For Quick Alerts
ALLOW NOTIFICATIONS  
For Daily Alerts

ನಿಮಗೆ ಗೊತ್ತೇ? ಮಧ್ಯಾಹ್ನ ಮಲಗಿದರೆ ಸಾಕು ಕ್ಯಾಲೋರಿ ದಹಿಸಬಹುದು!

|

ದೇಹದಲ್ಲಿ ಅತಿಯಾದ ತೂಕ ಇರುವಂತಹ ವ್ಯಕ್ತಿಗಳು ಯಾವಾಗಲೂ ದೇಹದಲ್ಲಿ ಕ್ಯಾಲೋರಿದಹಿಸಬೇಕೆಂದು ಇನ್ನಿಲ್ಲದ ಕಸರತ್ತು ನಡೆಸುತ್ತಾ ಇರುತ್ತಾರೆ. ಯಾಕೆಂದರೆ ಅವರಿಗೆ ಕ್ಯಾಲೋರಿದಹಿಸಿಕೊಂಡು ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು. ಇಂತಹ ಸಮಯದಲ್ಲಿ ದೇಹದ ಕ್ಯಾಲೋರಿದಹಿಸಲು ಜಿಮ್ ಗೆ ಹೋಗುವರು ಅಥವಾ ಮನೆಯಲ್ಲಿ ಇನ್ನಿಲ್ಲದಂತೆ ವ್ಯಾಯಾಮ ಮಾಡುವರು. ಆದರೂ ಕೆಲವರ ದೇಹ ಮಾತ್ರ ಹಾಗೆ ಇರುವುದು. ಇದಕ್ಕೆ ಹಲವಾರು ಕಾರಣಗಳು ಇರಬಹುದು.

ಆದರೆ ನೀವು ಇನ್ನು ಮುಂದೆ ಕ್ಯಾಲೋರಿದಹಿಸಿಕೊಳ್ಳಲು ವ್ಯಾಯಾಮ ಮಾಡಬೇಕಾಗಿಲ್ಲ. ಕೇವಲ ನಿದ್ರೆ ಮಾಡಿದರೆ ಸಾಕು. ಇದನ್ನು ಕೇಳಿ ನಿಮಗೆ ಅಚ್ಚರಿ ಆಗಿರಬಹುದು. ಆದರೆ ಇದು ನಿಜ. ನೀವು ನಿದ್ರೆ ಮಾಡಿದರೆ ಆಗ ಕ್ಯಾಲೋರಿದಹಿಸಲ್ಪಡುವುದು. ಇದಕ್ಕಾಗಿ ನೀವು ಮಧ್ಯಾಹ್ನ ಅಥವಾ ಮುಸ್ಸಂಜೆ ವೇಳೆಯಲ್ಲಿ ಮಲಗಬೇಕು. ಇದು ಬಗ್ಗೆ ನೀವು ಈ ಲೇಖನದಲ್ಲಿ ಮುಂದೆ ತಿಳಿಯುತ್ತಾ ಹೋಗಿ.

calories

ಇದು ಹೇಗೆ ಸಾಧ್ಯ?

ದೇಹದ ಒಳಗಿನ ಗಡಿಯಾರವನ್ನು ನೋಡಿಕೊಳ್ಳುವುದು ಸಿರ್ಕಾಡಿಯನ್ ರಿದಮ್ ಎನ್ನುವುದು. ಇದು ನಿಮಗೆ ಯಾವಾಗ ಹಸಿವಾಗಿದೆ ಅಥವಾ ನಿಮಗೆ ಯಾವಾಗ ನಿದ್ರೆ ಮಾಡಬೇಕು ಅಥವಾ ಬಳಲಿಕೆ ಬಂದಿದೆಯಾ ಎಂದು ಹೇಳುವುದು. ಇದೇ ರೀತಿಯಾಗಿ ನಮ್ಮ ದೇಹದಲ್ಲಿ ಇರುವಂತಹ ಗಡಿಯಾರವು ದೇಹದಲ್ಲಿನ ಕ್ಯಾಲೋರಿಯಾವಾಗ ದಹಿಸಬೇಕು ಎಂದು ನಿರ್ಧಾರ ಮಾಡುತ್ತದೆ. ನೀವು ವಿಶ್ರಾಂತಿ ಮಾಡುತ್ತಲಿರಲಿ ಅಥವಾ ವ್ಯಾಯಾಮ ಮಾಡುತ್ತಲಿರಲಿ ಅದು ತನ್ನ ಸಮಯಕ್ಕೆ ಅನುಗುಣವಾಗಿ ಕ್ಯಾಲೋರಿದಹಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ.

Most Read: ದೇಹದ ತೂಕ ಹೆಚ್ಚಾಗಬೇಕೆ? ಇಂತಹ ಆಹಾರಗಳನ್ನು ಸೇವಿಸಿ

ಅಧ್ಯಯನ

ಕರೆಂಟ್ ಬಯೋಲಜಿಯಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನದಲ್ಲಿ ಕಂಡುಕೊಂಡಿರುವ ವಿಚಾರವೆಂದರೆ ನಾವು ಮಧ್ಯಾಹ್ನ ವೇಳೆ ಮಲಗಿದರೆ ಅಥವಾ ಮುಸ್ಸಂಜೆ ವೇಳೆ ಮಲಗಿದರೆ ಆಗ ನಮ್ಮ ದೇಹವು ಶೇ.10ರಷ್ಟು ಹೆಚ್ಚು ಕ್ಯಾಲೋರಿದಹಿಸುವುದು. ಇದು ಬೆಳಗ್ಗಿನ ಅವಧಿಗಿಂತ ಹೆಚ್ಚಾಗಿರುವುದು. ಇದರಿಂದ ಇನ್ನು ಮುಂದೆ ಮಧ್ಯಾಹ್ನ ವೇಳೆ ಮಲಗುವಾಗ ನಾಚಿಕೆ ಪಡಬೇಡಿ.

ಸಿರ್ಕಾಡಿಯನ್ ರಿದಮ್ ಎನ್ನುವುದು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಯಾವ ರೀತಿಯಾಗಿ ನಿಯಂತ್ರಿಸುವುದು ಎಂದು ಕೂಡ ಈ ಅಧ್ಯಯನವು ಕಂಡುಕೊಂಡಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಅಥವಾ ಬೇರೆ ಕಾರಣಗಳಿಂದಾಗಿ ಹಗಲಿನಲ್ಲಿ ಮಲಗುವವರ ಕಡೆ ಕೂಡ ಈ ಅಧ್ಯಯನವು ಗಮನಹರಿಸಿದೆ. ಇಂತಹ ವ್ಯಕ್ತಿಗಳು ರಾತ್ರಿ ಮಲಗುವ ವ್ಯಕ್ತಿಗಳಿಗಿಂತ ಹೆಚ್ಚಿನ ತೂಕ ಪಡೆಯುವರು ಎಂದು ಅಧ್ಯಯನಗಳು ಹೇಳಿವೆ.

ಆಹಾರದ ಅಭ್ಯಾಸ, ದೈಹಿಕ ಚಟುವಟಿಕೆ ಮತ್ತು ನಿದ್ರೆಯ ಕ್ರಮವನ್ನು ಹೊರತಾಗಿಯು ಚಯಾಪಚಯ ಕ್ರಿಯೆ ಮೇಲೆ ಯಾವ ರೀತಿಯ ಪರಿಣಾಮವಾಗುವುದು ಎಂದು ಈ ಅಧ್ಯಯನವು ಹೇಳಿದೆ. ಈ ಅಧ್ಯಯನವು ಏಳು ಮಂದಿಯ ಮೇಲೆ ಈ ಸಂಶೋಧನೆಯನ್ನು ನಡೆಸಿದೆ. ಅವರಿಗೆ ಯಾವುದೇ ಗಡಿಯಾರ ಮತ್ತು ಕಿಟಕಿಗಳು ಇಲ್ಲದೆ ಇರುವಂತಹ ಪ್ರಯೋಗಾಲಯದಲ್ಲಿ ಒಂದು ತಿಂಗಳ ಕಾಲ ಕುಳ್ಳಿರಿಸಿದೆ. ಇವರಿಗೆ ಯಾವುದೇ ಇಂಟರ್ನೆಟ್, ಮೊಬೈಲ್ ಸೌಲಭ್ಯವು ಇರಲಿಲ್ಲ. ಯಾವಾಗ ಊಟ ಮಾಡಬೇಕು, ನಿದ್ರೆ ಮಾಡಬೇಕು ಮತ್ತು ಎದ್ದೇಳಬೇಕು ಎಂದು ಇವರಿಗೆ ವೇಳಾಪಟ್ಟಿ ನೀಡಲಾಗಿತ್ತು.

ಹೆಚ್ಚಿನ ಜನರು ರಾತ್ರಿಯಾಗುವ ನಾಲ್ಕು ಗಂಟೆಗೆ ಮೊದಲೇ ಮಲಗುತ್ತಲಿದ್ದರು. ಇದರಿಂದಾಗಿ ಆತ ವ್ಯಕ್ತಿಯು ವೆಸ್ಟ್ವರ್ಡ್ ನಲ್ಲಿ ವಾರದಲ್ಲಿ ಪ್ರಯಾಣಿಸುತ್ತಾ ಇರುವಂತೆ ಭಾವನೆ ಆಗುತ್ತಲಿತ್ತು. ಹೊರ ಜಗತ್ತಿನ ಯಾವುದೇ ಪ್ರಭಾವವಿಲ್ಲದೆ ದೇಹವು ತನ್ನದೇ ಆಗಿರುವಂತಹ ಸಮಯವನ್ನು ನಿಗದಿ ಮಾಡಿಕೊಂಡಿತ್ತು. ಇದರಿಂದಾಗಿ ಸಂಶೋಧಕರಿಗೆ ದಿನದ ವಿವಿಧ ಸಮಯದಲ್ಲಿ ಚಯಾಪಚಯ ಕ್ರಿಯೆಯು ಹೇಗೆ ಇರುತ್ತದೆ ಎಂದು ತಿಳಿಯಲು ಸಾಧ್ಯವಾಯಿತು.

Most Read: ಕ್ಯಾಲೋರಿ ಕರಗಿಸಲು ಅಕ್ಕಿ ತೆಂಗಿನೆಣ್ಣೆಯ ನೈಸರ್ಗಿಕ ರೆಸಿಪಿ

ಫಲಿತಾಂಶ

ಈ ಸಂಶೋಧನೆಯಲ್ಲಿ ಭಾಗಿಯಾದವರು ರಾತ್ರಿ ವೇಳೆ ಹೆಚ್ಚು ಮಲಗಿದಾಗ ತುಂಬಾ ಕಡಿಮೆ ಕ್ಯಾಲೋರಿದಹಿಸಿದರು. ಅದೇ ಮಧ್ಯಾಹ್ನ ವೇಳೆ ಮಲಗಿದಾಗ ಹೆಚ್ಚಿನ ಕ್ಯಾಲೋರಿದಹಿಸಿದರು. ರಾತ್ರಿ ಮಲಗುವ ವೇಳೆ ದೇಹದ ಉಷ್ಣತೆಯು ಕಡಿಮೆಯಾಗುವ ಪರಿಣಾಮವಾಗಿ ಕ್ಯಾಲೋರಿಕಡಿಮೆ ದಹಿಸಲ್ಪಡುವುದು.

ನಿರ್ಣಯ

ಈ ಅಧ್ಯಯನವು ತುಂಬಾ ಸಣ್ಣದಾಗಿರಬಹುದು. ಆದರೆ ಇದು ದೇಹದ ಸಿರ್ಕಾಡಿಯನ್ ರಿದಮ್ ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಾಬೀತು ಮಾಡಿದೆ. ಸಾಮಾನ್ಯ ನಿದ್ರೆಯ ವೇಳಾಪಟ್ಟಿಯನ್ನು ಹಾಕಿಕೊಳ್ಳುವುದು ಆರೋಗ್ಯ ಮತ್ತು ತೂಕ ಕಳೆದುಕೊಳ್ಳುವ ದೃಷ್ಟಿಯಿಂದ ಅತೀ ಅಗತ್ಯವಾಗಿರುವುದು.

English summary

This is the time of the day when you burn most calories

After reading the headline, many of you may have rolled your eyes. Is it even a question to ask? We all think we burn the maximum calories during our workout session. Right? The time we burn the maximum calories is not the time when we workout hard in the gym but when we sleep in the afternoon or early evening.
X
Desktop Bottom Promotion