For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಮಾವಿನ ಹಣ್ಣು ಕ್ಯಾನ್ಸರ್ ರೋಗವನ್ನು ನಿಯಂತ್ರಿಸುತ್ತದೆಯಂತೆ!

|

ಬೇಸಿಗೆಯ ತಾಪ ಏರುತ್ತಿದ್ದಂತೆಯೇ ಮಾವಿನ ಕಾಲವೂ ಹತ್ತಿರಾಗುತ್ತಾ ಬರುತ್ತದೆ. ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವಿನ ಹತ್ತು ಹಲವು ವಿಧಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಡುತ್ತವೆ. ಮಾವನ್ನು ಮಿಡಿಯಾಗಿಯೂ, ಕಾಯಿಯಾಗಿಯೂ, ಹಣ್ಣಾಗಿಯೂ ಸೇವಿಸುವ ಮೂಲಕ ವಿವಿಧ ಬಗೆಯ ಪೋಷಕಾಂಶಗಳನ್ನು ಪಡೆಯಬಹುದು. ಮಾವಿನ ಹಣ್ಣನ್ನು ಕತ್ತರಿಸಿ ತಿರುಳನ್ನು ನೇರವಾಗಿಯೇ ತಿನ್ನುವುದು ಹೆಚ್ಚು ಜನರು ಇಷ್ಟಪಡುವ ವಿಧಾನ. ಉಳಿದಂತೆ ಇದರ ತಿರುಳಿನ ಜ್ಯೂಸ್, ರಸವನ್ನು ಸಾಂದ್ರೀಕರಿಸಿ ಮಾಡಿದ ಖಾದ್ಯ, ಇತರ ಹಣ್ಣಿನ ರಸಗಳೊಂದಿಗೆ ಮಾಡಿದ ರಾಸಾಯನ, ಐಸ್ ಕ್ರೀಂ, ತಂಬುಳಿ ಹೀಗೇ ನಾನಾ ವಿಧದಲ್ಲಿ ಮಾವಿನ ರುಚಿ ಎಲ್ಲರ ಮನಗೆಲ್ಲುತ್ತದೆ.

ಅದರಲ್ಲೂ ಮಾವಿನ ಹಣ್ಣಿನ ಜ್ಯೂಸ್ ಒಂದು ಲೋಟ ಮುಂಜಾನೆದ್ದು ಕುಡಿಯುವ ಮೂಲಕ ಇಡಿಯ ದಿನ ಚಟುವಟಿಕೆಯಿಂದಿರಲು ನೆರವಾಗುತ್ತದೆ. ಮಾವಿನ ಹಣ್ಣಿನ ಕಾಲದಲ್ಲಿ ಪುಷ್ಕಳವಾಗಿ ಸಿಗುವ ಮಾವಿನ ಹಣ್ಣನ್ನು ಸಾಕಷ್ಟು ಖರೀದಿಸಿ ತಿನ್ನುವ ಮೂಲಕ ಆರೋಗ್ಯ ಮತ್ತು ಸೌಂದರ್ಯವನ್ನು ವೃದ್ಧಿಸಿಕೊಳ್ಳಿ. ಇದರಲ್ಲಿ ವಿಫುಲವಾಗಿರುವ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುವ ಜೊತೆಗೇ ಇದರಲ್ಲಿರುವ ವಿಟಮಿನ್ ಕೆ ರಕ್ತಸ್ರಾವ ತಡೆಗಟ್ಟುವ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಮಾವಿನ ಕಾಯಿಯಲ್ಲಿ ವಿಟಮಿನ್ ಕೆ ಪ್ರಮಾಣ ಒಂದು ಸಾಮಾನ್ಯ ಗಾತ್ರದ ಕಾಯಿಯಲ್ಲಿ ದಿನದ ಅಗತ್ಯದ ಹನ್ನೊಂದು ಶೇಖಡಾದಷ್ಟಿರುತ್ತದೆ. ಮಾವಿನ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಮತ್ತು ಮ್ಯಾಂಗಿಫೆರಿನ್ ಎಂಬ ಆಂಟಿ ಆಕ್ಸಿಡೆಂಟು ಇದೆ. ಇದು ರಕ್ತದ ಒತ್ತಡವನ್ನು ಸಮಸ್ಥಿತಿಯಲ್ಲಿಡಲು ಮತ್ತು ನಿಯಂತ್ರಿಸಲು ನೆರವಾಗುತ್ತದೆ. ಇನ್ನು ಮಾವಿನ ಹಣ್ಣಿನಲ್ಲಿ ಇರುವಂತಹ ಕೆಲವೊಂದು ಅಂಶಗಳು ಕರುಳು ಮತ್ತು ಸ್ತನ ಕ್ಯಾನ್ಸರ್ ನ ಅಂಗಾಂಶಗಳನ್ನು ತಡೆಯುವುದು ಎಂದು ಪ್ರಯೋಗಾಲಯದಲ್ಲೂ ಸಾಬೀತಾಗಿದೆ. ಟೆಕ್ಸಾಸ್ ಅಗ್ರಿಲೈಫ್ ರಿಸರ್ಚ್ ಫುಡ್ ಸೈಂಟಿಟ್ಸ್ ನಡೆಸಿರುವಂತಹ ಹೊಸ ಅಧ್ಯಯನದ ಪ್ರಕಾರ ಮಾವಿನ ಹಣ್ಣುಗಳು ಕ್ಯಾನ್ಸರ್ ತಡೆಯುವುದು ಎಂದು ತಿಳಿದುಬಂದಿದೆ. ಇಲ್ಲಿ ಮುಖ್ಯವಾಗಿ ಕೆಂಟ್, ಫ್ರಾನ್ಸಿನೆ ಮುಂತಾದ ಮಾವಿನ ಹಣ್ಣುಗಳ ಪರೀಕ್ಷೆ ಮಾಡಿರುವರು.

ಅಧ್ಯನಗಳ ಪ್ರಕಾರ

ವಿಶ್ವದ ಹೆಚ್ಚಿನ ಭಾಗಗಳಲ್ಲಿ ಪುರಾತನ ಕಾಲದಿಂದಲೂ ತಿನ್ನುತ್ತಿರುವಂತಹ ಮಾವಿನ ಹಣ್ಣಿನಲ್ಲಿ ಇರುವಂತಹ ಆರೋಗ್ಯ ಲಾಭಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ದ ನ್ಯಾಶನಲ್ ಮ್ಯಾಂಗೊ ಬೋರ್ಡ್ ನವರ ಸಹಭಾಗಿತ್ವದಲ್ಲಿ ನಡೆದಿರುವಂತಹ ವಿವಿಧ ರೀತಿಯ ಅಧ್ಯನಗಳಿಂದಾಗಿ ಮಾವಿನ ಹಣ್ಣಿನಲ್ಲಿ ಇರುವಂತಹ ವಿವಿಧ ರೀತಿಯ ಪೋಷಕಾಂಶ ಮೌಲ್ಯಗಳ ಬಗ್ಗೆ ತಿಳಿದುಬಂದಿದೆ.

ಹೆಚ್ಚಿನ ಜನವರು ಅಧಿಕ ಆಂಟಿಆಕ್ಸಿಡೆಂಟ್ ಸಾಮರ್ಥ್ಯವಿರುವ ಆಹಾರವನ್ನು ಅಧ್ಭುತ ಆಹಾರಗಳು ಎಂದು ಪರಿಗಣಿಸಲಿರುವರು. ಆದರೆ ಇಲ್ಲಿ ಮಾವಿನ ಹಣ್ಣು ಇಲ್ಲ ಎಂದು ಸುಸಾನ್ನೆ ಟಾಲ್ಕೊಟ್ ಕ್ಯಾನ್ಸರ್ ಕೋಶಗಳ ಮೇಲೆ ನಡೆಸಿರುವಂತಹ ಅಧ್ಯಯನಗಳಿಂದ ಹೇಳಿದ್ದಾರೆ. ನೇರಳೆಹಣ್ಣು, ದಾಳಿಂಬೆಯಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗಳಿಗೆ ಹೋಲಿಸಿದರೆ ಇದು ಅದರ ಹತ್ತಿರಕ್ಕೂ ಬರುವುದು. ಆದರೆ ತಂಡವು ಮಾವಿನ ಹಣ್ಣುಗಳನ್ನು ಕ್ಯಾನ್ಸರ್ ಕೋಶಗಳ ಮೇಲೆ ಪ್ರಯೋಗ ಮಾಡಿದೆ. ಮತ್ತು ಇದು ಕರುಳು ಮತ್ತು ಸ್ತನ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುವುದು ಎಂದು ಸುಸಾನ್ನೆ ಟಾಲ್ಕೊಟ್ ತಿಳಿಸಿದ್ದಾರೆ.

ಸರಾಸರಿ ವೈನ್ ದ್ರಾಕ್ಷಿಯಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗಿಂತ ನಾಲ್ಕರಿಂದ ಐದು ಪಟ್ಟು ಕಡಿಮೆ ಆಂಟಿಆಕ್ಸಿಡೆಂಟ್ ಇದರಲ್ಲಿದೆ ಮತ್ತು ಇದು ಕ್ಯಾನ್ಸರ್ ವಿರೋಧಿ ಕಾರ್ಯದಲ್ಲಿ ತುಂಬಾ ಉತ್ತಮವಾಗಿ ಕೆಲಸ ಮಾಡುವುದು. ಮಾನಸಿಕ ಮತ್ತು ಪೋಷಕಾಂಶಗಳ ದೃಷ್ಟಿಯಿಂದ ನೋಡಿದರೆ ಇದು ಉನ್ನತ ಮಟ್ಟದ ಸೂಪರ್ ಆಹಾರವಾಗಿದೆ ಎಂದು ಆಕೆ ಹೇಳುತ್ತಾರೆ. ಇದರಿಂದಾಗಿ ಮಾವಿನ ಹಣ್ಣನ್ನು ದಿನನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು.

Most Read: ರಾತ್ರಿ ವೇಳೆ ಮಾವಿನ ಹಣ್ಣು ತಿಂದರೆ, ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ

ಟಾಲ್ಕೊಟ್ ಅವರು ಮಾವಿನ ಹಣ್ಣಿನಲ್ಲಿ ಇರುವಂತಹ ಪಾಲಿಫಿನಾಲ್ ಗಳನ್ನು ಕರುಳು, ಸ್ತನ, ಶ್ವಾಸಕೋಶ, ರಕ್ತ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಮೇಲೆ ಪ್ರಯೋಗಿಸಿ ನೋಡಿದ್ದಾರೆ. ಫಾಲಿಫಿನಾಲ್ ಗಳು ಸಸ್ಯಜನ್ಯ ಆಹಾರದಲ್ಲಿ ಇರುವಂತಹ ನೈಸರ್ಗಿಕ ಅಂಶವಾಗಿದೆ ಮತ್ತು ಇದು ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಶ್ವಾಸಕೋಶ, ರಕ್ತ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಮೇಲೆ ಮಾವಿನ ಹಣ್ಣು ಪ್ರಭಾವ ಬೀರಿದೆ. ಆದರೆ ಸ್ತನ ಮತ್ತು ಕರುಳಿನ ಕ್ಯಾನ್ಸರ್ ಮೇಲೆ ಇದು ಅತಿಯಾಗಿ ಕೆಲಸ ಮಾಡಿದೆ.

ಎಲ್ಲಾ ಕೋಶಗಳು ಕ್ಯಾನ್ಸರ್ ವಿರೋಧಿ ಅಂಸಗಳಿಗೆ ಸೂಕ್ಷ್ಮತೆಯನ್ನು ಹೊಂದಿಲ್ಲ ಎಂದು ನಾವು ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ಆದರೆ ಸ್ತನ ಮತ್ತು ಕರುಳಿನ ಕ್ಯಾನ್ಸರ್ ನ ಕೋಶಗಳು ಇಲ್ಲಿ ಸಾವನ್ನಪ್ಪಿದೆ. ಕರುಳಿನ ಸಾಮಾನ್ಯ ಕೋಶಗಳನ್ನು ಕರುಳಿನ ಕ್ಯಾನ್ಸರ್ ನ ಕೋಶಗಳ ಜತೆಗೆ ಪರೀಕ್ಷೆ ಮಾಡಿ ನೋಡಿದ ವೇಳೆ ಮಾವಿನ ಹಣ್ಣಿನಲ್ಲಿ ಇರುವಂತಹ ಫಾಲಿಫಿನಾಲ್ ಗಳು ಸಾಮಾನ್ಯ ಕೋಶಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಅವರು ಹೇಳಿದ್ದಾರೆ.

ಕರುಳಿನ ಕ್ಯಾನ್ಸರ್ ನ ಪದರಗಳನ್ನು ಅವರು ಮತ್ತೆ ಪರೀಕ್ಷೆಗೆ ಒಳಪಡಿಸಿರುವರು. ಯಾಕೆಂದರೆ ಮಾವಿನ ಹಣ್ಣಿನಲ್ಲಿ ಸಣ್ಣ ಅಣುಗಳು ಇದೆ ಮತ್ತು ಇದು ಹೀರಿಕೊಳ್ಳಬಹುದಾಗಿದೆ ಮತ್ತು ದೊಡ್ಡ ಅಣುಗಳನ್ನು ಹೀರಿಕೊಳ್ಳಲು ಸಾಧ್ಯವಿಲ್ಲ. ಇದರಿಂದಾಗಿ ಇದು ಕರುಳಿನಲ್ಲಿ ಉಳಿದುಕೊಳ್ಳುವುದು. ಸಾಮಾನ್ಯ ಕೋಶಗಳು ಕೊಲ್ಲಲ್ಪಡುವುದಿಲ್ಲ ಎಂದು ನಾವು ತಿಳಿದುಕೊಂಡಿದ್ದೇವೆ. ಇದರಿಂದ ದೇಹದ ಮೇಲೆ ಮಾವಿನ ಹಣ್ಣು ಯಾವುದೇ ಪರಿಣಾಮ ಬೀರದು. ಕ್ಯಾನ್ಸರ್ ನ ಕೋಶಗಳನ್ನು ನಾಶ ಮಾಡಿಕೊಂಡು ಆರೋಗ್ಯವಂತ ಕೋಶಗಳನ್ನು ಉಳಿಸಿಕೊಳ್ಳುವುದು ಸಾಮಾನ್ಯ ಪರೀಕ್ಷೆಯಾಗಿದೆ.

ಟಾಲ್ಕೊಟ್ ಅವರು ಕಂಡುಕೊಂಡಿರುವ ಪ್ರಕಾರ ಫಾಲಿಫಿನಾಲ್ ಗಳು ಅದರಲ್ಲೂ ಪ್ರಮುಖವಾಗಿ ಗಾಲ್ಲೊಆನಿನ್ಸ್ ಎನ್ನುವುದು ಬಯೋಆಕ್ಟಿವ್ ನ ಒಂದು ಅಂಶವಾಗಿದೆ. ಟ್ಯಾನಿನ್ಸ್ ಎನ್ನುವುದು ಕೂಡ ಫಾಲಿಫಿನಾಲ್ ಗಳಾಗಿದ್ದು, ಇದು ಸ್ವಲ್ಪ ಮಟ್ಟಿಗೆ ಕಹಿ ಇರುವುದು ಅಥವಾ ಒಣಗುವುದು ಮತ್ತು ಇಂತಹ ಅಂಶವು ದ್ರಾಕ್ಷಿ ಬೀಜ, ವೈನ್ ಮತ್ತು ಚಾದಲ್ಲಿ ಇರುವುದು.

ಅಧ್ಯಯನಗಳು ಕಂಡುಕೊಂಡಿರುವ ಪ್ರಕಾರ ಕೋಶಗಳ ಆವರ್ತನದ ಮೇಲೆ ಇದು ಪರಿಣಾಮ ಬೀರುವುದು. ಇದು ತುಂಬಾ ಮಹತ್ವದ ಅಂಶ. ಸುಸಾನ್ನೆ ಟಾಲ್ಕೊಟ್ ಹೇಳುವ ಪ್ರಕಾರ ಕ್ಯಾನ್ಸರ್ ಕೋಶಗಳನ್ನು ಹೇಗೆ ತಡೆಯಬಹುದು ಅಥವಾ ನಿಲ್ಲಿಸಬಹುದು ಎನ್ನುವುದಕ್ಕೆ ಇದು ಸಾಧ್ಯತೆಯ ತಂತ್ರವಾಗಿದೆ. ಕೋಶಗಳು ಹಾನಿಗೀಡಾಗುವ ಅಥವಾ ಅದು ಹಾನಿಗೀಡಾಗುವಂತಹ ಸನಿಹದಲ್ಲಿ ಇರುವ ವೇಳೆ ಮಾವಿನ ಹಣ್ಣಿನಲ್ಲಿ ಇರುವ ಫಾಲಿಫಿನಾಲ್ ಗಳು ಅಪಾಯವನ್ನು ತಪ್ಪಿಸುವುದು ಎಂದು ಅವರು ತಿಳಿಸಿದ್ದಾರೆ.

ಕರುಳಿನ ಅತಿಯಾದ ಉರಿಯೂತ ಇರುವಂತಹ ಜನರಲ್ಲಿ ಕರುಳಿನ ಕ್ಯಾನ್ಸರ್ ಬರುವಂತಹ ಅಪಾಯವು ಅಧಿಕವಾಗಿರುವುದು ಎಂದು ಟಾಲ್ಕೋಟ್ ಅವರು ಪ್ರಯೋಗಾಲಯದಲ್ಲಿ ನಡೆಸಿರುವಂತಹ ಅಧ್ಯಯನದಿಂದ ಕಂಡುಕೊಂಡಿದ್ದಾರೆ. ಅಲ್ಲಿಂದ ಯಾವುದೇ ಸಾಬೀತು ಮಾಡುವಂತಹ ಪರಿಣಾಮವಿದ್ದರೆ, ಆಗ ನಾವು ಇನ್ನು ಹೆಚ್ಚಿನ ಪ್ರಯೋಗಾಲಯದ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿರುವರು.

Most Read: ಬಿರು ಬೇಸಿಗೆಗೆ ತಂಪಾದ ಪುದೀನಾ-ಮಾವಿನಕಾಯಿ ಪಾನಕ

ಫ್ಲೋರಿಡಾದ ವಿಂಟರ್ ಪಾರ್ಕ್ ನಲ್ಲಿ ಇರುವಂತಹ ನ್ಯಾಶನಲ್ ಮ್ಯಾಂಗೋ ಬೋರ್ಡ್ ನ ಪ್ರಕಾರ ಅಮೆರಿಕಾದಲ್ಲಿ ತಿನ್ನುವಂತಹ ಹೆಚ್ಚು ಮಾವಿನ ಹಣ್ಣುಗಳನ್ನು ಮ್ಯಾಕ್ಸಿಕೋ, ಈಕ್ವಡೋರ್, ಪೆರು, ಬ್ರೆಜಿಲ್, ಗೌಟೆಮಾಲಾ ಮತ್ತು ಹೈಟಿಯಲ್ಲಿ ಬೆಳೆಯಲಾಗುತ್ತದೆ. ಏಶ್ಯಾ ಮತ್ತು ಭಾರತದಲ್ಲಿ ಕೂಡ ಮಾವಿನ ಹಣ್ಣಿಗೆ ತವರು ಮತ್ತು ಇಲ್ಲಿ ಹೆಚ್ಚಾಗಿ ಮಾವು ಬೆಳೆಯುತ್ತಾರೆ. 1800ರಲ್ಲಿ ಅಮೆರಿಕಾಗೆ ಕೂಡ ಮಾವಿನ ಹಣ್ಣುಗಳನ್ನು ಇಲ್ಲಿಂದ ಪರಿಚಯಿಸಲಾಯಿತು ಮತ್ತು ಕ್ಯಾಲಿಫೋರ್ನಿಯಾ ಮತ್ತು ಫ್ಲೊರಿಡಾದಲ್ಲಿ ಈಗಲೂ ಕೆಲವು ಎಕ್ರೆ ಮಾವಿನ ತೋಪುಗಳು ಇದೆ.

ಇನ್ನು ಮಾವಿನಹಣ್ಣಿನಲ್ಲಿ ಕಬ್ಬಿಣಾಂಶ ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇದು ಅನಿಮೀಯಾದಿಂದ ಬಳಲುತ್ತಿರುವವರಿಗೆ ಉಪಯೋಗಕಾರಿ ಯಾಗಿದೆ. ಮಾವಿನ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದ ಕಣಗಳು ಹೆಚ್ಚಾಗಿ ಅನಿಮೀಯಾವನ್ನು ನಿವಾರಿಸುತ್ತದೆ. ಲಿವರ್ ತೊಂದರೆಗಳಿಗೆ ಮಾವಿನ ಕಾಯಿ ಉತ್ತಮವಾದ ಔಷಧಿರೂಪದ ಆಹಾರವಾಗಿದೆ. ಹಸಿಮಾವಿನ ಕಾಯಿಯನ್ನು ಜಗಿದು ನುಂಗುವುದರಿಂದ ಪಿತ್ತಕೋಶ ಹೆಚ್ಚಿನ ಪಿತ್ತರಸವನ್ನು ಸ್ರವಿಸಲು ನೆರವಾಗುತ್ತದೆ. ಈ ರಸವು ಕರುಳಿನಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ.

ಬೇಸಿಗೆಯ ಪರ್ಯಾಯ ಪರಿಣಾಮಗಳಾದ ಬೆವರುಸಾಲೆ ಮತ್ತು ಬೆವರುನಾತದಿಂದ ಮುಕ್ತಿ ಪಡೆಯಲು ಮಾವಿನಕಾಯಿಯ ಸೇವನೆ ಉತ್ತಮವಾಗಿದೆ.ಮಾವಿನ ಹಣ್ಣಿನಲ್ಲಿ ಬಿಸಿಲಿನ ಝಳವನ್ನು ಚರ್ಮವು ಸಹಿಸಲು ಸಾಧ್ಯವಾಗಿಸಲು ಹಲವು ಪೋಷಕಾಂಶಗಳಿವೆ. ಮಾವಿನ ಹಣ್ಣಿನಲ್ಲಿರುವ ವಿಟಮಿನ್ ಸಿ. ಕಾರಣದಿಂದ ಅಸ್ಥಿಮಜ್ಜೆಯಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಸಹಕರಿಸುತ್ತದೆ. ಜೊತೆಗೇ ನರಗಳ ಒಳಭಾಗದ ಜೀವಕೋಶಗಳು ಹೆಚ್ಚು ಬಲಗೊಳ್ಳಲು ಅಗತ್ಯವಾದ ಪೋಷಕಾಂಶಗಳನ್ನು ನೀಡುವುದರಿಂದ ರಕ್ತಸಂಚಾರ ಸುಗಮಗೊಳ್ಳುತ್ತದೆ.

ನಾರು ಕಡಿಮೆ ಇರುವ ಆಹಾರಗಳನ್ನು ಸೇವಿಸುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಒಂದು ವೇಳೆ ಮಲವಿಸರ್ಜನೆ ಸಮಯಕ್ಕೆ ಸರಿಯಾಗಿ ಆಗದೇ ಇದ್ದರೆ ಮತ್ತು ಕಷ್ಟಕರವಾಗಿದ್ದರೆ ಹಸಿಮಾವಿನ ಕೆಲವು ತುಂಡುಗಳನ್ನು ಸೇವಿಸುವುದರಿಂದ ಶೀಘ್ರ ಪರಿಹಾರ ದೊರಕುತ್ತದೆ. ಕೆಲವು ಮಾವಿನ ಕಾಯಿಯ ತುಂಡುಗಳಿಗೆ ಉಪ್ಪು ಚಿಮುಕಿಸಿ ಕೊಂಚ ಜೇನು ಸವರಿ ತಿನ್ನುವುದರಿಂದ ಉಪಶಮನ ದೊರಕುತ್ತದೆ. ಬೇಸಿಗೆಯಲ್ಲಿ ಬೆವರುವುದು ದೇಹದ ತಾಪಮಾನವನ್ನು ಉಳಿಸಿಕೊಳ್ಳಲು ಅಗತ್ಯವಾಗಿದೆ. ಆದರೆ ಇತರ ಕಾರಣಗಳಿಂದ ಅಗತ್ಯಕ್ಕಿಂತಲೂ ಹೆಚ್ಚು ಪ್ರಮಾಣದ ಬೆವರು ಸುರಿಯುತ್ತಿದ್ದರೆ ಆ ಬೆವರಿನ ಮೂಲಕ ಉಪ್ಪು ಮತ್ತು ಕಬ್ಬಿಣಗಳೂ ಸೋರಿ ಹೋಗುತ್ತವೆ. ಮಾವಿನಕಾಯಿ ಈ ಕೊರತೆಯನ್ನು ಸರಿದೂಗಿಸುತ್ತದೆ. ದೇಹದ ತಾಪಮಾನವನ್ನು ಸಮದೂಗಿಸಿಕೊಳ್ಳಲು ಅಗತ್ಯವಿರುವಷ್ಟೇ ಬೆವರು ಹರಿಯಲು ಮಾವಿನ ಪೋಷಕಾಂಶಗಳು ನೆರವಾಗುತ್ತವೆ.

ಸಂಶೋಧನೆಗಳ ಪ್ರಕಾರ ಮಾವಿನಹಣ್ಣು ಪ್ರಾಕೃತಿಕವಾಗಿ ಮಧುಮೇಹದ ಮೇಲೆ ಹೋರಾಡುವ ಗುಣಗಳನ್ನು ಹೊಂದಿದೆ ಎಂದು ಧೃಢಪಟ್ಟಿದೆ. ಮಧುಮೇಹಿಗಳು ಮಾವಿನ ಹಣ್ಣನ್ನು ತಿನ್ನಬಾರದು ಎಂದು ಹೇಳುವುದು ಕೇವಲ ಒಂದು ಮೂಢನಂಬಿಕೆ. ಮಧುಮೇಹಿಗಳು ಇದರ ಸಿಹಿಗೆ ಭಯಪಡುತ್ತಾರೆ. ಆದರೆ ಸಂಶೋಧನೆಗಳು ಇದರಲ್ಲಿರುವ ಅಂಶಗಳು ಮಧುಮೇಹವನ್ನು ತಡೆಯಲು ಸಹಕರಿಸುತ್ತವೆ ಎಂದು ತಿಳಿಸಿದೆ. ಹಲ್ಲು ಮತ್ತು ಒಸಡುಗಳ ನಡುವಣ ಸಂದುಗಳಲ್ಲಿ ಆಹಾರ ಸಂಗ್ರಹವಾಗಿ ಕಾಲಕಾಲಕ್ಕೆ ಹಲ್ಲುಜ್ಜದೇ ಇದ್ದರೆ ಸೋಂಕು ಉಂಟಾಗಿ ಒಸಡುಗಳು ಸಡಿಲಗೊಳ್ಳುತ್ತವೆ. ಹಸಿಮಾವಿನ ಕಾಯಿಯನ್ನು ತಿನ್ನುವುದರಿಂದ ಒಸಡುಗಳಿಗೆ ಅಗತ್ಯವಾದ ಪೋಷಕಾಂಶಗಳು ಲಭ್ಯವಾಗಿ ಸಂದುಗಳನ್ನು ಕಿರಿದುಗೊಳಿಸುತ್ತದೆ. ಪರಿಣಾಮವಾಗಿ ಆಹಾರ ಸಂಗ್ರಹವಾಗುವ ಪ್ರಮಾಣವೂ ಕಡಿಮೆಯಾಗಿ ಹಲ್ಲು ಮತ್ತು ಒಸಡುಗಳ ಆರೋಗ್ಯ ಉತ್ತಮಗೊಳ್ಳುತ್ತದೆ. ದುರ್ವಾಸನೆಯೂ ಕಡಿಮೆಯಾಗುತ್ತದೆ.

English summary

Study: Mango Prevents Certain Cancers

Though the mango is an ancient fruit heavily consumed in many parts of the world, little has been known about its health aspects. The National Mango Board commissioned a variety of studies with several U.S. researchers to help determine its nutritional value."If you look at what people currently perceive as a superfood, people think of high antioxidant capacity, and mango is not quite there," said Dr. Susanne Talcott, who with her husband, Dr. Steve Talcott, conducted the study on cancer cells
Story first published: Wednesday, May 15, 2019, 18:00 [IST]
X