For Quick Alerts
ALLOW NOTIFICATIONS  
For Daily Alerts

ನಿಮಗೆ ಅತಿಯಾಗಿ ಬೆವರುತ್ತದೆಯೇ? ಹಾಗಾದರೆ ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ

|

ಕೆಲವು ವ್ಯಕ್ತಿಗಳು ಅತಿ ಎನಿಸುವಷ್ಟು ಬೆವರುತ್ತಾರೆ. ಈ ಸ್ಥಿತಿಗೆ ಹೈಪರ್ ಹೈಡ್ರೋಸಿಸ್ ಎಂದು ಕರೆಯುತ್ತಾರೆ ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ಮುಜುಗರಕ್ಕೆ ಕಾರಣವಾಗುತ್ತದೆ. ಈ ವ್ಯಕ್ತಿಗಳು ಇತರ ವ್ಯಕ್ತಿಗಳಿಗಿಂತ ಅತಿ ಹೆಚ್ಚೇ ಬೆವರುತ್ತಾರೆ. ಇದು ಒಂದು ಗಂಭೀರ ಸಮಸ್ಯೆಯಾಗಿದೆ. ಮೊದಲು ಈ ವ್ಯಕ್ತಿಗಳು ಅತಿಯಾಗಿ ಬೆವರಲು ಕಾರಣವೇನೆಂದು ನೋಡೋಣ. ನಮ್ಮ ತ್ವಚೆಯಲ್ಲಿ ಲಕ್ಷಾಂತರ ಬೆವರು ಗ್ರಂಥಿಗಳಿವೆ. ಇವುಗಳಿಗೆ ಎಕ್ಸ್ರೈನ್ ಗ್ರಂಥಿಗಳು (eccrine glands)ಎಂದು ಕರೆಯುತ್ತಾರೆ. ನಮ್ಮ ದೇಹದ ತಾಪಮಾನವನ್ನು ಆರೋಗ್ಯಕರ ಮಟ್ಟದಲ್ಲಿ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದು ಇವುಗಳ ಕರ್ತವ್ಯವಾಗಿದೆ.

ಇವು ಯಾವಾಗ ಸ್ರವಿಸಬೇಕು, ಯಾವಾಗ ಸ್ರವಿಸಬಾರದು ಎಂಬುದನ್ನು ನಮ್ಮ ನರವ್ಯವಸ್ಥೆ ನಿರ್ಧರಿಸುತ್ತದೆ. ಆದರೆ ಬೆವರಲು ರಸದೂತಗಳ ಬದಲಾವಣೆ, ಮಾನಸಿಕ ಒತ್ತಡ, ಉದ್ವೇಗ, ಭಯ ಮೊದಲಾದ ಭಾವನೆಗಳೂ ಕಾರಣವಾಗುತ್ತವೆ. ಆದರೆ ಎಷ್ಟು ಪ್ರಮಾಣದಲ್ಲಿ ಬೆವರಬೇಕು ಎಂಬ ಅಂಶವನ್ನು ಮಾತ್ರ ನಮ್ಮ ಅನುವಂಶಿಕ ಗುಣಗಳು, ವಯಸ್ಸು ಹಾಗೂ ದೈಹಿಕ ದಾರ್ಢ್ಯತೆಗಳು ನಿರ್ಧರಿಸುತ್ತವೆ. ಒಂದು ವೇಳೆ ಸಾಮನ್ಯಕ್ಕೂ ಹೆಚ್ಚೇ ನೀವು ಬೆವರುತ್ತಿದ್ದರೆ ಇದನ್ನು ಸರಿಪಡಿಸಲು ಕೆಲವು ಸರಳ ಮನೆಮದ್ದುಗಳಿವೆ. ಬನ್ನಿ ನೋಡೋಣ.

ಸೇಬಿನ ಶಿರ್ಕಾ (Apple cider vinegar)

ಸೇಬಿನ ಶಿರ್ಕಾ (Apple cider vinegar)

ಇದು ಕೊಂಚ ಆಮ್ಲೀಯವಾಗಿರುವ ಕಾರಣ ಹಸ್ತ, ಪಾದ ಅಥವಾ ಅತಿಯಾಗಿ ಬೆವರುವ ಅಂಗಗಳಲ್ಲಿರುವ ಯಾವುದೇ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಮರ್ಥವಾಗಿದೆ. ಅಲ್ಲದೇ ಇದು ಶೀಘ್ರವಾಗಿ ಆವಿಯಾಗುವ ಕಾರಣ ತನ್ನೊಂದಿಗೆ ಹೆಚ್ಚುವರಿ ಬೆವರನ್ನೂ ಕೊಂಡೊಯುತ್ತದೆ ಹಾಗೂ ತನ್ಮೂಲಕ ತ್ವಚೆಯನ್ನು ಒಣದಾಗಿರಿಸುತ್ತದೆ. ಇದಕ್ಕಾಗಿ ಕೊಂಚ ಶಿರ್ಕಾವನ್ನು ಸಾಕಷ್ಟು ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಈ ನೀರಿನಲ್ಲಿ ಅತಿ ಹೆಚ್ಚು ಬೆವರುವ ಹಸ್ತ ಮತ್ತು ಪಾದಗಳನ್ನು ಕೊಂಚ ಹೊತ್ತು ಮುಳುಗಿಸಿಡಿ. ಒಂದು ವೇಳೆ ಕಂಕುಳಲ್ಲಿ ಹೆಚ್ಚು ಬೆವರುತ್ತಿದ್ದರೆ ಈ ನೀರಿನಲ್ಲಿ ಮುಳುಗಿಸಿದ ಬಟ್ಟೆಯನ್ನು ಸುಮಾರು ಹದಿನೈದರಿಂದ ಮೂವತ್ತು ನಿಮಿಷ ಆವರಿಸುವಂತೆ ಇರಿಸಬೇಕು.

ಆಹಾರಕ್ರಮದಲ್ಲಿ ಬದಲಾವಣೆ

ಆಹಾರಕ್ರಮದಲ್ಲಿ ಬದಲಾವಣೆ

ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆಯ ಮೂಲಕವೂ ಬೆವರುವುದನ್ನು ತಡೆಗಟ್ಟಬಹುದು. ಕೆಲವು ಆಹಾರಗಳು ದೇಹ ಹೆಚ್ಚು ಬೆವರು ಉತ್ಪಾದಿಸಲು ಪ್ರಚೋದನೆ ನೀಡುತ್ತವೆ. ನಿಮಗೆ ಯಾವ ಆಹಾರದ ಸೇವನೆಯ ಬಳಿಕ ಬೆವರುವುದು ಹೆಚ್ಚುತ್ತದೆ ಎಂಬುದನ್ನು ಕೊಂಚ ಗಮನಿಸಿ ಇವುಗಳನ್ನು ತ್ಯಜಿಸಿ ಇತರ ಆಹಾರಗಳನ್ನು ಸೇವಿಸಲು ತೊಡಗಬೇಕು. ಸಾಮಾನ್ಯವಾಗಿ ಕಡಿಮೆ ನಾರಿನಂಶವಿರುವ ಆಹಾರಗಳು ಹೆಚ್ಚು ಹೊತ್ತಿನವರೆಗೆ ಜೀರ್ಣಾಂಗಗಳು ಕಾರ್ಯನಿರ್ವಹಿಸುವಂತೆ ಮಾಡುತ್ತವೆ. ಅಲ್ಲದೇ ಅಧಿಕ ಸೋಡಿಯಂ ಅಂಶವಿರುವ ಆಹಾರಗಳ ಸೇವನೆಯ ಮೂಲಕ ಇವುಗಳಲ್ಲಿರುವ ಉಪ್ಪನ್ನು ಹೊರಹಾಕಲು ದೇಹ ಅತಿ ಹೆಚ್ಚಾಗಿ ಮೂತ್ರ ಮತ್ತು ಬೆವರನ್ನು ಹೆಚ್ಚಿಸಬೇಕಾಗುತ್ತದೆ. ಹಾಗಾಗಿ ಇವುಗಳ ಬದಲಿಗೆ ಅಧಿಕ ನಾರಿನಂಶ ಇರುವ ಮತ್ತು ಕೊಬ್ಬಿನಾಂಶವೂ ಹೆಚ್ಚಿರುವ ಆಹಾರಗಳ ಸೇವನೆಯಿಂದ ದೇಹ ಬೆಚ್ಚಗಿರುವ ಮೂಲಕ ಅತಿಯಾಗಿ ಬೆವರುವ ಅಗತ್ಯವಿಲ್ಲವಾಗಿ ಹೋಗುತ್ತದೆ. ಅಲ್ಲದೇ ಖಾರ ಮತ್ತು ಮಸಾಲೆಯುಕ್ತ ಆಹಾರಗಳನ್ನೂ ಸೇವಿಸದಿರುವುದು ಒಳಿತು.

Most Read: ಅತಿಯಾಗಿ ಬೆವರುವಿಕೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು!

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಇಡಿಯ ದಿನ ಸಾಕಷ್ಟು ನೀರು ಕುಡಿಯುತ್ತಿರುವುದು ಮತ್ತು ನೀರಿನಂಶ ಹೆಚ್ಚಿರುವ ಆಹಾರಗಳನ್ನೇ ಸೇವಿಸುವ ಮೂಲಕ ದೇಹದಲ್ಲಿ ನೀರಿನಂಶದ ಕೊರತೆಯಾಗದಂತೆ ಹಾಗೂ ಅತಿಯಾಗಿ ಬೆವರದಂತೆ ನೋಡಿಕೊಳ್ಳಬಹುದು. ಹಾಗಾಗಿ ನಿಮ್ಮ ನಿತ್ಯದ ಆಹಾರದಲ್ಲಿ ಸಾಕಷ್ಟು ಹಣ್ಣು ಮತ್ತು ತರಕಾರಿಗಳಿರಲಿ. ನೀರಿನ ಬದಲು ಲಿಂಬೆರಸ ಬೆರೆಸಿದ ನೀರು ಮತ್ತು ತಾಜಾ ಹಣ್ಣಿನ ರಸಗಳನ್ನು ಮತ್ತು ವಿಶೇಷವಾಗಿ ಎಳನೀರನ್ನು ಸೇವಿಸುತ್ತಿರುವ ಮೂಲಕ ಅತಿಯಾಗಿ ಬೆವರುವುದನ್ನು ತಡೆಯಬಹುದು.

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಗಳು ಕ್ಷಾರೀಯವಾಗಿವೆ ಹಾಗೂ ಇವು ದೇಹದ ಪಿ ಎಚ್ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತವೆ. ಅಲ್ಲದೇ ಕಡಿಮೆ ಆಮ್ಲೀಯವಾಗಿರುವ ಪೋಷಕಾಂಶಗಳು ಅತಿ ಬೆವರುವಿಕೆಗೆ ನೇರವಾಗಿ ನೆರವಾಗುತ್ತವೆ. ಇದಕ್ಕಾಗಿ ತಾಜಾ ಆಲುಗಡ್ಡೆಯನ್ನು ಬಿಲ್ಲೆಗಳಾಗಿ ಕತ್ತರಿಸಿ ಅತಿಯಾಗಿ ಬೆವರುವ ಭಾಗಗಳ ಮೇಲೆ ಇರಿಸಬೇಕು. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದಕ್ಕೂ ಉತ್ತಮ ವಿಧಾನವೆಂದರೆ ಹಸಿ ಆಲುಗಡ್ಡೆಯನ್ನು ತುರಿದು ಹಿಂಡಿ ರಸ ಸಂರಹಿಸಿ. ಈ ರಸವನ್ನು ಅತಿಯಾಗಿ ಬೆವರುವ ಭಾಗಗಳ ಮೇಲೆ ಹತ್ತಿಯುಂಡೆ ಅಥವಾ ಮೃದು ಬಟ್ಟೆಯಿಂದ ಒರೆಸಿಕೊಳ್ಳಿ.

Most Read: ದೇಹದ ಬೆವರಿನ ದುರ್ವಾಸನೆ ನಿವಾರಿಸಲು ನೈಸರ್ಗಿಕ ಜ್ಯೂಸ್

ಲಿಂಬೆ

ಲಿಂಬೆ

ಲಿಂಬೆಯಲ್ಲಿ ಸಿಟ್ರಿಕ್ ಆಮ್ಲ ಉತ್ತಮ ಪ್ರಮಾಣದಲ್ಲಿದ್ದು ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ ಹಾಗೂ ಅತಿಯಾಗಿ ಬೆವರುವುದನ್ನೂ ತಡೆಯುತ್ತದೆ. ಇದಕ್ಕಾಗಿ ಒಂದು ಲಿಂಬೆಹಣ್ಣನ್ನು ಅಡ್ಡಲಾಗಿ ಕತ್ತರಿಸಿ ಅತಿಯಾಗಿ ಬೆವರು ಭಾಗಗಳಿಗೆ ಒರೆಸಿಕೊಳ್ಳಬೇಕು. ಇನ್ನೊಂದು ವಿಧಾನವೆಂದರೆ ಕೊಂಚ ಅಡುಗೆ ಸೋಡಾ ಮತ್ತು ಲಿಂಬೆರಸವನ್ನು ಚೆನ್ನಾಗಿ ಬೆರೆಸಿ ಹತ್ತಿಯುಂಡೆಯಿಂದ ಈ ಲೇಪನವನ್ನು ಅತಿಯಾಗಿ ಬೆವರುವ ಭಾಗಗಳ ಮೇಲೆ ತೆಳುವಾಗಿ ಹಚ್ಚಿಕೊಳ್ಳಬೇಕು. ವಿಶೇಷವಾಗಿ ಈ ವಿಧಾನ ಕಂಕುಳುಗಳಿಗೆ ಹೆಚ್ಚಿನ ನೆರವು ನೀಡುತ್ತದೆ.

English summary

Simple Home Remedies That Can Help If You Sweat A Lot

Heavy sweating which is also known as hyperhidrosis is a serious and embarrassing problem. There are some people who sweat excessively as compared to others. Excessive sweating can be a troublesome issue. First, let us understand why some people sweat excessively. We have thousands of sweat creating glands, eccrine glands that generate sweat when the body temperature rises. The nervous system stimulates the eccrine glad to generate sweat.
X
Desktop Bottom Promotion