For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಅಸ್ತಮಾ ರೋಗ ತಡೆಯಲು ಕಾಫಿ ಚಿಕಿತ್ಸೆ!

|

ಅಸ್ತಮಾ ಇರುವಂತಹ ಜನರಿಗೆ ಜೀವನದ ಮೇಲೆ ಬೇಸರ ಮೂಡಿ ಹೋಗಿರುತ್ತದೆ. ಅವರು ಪಡುತ್ತಿರುವ ಕಷ್ಟವನ್ನು ನೋಡಿದಾಗ ನಮಗೂ ಕನಿಕರ ಬರುವುದು. ಇಂತಹ ಕಷ್ಟವನ್ನು ನಿವಾರಣೆ ಮಾಡಲು ಕೆಲವೊಂದು ಸಂದರ್ಭದಲ್ಲಿ ನಾವು ಬಳಸುವಂತಹ ಸಾಮಾನ್ಯ ಆಹಾರದಿಂದ ಸಾಧ್ಯವಿದೆ ಎಂದು ಹೇಳಲಾಗುತ್ತದೆ. ನೀವು ಕಾಫಿ ಪ್ರಿಯರಾಗಿದ್ದರೆ ಮತ್ತು ಅಸ್ತಮಾ ಇದ್ದರೆ ಆಗ ನಿಮ್ಮ ಸಮಸ್ಯೆಯು ನಿವಾರಣೆ ಆದಂತೆ. ಯಾಕೆಂದರೆ ಕಾಫಿಯಲ್ಲಿ ಕೆಫಿನ್ ಅಂಶವು ಶ್ವಾಸಕೋಶದ ನಾಳಗಳನ್ನು ಹಿಗ್ಗಿಸುವುದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.

ಪ್ರತಿನಿತ್ಯ ಕಾಫಿ ಕುಡಿಯುವವರಿಗೆ ಇದು ಒಳ್ಳೆಯದು. ಇದರಲ್ಲಿರುವ ಕೆಲವೊಂದು ರಾಸಾಯನಿಕಗಳು ಅಸ್ತಮಾ ರೋಗಿಗಳಿಗೆ ನೀಡುವಂತಹ ಔಷಧಿಯಲ್ಲೂ ಕಂಡುಬರುವುದು. ಬ್ರಿಟನ್ ನಲ್ಲಿ ಕ್ರಿ.ಶ. 1800ರಲ್ಲಿ ಕಾಫಿ ಬಳಸಿಕೊಂಡು ಅಸ್ತಮಾಗೆ ಚಿಕಿತ್ಸೆ ನೀಡಲಾಗುತ್ತಿತ್ತಂತೆ. ಆದರೆ ಇದುವರೆಗೆ ಇದು ದೃಢಪಟ್ಟಿಲ್ಲ ಮತ್ತು ಈ ಬಗ್ಗೆ ಯಾವುದೇ ಪ್ರಮಾಣಪತ್ರಗಳು ಕೂಡ ಇಲ್ಲದಿರುವ ಕಾರಣದಿಂದಾಗಿ ಇದನ್ನು ದೃಢೀಕರಿಸಲು ಸಾಧ್ಯವಾಗಿಲ್ಲ. ನೀವು ಅಸ್ತಮಾಗೆ ಕಾಫಿ ಸೇವನೆ ಮಾಡುವಿರಾದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ ಅವರಿಂದ ಸರಿಯಾದ ಸಲಹೆಗಳನ್ನು ಪಡೆದುಕೊಳ್ಳುವುದು ಅತೀ ಅಗತ್ಯವಾಗಿರುವುದು.

ನಿಮ್ಮ ಕಾಫಿಯನ್ನು ಆಯ್ಕೆ ಮಾಡಿ

ನಿಮ್ಮ ಕಾಫಿಯನ್ನು ಆಯ್ಕೆ ಮಾಡಿ

ಅಸ್ತಮಾ ರೋಗವು ತುಂಬಾ ವಿಶೇಷವಾಗಿರುವ ಕಾರಣದಿಂದಾಗಿ ನೀವು ಕಾಫಿ ಆಯ್ಕೆ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಮಾರುಕಟ್ಟೆಯಲ್ಲಿ ಕೆಲವೊಂದು ಉತ್ತಮ ಗುಣಮಟ್ಟದ ಕಾಫಿಯು ತಾಜಾ ಬೀಜಗಳಿಂದ ಮಾಡಿರುವಂತದ್ದು ಸಿಗುವುದು. ನೀವು ಎರಡು ರೀತಿಯ ರುಚಿ ಅಥವಾ ಗುಣಮಟ್ಟದ ಕಾಫಿಯನ್ನು ಮಿಶ್ರಣ ಮಾಡಿಕೊಂಡು ಅದನ್ನು ನಿಮಗೆ ಬೇಕಾದಂತೆ ಮಿಶ್ರಣ ಮಾಡಬಹುದು. ಸಣ್ಣ ಪ್ರಮಾಣದಲ್ಲಿ ನೀವು ಕಾಫಿ ಸೇವನೆ ಮಾಡಿ ಮತ್ತು ಅಸ್ತಮಾದ ಲಕ್ಷಣಗಳು ಯಾವ ರೀತಿ ಕೆಲಸ ಮಾಡುವುದು ಎಂದು ತಿಳಿಯಿರಿ. 3/1 ಭಾಗದಷ್ಟು ಕಾಫಿ ತಯಾರು ಮಾಡಿಕೊಳ್ಳಿ. ಈ ಪ್ರಮಾಣದಲ್ಲಿ ನೀವು ಕಾಫಿ ಸೇವನೆ ಮಾಡಿದರೆ ಅದು ಅಸ್ತಮಾ ಲಕ್ಷಣ ನಿವಾರಣೆಗೆ ಸಹಕಾರಿ. ಕೆಲವು ಸಲ ಕಾಫಿ ಹೀರಿಕೊಂಡ ಬಳಿಕ ನೀವು ಹಾಗೆ ಇದ್ದು ಲಕ್ಷಣಗಳು ಕಡಿಮೆ ಆಗಿದೆಯಾ ಎಂದು ತಿಳಿಯಿರಿ. ಮೂಗಿನ ಮೂಲಕ ಉಸಿರಾಡಿ ಮತ್ತು ತುಟಿಗಳನ್ನು ಮುಚ್ಚಿಕೊಳ್ಳಿ ಮತ್ತು ನಿಧಾನವಾಗಿ ಉಸಿರು ಹೊರಬಿಡಿ. ನಿಮಗೆ ಸ್ವಲ್ಪ ಆರಾಮ ಕಂಡುಬರುತ್ತಲಿದ್ದರೆ ಗ ನೀವು ಉಳಿದ ಕಾಫಿಯನ್ನು ನಿಧಾನವಾಗಿ ಕುಡಿಯಿರಿ.

Most Read: ನಿಜವಾಗಿಯೂ ಕಾಫಿಗೆ ತಲೆನೋವು ಶಮನಗೊಳಿಸುವ ಗುಣವಿದೆಯೇ?

ಯಾವಾಗ ಕಾಫಿ ಸೇವನೆ ನಿಲ್ಲಿಸುವುದು

ಯಾವಾಗ ಕಾಫಿ ಸೇವನೆ ನಿಲ್ಲಿಸುವುದು

ಅಸ್ತಮಾ ಲಕ್ಷಣದಲ್ಲಿ ಯಾವುದೇ ಬದಲಾವಣೆಯು ಕಂಡುಬರದೇ ಇದ್ದರೆ ಆಗ ನೀವು ಕಾಫಿ ಸೇವನೆಯನ್ನು ತಕ್ಷಣವೇ ನಿಲ್ಲಿಸಿಬಿಡಿ. ನೀವು ಇದನ್ನು ಮುಂದುವರಿಸಿಕೊಂಡು ಹೋದರೆ ಆಗ ಪರಿಸ್ಥಿತಿಯು ಕೆಡುವುದು. ಅಸ್ತಮಾ ಲಕ್ಷಣಗಳು ಹಾಗೆ ಇದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ ಅವರಿಂದ ಪರೀಕ್ಷೆ ಮಾಡಿಸಿ. ನೀವು ಕುಟುಂಬದ ಸದಸ್ಯರ ಜತೆಗೆ ಅಥವಾ ಅವರ ಸಮ್ಮುಖದಲ್ಲಿ ಕಾಫಿ ಕುಡಿಯಿರಿ. ನಿಮಗೆ ಬೇರೆ ಯಾವುದೇ ಸಮಸ್ಯೆಯಿದ್ದರೆ ಅಂದರೆ ಗರ್ಭಧಾರಣೆಯ ಮಧುಮೇಹ ಅಥವಾ ಗರ್ಭಿಣಿ ಆಗಿದ್ದರೆ ಆಗ ನೀವು ವೈದ್ಯರ ಸಲಹೆ ಪಡೆದ ಬಳಿಕ ಮಾತ್ರ ಕಾಫಿ ಸೇವಿಸಿ. ಆರೋಗ್ಯವು ಯಾವ ರೀತಿಯಲ್ಲಿ ಕೆಡುವುದು ಎಂದು ಹೇಳಲು ಸಾಧ್ಯವಾಗದು.

ಇನ್ ಹೇಲರ್‌ನ್ನು ಇಟ್ಟುಕೊಳ್ಳಿ

ಇನ್ ಹೇಲರ್‌ನ್ನು ಇಟ್ಟುಕೊಳ್ಳಿ

ಉಸಿರಾಟದ ತೊಂದರೆಯು ಕಾಫಿಯಿಂದ ಕಡಿಮೆ ಆಗದೆ ಇದ್ದರೆ ಆಗ ನೀವು ವೈದ್ಯರು ಸೂಚಿಸಿರುವಂತಹ ಇನ್ ಹೇಲರ್ ನ್ನು ಬಳಸಿಕೊಳ್ಳಿ. ಕಾಫಿಯು ಗಿಡಮೂಲಿಕೆ ಮತ್ತು ಯಾವುದೇ ರೀತಿಯ ಅಡ್ಡಪರಿಣಾಮ ಅಥವಾ ಅಸ್ತಮಾದ ಲಕ್ಷಣಗಳನ್ನು ಇದು ಉಂಟು ಮಾಡದು. ಗ್ರೀನ್ ಟೀ ಯನ್ನು ನೀವು ದಿನಕ್ಕೆ ಎರಡು ಸಲ ಸಕ್ಕರೆ ಅಥವಾ ಹಾಲು ಇಲ್ಲದೆ ಸೇವಿಸಿ.

Most Read: ಅಸ್ತಮಾ ರೋಗವನ್ನು ಸೋಲಿಸುವ ಪವರ್ ಫುಲ್ ಮನೆಮದ್ದುಗಳು

ಸಾವಯವ ಕಾಫಿ ಪ್ರಯತ್ನಿಸಿ

ಸಾವಯವ ಕಾಫಿ ಪ್ರಯತ್ನಿಸಿ

ಅಸ್ತಮಾ ಲಕ್ಷಣಗಳನ್ನು ನಿವಾರಣೆ ಮಾಡಲು ಸಾವಯವ ಕಾಫಿ ಸೇವನೆ ಮಾಡಬೇಕು. ಸಂಸ್ಕರಿಸಲ್ಪಟ್ಟ ಕಾಫಿಯಲ್ಲಿ ಕೀಟನಾಶಕಗಳು ಮತ್ತು ರಾಸಾಯನಿಕಗಳು ಇದೆ ಮತ್ತು ಇದು ಅಸ್ತಮಾ ಲಕ್ಷಣಗಳನ್ನು ಹೆಚ್ಚು ಮಾಡಬಹುದು. ಸಾವಯವ ಕಾಫಿಯು ಅಸ್ತಮಾ ಲಕ್ಷಣ ನಿವಾರಿಸಲು ಪರಿಣಾಮಕಾರಿ. ಥಿಯೋಫಿಲ್ಲೈನ್ ಎನ್ನುವ ಅಂಶವು ಅಸ್ತಮಾಕ್ಕೆ ನೀಡುವಂತಹ ಔಷಧಿಯಲ್ಲಿ ಇರುವುದು. ಇದೇ ಅಂಶವು ಸಾವಯವ ಕಾಫಿಯಲ್ಲಿ ಕೂಡ ಕಂಡುಬರುವುದು. ನೀವು ಶ್ವಾಸಕೋಶ ಪರೀಕ್ಷೆ ಮಾಡಿಸಿಕೊಳ್ಳಲು ವೈದ್ಯರ ಬಳಿಗೆ ತೆರಳುತ್ತಿದ್ದರೆ ಆಗ ನೀವು ಎರಡರಿಂದ ಮೂರು ದಿನಗಳ ಮೊದಲು ಕಾಫಿ ಸೇವನೆ ಮಾಡುವುದನ್ನು ಬಿಡಬೇಕು.

English summary

Treating Asthma with Coffee

Caffeine that is found majorly in your cup of coffee has been found to widen the bronchial tubes that otherwise constrict during an attack. Besides, caffeine has chemical properties that are similar to the drugs prescribed to an asthma patient. Coffee was an ancient way of treating asthma in Britain in the 1800s though that does not certify the authenticity and efficacy of this treatment.If you want to accommodate coffee as a treatment option for asthma, make sure that you discuss about its dosage with your doctor.
Story first published: Saturday, May 11, 2019, 17:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more