For Quick Alerts
ALLOW NOTIFICATIONS  
For Daily Alerts

ಉಪ್ಪು ಹಾಕದೆ ಟೊಮೆಟೋ ಜ್ಯೂಸ್ ಕುಡಿದರೆ ರಕ್ತದೊತ್ತಡ -ಕೊಲೆಸ್ಟ್ರಾಲ್ ನಿಯಂತ್ರಿಸಬಹುದಂತೆ!

|

ಇಂದಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಹಾಗೂ ಅತೀ ಕೊಲೆಸ್ಟ್ರಾಲ್ ಎನ್ನುವುದು ಸಾಮಾನ್ಯವಾಗಿದೆ. ಇಂದು ನಾವು ಪಾಲಿಸಿಕೊಂಡು ಹೋಗುತ್ತಿರುವಂತಹ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಸೇವನೆಯಿಂದಾಗಿ ಇಂತಹ ಪರಿಸ್ಥಿತಿಗೆ ಕಾರಣವಾಗುವುದು. ಔಷಧಿ ತೆಗೆದುಕೊಂಡರೂ ಈ ಪರಿಸ್ಥಿತಿ ನಿವಾರಣೆ ಮಾಡುವುದು ಅಷ್ಟು ಸುಲಭವಾಗಿರದು. ನೈಸರ್ಗಿಕ ಮನೆಮದ್ದುಗಳು ಮತ್ತು ಆರೊಗ್ಯಕರ ಜೀವನಶೈಲಿಯಿಂದಾಗಿ ಇಂತಹ ಪರಿಸ್ಥಿತಿಯನ್ನು ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ನಿವಾರಣೆ ಮಾಡಬಹುದು. ಇತ್ತೀಚೆಗೆ ಅಧ್ಯಯನಗಳು ಕಂಡುಕೊಂಡಿರುವಂತಹ ವಿಚಾರವೆಂದರೆ ಉಪ್ಪು ಹಾಕದೆ ಕುಡಿಯುವಂತಹ ಟೊಮೆಟೋ ಜ್ಯೂಸ್ ನಿಂದಾಗಿ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಬಹುದು. ಟೊಮೆಟೋ ಜ್ಯೂಸ್ ಹೃದಯದ ಕಾಯಿಲೆ ಸಮಸ್ಯೆ ಅಪಾಯ ಇರುವಂತಹ ವಯಸ್ಸಾದ ಜನರಿಗೆ ತುಂಬಾ ಒಳ್ಳೆಯದು.

ಜರ್ನಲ್ ಆಫ್ ಫುಟ್ ಸೈನ್ಸ್ ಆಂಡ್ ನ್ಯೂಟ್ರಿಷನ್ ನಲ್ಲಿ ಈ ಅಧ್ಯಯನ ವರದಿಯು ಪ್ರಕಟಗೊಂಡಿದೆ. ಜಪಾನ್ ನ ಟೊಕಿಯೋ ಮೆಡಿಕಲ್ ಆಂಡ್ ಡೆಂಟಲ್ ಯೂನಿವರ್ಸಿಟಿ ಈ ಅಧ್ಯಯನಕ್ಕೆ ತಮ್ಮ ದೇಣಿಗೆ ನೀಡಿದೆ. ಈ ಅಧ್ಯಯನಕ್ಕಾಗಿ ಸುಮಾರು 500 ಮಂದಿಯನ್ನು ಪರೀಕ್ಷೆಗೊಳಪಡಿಸಲಾಯಿತು. ಇದರಲ್ಲಿ 184 ಮಂದಿ ಪುರುಷರು ಮತ್ತು 297 ಮಂದಿ ಮಹಿಳೆಯರಿದ್ದರು.

tomato

ಅಧ್ಯಯನದ ವೇಳೆ ಕಂಡುಕೊಂಡಿರುವ ವಿಚಾರವೆಂದರೆ ಚಿಕಿತ್ಸೆ ನೀಡದೆ ಇದ್ದ ಅಧಿಕ ರಕ್ತದೊತ್ತವನ್ನು ಹೊಂದಿದ್ದ 94 ಜನರಲ್ಲಿ ಟೊಮೆಟೋ ಜ್ಯೂಸ್ ನಿಂದ ಗಣನೀಯ ಮಟ್ಟದಲ್ಲಿ ತಗ್ಗಿಸಲಾಗಿದೆ. ಸಿಸ್ಟೊಲಿಕ್ ರಕ್ತದೊತ್ತಡದ ಮಟ್ಟವು 141.2ನಿಂದ 137 ಎಂಎಂಎಚ್ ಜಿಗೆ ಇಳಿದಿದೆ. ಅದೇ ರೀತಿಯಾಗಿ ಡಿಯಾಸ್ಟೊಲಿಕ್ ರಕ್ತದೊತ್ತಡದ ಪ್ರಮಾಣವು ಸರಾಸರಿ 83.3ರಿಂದ 80.9 ಎಂಎಂಎಚ್ ಜಿಗೆ ತಗ್ಗಿದೆ.
ಇದೇ ವೇಳೆ ಸುಮಾರು 125 ಮಂದಿ ಜನರು ತಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸರಾಸರಿ 155ರಿಂದ 149.0 ಎಂಜಿ/ಡಿಎಲ್ ಗೆ ಕಡಿಮೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಈ ಎರಡು ಪರಿಸ್ಥಿತಿಗೆ ಟೊಮೆಟೋ ತುಂಬಾ ಸಹಕಾರಿ ಎಂದು ಪರಿಗಣಿಸಲಾಗಿದೆ. ಎಲ್ಲಾ ವಯೋಮಾನದ ಪುರುಷರು ಹಾಗೂ ಮಹಿಳೆಯರಲ್ಲಿ ಒಂದೇ ರೀತಿಯ ಫಲಿತಾಂಶವು ಇದರಿಂದ ಕಂಡುಬಂದಿದೆ ಎಂದು ಅಧ್ಯಯನಗಳು ತಿಳಿಸಿವೆ.

Most Read: ದಿನಾ ಒಂದೊಂದು ಗ್ಲಾಸ್ 'ಟೊಮೆಟೊ ಜ್ಯೂಸ್' ಕುಡಿದರೆ ಆರೋಗ್ಯವಾಗಿರುವಿರಿ

ರಕ್ತದೊತ್ತಡ ನಿವಾರಣೆಗೆ ಇತರ ಕೆಲವು ವಿಧಾನಗಳು

*ದಿನವಿಡಿ ಆದಷ್ಟು ದೈಹಿಕ ಚಟುವಟಿಕೆ ನಡೆಸಿ
*ತೂಕ ಅಧಿಕವಾಗಿದ್ದರೆ ತೂಕ ಇಳಿಸಿಕೊಳ್ಳಿ.
*ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿ
*ಉಪ್ಪು ಸೇವನೆ ಕಡಿಮೆ ಮಾಡಿ
*ಕೆಫಿನ್ ಕಡಿಮೆ ಮಾಡಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸಿ.
*ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ.

Most Read: ಟೊಮೆಟೊ ಹಣ್ಣಿನ ಉಪಯೋಗ ತಿಳಿದರೆ ಈಗಲೇ ತಿನೋಕ್ಕೆ ಶುರು ಮಾಡ್ತೀರ!

ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ವಿಧಾನಗಳು

*ಆಹಾರ ಕ್ರಮಕ್ಕೆ ಹೆಚ್ಚು ನಾರಿನಾಂಶ ಸೇರಿಸಿ
*ಧೂಮಪಾನ ಮತ್ತು ಮದ್ಯಪಾನವನ್ನು ಆದಷ್ಟು ಮಟ್ಟಿಗೆ ಕಡೆಗಣಿಸಿ
*ಗ್ರೀನ್ ಟೀ, ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.
*ಚಟುವಟಿಕೆಯಿಂದ ಇರಿ ಮತ್ತು ಕೊಲೆಸ್ಟ್ರಾಲ್ ಬಗ್ಗೆ ಗಮನಹರಿಸಿ.

English summary

unsalted-tomato-juice-can-help-you-lower-your-blood-pre

Hypertension and high cholesterol levels are a common problem these days. The lifestyle followed today and consumption of unhealthy diet, both contribute to these conditions. Consumption of medicines will no help you treat the condition effectively. Natural remedies and healthy practices are the best way to deal with this condition without any side effects. According to a recent study, drinking unsalted tomato juice can help you lower your blood pressure and cholesterol levels. Tomato juice is beneficial for those adults who are at a higher risk of cardiovascular diseases.
X
Desktop Bottom Promotion