For Quick Alerts
ALLOW NOTIFICATIONS  
For Daily Alerts

ಸಂತಾನಹರಣ ಚಿಕಿತ್ಸೆಯಿಂದ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಹೆಚ್ಚು!

|

ಮಕ್ಕಳು ಬೇಡವೆಂದರೆ ಆಗ ಪುರುಷರು ಕೆಲವೊಮ್ಮೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವರು. ಆದರೆ ಇದು ಕೆಲವೊಂದು ಸಂದರ್ಭದಲ್ಲಿ ವಿಫಲವಾಗುವುದು. ಈಗ ಒಂದು ಹೊಸ ಅಧ್ಯಯನದ ಪ್ರಕಾರ ಸಂತಾನಹರಣ ಚಿಕಿತ್ಸೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಗೆ ಸಂಬಂಧವಿದೆ ಎಂದು ಹೇಳಿದೆ. ಕೋಪನ್ ಹೇಗನ್ ಸ್ಟಟೆನ್ಸ್ ಸೆರಮ್ ಇನ್ಸಿಟ್ಯೂಟ್ ನ ಆಡಳಿತ ನಿರ್ದೇಶಕರಾಗಿರುವಂತಹ ಆಂಡ್ರೆಸ್ ಹಸ್ಬಿ ಅವರು ಹೇಳುವ ಪ್ರಕಾರ, ಪುರುಷರಲ್ಲಿ ಸಂತಾನಹರಣ ಚಿಕಿತ್ಸೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಡುವಿನ ಸಂಬಂಧದ ಅಪಾಯವು ಹೆಚ್ಚಾಗಿದೆ.

ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವಂತಹ ಜನರ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗುತ್ತಿದೆ. ಇದು ಪುರುಷರಲ್ಲಿ ಮಾಡುವಂತಹ ಸಂತಾನಹರಣ ಚಿಕಿತ್ಸೆಯಾಗಿದೆ. ಜನಸಂಖ್ಯೆ ನಿಯಂತ್ರಣವು ದಂಪತಿ ಹಾಗೂ ಆ ಕುಟುಂಬದ ಪ್ರಮುಖ ಆದ್ಯತೆಯಾಗಿರುವ ಕಾರಣದಿಂದಾಗಿ ಇಂದು ಸಂತಾನಹರಣ ಚಿಕಿತ್ಸೆಯು ಹೆಚ್ಚಾಗಿ ನಡೆಯುತ್ತಲಿದೆ. ಈ ಶಸ್ತ್ರಚಿಕಿತ್ಸೆ ವೇಳೆ ಪುರುಷರ ರೇತ್ರನಾಳವನ್ನು ತುಂಡು ಮಾಡಲಾಗುತ್ತದೆ. ಇದರ ಬಳಿಕ ಅದನ್ನು ಸೀಲ್ ಮಾಡಿಬಿಟ್ಟು ಗರ್ಭಕೋಶದೊಳಗೆ ವೀರ್ಯವು ಹೋಗದಂತೆ ಮಾಡಲಾಗುವುದು. ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವ ಬದಲು ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಆಗ ಯಾವುದೇ ಸಮಸ್ಯೆಯಿಲ್ಲದೆ ಸುರಕ್ಷಿತ ಸೆಕ್ಸ್ ನಲ್ಲಿ ತೊಡಗಿಕೊಳ್ಳಬಹುದು.

Vasectomy and Prostate Cancer Risk

ಸಮಾಜದಲ್ಲಿ ಬದಲಾವಣೆ

ಸಮಾಜದಲ್ಲಿ ಇಂದು ಮಹತ್ತರವಾದ ಬದಲಾವಣೆಗಳು ಕಂಡುಬರುತ್ತಿದೆ. ಅದರಲ್ಲಿ ಪ್ರಮುಖವಾಗಿ ಮಹಿಳೆಯರು ಮಾತ್ರ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳುವುದಿಲ್ಲ. ಪುರುಷರು ಕೂಡ ಇದನ್ನು ಇಂದಿನ ದಿನಗಳಲ್ಲಿ ಮಾಡಿಸುತ್ತಿದ್ದಾರೆ. ಮೇ 23, 2019ರ ನ್ಯಾಶನಲ್ ಕ್ಯಾನ್ಸರ್ ಇನ್ಸಿಟ್ಯೂಟ್ ನ ಜರ್ನಲ್ ನಲ್ಲಿ ಪ್ರಕಟಗೊಂಡಿರುವಂತಹ ಸಂಶೋಧನಾ ವರದಿಯ ಪ್ರಕಾರ ಸಂತಾನಹರಣ ಚಿಕಿತ್ಸೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನ ಸಂಬಂಧದ ಅಪಾಯವು ಅತಿಯಾಗಿದೆ. ಸಂತಾನಹರಣದಿಂದಾಗಿ ದೀರ್ಘಕಾಲದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆಯು ಹೆಚ್ಚಾಗಿದೆ. ಸಂತಾನಹರಣ ಚಿಕಿತ್ಸೆ ನಡೆಸಿದ ಹತ್ತು ವರ್ಷದ ಬಳಿಕವೂ ಇದು ಕಾಣಿಸಬಹುದು. ಇದು ಸ್ತನದ ಕ್ಯಾನ್ಸರ್ ಮತ್ತು ಗರ್ಭನಿರೋಧಕ ಮಾತ್ರೆಗಳ ನಡುವಿನ ಸಂಬಂಧದಷ್ಟೇ ಸಾಮಾನ್ಯವಾಗಿದೆ. ಆದರೆ ಇದರ ಬಗ್ಗೆ ಆರೋಗ್ಯ ಮಂತ್ರಾಲಯವು ಯಾವುದೇ ರೀತಿಯ ಅಧಿಕೃತ ಹೇಳಿ ನೀಡಿಲ್ಲ ಮತ್ತು ಡ್ಯಾನಿಶ್ ನ್ಯಾಶನಲ್ ಹೆಲ್ತ್ ರಿಜಿಸ್ಟರ್ ಈ ಅಧ್ಯಯನವನ್ನು ಕೈಗೊಂಡಿದೆ. 1937ರ ಜನವರಿಯಿಂದ 1996ರ ಡಿಸೆಂಬರ್ ತನಕ ಜನಿಸಿರುವಂತಹ ಸುಮಾರು 2,150,162 ಮಂದಿ ಡ್ಯಾನಿಶ್ ಪುರುಷರ ಅಂಕಿಅಂಶಗಳನ್ನು ಇದಕ್ಕಾಗಿ ಪಡೆಯಲಾಯಿತು. ಸಂತಾನಹರಣಕ್ಕೆ ಒಳಗಾಗಿರುವಂತಹ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಬರುವಂತಹ ಸಾಧ್ಯತೆಯ ಅಪಾಯವು ಶೇ.15ರಷ್ಟು ಹೆಚ್ಚಾಗಿದೆ ಎಂದು ಈ ಅಧ್ಯಯನವು ಕಂಡುಕೊಂಡಿದೆ.

Most Read: ಪ್ರೊಸ್ಟೇಟ್ ಕ್ಯಾನ್ಸರ್ ತಡೆಯಲು 8 ಮಾರ್ಗಗಳು

ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್

ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಕಂಡುಬಂದರೆ ಆಗ ಮೂತ್ರ ನಿಯಂತ್ರಿಸಲು ತುಂಬಾ ಕಷ್ಟವಾಗುವುದು. ಪ್ರಾಸ್ಟೇಟ್ ಗ್ರಂಥಿಯು ವೀರ್ಯದಲ್ಲಿ ದ್ರವವನ್ನು ಉತ್ಪತ್ತಿ ಮಾಡುವುದು ಮತ್ತು ಪುರುಷರಲ್ಲಿ ಮೂತ್ರ ನಿಯಂತ್ರಣ ಮಾಡಲು ನೆರವಾಗುವುದು. ಪುರುಷರಲ್ಲಿ ಹೆಚ್ಚಾಗಿ ಕಂಡುಬರುವಂತಹ ಕ್ಯಾನ್ಸರ್ ಇದಾಗಿದೆ ಮತ್ತು ಇದು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಕೆಲವೊಂದು ಸಂದರ್ಭದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಗೆ ಸ್ವಲ್ಪ ಅಥವಾ ಯಾವುದೇ ಚಿಕಿತ್ಸೆ ಬೇಕಿರುವುದಿಲ್ಲ. ಆದರೆ ಕೆಲವೊಂದು ಸಂದರ್ಭದಲ್ಲಿ ಇದು ಅತೀ ವೇಗದಲ್ಲಿ ಹರಡಬಹುದು.
ಪ್ರಾಸ್ಟೇಟ್ ಕ್ಯಾನ್ಸರ್ ನ ಕೆಲವೊಂದು ಲಕ್ಷಣಗಳು ಈ ರೀತಿಯಾಗಿದೆ. ಅದಾಗ್ಯೂ, ಆರಂಭಿಕ ಹಂತದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಯಾವುದೇ ಲಕ್ಷಣವನ್ನು ತೋರಿಸುವುದಿಲ್ಲ.

Most Read: ಪ್ರತಿಯೊಬ್ಬ ಪುರುಷನು ಜನನೇಂದ್ರೀಯ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳಬೇಕೆ?

ಮೂತ್ರ ವಿಸರ್ಜನೆಯಲ್ಲಿ ತೊಂದರೆ

ಮೂತ್ರ ವಿಸರ್ಜನೆ ವೇಗವು ಕುಗ್ಗುವುದು. ವೀರ್ಯದಲ್ಲಿ ರಕ್ತದ ಕಲೆಗಳು ಪತ್ತೆಯಾಗುವುದು ಮೂಳೆಯಲ್ಲಿ ನೋವು ಮತ್ತು ಶ್ರೋಣಿಯ ಭಾಗದಲ್ಲಿ ತುಂಬಾ ದೀರ್ಘಕಾಲ ಅಹಿತಕರ ಅನಿಸುವುದು.

ಪ್ರಾಸ್ಟೇಟ್ ಕ್ಯಾನ್ಸರ್ ಗೆ ಯಾವುದೆ ನಿಗದಿತ ಕಾರಣಗಳು ಎಂದು ಇಲ್ಲ. ಆದರೆ ಪ್ರಾಸ್ಟೇಟ್ ನಲ್ಲಿ ಕೆಲವೊಂದು ಅಂಗಾಂಶಗಳು ಅಸಾಮಾನ್ಯವಾಗುವುದು ಮತ್ತು ಇದು ಪ್ರಾಸ್ಟೇಟ್ ಕ್ಯಾನ್ಸರ್ ನ ಲಕ್ಷಣವಾಗಿದೆ. ಕೋಶಗಳಲ್ಲಿ ಹಠಾತ್ ಬದಲಾವಣೆಗಳಿಂದಾಗಿ ಕೋಶಗಳು ತುಂಬಾ ವೇಗವಾಗಿ ಬೆಳೆಯುವುದು. ಅಸಾಮಾಣ್ಯ ಕೋಶಗಳು ಜೀವಂತವಾಗಿ ಇರುವುದು ಮತ್ತು ಆರೋಗ್ಯಕಾರಿ ಕೋಶಗಳು ಸಾಯುವುದು.
ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯ ಹೆಚ್ಚಿಸುವ ಕೆಲವೊಂದು ಕಾರಣಗಳು

ಬಣ್ಣ ಮತ್ತು ಜನಾಂಗ

ಬಿಳಿಯ ಪುರುಷರು ಪ್ರಾಸ್ಟೇಟ್ ಕ್ಯಾನ್ಸರ್ ಗೆ ತುತ್ತಾಗುವಂತಹ ಸಾಧ್ಯತೆಯು ಹೆಚ್ಚಾಗಿರುವುದು.

ಕೌಟುಂಬಿಕ ಹಿನ್ನೆಲೆ

ಪ್ರಾಸ್ಟೇಟ್ ಕ್ಯಾನ್ಸರ್ ಗೆ ಪ್ರಮುಖ ಕಾರಣವೆಂದರೆ ಆ ವ್ಯಕ್ತಿಯ ಕುಟುಂಬದಲ್ಲಿ ಯಾರಿಗಾದರೂ ಪ್ರಾಸ್ಟೇಟ್ ಕ್ಯಾನ್ಸರ್ ಬಂದಿರುವುದು.

ಬೊಜ್ಜು

ಬೊಜ್ಜು ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಮಧ್ಯೆ ಯಾವುದೇ ಸಂಬಂಧವಿಲ್ಲದೆ ಇದ್ದರೂ ತೂಕ ಹೆಚ್ಚಳದಿಂದಾಗಿ ಕೆಲವೊಂದು ಜೀವನಶೈಲಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದು.

English summary

Vasectomy and Prostate Cancer Risk

It was a comprehensive analysis led by Anders Husby, MD Statens Serum Institut in Copenhagen, stating a slight but significant increase in the risk of prostate cancer with vasectomy. There is a considerable rise in the number of people undergoing a vasectomy. It is a surgical procedure for males for permanent contraception. In a time when population control is slowly and steadily becoming an essential aspect for couples and families alike, more men are going under the knives to ensure a controlled family size. The procedure includes cutting of the male vas deferens, which is then sealed or tied to prevent the sperm from entering the urethra.
X
Desktop Bottom Promotion