For Quick Alerts
ALLOW NOTIFICATIONS  
For Daily Alerts

ಧೂಳಿನ ಅಲರ್ಜಿಯ ಸಮಸ್ಯೆಯೇ ? ಈ ಸರಳ ಮನೆಮದ್ದುಗಳನ್ನು ಅನುಸರಿಸಿ

|

ನಮ್ಮ ದೇಹಕ್ಕೆ ಒಗ್ಗದ ಯಾವುದೇ ಸ್ಥಿತಿಯನ್ನು ದೇಹ ನಿವಾರಿಸಲು ಯತ್ನಿಸುವ ಕ್ರಮಗಳನ್ನೇ ಅಲರ್ಜಿ ಎನ್ನುತ್ತೇವೆ. ಇದು ಯಾವ ವಸ್ತುವಿನಿಂದ ಉಂಟಾಗುತ್ತದೆಯೋ ಆ ವಸ್ತುವನ್ನೇ ಅಲರ್ಜಿಯೊಡನೆ ಸೇರಿಸಿ ಹೆಸರಿಸಲಾಗುತ್ತದೆ. ಧೂಳಿನ ಅಲರ್ಜಿ ಎಂದರೆ ನಮಗೆ ಒಗ್ಗದ ಧೂಳನ್ನು ಶ್ವಾಸದ ಮೂಲಕ ಒಳಗೆಳೆದುಕೊಂಡಾಗ ದೇಹ ಇದನ್ನು ನಿವಾರಿಸಲು ಕೈಗೊಳುವ ಕ್ರಮವೇ ಧೂಳಿಯ ಅಲರ್ಜಿ. ಸತತ ಸೀನುವುದು, ಸೋರುವ ಮೂಗು, ನೀರು ತುಂಬಿದ ಕಣ್ಣುಗಳು, ಕೆಮ್ಮು, ಶ್ವಾಸ ತೆಗೆದುಕೊಳ್ಳಲು ಕಷ್ಟಕರವಾಗುವುದು ಮೊದಲಾದ ಕ್ರಮಗಳಿಂದ ದೇಹ ಈ ಧೂಳನ್ನು ಹೊರಹಾಕಲು ಯತ್ನಿಸುತ್ತದೆ.

simple home remedies to get relief from dust allergy

ಹೆಸರೇ ತಿಳಿಸುವಂತೆ ಗಾಳಿಯಲ್ಲಿರುವ ಧೂಳಿನ ಸೂಕ್ಷ್ಮಕಣಗಳು ಈ ಅಲರ್ಜಿಗೆ ಕಾರಣವಾಗಿದ್ದು ಇದರಿಂದ ತಪ್ಪಿಸಿಕೊಳ್ಳುವುದು ಬಹುತೇಕವಾಗಿ ಅಸಾಧ್ಯ. ಈ ಅಲರ್ಜಿ ಇರುವವರು ಕೆಲವು ಮಾತ್ರೆಗಳನ್ನು ನುಂಗಿ ಈ ತೊಂದರೆಯಿಂದ ತಾತ್ಕಾಲಿಕ ಪರಿಹಾರ ಕಂಡುಕೊಂಡಿರುತ್ತಾರೆ. ಆದರೆ ಇದೇ ಶಾಶ್ವತ ಪರಿಹಾರವಲ್ಲ. ಒಂದು ವೇಳೆ ನಿಮಗೂ ಧೂಳಿನ ಅಲರ್ಜಿ ಇದ್ದರೆ ಇದನ್ನು ಸರಿಪಡಿಸಲು ಕೆಲವು ಸುಲಭ ಮನೆಮದ್ದುಗಳನ್ನು ನೀವು ಪ್ರಯತ್ನಿಸಬಹುದು.

ಸ್ಥಳೀಯ ಜೇನು

ಸ್ಥಳೀಯ ಜೇನು

ಜೇನು ಆರೋಗ್ಯಕರ ಎನ್ನಲು ಹಲವಾರು ಸಾಕ್ಷ್ಯಗಳಿವೆ. ಧೂಳಿನ ಅಲರ್ಜಿ ಸರಿಪಡಿಸಲು ಸ್ಥಳೀಯ ಜೇನು ಉತ್ತಮವಾಗಿದೆ. ಸ್ಥಳೀಯ ಜೇನೇ ಏಕೆ? ಸಿದ್ದಾಂತಗಳ ಪ್ರಕಾರ ಸ್ಥಳೀಯ ಪರಿಸರದಲ್ಲಿರುವ ಗಾಳಿಯಲ್ಲಿನ ಕಣಗಳನ್ನು ನಮ್ಮ ದೇಹ ರೂಢಿಸಿಕೊಂಡಿದ್ದು ಈ ಕಣಗಳೇ ಸ್ಥಳೀಯವಾದ ಜೇನಿನಲ್ಲಿಯೂ ಲಭ್ಯವಿರುತ್ತವೆ. ಹಾಗಾಗಿ ನಿತ್ಯವೂ ಸುಮಾರು ಒಂದು ಚಿಕ್ಕ ಚಮಚದಷ್ಟು ಜೇನು ಸೇವಿಸುವ ಮೂಲಕ ಸೀನು ಮತ್ತು ಕೆಮ್ಮಿನಿಂದ ತಕ್ಷಣವೇ ಪರಿಹಾರ ದೊರಕುತ್ತದೆ. ಅಲ್ಲದೇ ಜೇನಿನಲ್ಲಿರುವ ಉರಿಯೂತ ನಿವಾರಕ ಗುಣಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಹಾಗೂ ಇದೇ ಕಾರಣದಿಂದ ಒಂದು ವೇಳೆ ಅಲರ್ಜಿಯ ಪರಿಣಾಮವಾಗಿ ದೇಹದ ಮೇಲೆ ಸೂಕ್ಷ್ಮ ಗೀರುಗಳು ಅಥವಾ ಚರ್ಮ ಕೆಂಪಗಾಗಿದ್ದರೆ ಜೇನನ್ನು ನೇರವಾಗಿ ಹೆಚ್ಚಿಕೊಳ್ಳಬಹುದು.

ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾ ಇರುವ ಆಹಾರ (Probiotics)

ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾ ಇರುವ ಆಹಾರ (Probiotics)

ಕೆಲವೊಮ್ಮೆ ರೋಗನಿರೋಧಕ ಶಕ್ತಿಯಲ್ಲಿ ಏರುಪೇರು ಉಂಟಾದರೂ ದೇಹ ಇದಕ್ಕೆ ಪ್ರಬಲವಾಗಿ ಪ್ರತಿಕ್ರಿಯಿಸುತ್ತದೆ ಹಾಗೂ ಅಲರ್ಜಿಕಾರಕ ಗುಣಗಳನ್ನು ಪ್ರಕಟಿಸುತ್ತದೆ. ಈ ಸಮಯದಲ್ಲಿ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾ ಇರುವ ಆಹಾರಗಳನ್ನು ಸೇವಿಸಬೇಕು. ಈ ಮೂಲಕ ಜೀರ್ಣಾಂಗಗಳಲ್ಲಿರುವ ಬ್ಯಾಕ್ಟೀರಿಯಾಗಳ ಸಮತೋಲನ ಸಾಧಿಸಿದಂತಾಗುತ್ತದೆ ಹಾಗೂ ಅಲರ್ಜಿ ಇಲ್ಲವಾಗುತ್ತದೆ. ಮೊಸರು ಮಜ್ಜಿಗೆ ಈ ಗುಣಗಳಿರುವ ಅತ್ಯುತ್ತಮ ಆಹಾರಗಳಾಗಿವೆ.

ಸೇಬಿನ ಶಿರ್ಕಾ (Apple cider vinegar)

ಸೇಬಿನ ಶಿರ್ಕಾ (Apple cider vinegar)

ಆಹಾರದಲ್ಲಿ ಹುಳಿರುಚಿಗಾಗಿ ಬಳಸಲ್ಪಡುವ ಶಿರ್ಕಾ ಧೂಳಿನ ಅಲರ್ಜಿಯನ್ನು ನಿವಾರಿಸಲು ಸಮರ್ಥವಾಗಿದೆ. ಇದಕ್ಕಾಗಿ ಒಂದು ಚಿಕ್ಕ ಚಮಚ ಸೇಬಿನ ಶಿರ್ಕಾವನ್ನು ಒಂದು ಲೋಟ ನೀರಿನೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯಿರಿ. ಈ ದ್ರವ ದೇಹದಲ್ಲಿ ಕಫದ ಪ್ರಮಾಣವನ್ನು ತಗ್ಗಿಸುತ್ತದೆ ಹಾಗೂ ದುಗ್ಧರಸಗಳ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ಹಬೆ

ಹಬೆ

ಹಬೆಯನ್ನು ಶ್ವಾಸದ ಮೂಲಕ ಸೇವಿಸುವುದು ಸಹಾ ಧೂಳಿನ ಅಲರ್ಜಿಗೆ ಇನ್ನೊಂದು ಬಗೆಯ ಚಿಕಿತ್ಸೆಯಾಗಿದೆ. ಇದಕ್ಕಾಗಿ ಒಂದು ಅಗಲವಾದ ಪಾತ್ರೆಯಲ್ಲಿ ಕುದಿಯುವ ನೀರನ್ನು ಇರಿಸಿ ಇದರಿಂದ ಹೊಮ್ಮುತ್ತಿರುವ ಹಬೆಯನ್ನು ಮೂಗಿನಿಂದ ಎಳೆದುಕೊಳ್ಳಬೇಕು. ಹಬೆ ನಷ್ಟವಾಗದಂತೆ ದಪ್ಪನೆಯ ಟವೆಲ್ಲೊಂದನ್ನು ತಲೆಯ ಮೇಲೆ ಆವರಿಸಿಕೊಳ್ಳಿ. ಹಬೆಯನ್ನು ಕನಿಷ್ಟ ಹತ್ತು ನಿಮಿಷಗಳಾದರೂ ದೀರ್ಘ ಉಸಿರುಗಳ ಮೂಲಕ ಎಳೆದುಕೊಳ್ಳಬೇಕು. ಈ ಮೂಲಕ ಮೂಗಿನ ಹೊಳ್ಳೆಗಳಲ್ಲಿರುವ ಕಫ ಕರಗಿ ಶ್ವಾಸ ತೆಗೆದುಕೊಳ್ಳುವುದು ಸುಲಭವಾಗುತ್ತದೆ.

ವಿಟಮಿನ್ ಸಿ

ವಿಟಮಿನ್ ಸಿ

ಹಠಮಾರಿ ಧೂಳಿನ ಅಲರ್ಜಿಯನ್ನು ನಿವಾರಿಸಲು ಅತಿ ಸುಲಭವಾದ ಕ್ರಮವೆಂದರೆ ವಿಟಮಿನ್ ಸಿ ಸೇವನೆಯಾಗಿದೆ. ಸಿಟ್ರಸ್ ಆಮ್ಲ ಉತ್ತಮ ಪ್ರಮಾಣದಲ್ಲಿರುವ ಕಿತ್ತಳೆ, ಸಿಹಿಲಿಂಬೆ ಮೊದಲಾದವುಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದ್ದರೆ ದೇಹದ ರಕ್ತದಲ್ಲಿರುವ ಬಿಳಿರಕ್ತಕಣಗಳು ಉತ್ಪಾದಿಸುವ ಹಿಸ್ಟಮೈನ್ ಎಂಬ ಪೋಷಕಾಂಶ ಹೆಚ್ಚುತ್ತದೆ ಹಾಗೂ ಇವು ರಕ್ತವನ್ನು ಶುದ್ದೀಕರಿಸಲು ನೆರವಾಗುತ್ತದೆ. ಅಲ್ಲದೇ ಮೂಗು ಸೋರುವುದನ್ನು ಹಾಗೂ ಕಟ್ಟಿಕೊಂಡಿರುವುದುಅನ್ನು ತಡೆಯುತ್ತದೆ.

ಸೂಚನೆ: ಒಂದು ವೇಳೆ ಈ ಅಲರ್ಜಿಯಿಂದ ನಿಮಗೆ ಯಾವುದೇ ತೊಂದರೆ ಇದ್ದರೆ ಮೊದಲು ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆಯಿರಿ, ಬಳಿಕವೇ ನಿಮಗೆ ಸೂಕ್ತವೆನಿಸುವ ವಿಧಾನವನ್ನು ಅನುಸರಿಸಿ.

English summary

simple home remedies to get relief from dust allergy

Dust allergy is a very common type of allergy and it is really not easy to live with it. It can be triggered by a number of agents and it is not at all easy to control. Sneezing, runny nose, tearful eyes, cough, difficulty in breathing are a few common symptoms of dust allergy. This allergy is caused mainly due to the presence of dust particles in the air- thing that you just cannot avoid. Those with dust allergies often pop pills on a regular basis to keep themselves healthy. But this is not a solution.
X
Desktop Bottom Promotion