For Quick Alerts
ALLOW NOTIFICATIONS  
For Daily Alerts

ಮೂವತ್ತು ವರ್ಷ ದಾಟಿದ ಬಳಿಕ ಮಹಿಳೆಯರು ಸೇವಿಸಬೇಕಾದ 4 ಆಹಾರಗಳು

|

ವಯಸ್ಸಾಗುತ್ತಾ ಹೋದಂತೆ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತಾ ಹೋಗುವುದು. ಇದರಲ್ಲಿ ಮುಖ್ಯವಾಗಿ ನಮ್ಮ ಜೀರ್ಣಕ್ರಿಯೆ ವ್ಯವಸ್ಥೆಯು ತುಂಬಾ ನಿಧಾನವಾಗುವುದು. ಹೀಗಾಗಿ ನಾವು ಆಹಾರ ಕ್ರಮದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಆಹಾರ ಕ್ರಮವು ಸರಿಯಾಗಿದ್ದರೆ ಆಗ ವಯಸ್ಸಾಗುತ್ತಾ ಹೋದಂತೆ ಆರೋಗ್ಯ ಕಾಪಾಡಿಕೊಳ್ಳಬಹುದು. ಅದರಲ್ಲೂ ಮಹಿಳೆಯರಲ್ಲಿ ವಯಸ್ಸಾಗುತ್ತಾ ಹೋದಂತೆ ಹಾರ್ಮೋನುಗಳಲ್ಲಿ ವ್ಯತ್ಯಯ ಕಂಡುಬರುವುದು. ಇದು ದೇಹದಲ್ಲಿ ನೆರಿಗೆ, ಗೆರೆಗಳು, ಚರ್ಮ ಜೋತು ಬೀಳುವುದು ಮುಂತಾದ ಸಮಸ್ಯೆಗಳನ್ನು ಉಂಟು ಮಾಡುವುದು. ಹೀಗಾಗಿ ಮಹಿಳೆಯರು 30 ದಾಟಿದ ಬಳಿಕ ತಮ್ಮ ಆಹಾರ ಕ್ರಮದ ಬಗ್ಗೆ ಎಚ್ಚರಿಕೆ ವಹಿಸಬೇಕು. ವಯಸ್ಸಾಗುತ್ತಾ ಸಾಗಿದಂತೆ ದೇಹ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿರುವುದು.

ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಎರಡು ಪಟ್ಟು ಹೆಚ್ಚಿನ ಶ್ರಮ ವಹಿಸಬೇಕು. ಯೌವನದಲ್ಲಿ ನಾವು ಏನೇ ತಿಂದರೂ ಅದನ್ನು ದೇಹವು ಸರಿಯಾಗಿ ಜೀರ್ಣಿಸಿಕೊಳ್ಳುತ್ತಿತ್ತು. ಆದರೆ ಯೌವನ ದಾಟಿದ ಬಳಿಕ ನಮ್ಮ ದೇಹವು ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ತುಂಬಾ ಕಷ್ಟಪಡಬೇಕಾಗುತ್ತದೆ. ಈ ಕಾರಣದಿಂದ ನಾವು ಯಾವುದನ್ನು ತಿನ್ನಬೇಕು ಮತ್ತು ಯಾವುದನ್ನು ತಿನ್ನಬಾರದು ಎಂದು ತಿಳಿದುಕೊಳ್ಳುವುದು ಅತೀ ಅಗತ್ಯ. 30ರ ಬಳಿಕ ದೇಹದಲ್ಲಿ ಬದಲಾವಣೆಯಿಂದಾಗಿ ತೂಕದಲ್ಲಿ ವ್ಯತ್ಯಾಸವಾಗುವುದು. ಹೀಗಾಗಿ ತೂಕವನ್ನು ಸಮತೋಲನದಲ್ಲಿ ಇಡುವುದು ಕೂಡ ಮುಖ್ಯ. ಆದರೆ ನೀವು ತಿನ್ನುವಂತಹ ಕೆಲವೊಂದು ಆಹಾರಗಳು ಮತ್ತು ಕಡೆಗಣಿಸುವಂತಹ ಕೆಲವು ಆಹಾರದಿಂದ ಬರುಂತಹ ಕೆಲವು ಕಾಯಿಲೆಗಳನ್ನು ತಡೆಯಬಹುದು. ಮಹಿಳೆಯರು ತಮ್ಮ 30ರ ಹರೆಯದಲ್ಲಿ ಸೇವಿಸಬೇಕಾದ ನಾಲ್ಕು ಆಹಾರಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಇದನ್ನು ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳಿ....

ಮೀನು

ಮೀನು

ವಯಸ್ಸಾಗುತ್ತಾ ಸಾಗಿದಂತೆ ಗಂಟು ನೋವಿನಂತಹ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುವುದು. 30ರ ಹರೆಯದ ಬಳಿಕ ಇದು ಪ್ರತಿಯೊಬ್ಬರನ್ನು ಕಾಡುವಂತಹ ಸಮಸ್ಯೆ ಅಲ್ಲದೆ ಇರಬಹುದು. ಆದರೆ ಮಹಿಳೆಯರು ಹೆಚ್ಚಾಗಿ ಗಂಟು ನೋವಿನ ಸಮಸ್ಯೆಗೆ ಸಿಲುಕುವರು. ಇಂಗ್ಲೆಂಡಿನಲ್ಲಿ ನಡೆಸಿರುವಂತಹ ಒಂದು ಅಧ್ಯಯನದ ಪ್ರಕಾರ ಮೀನು ಸೇವನೆ ಮಾಡಿದರೆ ಅದರಿಂದ ಕಾರ್ಟಿಲೆಜ್ ತಿನ್ನುವ ಕಿಣ್ವಗಳನ್ನು ಇದು ತಗ್ಗಿಸುವುದು ಮತ್ತು ಮೂಳೆಗಳ ಆರೋಗ್ಯವು ಸುಧಾರಣೆ ಆಗುವುದು. ಮೀನು ತಿನ್ನುವುದರಿಂದಾಗಿ ಕಾರ್ಟಿಲೆಜ್ ಅವನತಿ ತಡೆಯಬಹುದು ಮತ್ತು ಉರಿಯೂತ ಕಡಿಮೆ ಮಾಡಿಕೊಳ್ಳಬಹುದು. ಇದರಿಂದಾಗಿ ಮೂಳೆಗಳು ತುಂಬಾ ಆರೋಗ್ಯವಾಗಿ ಇರುವುದು.

Most Read:ಮೈಗ್ರೇನ್ ನಿಂದ ನೈಸರ್ಗಿಕ ಶಮನ ಪಡೆಯಲು ಬಾದಾಮಿ ಸೇವಿಸಿ ಸಾಕು!

ಬೀಜಗಳು

ಬೀಜಗಳು

30ರ ಹರೆಯದಲ್ಲಿ ವೈಯಕ್ತಿಕ ಹಾಗೂ ವೃತ್ತಿ ಜೀವನ ಎರಡು ನಿಭಾಯಿಸುವುದು ತುಂಬಾ ಕಠಿಣ ಕೆಲಸವಾಗಿರುವುದು. ಕೆಲವರಿಗೆ ಇದು ಹೊಸ ಕುಟುಂಬದ ಆರಂಭವಾಗಿದ್ದರೆ, ಇನ್ನು ಕೆಲವರು ಈ ವಯಸ್ಸಿನಲ್ಲಿ ವೃತ್ತಿಯಲ್ಲಿ ಹೊಸ ಶಿಖರಕ್ಕೆ ಏರುವಂತಹ ಸಮಯವಾಗಿರುವುದು. ಇದೆಲ್ಲವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಲು ಸಾಕಷ್ಟು ಶಕ್ತಿಯು ಬೇಕಾಗುವುದು. ಬೀಜಗಳನ್ನು ತಿನ್ನುವುದರಿಂದ ನಿಮಗೆ ಶಕ್ತಿ ದೊರಕುವುದು. ಬೀಜಗಳಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ ಮತ್ತು ಇದು ಪ್ರತಿರೋಧಕ ವ್ಯವಸ್ಥೆಯನ್ನು ಆರೋಗ್ಯ ಹಾಗೂ ಬಲಿಷ್ಠವಾಗಿ ಇಡುವುದು. ಬೀಜಗಳಲ್ಲಿ ವಿಟಮಿನ್ ಬಿ ಕೂಡ ಸಮೃದ್ಧವಾಗಿದ್ದು, ಇದು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡಲು ನೆರವಾಗುವುದು. ಇದರಿಂದ ಹೃದಯದ ಕಾಯಿಲೆಗಳು ಬೆಳೆಯುವಂತಹ ಸಾಧ್ಯತೆಯು ಕಡಿಮೆ ಆಗುವುದು.

ಪ್ರೋಟೀನ್

ಪ್ರೋಟೀನ್

ಚಯಾಪಚಯ ಕ್ರಿಯೆಯಲ್ಲಿ ವ್ಯತ್ಯಯ ಆಗುವುದರಿಂದ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುವುದು. ಇದರಿಂದ ದೇಹದ ಮೇಲೆ ಅನಗತ್ಯ ಒತ್ತಡವು ಬೀಳುವುದು. ಚಯಾಪಚಯ ಕ್ರಿಯೆ ಎಂದರೆ ನಾವು ಸೇವಿಸುವಂತಹ ಆಹಾರದಲ್ಲಿ ಇರುವಂತಹ ಕ್ಯಾಲರಿಗಳನ್ನು ದೇಹವು ಉಪಯೋಗಿಸಿಕೊಂಡು ಅದನ್ನು ಶಕ್ತಿಯಾಗಿ ಪರಿವರ್ತನೆ ಮಾಡುವುದು. 30ರ ಹರೆಯದ ಬಳಿಕ ಕ್ಯಾಲರಿ ದಹಿಸಲು ತುಂಬಾ ಕಠಿಣವಾಗುವುದು. ಇದರಿಂದ 30ರ ಹರೆಯದ ಬಳಿಕ ಮಹಿಳೆಯರು ಪ್ರೋಟೀನ್ ಅಧಿಕವಾಗಿರುವಂತಹ ಆಹಾರ ಸೇವನೆ ಮಾಡಬೇಕು. ತೆಳು ಮಾಂಸ ಮತ್ತು ಮೀನು ಸೇವನೆ ಮಾಡಿದರೆ ಅದರಿಂದ ಚಯಾಪಚಯಕ್ಕೆ ನೆರವಾಗುವುದು ಮತ್ತು ಶಕ್ತಿಯು ಸಿಗುವುದು. ಇದರಿಂದ ಹಸಿವು ಕಡಿಮೆ ಆಗುವುದು ಮತ್ತು ಅತಿಯಾಗಿ ತಿನ್ನುವುದನ್ನು ಇದು ಕಡಿಮೆ ಮಾಡುವುದು. ಅಧಿಕ ಪ್ರೋಟೀನ್ ಸೇವನೆ ಮಾಡಿದರೆ ಅದರಿಂದ ಚಯಾಪಚಯ ಕ್ರಿಯೆಯು ಸರಿಯಾದ ರೀತಿಯಲ್ಲಿರುವುದು ಮತ್ತು ಇದರಿಂದ ನೀವು ಆರೋಗ್ಯಕರ ತೂಕ ಕಾಪಾಡಿಕೊಳ್ಳಬಹುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ಸಮತೋಲನದಲ್ಲಿ ಇರುವುದು.

Most Read:ಮಹಿಳೆಯರು ವಯಸ್ಸಾದಂತೆ ಕಾಣುವುದನ್ನು ತಡೆಯುವ ಆಹಾರಗಳು

ಬೇಳೆಕಾಳುಗಳು

ಬೇಳೆಕಾಳುಗಳು

30ರ ವಯಸ್ಸು ದಾಟಿದ ಕೂಡಲೇ ಮುಖದಲ್ಲಿ ನೆರಿಗೆಗಳು ಕಾಣಲು ಆರಂಭಿಸುವುದು. ಆಸ್ಟ್ರೇಲಿಯಾದ ವಿಜ್ಞಾನಿಗಳು ನಡೆಸಿರುವಂತಹ ಅಧ್ಯಯನವೊಂದರ ಪ್ರಕಾರ ಕಾಳುಗಳನ್ನು ತಿನ್ನುವಂತಹ ಮಹಿಳೆಯರ ಮುಖದಲ್ಲಿ ನೆರಿಗೆ ಮೂಡುವುದು ಕಡಿಮೆ ಆಗುವುದು ಮತ್ತು ಅವರಿಗೆ ಬಿಸಿಲಿಗೆ ಸಂಬಂಧಿಸಿದ ಯಾವುದೇ ರೀತಿಯ ಹಾನಿಯೂ ಆಗದು. ಕಾಳುಗಳಲ್ಲಿ ಅತ್ಯಧಿಕ ಮಟ್ಟದ ಆ್ಯಂಟಿ ಆಕ್ಸಿಡೆಂಟ್ ಇದೆ ಮತ್ತು ಇದು ಬಿಸಿಲಿನಿಂದ ಮತ್ತು ಕಲುಷಿತ ವಾತಾವರಣದಿಂದ ಆಗುವ ಹಾನಿಯಿಂದ ತಡೆಯುವುದು. ಆರೋಗ್ಯಕರ ಚರ್ಮಕ್ಕೆ ಇದು ನೆರವಾಗುವುದು ಮತ್ತು ಚರ್ಮದ ರಕ್ಷಣೆ ಮಾಡುವುದು.

English summary

This 4 Foods to Eat for Women in their 30s

As we age, our body also ages and it becomes harder to maintain a healthy mind and body. So we have to work twice as hard to maintain our health. In order to do that you must keep a track on what you should or shouldn’t be eating. Your youth allows you to try new things and be free but as it fades away slowly, you should start taking care of yourself more than you ever did.You won’t feel any different in your 20s but in your 30s, you will start noticing some inexplicable changes in your body which will make it difficult for you to maintain a healthy weight or stay healthy.
X
Desktop Bottom Promotion