಅರಿಶಿನ ಪುಡಿಯನ್ನು ಒಂದು ಲೋಟ ಬಿಸಿಹಾಲಿನಲ್ಲಿ ಮಿಶ್ರಣ ಮಾಡಿ ದಿನಕ್ಕೆರಡು ಬಾರಿ ಸೇವಿಸಬೇಕು. ಇದರ ಜೊತೆಗೇ ಕೊಂಚ ಅರಿಶಿನವನ್ನು ತುಪ್ಪದೊಂದಿಗೆ ಬೆರೆಸಿ ನಯವಾದ ಲೇಪ ತಯಾರಿಸಿ ಪೆಟ್ಟಾದ ಭಾಗದ ಮೇಲೆ ತೆಳುವಾಗಿ ಸವರಿ ಬ್ಯಾಂಡೇಜ್ ಪಟ್ಟಿಯಿಂದ ಆವರಿಸಿ ಸುತ್ತಬೇಕು. ಈ ಬ್ಯಾಂಡೇಜುಗಳನ್ನು ದಿನಕ್ಕೆರಡು ಬಾರಿ ಬದಲಿಸಬೇಕು.

Most Read: ಅರಿಶಿನ ಹಾಕಿ ಕುದಿಸಿದ ನೀರು ಕುಡಿದರೆ, ಲಿವರ್-ಮೆದುಳಿಗೆ ಬಹಳ ಒಳ್ಳೆಯದು

ಬಿಳಿ ಶಿರ್ಕ

ಬಿಳಿ ಶಿರ್ಕ

ಈಜಿನ ಸಮಯದಲ್ಲಿ ಕಿವಿಗೆ ನುಗ್ಗಿ ಎದುರಾದ ಸೋಂಕು ನಿವಾರಿಸಲು ಬಿಳಿಯ ಶಿರ್ಕಾ ಅತ್ಯುತ್ತಮ ಪರಿಹಾರವಾಗಿದೆ. ಈಜಿನ ಸಮಯದಲ್ಲಿ ಕಿವಿಗೆ ನುಗ್ಗುವ ನೀರಿನಿಂದಾಗಿ ಒಳಗಿವಿಯಲ್ಲಿ ನೀರಿನ ಪಸೆ ಉಳಿದುಕೊಂಡು ಈ ಭಾಗದ ಪಿ ಎಚ್ ಮಟ್ಟ ಏರುಪೇರಾಗುತ್ತದೆ. ಈ ಪರಿಸರ ಬ್ಯಾಕ್ಟೀರಿಯಾಗಳಿಗೆ ವಂಶಾಭಿವೃದ್ದಿಗೊಳಿಸಲು ಸೂಕ್ತ ತಾಣವಾಗಿದ್ದು ಶೀಘ್ರವೇ ಸೋಂಕು ಹರಡುತ್ತವೆ. ಈ ಸ್ಥಿತಿಗೆ swimmers' ear ಎಂದು ಕರೆಯುತ್ತಾರೆ. ಇದರ ಚಿಕಿತ್ಸೆಗಾಗಿ 0.25ಮಿಲಿಲೀಟರ್ ನಷ್ಟು ಬಿಳಿ ಶಿರ್ಕಾವನ್ನು ನೇರವಾಗಿ ಕಿವಿಯ ಬಾವಿಯೊಳಗೆ ಬಿಡಬೇಕು. ದಿನಕ್ಕೆರಡು ಬಾರಿಯಂತೆ ಸತತವಾಗಿ ಎರಡು ದಿನ ಅನುಸರಿಸಬೇಕು.

ಹಸಿಶುಂಠಿ

ಹಸಿಶುಂಠಿ

ಶುಂಠಿಯಲ್ಲಿಯೂ ಪ್ರಬಲ ಉರಿಯೂತ ನಿವಾರಕ ಗುಣಗಳಿವೆ. ಈ ಗುಣ ಗಾಯಗಳನ್ನು ಶೀಘ್ರವಾಗಿ ಮಾಗಿಸಲು ನೆರವಾಗುತ್ತದೆ. ಇದಕ್ಕಾಗಿ ಶುಂಠಿಯನ್ನು ನಿಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳಬಹುದು ಅಥವಾ ಶುಂಠಿಯನ್ನು ಕುದಿಸಿ ತಯಾರಿಸಿದ ಟೀ ಸೇವಿಸಬಹುದು. ಅಲ್ಲದೇ ಶುಂಠಿಯ ರಸ ಬೆರೆಸಿದ ನೀರಿನಿಂದ ಸ್ನಾನವನ್ನೂ ಮಾಡಬಹುದು. ಇದಕ್ಕಾಗಿ ಸುಮಾರು ಎರಡರಿಂದ ಮೂರು ದೊಡ್ಡ ಚಮಚ ಹಸಿಶುಂಠಿಯ ರಸವನ್ನು ಸ್ನಾನದ ನೀರಿಗೆ ಬೆರೆಸಬೇಕು. ಒಂದು ವೇಳೆ ನಿಮ್ಮ ತ್ವಚೆ ಸೂಕ್ಷ್ಮಸಂವೇದಿಯಾಗಿದ್ದರೆ ಈ ವಿಧಾನ ಅನುಸರಿಸುವ ಮುನ್ನ ಎಚ್ಚರಿಕೆ ವಹಿಸಿ, ಏಕೆಂದರೆ ಶುಂಠಿಯ ರಸ ಚರ್ಮದಲ್ಲಿ ಉರಿ ತರಿಸಬಹುದು.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಸ್ನಾಯುಗಳು ಸಾಮರ್ಥಕ್ಕೂ ಮೀರಿ ಸೆಳೆತಕ್ಕೊಳಪಟ್ಟಾಗ ಬಾವು, ಮರಗಟ್ಟುವಿಕೆ ಹಾಗೂ ನೋವಿಗೆ ಒಳಗಾಗುತ್ತವೆ. ಈ ಸ್ನಾಯುವನ್ನು ಬಳಸುವ ಯಾವುದೇ ಚಲನೆ ನೋವಿನಿಂದ ಕೂಡಿರುವ ಕಾರಣ ಚಲನವಲನಗಳು ಕಷ್ಟಕರವಾಗುತ್ತವೆ. ಈ ನೋವನ್ನು ನಿವಾರಿಸಲು ಸಾಸಿವೆ ಎಣ್ಣೆ ಅತ್ಯುತ್ತಮವಾದ ಪರಿಹಾರವಾಗಿದೆ. ಇದಕ್ಕಾಗಿ ಕೊಂಚ ಸಾಸಿವೆ ಎಣ್ಣೆಯನ್ನು ಉಗುರುಬೆಚ್ಚಗಾಗಿಸಿ ನೋವಿರುವ ಭಾಗಕ್ಕೆ ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡುತ್ತಾ ಸವರಿಕೊಳ್ಳಬೇಕು. ಈ ಎಣ್ಣೆ ನೋವನ್ನು ನಿವಾರಿಸಿ ಬಾವನ್ನೂ ಶೀಘ್ರವೇ ಇಳಿಸುತ್ತದೆ.

ಅನನಾಸು ಮತ್ತು ದಾಳಿಂಬೆ ರಸ

ಅನನಾಸು ಮತ್ತು ದಾಳಿಂಬೆ ರಸ

ಇವೆರಡರಲ್ಲಿಯೂ ಕೆಲವು ಕಿಣ್ವಗಳಿದ್ದು ಉರಿಯೂತ ನಿವಾರಕ ಮತ್ತು ಗಾಯದ ಉರಿಯನ್ನು ನಿವಾರಿಸುವ ಗುಣವನ್ನು ಹೊಂದಿವೆ. ಗಾಯಗಳನ್ನು ಮಾಗಿಸುವ ಗತಿಯನ್ನು ಈ ರಸಗಳು ತೀವ್ರಗೊಳಿಸುತ್ತವೆ. ಸಮಪ್ರಮಾಣದಲ್ಲಿ ಇವೆರಡೂ ರಸಗಳನ್ನು. ಒಂದು ವೇಳೆ ಒಂದು ಲಭ್ಯವಿಲ್ಲದಿದ್ದರೆ ಇನ್ನೊಂದರ ರಸವನ್ನು ಒಂದು ಲೋಟದಲ್ಲಿ ಸಂಗ್ರಹಿಸಿ ಇದಕ್ಕೆ ಅರ್ಧ ಚಿಕ್ಕ ಚಮಚ ಅರಿಶಿನ ಮತ್ತು ಒಂದು ಚಿಕ್ಕಚಮಚ ಹಸಿಶುಂಠಿಯ ರಸವನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿಯಬೇಕು.

English summary

Ways to treat sports injuries at home

If you are someone who loves to play sports, then you surely must be aware of sports injury. It is something that almost everyone involved in some kind of physical activity has experienced at some point of time. The most common sports injuries are sprains, knee injuries, swollen muscles, back pain, and others. Most of the people opt for painkillers to treat them, but there some super good home remedies that you can try.They are excellent and do not have any side effects.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more