For Quick Alerts
ALLOW NOTIFICATIONS  
For Daily Alerts

ಎಚ್ಚರ: ಧೂಮಪಾನದಿಂದ ಲೈಂಗಿಕ ಜೀವನವೇ ಹಾಳಾಗಬಹುದು

|

ಧೂಮಪಾನ ಕೊಲ್ಲುವುದು ಎಂದು ಸಿಗರೇಟ್ ಹಾಗೂ ಬೀಡಿ ಪ್ಯಾಕೆಟ್ ಗಳಲ್ಲಿ ದೊಡ್ಡದಾಗಿ ಬರೆದಿದ್ದರೂ ಅದನ್ನು ಕಡೆಗಣಿಸಿ ಧೂಮಪಾನ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಧೂಮಪಾನಿಯಿಂದ ಖುದ್ದು ಆತನಿಗೆ ಮಾತ್ರವಲ್ಲದೆ, ಸುತ್ತಲು ಇರುವವರ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುವುದು. ಇದರಿಂದ ಹಲವಾರು ರೀತಿಯ ರೋಗಗಳು ಬರುವುದು. ಧೂಮಪಾನದಿಂದಾಗಿ ಶ್ವಾಸಕೋಶ, ಹೃದಯ ಮತ್ತು ಮೂಳೆಗಳಿಂದ ಹಿಡಿದು ಜನನೇಂದ್ರಿಯದ ತನಕ ಹಲವಾರು ಸಮಸ್ಯೆಗಳೂ ಬರುವುದು.

smoking

ಹೌದು, ಧೂಮಪಾನದಿಂದಾಗಿ ಲೈಂಗಿಕ ಜೀವನದ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಇದು ಜನನೇಂದ್ರಿಯಗಳಿಗೆ ರಕ್ತ ಸರಬರಾಜು ಆಗುವುದನ್ನು ತಗ್ಗಿಸುವುದು ಮತ್ತು ಲೈಂಗಿಕ ಪ್ರದರ್ಶನದ ಮೇಲೆ ಇದು ನೇರ ಪರಿಣಾಮ ಬೀರುವುದು. ಧೂಮಪಾನದಿಂದಾಗಿ ಕಾಮಾಸಕ್ತಿಯು ತಡೆಯುವುದು ಎಂದು ಹಲವಾರು ಅಧ್ಯಯನಗಳು ಕೂಡ ಸಾಬೀತು ಮಾಡಿವೆ. ಈ ಹವ್ಯಾಸದಿಂದ ಹೊರಗೆ ಬರುವುದು ಹೇಗೆ ಎಂದು ತಿಳಿದುಕೊಳ್ಳಬೇಕು.

ವೇಗವಾಗಿ ಕ್ಲೈಮ್ಯಾಕ್ಸ್ ತಲುಪಬಹುದು

ವೇಗವಾಗಿ ಕ್ಲೈಮ್ಯಾಕ್ಸ್ ತಲುಪಬಹುದು

ಪುರುಷರಲ್ಲಿ ಧೂಮಪಾನದಿಂದಾಗಿ ಜನನೇಂದ್ರಿಯದ ಭಾಗದಲ್ಲಿನ ಸ್ನಾಯುಗಳು ದುರ್ಬಲವಾಗಿ ಸ್ಖಲನದ ಸರಾಸರಿ ಸಮಯವನ್ನು ಇದು ಕಡಿಮೆ ಮಾಡುವುದು. ಮಹಿಳೆಯರಲ್ಲಿ ಧೂಮಪಾನದಿಂದಾಗಿ ಜನನೇಂದ್ರಿಯದ ಭಾಗದಲ್ಲಿ ಅವರಿಗೆ ಸ್ಪರ್ಶ ಕಡಿಮೆ ಆಗಬಹುದು. ಧೂಮಪಾನವು ಉದ್ರೇಕವನ್ನು ಕೂಡ ಕಡಿಮೆ ಮಾಡುವುದು. ಈ ಕಾರಣಗಳಿಂದಾಗಿ ಧೂಮಪಾನದಿಂದಾಗಿ ಲೈಂಗಿಕ ಜೀವನವನ್ನು ಕೆಟ್ಟದಾಗಬಹುದು.

ಲೈಂಗಿಕ ಆಸಕ್ತಿ ಕುಂದಿಸಬಹುದು

ಲೈಂಗಿಕ ಆಸಕ್ತಿ ಕುಂದಿಸಬಹುದು

ಸಂಗಾತಿ ಜತೆಗಿನ ಲೈಂಗಿಕ ಕ್ರಿಯೆಯ ಕ್ಷಣಗಳು ತುಂಬಾ ಖುಷಿ ನೀಡುತ್ತಿಲ್ಲವೇ? ಹಾಸಿಗೆಯ ಕ್ರಿಯೆಗಳು ನಿಮಗೆ ತುಂಬಾ ಚಿಂತೆ ಉಂಟು ಮಾಡುತ್ತಿದೆಯಾ? ಇದಕ್ಕಾಗಿ ನೀವು ಸೇದುತ್ತಿರುವ ಸಿಗರೇಟ್ ನ್ನು ದೂರಬೇಕು. ಧೂಮಪಾನದಿಂದಾಗಿ ಪುರುಷರು ಹಾಗೂ ಮಹಿಳೆಯರಲ್ಲಿ ಕಾಮಾಸಕ್ತಿಯು ಕಡಿಮೆ ಆಗುವುದು. ಯಾಕೆಂದರೆ ಟೆಸ್ಟೊಸ್ಟೆರಾನ್ ಮಟ್ಟವು ಕಡಿಮೆ ಆಗುವುದು. ಟೆಸ್ಟೊಸ್ಟೆರಾನ್ ಹಾರ್ಮೊನ್ ಸ್ನಾಯುಗಳ ಬೆಳವಣಿಗೆ ಮತ್ತು ಪುರುಷರು ಹಾಗೂ ಮಹಿಳೆಯರಲ್ಲಿ ಕಾಮಾಸಕ್ತಿ ಕಾಪಾಡಲು ನೆರವಾಗುವುದು. ಸಿಗರೇಟ್ ಸೇದುವ ಕಾರಣದಿಂದಾಗಿ ದೇಹದಲ್ಲಿ ಕಾರ್ಬನ್ ಮೊನೊಕ್ಸೈಡ್ ಹೆಚ್ಚಾಗುವುದು ಮತ್ತು ಅದು ಟೆಸ್ಟೊಸ್ಟೆರಾನ್ ಮಟ್ಟ ಕಡಿಮೆ ಮಾಡುವುದು. ಇದು ನೇರವಾಗಿ ಕಾಮಾಸಕ್ತಿ ಮತ್ತು ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವುದು.

Most Read: ಸೆಕ್ಸ್ ಬಳಿಕ ಪುರುಷರು ಧೂಮಪಾನ ಮಾಡುವುದು ಯಾಕೆ?

ನಿಮಿರು ದೌರ್ಬಲ್ಯ ಉಂಟು ಮಾಡುವುದು

ನಿಮಿರು ದೌರ್ಬಲ್ಯ ಉಂಟು ಮಾಡುವುದು

ನಿಮಿರು ದೌರ್ಬಲ್ಯದ ಬಗ್ಗೆ ಯಾವ ಪುರುಷನು ಕೂಡ ಮಾತನಾಡಲು ಇಷ್ಟಪಡುವುದಿಲ್ಲ. ಅದಾಗ್ಯೂ, ಈ ಸಮಸ್ಯೆಯನ್ನು ಹಲವಾರು ಮಂದಿ ಎದುರಿಸುವರು. ಸಂಗಾತಿ ಜತೆಗೆ ಇರುವ ವೇಳೆ ನಿಮಗೆ ಯಾವುದೇ ರೀತಿಯ ನಿಮಿರುವಿಕೆ ಆಗದೆ ಇದ್ದರೆ ಅಥವಾ ಅದನ್ನು ಕಾಪಾಡಿಕೊಳ್ಳಲು ಸಮಸ್ಯೆಯಾಗುತ್ತಲಿದ್ದರೆ ಆಗ ಅದು ನಿಮ್ಮ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುವುದು ಮತ್ತು ಸಂಬಂಧದಲ್ಲಿ ಸಮಸ್ಯೆ ಉಂಟು ಮಾಡಬಹುದು. ಇದಕ್ಕೆಲ್ಲಾ ಕಾರಣ ಮುಖ್ಯವಾಗಿ ಧೂಮಪಾನ. ಸಿಗರೇಟ್ ನಲ್ಲಿ ಇರುವಂತಹ ನಿಕೋಟಿನ್ ಜನನೇಂದ್ರೀಯದ ಭಾಗದಲ್ಲಿ ಇರುವಂತಹ ನರಗಳು ಹಾಗೂ ನಾಳಗಳನ್ನು ಮುಚ್ಚಬಹುದು ಮತ್ತು ಈ ಭಾಗಕ್ಕೆ ರಕ್ತ ಸಂಚಾರವನ್ನು ತಡೆಯಬಹುದು. ಶಿಶ್ನಕ್ಕೆ ಸರಿಯಾಗಿ ರಕ್ತ ಸಂಚಾರ ಆಗದೆ ಇದ್ದರೆ ಆಗ ನಿಮಿರು ದೌರ್ಬಲ್ಯ ಉಂಟಾಗುವುದು. ಧೂಮಪಾನದಿಂದಾಗಿ ಪುರುಷರಲ್ಲಿ ನೈಟ್ರಿಕ್ ಆಕ್ಸೈಡ್ ಕೂಡ ಕಡಿಮೆ ಆಗುವುದು. ಇದು ನಿಮಿರುವಿಕೆಯಲ್ಲಿ ಪ್ರಮುಖ ಪಾತ್ರ ವಿಸುವುದು. ಮಹಿಳೆಯರಲ್ಲಿ ಧೂಮಪಾನದಿಂದಾಗಿ ಯೋನಿ ಭಾಗದಲ್ಲಿ ಸರಿಯಾಗಿ ಲ್ಯುಬ್ರಿಕೆಂಟ್ ಬಿಡುಗಡೆ ಆಗದೆ ಇರಬಹುದು. ಇದರಿಂದ ಲೈಂಗಿಕ ಕ್ರಿಯೆಯು ತುಂಬಾ ಕಠಿಣವಾಗಬಹುದು.

ಚಂದ್ರನಾಡಿಯಲ್ಲಿ ಉರಿಯೂತ ಹೆಚ್ಚು ಮಾಡುವುದು

ಚಂದ್ರನಾಡಿಯಲ್ಲಿ ಉರಿಯೂತ ಹೆಚ್ಚು ಮಾಡುವುದು

ಚಂದ್ರನಾಡಿ ಎನ್ನುವುದು ಮಹಿಳೆಯ ಯೋನಿಯ ತುಂಬಾ ಸೂಕ್ಷ್ಮ ಭಾಗವಾಗಿದೆ. ಇದು ಮಹಿಳೆಯ ಉದ್ರೇಕದಲ್ಲಿ ಪ್ರಮುಖ ಪಾತ್ರ ವಹಿಸುವುದು. ಅದಾಗ್ಯೂ, ಧೂಮಪಾನದಿಂದಾಗಿ ಚಂದ್ರನಾಡಿ ಭಾಗದಲ್ಲಿ ಉರಿಯೂತದಿಂದಾಗಿ ನೋವು ಉಂಟಾಗಬಹುದು ಮತ್ತು ಅಲ್ಲಿ ಸೂಕ್ಷ್ಮತೆಯು ಕಳೆದುಕೊಳ್ಳಬಹುದು.

Most Read: ನೀವು ಊಹಿಸಿರದ ಧೂಮಪಾನದ 6 ಪರಿಣಾಮಗಳು

ಲೈಂಗಿಕ ಪ್ರದರ್ಶನ

ಲೈಂಗಿಕ ಪ್ರದರ್ಶನ

ಅತಿಯಾದ ಧೂಮಪಾನದಿಂದಾಗಿ ಮಾತ್ರ ಲೈಂಗಿಕ ಜೀವನದಲ್ಲಿ ಸಮಸ್ಯೆಗಳು ಬರುವುದಲ್ಲ. ಬದಲಿಗೆ ನೀವು ಯಾವಾಗಲೊಮ್ಮೆ ಧೂಮಪಾನ ಮಾಡಿದರೂ ಇದು ಸಮಸ್ಯೆಗೆ ಕಾರಣವಾಗುವುದು. ಸಂಗಾತಿ ಜತೆಗೆ ದೀರ್ಘಕಾಲ ಲೈಂಗಿಕ ಕ್ರಿಯೆ ನಡೆಸಲು ಇದು ಅಡ್ಡಿ ಉಂಟು ಮಾಡಬಹುದು. ಸಿಗರೇಟಿನಲ್ಲಿ ಇರುವಂತಹ ಕೆಲವೊಂದು ಹಾನಿಕಾರಕ ರಾಸಾಯನಿಕಗಳು ಪುರುಷರ ತೊಡೆ ಮತ್ತು ಪ್ಯೂಬಿಕ್ ಭಾಗದ ಸ್ನಾಯುಗಳನ್ನು ದೀರ್ಘಕಾಲದ ತನಕ ಹಿಡಿದಿಡುವಂತ ಸಾಮರ್ಥ್ಯವನ್ನು ಇದು ಕುಂದಿಸುವುದು. ಧೂಮಪಾನದಿಂದಗಿ ಉಸಿರಾಟದ ಸಾಮರ್ಥ್ಯವು ಕಡಿಮೆ ಆಗುವುದು. ಇದರಿಂದಾಗಿ ನಿಮ್ಮ ಲೈಂಗಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು.

ಧೂಮಪಾನ ತ್ಯಜಿಸುವುದು ಹೇಗೆ?

ಧೂಮಪಾನ ತ್ಯಜಿಸುವುದು ಹೇಗೆ?

ಇಚ್ಛಾಶಕ್ತಿಯಿದ್ದರೆ ಆಗ ಏನು ಬೇಕಾದರೂ ಸಾಧನೆ ಮಾಡಿ ತೋರಿಸಬಹುದು. ಇದು ಎಲ್ಲಾ ವಿಷಯದಲ್ಲೂ ನಿಜ. ಇಚ್ಛಾಶಕ್ತಿಯು ಯಾವುದೇ ಚಟದ ವಿರುದ್ಧ ಇರುವ ಅಸ್ತ್ರವಾಗಿದೆ ಮತ್ತು ಧೂಮಪಾನ ಕೂಡ ಇದಕ್ಕೆ ಹೊರತಾಗಿಲ್ಲ. ಧೂಮಪಾನದಿಂದ ದೂರವಿರಲು ನೀವು ತೆಗೆದುಕೊಳ್ಳುವಂತಹ ಸಣ್ಣ ಹೆಜ್ಜೆಗಳಿಂದ ಸಿಗರೇಟ್ ಸೇವನೆ ದೂರ ಮಾಡಬಹುದು ಮತ್ತು ಮತ್ತೆ ಲೈಂಗಿಕ ಜೀವನದಲ್ಲಿ ಆನಂದ ಪಡೆಯಬಹುದು. ಧೂಮಪಾನ ತ್ಯಜಿಸಲು ನಿಮಗೆ ಕೆಲವೊಂದು ಕ್ರಮಗಳನ್ನು ಹೇಳಿಕೊಡಲಾಗುತ್ತದೆ. ಅದಾಗ್ಯೂ, ಇದು ನಿಮಗೆ ನೆರವಾಗದೆ ಇದ್ದರೆ ಆಗ ನೀವು ಧೂಮಪಾನ ಬಿಡಿಸುವ ಶಿಬಿರಕ್ಕೆ ಸೇರಿಕೊಳ್ಳಿ.

ಯೋಗ ಅಭ್ಯಾಸ ಮಾಡಿ

ಯೋಗ ಅಭ್ಯಾಸ ಮಾಡಿ

ಜರ್ನಲ್ ಆಫ್ ವುಮೆನ್ ಹೆಲ್ತ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯ ಪ್ರಕಾರ ಯೋಗಾಭ್ಯಾಸ ಮಾಡಿದರೆ ಅದರಿಂದ ಮಹಿಳೆಯರಿಗೆ ಧೂಮಪಾನ ಬಿಡಲು ನೆರವಾಗುವುದು. ಇದು ನಿಕೊಟಿನ್ ಬಿಡುಗಡೆಯ ಲಕ್ಷಣಗಳಾಗಿರುವ ಒತ್ತಡ ಮತ್ತು ಆತಂಕ ಇತ್ಯಾದಿಗಳನ್ನು ದೂರ ಮಾಡುವುದು. ಜರ್ನಲ್ ಆಫ್ ಎವಿಡೆನ್ಸ್ ಬೇಸ್ಡ್ ಇಂಟಗ್ರೇಟಿವ್ ಮೆಡಿಸಿನ್ ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಯೋಗ ಅಭ್ಯಾಸ ಮಾಡಿದರೆ ಅದು ಮನಸ್ಸನ್ನು ಶಾಂತಗೊಳಿಸುವುದು ಮತ್ತು ಧೂಮಪಾನ ಮಾಡುವ ಬಯಕೆ ಕಡಿಮೆ ಮಾಡುವುದು. ನೀವು ಧೂಮಪಾನ ಬಿಡಬೇಕೆಂದು ನಿರ್ಧಾರ ಮಾಡಿದರೆ ಆಗ ನೀವು ಬಿಲ್ಲುಬಾಣ ಭಂಗಿ, ಹಾವಿನ ಭಂಗಿ ಪ್ರಯತ್ನ ಮಾಡಿ. ಇದರೊಂದಿಗೆ ಉಸಿರಾಟದ ಆಸನಗಳು ಕೂಡ ನೆರವಾಗುವುದು.

ಪ್ರಲೋಭನೆಯಿಂದ ದೂರವಿರಿ

ಪ್ರಲೋಭನೆಯಿಂದ ದೂರವಿರಿ

ಏನಾದರೂ ನಿಮ್ಮನ್ನು ಪ್ರಲೋಭನೆಗೊಳಿಸುತ್ತಾ ಇದ್ದರೆ ಆಗ ನಿಮಗೆ ಧೂಮಪಾನ ಮಾಡಬೇಕು ಎಂದು ಅನಿಸುವುದು. ಇದರಿಂದಾಗಿ ನೀವು ಇದನ್ನು ಕಡೆಗಣಿಸಬೇಕು. ಸಿಗರೇಟಿನ ಬೂದಿ ಹಾಕುವ ಟ್ರೇ, ಧೂಮಪಾನ ಮಾಡುವ ಸಹೋದ್ಯೋಗಿಗಳು ಮತ್ತು ಒತ್ತಡದಿಂದ ದೂರವಿರಬೇಕು. ನೀವು ಇಚ್ಛಾಶಕ್ತಿ ಬಿಟ್ಟುಕೊಡುವುದಿಲ್ಲ ಎಂದು ಮನಸ್ಸಿನಲ್ಲಿ ದೃಢ ಮಾಡಿಕೊಳ್ಳಿ. ನಿಮಗೆ ಧೂಮಪಾನ ಮಾಡಬೇಕೆಂಬ ಬಯಕೆ ಆದ ವೇಳೆ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆದುಕೊಳ್ಳಿ.

Most Read: ಧೂಮಪಾನದಿಂದ ದೂರ ಸರಿಯಲು ಮನೆ ಮದ್ದು ಅಗತ್ಯ...

ಏನಾದರೂ ಜಗಿಯಿರಿ

ಏನಾದರೂ ಜಗಿಯಿರಿ

ಧೂಮಪಾನ ಮಾಡಬೇಕೆಂಬ ಬಯಕೆ ಆದ ಕೂಡಲೇ ನೀವು ಸಕ್ಕರೆ ಇಲ್ಲದೆ ಇರುವ ಚೂಯಿಂಗ್ ಗಮ್., ಹಸಿ ಕ್ಯಾರೆಟ್, ಸೆಲರಿ, ಸೂರ್ಯಕಾಂತಿ ಬೀಜಗಳು ಇತ್ಯಾದಿಗಳನ್ನು ಜಗಿಯಿರಿ. ಕುರುಕುರು ಇರುವಂತಹ ಏನಾದರೂ ಜಗಿದರೆ ಆಗ ನಿಮ್ಮ ಬಯಕೆ ಕಡಿಮೆ ಆಗುವುದು. ಒಂದು ಲೋಟ ನೀರಿಗೆ ಮೆಣಸು ಹಾಕಿಕೊಂಡು ಕುಡಿದರೆ ಆಗ ಧೂಮಪಾನ ಮಾಡು ಬಯಕೆ ಕಡಿಮೆ ಆಗುವುದು. ವಿಷಕಾರಿ ಅಂಶಗಳನ್ನು ಹೊರಹಾಕುವ ಗುಣ ಹೊಂದಿರುವಂತಹ ಇದು ನಿಕೋಟಿನ್ ಬಯಕೆ ಕಡಿಮೆ ಮಾಡುವುದು. ಧೂಮಪಾನ ಮಾಡಬೇಕೆಂಬ ಬಯಕೆ ಆದ ಕೂಡಲೇ ನೀವು ತುಳಸಿ ಎಲೆಗಳನ್ನು ಜಗಿಯಿರಿ. ಇದರಲ್ಲಿ ಇರುವಂತಹ ರುಚಿಯು ಧೂಮಪಾನ ಮಾಡದಂತೆ ತಡೆಯುವುದು. ಇದರೊಂದಿಗೆ ಇದು ದೇಹದಿಂದ ವಿಷವನ್ನು ಹೊರ ಹಾಕುವಂತೆ ಮಾಡುವುದು.

ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಿ

ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಿ

ನಿಕೋಟಿನ್ ಎನ್ನುವ ಜರ್ನಲ್ ನಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯ ಪ್ರಕಾರ ಸಿಗರೇಟ್ ದೇಹವು ಕೆಲವೊಂದು ಪ್ರಮುಖ ಪೋಷಕಾಂಶಗಳಾಗಿರುವಂತಹ ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಡಿಯನ್ನು ಹೀರಿಕೊಳ್ಳದಂತೆ ತಡೆಯುವುದು. ಹೆಚ್ಚಿನ ಹಣ್ಣು ಹಾಗೂ ತರಕಾರಿ ಸೇವನೆ ಮಾಡಿದರೆ ಅದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ಸಿಗುವುದು ಮತ್ತು ಧೂಮಪಾನ ಮಾಡಬೇಕೆಂಬ ಬಯಕೆ ಕಡಿಮೆ ಮಾಡುವುದು. ನಿಮ್ಮ ಆಹಾರ ಕ್ರಮದಲ್ಲಿ ಆದಷ್ಟು ತರಕಾರಿ ಮತ್ತು ಹಣ್ಣುಗಳನ್ನು ಸೇರಿಸಿಕೊಳ್ಳಿ. ಧೂಮಪಾನ ಬಿಡುವ ಯೋಜನೆ ಹಾಕಿಕೊಂಡಿದ್ದರೆ ಆಗ ನೀವು ಊಟ ಬಿಡಬಾರದು. ಇದರಿಂದಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಕಡಿಮೆ ಆಗಬಹುದು ಮತ್ತು ಇದರಿಂದ ಧೂಮಪಾನ ಮಾಡಬೇಕೆಂಬ ಬಯಕೆ ಮೂಡಬಹುದು. ಇದೇ ವೇಳೆ ದೇಹಕ್ಕೆ ಯಾವಾಗಲೂ ದ್ರವಾಹಾರ ನೀಡುತ್ತಲಿರಿ. ಇದರಿಂದ ತೇವಾಂಶದಿಂದ ಇರಲು ನೆರವಾಗುವುದು ಮಾತ್ರವಲ್ಲದೆ ಧೂಮಪಾನದಿಂದಾಗಿ ದೇಹದಲ್ಲಿರುವ ವಿಷವನ್ನು ಇದು ಕಡಿಮೆ ಮಾಡುವುದು.

English summary

smoking affects your life

Smoking kills is not just a statutory warning. It can actually take your life. Starting from your lungs and heart to your bones, it can take a toll on many vital organs of your body including your genitals. Yes, smoking can actually have an adverse effect on your sex life too. It potentially reduces the blood flow to your genitals and hinders your sexual performance as well as experience in more ways than one.
X
Desktop Bottom Promotion