For Quick Alerts
ALLOW NOTIFICATIONS  
For Daily Alerts

ಇಂದಿನಿಂದಲೇ ಶುರು ಮಾಡಿ ಬ್ಲ್ಯಾಕ್ ಕಾಫಿ ಕುಡಿಯಲು! ಇದರಿಂದ ಸಾಕಷ್ಟು ಆರೋಗ್ಯಕ್ಕೆ ಪ್ರಯೋಜನಗಳಿವೆ

|

ಕಾಫಿ ಎಂದಾಕ್ಷಣ ತಟ್ಟನೆ ನೆನಪಾಗುವುದು ಬೆಳಗಿನ ಬೆಡ್ ಕಾಫಿ ಮತ್ತು ಸಂಜೆಯ ಇಡೀ ದಿನದ ಸುಖ ಸಂತೋಷಗಳನ್ನು ಮೆಲುಕು ಹಾಕುತ್ತಾ ಕುಡಿಯುವ ಕಾಫಿ . ಕಾಫಿ ಒಂದು ರೀತಿಯ ಚಟ . ಒಮ್ಮೆ ಕುಡಿದರೆ ಮತ್ತದೇ ಸಮಯಕ್ಕೆ ಮತ್ತೊಮ್ಮೆ ಕುಡಿಯುವ ಬಯಕೆ . ಇಲ್ಲದಿದ್ದರೆ ಯಾವ ಕೆಲಸ ಮಾಡಲಿಕ್ಕೂ ಮನಸ್ಸೇ ಬರುವುದಿಲ್ಲ.

ಕೆಲವರಂತೂ ನಾನು ಇಂದು ಕಾಫಿ ಕುಡಿದೇ ಇಲ್ಲಾ ಅದಕ್ಕೆ ತಲೆ ನೋಯುತ್ತಿದೆ ಎಂದು ಹೇಳುತ್ತಾರೆ . ಕಾಫಿ ಗೆ ಅನೇಕ ಔಷಧೀಯ ಗುಣಗಳಿದ್ದು ಎಲ್ಲವೂ ಆರೋಗ್ಯಕ್ಕೆ ಅನುಕೂಲಕರವೇ ಆಗಿದೆ . ನಾವು ಇಂದು ಕಾಫಿ ಯಲ್ಲೇ ಇನ್ನೊಂದು ವಿಧವಾದ ಬ್ಲಾಕ್ ಕಾಫಿ ಬಗ್ಗೆ ಮಾತನಾಡುತ್ತಿದ್ದೇವೆ. ಬ್ಲಾಕ್ ಕಾಫಿ ಸರಿಯಾದ ಪ್ರಮಾಣದಲ್ಲಿ ಸೇವಿಸಿದ್ದೇ ಆದರೆ ನಮ್ಮ ದೇಹದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಏಕೆಂದರೆ ಬ್ಲಾಕ್ ಕಾಫಿ ಯಲ್ಲಿ ಅನೇಕ ರೀತಿಯ ಆಂಟಿ ಒಕ್ಸಿಡಾಂಟ್ ಗಳು ಮತ್ತು ಕೆಲವು ಉಪಯುಕ್ತ ಪೋಷಕಾಂಶಗಳು ಅಡಗಿವೆ. ಇವುಗಳಿಂದ ಆಗುವ ಉಪಯೋಗಗಳು ಏನೇನು ಎಂಬುದನ್ನು ಈಗ ಗಮನ ಹರಿಸೋಣ...

ಬ್ಲಾಕ್ ಕಾಫಿ ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ

ಬ್ಲಾಕ್ ಕಾಫಿ ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ

ವಯಸ್ಸಾದಂತೆಲ್ಲಾ ಮನುಷ್ಯನ ಜ್ಞಾಪಕ ಶಕ್ತಿ ಕುಗ್ಗುತ್ತಾ ಹೋಗುತ್ತದೆ . ಅರವತ್ತಕ್ಕೆ ಅರಳು ಮರಳು ಎಂಬ ಗಾಧೆಯೇ ಇದೆ . ಕೇವಲ ಜ್ಞಾಪಕ ಶಕ್ತಿ ಮಾತ್ರ ಅಲ್ಲದೆ ಒಂದು ವಸ್ತುವಿನ ಪರಿಕಲ್ಪನೆಯೇ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ . ಹೀಗಾಗಿ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂಬ ಯೋಚನೆ ಮಾಡುವ ಶಕ್ತಿಯೂ ಸಹ ಕಡಿಮೆ ಗೊಳ್ಳುತ್ತಾ ಬರುತ್ತದೆ . ಇದರಿಂದ ಡೆಮೆನ್ಷಿಯಾ , ಪಾರ್ಕಿನ್ ಸನ್ ಮತ್ತು ಅಲ್ಜೀಮಾರ್ ಕಾಯಿಲೆಗಳು ಸಹ ಬರುತ್ತವೆ . ಬ್ಲಾಕ್ ಕಾಫಿ ಬೆಳಗಿನ ಜಾವ ಹೀರಿದರೆ ಈ ಸಮಸ್ಯೆಯೇ ಇಲ್ಲ ಎನ್ನುತ್ತದೆ ಸಂಶೋಧನೆ . ಬೆಳಗಿನ ಬ್ಲಾಕ್ ಕಾಫಿ ಮೆದುಳಿಗೆ ಶಕ್ತಿ ತುಂಬುತ್ತದೆ . ಇಡೀ ದಿನ ಮೆದುಳು ಚಟುವಟಿಕೆಯಿಂದ ಕೂಡಿ ಚುರುಕುಗೊಳ್ಳುವಂತೆ ಪ್ರೇರೇಪಿಸಿ ಜ್ಞಾಪಕ ಶಕ್ತಿ ಕೂಡ ಹೆಚ್ಚುವಂತೆ ಮಾಡುತ್ತದೆ .ನರಮಂಡಲವನ್ನು ಸಹ ಕಾರ್ಯೋನ್ಮುಖವಾಗುವಂತೆ ಮಾಡಿ ಡೆಮೆನ್ಷಿಯಾ ಖಾಯಿಲೆಯನ್ನು ದೂರವಿಡುತ್ತದೆ . ಅನೇಕ ಸಂಶೋಧನಾ ವರದಿಗಳ ಪ್ರಕಾರ ಪ್ರತಿದಿನ ಮುಂಜಾನೆ ಸಮಯದಲ್ಲಿ ಬ್ಲಾಕ್ ಕಾಫಿ ಸೇವಿಸುವ ಅಭ್ಯಾಸ ಇಟ್ಟುಕೊಂಡರೆ , ಶೇಖಡಾ 65 ರಷ್ಟು ಅಲ್ಜೀಮಾರ್ ಕಾಯಿಲೆಗೆ ಗುರಿಯಾಗುವುದನ್ನು ಮತ್ತು ಶೇಖಡಾ ೬೦ ರಷ್ಟು ಪಾರ್ಕಿನ್ ಸನ್ ಖಾಯಿಲೆಗೆ ತುತ್ತಾಗುವುದನ್ನು ತಪ್ಪಿಸಬಹುದಂತೆ !!!

ವರ್ಕ್ ಔಟ್ ಮಾಡುತ್ತಿದ್ದರೆ ನಿಮಗೆ ಶಕ್ತಿಯನ್ನು ತುಂಬಿ ಇನ್ನೂ ನಿಮ್ಮ ಕಾರ್ಯ ಕ್ಷಮತೆಯನ್ನು ಹೆಚ್ಚು ಮಾಡುತ್ತದೆ

ವರ್ಕ್ ಔಟ್ ಮಾಡುತ್ತಿದ್ದರೆ ನಿಮಗೆ ಶಕ್ತಿಯನ್ನು ತುಂಬಿ ಇನ್ನೂ ನಿಮ್ಮ ಕಾರ್ಯ ಕ್ಷಮತೆಯನ್ನು ಹೆಚ್ಚು ಮಾಡುತ್ತದೆ

ಇದೊಂದು ಬ್ಲಾಕ್ ಕಾಫಿ ಯ ಬಹು ದೊಡ್ಡ ಮತ್ತು ಅತ್ಯಂತ ಉಪಯೋಗವಾಗುವ ಪ್ರಯೋಜನ . ವರ್ಕ್ ಔಟ್ ಮಾಡಬೇಕಾದರೆ ಯಾರಿಗಾದರೂ ದೈಹಿಕ ಸಾಮರ್ಥ್ಯ , ಸದೃಢತೆ ಬಹಳ ಮುಖ್ಯ . ಬ್ಲಾಕ್ ಕಾಫಿ ಕುಡಿದು ನಂತರ ನೀವು ಜಿಮ್ ಮಾಡಲು ಹೊರಟಿದ್ದೇ ಆದರೆ ಖಂಡಿತ ಅಲ್ಲಿ ನೀವು 100 ರಷ್ಟು ಶಕ್ತಿ ಪ್ರದರ್ಶನ ಮಾಡಬಹುದು . ಆದ್ದರಿಂದಲೇ ನಿಮ್ಮ ಜಿಮ್ ಟ್ರೈನರ್ ನೀವು ಜಿಮ್ ಗೆ ಬರುವ ಮುಂಚೆ ಬ್ಲಾಕ್ ಕಾಫಿ ಕುಡಿದು ಬನ್ನಿ ಎಂದು ಸೂಚಿಸಿರುವುದು . ಬ್ಲಾಕ್ ಕಾಫಿ ಮನಷ್ಯನ ದೇಹದಲ್ಲಿ ಕೆಲಸ ಮಾಡುವ ರೀತಿಯೇ ಒಂದು ಸೋಜಿಗ . ರಕ್ತದಲ್ಲಿರುವ ಎಪಿ ನೆಫ್ರೈನ್ ( ಅಡ್ರಿನಲಿನ್ ) ಅಂಶವನ್ನು ಹೆಚ್ಚಾಗುವಂತೆ ಮಾಡಿ ದೇಹದಲ್ಲಿ ಶಕ್ತಿ ತುಂಬಿ ಕೊಳ್ಳುವಂತೆ ಮಾಡುತ್ತದೆ . ಬ್ಲಾಕ್ ಕಾಫಿ ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕರಗಿಸಿ ದೇಹಕ್ಕೆ ಉಪಯೋಗವಾಗುವಂತಹ ಫ್ಯಾಟ್ ಸೆಲ್ ಗಳನ್ನು ಫ್ಯಾಟಿ ಆಸಿಡ್ ರೂಪದಲ್ಲಿ ಬಿಡುಗಡೆ ಮಾಡುತ್ತದೆ . ಇದರಿಂದ ವರ್ಕ್ ಔಟ್ ಮಾಡುವಾಗ ದೇಹಕ್ಕೆ ಶಕ್ತಿ ಬಂದಂತಾಗುತ್ತದೆ .

ಬ್ಲಾಕ್ ಕಾಫಿ ಲಿವರ್ ( ಪಿತ್ತ ಕೋಶ )ಕ್ಕೆ ಬಹಳ ಸಹಕಾರಿ

ಬ್ಲಾಕ್ ಕಾಫಿ ಲಿವರ್ ( ಪಿತ್ತ ಕೋಶ )ಕ್ಕೆ ಬಹಳ ಸಹಕಾರಿ

ಲಿವರ್ ನಮ್ಮ ದೇಹದಲ್ಲಿ ಬಹಳ ಮುಖ್ಯ ಅಂಗವಾಗಿದ್ದು, ಪ್ರತಿದಿನದ ದೇಹದ ಶ್ರಮದಲ್ಲಿ ಇದರ ಪಾತ್ರವೂ ಬಹಳ ಮುಖ್ಯ . ಲಿವರ್ ಗೆ ಬ್ಲಾಕ್ ಕಾಫಿ ಎಂದರೆ ಬಹಳ ಇಷ್ಟ. ಏಕೆಂದರೆ ಬ್ಲಾಕ್ ಕಾಫಿ ಲಿವರ್ ಕ್ಯಾನ್ಸರ್, ಹೆಪಟೈಟಿಸ್ , ಫ್ಯಾಟಿ ಲಿವರ್ ಡಿಸೀಸ್ ಮತ್ತು ಆಲ್ಕೊಹಾಲಿಕ್ ಸಿರೋಸಿಸ್ ನಂತಹ ಸಮಸ್ಯೆಗಳನ್ನು ಏಕಕಾಲಕ್ಕೆ ಕಡಿಮೆ ಮಾಡುತ್ತದೆ . ಯಾರು ದಿನಕ್ಕೆ ೪ ಕಪ್ ಬ್ಲಾಕ್ ಕಾಫಿ ಕುಡಿಯುತ್ತಾರೋ , ಅವರು ಶೇಖಡಾ 80 ರಷ್ಟು ಲಿವರ್ ಕಾಯಿಲೆಗೆ ತುತ್ತಾಗುವುದರಿಂದ ಪಾರಾಗುತ್ತಾರೆ . ರಕ್ತದ ಹರಿವಿನಲ್ಲೂ ಸಹ ಹಾನಿಕಾರಕ ಲಿವರ್ ಎಂಜೈಮ್ ಗಳನ್ನು ಕಡಿಮೆ ಮಾಡುತ್ತದೆ.

Most Read: ಇದು ಮಾಮೂಲಿ ಕಾಫಿ ಅಲ್ಲ-ಸಕ್ಕರೆ ರಹಿತ ಬ್ಲ್ಯಾಕ್ ಕಾಫಿ!

ಬ್ಲಾಕ್ ಕಾಫಿ ಕುಡಿಯಿರಿ , ಬುದ್ಧಿವಂತರಾಗಿ!

ಬ್ಲಾಕ್ ಕಾಫಿ ಕುಡಿಯಿರಿ , ಬುದ್ಧಿವಂತರಾಗಿ!

ಹೌದು ಬ್ಲಾಕ್ ಕಾಫಿ ಮೊದಲೇ ಹೇಳಿದಂತೆ ಕೇವಲ ಜ್ಞಾಪಕ ಶಕ್ತಿ ಮಾತ್ರವಲ್ಲದೆ ಬುದ್ಧಿ ಶಕ್ತಿಯನ್ನೂ ಕೂಡ ಚೆನ್ನಾಗಿ ಬೆಳೆಸುತ್ತದೆ . ಇದರಲ್ಲಿ ಸೈಕೋ ಆಕ್ಟಿವ್ ಸಿಮ್ಯುಲ್ಯಾಂಟ್ ಇದ್ದು ಇದು ದೇಹದ ಶಕ್ತಿ , ಮಾನಸಿಕ ಸ್ಥಿತಿ ಮತ್ತು ಜ್ಞಾನ ಗ್ರಹಣೆಯ ಶಕ್ತಿಯನ್ನೂ ಅಭಿವೃದ್ಧಿ ಮಾಡುತ್ತದೆ .

ಬ್ಲಾಕ್ ಕಾಫಿ ಕುಡಿಯುವುದರಿಂದ ನಿಮ್ಮ ಹೊಟ್ಟೆ ಕ್ಲೀನ್ ಆಗುತ್ತದೆ

ಬ್ಲಾಕ್ ಕಾಫಿ ಕುಡಿಯುವುದರಿಂದ ನಿಮ್ಮ ಹೊಟ್ಟೆ ಕ್ಲೀನ್ ಆಗುತ್ತದೆ

ಮಾನವನ ದೇಹದಲ್ಲಿ ಸೇರಿರುವ ಕಲ್ಮಶ ಆದಷ್ಟು ಬೇಗನೆ ಹೊರಗೆ ಹೋದರೆ ಯಾವ ಖಾಯಿಲೆಯೂ ಬರುವುದಿಲ್ಲ . ಸಾಮಾನ್ಯವಾಗಿ ಈ ಕಲ್ಮಶ ಬೆವರಿನ ಅಥವಾ ಮೂತ್ರದ ಮೂಲಕ ಹೊರಗೆ ಹೋಗುತ್ತದೆ . ಬ್ಲಾಕ್ ಕಾಫಿ ಒಂದು ಮೂತ್ರವರ್ಧಕ ಪಾನೀಯವಾಗಿದ್ದು , ಮನುಷ್ಯ ಆಗಾಗ ಮೂತ್ರ ಮಾಡುವಂತೆ ಮಾಡುತ್ತದೆ . ನೀವು ಸಕ್ಕರೆ ಹಾಕಿಕೊಳ್ಳದೆ ಬ್ಲಾಕ್ ಕಾಫಿ ಅನ್ನು ಕುಡಿದಿದ್ದೇ ಆದರೆ ದೇಹಕ್ಕೆ ಬೇಡದಿರುವ ವಿಷಕಾರಿ ಅಂಶಗಳು ಮತ್ತು ಬ್ಯಾಕ್ಟೇರಿಯಾ ಗಳು ಮೂತ್ರದ ಮೂಲಕೆ ಹೊರಗೆ ಬರುತ್ತವೆ .

ದೇಹದ ತೂಕ ಕಡಿಮೆ ಮಾಡುವಲ್ಲಿ ಬ್ಲಾಕ್ ಕಾಫಿ ಯ ಪಾತ್ರ ಬಹಳಷ್ಟಿದೆ

ದೇಹದ ತೂಕ ಕಡಿಮೆ ಮಾಡುವಲ್ಲಿ ಬ್ಲಾಕ್ ಕಾಫಿ ಯ ಪಾತ್ರ ಬಹಳಷ್ಟಿದೆ

ನಿಮ್ಮ ದೇಹದ ತೂಕ ತಟ್ಟನೆ ಇಳಿಯಬೇಕೆ ? ಹಾಗಿದ್ದರೆ ಬ್ಲಾಕ್ ಕಾಫಿ ಅನ್ನು ಸೇವಿಸುವುದನ್ನು ರೂಡಿ ಮಾಡಿಕೊಳ್ಳಿ . ನೀವು ಜಿಮ್ ಗೆ ಹೋಗುವ ಕೇವಲ ಅರ್ಧ ಗಂಟೆ ಮುಂಚೆ ಬ್ಲಾಕ್ ಕಾಫಿ ಕುಡಿದು ಹೋದರೆ ತಕ್ಷಣ ನಿಮ್ಮ ದೇಹದಲ್ಲಿ ಇದು ಕಾರ್ಯೋನ್ಮುಖವಾಗಿ ಮೆಟಬೋಲಿಸಂ ಅನ್ನು ಶೇಖಡಾ 50 ರಷ್ಟು ಹೆಚ್ಚು ಮಾಡುತ್ತದೆ . ಜೊತೆಗೆ ಇದು ದೇಹದ ಕೊಬ್ಬನ್ನು ಕರಗಿಸುವ ಪಾನೀಯ ಆಗಿರುವುದರಿಂದ ಹೊಟ್ಟೆಯಲ್ಲಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ . ಇದು ನರ ಮಂಡಲಕ್ಕೂ ಸೂಚನೆ ಕೊಟ್ಟು ಬೇರೆ ಅಧಿಕವಾಗಿರುವ ಕೊಬ್ಬನ್ನು ಫ್ಯಾಟ್ ಸೆಲ್ ಗಳಾಗಿ ಪರಿವರ್ತಿಸಿ ಗ್ಲೈಕೋಜೆನ್ ಗೆ ವಿರುದ್ಧವಾಗಿ ದೇಹದ ಕಾರ್ಯ ಚಟುವಟಿಕೆಗಾಗಿ ಶಕ್ತಿಯ ಮೂಲಗಳಾಗಿ ಬದಲಾಯಿಸುತ್ತದೆ .

ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚು ಸುಧಾರಿಸುತ್ತದೆ

ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚು ಸುಧಾರಿಸುತ್ತದೆ

ಬ್ಲಾಕ್ ಕಾಫಿ ಕುಡಿದರೆ ರಕ್ತದ ಒತ್ತಡ ಜಾಸ್ತಿ ಆಗುತ್ತದೆ ಎಂದು ಎಲ್ಲರೂ ಹೇಳುತ್ತಾರೆ . ಆದರೆ ಅದು ಕ್ಷಣಿಕ ಮಾತ್ರ . ದಿನಕ್ಕೆ 1 - 2 ಕಪ್ ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಹೃದಯರಕ್ತನಾಳದ ಸಮಸ್ಯೆಗಳು ಮತ್ತು ಪ್ಯಾರಾಲಿಸಿಸ್ ನಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ . ಉರಿಯೂತದಂತಹ ಸಮಸ್ಯೆಗಳಿಗೂ ಬ್ಲಾಕ್ ಕಾಫಿ ರಾಮ ಬಾಣವಾಗಿ ಕೆಲಸ ಮಾಡುತ್ತದೆ .

ಬ್ಲಾಕ್ ಕಾಫಿ ಯಲ್ಲಿ ಕೆಳಕಂಡ ಆಂಟಿ ಒಕ್ಸಿಡಾಂಟ್ ಗಳ ಮಹಾ ಪೂರವೇ ಇದೆ

ಬ್ಲಾಕ್ ಕಾಫಿ ಯಲ್ಲಿ ಕೆಳಕಂಡ ಆಂಟಿ ಒಕ್ಸಿಡಾಂಟ್ ಗಳ ಮಹಾ ಪೂರವೇ ಇದೆ

ಬ್ಲಾಕ್ ಕಾಫಿ ಯಲ್ಲಿ ವಿಟಮಿನ್ ಬಿ2 , ವಿಟಮಿನ್ ಬಿ3 , ವಿಟಮಿನ್ ಬಿ 5 ಸೇರಿದಂತೆ ಮ್ಯಾಂಗನೀಸ್ , ಪೊಟ್ಯಾಸಿಯಂ ಮತ್ತು ಮೆಗ್ನೀಷಿಯಂ ಕೂಡ ಇವೆ .

ಬ್ಲಾಕ್ ಕಾಫಿ ಯಲ್ಲಿ ವಿಟಮಿನ್ ಬಿ2 , ವಿಟಮಿನ್ ಬಿ3 , ವಿಟಮಿನ್ ಬಿ 5 ಸೇರಿದಂತೆ ಮ್ಯಾಂಗನೀಸ್ , ಪೊಟ್ಯಾಸಿಯಂ ಮತ್ತು ಮೆಗ್ನೀಷಿಯಂ ಕೂಡ ಇವೆ .

ಬ್ಲಾಕ್ ಕಾಫಿ ಯಲ್ಲಿ ವಿಟಮಿನ್ ಬಿ2 , ವಿಟಮಿನ್ ಬಿ3 , ವಿಟಮಿನ್ ಬಿ 5 ಸೇರಿದಂತೆ ಮ್ಯಾಂಗನೀಸ್ , ಪೊಟ್ಯಾಸಿಯಂ ಮತ್ತು ಮೆಗ್ನೀಷಿಯಂ ಕೂಡ ಇವೆ .

ಸಕ್ಕರೆ ಕಾಯಿಲೆ ಮುಂದೆ ದಿನ ಕಳೆದಂತೆ ಮನುಷ್ಯನಿಗೆ ಬಹಳ ತೊಂದರೆ ಕೊಡುವ ಖಾಯಿಲೆ . ಇದರಿಂದ ಮನುಷ್ಯ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗುತ್ತಾನೆ ಮತ್ತು ಹೃದಯ ಸಂಬಂಧಿ ಖಾಯಿಲೆಗೆ ಕೂಡ ಗುರಿಯಾಗುತ್ತಾನೆ . ಯಾರು ಕಾಫಿ 2 ಕಪ್ ಗಿಂತಲೂ ಕಡಿಮೆ ಕುಡಿಯುತ್ತಾರೋ ಅಥವಾ ಕಾಫೀ ಕುಡಿಯುವುದೇ ಇಲ್ಲವೋ ಅವರು ಮಧುಮೇಹಕ್ಕೆ ಗುರಿಯಾಗುವ ಸಂಭವ ಹೆಚ್ಚಾಗಿರುತ್ತದೆ . ಆದ್ದರಿಂದ ಕೆಫೇನ್ ಅಂಶವಿರುವ ಅಥವಾ ಕೆಫೇನ್ ಅಂಶ ಇಲ್ಲದಿರುವ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಸಕ್ಕರೆ ಖಾಯಿಲೆ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ. ಏಕೆಂದರೆ ಕಾಫಿ ಮನುಷ್ಯನ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯನ್ನು ಹೆಚ್ಚು ಮಾಡಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡುತ್ತದೆ .

ಬ್ಲಾಕ್ ಕಾಫಿ ನಿಮ್ಮ ಯೌವನವನ್ನು ಕಾಪಾಡುತ್ತದೆ

ಬ್ಲಾಕ್ ಕಾಫಿ ನಿಮ್ಮ ಯೌವನವನ್ನು ಕಾಪಾಡುತ್ತದೆ

ಎಷ್ಟೇ ವಯಸ್ಸಾಗಿದ್ದರೂ ನಮಗಿನ್ನೂ ಕಡಿಮೆ ವಯಸ್ಸು ಎಂದು ಎಲ್ಲರೂ ಹೇಳಲು ಬಯಸುತ್ತಾರೆ . ಆದರೆ ಹೇಳಲಿಕ್ಕಾಗುವುದಿಲ್ಲ . ಆದರೆ ಬ್ಲಾಕ್ ಕಾಫಿ ಕುಡಿಯುವುದನ್ನು ರೂಡಿ ಮಾಡಿಕೊಂಡರೆ ಸಾಕು , ನೀವು ಹೇಳುವುದೇ ಬೇಕಿಲ್ಲ. ನಿಮ್ಮ ವಯಸ್ಸು ನೋಡಿದವರಿಗೆ ತಾನಾಗಿಯೇ ಚಿಕ್ಕದಾಗಿ ಕಾಣುತ್ತದೆ. ಆ ರೀತಿ ನಿಮ್ಮ ಯೌವನವನ್ನು ಕಾಪಾಡುವ ಜವಾಬ್ದಾರಿ ಬ್ಲಾಕ್ ಕಾಫಿಯದು . ಇದು ದೇಹದಲ್ಲಿ ಡೋಪಮೈನ್ ಅಂಶವನ್ನು ಹೆಚ್ಚು ಮಾಡಿ ಪಾರ್ಕಿನ್ ಸನ್ ಕಾಯಿಲೆಯನ್ನು ದೂರವಿಡುತ್ತದೆ .

ಕ್ಯಾನ್ಸರ್ ಬರುತ್ತದೆ ಎಂಬ ಭಯವಿರುವವರು ಬ್ಲಾಕ್ ಕಾಫೀ ಕುಡಿಯಿರಿ

ಕ್ಯಾನ್ಸರ್ ಬರುತ್ತದೆ ಎಂಬ ಭಯವಿರುವವರು ಬ್ಲಾಕ್ ಕಾಫೀ ಕುಡಿಯಿರಿ

ಕ್ಯಾನ್ಸರ್ ನಮಗೆ ನಿಮಗೆ ಗೊತ್ತಿರುವ ಹಾಗೆ ಜಗತ್ತಿಗೆ ಅಂಟಿಕೊಂಡಿರುವ ಒಂದು ಮಾರಕ ಕಾಯಿಲೆ . ಒಮ್ಮೆ ದೇಹಕ್ಕೆ ನುಸುಳಿತೆಂದರೆ ನಂತರ ಅದು ಹೊರ ಹೋಗುವುದು ಮನುಷ್ಯನ ಪ್ರಾಣದ ಜೊತೆಗೆ . ಆದರೆ ಕೆಲವೊಂದು ರೀತಿಯ ಕ್ಯಾನ್ಸರ್ ಗಳನ್ನು ಬ್ಲಾಕ್ ಕಾಫಿ ಯಲ್ಲಿ ತಡೆಯಬಹುದು ಎಂದು ಸಂಶೋಧನೆ ಹೇಳುತ್ತಿದೆ . ಲಿವರ್ ಕ್ಯಾನ್ಸರ್ , ರೆಕ್ಟಲ್ ಕ್ಯಾನ್ಸರ್ , ಬ್ರೆಸ್ಟ್ ಕ್ಯಾನ್ಸರ್ ಮತ್ತು ಕೋಲನ್ ಕ್ಯಾನ್ಸರ್ ಅನ್ನು ಬ್ಲಾಕ್ ಕಾಫಿ ದೇಹಕ್ಕೆ ಹರಡದಂತೆ ಮನುಷ್ಯನ ದೇಹವನ್ನು ಕಾಪಾಡುತ್ತದೆ . ದೇಹದಲ್ಲಿ ಟ್ಯೂಮರ್ ಉಂಟಾಗಬೇಕಾದರೆ ಉರಿಯೂತ ( inflammation ) ಕಾರಣವಾಗಿರುವುದರಿಂದ ಬ್ಲಾಕ್ ಕಾಫಿ ಮೊದಲು ಅದರ ಮೇಲೆ ಗಮನ ಹರಿಸುತ್ತದೆ ಮತ್ತು ಉರಿಯೂತವನ್ನು ತಡೆಯುತ್ತದೆ .

ಒತ್ತಡ ಮತ್ತು ಖಿನ್ನತೆ ದೂರಾಗುತ್ತದೆ

ಒತ್ತಡ ಮತ್ತು ಖಿನ್ನತೆ ದೂರಾಗುತ್ತದೆ

ಇತ್ತೀಚಿಗೆ ಕೆಲಸದ ಒತ್ತಡ ಮನುಷ್ಯನಿಗೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತಿದೆ . ಅಂತಹ ಒತ್ತಡ ಎದುರಾದಂತಹ ಕ್ಷಣದಲ್ಲಿ ನೀವು ಒಂದೇ ಒಂದು ಕಪ್ ಬ್ಲಾಕ್ ಕಾಫಿ ಕುಡಿದಿದ್ದೇ ಆದರೆ ತಕ್ಷಣ ನಿಮ್ಮ ಮೆದುಳಿನಲ್ಲಿ ಸಂಚಲನ ಉಂಟಾಗಿ ನಿಮ್ಮ ದೇಹಕ್ಕೆ ಹೊಸ ಚೈತನ್ಯ ಬಂದಂತಾಗುತ್ತದೆ ಮತ್ತು ಕೆಲಸವನ್ನು ಇನ್ನೂ ಅಚ್ಚುಕಟ್ಟಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ . ಇದಕ್ಕೆ ಕಾರಣ ಕಾಫಿ ನಿಮ್ಮ ಸಿ . ಏನ್ . ಎಸ್ ಅಂದರೆ ಸೆಂಟ್ರಲ್ ನರ್ವಸ್ ಸಿಸ್ಟಮ್ ಅನ್ನು ಉತ್ತೇಜಿಸಿ ಡೋಪಮೈನ್ , ಸೆರೋಟೋನಿನ್ ಮತ್ತು ನೊರಾಡ್ರೆನಲೈನ್ ಅಂಶಗಳನ್ನು ತಕ್ಷಣವೇ ಬಿಡುಗಡೆ ಮಾಡುತ್ತದೆ . ನಿಮಗೆ ಕೆಲಸ ಕಾರ್ಯಗಳಲ್ಲಿ ಹೊಸ ಹುರುಪನ್ನು ತಂದು ಕೊಡುತ್ತದೆ .

ಸಂಧಿವಾತದಿಂದ ಬಳಲುತ್ತಿದ್ದರೆ ನಿಮಗೆ ಬ್ಲಾಕ್ ಕಾಫಿ ಒಳ್ಳೆಯ ಔಷಧಿ

ಸಂಧಿವಾತದಿಂದ ಬಳಲುತ್ತಿದ್ದರೆ ನಿಮಗೆ ಬ್ಲಾಕ್ ಕಾಫಿ ಒಳ್ಳೆಯ ಔಷಧಿ

ಸಂಶೋಧನೆಗಳ ವರದಿಗಳ ಪ್ರಕಾರ ಯಾರು ಪ್ರತಿದಿನ 4 ಕಪ್ ಗಿಂತಲೂ ಹೆಚ್ಚು ಬ್ಲಾಕ್ ಕಾಫಿ ಕುಡಿಯುತ್ತಾರೋ ಅವರು ಶೇಖಡಾ 57 ರಷ್ಟು ಸಂಧಿವಾತ ಮತ್ತು ಅದರಿಂದ ಬರುವ ಲಕ್ಷಣಗಳಿಂದ ದೂರವಾಗಿರುತ್ತಾರೆ . ಏಕೆಂದರೆ ಬ್ಲಾಕ್ ಕಾಫಿ ಯಲ್ಲಿ ಸೇರಿರುವ ಆಂಟಿ ಒಕ್ಸಿಡಾಂಟ್ ಗಳು ದೇಹದಲ್ಲಿ ಇನ್ಸುಲಿನ್ ಮತ್ತು ಯೂರಿಕ್ ಆಸಿಡ್ ಅಂಶಗಳನ್ನು ಕಡಿಮೆ ಮಾಡುತ್ತವೆ .

ಬ್ಲಾಕ್ ಕಾಫಿ ನಿಮ್ಮನ್ನು ಖುಷಿಯಾಗಿರುವಂತೆ ಮಾಡುತ್ತದೆ

ಬ್ಲಾಕ್ ಕಾಫಿ ನಿಮ್ಮನ್ನು ಖುಷಿಯಾಗಿರುವಂತೆ ಮಾಡುತ್ತದೆ

ಮೇಲೆ ತಿಳಿಸಿರುವ ಎಲ್ಲಾ ರೀತಿಯ ಪ್ರಯೋಜನಗಳನ್ನು ನಿಮಗೆ ಬ್ಲಾಕ್ ಕಾಫಿ ಕೊಡುತ್ತದಾದ್ದರಿಂದ ನೀವು ಖುಷಿಯಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಯಾವುದೇ ಮಾನಸಿಕ ಖಿನ್ನತೆಗೂ ನಿಮ್ಮನ್ನು ಒಳಪಡದಂತೆ ಕಾಪಾಡುವ ಕೆಲಸ ಬ್ಲಾಕ್ ಕಾಫಿ ಮಾಡುತ್ತದೆ . ಹಾಗಾಗಿ ಪ್ರತಿದಿನ ಬೆಳಗ್ಗೆ ಸಂಜೆ 2 ಕಪ್ ಕಾಫಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ .

English summary

Top Health benefits of black coffee

Black coffee can heal if consumed the right way. Yes, you heard it right. Drinking black coffee has numerous health benefits as it is loaded with antioxidants and nutrients. Let’s have a look at some of the most important health benefits of drinking black coffee.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X