For Quick Alerts
ALLOW NOTIFICATIONS  
For Daily Alerts

ನಿಮಗೆ ಗೊತ್ತೇ? ಮೂಳೆಯ ಆರೋಗ್ಯಕ್ಕೂ ಅರಿಶಿನ ಬಹಳ ಒಳ್ಳೆಯದು

|

ಅರಿಶಿನವನ್ನು ಭಾರತೀಯರು ಹಿಂದಿನಲ್ಲೂ ತಮ್ಮ ಆಹಾರ ಕ್ರಮದಲ್ಲಿ ಬಳಸಿಕೊಂಡು ಬರುತ್ತಿದ್ದಾರೆ. ಇಷ್ಟು ಮಾತ್ರದಲ್ಲಿ ಔಷಧಿಯಾಗಿಯೂ ಅರಶಿನವು ತುಂಬಾ ಜನಪ್ರಿಯತೆ ಪಡೆದುಕೊಂಡಿದೆ. ಆಯುರ್ವೇದದಲ್ಲಿ ಶತಮಾನಗಳಿಂದಲೂ ಅರಶಿನವನ್ನು ಔಷಧಿಯಾಗಿ ಬಳಸಿಕೊಂಡು ಬರಲಾಗುತ್ತಿದೆ. ಅರಿಶಿನದ ಬಗ್ಗೆ ನಡೆಸಿರುವಂತಹ ಹಲವಾರು ರೀತಿಯ ಅಧ್ಯಯನಗಳಿಂದ ಇದು ಮೂಳೆಗಳಿಗೆ ತುಂಬಾ ಉಪಯೋಗಕಾರಿ ಎಂದು ಸಾಬೀತು ಆಗಿದೆ.

Turmeric

ಅರಿಶಿನದಲ್ಲಿ ಇರುವಂತಹ ಕರ್ಕ್ಯುಮಿನ್ ಬಳಸಿಕೊಂಡು ವೈದ್ಯಕೀಯ ಲೋಕವು ಒಂದು ಔಷಧಿಯನ್ನು ಕಂಡುಹಿಡಿದಿದೆ. ಇದು ಪ್ರಮುಖವಾಗಿ ಮೂಳೆಯ ಕ್ಯಾನ್ಸರ್ ಬೆಳೆವಣಿಗೆ ಆಗುವುದನ್ನು ತಡೆಯವುದು ಮತ್ತು ಮೂಳೆಯ ಅಂಗಾಂಶಗಳು ಆರೋಗ್ಯಕಾರಿಯಾಗಿ ಬೆಳೆಯಲು ನೆರವು ನೀಡುವುದು. ಮಕ್ಕಳಲ್ಲಿ ಸಾವಿಗೆ ಕಾರಣವಾಗುವಂತಹ ಎರಡನೇ ಅತೀ ದೊಡ್ಡ ಕಾಯಿಲೆಯಾಗಿರುವಂತಹ ಆಸ್ಟಿಯೊಸಾರ್ಕೊಮಾದಿಂದ ಬಳುತ್ತಿರುವ ಜನರಿಗೆ ಚಿಕಿತ್ಸೆ ಬಳಿಕ ಅರಶಿನವು ತುಂಬಾ ಸಹಕಾರಿಯಾಗಲಿದೆ ಎಂದು ಜರ್ನಲ್ ಆಫ್ ಅಪ್ಲೈಡ್ ಮೆಟಿರಿಯಲ್ಸ್ ಮತ್ತು ಇಂಟರ್ ಫೇಸ್ ಹೇಳಿದೆ.

Turmeric

ತುಂಬಾ ಸಣ್ಣ ವಯಸ್ಸಿನಲ್ಲಿ ಮೂಳೆಯ ಕ್ಯಾನ್ಸರ್ ಗೆ ತುತ್ತಾಗುವಂತಹ ಜನರಿಗೆ ಚಿಕಿತ್ಸೆ ವೇಳೆ ಮತ್ತು ಶಸ್ತ್ರಚಿಕಿತ್ಸೆ ಬಳಿಕ ಕಿಮೋಥೆರಪಿಯ ಹೆಚ್ಚಿನ ಡೋಸ್ ನೀಡಲಾಗುತ್ತದೆ. ಆದರೆ ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇವೆ. ಹೀಗಾಗಿ ಮರಳಿ ಕ್ಯಾನ್ಸರ್ ಕೋಶಗಳು ಬೆಳೆಯದೆ ಇರುವಂತೆ ತಡೆಯಲು ಶಸ್ತ್ರಚಿಕಿತ್ಸೆ ಬಳಿಕ ರೋಗಿಗಳಿಗೆ ತುಂಬಾ ಉತ್ತಮವಾಗಿರುವಂತಹ ಔಷಧಿಯನ್ನು ಅಧ್ಯಯನಗಳು ಕಂಡುಕೊಂಡಿವೆ.

Turmeric

ಅರಿಶಿನದಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ವಿವಿಧ ರೀತಿಯ ಕಾಯಿಲೆಗಳ ನಿವಾರಣೆ ಮಾಡಲು ತುಂಬಾ ಲಾಭಕಾರಿ ಆಗಿರಲಿದೆ. ಅರಿಶಿನದಲ್ಲಿ ಉನ್ನತ ಮಟ್ಟದ ಆಂಟಿ ಆಕ್ಸಿಡೆಂಟ್, ಉರಿಯೂತ ಶಮನಕಾರಿ ಮತ್ತು ಮೂಳೆ ಬೆಳೆಸುವಂತಹ ಅಂಶಗಳು ಇವೆ. ಅರಶಿನವನ್ನು ಕೆಲವು ಕ್ಯಾನ್ಸರ್ ಬೆಳವಣಿಗೆ ಆಗುವುದನ್ನು ತಡೆಯಲು ಬಳಸಬಹುದು. ಈ ನೈಸರ್ಗಿಕ ಅಂಶದಿಂದ ಸಿಗುವಂತಹ ಲಾಭಗಳ ಬಗ್ಗೆ ಜನರಿಗೆ ತಿಳಿಯಬೇಕು ಎಂದು ನಾನು ಬಯಸಿದ್ದೇನೆ. ಈ ಗಿಡಮೂಲಿಕೆಯಿಂದ ಪಡೆದಿರುವಂತಹ ನೈಸರ್ಗಿಕ ಜೀವಾಣುಗಳು ತುಂಬಾ ಅಗ್ಗ ಮತ್ತು ಬೇರೆ ರೀತಿಯ ಔಷಧಿಗಳಿಗಿಂತ ಇದು ತುಂಬಾ ಪರಿಣಾಮಕಾರಿ ಎಂದು ವೈದ್ಯರಾಗಿರುವ ಬೋಸ್ ಹೇಳುತ್ತಾರೆ. ಅದಾಗ್ಯೂ, ಇದನ್ನು ಬಾಯಿ ಮೂಲಕ ಔಷಧಿಯಾಗಿ ಸೇವನೆ ಮಾಡಿದರೆ ಆಗ ದೇಹವು ಇದನ್ನು ಹೀರಿಕೊಳ್ಳಲು ವಿಫಲವಾಗುತ್ತದೆ. ಇದು ಚಯಾಪಚಯಗೊಳ್ಳುವುದು ಮತ್ತು ಬೇಗನೆ ಹೊರಹೋಗುವುದು ಎಂದು ತಿಳಿದುಕೊಳ್ಳಲಾಗಿದೆ.

Turmeric

ಅಧ್ಯಯನಕ್ಕಾಗಿ ಕ್ಯಾಲ್ಸಿಯಂ ಪೋಸ್ಪೇಟ್ ನಿಂದ ಸ್ಕಾಫೋಲ್ಡ್ ನಿರ್ಮಾಣ ಮಾಡಲಾಯಿತು. ಸಿರಾಮಿಕ್ ಸ್ಕಾಫೋಲ್ಡ್ ಗಳು ಸಂಪೂರ್ಣವಾಗಿ ನೈಜ ಮೂಳೆಯಂತೆ ಪ್ರತಿಕ್ರಿಯಿಸುವಂತೆ ಮಾಡಲಾಯಿತು. ಇದರ ಬಳಿಕ ಅಧ್ಯಯನವು ಕರ್ಕ್ಯುಮಿನ್ ನ್ನು ಚಿಕಿತ್ಸೆಗಾಗಿ ಬಳಸಿಕೊಂಡಿತು. ಅಧ್ಯಯನಗಳು ಕಂಡುಕೊಂಡಿರುವ ವಿಚಾರವೆಂದರೆ ಆಸ್ಟಿಯೊಸಾರ್ಕೊಮಾವನ್ನು ಕೇವಲ 11 ದಿನಗಳಲ್ಲಿ ಶೇ.96ರಷ್ಟು ಬೆಳವಣಿಗೆ ಆಗದಂತೆ ತಡೆದಿದೆ ಎಂದು ಹೇಳಲಾಗಿದೆ. ಇಷ್ಟು ಮಾತ್ರವಲ್ಲದೆ ಇದು ಆರೋಗ್ಯಕಾರಿ ಮೂಳೆಗಳ ಬೆಳವಣಿಗೆಗೂ ಸಹಕಾರಿ ಆಗಿದೆ. ಈ ಸಂಶೋಧನೆಯು ಒಂದು ಹೊಸ ಯುಗವನ್ನು ಆರಂಭಿಸಿದೆ. ಯಾಕೆಂದರೆ ಆಧುನಿಕ 3ಡಿ ಪ್ರಿಟಿಂಗ್ ತಂತ್ರಜ್ಞಾನವು ತುಂಬಾ ಸುರಕ್ಷಿತ ಹಾಗೂ ಪರಿಣಾಮಕಾರಿ ವಿಧಾನವೆಂದು ಪರಿಗಣಿಸಲಾಗಿದೆ. ಇದು ಮೂಳೆಗಳ ಬೆಳವಣಿಗೆಗೂ ಸಹಕಾರಿ ಆಗಿದೆ ಎಂದು ಬೋಸ್ ತಿಳಿಸಿದ್ದಾರೆ.

English summary

Turmeric consumption may promote bone health

Turmeric the golden spice is well known for its medicinal properties. It is widely used for medicinal purposes since ages. A recent study explored more health benefits of turmeric. The study evaluated the benefits of turmeric for bones.The research developed a new drug delivery system with the help of an element called curcumin which is present in turmeric. It mainly prevents the spread of bone cancer cells and promotes the growth of healthy bone cells.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more