Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಹಸಿವಿಲ್ಲದಿರುವಿಕೆ, ಈ ಸುಲಭ ಟಿಪ್ಸ್ ಅನ್ನು ಪ್ರಯತ್ನಿಸಿ ನೋಡಿ!
ಹಸಿವಿಲ್ಲದೇ ಇರುವುದು ಒಂದು ಸಾಮಾನ್ಯ ತೊಂದರೆಯಾಗಿದೆ. ಈ ತೊಂದರೆ ಯಾವುದೇ ವಯೋಮಾನದ ವ್ಯಕ್ತಿಗಳಲ್ಲಿ ಕಂಡುಬರಬಹುದು. ಹೆಚ್ಚಿನ ಸಂದರ್ಭದಲ್ಲಿ ಇದು ತಾತ್ಕಾಲಿಕವಾಗಿ ಆವರಿಸಿದರೆ ಉಳಿದವರಲ್ಲಿ ಸತತವಾಗಿ ಕಾಡುವ ತೊಂದರೆಯಾಗಿರಬಹುದು. ಅಸಮರ್ಪಕ ಅಹಾರ ಕ್ರಮ ಇದಕ್ಕೆ ಪ್ರಮುಖ ಕಾರಣವಾಗಿದೆ. ಉಳಿದಂತೆ ಮಾನಸಿಕ ಕಾರಣಗಳಾದ ಉದ್ವೇಗ, ಮಾನಸಿಕ ಒತ್ತಡ, ಖಿನ್ನತೆ ಮೊದಲಾದವುಗಳಿಂದಲೂ ಹಸಿವಿಲ್ಲದೇ ಹೋಗಬಹುದು.

ಕೆಲವೊಮ್ಮೆ ಗಂಭೀರ ಕಾಯಿಲೆಗಳಾದ ಮರೆಗುಳಿತನ, ಮೂತ್ರಪಿಂಡದ ಕಾಯಿಲೆ, ಬ್ಯಾಕ್ಟೀರಿಯಾದ ಸೋಂಕು ಮೊದಲಾದವು ಗಳಿಂದಲೂ ಹಸಿವಿಲ್ಲದೇ ಹೋಗಬಹುದು. ಆದರೆ ಇದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಲಭಿಸದೇ ತೂಕ ಅನೈಚ್ಛಿಕವಾಗಿ ಇಳಿಯುತ್ತದೆ ಹಾಗೂ ಇದು ಇನ್ನಷ್ಟು ಅನಾರೋಗ್ಯಗಳಿಗೆ ಕಾರಣವಾಗಬಹುದು. ಈ ತೊಂದರೆಗೆ ಹಲವಾರು ಔಷಧಿಗಳು ಲಭ್ಯವಿವೆ. ಆದರೆ ಇವುಗಳನ್ನು ಪ್ರಯತ್ನಿಸುವ ಮುನ್ನ ಯಾವುದೇ ಅಡ್ಡಪರಿಣಾಮ ಬೀರದ ಹಾಗೂ ಸುರಕ್ಷಿತವಾದ ನೈಸರ್ಗಿಕ ವಿಧಾನಗಳನ್ನು ಪ್ರಯತ್ನಿಸಿ ನೋಡುವುದು ಜಾಣತನದ ಕ್ರಮವಾಗಿದೆ. ಇಂದಿನ ಲೇಖನದಲ್ಲಿ ಕೆಲವು ವಿಧಾನಗಳನ್ನು ವಿವರಿಸಲಾಗಿದ್ದು ಹಸಿವನ್ನು ಖಂಡಿತವಾಗಿಯೂ ಹೆಚ್ಚಿಸುತ್ತವೆ.

ಕಾಳುಮೆಣಸು
ನೂರಾರು ವರ್ಷಗಳಿಂದ ಹಸಿವು ಹೆಚ್ಚಿಸಲು ಕಾಳು ಮೆಣಸನ್ನು ಬಳಸಲಾಗುತ್ತಿದೆ. ಮುಖ್ಯವಾಗಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಹಾಗೂ ಹೊಟ್ಟೆಯನ್ನು ಚುರುಗುಟ್ಟಿಸಲು ಕಾಳು ಮೆಣಸನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲ, ಹೊಟ್ಟೆಯ ಮತ್ತು ಕರುಳಿನಲ್ಲಿ ಎದುರಾಗುವ ತೊಂದರೆಗಳಿಗೆ ಔಷಧಿಯ ರೂಪದಲ್ಲಿಯೂ ಬಳಸಲಾಗುತ್ತದೆ. ಇದು ಖಾರವಾಗಿರುವ ಕಾರಣ ನಾಲಿಗೆಯಲ್ಲಿ ಚುರುಕು ಮೂಡಿಸಿ ಬಾಯಿಯಲ್ಲಿ ಹೆಚ್ಚಿನ ಲಾಲಾರಸ ಉತ್ಪತ್ತಿಯಾಗುವಂತೆ ಮಾಡುತ್ತದೆ. ಅಲ್ಲದೇ ಹೊಟ್ಟೆಯಲ್ಲಿಯೂ ಹೆಚ್ಚಿನ ಜೀರ್ಣರಸಗಳು ಸ್ರವಿಸುವಂತೆ ಮಾಡಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೇ ಹಸಿವನ್ನೂ ಹೆಚ್ಚಿಸುತ್ತದೆ.
ಬಳಕೆಯ ವಿಧಾನ
ಒಂದು ಚಿಕ್ಕಚಮಚ ಅಪ್ಪಟ ಬೆಲ್ಲವನ್ನು (ಕಪ್ಪು ಅಥವಾ ಕೆಂಪು ಬೆಲ್ಲ ಮಾತ್ರ, ಬಿಳಿ ಬೆಲ್ಲ ಅಥವಾ ಹಳದಿಬೆಲ್ಲ ಉಪಯುಕ್ತವಲ್ಲ!) ಅರ್ಧ ಚಿಕ್ಕಚಮಚ ಕಪ್ಪು ಕಾಳುಮೆಣಸಿನೊಂದಿಗೆ ಚೆನ್ನಾಗಿ ಪುಡಿಗಟ್ಟಿಸಬೇಕು. ಈ ಮಿಶ್ರಣವನ್ನು ನಿಯಮಿತವಾಗಿ ದಿನದ ಒಂದೇ ಹೊತ್ತಿನಲ್ಲಿ ಕೆಲವಾರು ದಿನ ಸೇವಿಸುತ್ತಾ ಬಂದರೆ ಕ್ರಮೇಣ ಹಸಿವು ಹೆಚ್ಚತೊಡಗುತ್ತದೆ.

ಹಸಿಶುಂಠಿ
ನಮ್ಮ ಹಲವು ಬಗೆಯ ಅಡುಗೆಗಳಲ್ಲಿ ಅನಿವಾರ್ಯ ರುಚಿಕಾರಕವಾಗಿ ಬಳಸಲ್ಪಡುವ ಹಸಿಶುಂಠಿ ಉತ್ತಮ ಔಷಧೀಯ ಗುಣಗಳನ್ನೂ ಹೊಂದಿದೆ. ವಿಶೇಷವಾಗಿ ಅಜೀರ್ಣತೆ ಮತ್ತು ಹಸಿವಿಲ್ಲದಿರುವಿಕೆಗೆ ಹಸಿಶುಂಠಿ ಉತ್ತಮ ಪರಿಹಾರವಾಗಿದೆ. ಅಲ್ಲದೇ ಹೊಟ್ಟೆ ನೋವನ್ನೂ ಇಲ್ಲವಾಗಿಸುತ್ತದೆ.
ಬಳಕೆಯ ವಿಧಾನ: ಅರ್ಧ ಚಿಕ್ಕ ಚಮಚದಷ್ಟು ತಾಜಾ ಹಸಿಶುಂಠಿಯ ರಸಕ್ಕೆ ಚಿಟಿಕೆಯಷ್ಟು ಕಲ್ಲುಪ್ಪು ಅಥವಾ ಹಿಮಾಲಯನ್ ಕೆಂಪು ಉಪ್ಪನ್ನು ಬೆರೆಸಿ ಊಟಕ್ಕೂ ಒಂದು ಘಂಟೆ ಮುನ್ನ ಸೇವಿಸಿ. ಈ ವಿಧಾನವನ್ನು ಸತತವಾಗಿ ಹತ್ತು ದಿನ ಅನುಸರಿಸಿ. ಜೊತೆಗೇ ಶುಂಠಿಯ ಟೀ ಯನ್ನೂ ಸೇವಿಸುತ್ತಿದ್ದರೆ ಇನ್ನೂ ಒಳ್ಳೆಯದು.

ನೆಲ್ಲಿಕಾಯಿ
ಆಮ್ಲಾ ಎಂದೂ ಕರೆಯಲ್ಪಡುವ ನೆಲ್ಲಿಕಾಯಿಯಿ ಜಠರ ಮತ್ತು ಕರುಗಳುಗಳ ತೊಂದರೆಯಿಂದ ಎದುರಾಗಿರುವ ಹಸಿವಿಲ್ಲದಿರುವಿಕೆಗೆ ಅತ್ಯುತ್ತಮ ಪರಿಹಾರವಾಗಿದೆ. ನೆಲ್ಲಿಕಾಯಿ ಜೀರ್ಣಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ಯಕೃತ್ ನಲ್ಲಿರುವ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಬಳಕೆಯ ವಿಧಾನ: ತಲಾ ಎರಡು ಚಿಕ್ಕ ಚಮಚದಷ್ಟು ತಾಜಾ ನೆಲ್ಲಿಕಾಯಿಯ ರಸ, ಲಿಂಬೆ ಸರ ಮತ್ತು ಜೇನನ್ನು ಒಂದು ಕಪ್ ನೀರಿಗೆ ಬೆರೆಸಿ. ಈ ನೀರನ್ನು ನಿತ್ಯವೂ ಬೆಳಿಗ್ಗೆದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಸೇವಿಸಿ.

ಏಲಕ್ಕಿ
ಏಲಕ್ಕಿ ಜೀರ್ಣಾಂಗಗಳಲ್ಲಿ ಜೀರ್ಣರಸಗಳನ್ನು ಹೆಚ್ಚಿಸಲು ನೆರವಾಗುತ್ತದೆ ಹಾಗೂ ತನ್ಮೂಲಕ ಹಸಿವನ್ನೂ ಹೆಚ್ಚಿಸುತ್ತದೆ.
ಬಳಕೆಯ ವಿಧಾನ: ಊಟಕ್ಕೂ ಮೊದಲು ಎರಡು ಅಥವಾ ಮೂರು ಏಲಕ್ಕಿಗಳನ್ನು ಚೆನ್ನಾಗಿ ಜಗಿದು ರಸವಾಗಿಸಿ ನುಂಗಬೇಕು. ಜೊತೆಗೇ ನಿತ್ಯವೂ ಕುಡಿಯುವ ಟೀಯಲ್ಲಿ ಕೊಂಚ ಏಲಕ್ಕಿ ಪುಡಿ ಬೆರೆಸಿಯೂ ಸೇವಿಸಬಹುದು.

ಓಮದ ಕಾಳುಗಳು
ಅಜ್ವೈನ್ ಎಂದೂ ಕರೆಯಲ್ಪಡುವ ಈ ಪುಟ್ಟ ಜೀರಿಗೆಯಂತಹ ಕಾಳುಗಳು ಎಲ್ಲಾ ಬಗೆಯ ಹೊಟ್ಟೆಯ ತೊಂದರೆಗಳನ್ನು ನಿವಾರಿಸಲು ಉತ್ತಮವಾಗಿವೆ. ಇದರ ಸೇವನೆಯಿಂದ ಜಠರದಲ್ಲಿ ಅಗತ್ಯ ಜೀರ್ಣರಸಗಳು ಮತ್ತು ಕಿಣ್ವಗಳು ಸ್ರವಿಸಿ ಆಹಾರವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ.
ಬಳಕೆಯ ವಿಧಾನ: ಸುಮಾರು ಎರಡರಿಂದ ಮೂರು ಚಿಕ್ಕ ಚಮಚದಷ್ಟು ಓಮದ ಕಾಳುಗಳನ್ನು ಕೊಂಚ ಲಿಂಬೆರಸದಲ್ಲಿ ಬೆರೆಸಿ ಒಣ ಪ್ರದೇಶದಲ್ಲಿ ಹಾಗೇ ಒಣಗಲು ಬಿಡಿ. ಲಿಂಬೆಸರಸವನ್ನು ಈ ಕಾಳುಗಳು ಪೂರ್ಣವಾಗಿ ಹೀರಿ ಒಣಗಿದ ಬಳಿಕ ಇದಕ್ಕೆ ಕೊಂಚ ಕಪ್ಪುಪ್ಪನ್ನು ಸೇರಿಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಪ್ರತಿ ದಿನ ಬಳಿಗ್ಗೆ ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಈ ಪ್ರಮಾಣವನ್ನು ಬೆರೆಸಿ ಪ್ರಥಮ ಆಹಾರವಾಗಿ ಸೇವಿಸಿ. ಇಷ್ಟೆಲ್ಲಾ ಮಾಡುವಷ್ಟು ವ್ಯವಧಾನ ಇಲ್ಲದಿದ್ದರೆ ಅರ್ಧ ಚಿಕ್ಕ ಚಮಚದಷ್ಟು ಓಮದ ಕಾಳುಗಳನ್ನು ಊಟಕ್ಕೂ ಮುನ್ನ ಸೇವಿಸಬಹುದು. ಆದರೆ ಇದರ ರುಚಿ ಹೆಚ್ಚಿನವರಿಗೆ ಹಿಡಿಸದೇ ಹೋಗಬಹುದು.



Click it and Unblock the Notifications