For Quick Alerts
ALLOW NOTIFICATIONS  
For Daily Alerts

ನಿಮಗೆ ಗೊತ್ತೇ? ಇಂತಹ 9 ಆಹಾರಗಳು ಸ್ಮರಣಶಕ್ತಿಯನ್ನೇ ಕಡಿಮೆ ಮಾಡುತ್ತದೆಯಂತೆ!!

|

ಒಂದು ಅಧ್ಯಯನದಲ್ಲಿ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ, ನಾವು ಸೇವಿಸುವ ಕೆಲವು ಆಹಾರಗಳಲ್ಲಿರುವ ಟ್ರಾನ್ಸ್ ಕೊಬ್ಬು (trans fats)ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದಲ್ಲದೇ ಸ್ಮರಣಶಕ್ತಿಯನ್ನೂ ಕುಂದಿಸುತ್ತದೆ. ಟ್ರಾನ್ಸ್ ಕೊಬ್ಬು ಹೆಚ್ಚಿರುವ ಆಹಾರಗಳನ್ನು ಸೇವಿಸುವ ಯುವಜನತೆಯ ಆರೋಗ್ಯದ ಮಾಹಿತಿಯನ್ನು ವಿಶ್ಲೇಷಿಸಿದ ಸಂಶೋಧಕರಿಗೆ ಈ ವ್ಯಕ್ಗಿಗಳು ಸ್ಮರನ ಶಕ್ತಿಯ ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ನೀಡಿರುವುದನ್ನು ಗಮನಿಸಿದ್ದಾರೆ.

ಈ ಸಂಶೋಧನೆಯಲ್ಲಿ ದಿನಕ್ಕೆ ಸುಮಾರು ಹದಿನಾರು ಗ್ರಾಂ ನಷ್ಟು ಟ್ರಾನ್ಸ್ ಕೊಬ್ಬನ್ನು ಸೇವಿಸುವ ವ್ಯಕ್ಗಿಗಳು ಸ್ಮರಣಶಕ್ತಿಯ ಪರೀಕ್ಷೆಯಲ್ಲಿ ಒದಗಿಸಲಾದ ಪದಗಳ ಪೈಕಿ ಸುಮಾರು ಹನ್ನೆರಡು ಮತ್ತು ಇದಕ್ಕೂ ಹೆಚ್ಚಿನ ಪದಗಳನ್ನು ಮಾತ್ರ ನೆನಪಿಟ್ಟುಕೊಂಡಿದ್ದರೆ ದಿನಕ್ಕೆ ಇಪ್ಪತ್ತೆಂಟು ಗ್ರಾಂ ಟ್ರಾಸ್ನ್ ಕೊಬ್ಬು ಸೇವಿಸಿದ ವ್ಯಕ್ಗಿಗಳು ಹನ್ನೆರಡು ಅಥವಾ ಇದಕ್ಕೂ ಕಡಿಮೆ ಪದಗಳನ್ನು ಮಾತ್ರವೇ ನೆನಪಿನಲ್ಲಿಟ್ಟು ಕೊಳ್ಳಲು ಸಮರ್ಥರಾಗಿದ್ದಾರೆ. ಇದೇ ಮಾದರಿಯ ಇನ್ನೊಂದು ಅಧ್ಯನದಲ್ಲಿ ನಡೆಸಲಾದ ಸ್ಮರಣ ಮತ್ತು ಯೋಚನಾ ಪರೀಕ್ಷೆಯಲ್ಲಿ ನಿತ್ಯವೂ ಸಂತೃಪ್ತ ಕೊಬ್ಬು ಹೆಚ್ಚಿರುವ ಕೆಂಪು ಮಾಂಸ ಮತ್ತು ಬೆಣ್ಣೆಯಂತಹ ಆಹಾರಗಳನ್ನು ಸೇವಿಸುವ ಮಹಿಳೆಯರು ಈ ಆಹಾರಗಳನ್ನು ಕನಿಷ್ಟವಾಗಿ ಸೇವಿಸುವ ಮಹಿಳೆಯರಿಗಿಂತ ಕಳಪೆ ಪ್ರದರ್ಶನ ನೀಡಿದ್ದಾರೆ

ಸ್ಮರಣಶಕ್ತಿಯನ್ನು ಕುಂದಿಸುವ ಆಹಾರಗಳು

ಸ್ಮರಣಶಕ್ತಿಯನ್ನು ಕುಂದಿಸುವ ಆಹಾರಗಳು

ಅನಾರೋಗ್ಯಕರ ಕೊಬ್ಬುಗಳಾದ ಸಂತೃಪ್ತ ಕೊಬ್ಬು ಮತ್ತು ಟ್ರಾನ್ಸ್ ಕೊಬ್ಬು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಎಲ್ ಡಿ.ಎಲ್ ಪ್ರಮಾಣವನ್ನು ಹೆಚ್ಚಿಸುತ್ತವೆ ಹಾಗೂ ಮೆದುಳಿನಲ್ಲಿ ಜಿಡ್ದುಗಟ್ಟುವ ಬೀಟಾ ಅಮೈಲಾಲ್ಡ್ ಪ್ಲಾಕ್ (beta-amyloid plaques) ಎಂಬ ಕಣಗಳನ್ನು ಉತ್ಪಾದಿಸುವ ಗತಿಯನ್ನು ತೀವ್ರಗೊಳಿಸುತ್ತವೆ. ಇವೊಂದು ಅಂಟಿಕೊಳ್ಳುವ ಗುಣವಿರುವ ಪ್ರೋಟೀನುಗಳ ಗುಚ್ಛವಾಗಿದ್ದು ಮೆದುಳಿನಲ್ಲಿ ಅಲ್ಲಲ್ಲಿ ಗಡ್ಡೆಕಟ್ಟಿಕೊಂಡು ಮೆದುಳಿನ ಸಾಮರ್ಥ್ಯವನ್ನು ಕುಂದಿಸುತ್ತವೆ ಹಾಗೂ ಕ್ರಮೇಣ ಆಲ್ಜೀಮರ್ಸ್ ಕಾಯಿಲೆ ಎದುರಾಗುತ್ತದೆ. ಅಲ್ಲದೇ ಈ ಕೊಬ್ಬುಗಳು ದೇಹದಲ್ಲಿ ಒಮೆಗಾ ೩ ಕೊಬ್ಬಿನಾಮ್ಲಗಳ ಉತ್ಪಾದನೆಯನ್ನು ನಿಧಾನಗೊಳಿಸುತ್ತವೆ. ಮೆದುಳಿನ ಉತ್ತಮ ಕಾರ್ಯನಿರ್ವಹಣೆಗೆ ಈ ಕೊಬ್ಬಿನಾಮ್ಲಗಳು ಅತ್ಯಂತ ಅವಶ್ಯವಾಗಿವೆ. ಸ್ಮರಣಶಕ್ತಿಯನ್ನು ಕುಂದಿಸುವ ಅಹಾರಗಳು ಯಾವುವು ನೋಡೋಣ:

ಕೇಕ್, ಪೈ ಮತ್ತು ಕುಕ್ಕೀಸ್ ಗಳು

ಕೇಕ್, ಪೈ ಮತ್ತು ಕುಕ್ಕೀಸ್ ಗಳು

ಈ ಸಿದ್ಧ ಆಹಾರಗಳಲ್ಲಿ ಸಂಸ್ಕರಿಸಿದ ತೈಲಗಳು, ಕೇಕ್ ಅನ್ನು ಗಟ್ಟಿಗೊಳಿಸಲು ಬಳಸುವ ರಾಸಯನಿಕಗಳು (frosting) ಹಾಗೂ ಸಸ್ಯಜನ್ಯ ಬೆಣ್ಣೆಯಾದ ಮಾರ್ಜರೈನ್ ಒಳಗೊಂಡಿರುತ್ತವೆ. ಅದ್ಯಯನಗಳಲ್ಲಿ ಕಂಡುಕೊಂಡಿರುವ ಪ್ರಕಾರ ಈ ರಾಸಾಯನಿಕಗಳ ಸೇವನೆ ಆಲ್ಜೀಮರ್ಸ್ ಕಾಯಿಲೆ ಎದುರಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಅಲ್ಲದೇ ಸ್ಮರಣಶಕ್ತಿ, ತಾರ್ಕಿಕವಾಗಿ ಯೋಚಿಸುವ ಶಕ್ತಿ ಕುಂದಿಸುವ ಜೊತೆಗೇ ಮೆದುಳಿನ ಗಾತ್ರವನ್ನೂ ಕುಗ್ಗಿಸುತ್ತವೆ. ಹಾಗಾಗಿ, ಅಂಗಡಿಗಳಲ್ಲಿ ಸಿಗುವ ಸಿದ್ಧ ರೂಪದ ಈ ಆಹಾರಗಳನ್ನು ಕೊಳ್ಳದಿರಿ, ಬದಲಿಗೆ ಮನೆಯಲ್ಲಿಯೇ ನಿಮ್ಮ ಆಯ್ಕೆಯ ಆಹಾರಗಳನ್ನು ತಯಾರಿಸಿಕೊಂಡು ಈ ಕೊರತೆ ಎದುರಾಗುವುದರಿಂದ ತಪ್ಪಿಸಿಕೊಳ್ಳಿ.

Most Read: ರಾತ್ರಿ ಊಟಕ್ಕೆ ದಿನಾ ದಾಲ್ ರೈಸ್ ಸೇವಿಸಿದರೆ-ತೂಕ ಇಳಿಸಿಕೊಳ್ಳಬಹುದು!

ಪಾಪ್ ಕಾರ್ನ್

ಪಾಪ್ ಕಾರ್ನ್

ಸಾಮಾನ್ಯವಾಗಿ ಚಲನಚಿತ್ರ ವೀಕ್ಷಣೆಯ ಸಮಯದಲ್ಲಿ ತಿನ್ನಲಾಗುವ ಈ ಜನಪ್ರಿಯ ಕುರುಕುತಿಂಡಿಗೆ ರುಚಿಗಾಗಿ ಕೊಂಚ ಬೆಣ್ಣೆಯನ್ನು ಸಿಂಪಡಿಸಿರುತ್ತಾರೆ. ಆದರೆ ಈ ಬೆಣ್ಣೆ ಅತಿ ಹೆಚ್ಚಿನ ಸಂತೃಪ್ತ ಕೊಬ್ಬನ್ನು ಹೊಂದಿರುತ್ತದೆ. ಸುಮಾರು 28 ಗ್ರಾಂ ನಷ್ಟು ಬೆಣ್ಣೆಯ ಸ್ವಾದದ ಪಾಪ್ ಕಾರ್ನ್ ನಲ್ಲಿ ಎರಡೂವರೆ ಗ್ರಾಂ ಸಂತೃಪ್ತ ಕೊಬ್ಬು ಇರುತ್ತದೆ ಹಾಗೂ 32 ಗ್ರಾಂ ಕ್ಯಾರಾಮೆಲ್ ಸ್ವಾದದ ಪಾಪ್ ಕಾರ್ನ್ ನಲ್ಲಿ ಒಂದೂವರೆ ಗ್ರಾಂ ನಷ್ಟು ಸಂತೃಪ್ತ ಕೊಬ್ಬು ಇರುತ್ತದೆ. ಅಲ್ಲದೇ ರುಚಿಗಾಗಿ ಸೇರಿಸುವ ರಾಸಾಯನಿಕಗಳಲ್ಲಿ ಡೈಅಸಿಟೈಲ್ ಎಂಬ ರಾಸಾಯನಿಕವಿದ್ದು ಇದರ ಸೇವನೆಯಿಂದ ಮೆದುಳಿನಲ್ಲಿ ಅಮೈಲಾಯ್ಡ್ ಜಿಡ್ಡುಗಳ ಪ್ರಮಾಣ ಹೆಚ್ಚುತ್ತದೆ. ಈ ಜಿಡ್ಡು ಸಹಾ ಅಲ್ಜೀಮರ್ಸ್ ಕಾಯಿಲೆಯೊಂದಿಗೆ ನಿಕಟ ಸಂಬಂಧ ಹೊಂದಿದೆ.

ಪ್ರೆಂಚ್ ಪ್ರೈಸ್

ಪ್ರೆಂಚ್ ಪ್ರೈಸ್

ಸುಮಾರು ನೂರು ಗ್ರಾಂ ಹುರಿದ ಆಲುಗಡ್ಡೆಯಲ್ಲಿ 0.1ಗ್ರಾಂ ಟ್ರಾನ್ಸ್ ಕೊಬ್ಬು ಹಾಗೂ 2.3 ಗ್ರಾಂ ಸಂತೃಪ್ತ ಕೊಬ್ಬು ಇರುತ್ತದೆ. ಈ ಆಲೂಗಡ್ಡೆಗಳನ್ನು ಹೆಚ್ಚು ಹೆಚ್ಚು ತಿಂದಷ್ಟೂ ಆಲ್ಜೀಮರ್ಸ್ ಕಾಯಿಲೆ ಆವರಿಸುವ ಸಾಧ್ಯತೆಯೂ ಹೆಚ್ಚುತ್ತದೆ ಹಾಗೂ ತಾರ್ಕಿಕವಾಗಿ ಯೋಚಿಸುವ ಸಾಮರ್ಥ್ಯವೂ ಕುಗ್ಗುತ್ತದೆ. ಹಾಗಾಗಿ ಸಿದ್ಧ ರೂಪದಲ್ಲಿ ಸಿಗುವ ಈ ಕುರುಕು ತಿಂಡಿಯನ್ನು ಕೊಳ್ಳುವ ಬದಲು ಮನೆಯಲ್ಲಿಯೇ ತಯಾರಿಸಿ ಸೇವಿಸಿದರೆ ಆರೋಗ್ಯಕರ.

ಪಿಜ್ಜಾ

ಪಿಜ್ಜಾ

ಇಟಲಿಯ ಸಾಂಪ್ರಾದಾಯಿಕ ಆಹಾರ ಈಗಾಗಲೇ ಭಾರತದಲ್ಲಿಯೂ ಮನೆಮಾತಾಗಿದ್ದು ಇದರಲ್ಲಿ ರುಚಿಗಾಗಿ ಪೆಪ್ಪರೋನಿ, ಸಾಸೇಜ್, ಹಸುವಿನ ಮಾಂಸ, ಕುರಿಯ ಮಾಂಸ ಮೊದಲಾದವುಗಳನ್ನು ಸೇರಿಸಿರುತ್ತಾರೆ. ಈ ಎಲ್ಲಾ ಅಹಾರಗಳಲ್ಲಿ ಟ್ರಾನ್ಸ್ ಕೊಬ್ಬು ಮತ್ತು ಸಂತೃಪ್ತ ಕೊಬ್ಬು ಹೇರಳವಾಗಿವೆ. ಸುಮಾರು ನೂರು ಗ್ರಾಂ ಪಿಜ್ಜಾ ದಲ್ಲಿ 0.2 ಟ್ರಾನ್ಸ್ ಕೊಬ್ಬು ಮತ್ತು 4.5 ಗ್ರಾ ಸಂತೃಪ್ತ ಕೊಬ್ಬು ಇವೆ. ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಪ್ರಕಾರ ಹಾಲಿನ ಮತ್ತು ಮಾಂಸದ ಉತ್ಪನ್ನಗಳಲ್ಲಿ ನೈಸರ್ಗಿಕವಾಗಿ ಟ್ರಾನ್ಸ್ ಕೊಬ್ಬು ಇದ್ದೇ ಇರುತ್ತದೆ. ಹಾಗಾಗಿ ಮಾರುಕಟ್ಟೆಯ ಪಿಜ್ಜಾಕ್ಕಿಂತ ಮನೆಯಲ್ಲಿಯೇ ತಯಾರಿಸುವ ಪಿಜ್ಜಾ ಉತ್ತಮ ಆಯ್ಕೆಯಾಗಿದೆ.

ಸಕ್ಕರೆಯುಕ್ತ ಪೇಯಗಳು

ಸಕ್ಕರೆಯುಕ್ತ ಪೇಯಗಳು

ಇಂದು ಮಾರುಕಟ್ಟೆಯನ್ನು ಆವರಿಸಿರುವ ಕ್ರೀಡಾ ಪೇಯ, ಹಣ್ಣಿನ ಸ್ವಾದದ ಪೇಯಗಳು, ಎನರ್ಜಿ ಡ್ರಿಂಕ್ ಸೋಡಾ ಮೊದಲಾದವುಗಳು ಮೆದುಳಿನ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತವೆ ಹಾಗೂ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಅಲ್ಲದೇ ಈ ಪೇಯಗಳ ಸೇವನೆಯ ಬಳಿಕ ರಕ್ತದಲ್ಲಿ ಸಕ್ಕರೆಯ ಮಟ್ಟ ಅಧಿಕವಾಗಿದ್ದು ಈ ಮೂಲಕ ಮಧುಮೇಹಿಗಳಲ್ಲದವರಲ್ಲಿಯೂ ಸ್ಮರಣಶಕ್ತಿ ಕುಂದುವುದು ಕಂಡುಬಂದಿದೆ.

ಸಂಸ್ಕರಿತ ಕಾರ್ಬೋಹೈಡ್ರೇಟುಗಳು

ಸಂಸ್ಕರಿತ ಕಾರ್ಬೋಹೈಡ್ರೇಟುಗಳು

ಈ ಆಹಾರಗಳು ಹೆಚ್ಚಿನ ಗ್ಲೈಸೆಮಿನ್ ಕೋಷ್ಟಕವನ್ನು (ಜಿ ಐ) ಪಡೆದಿರುತ್ತವೆ. ಅಂದರೆ ಈ ಆಹಾರಗಳು ಸೇವನೆಯ ಬಳಿಕ ಕ್ಷಿಪ್ರಸಮಯದಲ್ಲಿಯೇ ಜೀರ್ಣಗೊಳ್ಳುತ್ತವೆ ಹಾಗೂ ಈ ಮೂಲಕ ರಕ್ತದಲ್ಲಿ ಥಟ್ಟನೇ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟಗಳನ್ನು ಏರಿಸುತ್ತವೆ. ಈ ಬಗ್ಗೆ ನಡೆದ ಒಂದು ಅಧ್ಯಯನದಲ್ಲಿ ಅಧಿಕ ಜಿ ಐ ಹೊಂದಿರುವ ಒಂದು ಹೊತ್ತಿನ ಆಹಾರ ಸೇವನೆಯ ಮೂಲಕ ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿಯೂ ಸ್ಮರಣಶಕ್ತಿ ಕುಂದಿರುವುದು ಗಮನಕ್ಕೆ ಬಂದಿದೆ.

Most Read: ಹೆಚ್ಚಿನ ಪ್ರಮಾಣದಲ್ಲಿ ಅಯೋಡೀನ್‌ ಹೊಂದಿರುವ ಆರೋಗ್ಯಕಾರಿ ಆಹಾರಗಳು

ಮದ್ಯ

ಮದ್ಯ

ಅತಿ ಹೆಚ್ಚು ಅಲ್ಲ, ಅತಿ ಕಡಿಮೆಯೂ ಅಲ್ಲದ ಪ್ರಮಾಣದ ಮದ್ಯ ಸೇವನೆಯಿಂದಲೂ ಮೆದುಳಿನ ಗಾತ್ರ ಕಡಿಮೆಯಾಗಿರುವುದು ಕಂಡುಬಂದಿದೆ ಹಾಗೂ ಇವು ನ್ಯೂರೋ ಟ್ರಾನ್ಸ್ ಮಿಟರ್ ಗಳ ಕ್ಷಮತೆಯನ್ನು ಏರುಪೇರುಗೊಳಿಸುತ್ತವೆ. ಬಿ.ಎಂ. ಜೆ ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಸಾಮಾನ್ಯ ಪ್ರಮಾಣದ ಮದ್ಯ ಸೇವನೆ, ಅಂದರೆ ವಾರದಲ್ಲಿ ಆರರಿಂದ ಒಂಭತ್ತು ಪ್ರಮಾಣದಷ್ಟು ಮದ್ಯದ ಸೇವನೆಯಿಂದ ಮೆದುಳಿಗೆ ಅಪಾರವದ ಹಾನಿ ಉಂಟಾಗುತ್ತದೆ ಹಾಗೂ ಇದರಲ್ಲಿ hippocampal atrophy ಎಂಬ ಸ್ಥಿತಿ ಮದ್ಯಪಾನಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಸಂಸ್ಕರಿತ ಮಾಂಸ

ಸಂಸ್ಕರಿತ ಮಾಂಸ

ಈ ಮಾಂಸಗಳಲ್ಲಿ ಪ್ರಮುಖವಾಗಿ ಹೊಗೆಯಲ್ಲಿ ಬೇಯಿಸಿದ ಟರ್ಕಿ ಕೋಳಿ, ಬೇಕನ್, ಸಾಸೇಜ್ ಮೊದಲಾದವು ಲಭ್ಯವಿದ್ದು ಇವುಗಳಲ್ಲಿ ನೈಟ್ರೋಸಮೈನ್ಸ್ ಎಂಬ ರಾಸಾಯನಿಕ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇವುಗಳ ಸೇವನೆಯಿಂದ ಯಕೃತ್ ಅಗತ್ಯಕ್ಕೂ ಹೆಚ್ಚಿನ ಕೊಬ್ಬನ್ನು ಉತ್ಪಾದಿಸಬೇಕಾಗುತ್ತದೆ ಹಾಗೂ ಇವು ಮೆದುಳಿಗೆ ಹಾನಿಕರವಾಗಿವೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಿರುವ ಪ್ರಕಾರ ಕಲಿಯುವಿಕೆ ಹಾಗೂ ಸ್ಮರಣಶಕ್ತಿಯಲ್ಲಿ ಕಳಪೆ ಪ್ರದರ್ಶನ ನೀಡುವ ವ್ಯಕ್ತಿಗಳ ಆಹಾರದಲ್ಲಿ ಸಂಸ್ಕರಿತ ಅಹಾರಗಳ ಪಾತ್ರ ಗಣನೀಯವಾಗಿದೆ.

ಸಂಸ್ಕರಿತ ಚೀಸ್

ಸಂಸ್ಕರಿತ ಚೀಸ್

ಮೋಜರೆಲ್ಲಾ ಸ್ಟಿಕ್, ಅಮೇರಿಕನ್ ಚೀಸ್ ಮೊದಲಾದವೆಲ್ಲಾ ಸಂಸ್ಕರಿತ ಸಿದ್ದ ಆಹಾರಗಳಾಗಿದ್ದು ಇವುಗಳ ಸೇವನೆಯಿಂದ ಮೆದುಳಿನಲ್ಲಿ ಅಮೈಲಾಯ್ಡ್ ಪ್ರೋಟೀನ್ ಗಳು ಗಡ್ಡೆಕಟ್ಟುವ ಸಾಧ್ಯತೆ ಹೆಚ್ಚುತ್ತದೆ ಹಾಗೂ ಇವು ಅಲ್ಜೀಮರ್ಸ್ ಕಾಯಿಲೆಯೊಂದಿಗೆ ನಿಕಟ ಸಂಬಂಧ ಹೊಂದಿವೆ.

English summary

These Foods That Cause Memory Loss

A study finding has found that trans fats may play havoc with your memory and also increase your cholesterol levels. The researchers found younger men who consumed high levels of trans fat performed more poorly in a memory test. The study showed that young men who ate 16 g of trans fat as a part of their daily diet recalled 12 words or more correctly. And men who consumed 28 g of trans fat every day recalled about 12 words or less
X
Desktop Bottom Promotion