For Quick Alerts
ALLOW NOTIFICATIONS  
For Daily Alerts

ದೇಹದ ರಕ್ತ ರಕ್ತಶುದ್ಧೀಕರಣಕ್ಕೆ ಆರು ಸರಳ ಮನೆಮದ್ದುಗಳು

|

ರಕ್ತ ನಮ್ಮ ದೇಹದ ಜೀವದ್ರವವಾಗಿದ್ದು ಇದಕ್ಕೆ ಹತ್ತು ಹಲವಾರು ಜವಾಬ್ದಾರಿಗಳಿವೆ. ಶ್ವಾಸಕೋಶದಿಂದ ಪಡೆದ ಆಮ್ಲಜನಕವನ್ನು ದೇಹದ ಎಲ್ಲೆಡೆ ತಲುಪಿಸುವುದು, ಇದರ ಜೊತೆಗೇ ಅಗತ್ಯವಿರುವ ರಸದೂತಗಳನ್ನು ಅವಶ್ಯವಿರುವ ಅಂಗದ ಕಡೆ ಕೊಂಡೊಯ್ಯುವುದು, ಕಲ್ಮಶಗಳನ್ನು ಹೊತ್ತು ತಂದು ಶುದ್ದೀಕರಣಕ್ಕೆ ಒಳಗಾಗುವುದು ಇತ್ಯಾದಿ. ಪ್ರತಿ ಕ್ಷಣವೂ ಹರಿಯುತ್ತಲೇ ಇರಬೇಕಾದ ರಕ್ತ ಶುದ್ಧರೂಪದಲ್ಲಿರುವುದು ಅಗತ್ಯವಾಗಿದ್ದು ಯಾವುದೇ ಕಲ್ಮಶಗಳಿಲ್ಲದಂತೆ ಆಗಾಗ ಶುದ್ದೀಕರಿಸುತ್ತಿರುವುದೂ ಅವಶ್ಯವಾಗಿದೆ.

ರಕ್ತವನ್ನು ಶುದ್ದೀಕರಿಸಲು ಮೂತ್ರಪಿಂಡಗಳು ಹಾಗೂ ಯಕೃತ್ ಪ್ರಮುಖ ಪಾತ್ರ ವಹಿಸುತ್ತವೆ. ರಕ್ತ ಶುದ್ದೀಕರಣಕ್ಕೆ ನೆರವಾಗುವ ಕೆಲವು ಮನೆಮದ್ದುಗಳು ಲಭ್ಯವಿದ್ದು ಈ ಕಾರ್ಯವನ್ನು ಸುಲಭಗೊಳಿಸುತ್ತವೆ. ಒಂದು ವೇಳೆ ಜೀವರಾಸಾಯನಿಕ ಕ್ರಿಯೆಯ ಪರಿಣಾಮವಾಗಿ ರಕ್ತದಲ್ಲಿ ಉಳಿದಿದ್ದ ಕಲ್ಮಶಗಳನ್ನೂ ಯಶಸ್ವಿಯಾಗಿ ನಿರ್ಮೂಲನೆಗೊಳಿಸಿ ರಕ್ತದ ಕ್ಷಮತೆ ಹೆಚ್ಚಿಸಲು ನೆರಪಾಗುತ್ತವೆ. ರಕ್ತಶುದ್ದೀಕರಣಕ್ಕೆ ನೆರವಾಗುವ ಕೆಲವು ವಿಧಾನಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:

ಲಿಂಬೆರಸ

ಲಿಂಬೆರಸ

ರಕ್ತ ಮತ್ತು ಜೀರ್ಣಾಂಗಗಳಲ್ಲಿರುವ ಕಲ್ಮಶಗಳನ್ನು ನಿವಾರಿಸಲು ಲಿಂಬೆರಸ ನೆರವು ನೀಡುವ ಮೂಲಕ ಎದುರಾಗಬಹುದಾಗಿದ್ದ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ. ಲಿಂಬೆರಸ ಆಮ್ಲೀಯವಾಗಿದ್ದು ದೇಹದ ಪಿ ಎಚ್ ಮಟ್ಟಗಳನ್ನು ಬದಲಿಸುವಷ್ಟು ಪ್ರಬಲವಾಗಿದೆ. ಈ ಕ್ಷಮತೆಯೇ ರಕ್ತದಲ್ಲಿನ ಕಲ್ಮಶಗಳನ್ನು ನಿವಾರಿಸಲು ಬಳಕೆಯಾಗುತ್ತದೆ. ಈ ಆಮ್ಲೀಯ ದ್ರವದಲ್ಲಿ ಹಲವರು ವೈರಸ್ಸುಗಳು ಹಾಗೂ ರೋಗಕಾರಕ ಕ್ರಿಮಿಗಳು ಬದುಕಲು ಸಾಧ್ಯವಿಲ್ಲ. ಉತ್ತಮ ಪರಿಣಾಮ ಪಡೆಯಲು ಬೆಳಗ್ಗಿನ ಪ್ರಥಮ ಆಹಾರವಾಗಿ ಖಾಲಿಹೊಟ್ಟೆಯಲ್ಲಿ ಅರ್ಧ ಲಿಂಬೆಯ ಸರವನ್ನು ಬೆರೆಸಿದ ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ. ಸುಮಾರು ಮುಕ್ಕಾಲು ಘಂಟೆಯ ಬಳಿಕವೇ ಉಪಾಹಾರ ಸೇವಿಸಿ.

Most Read: ಒಂದೆರಡು ದಿನಗಳಲ್ಲಿಯೇ ದೇಹದ ರಕ್ತ ಶುದ್ಧೀಕರಿಸುವ ಅದ್ಭುತ ಆಹಾರಗಳು!

ಸೇಬಿನ ಶಿರ್ಕಾ (Apple cider vinegar) ಮತ್ತು ಅಡುಗೆ ಸೋಡಾ

ಸೇಬಿನ ಶಿರ್ಕಾ (Apple cider vinegar) ಮತ್ತು ಅಡುಗೆ ಸೋಡಾ

ಇವೆರಡೂ ಸಾಮಾಗ್ರಿಗಳ ಮಿಶ್ರಣ ದೇಹದಲ್ಲಿ ಪಿ ಎಚ್ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತವೆ ಹಾಗೂ ರಕ್ತ ಮತ್ತು ಅಂಗಾಂಶದಲ್ಲಿನ ತಡೆಗಳನ್ನು ತೆರವುಗೊಳಿಸುತ್ತದೆ. ರಕ್ತದಲ್ಲಿರುವ ಯೂರಿಕ್ ಅಮ್ಲವನ್ನು ನಿವಾರಿಸಿ ಶುದ್ದೀಕರಿಸುತ್ತದೆ. ಇದಕ್ಕಾಗಿ ಎರಡು ದೊಡ್ಡ ಚಮಚ ಸೇಬಿನ ಶಿರ್ಕಾ ಮತ್ತು ಅರ್ಧ ದೊಡ್ಡ ಚಮಚ ಅಡುಗೆ ಸೋಡಾವನ್ನು ಖಾಲಿ ಗಾಜಿನ ಲೋಟದಲ್ಲಿ ಮಿಶ್ರಣಗೊಳಿಸಿ ಕೊಂಚ ಹೊತ್ತು ಹಾಗೇ ಇರಲು ಬಿಡಿ. ಅಂದರೆ ಉತ್ಪತ್ತಿಯಾದ ಗಾಳಿಗುಳ್ಳೆಗಳು ಮತ್ತು ನೊರೆ ಪೂರ್ಣವಾಗಿ ಇಲ್ಲವಾಗುವರೆಗೂ ಇರಿಸಿ., ಬಳಿಕ ಕೊಂಚ ನೀರನ್ನು ಬೆರೆಸಿ ತಕ್ಷಣವೇ ಕುಡಿಯಿರಿ. ಅಡುಗೆ ಸೋಡಾ ಕ್ಷಾರೀಯವಾಗಿದ್ದು ಸೇಬಿನ ಶಿರ್ಕಾದೊಡನೆ ಮಿಶ್ರಣಗೊಂಡ ಬಳಿಕ ಸಮತೋಲನಕ್ಕೆ ಬರುತ್ತದೆ. ಆದರೆ ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡದ ತೊಂದರೆ ಇದ್ದರೆ ಈ ವಿಧಾನವನ್ನು ಪ್ರಯತ್ನಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ.

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ಎಲೆಗಳು ಹಲವಾರು ಖಾದ್ಯಗಳಲ್ಲಿ ರುಚಿಕಾರಕವಾಗಿ ಬಳಕೆಯಾಗುತ್ತದೆ. ಇದರಲ್ಲಿ ಪ್ರಬಲ ಬ್ಯಾಕ್ಟೀರಿಯಾ ನಿರೋಧಕ ಹಾಗೂ ಉರಿಯೂತ ನಿವಾರಕ ಗುಣಗಳಿವೆ. ರಕ್ತ ಶುದ್ದೀಕರಿಸಲು ಇದೊಂದು ಅಧ್ಬುತ ಮೂಲಿಕೆಯಾಗಿದ್ದು ಯಕೃತ್ ಹಾಗೂ ಮೂತ್ರಪಿಂಡಗಳನ್ನೂ ಶುದ್ದೀಕರಿಸುತ್ತದೆ. ವಿಶೇಷವಾಗಿ ಮೂತ್ರದ ಮೂಲಕ ಹೆಚ್ಚಿನ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಇದಕ್ಕಾಗಿ ಸುಮಾರು ಐದರಿಂದ ಆರು ಎಲೆಗಳನ್ನು ನಿಮ್ಮ ಆಹಾರದಲ್ಲಿ ಮಿಶ್ರಣಮಾಡಿ ಸೇವಿಸಿ. ಇನ್ನೊಂದು ವಿಧಾನವೆಂದರೆ ಆರದಿಂದ ಎಂಟು ಎಲೆಗಳನ್ನು ಕುದಿಸಿ ತಯಾರಿಸಿದ ಒಂದು ಕಪ್ ಬಿಸಿಬಿಸಿ ಟೀ ಕುಡಿಯಿರಿ.

ಅರಿಶಿನ

ಅರಿಶಿನ

ಇದೊಂದು ಪ್ರಬಲ ಗುಣಪಡಿಸುವ ಮೂಲಿಕೆಯಾಗಿದ್ದು ಅಡುಗೆಯಲ್ಲಿ ಬಳಸಲಾಗುವ ಸಾಂಬಾರವಸ್ತುವೂ ಆಗಿದೆ. ಅರಿಶಿನ ರಕ್ತವನ್ನು ಶುದ್ದೀಕರಿಸುವ ಜೊತೆಗೇ ಗಾಯಗಳನ್ನು ಮಾಗಿಸುವ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತದೆ. ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ಉರಿಯೂತ ಹಾಗೂ ದೇಹದ ಬಹುತೇಕ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ. ಅಲ್ಲದೇ ಹೊಸ ರಕ್ತಕಣಗಳು ಹುಟ್ಟಲು ನೆರವಾಗುತ್ತದೆ. ಅರಿಶಿನದ ಮಹತ್ವವನ್ನು ಆಯುರ್ವೇದದ ಕಾಲದಿಂದಲೂ ಅರಿತುಕೊಂಡು ಬಳಸಲಾಗುತ್ತಾ ಬರಲಾಗಿದೆ. ರಕ್ತ ಶುದ್ದೀಕರಣಕ್ಕೆ ಅರ್ಧ ಚಿಕ್ಕ ಚಮಚ ಅರಿಶಿನ ಪುಡಿಯನ್ನು ಒಂದು ಲೋಟ ಬಿಸಿ ಹಾಲಿನಲ್ಲಿ ಬೆರೆಸಿ ಕುಡಿಯಿರಿ. ಈ ಪೇಯದ ಸೇವನೆಯಿಂದ ಯಕೃತ್ ಸಹಾ ತನ್ನ ಅತ್ಯುತ್ತಮ ಕ್ಷಮತೆಯನ್ನು ಪಡೆಯುತ್ತದೆ.

Most Read: ದೇಹದ ರಕ್ತನಾಳ ಮತ್ತು ಹೃದಯ ಶುದ್ಧಗೊಳಿಸುವ ಕೆಲವು ಆಹಾರಗಳು

ನೀರು

ನೀರು

ನೀರು ನೈಸರ್ಗಿಕ ಸ್ವಚ್ಛಕಾರಕ ದ್ರವವಾಗಿದೆ. ನೀರನ್ನು ಹೆಚ್ಚು ಹೆಚ್ಚಾಗಿ ಕುಡಿದಷ್ಟೂ ರಕ್ತ ಹೆಚ್ಚು ಹೆಚ್ಚಾಗಿ ಸ್ವಚ್ಛಗೊಳ್ಳುತ್ತಿರುತ್ತದೆ. ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೀರು ಅಗತ್ಯವಾಗಿದೆ ಮತ್ತು ದೇಹದ ಎಲ್ಲಾ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಅಲ್ಲದೇ ಆಹಾರದಿಂದ ಲಭಿಸಿದ ಖನಿಜಗಳು ಮತ್ತು ವಿಟಮಿನ್ನುಗಳನ್ನು ಸಾಅಗಿಸಲು ನೆರವಾಗುತ್ತದೆ ಮತ್ತು ಕಲ್ಮಶಗಳನ್ನು ಮೂತ್ರದ ರೂಪದಲ್ಲಿ ಹೊರಹಾಕಲೂ ನೆರವಾಗುತ್ತದೆ.

ಇತರ ಆಹಾರಗಳು

ಇತರ ಆಹಾರಗಳು

ಮೇಲೆ ವಿವರಿಸಿದ ಶುದ್ದೀಕರಿಸುವ ವಿಧಾನಗಳ ಹೊರತಾಗಿ ಇತರ ಆಹಾರಗಳಲ್ಲಿಯೂ ರಕ್ತ ಶುದ್ದೀಕರಿಸುವ ಗುಣವಿದೆ ಹಾಗೂ ಆರೋಗ್ಯವನ್ನು ವೃದ್ದಿಸುತ್ತದೆ. ಬ್ಲೂಬೆರಿಗಳು ಇದೊಂದು ಅತ್ಯುತ್ತಮ ನೈಸರ್ಗಿಕ ರಕ್ತ ಶುದ್ದೀಕಾರಕವಾಗಿದೆ. ಅಲ್ಲದೇ ಒಂದು ವೇಳೆ ಯಕೃತ್ ನಲ್ಲಿ ಕ್ಯಾನ್ಸರ್ ಕಾರಕ ಕಣಗಳಿದ್ದರೆ ಇವು ಇನ್ನಷ್ಟು ವೃದ್ದಿಗೊಳ್ಳುವುದರಿಂದ ತಡೆಯುತ್ತದೆ.

ಬ್ರೋಕೋಲಿ-ಹಸಿರು ಹೂಕೋಸಿನಂತಿರುವ ಬ್ರೋಕೋಲಿಯಲ್ಲಿ ವಿಟಮಿನ್ ಸಿ, ಒಮೆಗಾ 3 ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಗಂಧಕ ಮತ್ತು ಮ್ಯಾಂಗನೀಸ್ ಇವೆ. ಅಲ್ಲದೇ ಬ್ರೋಕೋಲಿಯ ಸೇವನೆಯಿಂದ ರಕ್ತದಲ್ಲಿನ ಕಲ್ಮಶಗಳೂ ಇಲ್ಲವಾಗುತ್ತವೆ.

ಬೀಟ್ ರೂಟ್- ಈ ತರಕಾರಿಯಲ್ಲಿರುವ ಬೀಟಾಲೈನ್ಸ್ ಮತ್ತು ನೈಟ್ರೇಟುಗಳು ರಕ್ತವನ್ನು ಶುದ್ದೀಕರಿಸಲು ನೆರವಾಗುತ್ತವೆ.

ಬೆಲ್ಲ-ನೈಸರ್ಗಿಕ ವಿಧಾನದಲ್ಲಿ ತಯಾರಿಸಿದ ಕಂದು ಮಿಶ್ರಿತ ಚಿನ್ನದ ಬಣ್ಣದ ಬೆಲ್ಲ ಉತ್ತಮ ರಕ್ತಶುದ್ದೀಕಾರಕವಾಗಿದೆ. ಬೆಲ್ಲ ದೇಹದಲ್ಲಿರುವ ಹೆಪ್ಪುಗಟ್ಟಿದ್ದ ರಕ್ತಕಣಗಳನ್ನು ನಿವಾರಿಸಲು ನೆರವಾಗುತ್ತದೆ. ಈ ಕಣಗಳನ್ನು ರಕ್ತದಿಂದ ನಿವಾರಿಸುವುದು ಅಗತ್ಯವಾಗಿದ್ದು ಕೆಲವಾರು ತೊಂದರೆಗಳಿಂದ ರಕ್ಷಣೆ ಪಡೆಯಬಹುದು.

English summary

Six Simple home remedies to detoxify your blood!

From transporting oxygen, nutrients, and hormones to tissues, blood has a very important role to play. Due to all these factors, it is very necessary to keep your blood pure and toxin free to ensure proper functioning of the body. Kidneys and liver are majorly responsible for the purification of the blood. There are some home remedies that can contribute to the detoxification process. This will help eliminate the waste matter present in the blood due to some biological processes or from some disease.
Story first published: Monday, May 27, 2019, 15:36 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more