For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಅರಿಶಿನವು ಕಣ್ಣಿನ ಆರೋಗ್ಯವನ್ನು ಸುಧಾರಣೆ ಮಾಡುವುದು

|

ಭಾರತೀಯರು ಆಯುರ್ವೇದ ಮೂಲಕ ಚಿಕಿತ್ಸೆ ನೀಡುವ ವೇಳೆ ಹಲವಾರು ಗಿಡಮೂಲಿಕೆಗಳು, ಅದೇ ರೀತಿಯಾಗಿ ಸಾಂಬಾರ ಪದಾರ್ಥಗಳನ್ನು ಬಳಸಿಕೊಳ್ಳುವರು. ಭಾರತೀಯ ಅಡುಗೆಯಲ್ಲಿ ಹೆಚ್ಚಾಗಿ ಕಂಡುಬರುವಂತಹ ಅರಶಿನವು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ ಎಂದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರವಾಗಿದೆ. ಹೀಗಾಗಿ ಅರಶಿನ ಪ್ರತಿಯೊಂದು ಖಾದ್ಯದಲ್ಲೂ ಕಂಡುಬರುವುದು. ಅರಶಿನವು ತನ್ನಲ್ಲಿ ಇರುವಂತಹ ಔಷಧೀಯ ಗುಣಗಳಿಂದಾಗಿ ತುಂಬಾ ಜನಪ್ರಿಯವಾಗಿದೆ. ಇದನ್ನು ಹಿಂದಿನಿಂದಲೂ ಚಿಕಿತ್ಸೆಗಾಗಿ ಬಳಸಿಕೊಂಡು ಬರಲಾಗುತ್ತಾ ಇದೆ. ನೋವು, ಉರಿಯೂತ ಇತ್ಯಾದಿ ಸಮಸ್ಯೆಗಳನ್ನು ನಿವಾರಣೆ ಮಾಡಲು ಅರಶಿನವು ತುಂಬಾ ಲಾಭಕಾರಿ.

turmeric

ಅಧ್ಯಯನಗಳ ಪ್ರಕಾರ ಅರಿಶಿನವು ಕಣ್ಣಿನ ಆರೋಗ್ಯವನ್ನು ಸುಧಾರಣೆ ಮಾಡುವುದು ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಇದಕ್ಕೂ ಮೊದಲಿನ ಹಲವಾರು ಅಧ್ಯಯನಗಳು ಕೂಡ ಕಣ್ಣಿನ ಅಕ್ಷಿಪಟಲ ಮತ್ತು ಗ್ಲೂಕೋಮಾಗೆ ಅರಿಶಿನದ ಲಾಭಗಳ ಬಗ್ಗೆ ತಿಳಿಸಿದೆ. ಅರಶಿನದಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ಕಣ್ಣಿನ ಆರೋಗ್ಯ ಕಾಪಾಡುವುದು. ಇತ್ತೀಚೆಗೆ ಅರಶಿನವನ್ನು ಕಣ್ಣಿನ ಕ್ರೀಮ್ ಗಳಲ್ಲಿ ಕೂಡ ಬಳಸಲಾಗುತ್ತಿದೆ.

ಕಣ್ಣಿನ ತಜ್ಞರ ಪ್ರಕಾರ ಅರಶಿನ ಬಳಸಿರುವಂತಹ ಕ್ರೀಮ್ ಗಳು ದೊಡ್ಡ ಮಟ್ಟದ ಫಲಿತಾಂಶವನ್ನು ನೀಡಿದೆ. ಈ ಕ್ರೀಂ ನಿಂದ ಕಪ್ಪು ವೃತ್ತಗಳ ನಿವಾರಣೆ, ಒಣಚರ್ಮ ನಿವಾರಣೆ, ಬಿಗಿತ್ವ ಮತ್ತು ಸ್ಥಿತಿಸ್ಥಾಪಕತ್ವ ನಿವಾರಣೆ ಮಾಡಬಹುದು. ಇಂದಿನ ದಿನಗಳಲ್ಲಿ ಹೆಚ್ಚಿನ ಸೌಂದರ್ಯ ವರ್ಧಕ ಉತ್ಪನ್ನಗಳಲ್ಲಿ ಅರಶಿನವನ್ನು ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ವಿವಿಧ ರೀತಿಯ ಚರ್ಮದ ಸಮಸ್ಯೆ ನಿವಾರಣೆ ಮಾಡಲು ನೆರವಾಗುವುದು.ಅರಿಶಿನದ ಕೆಲವು ಇತರ ಆರೋಗ್ಯ ಲಾಭಗಳು

ಅರಿಶಿನದ ಕೆಲವು ಆರೋಗ್ಯ ಲಾಭಗಳು ಈ ರೀತಿಯಲ್ಲಿ ಇದೆ
ಇದು ಕೊಲೆಸ್ಟ್ರಾಲ್ ತಗ್ಗಿಸುವುದು
ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುವ ಕಾರಣದಿಂದಾಗಿ ಹಲವಾರು ರೀತಿಯ ಆರೋಗ್ಯದ ಅಪಾಯಗಳು ಮತ್ತು ಹೃದಯದ ಕಾಯಿಲೆಯಂತಹ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅರಶಿನವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದು. ಇದು ತುಂಬಾ ನೈಸರ್ಗಿಕ ಮತ್ತು ಸುರಕ್ಷಿತ ವಿಧಾನವಾಗಿದೆ. ಇದು ಕೊಲೆಸ್ಟ್ರಾಲ್‌ನ್ನು ಸಮತೋಲನದಲ್ಲಿ ಇಡುತ್ತದೆ.

ಉರಿಯೂತ ಶಮನಕಾರಿ ಗುಣಗಳು
ಅರಶಿನದಲ್ಲಿ ಉರಿಯೂತ ಶಮನಕಾರಿ ಗುಣಗಳು ಇದೆ ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಇದು ಸಂಧಿವಾತ ಇರುವ ರೋಗಿಗಳಿಗೆ ತುಂಬಾ ಸಹಕಾರಿ ಆಗಿರಲಿದೆ. ಇದು ಸಂಧಿವಾತ ಇರುವ ರೋಗಿಗಳ ನೋವನ್ನು ನೈಸರ್ಗಿಕವಾಗಿ ನಿವಾರಣೆ ಮಾಡುವುದು ಮತ್ತು ಇದು ಸಂಧಿವಾತದ ನೋವು ಕಡಿಮೆ ಮಾಡುವುದು.ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ಪ್ರತಿರೋಧಕ ಶಕ್ತಿ ಹೆಚ್ಚಿಸುವುದು
ಅರಶಿನದಲ್ಲಿ ಇರುವಂತಹ ಕೆಲವೊಂದು ಅಂಶಗಳು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚು ಮಾಡುವುದು. ಇದು ಪ್ರತಿರೋಧಕ ವ್ಯವಸ್ಥೆಯ ಆರೋಗ್ಯ ಸುಧಾರಣೆ ಮಾಡುವುದು ಮತ್ತು ವಿವಿಧ ಕಾಯಿಲೆಗಳು ಬರುವಂತಹ ಅಪಾಯ ತಗ್ಗಿಸುವುದು.

ಜೀರ್ಣಕ್ರಿಯೆ ಸುಧಾರಣೆ ಮಾಡುವುದು
ಅರಿಶಿನವು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅರಿಶಿನದಲ್ಲಿ ಇರುವಂತಹ ಸುವಾಸನೆ ಮತ್ತು ರುಚಿಯು ಜೀರ್ಣಕ್ರಿಯೆ ಸುಧಾರಣೆ ಮಾಡುವುದು. ಅರಶಿನವು ಹೊಟ್ಟೆಯ ಉರಿಯೂತ ಕಡಿಮೆ ಮಾಡುವುದು ಮತ್ತು ಪಿತ್ತರಸ ಉತ್ಪತ್ತಿ ಮಾಡಲು ನೆರವಾಗುವುದು. ಇದು ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ತಡೆಯುವುದು. ಇದರಿಂದ ಅರಿಶಿನವನ್ನು ಆಹಾರದಲ್ಲಿ ಸೇರಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ.

English summary

turmeric can help you improve your eye health

Turmeric is widely known for its medicinal properties. It has been used for medicinal purposes since ages. Turmeric is the golden spice which a common ingredient of every Indian household. From pain to inflammation, it can treat various health conditions. A recent study elaborates the health benefits of turmeric.The study explains that turmeric can help you improve your eye health as well. Earlier various other studies have also explained the benefit of turmeric for cataract and glaucoma.
X
Desktop Bottom Promotion