For Quick Alerts
ALLOW NOTIFICATIONS  
For Daily Alerts

ಒತ್ತಡವನ್ನು ಪ್ರಚೋದಿಸುವ ಮೈಗ್ರೇನ್‌ನ್ನು ನಿಯಂತ್ರಿಸಲು ಸಲಹೆಗಳು

|

ತಲೆನೋವು ಎನ್ನುವುದು ತುಂಬಾ ಸಾಮಾನ್ಯ ವಿಚಾರವೆಂದು ಪರಿಗಣಿಸಿದರೂ ಇದು ವೈದ್ಯಕೀಯ ಲೋಕಕ್ಕೊಂದು ಸವಾಲಾಗಿದೆ. ಹಲವಾರು ಸಂದರ್ಭಗಳಲ್ಲಿ ತಲೆನೋವು ಎನ್ನುವುದು ಕೆಲವೊಂದು ಪ್ರಾಣಹಾನಿ ಮಾಡುವ ರೋಗಗಳ ಲಕ್ಷಣಗಳು ಆಗಿರಬಹುದು. ಇದರಿಂದಾಗಿ ತಲೆನೋವನ್ನು ಹಾಗೆ ಬಿಡಬಾರದು. ಮೈಗ್ರೇನ್ ಮಕ್ಕಳು ಹಾಗೂ ದೊಡ್ಡವರಲ್ಲಿ ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆಯಾಗಿರುವುದು.

ಮೈಗ್ರೇನ್ ಎನ್ನುವುದು ಪ್ರಾಣಾಂತಕವಲ್ಲದೆ ಇದ್ದರೂ ಅದು ರೋಗಿಯ ದೈನಂದಿನ ಜೀವನದ ಮೇಲೆ ಮಾರಕ ಪರಿಣಾಮ ಉಂಟು ಮಾಡುವುದು. ಮೈಗ್ರೇನ್ ಬರುವ ಸಂದರ್ಭದಲ್ಲಿ ಇದು ಪ್ರಾಸಂಗಿಕವಾಗಿ ಬರುವುದು ಮತ್ತು ಇದು ತಲೆಯ ಅರ್ಧ ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುವುದು. ಮೈಗ್ರೇನ್ ನಿಂದಾಗಿ ಕೆಲವೊಂದು ಸಲ ತಲೆನೋವಿನ ಜತೆಗೆ ವಾಕರಿಕೆ ಮತ್ತು ವಾಂತಿಯು ಕಾಣಿಸಿಕೊಳ್ಳಬಹುದು. ಮೈಗ್ರೇನ್ ಇರುವಂತಹ ಜನರಿಗೆ ಪ್ರಖರ ಬೆಳಕು ಮತ್ತು ಜೋರಾದ ಧ್ವನಿಯ ಸೂಕ್ಷ್ಮತೆಯು ಕಾಣಿಸಬಹುದು. ಕೆಲವು ಜನರಲ್ಲಿ ಮೈಗ್ರೇನ್ ಯಾವುದಾದರೂ ಕಾರಣಕ್ಕಾಗಿ ಕಾಣಿಸಿಕೊಳ್ಳಬಹುದು. ಮೈಗ್ರೇನ್ ರೋಗಿಗಳಲ್ಲಿ ಮೆದುಳಿನ ಭಾಗವು ವಾತಾವರಣಕ್ಕೆ ತುಂಬಾ ಸೂಕ್ಷ್ಮವಾಗಿರುವುದು ಮತ್ತು ಸಂವೇದನಾಶೀಲವಾಗಿರುವುದು. ಮೈಗ್ರೇನ್ ಇರುವಂತಹ ಜನರ ಕೌಟುಂಬಿಕ ಇತಿಹಾಸವು ತುಂಬಾ ಸ್ಥಿರವಾಗಿ ಇರುತ್ತದೆ. ಮೈಗ್ರೇನ್ ಗೆ ಸಂಬಂಧಿಸಿದ ಯಾವುದೇ ರೋಗಿಯಾಗಿದ್ದರೂ ಆತನ ಕುಟುಂಬದಲ್ಲಿ ಇಂತಹ ಸಮಸ್ಯೆ ಇರುವಂತಹ ಜನರು ಇರುತ್ತಾರೆ.

Manage Stressed Induced Migraine

ಮೈಗ್ರೇನ್ ಬರಲು ಕೆಲವೊಂದು ಕಾರಣಗಳು

*ಮನೆ ಅಥವಾ ಕಚೇರಿಯಲ್ಲಿ ಒತ್ತಡ
*ನಿದ್ರಾಹೀನತೆ ಮತ್ತು ನಿದ್ರೆಯ ತೊಂದರೆ
*ದೈಹಿಕ ಪರಿಶ್ರಮ ಮಹಿಳೆಯರಲ್ಲಿ ಹಾರ್ಮೋನು ಬದಲಾವಣೆ
*ಆಲ್ಕೋಹಾಲ್ ಅದರಲ್ಲೂ ವೈನ್
*ಗಾಢ ಸುವಾಸನೆಯ ಪರ್ಫ್ಯೂಮ್
*ಔಷಧಿಗಳು-ಒಸಿಪಿ, ವಾಸೋಡಿಲೇಟರ್ ಗಳು

ಹವಾಮಾನ ಬದಲಾವಣೆ

ಟ್ರೈಮೈನ್ ಇರುವಂತಹ ಆಹಾರ ಸೇವನೆ ಮಾಡಿದರೆ ಅದರಿಂದ ಮೈಗ್ರೇನ್ ಕಾಣಿಸಿಕೊಳ್ಳುವುದು. ಇದರಲ್ಲಿ ಮುಖ್ಯವಾಗಿ ಚೀಸ್, ಮೊಸರು, ಬಾಳೆಹಣ್ಣು, ವಿನೇಗರ್, ಬೀನ್ಸ್ ಮತ್ತು ನೆಲಗಡಲೆ
ಎಲ್ಲಾ ರೀಗಿಯ ಮೈಗ್ರೇನ್ ಗೆ ಮಾನಸಿಕ ಒತ್ತಡವು ಪ್ರಮುಖ ಕಾರಣವಾಗಿರುವುದು ಮತ್ತು ಇದು ಮೈಗ್ರೇನ್ ಗೆ ಪ್ರಮುಖ ಕಾರಣವಾಗಿದೆ. ಒತ್ತಡವು ವಿವಿಧ ರೀತಿಯಿಂದ ಬರಬಹುದು. ಇದರಲ್ಲಿ ಮುಖ್ಯವಾಗಿ ಉದ್ಯೋಗದ ಒತ್ತಡ, ಮದುವೆ ಅಥವಾ ಸಂಬಂಧದ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು, ಉದ್ಯೋಗ ಬದಲಾಯಿಸುತ್ತಿರುವುದು ಅಥವಾ ವೈವಾಹಿಕ ಹಾಗೂ ಉದ್ಯೋಗವನ್ನು ಸಮತೋಲನ ಕಾಪಾಡಲು ವಿಫಲವಾಗಿರುವುದು.

ಮೈಗ್ರೇನ್‌ಗೆ ಸಂಬಂಧಿಸಿರುವ ಒತ್ತಡವನ್ನು ಕಡಿಮೆ ಮಾಡಲು ಕೆಲವು ಸಲಹೆಗಳು

*ತಲೆನೋವಿಗೆ ಕಾರಣವಾಗುವಂತಹ ಒತ್ತಡ ಪರಿಸ್ಥಿತಿಯನ್ನು ನೀವು ತಿಳಿಯಲು ಪ್ರಯತ್ನಿಸಿ.
*ಸರಿಯಾಗಿ ರಾತ್ರಿ ಇದ್ರೆ ಮಾಡಿ
*30 ನಿಮಿಷಗಳ ಕಾಲ ನೀವು ನಿರಂತ ವ್ಯಾಯಾಮ ಮಾಡಿ
*ಧ್ಯಾನದಂತಹ ಆರಾಮ ನೀಡುವ ತಂತ್ರ ಬಳಸಿ.
*ಆರೋಗ್ಯಕರ ಆಹಾರ ಸೇವಿಸಿ.
*ಸಮಯವನ್ನು ಸರಿಯಾಗಿ ಹೊಂದಾಣಿಕೆ ಮಾಡಿ.
*ಸಾಮಾಜಿಕ ಹಾಗೂ ಕೌಟುಂಬಿಕ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳಿ.
*ಒತ್ತಡಕ್ಕೆ ಕಾರಣವಾಗುವಂತಹ ವಿಚಾರಗಳನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ.
*ತಲೆನೋವು ಮತ್ತು ಮೈಗ್ರೇನ್ ನ ವ್ಯತ್ಯಾಸ ತಿಳಿಯಿರಿ.

ತಲೆನೊವು

ಹೊಸದಾಗಿ ತೀವ್ರ ತಲೆನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಆಗ ಆ ವ್ಯಕ್ತಿಗೆ ತಲೆನೋವಿಗೆ ಬೇರೆ ರೀತಿಯ ಕಾರಣಗಳು ಇರಬಹುದು. ತಲೆನೋವು ಹಲವಾರು ವರ್ಷಗಳಿಂದ ಪದೇ ಪದೇ ಬರುತ್ತಿದ್ದರೆ ಆಗ ಇದರ ಬಗ್ಗೆ ಗಮನಹರಿಸಬೇಕು. ಹೊಸದಾಗಿ ತೀವ್ರ ತಲೆನೋವು ಕಾಣಿಸುತ್ತಿದ್ದರೆ ಇದಕ್ಕೆ ತುಂಬಾ ಗಂಭೀರ ಕಾರಣಗಳು ಅಥವಾ ಜೀವನಕ್ಕೆ ಹಾನಿ ಮಾಡುವಂತಹ ಕೆಲವೊಂದು ಕಾಯಿಲೆಗಳು ಕಾರಣಗಳು ಆಗಿರಬಹುದು. ಪದೇ ಪದೇ ಕಾಡುವಂತಹ ತಲೆನೋವು ಯಾವತ್ತೂ ಪ್ರಾಣಹಾನಿ ಉಂಟು ಮಾಡುವುದಿಲ್ಲ. ಆದರೆ ಇದು ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರಹುದು ಮತ್ತು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಉಂಟಾಗಬಹುದು.

ಮೈಗ್ರೇನ್

ಮೈಗ್ರೇನ್ ಎನ್ನುವುದು ಸಾಮಾನ್ಯ ಸಮಸ್ಯೆಯಾಗಿರಬಹುದು. ಪ್ರಾಸಂಗಿಕ, ಪುನರಾವರ್ತಿತ ಮತ್ತು ಸಾಮಾನ್ಯವಾದ ತಲೆನೋವಾಗಿರಬಹುದು. ಈ ರೀತಿ ತಲೆನೋವು ಬಂದ ವೇಳೆ ವಾಕರಿಕೆ ಮತ್ತು ವಾಂತಿ ಬರಬಹುದು. ಇದು ಬಾಲ್ಯದಲ್ಲೇ ಆರಂಭವಾಗಬಹುದು, ಆದರೆ ಸಾಮಾನ್ಯವಾಗಿ ಇದು ಪ್ರೌಢವಾಸ್ಥೆಯಲ್ಲಿ ಕಾಣಿಸಿಕೊಳ್ಳುವುದು ಅಥವಾ ಶೇ.80ರಷ್ಟು ರೋಗಿಗಳಲ್ಲಿ ಇದು ಪ್ರೌಢವಾಸ್ಥೆಯಲ್ಲಿ ಕಾಣಿಸಿಕೊಳ್ಳುವುದು. ವಯಸ್ಸಾಗುತ್ತಾ ಹೋದಂತೆ ಇದು ಕಡಿಮೆಯಾಗುತ್ತಾ ಹೋಗುವುದು. ಅದರೆ ಮಹಿಳೆಯರಲ್ಲಿ ಋತುಬಂಧದ ಬಳಿಕ ಇದು ಹೆಚ್ಚಾಗುವುದು. ಟ್ರೈಜೆಮಿನೊವಾಸ್ಕುಲರ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುವಿಕೆ, ಸ್ಥಳೀಯ ನರ ಕಾರ್ಯವಿಧಾನಗಳಿಂದ ಉತ್ಪತ್ತಿಯಾಗುವ ಉರಿಯೂತದ ಪ್ರತಿಕ್ರಿಯಿಂದಾಗಿ ಮೈಗ್ರೇನ್ ತಲೆನೋವು ಕಾಣಿಸಿಕೊಳ್ಳುವುದು. ಪಿಇಟಿ ಸ್ಕ್ಯಾನ್ ಗೆ ಮೈಗ್ರೇನ್ ರೋಗಿಗಳನ್ನು ಒಳಪಡಿಸಿದ ವೇಳೆ ಈ ಅಂಶವು ಪತ್ತೆಯಾಗಿದೆ.

ಎರಡು ವಿಧದ ಮೈಗ್ರೇನ್ ಗಳು

ಕ್ಲಾಸಿಕ್ ಮೈಗ್ರೇನ್

ತಲೆನೋವು ಆರಂಭವಾಗುವ ಮೊದಲು ರೋಗಿಗೆ ಸೆಳವು ಕಾಣಿಸಿಕೊಳ್ಳಬಹುದು. ಈ ಸೆಳೆವು ಸಾಮಾಣ್ಯವಾಗಿ ಬೆಳು ಅಥವಾ ಒರೆಕೋರೆ ಗೆರೆಗಳು ಅಥವಾ ಇತರ ಕೆಲವೊಂದು ನರಸಮಸ್ಯೆಗಳಿಂದ ಬರಬಹುದು. ಬೆಳಗ್ಗೆ ಎದ್ದ ಕೂಡಲೇ ಮೈಗ್ರೇನ್ ನ ಸೆಳವು ಕಾಣಿಸಿಕೊಳ್ಳುವುದು.
ಸೆಳವು ಇಲ್ಲದೆ ಇರುವ ಮೈಗ್ರೇನ್
ತಲೆನೋವು ಕಾಣಿಸಿಕೊಳ್ಳುವ ಮೊದಲು ಯಾವುದೇ ರೀತಿಯ ಸೆಳವು ಇಲ್ಲದೆ ಇರಬಹುದು. ಇದು ಕ್ಲಾಸಿಕ್ ಮೈಗ್ರೇನ್ ಗಿಂತ ಐದು ಪಟ್ಟು ಸಾಮಾನ್ಯವಾದ ಮೈಗ್ರೇನ್ ಆಗಿದೆ.

ಕ್ಲಾಸಿಕ್ ಮತ್ತು ಸಾಮಾನ್ಯ ಮೈಗ್ರೇನ್ ನ ಕೆಲವೊಂದು ವೈಶಿಷ್ಟ್ಯಗಳು

ಎರಡು ರೀತಿಯ ಮೈಗ್ರೇನ್ ಬರುವುದಕ್ಕೆ ಮೊದಲು ನಿಮ್ಮ ಮನಸ್ಥಿತಿ ಬದಲಾಗುವುದು ಮತ್ತು ಹಸಿವಿನಲ್ಲಿ ಬಲದಾವಣೆ ಕಂಡುಬರಬಹುದು.
ಪ್ರಖರ ಬೆಳಕಿಗೆ ಸೂಕ್ಷ್ಮತೆ, ಹೆಚ್ಚು ಶಬ್ಧ ಮತ್ತು ವಾಸನೆಯಿಂದಾಗಿ ತಲೆನೋವು ಹೆಚ್ಚಾಗುತ್ತಲೇ ಹೋಗಬಹುದು.
ಕ್ಲಾಸಿಕ್ ಮೈಗ್ರೇನ್ ಕಾಣಿಸಿಕೊಳ್ಳುವ ರೋಗಿಗಳ ಕುಟುಂಬದಲ್ಲಿ ಇಂತಹ ಸಮಸ್ಯೆಯು ಯಾರಿಗಾದರೂ ಇರಬಹುದು.
ತಿಂಗಳಲ್ಲಿ ಮೂರು ಸಲ ಇಂತಹ ಸಮಸ್ಯೆಯು ಕಾಡುವುದು. ಇದಕ್ಕೆ ಚಿಕಿತ್ಸೆ ನೀಡಿದೆ ಇದ್ದರೆ ಆಗ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ.

ಮೈಗ್ರೇನ್ ಕಾಣಿಸಿಕೊಳ್ಳಲು ಕೆಲವೊಂದು ಕಾರಣಗಳು

ಪಾನೀಯಗಳು-ಆಲ್ಕೋಹಾಲ, ಅದರಲ್ಲೂ ವೈನ್ ಮತ್ತು ಅತಿಯಾಗಿ ಕಾಫಿ ಸೇವನೆ
ಸೂಕ್ಷ್ಮತೆ-ಪ್ರಖರ ಬೆಳಕು ಮತ್ತು ಸೂರ್ಯನ ಬಿಸಿಲು, ಜೋರು ಶಬ್ಧ, ಗಾಢ ವಾಸನೆ ಇತ್ಯಾದಿಗಳು
ನಿದ್ರೆಯ ಬದಲಾವಣೆ-ನಿದ್ರಾಹೀನತೆ, ಪದೇ ಪದೇ ಎಚ್ಚರಿಕೆ ಆಗುವುದರಿಂದಲೂ ಮೈಗ್ರೇನ್ ಬರಬಹುದು.
ಹವಾಮಾನ ಬದಲಾವಣೆ-ಹವಾಮಾನ ಬದಲಾವಣೆ ಅಥವಾ ವಾಯುಭಾರ ಒತ್ತಡವು ಮೈಗ್ರೇನ್ ಗೆ ಕಾರಣವಾಗಬಹುದು.
ಆಹಾರ-ಚೀಸ್, ಚಾಕಲೇಟ್ ಮತ್ತು ಕಾಫಿಯಿಂದ ಮೈಗ್ರೇನ್ ಬರಬಹುದು. ಊಟ ಮಾಡದೆ ಇರುವುದು ಅಥವಾ ಉಪವಾಸದಿಂದಲೂ ಬರಬಹುದು.
ಆಹಾರ ಸಂಯೋಜನೆ-ಆಹಾರಕ್ಕೆ ಬಳಸಿರುವಂತಹ ಸಿಹಿ ಅಥವಾ ಸಂಸ್ಕರಣ

ಮೈಗ್ರೇನ್ ಮತ್ತು ಸಾಮಾನ್ಯ ತಲೆನೋವಿನ ಮಧ್ಯೆ ವ್ಯತ್ಯಾಸ ಕಂಡುಕೊಳ್ಳುವುದು ಹೇಗೆ?

ಮೈಗ್ರೇನ್ ಸಂದರ್ಭದಲ್ಲಿ ತಲೆನೋವು ಪ್ರಾಸಂಗಿಕವಾಗಿ, ಅರ್ಧತಲೆಯಲ್ಲಿ ಕಾಣಿಸಿಕೊಳ್ಳುವುದು, ಮೆದುಸ್ಪರ್ಶದಂತಹ ತಲೆನೋವು ಬರಬಹುದು. ಇದರೊಂದಿಗೆ ನಿಮಗೆ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳಬಹುದು. ಆದರೆ ಸಾಮಾನ್ಯ ತಲೆನೋವು ಒತ್ತಡದಿಂದಾಗಿ ಬರುವುದು ಮತ್ತು ಇದು ತಲೆಯ ಎರಡು ಭಾಗದಲ್ಲಿ ಕಾಣಿಸಿಕೊಳ್ಳುವುದು. ಇದು ತುಂಬಾ ಲಘು ಮತ್ತು ಸೆಳೆತದ ರೀತಿ ಇರುತ್ತದೆ. ಈ ತಲೆನೋವಿನ ವೇಳೆ ವಾಕರಿಕೆ, ವಾಂತಿ ಅಥವಾ ಬೆಳಕು ಅಥವಾ ಶಬ್ಧಕ್ಕೆ ಸೂಕ್ಷ್ಮತೆಯು ಇರದು.
ಕೌಟುಂಬಿಕ ಇತಿಹಾಸವು ಮೈಗ್ರೇನ್ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ. ಸಂಬಂಧಿಗಳಲ್ಲಿ ಎರಡು ಅಥವಾ ಮೂರು ಮಂದಿ ಮೈಗ್ರೇನ್ ಗೆ ತುತ್ತಾಗುವಂತಹ ಸಾಧ್ಯತೆಯು ಹೆಚ್ಚಾಗಿ ಇರುತ್ತದೆ. ಆದರೆ ಸಾಮಾನ್ಯ ತಲೆನೋವಿಗೆ ಕೌಟುಂಬಿಕ ಇತಿಹಾಸವು ಯಾವುದೇ ಸಂಬಂಧವನ್ನು ಹೊಂದಿಲ್ಲ.

ಮೈಗ್ರೇನ್ ಕಾಣಿಸಿಕೊಳ್ಳಲು ಯಾವುದೇ ಕಾರಣಗಳು ಇರುವುದು. ಆದರೆ ಸಾಮಾನ್ಯ ತಲೆನೋವಿಗೆ ಇಂತಹ ಕಾರಣಗಳು ಇರಲ್ಲ.
ಮೈಗ್ರೇನ್ ಗೆ ಸರಿಯಾದ ಚಿಕಿತ್ಸೆ ಬೇಕಾಗಿದೆ ಮತ್ತು ಸಾಮಾನ್ಯ ತಲೆನೋವನ್ನು ಜೀವನಶೈಲಿ ಬದಲಾವಣೆ ಮತ್ತು ನೋವು ನಿವಾರಕದಿಂದ ಸರಪಡಿಸಿಕೊಳ್ಳಬಹುದು.

English summary

Tips To Manage Stressed Induced Migraine

Headache is the most common region for medical attention. Life-threatening headache is relatively uncommon but needs urgent treatment. Migraine is more common in adults than children and women than man. Migraine is not life-threatening but significantly interferes with the patient’s daily routine. In migraine, headache is episodic, recurrent and starts with half of the head, throbbing character and may be associated with nausea and vomiting. The patient is sensitive to bright light and loud sound. In some patient, migraine is activated by specific triggers.
Story first published: Monday, July 22, 2019, 12:55 [IST]
X
Desktop Bottom Promotion