For Quick Alerts
ALLOW NOTIFICATIONS  
For Daily Alerts

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಪವರ್‌ಫುಲ್ ತರಕಾರಿಗಳು

|

ಮಧುಮೇಹ ಇಂದಿನ ದಿನಗಳಲ್ಲಿ ಜೀವನಕ್ರಮವನ್ನು ಬದಲಿಸಿಕೊಳ್ಳುವಷ್ಟು ಮಾತ್ರವೇ ಅಪಾಯಕಾರಿಯಾಗಿ ಪರಿಗಣಿಸಲ್ಪಡುತ್ತಿದೆ. ಇಂದಿನ ದಿನಗಳಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬರು ಮಧುಮೇಹಿಗಳಾಗಿದ್ದಾರೆ. ಹಾಗಾಗಿ ಮಧುಮೇಹ ಆವರಿಸುವ ಸಾಧ್ಯತೆಯನ್ನು ತಡವಾಗಿಸಲು ನಿಮ್ಮ ನಿತ್ಯದ ಚಟುವಟಿಕೆಗಳಲ್ಲಿ ಕೆಲವಾರು ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದನ್ನು ಸಲಹೆ ಮಾಡಲಾಗುತ್ತದೆ. ಮಧುಮೇಹ ಆವರಿಸಿದ ಬಳಿಕ ನಿಧಾನವಾಗಿ ದೇಹದ ಇತರ ಅಂಗಗಳ ಮೇಲೆ ಪ್ರಭಾವ ಬೀರಲಾರಂಭಿಸುತ್ತದೆ. ಒಂದು ವೇಳೆ ಸೂಕ್ತ ವ್ಯಾಯಾಮ ಹಾಗೂ ಔಷಧಿಗಳನ್ನು ನಿಯಮಿತವಾಗಿ ಅನುಸರಿಸದೇ ಇದ್ದಲ್ಲಿ, ಮಧುಮೇಹ ಇತರ ಗಂಭೀರ ಕಾಯಿಲೆಗಳಿಗೆ ಮುಕ್ತ ಆಹ್ವಾನ ನೀಡುತ್ತದೆ. ಇವುಗಳಲ್ಲಿ ಪ್ರಮುಖವಾದವು ಎಂದರೆ...

Vegetables

ಹೃದಯಸಂಬಂಧಿ ಕಾಯಿಲೆಗಳು

*ಅಧಿಕ ಹೃದಯದೊತ್ತಡ

*ಕಣ್ಣಿನ ಪಾಪೆ ಘಾಸಿಗೊಳ್ಳುವುದು (ಪರಿಣಾಮವಾಗಿ ಅಂಧತ್ವ)

*ಮೂತ್ರಪಿಂಡಗಳ ವೈಫಲ್ಯ (ಡಯಾಲಿಸಿಸ್)

ನಿಮ್ಮ ನಿತ್ಯದ ಜೀವನಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸುವ ಮೂಲಕ ಈ ತೊಂದರೆಗಳು ಎದುರಾಗುವ ಸಾಧ್ಯತೆಯನ್ನು ಕಡಿಮೆಯಾಗಿಸಬಹುದು. ಮುಖ್ಯವಾಗಿ ಮಧುಮೇಹಿಗಳು ಪ್ಯಾಕೆಟ್ಟುಗಳಲ್ಲಿ ಸಿಗುವ ಸಿದ್ಧ ಆಹಾರಗಳನ್ನು ವರ್ಜಿಸಬೇಕಾಗುತ್ತದೆ ಹಾಗೂ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಸೇವಿಸುವುದನ್ನು ನಿಲ್ಲಿಸಬೇಕಾಗುತ್ತದೆ. ಸಂಸ್ಕರಿತ ಆಹಾರಗಳು ಹೆಚ್ಚು ಕಾಲ ಕೆಡದೇ ಇರುತ್ತವೆ ಎಂಬ ಒಳ್ಳೆಯ ಗುಣವನ್ನು ಬಿಟ್ಟರೆ ಉಳಿದಂತೆ ಆರೋಗ್ಯಕ್ಕೆ ಇವು ಹಾನಿಕಾರಕವೇ ಹೌದು. ಹಾಗಾಗಿ ಉತ್ತಮ ಆರೋಗ್ಯವನ್ನು ಉಳಿಸಿಕೊಳ್ಳಲು ಸಾಕಷ್ಟು ಸತ್ವಯುತ ಹಾಗೂ ನಾರುಸಹಿತ ಆಹಾರಗಳನ್ನು ಸೇವಿಸಬೇಕು. ಹಸಿ ತರಕಾರಿಗಳು, ಹಸಿರು ಸೊಪ್ಪುಗಳು ನಿಮ್ಮ ನಿತ್ಯದ ಆಹಾರದಲ್ಲಿ ಒಳಗೊಳ್ಳಬೇಕು ಹಾಗೂ ಒಟ್ಟು ದಿನದ ಆಹಾರ ಸೇವನೆಯಿಂದ ಆರೋಗ್ಯಕ್ಕೆ ಅಗತ್ಯವಿರುವಷ್ಟು ಪೋಷಕಾಂಶಗಳು ಸಮತೋಲನದ ಪ್ರಮಾಣದಲ್ಲಿ ದೊರಕುವಂತಾಗಬೇಕು. ಉತ್ತಮ ಆರೋಗ್ಯಕ್ಕಾಗಿ ಈ ಕೆಳಗಿನ ಆಹಾರಗಳು ಸೇವನೆಗೆ ಉತ್ತಮವಾಗಿದ್ದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುವ ಮೂಲಕ ಜೀವನವನ್ನು ಸುಗಮಗೊಳಿಸುತ್ತವೆ.

ಮೊಟ್ಟೆಯ ಬಿಳಿಭಾಗ

*ಚಿಯಾ ಬೀಜಗಳು

*ಮೊಸರು

*ಅಕ್ರೋಟು

*ಬಾದಾಮಿ

*ಅಗಸೆ ಬೀಜಗಳು (Flaxseeds)

ನಿಮ್ಮ ಪ್ರಮುಖ ಊಟದಲ್ಲಿ ಸಾಕಷ್ಟು ಪ್ರೋಟೀನು ಹೆಚ್ಚುವರಿ ಅಂಶಗಳನ್ನು ಸೇರಿಸಿಕೊಳ್ಳುವಂತೆ ಹಲವರು ಸಲಹೆ ಮಾಡುತ್ತಾರೆ. ಆದರೆ ವೈದ್ಯರ ಅಥವಾ ಆಹಾರತಜ್ಞರ ಸಲಹೆಯ ಪ್ರಕಾರ ಇವು ನಿಗದಿತ ಪ್ರಮಾಣದಲ್ಲಿಯೇ ಇರಬೇಕು. ಇಂತಹ ಹೆಚ್ಚುವರಿ ಅಂಶಗಳನ್ನೊಳಗೊಂಡ ಈ ಐದು ತರಕಾರಿಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಸಿಕೊಳ್ಳಲು ನೆರವಾಗುತ್ತವೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ...

Most Read: ಎಚ್ಚರ: ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತಿರುವ ಲಕ್ಷಣಗಳಿವು!

ಗಡ್ಡೆಗಳು - ಕ್ಯಾರೆಟ್

ಕ್ಯಾರೆಟ್ ಅನ್ನು ಹಸಿಯಾಗಿಯೂ ಬೇಯಿಸಿಯೂ ಹುರಿದೂ ಸೇವಿಸಬಹುದು. ಸಾಲಾಡ್ ರೂಪದಲ್ಲಿ ಅಥವ ಬೇಯಿಸಿದ ತರಕಾರಿಯಾಗಿ ಸೇವಿಸಲು ಕ್ಯಾರೆಟ್ ಉತ್ತಮ ಆಯ್ಕೆಯಾಗಿದೆ. ಅಥವಾ ಹೆಚ್ಚುವರಿ ಆಹಾರವಾಗಿ ಬೇಯಿಸಿ ಸೂಪ್ ರೂಪದಲ್ಲಿಯೂ ಸೇವಿಸಬಹುದು. ಮಧುಮೇಹಿಗಳು ಸಹಾ ಕ್ಯಾರೆಟ್ ಸೇವಿಸುವಂತೆ ಸಲಹೆ ಮಾಡಲಾಗುತ್ತದೆ. ಇವುಗಳಲ್ಲಿರುವ ವಿಟಮಿನ್ ಎ ಮತ್ತು ಇತರ ಪ್ರಮುಖ ಪೋಷಕಾಂಶಗಳು ಮತ್ತು ಖನಿಜಗಳು ವಿಶೇಷವಾಗಿ ಕಣ್ಣುಗಳಿಗೆ ಒಳ್ಳೆಯದು. ಇದೊಂದು ನೆಲದಡಿ ಬೆಳೆಯುವ ಗಡ್ಡೆಯಾಗಿರುವ ಕಾರಣ ಇದರಲ್ಲಿ ನಾರಿನಂಶವೂ ಹೆಚ್ಚೇ ಇರುತ್ತದೆ.

ಸೌತೆಯ ಜಾತಿಯ ತರಕಾರಿಗಳು : ಎಳೆಸೌತೆ

ಬೇಸಿಗೆಯಲ್ಲಿ ಸೇವಿಸಲು ಅತ್ಯುತ್ತಮವಾದ ಎಳೆ ಸೌತೆಕಾಯಿಯಲ್ಲಿ ಬಹುತೇಕ ಅಂಶ ನೀರೇ ಆಗಿರುವ ಕಾರಣ ದೇಹಕ್ಕೆ ಆರ್ದ್ರತೆಯನ್ನು ಒದಗಿಸಿ ನಿರ್ಜಲೀಕರಣದಿಂದ ತಪ್ಪಿಸುತ್ತದೆ ಹಾಗೂ ಇದರಲ್ಲಿ ಇತರ ಪೋಷಕಾಂಶಗಳೂ ಹೆಚ್ಚಿನ ಪ್ರಮಾಣದಲ್ಲಿವೆ. ಸೌತೆಯ ಸೇವನೆಯಿಂದ ರಕ್ತದಲ್ಲಿ ಇನ್ಸುಲಿನ್ ಮಟ್ಟ ಸಮತೋಲನದಲ್ಲಿರುತ್ತದೆ ಹಾಗೂ ಸಕ್ಕರೆಯ ಮಟ್ಟವನ್ನು ಎಂದಿಗೂ ಮೇಲೇರಲು ಬಿಡುವುದಿಲ್ಲ. ಸೌತೆಯಲ್ಲಿ ಹೆಚ್ಚಿನ ಪ್ರಮಾಣದ ಕರಗುವ ನಾರು ಇದ್ದು ರಕ್ತಪರಿಚಲನೆಗೆ ಹೆಚ್ಚಿನ ನೆರವು ನೀಡುತ್ತದೆ. ಸೌತೆಯನ್ನು ಹಸಿಯಾಗಿಯೂ, ಸಾಲಾಡ್ ರೂಪದಲ್ಲಿಯೂ ಅಥವಾ ಚಿಕ್ಕದಾಗಿ ಕೊಚ್ಚಿ ಮೊಸರಿನೊಂದಿಗೂ ಸೇವಿಸಬಹುದು.

Vegetables

ಬೆಂಡೆಕಾಯಿ

ಮಾರುಕಟ್ಟೆಯಲ್ಲಿ ಭಿಂಡಿ ಎಂದು ಹೆಚ್ಚು ಜನಪ್ರಿಯವಾಗಿರುವ ಬೆಂಡೆಕಾಯಿಯನ್ನು ಭಾರತದಲ್ಲಿ ಸಾಮಾನ್ಯವಾಗಿ ತರಕಾರಿಯ ರೂಪದಲ್ಲಿಯೇ ಸೇವಿಸಲಾಗುತ್ತದೆ. ಬೆಂಡೆಯನ್ನು ಬೇಯಿಸಿ, ಹುರಿದು ಅಥವಾ ಕೆಲವೊಮ್ಮೆ ಹೆಚ್ಚುವರಿ ಆಹಾರದ ಅಗತ್ಯತೆಯನ್ನು ಪೂರೈಸಲು ಸೇವಿಸಬಹುದು. ಬೆಂಡೆಕಾಯಿಯನ್ನು ಪ್ರತಿಯೊಬ್ಬರೂ ತಮ್ಮದೇ ಆದ ವಿಧಾನದಲ್ಲಿ ಅಡುಗೆಗೆ ಬಳಸುತ್ತಾರೆ. ಈ ಹಸಿರು ತರಕಾರಿಯಲ್ಲಿ ರಕ್ತದಲ್ಲಿರುವ ಕಾರ್ಟಿಸೋಲ್ ಮಟ್ಟವನ್ನು ಕಡಿಮೆಗೊಳಿಸುವ ಗುಣಗಳಿವೆ ಹಾಗೂ ಇದೇ ಕಾರಣದಿಂದ ಕೊಂಚ ಪ್ರಮಾಣದ ಬೆಂಡೆಕಾಯಿಯ ಸೇವನೆ ಮಧುಮೇಹಿಗಳಿಗೆ ಅತ್ಯುತ್ತಮವಾಗಿದೆ.

Most Read:ಮಧುಮೇಹ ನಿಯಂತ್ರಣಕ್ಕೆ ಮನೆಯ ಆಹಾರ-ಪದಾರ್ಥಗಳೇ ಸಾಕು

ಹಸಿಯಾಗಿ ಸೇವಿಸಬಹುದಾದ ಕೆಂಪು ಬೆರ್ರಿಗಳು : ಟೊಮೆಟೋ

ಟೊಮಾಟೋ ಇಲ್ಲದೇ ಇತರ ಯಾವುದೇ ತರಕಾರಿಯ ವ್ಯಂಜನ ರುಚಿಕರವಾಗಿರಲು ಸಾಧ್ಯವೇ ಇಲ್ಲ. ಯಾವುದೇ ಪ್ರಾಂತದ ಯಾವುದೇ ಕುಟುಂಬವಿರಲಿ, ಅಡುಗೆಯ ಸಮಯದಲ್ಲಿ ಒಗ್ಗರಣೆಯ ಜೊತೆ ಟೊಮಾಟೋ ಇಲ್ಲದಿದ್ದರೆ ರುಚಿಯೇ ಇರುವುದಿಲ್ಲ. ಸಾಮಾನ್ಯವಾಗಿ ವಿದೇಶಗಳಲ್ಲಿ ಟೊಮಾಟೋವನ್ನು ಹಸಿಯಾಗಿ ಸಾಲಾಡ್ ರೂಪದಲ್ಲಿ ಸೇವಿಸಲಾಗುತ್ತದೆ. ಭಾರತದಲ್ಲಿ ಟೊಮಾಟೋಗಳನ್ನು ಸೂಪ್, ತಕರಾರಿ ಸಾಂಬಾರ್, ಧಾಲ್ ಮೊದಲಾದವುಗಳಲ್ಲಿ ಬಳಸಿ ಸೇವಿಸಲಾಗುತ್ತದೆ. ಒಂದು ವೇಳೆ ನೀವು ತೂಕ ಇಳಿಸಬಯಸಿದರೆ ಅಥವಾ ಏರಿಸಬಯಸಿದರೆ ಟೊಮಾಟೋ ನಿಮ್ಮ ಆಹಾರದ ಒಂದು ಅಂಶವಾಗಿರುವುದನ್ನು ಸಲಹೆ ಮಾಡಲಾಗುತ್ತದೆ. ಟೊಮಾಟೋಗಳಲ್ಲಿ ಕಡಿಮೆ ಕಾರ್ಬೋಹೈಡ್ರೇಟುಗಳು ಹಾಗೂ ಕ್ಯಾಲೋರಿಗಳಿರುತ್ತವೆ ಹಾಗೂ ಈ ಗುಣವೇ ಮಧುಮೇಹಿಗಳಿಗೆ ಟೊಮಾಟೋವನ್ನು ಅನಿವಾರ್ಯ ಆಹಾರವಾಗಿಸುತ್ತದೆ.

English summary

These Vegetables That Control Your Blood Sugar

Diabetic diet meal plan chart: Diabetes is none other than a lifestyle disease these days. Every second person is found to be a diabetic patient nowadays. Hence it is always recommended to bring certain changes in your daily routines, to prevent this disease. Diabetes slowly affects your other organs of the body too. If you do not take proper medication and exercise regularly, then you are prone to several other diseases such as,
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X