For Quick Alerts
ALLOW NOTIFICATIONS  
For Daily Alerts

ಮೈಗ್ರೇನ್ ನಿಂದ ನೈಸರ್ಗಿಕ ಶಮನ ಪಡೆಯಲು ಬಾದಾಮಿ ಸೇವಿಸಿ ಸಾಕು!

|

ಇತ್ತೀಚಿನ ದಿನಗಳಲ್ಲಿ ತಲೆನೋವು ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ತಲೆನೋವು ಆವರಿಸಿರುವ ಅವಧಿ ಮತ್ತು ತೀವ್ರತೆ ಪ್ರತಿ ವ್ಯಕ್ತಿಗೂ ಭಿನ್ನವಾಗಿರಬಹುದು. ತಲೆನೋವು ಎದುರಾಗಲು ಒಂದಕ್ಕೂ ಹೆಚ್ಚು ಕಾರಣಗಳಿವೆ ಹಾಗೂ ಇವುಗಳಿಗೆ ಖಚಿತವಾದ ಪರಿಹಾರವಿಲ್ಲವೆಂದು ಈಗಾಗಲೇ ನಾವು ಅರಿತಿದ್ದೇವೆ. ಆದರೂ, ತಲೆನೋವು ನಿವಾರಕ ಎಂಬ ಹೆಸರಿನಲ್ಲಿ ಹಲವಾರು ಮಾತ್ರೆ-ಔಷಧಿಗಳು ಮುಕ್ತವಾಗಿ ಔಷಧಿ ಅಂಗಡಿಗಳಲ್ಲಿ ಸಿಗುತ್ತದೆ ಹಾಗೂ ಕೆಲವಾರು ಮನೆಮದ್ದ್ಗುಗಳೂ ಇವೆ.

ಆದರೆ ಕೆಲವರಿಗೆ ಎದುರಾಗುವ ತಲೆನೋವು ಉಗ್ರ ರೂಪದಲ್ಲಿದ್ದು ಈ ಸುಲಭ ಔಷಧಿ-ಮನೆಮದ್ದುಗಳಿಗೆ ಬಗ್ಗುವುದೇ ಇಲ್ಲ. ಒಂದು ವೇಳೆ ನಿಮಗೆ ತಲೆನೋವಿನ ಅತ್ಯುಗ್ರರೂಪವಾದ ಮೈಗ್ರೇನ್ ತಲೆನೋವು ಆವರಿಸುತ್ತಿದ್ದರೆ ಇದಕ್ಕೆ ಉತ್ತಮ ಪರಿಹಾರವೆಂದರೆ ಬಾದಾಮಿಯ ಸೇವನೆ. ಬಾದಾಮಿಗಳು ಅತ್ಯುತ್ತಮ ಒಣಫಲಗಳಾಗಿದ್ದು ಇವುಗಳಲ್ಲಿ ವಿವಿಧ ಪೋಷಕಾಂಶಗಳು, ಆರೋಗ್ಯಕರ ಕೊಬ್ಬು, ಆಂಟಿ ಆಕ್ಸಿಡೆಂಟುಗಳು ಹಾಗೂ ಅವಶ್ಯಕ ಖನಿಜಗಳು ಉತ್ತಮ ಪ್ರಮಾಣದಲ್ಲಿವೆ. ಬನ್ನಿ, ತಲೆನೋವನ್ನು ಗುಣಪಡಿಸಲು ಬಾದಾಮಿ ಹೇಗೆ ನೆರವಾಗುತ್ತದೆ ಎಂಬುದನ್ನು ನೋಡೋಣ...

ಆದರೆ, ಬಾದಾಮಿಯೇ ಏಕೆ?

ಆದರೆ, ಬಾದಾಮಿಯೇ ಏಕೆ?

ಬಾದಾಮಿ ತನ್ನ ಉರಿಯೂತ ನಿವಾರಕ ಗುಣದಿಂದಾಗಿಯೇ ಅತ್ಯುತ್ತಮ ಒಣಫಲ ಎಂಬ ಪ್ರಖ್ಯಾತಿ ಪಡೆದಿದೆ ಹಾಗೂ ಈ ಗುಣವನ್ನು ನೋವು ನಿವಾರಕಗಳಾದ ಆಸ್ಪಿರಿನ್, ಮೆಗ್ನೇಶಿಯಂ ಹಾಗೂ ಸಾಲಿಸಿನ್ ಎಂಬ ವಿಟಮಿನ್ ಇ ಯುಕ್ತ ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಬಾದಾಮಿಗಳನ್ನು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ತಲೆನೋವು ಬರದಂತೆ ತಡೆಗಟ್ಟಬಹುದು. ಅಲ್ಲದೇ ದೇಹದಲ್ಲಿ ಮೆಗ್ನೀಶಿಯಂ ಕೊರತೆ ಇರುವ ವ್ಯಕ್ತಿಗಳಲ್ಲಿ ಮೈಗ್ರೇನ್ ಇರುವ ಸಾಧ್ಯತೆ ಇತರರಿಗಿಂತ ಹೆಚ್ಚು ಇರುವುದನ್ನು ಗಮನಿಸಲಾಗಿದೆ.

ಆದರೆ, ಬಾದಾಮಿಯೇ ಏಕೆ?

ಆದರೆ, ಬಾದಾಮಿಯೇ ಏಕೆ?

ಇದೇ ಕಾರಣಕ್ಕೆ ಮೈಗ್ರೇನ್ ನಿಂದ ಬಳಲುವ ವ್ಯಕ್ತಿಗಳು ಬಾದಾಮಿಯನ್ನು ಸೇವಿಸಿದರೆ ಇವರಲ್ಲಿ ಮೈಗ್ರೇನ್ ಕಡಿಮೆ ಯಾಗುವ ಜೊತೆಗೇ ಮುಂದಿನ ದಿನಗಳಲ್ಲಿ ಮತ್ತೆ ಈ ಬಗೆಯ ತಲೆನೋವು ಆವರಿಸುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಮೇರಿಲ್ಯಾಂಡ್ ನಲ್ಲಿರುವ University Of Maryland Medical Center ಎಂಬ ಸಂಶೋಧನಾಲಯದಲ್ಲಿ ನಡೆಸಿದ ಅಧ್ಯಯನದಲ್ಲಿ ಮೈಗ್ರೇನ್ ಆವರಿಸುವುದನ್ನು ತಡೆಗಟ್ಟುವಲ್ಲಿ ಮೆಗ್ನೇಶಿಯಂನ ಪರಿಣಾಮ ಕಾರಿತ್ವವನ್ನು ಪರಿಶೀಲಿಸಲಾಗಿತ್ತು. ಈ ಅಧ್ಯಯನದ ವರದಿಯ ಪ್ರಕಾರ ಮೆಗ್ನೀಶಿಯಂ ಪೋಷಕಾಂಶವನ್ನು ನಿಯಮಿತ ವಾಗಿ ಸೇವಿಸಲು ಸಲಹೆ ಮಾಡಿದ್ದ ರೋಗಿಗಳಲ್ಲಿ 41.6% ರಷ್ಟು ಮೈಗ್ರೇನ್ ತಲೆನೋವು ಆವರಿಸುವ ಪ್ರಮಾಣ ಕಡಿಮೆಯಾಗಿದ್ದುದು ಕಂಡು ಬಂದಿತ್ತು.

Most Read:ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ಅಧ್ಯಯನದ ಪ್ರಕಾರ

ಅಧ್ಯಯನದ ಪ್ರಕಾರ

ಈ ಖನಿಜ ಸ್ನಾಯುಗಳನ್ನು ನಿರಾಳಗೊಳಿಸಲು ಹಾಗೂ ನರಗಳು ಉತ್ತೇಜನಕ್ಕೊಳಗಾಗುವುದನ್ನು ತಗ್ಗಿಸುವ ಕ್ಷಮತೆ ಹೊಂದಿದ್ದು ಈ ಗುಣವೇ ತಲೆನೋವು ಕಡಿಮೆ ಮಾಡಲು ನೆರವಾಗುತ್ತದೆ. ಸಾಮಾನ್ಯವಾಗಿ ಮಾನಸಿಕ ಒತ್ತಡ ಅಥವಾ ಉದ್ವೇಗದಿಂದ ಎದುರಾಗುವ ತಲೆನೋವುಗಳು ಮೆಗ್ನೀಶಿಯಂ ಸೇವನೆಯಿಂದ ಕಡಿಮೆಯಾಗುತ್ತವೆ. ಇದರ ಜೊತೆಗೇ, ಬಾದಾಮಿಯಲ್ಲಿರುವ ವಿಟಮಿನ್ನುಗಳು ಸಹಾ ಪ್ರಮುಖ ಪಾತ್ರ ವಹಿಸುತ್ತವೆ. ಬಾದಾಮಿಯಲ್ಲಿ ವಿಟಮಿನ್ ಬಿ2 ಅಧಿಕ ಪ್ರಮಾಣದಲ್ಲಿದೆ ಹಾಗೂ ಒಂದು ಅಧ್ಯಯನದ ಪ್ರಕಾರ ತಲೆನೋವು ಇರುವ ವ್ಯಕ್ತಿ ನಾನೂರು ಮಿಲಿಗ್ರಾಂನಷ್ಟು ವಿಟಮಿನ್ ಬಿ2 ಸೇವಿಸಿದರೆ ಮೈಗ್ರೇನ್ ಮರುಕಳಿಸುವ ಸಾಧ್ಯತೆ ಅರ್ಧದಷ್ಟು ತಗ್ಗುತ್ತದೆ.

ಅಧ್ಯಯನದ ಪ್ರಕಾರ

ಅಧ್ಯಯನದ ಪ್ರಕಾರ

ಬಾದಾಮಿಯನ್ನು ತಲೆನೋವು ನಿವಾರಕವಾಗಿ ಸೇವಿಸುವ ಬಗ್ಗೆ ಚರ್ಚೆ ಇಂದಿಗೂ ಮುಂದುವರೆದಿದೆ ಹಾಗೂ ಬಾದಾಮಿಯ ಕೆಲವು ಗುಣಗಳು ಮೈಗ್ರೇನ್ ಅನ್ನು ಪ್ರಚೋದಿಸುತ್ತವೆ ಎಂದೂ ವಾದಿಸುವವರಿದ್ದಾರೆ. ಆದರೆ ಬಾದಾಮಿಯಲ್ಲಿರುವ ಮೆಗ್ನೀಶಿಯಂ ಮತ್ತು ವಿಟಮಿನ್ ಬಿ2 ಖಂಡಿತವಾಗಿಯೂ ಮೈಗ್ರೇನ್ ಆವರಿಸುವುದನ್ನು ತಡೆಗಟ್ಟುತ್ತದೆ ಹಾಗೂ ಸಮಯಾನುಸಾರ ಈ ಮಾಹಿತಿಯನ್ನು ಖಚಿತಪಡಿಸಲಾಗುತ್ತಾ ಬರಲಾಗಿದೆ. ಹಾಗಾಗಿ ಮೈಗ್ರೇನ್ ನಿಂದ ಬಳಲುವ ವ್ಯಕ್ತಿಗಳು ಬಾದಾಮಿಯನ್ನು ನಿಯಮಿತವಾಗಿ ಸೇವಿಸುತ್ತಾ ತಮ್ಮ ತಲೆನೋವಿನ ವಿವರಗಳನ್ನು ಕಲೆಹಾಕುವ ಮೂಲಕ ಪ್ರಮುಖ ಮಾಹಿತಿಯನ್ನು ಒದಗಿಸಿ ದಂತಾಗುತ್ತದೆ. ಅಲ್ಲದೇ ಒಂದು ವೇಳೆ ಬಾದಾಮಿಯ ಸೇವನೆಯ ಬಳಿಕ ತಲೆನೋವು ಹೆಚ್ಚಾದರೆ ತಕ್ಷಣವೇ ವೈದ್ಯರ ಬಳಿ ಸಲಹೆ ಪಡೆಯಬೇಕು.

Most Read:ಮೈಗ್ರೇನ್ ತಲೆನೋವಿಗೆ ಅಡುಗೆ ಮನೆಯಲ್ಲಿಯೇ ಇದೆ ಔಷಧಿ!

ಬಾದಾಮಿ ಸೇವನೆಯ ಇತರ ಪ್ರಯೋಜನಗಳು

ಬಾದಾಮಿ ಸೇವನೆಯ ಇತರ ಪ್ರಯೋಜನಗಳು

*ಬಾದಾಮಿಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ದವಾಗಿವೆ

*ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ

*ಬಾದಾಮಿಯ ಸೇವನೆಯಿಂದ ಹಸಿವು ಕಡಿಮೆಯಾಗುತ್ತದೆ ಹಾಗೂ ತನ್ಮೂಲಕ ಅನಗತ್ಯ ಆಹಾರ ಸೇವನೆಯಿಂದ ಹೆಚ್ಚುವರಿ ಕ್ಯಾಲೋರಿಗಳನ್ನು ಪಡೆಯುವುದನ್ನು ತಡೆದಂತಾಗುತ್ತದೆ

*ಇವುಗಳಲ್ಲಿ ವಿಟಮಿನ್ ಇ ಸಮೃದ್ಧವಾಗಿವೆ.

*ಬಾದಾಮಿಗಳಲ್ಲಿರುವ ಮೆಗ್ನೀಶಿಯಂ ಅಧಿಕ ರಕ್ತದೊತ್ತಡವನ್ನು ತಡೆಯಲೂ ನೆರವಾಗುತ್ತವೆ.

*ಕೊಲೆಸ್ಟ್ರಾಲ್ ಮಟ್ಟಗಳನ್ನೂ ಕಡಿಮೆ ಮಾಡಬಲ್ಲುದು

*ಉತ್ತಮ ಪರಿಣಾಮ ಪಡೆಯಲು ದಿನಕ್ಕೆ ಸುಮಾರು ಹತ್ತರಿಂದ ಹನ್ನೆರಡು ಬಾದಾಮಿಗಳನ್ನಾದರೂ ಸತತವಾಗಿ ಸೇವಿಸ ಬೇಕಾಗುತ್ತದೆ. ಬಾದಾಮಿಯನ್ನುಹಾಗೇ ಸೇವಿಸಬಹುದು ಅಥವಾ ರಾತ್ರಿ ನೆನೆಸಿಟ್ಟು ಮರುದಿನ ಬೆಳಿಗ್ಗೆಯೂ ಸೇವಿಸಬಹುದು.

English summary

Use almonds to prevent migraine naturally

Headaches are so common these days that we get them very often. However the frequency and intensity of headaches may vary from person to person. You may already know that there is no single cause or cure for headaches. Plenty of over-the-counter medications and home remedies are available, but some people still do not find relief from their pounding heads. Well, if you also have not found any solution try almonds for headaches.
Story first published: Wednesday, March 6, 2019, 16:20 [IST]
X
Desktop Bottom Promotion