For Quick Alerts
ALLOW NOTIFICATIONS  
For Daily Alerts

ದೇಹದ ಎತ್ತರ ಹೆಚ್ಚು ಮಾಡಲು ಅತ್ಯದ್ಭುತ ಸರಳ ಟಿಪ್ಸ್

|

ಹದಿಹರೆಯದಲ್ಲಿ ದೇಹದ ಬೆಳವಣಿಗೆಯು ಸರಿಯಾಗಿ ಆಗಬೇಕು. ತೂಕ, ಎತ್ತರ ಸರಿಯಾಗಿ ಇದ್ದರೆ ಆಗ ಆರೋಗ್ಯ ಹಾಗೂ ಫಿಟ್ನೆಸ್ ಕಾಪಾಡಬಹುದು. ಆದರೆ ಕೆಲವರು 20ರ ಹರೆಯದಲ್ಲಿ ಇದ್ದರೂ ತಮ್ಮ ತೂಕದ ಬಗ್ಗೆ ಅಸಮಾಧಾನ ಹೊಂದಿರುವರು. ಇನ್ನು ಕೆಲವು ಇಂಚು ಉದ್ದ ಆಗಬೇಕು ಎಂದು ಬಯಸುವರು. ಪ್ರೌಢಾವಸ್ಥೆಗೆ ಬಂದ ಬಳಿಕ ದೇಹದ ಎತ್ತರವಾಗುವುದು ನಿಲ್ಲುವುದು. ಯಾಕೆಂದರೆ ಹಾರ್ಮೋನುಗಳ ಬೆಳವಣಿಗೆಯು ನಿಧಾನವಾಗುವುದು.

height

ಈ ಹಾರ್ಮೋನುಗಳು ಮಾನವ ದೇಹದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ನಾವು ತಿಳಿದುಕೊಂಡಿರುವ ಪ್ರಕಾರ ಮೂಳೆಗಳ ಉದ್ದವು ಬೆಳವಣಿಗೆ ಎಫಿಸೈಸ್ ನಿಂದಾಗಿ ಉದ್ದವಾಗುವುದು. ಪಿಟ್ಯುಟರಿ ಗ್ರಂಥಿಯು ಮನುಷ್ಯನ ಹಾರ್ಮೋನು ಬೆಳವಣಿಗೆಯನ್ನು ಉತ್ಪತ್ತಿ ಮಾಡುವುದು. ಇದರಿಂದಾಗಿ ಮೂಳೆಗಳ ಬೆಳವಣಿಗೆ ಆಗುವುದು. 25ರ ಹರೆಯದ ಬಳಿಕ ದೇಹದ ಎತ್ತರ ಹೆಚ್ಚು ಮಾಡಲು ಕೆಲವೊಂದು ವಿಧಾನಗಳನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ.

ಆರೋಗ್ಯಕಾರಿ ಮತ್ತು ಸರಿಯಾದ ಆಹಾರಕ್ರಮ

ಆರೋಗ್ಯಕಾರಿ ಮತ್ತು ಸರಿಯಾದ ಆಹಾರಕ್ರಮ

ದೇಹದ ಎತ್ತರ ಹೆಚ್ಚು ಮಾಡಲು ಸಮತೋಲಿತ ಆಹಾರ ಕ್ರಮವು ಅತೀ ಅಗತ್ಯವಾಗಿರುವುದು. ಕ್ಯಾರೆಡ್, ಮೊಟ್ಟೆ ತಿರುಳು, ಮೀನು(ಟ್ಯುನಾ, ಸಾಲ್ಮನ್ ಮತ್ತು ಬಂಗುಡೆ), ಆಲೂಗಡ್ಡೆ, ಹಸಿರೆಲೆ ತರಕಾರಿಗಳು, ಕೋಳಿ ಮಾಂಸ, ಧಾನ್ಯಗಳು, ಬೀಜಗಳು, ಹಣ್ಣುಗಳು, ಹಾಲಿನ ಉತ್ಪನ್ನಗಳು ಇತ್ಯಾದಿಗಳನ್ನು ಸೇವಿಸಬೇಕು ಮತ್ತು ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಬೇಕು. ಎತ್ತರ ಹೆಚ್ಚು ಮಾಡಲು ಎಲ್ಲಾ ರೀತಿಯ ವಿಟಮಿನ್ ಗಳು, ಪೋಷಕಾಂಶಗಳು ಮತ್ತು ಖನಿಜಾಂಶಗಳನ್ನು ಹೀರಿಕೊಳ್ಳುವುದು ಅತೀ ಅಗತ್ಯವಾಗಿರುವುದು. ದೇಹದಿಂದ ವಿಷಕಾರಿ ಅಂಶವನ್ನು ಹೊರ ಹಾಕಲು ದಿನಕ್ಕೆ 6-8 ಲೋಟ ನೀರು ಕುಡಿಯಲು ಮರೆಯಬೇಡಿ. ಟ್ರಾನ್ಸ್ ಫ್ಯಾಟ್ ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾಗುವುದು ಮತ್ತು ಇದರಿಂದಾಗಿ ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸಾಧ್ಯವಾಗದು.

Most Read: ಬಂಗುಡೆ ಮೀನು ಕೇವಲ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಬಹಳ ಒಳ್ಳೆಯದು

ವ್ಯಾಯಾಮ

ವ್ಯಾಯಾಮ

ಎತ್ತರ ಹೆಚ್ಚು ಮಾಡಲು ಈಜು ಮತ್ತು ಸೈಕ್ಲಿಂಗ್ ಕೂಡ ನೆರವಾಗುವುದು ಆದರೆ ನಿಮಗೆ ಕನಸಿನ ಎತ್ತರ ಬೇಕಾದರೆ ಆಗ ನೀವು ಸ್ಟ್ರೆಚ್ ಮತ್ತು ದಿನಾಲೂ ವ್ಯಾಯಾಮ ಮಾಡಬೇಕು. ವ್ಯಾಯಾಮದಿಂದ ಎತ್ತರ ಹೆಚ್ಚು ಮಾಡಲು ತುಂಬಾ ನೆರವಾಗುವುದು. ವ್ಯಾಯಾಮ ಮತ್ತು ಸ್ಟ್ರೆಚಿಂಗ್ ನಿಂದಾಗಿ ದೇಹದ ಎತ್ತರ ಹೆಚ್ಚು ಮಾಡಲು ವೇಗ ಸಿಗುವುದು. ಸುಧಾರಿತ ಭಂಗಿಯಿಂದಾಗಿ ಇಂದು ಇಂಚು ಎತ್ತರ ವೃದ್ಧಿಸಬಹುದು. ಮುಂದೆ ಬಾಗುವುದು, ಹೈಜಂಪ್, ರೋಪ್ ಸ್ಕಿಪ್ಪಿಂಗ್, ನೇತಾಡುವುದು ಮತ್ತು ಇತರ ಕೆಲವೊಂದು ವಿಧಾನಗಳಿಂದಲೂ ನೀವು 25ರ ಹರೆಯದಲ್ಲಿ ಎತ್ತರ ಹೆಚ್ಚು ಮಾಡಿಕೊಳ್ಳಬಹುದು.

ಸೂರ್ಯನ ಬಿಸಿಲಿಗೆ ಮೈಯೊಡ್ಡಿ

ಸೂರ್ಯನ ಬಿಸಿಲಿಗೆ ಮೈಯೊಡ್ಡಿ

ವಿಟಮಿನ್ ಡಿ ಬಿಸಿಲಿನಲ್ಲಿ ಇದ್ದು, ಇದು ಎತ್ತರ ಹೆಚ್ಚಿಸಲು ನೆರವಾಗುವುದು. ಎತ್ತರ ಹೆಚ್ಚು ಮಾಡುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುವುದು. ಇದು ಮೂಳೆಗಳ ಬೆಳವಣಿಗೆಗೆ ನೆರವಾಗುವುದು. ಬಿಸಿಲಿನಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಡಿ ಇದೆ. ಬಿಸಿಲಿಗೆ ಮೈಯೊಡ್ಡು ಪರಿಣಾಮವಾಗಿ ವಿಟಮಿನ್ ಡಿ ಪಡೆಯಬಹಹುದು. ಬೆಳಗ್ಗೆ ಹಾಗೂ ಸಂಜೆ ವೇಳೆ ಬಿಸಿಲ ಸ್ನಾನ ಮಾಡಬೇಕು. ಇದು ತುಂಬಾ ಲಾಭಕಾರಿಯಾಗಿದೆ. ಯಾಕೆಂದರೆ ಈ ಸಮಯದಲ್ಲಿ ಯುವಿ ಕಿರಣಗಳು ತುಂಬಾ ಕಡಿಮೆ ಇರುವುದು.

ಯೋಗ

ಯೋಗ

ನಿಯಮಿತವಾಗಿ ಯೋಗಾಭ್ಯಾಸ ಮಾಡುವ ಪರಿಣಾಮವಾಗಿ ದೇಹದ ಎತ್ತರ ಹೆಚ್ಚು ಮಾಡಬಹುದು. ಯೋಗದಿಂದ ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳಲು ನೆರವಾಗುವುದು. ವಿವಿಧ ರೀತಿಯ ಯೋಗ ಭಂಗಿಗಳು ದೇಹವನ್ನು ಉತ್ತಮಗೊಳಿಸುವುದು. ಯೋಗದಿಂದಾಗಿ ನೀವು ತುಂಬಾ ಎತ್ತರವಾಗಿ ಕಾಣಬಹುದು ಮತ್ತು ಸಂಪೂರ್ಣ ದೇಹದ ಬೆಳವಣಿಗೆ ಆಗುವುದು. ತಡಾಸನ, ಭುಜಂಗಾಸನ, ತ್ರಿಕೋನಾಸನ, ಅಧೋ-ಮುಖ ಶವಾಸನ, ಸರ್ವಾಂಗಾಸನ ಮತ್ತು ಸ್ಟ್ರೆಚಿಂಗ್ ಎತ್ತರ ಹೆಚ್ಚಿಸಲು ನೆರವು ನೀಡುವುದು.

ಸರಿಯಾದ ನಿದ್ರೆ

ಸರಿಯಾದ ನಿದ್ರೆ

ಸರಿಯಾದ ನಿದ್ರೆಯು ದೇಹಕ್ಕೆ ಅತೀ ಅಗತ್ಯವಾಗಿ ಇರುವುದು. ಯಾಕೆಂದರೆ ಈ ವೇಳೆ ಬೆಳವಣಿಗೆ ಹಾರ್ಮೋನುಗಳು ಮೂಳೆಗಳನ್ನು ದಪ್ಪ ಹಾಗೂ ತೆಳುಗೊಳಿಸುವ ಕಾರ್ಯ ಮಾಡುವುದು. ನೀವು ಮಲಗುವ ಭಂಗಿ ಕೂಡ ನಿದ್ರೆ ಎತ್ತರ ಹೆಚ್ಚಿಸಲು ನೆರವಾಗುವುದು. ಮಲಗುವ ವೇಳೆ ತುಂಬಾ ಮೆತ್ತಗೆ ಮತ್ತು ಆರಾಮದಾಯಕವಾದ ಬಟ್ಟೆಗಳನ್ನನು ಧರಿಸಿ ಮತ್ತು ಆರಾಮದಾಯಕ ಹಾಸಿಗೆ ಬಳಸಿ.

English summary

want to grow taller? Know amazing tips to increase your height

In this Article we sharing with you amazing tips to increase your height, have look...
Story first published: Monday, May 13, 2019, 17:20 [IST]
X
Desktop Bottom Promotion