For Quick Alerts
ALLOW NOTIFICATIONS  
For Daily Alerts

ಒತ್ತಡ, ಆತಂಕ ನಿವಾರಣೆ ಮಾಡಲು ಸಹಾಯ ಮಾಡುವ ಸೂಪರ್ ಆಹಾರಗಳು

|

ಆಧುನಿಕ ಜಗತ್ತಿನಲ್ಲಿ ಒತ್ತಡ ಎನ್ನುವುದು ಬೇಡವೆಂದರೂ ಬಂದು ಕಾಡುವಂತಹ ಸಮಸ್ಯೆಯಾಗಿದೆ. ಕೈಯಲ್ಲೇ ಜಗತ್ತನ್ನು ಇಟ್ಟುಕೊಂಡು ಓಡಾಡುತ್ತಿರುವಂತಹ ಇಂದಿನ ದಿನಗಳಲ್ಲಿ ಕ್ಷಣಕ್ಷಣವೂ ಒತ್ತಡವು ಹೆಚ್ಚಾಗುತ್ತಲೇ ಇದೆ. ಅದು ಮನೆಯಾಗಲಿ ಅಥವಾ ಕಚೇರಿಯಾಗಲಿ, ಒತ್ತಡದ ಬದುಕು ಸರ್ವೇಸಾಮಾನ್ಯ. ಅದರಲ್ಲೂ ಕಂಪ್ಯೂಟರ್, ಮೊಬೈಲ್ ಹಾಗೂ ಇಂಟರ್ನೆಟ್ ಬಂದ ಬಳಿಕ ಒತ್ತಡದ ಜೀವನಕ್ಕೆ ಎಲ್ಲರೂ ಒಗ್ಗಿಕೊಂಡಿರುವರು. ನಮ್ಮ ಜೀವನವೇ ಒತ್ತಡ ಎನ್ನುವುದಕ್ಕೆ ಪರ್ಯಾಯ ಪದವಾಗಿದೆ.

ಮೊಬೈಲ್ ಅಥವಾ ಇಂಟರ್ನೆಟ್ ಒಂದು ನಿಮಿಷ ಇಲ್ಲದೆ ಇದ್ದರೂ ಏನೋ ಒಂದು ರೀತಿಯ ಆತಂಕ ಉಂಟಾಗುವುದು ಮತ್ತು ಇದರಿಂದ ಒತ್ತಡ ಹೆಚ್ಚಾಗುವುದು. ಧ್ಯಾನ ಹಾಗೂ ಕೆಲವೊಂದು ಯೋಗಾಭ್ಯಾಸ ಮಾಡುವ ಮೂಲಕವಾಗಿ ಒತ್ತಡ ನಿವಾರಣೆ ಮಾಡಬಹುದು. ಆದರೆ ಕೆಲವೊಂದು ಆಹಾರದ ಮೂಲಕವಾಗಿ ಒತ್ತಡ ಮತ್ತು ಆತಂಕ ನಿವಾರಿಸಬಹುದು. ಇದಕ್ಕೆ ಕೆಲವೊಂದು ಆಹಾರಗಳು ಇವೆ. ಹೌದು, ಕೆಲವು ಆಹಾರ ಸೇವನೆಯಿಂದಲೂ ಒತ್ತಡ ಮತ್ತು ಆತಂಕ ನಿವಾರಿಸಬಹುದು. ಆರೋಗ್ಯಕರವಾಗಿ ತಿಂದರೆ ಆಗ ಒತ್ತಡ ನಿಭಾಯಿಸಬಹುದು. ಒತ್ತಡಕ್ಕೆ ಒಳಗಾದ ವೇಳೆ ನೀವು ತಿನ್ನಿ. ಆದರೆ ಒತ್ತಡ ನಿವಾರಣೆ ಮಾಡುವಂತಹ ಆಹಾರವನ್ನೇ ತಿನ್ನಿ.

ಕಾಟೇಜ್ ಚೀಸ್ ಮತ್ತು ಹಣ್ಣುಗಳು

ಕಾಟೇಜ್ ಚೀಸ್ ಮತ್ತು ಹಣ್ಣುಗಳು

ಸಕ್ಕರೆ ಅಂಶವು ತುಂಬಾ ಕಡಿಮೆ ಇರುವ ಮತ್ತು ಪ್ರೋಟೀನ್ ಅಧಿಕವಿರುವಂತಹ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದು. ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅಧಿಕವಾಗಿ ರುವಂತಹ ಕಾಟೆಜ್ ಚೀನ್ ನ್ನು ವಿಟಮಿನ್ ಸಿ ಅಧಿಕವಾಗಿ ರುವಂತಹ ಕಿತ್ತಳೆ ಜತೆಗೆ ಸೇರಿಸಿಕೊಂಡು ತಿನ್ನಿ. ಕಿತ್ತಳೆ ಹಣ್ಣಿನಲ್ಲಿ ಇರುವಂತಹ ವಿಟಮಿನ್ ಸಿ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು ಮತ್ತು ಇದು ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಅಸ್ಪರಗಸ್ (ಶತಾವರಿ)

ಅಸ್ಪರಗಸ್ (ಶತಾವರಿ)

ಅಸ್ಪರಗಸ್ ನಲ್ಲಿ ಉನ್ನತ ಮಟ್ಟದ ಫಾಲಿಕ್ ಆಮ್ಲವಿದೆ ಮತ್ತು ಇದು ಮನಸ್ಥಿತಿ ಬದಲಾವಣೆಯನ್ನು ಸಮತೋಲನದಲ್ಲಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಒತ್ತಡ ನಿವಾರಣೆಗೆ ಇದು ನೆರವಾಗುವುದು. ಬೇರೆಲ್ಲಾ ರೀತಿಯ ಒತ್ತಡ ನಿವಾರಕದಂತೆ ಅಸ್ಪರಗಸ್ ಕೂಡ ಮೆದುಳಿನಲ್ಲಿ ಸೆರೊಟಿನಿನ್ ಸ್ರವಿಸುವಿಕೆ ಹೆಚ್ಚಿಸುವುದು.

ಹಸಿರು, ಹಳದಿ ಮತ್ತು ಕಿತ್ತಳೆ ಬಣ್ಣದ ತರಕಾರಿಗಳು

ಹಸಿರು, ಹಳದಿ ಮತ್ತು ಕಿತ್ತಳೆ ಬಣ್ಣದ ತರಕಾರಿಗಳು

ಮೆದುಳಿನಲ್ಲಿ ಸೆರೊಟಿನಿನ್ ಸ್ರವಿಸುವರಿಕೆಯು ನಮ್ಮ ಆಹಾರ ಕ್ರಮದ ಮೇಲೆ ಅಲವಂಬಿತವಾಗಿರುವುದು. ಹಸಿರು, ಹಳದಿ ಮತ್ತು ಕಿತ್ತಳೆ ಬಣ್ಣದ ತರಕಾರಿಗಳನ್ನು ಸೇವಿಸುವುದರಿಂದ ಮೆದುಳಿನಲ್ಲಿ ಸೆರೊಟಿನಿನ್ ಸ್ರವಿಸುವಿಕೆಗೆ ನೆರವಾಗುವುದು. ಈ ತರಕಾರಿಗಳಲ್ಲಿ ಇರುವಂತಹ ಅಮಿನೊ ಆಮ್ಲ ಎಲ್ ಟ್ರಿಪ್ಟೊಪಾನ್ ನಿಂದಾಗಿ ಸೆರೊಟಿನಿನ್ ಸ್ರವಿಸುವಿಕೆ ಹೆಚ್ಚಾಗುವುದು. ಮಾಂಸದಲ್ಲಿ ಕೂಡ ಎಲ್ ಟ್ರಿಪ್ಟೊಪಾನ್ ಎನ್ನುವಂತಹ ಅಂಶವಿದೆ. ಆದರೆ ತರಕಾರಿಗಳಲ್ಲಿ ಇರುವಂತಹ ಟ್ರಿಪ್ಟೊಪಾನ್ ಪ್ರಮಾಣಕ್ಕೆ ಇದು ಸರಿಹೊಂದುವುದಿಲ್ಲ. ಇದರಿಂದ ಒತ್ತಡದ ಸಂದರ್ಭದಲ್ಲಿ ಮಾಂಸದ ಬದಲಿಗೆ ತರಕಾರಿ ಆಯ್ಕೆ ಮಾಡಿ.

ಮೀನು

ಮೀನು

ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲವಿದ್ದು, ಇದು ಒತ್ತಡದ ಹಾರ್ಮೋನ್ ಕಾರ್ಟಿಸೊಲ್ ನ ಬಿಡುಗಡೆಯನ್ನು ತಡೆಯುವುದು. ಇದು ನರಗಳಲ್ಲಿ ಒತ್ತಡ ಕಡಿಮೆ ಮಾಡಿ, ಮನಸ್ಸನ್ನು ಶಾಂತವಾಗಿಸುವುದು. ಮೀನನ್ನು ಅಧಿಕವಾಗಿ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವ ಕಾರಣದಿಂದಾಗಿ ಅದು ಖಿನ್ನತೆ ಪ್ರಮಾಣ ಕಡಿಮೆ ಮಾಡುವುದು ಮತ್ತು ಇತರ ಮಾನಸಿಕ ಸಮಸ್ಯೆಯನ್ನು ತಡೆಯುವುದು. ಇದರಿಂದ ಮೀನು ಸೇವಿಸಿ ಮತ್ತು ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.

ಓಟ್ ಮೀಲ್

ಓಟ್ ಮೀಲ್

ಓಟ್ ಮೀಲ್ ನಲ್ಲಿ ಉನ್ನತ ಮಟ್ಟದ ಕಾರ್ಬೊಹೈಡ್ರೇಟ್ಸ್ ಗಳು ಇವೆ. ಇದರಿಂದಾಗಿ ಮೆದುಳಿನಲ್ಲಿ ಸೆರೊಟೊನಿನ್ ಉತ್ಪತ್ತಿಯು ಉತ್ತೇಜಿಸಲ್ಪಡುವುದು. ಇದರಿಂದಾಗಿ ಕಾರ್ಬೊಹೈಡ್ರೇಟ್ಸ್ ಹೀರುವಿಕೆಯು ನಿಧಾನವಾಗುವುದು ಮತ್ತು ಸೆರೊಟೊನಿನ್ ಹರಿವು ಸ್ಥಿರವಾಗುವುದು. ಇದರಿಂದ ನೀವು ಕೋಪಗೊಳ್ಳುವುದು ತಪ್ಪುವುದು ಮತ್ತು ಒತ್ತಡ ಕಡಿಮೆ ಆಗುವುದು.

ಬಸಳೆ/ಪಾಲಕ್

ಬಸಳೆ/ಪಾಲಕ್

ಬಸಳೆಯಲ್ಲಿ ಉನ್ನತ ಮಟ್ಟದ ಮೆಗ್ನಿಶಿಯಂ ಇದೆ. ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಮೆಗ್ನಿಶಿಯಂ ಸಿಗದೆ ಇದ್ದಾಗ ಮೈಗ್ರೇನ್ ಉಂಟಾಗುವುದು. ಇದರಿಂದಾಗಿ ದೇಹವು ಬಳಲಿದಂತೆ ಆಗುವುದು. ಇದರಿಂದ ನಿಮ್ಮ ಆಹಾರ ಕ್ರಮದಲ್ಲಿ ಬಸಳೆ ಅಥವಾ ಪಾಲಕ ಸೇರಿಸಿಕೊಳ್ಳಿ. ಇದನ್ನು ನೀವು ಸಲಾಡ್ ಅಥವಾ ಬೇರೆ ರೂಪದಲ್ಲಿ ಸೇವಿಸಬಹುದು.

ಕಿತ್ತಳೆ

ಕಿತ್ತಳೆ

ಬೆಳಗ್ಗೆ ನಿಮಗೆ ಒಂದು ಕಡೆ ಸಂದರ್ಶನಕ್ಕೆ ಹೋಗಲಿಕ್ಕಿದೆ. ಆದರೆ ತುಂಬಾ ನರ್ವಸ್ ಆಗಿದ್ದೀರಿ. ಈ ವೇಳೆ ನೀವು ಒತ್ತಡ ನಿವಾರಣೆ ಮಾಡಲು ಒಂದು ಲೋಟ ಕಿತ್ತಳೆ ಜ್ಯೂಸ್ ಕುಡಿಯಬೇಕು. ಕಿತ್ತಳೆಯಲ್ಲಿ ವಿಟಮಿನ್ ಸಿ ಅಧಿಕವಾಗಿದೆ ಮತ್ತು ಇದು ಒತ್ತಡದ ಹಾರ್ಮೋನು ಕಡಿಮೆ ಮಾಡುವಲ್ಲಿ ತುಂಬಾ ಅದ್ಭುವಾಗಿ ಕೆಲಸ ಮಾಡುವುದು.

ಹಾಲು

ಹಾಲು

ಕೆನಭರಿತ ಹಾಲು ಸೇವನೆಯು ಒತ್ತಡ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಲಿನಲ್ಲಿ ಇರುವಂತಹ ಟ್ರಿಪ್ಟೊಪಾನ್ ದೇಹದಲ್ಲಿ ಸೆರೊಟಿನಿನ್ ಉತ್ಪತ್ತಿಗೆ ನೆರವಾಗುವುದು ಮತ್ತು ಮನಸ್ಥಿತಿ ಸ್ಥಿರವಾಗಿ ಇಡುತ್ತದೆ. ಬಿಸಿ ಹಾಲು ಕುಡಿದರೆ ಅದು ನಿದ್ರಾಹೀನತೆ ಮತ್ತು ಬಳಲಿಕೆ ತಪ್ಪಿಸುವುದು. ಹಾಲಿನಲ್ಲಿ ಇರುವಂತಹ ಕ್ಯಾಲ್ಸಿಯಂನಿಂದಾಗಿ ಸ್ನಾಯುಗಳ ಸೆಳೆತ ಮತ್ತು ಒತ್ತಡವನ್ನು ಕಡಿಮೆ ಮಾಡಬಹುದು. ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಬಿ12 ಮತ್ತು ಬಿ22 ಒತ್ತಡಕ್ಕೆ ಕಾರಣವಾಗುವಂತಹ ಫ್ರೀ ರ್ಯಾಡಿಕಲ್ ನ್ನು ತೆಗೆದುಹಾಕುವುದು.

ಬಾದಾಮಿ, ಪಿಸ್ತಾ ಮತ್ತು ಅಕ್ರೋಡ

ಬಾದಾಮಿ, ಪಿಸ್ತಾ ಮತ್ತು ಅಕ್ರೋಡ

ಬಾದಾಮಿಯು ನಿಮ್ಮಲ್ಲಿ ಇರುವಂತಹ ಕೋಪವನ್ನು ಹೊರಗೆ ಹಾಕಿ ಒತ್ತಡ ಕಡಿಮೆ ಮಾಡುವುದು. ಬಾದಾಮಿಯಲ್ಲಿ ಉನ್ನತ ಮಟ್ಟದ ವಿಟಮಿನ್ ಬಿ2 ಮತ್ತು ಇ, ಮೆಗ್ನಿಶಿಯಂ ಮತ್ತು ಸತು ಇದೆ. ಮೊದಲ ಎರಡು ಅಂಶಗಳು ಸೆರೊಟಿನಿನ್ ಸ್ರವಿಸುವಿಕೆಗೆ ಅಗ್ರ ಕಾರಣವಾಗಿದೆ. ಸೆರೊಟಿನಿನ್ ಒಳ್ಳೆಯ ಭಾವನೆ ಉಂಟು ಮಾಡುವುದು. ಅದೇ ಸತು ಒತ್ತಡ ನಿವಾರಿಸಲು ನೆರವಾಗುವುದು. ವಿಟಮಿನ್ ಬಿ2 ಮತ್ತು ಇ ಒತ್ತಡದಿಂದಾಗಿ ಉಂಟಾಗುವಂತಹ ಕೆಲವೊಂದು ಅಪಧಮನಿ ಕಾಯಿಲೆಯನ್ನು ತಡೆಯುವುದು ಮತ್ತು ಒತ್ತಡ ಉಂಟು ಮಾಡು ಫ್ರೀ ರ್ಯಾಡಿಕಲ್ ನ್ನು ತೆಗೆಯುವುದು. ಬಾದಾಮಿ ನಿಮಗೆ ಇಷ್ಟವಿಲ್ಲದೆ ಇದ್ದರೆ ಆಗ ನೀವು ಪಿಸ್ತಾ ಮತ್ತು ವಾಲ್ ನಟ್ ಸೇವಿಸಬಹುದು. ಒತ್ತಡವು ಶಾಂತವಾಗಿರುವ ಮೆದುಳನ್ನು ಪ್ರವೇಶ ಮಾಡಿದ ವೇಳೆ ಆಂಡ್ರೆನಾಲಿನ್ ಹಾರ್ಮೋನ್ ರಕ್ತದೊತ್ತಡ ಹೆಚ್ಚು ಮಾಡುವುದು. ಪಿಸ್ತಾ ಮತ್ತು ವಾಲ್ ನಟ್ ತಿಂದರೆ ಆಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಇದು ನೆರವಾಗುವುದು.

ಅವಕಾಡೊ

ಅವಕಾಡೊ

ಪೊಟಾಶಿಯಂ ಮತ್ತು ಏಕಪರ್ಯಾಪ್ತ ಕೊಬ್ಬು ಇರುವಂತಹ ಅವಕಾಡೊ ರಕ್ತದೊತ್ತಡ ಕಡಿಮೆ ಮಾಡಲು ನೆರವಾಗುವುದು. ನ್ಯಾಶನಲ್ ಹಾರ್ಟ್, ಲಂಗ್ ಆ್ಯಂಡ್ ಬ್ಲಡ್ ಇನ್ ಸ್ಟಿಟ್ಯೂಟ್ ಪ್ರಕಾರ ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ಅವಕಾಡೊ ಅತ್ಯುತ್ತಮ ಆಹಾರವಾಗಿದೆ.

English summary

Superfoods that can help you beat stress and anxiety

Can eating really relieve stress and anxiety? Is there anything like anti-stress foods? The answer is yes. Eating healthy has a crucial role to deal with stress. Eat when you’re stressed, but be sure that you grab only stress-fighting foods.
Story first published: Wednesday, May 8, 2019, 18:05 [IST]
X
Desktop Bottom Promotion