For Quick Alerts
ALLOW NOTIFICATIONS  
For Daily Alerts

ಸ್ಪೈನಲ್ ಸ್ಟೆನೋಸಿಸ್ ಕಾರಣಗಳು, ಲಕ್ಷಣಗಳು, ಚಿಕಿತ್ಸೆ

|

ಬೆನ್ನು ಮೂಳೆಯು ಬೆನ್ನುಹುರಿಯನ್ನು ರಕ್ಷಿಸುತ್ತದೆ ಮತ್ತು ನೀವು ನಿಂತುಕೊಳ್ಳಲು ಮತ್ತು ಬಗ್ಗಲು ನೆರವಾಗುವುದು. ಅದಾಗ್ಯೂ, ಸ್ಪೈನಲ್ ಸ್ಟೆನೊಸಿಸ್ ಎನ್ನುವ ಸಮಸ್ಯೆಯು ಬೆನ್ನುಮೂಳೆಯ ಕಾಲುವೆಯ ಜಾಗವನ್ನು ಕಿರಿದು ಮಾಡುವುದರಿಂದಾಗಿ ನರಗಳು ಮತ್ತು ಬೆನ್ನುಹುರಿಯ ಮೇಲೆ ಅತಿಯಾದ ನೋವು ಕಾಣಿಸಿಕೊಳ್ಳುವುದು.

ಸಾಮಾನ್ಯವಾಗಿ ಇಂತಹ ಪರಿಸ್ಥಿತಯು 50ರ ಹರೆಯಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಕಂಡುಬರುವುದು. ಬೆನ್ನು ಮೂಳೆಯ ಮುರಿತ ಅಥವಾ ಬೆನ್ನುಮೂಳೆಯ ಗಾಯಕ್ಕೆ ಒಳಗಾಗಿದ್ದರೆ ಆಗ ಈ ಸಮಸ್ಯೆಯು ಬರಬಹುದು. ಈ ಸಮಸ್ಯೆಯು ಸಂಧಿವಾತ ಮತ್ತು ಸ್ಕೋಲಿಯೊಸಿಸ್ ನಿಂದಲೂ ಬರಬಹುದು. ಈ ಸಮಸ್ಯೆಯ ಕೆಲವು ಸಾಮಾನ್ಯ ಲಕ್ಷಣಗಳು ತೀವ್ರವಾಗಿ ಕಾಡುತ್ತದೆ ಮತ್ತು ಇನ್ನು ಕೆಲವೊಮ್ಮೆ ಇದು ಕಾಣಿಸಿಕೊಳ್ಳುವುದೇ ಇಲ್ಲ. ಈ ಪರಿಸ್ಥಿತಿ ಬಗ್ಗೆ ತಿಳಿಯಲು ನೀವು ಇನ್ನಷ್ಟು ತಿಳಿಯಿರಿ.

Spinal Stenosis

ಸ್ಪೈನಲ್ ಸ್ಟೆನೊಸಿಸ್ ಎಂದರೇನು?

ಬೆನ್ನಮೂಳೆಯ ನಡುವಿನ ಜಾಗವು ತುಂಬಾ ಕಿರಿದಾಗುತ್ತಾ ಹೋಗುವುದನ್ನು ಸ್ಪೈನಲ್ ಸ್ಟೆನೊಸಿಸ್ ಎಂದು ಕರೆಯಲಾಗುತ್ತದೆ. ಹೀಗೆ ಆ ಭಾಗದಲ್ಲಿ ಜಾಗವು ಕಿರಿದಾಗುವ ಕಾರಣದಿಂದ ಇಲ್ಲಿಂದ ಹಾದುಹೋಗುವಂತಹ ನರಗಳ ಮೇಲೆ ಹೆಚ್ಚು ಒತ್ತಡ ಬೀರುವುದು. ಈ ಪರಿಸ್ಥಿತಿಯು ಬೆನ್ನಿನ ಕೆಳಭಾಗ ಮತ್ತು ಕುತ್ತಿಗೆಯಲ್ಲಿ ಕಾಣಿಸಿಕೊಳ್ಳುವುದು. ನರಗಳ ಬುಡ ಮತ್ತು ಬೆನ್ನು ಹುರಿಯು ಒತ್ತಲ್ಪಟ್ಟಾಗ ಇದು ಬೆನ್ನುಹುರಿಗೆ ಚಿವುಟಿದಂತೆ ಆಗುವುದು ಮತ್ತು ನರಗಳಲ್ಲಿ ಸೆಳೆತ, ನೋವು, ದೌರ್ಬಲ್ಯ ಮತ್ತು ಸ್ಪರ್ಶವಿಲ್ಲದಿರುವ ಸಮಸ್ಯೆ ಕಾಣಿಸುವುದು. ಯಾವ ಭಾಗದಲ್ಲಿ ಇದು ಕುಗ್ಗಿದೆ ಎನ್ನುವುದರ ಮೇಲೆ ಅದರ ಲಕ್ಷಣಗಳು ಬೆನ್ನಿನ ಕೆಳಭಾಗ, ಕಾಲುಗಳು, ಕುತ್ತಿಗೆ, ಭುಜ ಮತ್ತು ಕೈಗಳಲ್ಲಿ ಕಾಣಿಸಿಕೊಳ್ಳಬಹುದು.

ಕೆಲವು ರೋಗಿಗಳಲ್ಲಿ ಈ ರೀತಿಯ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆ ಇರಬಹುದು. ಇನ್ನು ಕೆಲವು ಜನರಲ್ಲಿ ನೋವು, ಸ್ಪರ್ಶವಿಲ್ಲ ದಿರುವುದು ಮತ್ತು ಸ್ನಾಯುಗಳಲ್ಲಿ ದುರ್ಬಲತೆ ಕಂಡುಬರಬಹುದು. ಸಮಯ ಕಳೆದಂತೆ ಇದು ತುಂಬಾ ತೀವ್ರ ಸ್ವರೂಪ ಪಡೆದು ಕೊಳ್ಳಲಿದೆ. ಅಸ್ಥಿರಂಧ್ರತೆಯಿಂದಾಗಿ ಬೆನ್ನುಮೂಳೆಯಲ್ಲಿ ಉಂಟಾಗುವ ಸಣ್ಣಪುಟ್ಟ ಗಾಯಗಳಿಂದಾಗಿ ಈ ಪರಿಸ್ಥಿತಿ ಬರುವುದು. ಈ ಪರಿಸ್ಥಿತಿಯು ತೀವ್ರವಾದರೆ ಆಗ ವೈದ್ಯರು ಶಸ್ತ್ರಚಿಕಿತ್ಸೆ ಸೂಚಿಸುವರು. ಇದರಿಂದ ಬೆನ್ನು ಹುರಿ ಅಥವಾ ನರಗಳಿಗೆ ಅಲ್ಲಿ ಜಾಗ ಮಾಡಿಕೊಡಬಹುದು. ಸ್ಪೈನಲ್ ಸ್ಟೆನೊಸಿಸ್ ನಿಂದಾಗಿ ಬರುವಂತಹ ನೋವು ಯಾವಾಗಲೂ ನಡೆದಾಡುವಾಗ ಅಥವಾ ಇಳಿಜಾರು ಪ್ರದೇಶದಲ್ಲಿ, ಮೆಟ್ಟಿಲುಗಳಲ್ಲಿ ಇಳಿಯುವಾಗ ಕಂಡುಬರುವುದು. ಅಲ್ಲೇ ಕುಳಿತುಕೊಂಡರೆ ಇಂತಹ ನೋವು ಕಡಿಮೆ ಆಗುವುದು.

ಸ್ಪೈನಲ್ ಸ್ಟೆನೊಸಿಸ್ ನ ವಿಧಗಳು

ಬೆನ್ನಿನ ಯಾವ ಭಾಗದಲ್ಲಿ ಈ ಪರಿಣಾಮ ಉಂಟಾಗಿದೆ ಎನ್ನುವುದರ ಮೇಲೆ ಸ್ಪೈನಲ್ ಸ್ಟೆನೋಸಿಸ್ ನ ವಿಧವನ್ನು ಹೇಳಬಹುದು. ಸ್ಪೈನಲ್ ಸ್ಟೆನೋಸಿಸ್ ನಲ್ಲಿ ಎರಡು ಪ್ರಮುಖ ವಿಧಗಳು ಇವೆ.
•ಗರ್ಭಕಂಠದ ಸ್ಟೆನೊಸಿಸ್: ಈ ವಿಧದ ಪರಿಸ್ಥಿತಿಯಲ್ಲಿ ಕುತ್ತಿಗೆಯ ಮೂಳೆಯ ಭಾಗದಲ್ಲಿ ಸ್ಥಳವು ಕುಗ್ಗಿರುವುದು.
•ಸೊಂಟ ಸ್ಟೆನೋಸಿಸ್: ಈ ವಿಧದ ಸ್ಟೆನೋಸಿಸ್ ನಲ್ಲಿ ಬೆನ್ನಿನ ತುಂಬಾ ಕೆಳಗಿನ ಭಾಗದಲ್ಲಿ ಕುಗ್ಗುವಿಕೆಯು ಉಂಟಾಗುವುದು.
ಸ್ಪೈನಲ್ ಸ್ಟೆನೋಸಿಸ್ ಗೆ ಕಾರಣಗಳು
ಕೆಲವು ಜನರ ಬೆನ್ನಿನ ಕಾಲುವೆಯು ಹುಟ್ಟಿನಿಂದಲೇ ತುಂಬಾ ಕಿರಿದಾಗಿರುವುದು. ಇದನ್ನು ಜನ್ಮಜಾತ ಸ್ಟೆನೋಸಿಸ್ ಎಂದು ಕರೆಯಲಾಗುತ್ತದೆ. ಅದಾಗ್ಯೂ, ಇದಕ್ಕೆ ಮುಖ್ಯ ಕಾರಣವೆಂದರೆ ಅದು ವಯಸ್ಸಿಗೆ ಸಂಬಂಧಿಸಿದ್ದಾಗಿದೆ. ಈ ವಿಧದ ಸಮಸ್ಯೆಯನ್ನು ಎಕ್ವೈರ್ಡ್ ಸ್ಪೈನಲ್ ಸ್ಟೆನೋಸಿಸ್ ಎಂದು ಕರೆಯಲಾಗುತ್ತದೆ.
ಸ್ಪೈನಲ್ ಸ್ಟೆನೊಸಿಸ್ ಬರಲು ಕೆಲವೊಂದು ವೈದ್ಯಕೀಯ ಪರಿಸ್ಥಿತಿಗಳು
•ಪ್ಯಾಗೆಟ್ಸ್ ಕಾಯಿಲೆ
•ಉರಿಯೂತದ ಸ್ಪಾಂಡಿಲೊ ಸಂಧಿವಾತ
•ಬೆನ್ನಮೂಳೆಯ ಗಡ್ಡೆಗಳು
•ಅಸ್ಥಿಸಂದಿವಾತ

ಈ ಕೆಳಗಿನವು ಸ್ಪೈನಲ್ ಸ್ಟೆನೋಸಿಸ್ ನ ಅಪಾಯ ಹೆಚ್ಚಿಸುವುದು

•ವಯಸ್ಸು 50 ದಾಟಿದ್ದರೆ...
•ಜನ್ಮಜಾತನ ಬೆನ್ನುಕಾಲುವೆ ಕಿರಿದಾಗಿದ್ದರೆ
•ಮಹಿಳೆಯಾಗಿದ್ದರೆ
•ಹಿಂದಿನ ಗಾಯ ಅಥವಾ ಯಾವುದೇ ಬೆನ್ನಿನ ಶಸ್ತ್ರಚಿಕಿತ್ಸೆಯಾಗಿದ್ದರೆ

ಸ್ಪೈನಲ್ ಸ್ಟೆನೋಸಿಸ್ ನ ಲಕ್ಷಣಗಳು

ಈ ಪರಿಸ್ಥಿತಿಯ ಲಕ್ಷಣಗಳು ಕಂಡುಬಂದರೆ ಆಗ ಇದು ಸಾಮಾನ್ಯದಿಂದ ತೀವ್ರ ಪರಿಸ್ಥಿತಿಗೆ ತಲುಪುವುದನ್ನು ನೋಡಬಹುದು. ಸ್ಟೆನೋಸಿಸ್ ಯಾವ ಭಾಗದಲ್ಲಿ ಇದೆ ಮತ್ತು ನರಗಳ ಮೇಲೆ ಇದು ಎಷ್ಟು ಪರಿಣಾಮ ಬೀರಿದೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿದೆ.
ಗರ್ಭಕಂಠದ ಸ್ಪೈನಲ್ ಸ್ಟೆನೋಸಿಸ್
•ಕುತ್ತಿಗೆ ನೋವು
•ನಡೆದಾಡುವಾಗ ಮತ್ತು ದೇಹದ ಸಮತೋಲನದ ವೇಳೆ ನೋವು
•ತೀವ್ರ ಪರಿಸ್ಥಿತಿಯಲ್ಲಿ ಹೊಟ್ಟೆ ಅಥವಾ ಮೂತ್ರನಾಳವು ಸರಿಯಾಗಿ ಕಾರ್ಯನಿರ್ವಹಿಸದೆ ಇರಬಹುದು.
•ಕೈ, ಕಾಲು ಮತ್ತು ಪಾದದಲ್ಲಿ ದುರ್ಬಲತೆ
•ಕೈ, ಕಾಲು ಮತ್ತು ಪಾದದಲ್ಲಿ ಸ್ಪರ್ಶವಿಲ್ಲದೆ ಇರುವುದು ಅಥವಾ ಚಿವುಟಿದಂತೆ ಆಗುವುದು.
ಸೊಂಟದ ಬೆನ್ನುಮೂಳೆಯ ಸ್ಟೆನೋಸಿಸ್
•ಕಾಲುಗಳಲ್ಲಿ ನಿಶ್ಯಕ್ತಿ
•ಕಾಲುಗಳಲ್ಲಿ ಸ್ಪರ್ಶವಿಲ್ಲದಂತೆ ಆಗುವುದು
•ಬೆನ್ನು ನೋವು
•ದೀರ್ಘಕಾಲ ನಿಂತುಕೊಂಡಾಗ ನೋವು ಅಥವಾ ಎರಡೂ ಕಾಲುಗಳಲ್ಲಿ ಸೆಳೆತ
ಸ್ಪೈನಲ್ ಸ್ಟೆನೋಸಿಸ್ ನಿಂದ ಬರುವ ಸಮಸ್ಯೆಗಳು
ಸ್ಪೈನಲ್ ಸ್ಟೆನೋಸಿಸ್ ಸಮಸ್ಯೆಗೆ ಚಿಕಿತ್ಸೆ ನೀಡದೆ ಇದ್ದರೆ ಈ ಸಮಸ್ಯೆಗಳು ಬರಬಹುದು
•ದೌರ್ಬಲ್ಯ
•ಸ್ಪರ್ಶವಿಲ್ಲದೆ ಇರುವುದು
•ಪಾರ್ಶ್ವವಾಯು
•ಅಸಂಯಮ
•ಸಮತೋಲನದ ಸಮಸ್ಯೆ

ಸ್ಪೈನಲ್ ಸ್ಟೆನೋಸಿಸ್ ಪತ್ತೆ ಮಾಡುವುದು ಹೇಗೆ?

ವೈದ್ಯರು ಕೆಲವು ಚಿಹ್ನೆ ಮತ್ತು ಲಕ್ಷಣಗಳ ಬಗ್ಗೆ ಕೇಳಬಹುದು. ಇದರೊಂದಿಗೆ ವೈದ್ಯಕೀಯ ಇತಿಹಾಸವನ್ನು ಕೂಡ ಪರಿಶೀಲಿಸಬಹುದು. ದೈಹಿಕವಾಗಿ ಪರೀಕ್ಷೆ ನಡೆದ ಬಳಿಕ ಕೆಲವೊಂದು ಸ್ಕ್ಯಾನಿಂಗ್ ಮಾಡಬಹುದು.

ಎಕ್ಸ್ ರೇ: ಬೆನ್ನಿನ ಎಕ್ಸ್ ರೇ ತೆಗೆಯುವ ಮೂಲಕವಾಗಿ ಬೆನ್ನಿನ ಹುರಿ ನಡುವಿನ ಜಾಗವು ಕಿರಿದಾಗುವುದಕ್ಕೆ ಕಾರಣ ಏನು ಎಂದು ಸರಿಯಾಗಿ ತಿಳಿದುಬರುವುದು.

ಎಂಆರ್ ಐ: ಬೆನ್ನಿನ ಚಿತ್ರವನ್ನು ತೆಗೆಯು ಸಲುವಾಗಿ ತುಂಬಾ ಶಕ್ತಿಶಾಲಿ ಅಯಸ್ಕಾಂತ ಮತ್ತು ರೇಡಿಯೋ ಕಿರಣಗಳನ್ನು ಹಾಯಿಸಲಾಗುತ್ತದೆ. ಈ ಪರೀಕ್ಷೆಯಿಂದ ಡಿಸ್ಕ್ ಮತ್ತು ಅಸ್ಥಿರಜ್ಜುಗಳಿಗೆ ಆಗಿರುವ ಹಾನಿಯು ತಿಳಿದುಬರುವುದು. ಗಡ್ಡೆಯು ಇದ್ದರೆ ಎಂಆರ್ ಐ ಸ್ಕ್ಯಾನಿಂಗ್ ನಿಂದ ತಿಳಿದುಬರಲಿದೆ. ಬೆನ್ನುಮೂಳೆಯಲ್ಲಿ ನರಗಳಿಗೆ ಆಗಿರುವ ಹಾನಿಯನ್ನು ಇದು ತಿಳಿಸುವುದು.

ಸಿಟಿ ಸ್ಕ್ಯಾನ್: ಎಂಆರ್ ಐ ಸ್ಕ್ಯಾನಿಂಗ್ ಗೆ ಬದಲಿಗೆ ಕಂಪ್ಯೂಟರೀಕೃತ ಟೊಮೊಗ್ರಾಫಿಯನ್ನು ವೈದ್ಯರು ಸಲಹೆ ಮಾಡಬಹುದು. ಈ ಪರಿಖ್ಷೆಯು ವಿವಿಧ ಭಾಗದಿಂದ ಹಾಗೂ ಕೋನಗಳಿಂದ ಎಕ್ಸ್ ರೇ ಚಿತ್ರಗಳನ್ನು ತೋರಿಸುವುದು. ಸಿಟಿ ಮಯೆಲೊಗ್ರಾಮ್ ಪರೀಕ್ಷೆಯಾಗಿದ್ದರೆ ಆಗ ಸಿಟಿ ಸ್ಕ್ಯಾನ್ ನ್ನು ಕಾಂಟ್ರಾಸ್ಟ್ ಡೈಯನ್ನು ಚುಚ್ಚಿ ಬಳಿಕ ತೆಗೆಯಲಾಗುತ್ತದೆ. ಈ ಡೈ ಬೆನ್ನಿನ ಹುರಿ ಮತ್ತು ನರಗಳನ್ನು ಸರಿಯಾಗಿ ತೋರಿಸುವುದು ಮತ್ತು ಹುರಿ ತಪ್ಪಿಸುವುದು, ಗಡ್ಡೆ ಇತ್ಯಾದಿಗಳನ್ನು ಇದರಿಂದ ತಿಳಿಯಬಹುದು.

ಕೆಲವೊಂದು ಸಂದರ್ಭದಲ್ಲಿ ಇಎಂಜಿ ಕೂಡ ಮಾಡಿಸಲಾಗುತ್ತದೆ. ಇದರಿಂದ ಕಾಲಿಗೆ ಹೋಗುವಂತಹ ನಗರಳನ್ನು ಪರೀಕ್ಷೆ ಮಾಡಬಹುದು.

ಸ್ಪೈನಲ್ ಸ್ಟೆನೊಸಿಸ್ ಗೆ ಚಿಕಿತ್ಸೆ

ಸ್ಟೆನೋಸಿಸ್ ಯಾವ ಭಾಗದಲ್ಲಿ ಮತ್ತು ಯಾವ ಸ್ಥಿತಿಯಲ್ಲಿದೆ ಎನ್ನುವುದನ್ನು ತಿಳಿದುಕೊಂಡು ವೈದ್ಯರು ರೋಗಿಗೆ ಚಿಕಿತ್ಸೆ ಸೂಚಿಸುವರು.
ವೈದ್ಯರು ಈ ಕೆಳಗಿನ ಔಷಧಿಗಳನ್ನು ಸೂಚಿಸಬಹುದು.

ನೋವು ನಿವಾರಕ ಇದು ತಾತ್ಕಾಲಿಕವಾಗಿ ನೋವು ನಿವಾರಣೆ ಮಾಡುವುದು. ವೈದ್ಯರು ಇಬುಪ್ರೊಫೆನ್, ನಾಪ್ರೋಕ್ಸೆನ್ ಅಥವಾ ಆಸೆಟಾಮಿನೊಫೆನ್ ಸೂಚಿಸಬಹುದು. ಅದಾಗ್ಯೂ, ಈ ಮಾತ್ರೆಗಳು ಕೇವಲ ತಾತ್ಕಾಲಿಕ ಸಮಯಕ್ಕೆ ಮಾತ್ರ.

ಖಿನ್ನತೆ ವಿರೋಧಿ ಮಾತ್ರೆಗಳು

ರಾತ್ರಿ ವೇಳೆ ಟ್ರೈಸೈಕ್ಲಿಕ್ ಖಿನ್ನತೆ ವಿರೋಧಿ ಮಾತ್ರೆ ತೆಗೆದುಕೊಂಡರೆ ಆಗ ಅದು ನೋವು ಕಡಿಮೆ ಮಾಡಲು ನೆರವಾಗುವುದು.
ಒಪಿಯಾಡ್ಸ್: ಅಲ್ಪಾವಧಿಯ ನೋವು ನಿವಾರಣೆ ಮಾಡಲು ಆಕ್ಸಿಕೋಡೋನ್ ಮತ್ತು ಹೈಡ್ರೊಕೋಡೋನ್ ನ್ನು ಒಳಗೊಂಡ ಮಾತ್ರೆಯು ತುಂಬಾ ನೆರವಾಗುವುದು. ಅದಾಗ್ಯೂ, ಇದರಿಂದ ಕೆಲವು ಅಡ್ಡಪರಿಣಾಮಗಳು ಕೂಡ ಇದೆ.

ಆ್ಯಂಟಿ ಸೀಜರ್ ಡ್ರಗ್ಸ್

ಗ್ಯಾಬಪೆಂಟಿನ್ ಮತ್ತು ಪ್ರಿಗಬಾಲಿನ್ ಅಂಶವಿರುವ ಮಾತ್ರೆಗಳನ್ನು ನಗರಗಳಿಗೆ ಆಗಿರುವ ಹಾನಿಯಿಂದ ಉಂಟಾಗುವಂತಹ ನೋವು ನಿವಾರಣೆ ಮಾಡಲು ಬಳಸಲಾಗುತ್ತದೆ.

ದೈಹಿಕ ಚಟುವಟಿಕೆಯು ತುಂಬಾ ಕಡಿಮೆ ಆಗಿರುವ ಕಾರಣದಿಂದಾಗಿ ಸ್ಪೈನನ್ ಸ್ಟೆನೋಸಿಸ್ ಇರುವ ವ್ಯಕ್ತಿಯು ತುಂಬಾ ದುರ್ಬಲನಾಗಿರುತ್ತಾನೆ.

ಫಿಸಿಯೋಥೆರಪಿಸ್ಟ್ ಗಳಿಂದ ಕೆಲವೊಂದು ವ್ಯಾಯಾಮಗಳನ್ನು ಕಲಿತುಕೊಳ್ಳಬೇಕು.

•ಸಮತೋಲನ ಸುಧಾರಣೆ ಮಾಡಿ
•ಸ್ಥಿತಿಸ್ಥಾಪಕತ್ವ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಿ.
•ಬಲ ಮತ್ತು ಸಹಿಷ್ಣುತೆ ಬೆಳೆಸಿಕೊಳ್ಳಿ.

ಕೆಲವು ವೈದ್ಯರು ಸ್ಟಿರಾಯ್ಡ್ ಇಂಜೆಕ್ಷನ್ ಚುಚ್ಚುವರು. ಇದು ಸ್ಟೆನೋಸಿಸ್ ಸಮಸ್ಯೆ ನಿವಾರಣೆ ಮಾಡಬಹುದು. ಸ್ಟಿರಾಯ್ಡ್ ಚುಚ್ಚುವ ಮೂಲಕ ಊತ ಮತ್ತು ಉರಿಯೂತ ಕಡಿಮೆ ಮಾಡಿಕೊಂಡು ಆ ಭಾಗದಲ್ಲಿ ನೋವು ನಿವಾರಿಸಬಹುದು.

ವೈದ್ಯರು ಸ್ಪೈನಲ್ ಸ್ಟೆನೋಸಿಸ್ ನ ಚಿಕಿತ್ಸೆಗೆ ಬಳಸುವ ಮತ್ತೊಂದು ವಿಧಾನವೆಂದರೆ ಅದು ಡಿಕಂಪ್ರೆಸ್ ವಿಧಾನ. ಇಲ್ಲಿ ಸೂಜಿಯಂತಹ ಸಾಧನವನ್ನು ಬಳಸಿಕೊಂಡು ಬೆನ್ನಮೂಳೆಯಲ್ಲಿ ಇರುವ ದಪ್ಪಗಿನ ಭಾಗವನ್ನು ತೆಗೆಯಲಾಗುತ್ತದೆ. ಇದರಿಂದ ಬೆನ್ನಕಾಲುವೆ ಮಧ್ಯೆ ಜಾಗ ಉಂಟಾಗುವುದು ಮತ್ತು ನರಗಳಿಗೆ ಆಗಿರುವ ತೊಂದರೆ ನಿವಾರಣೆ ಆಗುವುದು.

ಬೇರೆ ಯಾವುದೇ ರೀತಿಯ ಚಿಕಿತ್ಸೆಯು ಕೆಲಸ ಮಾಡದೆ ಇದ್ದ ವೇಳೆ ಶಸ್ತ್ರಚಿಕಿತ್ಸೆಗೆ ಸೂಚಿಸಲಾಗುತ್ತದೆ. ಸ್ಪೈನಲ್ ಸ್ಟೆನೋಸಿಸ್ ನ ಚಿಕಿತ್ಸೆಗೆ ಬಳಸುವ ಕೆಲವು ಶಸ್ತ್ರಚಿಕಿತ್ಸೆ ವಿಧಾನಗಳು.

ಲ್ಯಾಮಿನೋಟಮಿ: ಲ್ಯಾಮಿನಾದ ಒಂದು ಭಾಗ ತೆಗೆಯಲಾಗುತ್ತದೆ. ನೋವಿರುವಂತಹ ಭಾಗದಲ್ಲಿ ಒಂದು ದೊಡ್ಡ ಕುಳಿ ಮಾಡಿಕೊಂಡು ಅಲ್ಲಿ ಉಂಟಾಗಿರುವಂತಹ ಒತ್ತಡ ನಿವಾರಣೆ ಮಾಡಲಾಗುತ್ತದೆ.
ಲ್ಯಾಮಿನೆಕ್ಟಮಿ: ಪೀಡಿತ ಕಶೇರುಖಂಡದ ಹಿಂದಿನ ಭಾಗವನ್ನು ತೆಗೆದುಹಾಕಲಾಗುತ್ತದೆ.
ಲ್ಯಾಮಿನೋಪ್ಲ್ಯಾಸ್ಟಿ: ಇದು ಕೇವಲ ಗರ್ಭಕಂಠದ ಸ್ಪೈನಲ್ ಸ್ಟೆನೋಸಿಸ್ ಸಮಸ್ಯೆಗೆ ಮಾತ್ರ. ಇದು ಲ್ಯಾಮಿನಾದಲ್ಲಿ ಹಿಂಜ್ ಉಂಟು ಮಾಡಿ ಸ್ಪೈನಲ್ ಕಾಲುವೆಯಲ್ಲಿ ಜಾಗವನ್ನು ಉಂಟು ಮಾಡುತ್ತದೆ.
ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸೆ: ಈ ವಿಧಾನದಲ್ಲಿ ಮೂಳೆ ಅಥವಾ ಲ್ಯಾಮಿನಾವನ್ನು ತೆಗೆದು ಹತ್ತಿರದಲ್ಲಿ ಇರುವಂತಹ ಬೇರೆ ಯಾವುದೇ ಆರೋಗ್ಯಕರ ಅಂಗಾಂಶಗಳಿಗೆ ಹಾನಿ ಆಗದಂತೆ ತಡೆಯುವುದು.

ಸ್ಪೈನಲ್ ಸ್ಟೆನೋಸಿಸ್ ಜತೆಗೆ ಬದುಕು ಮತ್ತು ಅದನ್ನು ತಡೆಯುವುದು

ಈ ಪರಿಸ್ಥಿತಿಗೆ ಯಾವುದೇ ಶಾಶ್ವತ ಪರಿಹಾರ ಎನ್ನುವುದು ಇಲ್ಲ. ಆದರೆ ಜೀವನಶೈಲಿ ಬದಲಾಯಿಸಿಕೊಂಡು ಇದರಿಂದ ಪರಿಹಾರ ಪಡೆಯಬಹುದು.
•ನಿಯಮಿತವಾಗಿ ವ್ಯಾಯಾಮ ಮಾಡಿ
ವಾರದಲ್ಲಿ ಮೂರು ದಿನಗಳ ಕಾಲ ಕನಿಷ್ಠ 30 ನಿಮಿಷವಾದರೂ ವ್ಯಾಯಾಮ ಮಾಡಿ.
•ನೋವು ಹೆಚ್ಚಾಗುವಂತಹ ಯಾವುದೇ ಕೆಲಸ ಅಥವಾ ಚಟುವಟಿಕೆ ಮಾಡಬೇಡಿ. ಇದರಲ್ಲಿ ಮುಖ್ಯವಾಗಿ ಭಾರ ಎತ್ತುವುದು.
•ವೈದ್ಯರನ್ನು ಸಂಪರ್ಕಿಸಿ ಅಕ್ಯೂಪಂಕ್ಚರ್ ನ್ನು ಕೂಡ ನೀವು ಪ್ರಯತ್ನಿಸಬಹುದು.
•ದೇಹದ ತೂಕ ಆರೋಗ್ಯಕರವಾಗಿರಲಿ.
•ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ.

English summary

Spinal Stenosis: Causes, Symptoms, And Treatment

Some people have a small spinal canal from birth. This condition is called congenital stenosis. However, the primary cause of spinal stenosis is age-related. This condition ideally occurs in the lower back and the neck. When the nerve roots and spinal cord become compressed, it causes a pinching of the spinal cord and nerve roots leading to cramping
X
Desktop Bottom Promotion