For Quick Alerts
ALLOW NOTIFICATIONS  
For Daily Alerts

ಒಸಡಿನಲ್ಲಿ ಊತ : ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ

|

ಆರೋಗ್ಯದ ಕಾಳಜಿಯಲ್ಲಿ ಬಾಯಿಯ ಸ್ವಚ್ಛತೆ ಮತ್ತು ಆರೋಗ್ಯವೂ ಮುಖ್ಯವಾಗಿದೆ. ಆದ್ದರಿಂದ ಹಲ್ಲು ಮತ್ತು ಒಸಡುಗಳಿಗೆ ಎದುರಾಗುವ ಹಲವು ಬಗೆಯ ಕಾಯಿಲೆಗಳನ್ನು ದೂರವಿರಿಸುವುದು ಅವಶ್ಯವಾಗಿದೆ. ಬಾಯಿಯ ಆರೊಗ್ಯದಲ್ಲಿ ನಾಲಿಗೆ, ಒಸಡು, ಹಲ್ಲು, ಕೆನ್ನೆಯ ಒಳಭಾಗ, ಎಲ್ಲವೂ ಸದಾ ತೇವವಾಗಿಯೇ ಇರುವ ಕಾರಣ ಇಲ್ಲಿ ಸೋಂಕು ಉಂಟಾಗುವ ಸಾಧ್ಯತೆಯೂ ಹೆಚ್ಚು. ಬಾಯಿಯಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳಲ್ಲಿ ಒಸಡುಗಳ ಊತವೂ ಪ್ರಮುಖವಾಗಿದೆ. gingival swelling ಎಂದು ಕರೆಯಲಾಗುವ ಈ ಕಾಯಿಲೆ ಒಸಡುಗಳನ್ನು ಕೆಂಪಗಾಗಿಸಿ ಊದಿಕೊಳ್ಳುವಂತೆ ಮಾಡುತ್ತವೆ. ಅಲ್ಲದೇ ಈ ಊತ ಸಾಕಷ್ಟು ನೋವಿನಿಂದಲೂ ಕೂಡಿರುತ್ತದೆ.

Swollen Gums

ಒಸಡುಗಳ ಊತಕ್ಕೆ ಕಾರಣಗಳೇನು

ಈ ಸ್ಥಿತಿಗೆ ಕೆಲವಾರು ಕಾರಣಗಳಿವೆ. ಇದರಲ್ಲಿ ಪ್ರಮುಖವಾದುದು ಜಿಂಜಿವೈಟಿಸ್ ( Gingivitis)
ಇದೊಂದು ಒಸಡುಗಳಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು ಒಸಡುಗಳು ಊದಿಕೊಂಡು ಕೆಂಪಗಾಗಿ ಉರಿಯಿಂದ ಕೂಡಿರುತ್ತವೆ. ಈ ಕಾಯಿಲೆಗೆ ಹೆಚ್ಚಾಗಿ ಜಿಂಜಿವೈಟಿಸ್ ಕಾರಣವಾಗಿರುತ್ತದೆ.

ಜಿಂಜಿವೈಟಿಸ್ ಲಕ್ಷಣಗಳು ಹೆಚ್ಚು ಭೀಕರವಾಗಿರುವುದಿಲ್ಲ. ಆದರೆ ಒಂದು ವೇಳೆ ಹೆಚ್ಚಿನ ತೊಂದರೆಯಾಗದು ಎಂದು ಅಲಕ್ಷ್ಯ ತೋರಿದರೆ ಮಾತ್ರ ಇದು ಉಲ್ಬಣಗೊಂಡು periodontitis ಎಂಬ ಸ್ಥಿತಿಗೆ ತಲುಪಬಹುದು. ಈ ಸ್ಥಿತಿಯಲ್ಲಿ ಒಸಡು ತನ್ನ ಸಾಮರ್ಥ್ಯವನ್ನು ಕಳೆದುಕೊಂಡು ಹಲ್ಲನ್ನು ಹಿಡಿದಿಟ್ಟುಕೊಳ್ಳಲು ವಿಫಲವಾಗಿ ಹಲ್ಲು ಸುಲಭವಾಗಿ ಕಳಚಿ ಬೀಳುತ್ತದೆ. ಜಿಂಜಿವೈಟಿಸ್ ಗೆ ಬಹುತೇಕವಾಗಿ ಬಾಯಿಯ ಸ್ವಚ್ಛತೆಗೆ ಆದ್ಯತೆ ನೀಡದಿರುವುದು ಪ್ರಮುಖ ಕಾರಣವಾಗಿದೆ. ಬಾಯಿಯ ಸ್ವಚ್ಛತೆಯ ಕೊರತೆಯಿಂದ ಹಲ್ಲು ಮತ್ತು ಒಸಡುಗಳ ನಡುವೆ ಕೂಳೆ (ಆಹಾರದ ಜಿಡ್ಡು) ಸಂಗ್ರಹಗೊಳ್ಳುತ್ತದೆ. ಈ ಕೂಳೆಯನ್ನು ಆಗಾಗ ಬ್ರಶ್ ಮಾಡುತ್ತಿರುವ ಮೂಲಕ ನಿವಾರಿಸುತ್ತಲೇ ಇರಬೇಕು. ಇಲ್ಲದಿದ್ದರೆ ಇಲ್ಲಿ ಬ್ಯಾಕ್ಟೀರಿಯಾಗಳು ಕೊಳೆತು ಹಳದಿಯಾಗುತ್ತದೆ. ಇದಕ್ಕೆ tartar ಎಂದು ಕರೆಯುತ್ತಾರೆ. ಈ ಟಾರ್ಟಾರ್ ಹೆಚ್ಚಿದ್ದಷ್ಟೂ ಒಸಡಿನಲ್ಲಿ ಸೋಂಕು ಎದುರಾಗುವ ಸಾಧ್ಯತೆ ಹೆಚ್ಚು ಹಾಗೂ ಇದು ಶೀಘ್ರವೇ ಜಿಂಜಿವೈಟಿಸ್ ನ ರೂಪ ಪಡೆದುಕೊಳ್ಳುತ್ತದೆ.

ಪೋಷಕಾಂಶಗಳ ಕೊರತೆ

ಆಹಾರದಲ್ಲಿ ವಿಟಮಿನ್ B 12 ಹಾಗೂ ವಿಟಮಿನ್ ಸಿ ಕೊರತೆಯಾದರೆ ಒಸಡಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಏಕೆಮ್ದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಸದೃಢವಾಗಿರೆಲು ವಿಟಮಿನ್ ಸಿ ಅವಶ್ಯವಾಗಿದೆ. ಈ ಶಕ್ತಿ ನಮ್ಮ ಒಸಡು ಮತ್ತು ಹಲ್ಲುಗಳ ದೃಢತೆಗೂ ವಿಟಮಿನ್ ಸಿ ಅವಧ್ಯವಾಗಿದೆ. ವಿಟಮಿನ್ ಬಿ೧೨ ಹಲ್ಲುಗಳಲ್ಲಿ ಕುಳಿಗಳಾಗದಂತೆ ಹಾಗೂ ಒಸಡಿನಲ್ಲಿ ಸೋಂಕು ಉಂಟಾಗದಂತೆ ತಡೆಯುತ್ತದೆ.

Most Read: ಒಸಡು ಊದಿಕೊಂಡ ಸಮಸ್ಯೆಗೆ ಪರಿಣಾಮಕಾರಿ ಮನೆಮದ್ದುಗಳು

ಗರ್ಭಾವಸ್ಥೆ

ಗರ್ಭಾವಸ್ಥೆಯಲ್ಲಿ ಗರ್ಭವತಿಯ ದೇಹದಲ್ಲಿ ಎದುರಾಗುವ ಹಲವಾರು ರಸದೂತಗಳ ಪ್ರಭಾವದಿಂದ ರಕ್ತಪ್ರವಾದಹಲ್ಲಿಯೂ ಹೆಚ್ಚಳ ಕಂಡುಬರುತ್ತದೆ. ಒಸಡುಗಳಿಗೆ ಹರಿದು ಬರುವ ರಕ್ತದ ಮಟ್ಟವೂ ಹೆಚ್ಚುವ ಕಾರಣ ಒಸಡಿನಲ್ಲಿ ಉರಿ, ಊತ ಹಾಗೂ ರಕ್ತಸ್ರಾವವೂ ಕಂಡುಬರಬಹುದು. ಅಷ್ಟೇ ಅಲ್ಲ, ರಸದೂತಗಳ ಪ್ರಭಾವದಿಂದ ದೇಹ ಬ್ಯಾಕ್ಟೀರಿಯಾಗಳ ವಿರುದ್ದ ಹೋರಾಡುವ ಕ್ಶಮತೆಯೂ ಕಡಿಮೆಯಾಗಿರುತ್ತದೆ ಹಾಗೂ ಈ ಕಾರಣದಿಂದಲೂ ಒಸಡಿನಲ್ಲಿ ಸೋಂಕು ಇತರ ಸಮಯಕ್ಕಿಂತ ಸುಲಭವಾಗಿ ಎದುರಾಗುತ್ತದೆ.

ಸೋಂಕುಗಳು

ಕೆಲವು ಬಗೆಯ ವೈರಸ್ಸುಗಳಿಂದ ಎದ್ದುರಾಗುವ ಸೋಂಕು ಹಾಗೂ ಶಿಲೀಂಧ್ರಗಳೂ ಒಸಡುಗಳ ಊತಕ್ಕೆ ಕಾರಣವಾಗುತ್ತವೆ. ಹರ್ಪಿಸ್ ಮತ್ತು ಥ್ರಶ್ ಎಂಬ ರೋಗಗಳ ಸೋಂಕುಗಳಿಂದಲೂ ಈ ಕಾಯಿಲೆ ಎದುರಾಗಬಹುದು.

ಒಸಡುಗಳ ಊತದ ಲಕ್ಷಣಗಳು

  • ಒಸಡುಗಳಲ್ಲಿ ರಕ್ತ ಒಸರುವುದು
  • ಒಸಡುಗಳಲ್ಲಿ ನೋವು
  • ಬಾಯಿಯ ದುರ್ವಾಸನೆ
  • ಒಸಡುಗಳು ಕೆಂಪಗಾಗುವುದು
  • ಹಲ್ಲುಗಳ ನಡುವಣ ಅಂತಹ ಹೆಚ್ಚುವುದು

ಒಸಡುಗಳ ಊತದ ಚಿಕಿತ್ಸೆ

ಒಂದು ವೇಳೆ ಈ ಊತ ಎರಡು ವಾರಕ್ಕಿಂತಲೂ ಹೆಚ್ಚು ಕಾಲ ಕಾಣಿಸಿಕೊಂಡರೆ ದಂತವೈದ್ಯರನ್ನು ಕಾಣಬೇಕು. ಸೋಂಕಿನ ಕಾರಣನ್ನು ಪರಿಗಣಿಸಿ ವೈದ್ಯರೇ ಸೂಕ್ತವಾದ ಚಿಕಿತ್ಸೆಯನ್ನು ಸೂಚಿಸುತ್ತಾರೆ. ಅಲ್ಲದೇ ಸೋಂಕು ಉಲ್ಬಣಗೊಳ್ಳದೇ ಇರಲು ಕೆಲವು ಔಷಧಿಗಳನ್ನು ಹಾಗೂ ಜಿಂಜಿವೈಟಿಸ್ ಗೆ ಪರಿವರ್ತನೆಗೊಳ್ಳದಂತೆ ಹಾಗೂ ಕೂಳೆ ಇಲ್ಲವಾಗಿಸಲು ಕೆಲವು ಮುಕ್ಕಳಿಕೆ ಮಾಡಲಾಗುವ ಔಷಧಿಗಳನ್ನು ಸೂಚಿಸಬಹುದು. ಒಂದು ವೇಳೆ ಜಿಂಜಿವೈಟಿಸ್ ಈಗಾಗಲೇ ಎದುರಾಗಿದ್ದರೆ ಶಸ್ತ್ರಚಿಕಿತ್ಸೆಯ ಅಗತ್ಯತೆಯನ್ನೂ ವೈದ್ಯರೇ ನಿರ್ಧರಿಸುತ್ತಾರೆ. ಈ ಶಸ್ತ್ರಚಿಕಿತ್ಸೆಯ ಮೂಲಕ ಸೋಂಕಿಗೆ ಒಳಗಾಗಿದ್ದ ಒಸಡಿನ ಭಾಗವನ್ನು ನಿವಾರಿಸಿ ಹಲ್ಲಿನ ಬೇರಿನಲ್ಲಿರುವ ಸೋಂಕು ಹಾಗೂ ಕೂಳೆಯನ್ನು ನಿವಾರಿಸಿ ಆರೋಗ್ಯಕರ ಒಸಡಿನ ಭಾಗವನ್ನು ಮತ್ತೆ ಹೊಲಿದು ಕೂಡಿಸಲಾಗುತ್ತದೆ. ನಂತಹ ಈ ಒಸಡು ತಾನಾಗಿಯೇ ಗುಣಹೊಂದುತ್ತವೆ. ಒಸಡುಗಳ ಊತಕ್ಕೆ ಕೆಲವು ಮನೆಮದ್ದುಗಳು:

ಉಪ್ಪುನೀರಿನ ಮುಕ್ಕಳಿಕೆ

ಒಂದು ಅಧ್ಯಯನದ ಪ್ರಕಾರ ಒಸಡಿನಲ್ಲಿರುವ ಸೋಂಕನ್ನು ನಿವಾರಿಸಿ ರೋಗ ನಿರೋಧಕ ಶಕ್ತಿ ಈ ಊತವನ್ನು ತಾನಾಗಿಯೇ ಗುಣಪಡಿಸಲು ನೆರವಾಗುತ್ತದೆ. ಉಪ್ಪು ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕ ಮತ್ತು ಶಿಲೀಂಧ್ರನಿವಾರಕ ಗುಣ ಈ ಸೋಂಕು ಉಲ್ಬಣಗೊಳ್ಳದಂತೆ ತಡೆಯುತ್ತದೆ ಹಾಗೂ ಒಸಡುಗಳಲ್ಲಿ ಸೋಂಕು ನಿವಾರಿಸಲು ನೆರವಾಗುತ್ತದೆ. ಇದಕ್ಕಾಗಿ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ಚಿಕ್ಕ ಚಮಚ ಉಪ್ಪು ಬೆರೆಸಿ ಮಿಶ್ರಣ ಮಾಡಿ ಸುಮಾರು ಮೂವತ್ತು ಸೆಕೆಂಡುಗಳ ಕಾಲ ಸತತವಾಗಿ ಮುಕ್ಕಳಿಸಿ ಉಗುಳಬೇಕು. ಮತ್ತೆರಡು ಬಾರಿ ಇದೇ ಪ್ರಕಾರ ಮುಕ್ಕಳಿಸಿ. ಈ ವಿಧಾನವನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಪುನರಾವರ್ತಿಸಿ.

Most Read: ಒಸಡಿನ ನೋವಿಗೆ ಸಾಂತ್ವನ ನೀಡುವ ಫಲಪ್ರದ ಮನೆಮದ್ದು

ಅರಿಶಿನ

National Journal of Maxillofacial Surgery ಎಂಬ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಅರಿಶಿನದ ಲೇಪ ಒಸಡುಗಳ ಸೋಂಕು ಉಲ್ಬಣಗೊಳ್ಳುವುದನ್ನು ತಪ್ಪಿಸಿ ಜೀಂಜಿವೈಟಿಸ್ ಗೆ ಬದಲಾಗದಂತೆ ತಡೆಯುತ್ತದೆ. ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಹಲ್ಲುಗಳನ್ನು ಉಜ್ಜಿಕೊಂಡು ಮುಕ್ಕಳಿಸಿ ಉಗುಳಿದ ಬಳಿಕ ಅರಿಶಿನದ ಲೇಪವನ್ನು ದಪ್ಪನಾಗಿ ಒಸಡುಗಳಿಗೆ ಹಚ್ಚಿಕೊಂಡು ಸುಮಾರು ಹತ್ತು ನಿಮಿಷ ಹಾಗೇ ಬಿಡಬೇಕು. ಬಳಿಕ ಉಗುರುಬೆಚ್ಚನೆಯ ನೀರಿನಿಂದ ಮುಕ್ಕಳಿಸಿ ನೀರನ್ನು ಉಗುಳಬೇಕು.

ಲೋಳೆಸರ (ಆಲೋವೆರಾ)

Journal of Clinical and Experimental Dentistry ಎಂಬ ಪತ್ರಿಕೆಯ ಪ್ರಕಾರ ಒಸಡುಗಳ ಊತ ಕಡಿಮೆಗೊಳಿಸಲು ಲೋಳೆಸರ ಅತ್ಯುತ್ತಮ ಪರಿಹಾರವಾಗಿದೆ. ಇದಕ್ಕಾಗಿ ಎರಡು ಚಿಕ್ಕ ಚಮಚ ಲೋಳೆಸರದ ತಿರುಗಳನ್ನು ಬಳಸಿ ಬಾಯಿಯನ್ನು ಮುಕ್ಕಳಿಸಿ ತೊಳೆದುಕೊಳ್ಳಬೇಕು. ಬಳಿಕ ಈ ನೀರನ್ನು ಉಗುಳಬೇಕು. ದಿನಕ್ಕೆರಡು ಬಾರಿ ಈ ವಿಧಾನವನ್ನು ಸುಮಾರು ಹತ್ತು ದಿನಗಳ ಕಾಲ ನಿರ್ವಹಿಸಿ.

ತಂಪು ಮತ್ತು ಬಿಸಿ ಶಾಖದ ಒತ್ತಡ

ಒಸಡಿನ ನೋವು ತಕ್ಷಣವೇ ಕಡಿಮೆ ಮಾಡಲು ಕೊಂಚ ಹೊತ್ತು ಶಾಖ ನೀಡಿ ಬಳಿಕ ತಕ್ಷಣವೇ ತಂಪುಗೊಳಿಸುವ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ಮೊದಲು ದಪ್ಪನೆಯ ಮತ್ತು ಚಿಕ್ಕ ಟವೆಲ್ಲೊಂದನ್ನು ಉಗುರುಬೆಚ್ಚನೆಯ ನೀರಿನಲ್ಲಿ ಮುಳುಗಿಸಿ ಹಿಂಡಿ ಈ ಟವೆಲ್ಲನ್ನು ನೋವಿರುವ ಭಾಗಕ್ಕೆ ಒತ್ತಿಕೊಂಡು ಶಾಖ ಒದಗಿಸಿ. ಬಳಿಕ ಇನ್ನೊಂದು ದಪ್ಪ ಟವೆಲ್ಲಿನ ಒಳಗೆ ಮಂಜುಗಡ್ಡೆಯ ತುಂಡುಗಳನ್ನು ಇರಿಸಿ ಮಡಚಿ ಈಗತಾನೇ ಶಾಖ ಒದಗಿಸಿದ್ದ ಭಾಗಕ್ಕೆ ತಂಪು ಒದಗಿಸಿ.

ಅವಶ್ಯಕ ತೈಲ

European Journal of Dentistry ಎಂಬ ಪತ್ರಿಕೆಯ ಪ್ರಕಾರ ಅವಶ್ಯಕ ತೈಲಗಳಾದ ಪುದಿನಾ ಎಣ್ಣೆ, ಟೀ ಟ್ರೀ ಎಣ್ಣೆ ದೊಡ್ಡಪತ್ರೆ (thyme) ಎಣ್ಣೆ ಮೊದಲಾದವುಗಳಲ್ಲಿ ಸೋಂಕು ಎದುರಾಗಿಸುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ನಿರ್ಬಂಧಿಸುವ ಗುಣವಿದೆ. ನಿಮ್ಮ ಆಯ್ಕೆಯ ಯಾವುದೇ ಅವಶ್ಯಕ ತೈಲದ ಮೂರು ತೊಟ್ಟುಗಳನ್ನು ಕೊಂಚ ನೀರಿನಲ್ಲಿ ಬೆರೆಸಿ ಈ ನೀರಿನಿಂದ ಬಾಯಿಯನ್ನು ಸತತವಾಗಿ ಮೂವತ್ತು ಸೆಕೆಂಡ್ ಕಾಲ ಮುಕ್ಕಳಿಸಿ. ಈ ನೀರನ್ನು ಉಗುಳಿ ಮತ್ತೆರಡು ಬಾರಿ ಪುನರಾವರ್ತಿಸಿ. ಈ ಕ್ರಿಯೆಯನ್ನು ದಿನಕ್ಕೆರಡು ಬಾರಿ ನಿರ್ವಹಿಸಿ.

Most Read: ಒಸಡಿನ ಸಮಸ್ಯೆಯೇ? ಇಲ್ಲಿದೆ ನೋಡಿ ಸೂಪರ್ ಮನೆಮದ್ದು

ಕೆಲವು ಮೂಲಿಕೆಗಳು

ಕೆಲವು ಮೂಲಿಕೆಗಳಾದ ಲವಂಗದ ಪುಡಿ, ಅರಿಶಿನ ಮೊದಲಾದವುಗಳಿಗೆ ಬ್ಯಾಕ್ಟೀರಿಯಾ ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳಿಗೆ ಒಸಡಿನ ಉರಿಯೂತವನ್ನೂ ಗುಣಪಡಿಸುವ ಗುಣವಿದೆ. ಇದಕ್ಕಾಗಿ ನಿಮ್ಮ ಆಯ್ಕೆಯ ಮೂಲಿಕೆಗಳನ್ನು ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಮಿಶ್ರಣಗೊಳಿಸಿ ದಪ್ಪನೆಯ ಲೇಪ ತಯಾರಿಸಿ. ಈ ಲೇಪವನ್ನು ನೇರವಾಗಿ ಒಸಡುಗಳ ಸೋಂಕು ಇರುವ ಭಾಗಕ್ಕೆ ಹಚ್ಚಿಕೊಂಡು ಕೆಲವು ನಿಮಿಷಗಳವರೆಗೆ ಹಾಗೀ ಇರಿಸಿ ಬಳಿಕ ಉಗುರು ಬೆಚ್ಚನೆಯ ನೀರಿನಿಂದ ಮುಕ್ಕಳಿಸಿ ನಿವಾರಿಸಿ.

ಟೀ ಬ್ಯಾಗ್ ಗಳು

ಕಪ್ಪು ಟೀ, ದಾಸವಾಳದ ಟೀ ಮತ್ತು ಹಸಿರು ಟೀ ಗಳಲ್ಲಿ ಟ್ಯಾನಿನ್ ಎಂಬ ಗುಣಪಡಿಸುವ ಪ್ರಬಲ ಪೋಷಕಾಂಶವಿದೆ. ಶುಂಠಿಯ ಟೀ ಮತ್ತು ಕ್ಯಾಮೋಮೈಲ್ ಟೀ ಯಲ್ಲಿಯೂ ಉರಿಯೂತ ನಿವಾರಕ ಗುಣಗಳಿವೆ. ಈ ಟೀಯಲ್ಲಿರುವ ಟ್ಯಾನಿನ್ ಊದಿಕೊಂಡ ಒಸಡನ್ನು ಶೀಘ್ರವೇ ನಿವಾರಿಸುತ್ತದೆ. ಇದಕ್ಕಾಗಿ ಒಂದು ಟೀ ಬ್ಯಾಗ್ ಅನ್ನು ಕುದಿಸುವ ನೀರಿನಲ್ಲಿ ಮುಳುಗಿಸಿ ಸುಮಾರು ಐದು ನಿಮಿಷಗಳ ಕಾಲ ಹಾಗೇ ಇರಿಸಿ. ಬಳಿಕ ಹೊರತೆಗೆದು ತಣ್ಣಗಾಗಲು ಬಿಡಿ. ತಣಿದ ಟೀ ಬ್ಯಾಗ್ ಒಂದನ್ನು ನೇರವಾಗಿ ಊದಿಕೊಂಡ ಒಸಡುಗಳ ಮೇಲೆ ಕನಿಷ್ಟ ಐದು ನಿಮಿಷಗಳ ಕಾಲ ಹಾಗೇ ಇರಿಸಿ.

ಒಸಡಿನ ಊತವನ್ನು ತಡೆಯುವುದು ಹೇಗೆ?

  • ದಿನಕ್ಕೆರಡು ಬಾರಿ ಹಲ್ಲುಗಳನ್ನು ಉಜ್ಜಿಕೊಳ್ಳಿ
  • ಹಲ್ಲುಗಳ ನಡುವಣ ಕೂಳೆ ನಿವಾರಿಸಲು ನಿತ್ಯವೂ ಫ್ಲಾಸ್ ಮಾಡಿ
  • ಹಲ್ಲುಗಳ ನಡುವೆ ಅವಿತಿದ್ದ ಕೂಳೆಯನ್ನು ನಿವಾರಿಸಲು ಹಲ್ಲುಜ್ಜಿ ಫ್ಲಾಸ್ ಮಾಡಿದ ಬಳಿಕ ಮೌತ್ ವಾಶ್ ಬಳಸಿ ಮುಕ್ಕಳಿಸಿ.
  • ಸಕ್ಕರೆಭರಿತ ಆಹಾರಗಳ ಸೇವನೆಯನ್ನು ಕನಿಷ್ಟಗೊಳಿಸಿ.
  • ನಿಮ್ಮ ದಂತವೈದ್ಯರನ್ನು ನಿಯಮಿತವಾಗಿ ಭೇಟಿಯಾಗಿ ತಪಾಸಣೆಗೊಳಪಡಬೇಕು.
English summary

Swollen Gums: Causes, Symptoms And Treatment

Oral health is an important aspect of your general health and well-being. Therefore, it is imperative to keep various tooth and gum diseases at bay including swollen gums.Your gums should be as healthy as your teeth. It should be firm, clean and pink in colour. Swollen gums, also called gingival swelling, is characterized by protruding of the gums which appear to be red and painful.
X
Desktop Bottom Promotion