For Quick Alerts
ALLOW NOTIFICATIONS  
For Daily Alerts

ಇಂತಹ 7 ಹಣ್ಣಿನ ಸಿಪ್ಪೆಯಲ್ಲಿವೆ ಚಮತ್ಕಾರಿ ಆರೋಗ್ಯ ಗುಣಗಳು!

|

ಹಣ್ಣುಗಳು ತಿನ್ನಲು ರುಚಿಕರ. ಎಳೆ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಇಷ್ಟವಾಗುವ ತಿನ್ನುವ ನೈಸರ್ಗಿಕವಾದ ಪದಾರ್ಥಗಳೆಂದರೆ ಅದು ಹಣ್ಣುಗಳು . ಶುಭ ಸಮಾರಂಭದ ಆರಂಭದ ಮುನ್ನ ಹಣ್ಣುಗಳಿನ್ನಿಟ್ಟು ಪೂಜೆ ಮಾಡುತ್ತಾರೆ . ಯಾರಿಗಾದರೂ ಶುಭ ಕೋರಬೇಕಾದರೆ ಹಣ್ಣುಗಳನ್ನು ಕೊಟ್ಟು ಹಾರೈಸುತ್ತಾರೆ. ಮಕ್ಕಳನ್ನು ಮಾತನಾಡಿಸಬೇಕಾದರೆ ಮೊದಲು ಕೈಗೊಂದು ಬಾಳೆ ಹಣ್ಣು ಕೊಟ್ಟು ಪ್ರೀತಿಯಿಂದ ಮಾತನಾಡಿಸುತ್ತಾರೆ . ಹಣ್ಣು ಶುಭದ ಸಂಕೇತ.

ದೇವರಿಗೂ ಪ್ರಿಯ. ರೋಗಿಗಳಿಗೆ ಆಸ್ಪತ್ರೆಯಲ್ಲಿ ವೈದ್ಯರು ಏನು ಹೇಳುವುದನ್ನು ಬಿಟ್ಟರೂ ಹಣ್ಣುಗಳ ರಸ ಕೊಡಿ ಎಂದು ಹೇಳಿಯೇ ಇರುತ್ತಾರೆ. ಅದಕ್ಕೆ ಕಾರಣ ಹಣ್ಣಿನಲ್ಲಿ ಅಡಗಿರುವ ಯಥೇಚ್ಛವಾದ ಪೋಷಕಾಂಶಗಳು . ಹಣ್ಣಿಗೆ ಅಷ್ಟೊಂದು ಮಹತ್ವ ಇರಬೇಕಾದರೆ ಅದರ ಸಿಪ್ಪೆಗೆ ? ಖಂಡಿತ ಇದೆ. ಆದರೆ ನಾವು ಅದನ್ನು ತಿಳಿಯದೆ ಹಣ್ಣು ತಿಂದು ಸಿಪ್ಪೆ ಬಿಸಾಡುತ್ತೇವೆ . ಈ ಲೇಖನ ಓದಿದ ಮೇಲೆ ಖಂಡಿತ ಇನ್ನು ಮುಂದೆ ನೀವು ಆ ತಪ್ಪನ್ನು ಮಾಡುವುದಿಲ್ಲ ಎಂಬುದು ನಮ್ಮ ಭಾವನೆ. ಏಕೆಂದರೆ ಹಣ್ಣಿನ ಸಿಪ್ಪೆಗಿರುವ ಅನೇಕ ಔಷಧೀಯ ಗುಣಗಳನ್ನು ನಾವು ಇಲ್ಲಿ ತಿಳಿಸಬಯಸುತ್ತೇವೆ.

 ಕಿತ್ತಳೆ ಹಣ್ಣಿನ ಸಿಪ್ಪೆ

ಕಿತ್ತಳೆ ಹಣ್ಣಿನ ಸಿಪ್ಪೆ

ಕಿತ್ತಳೆ ಹಣ್ಣಿನ ತೊಳೆಗಳಂತೆ ಅದರ ಸಿಪ್ಪೆಯಲ್ಲೂ ಅನೇಕ ಔಷಧೀಯ ಗುಣಲಕ್ಷಣಗಳಿವೆ. ದೇಹದ ತೂಕ ಕಡಿಮೆ ಮಾಡಿ ಕೊಳ್ಳಬೇಕು ಎನ್ನುವವರು ಕಿತ್ತಳೆ ಹಣ್ಣಿನ ಸಿಪ್ಪೆಯ ಮೊರೆ ಹೋಗುವುದು ಒಳ್ಳೆಯದು. ಏಕೆಂದರೆ ಇದು ನೈಸರ್ಗಿಕವಾದ ಮತ್ತು ಯಾವುದೇ ಅಡ್ಡ ಪರಿಣಾಮಗಳಿಲ್ಲದ ಔಷಧ. ಅಷ್ಟೇ ಅಲ್ಲದೆ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಚರ್ಮಕ್ಕೆ ಬೇಕಾದ ಒಳ್ಳೆಯ ಗುಣವಿದ್ದು , ಚರ್ಮಕ್ಕೆ ಸ್ಕ್ರಬ್ಬಿಂಗ್ ಮತ್ತು ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಬಾಯಿಯ ಆರೋಗ್ಯ, ಶ್ವಾಸಕೋಶದ ಸಮಸ್ಯೆಗಳು , ಮಲಬದ್ಧತೆ ಮತ್ತು ಎದೆಯುರಿ ಇಂತಹ ಆರೋಗ್ಯ ತೊಂದರೆಗಳಿಗೆ ಕಿತ್ತಳೆ ಹಣ್ಣಿನ ಸಿಪ್ಪೆ ರಾಮಬಾಣ. ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೂ ಕಿತ್ತಳೆ ಸಿಪ್ಪೆ ಅನೇಕ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ನಂಬಲಾಗಿದೆ .

ಬಾಳೆ ಹಣ್ಣಿನ ಸಿಪ್ಪೆ

ಬಾಳೆ ಹಣ್ಣಿನ ಸಿಪ್ಪೆ

ಪೂಜೆಗೆ ನೈವೇದ್ಯಕ್ಕೆ ಎಲ್ಲರೂ ಮೊದಲು ಪ್ರಾಶಸ್ತ್ಯ ಕೊಡುವುದೇ ಬಾಳೆ ಹಣ್ಣಿಗೆ . ತಿನ್ನಲು ಮೃದುವಾಗಿರುವ ಬಾಳೆಹಣ್ಣು ಮೈ ಮೇಲೆ ಅದರ ಆಕಾರಕ್ಕೆ ಹೋಲುವಂತೆ ಸಿಪ್ಪೆಯನ್ನು ಹೊಂದಿರುತ್ತದೆ . ಬಾಳೆ ಹಣ್ಣಿನ ಸಿಪ್ಪೆಯೂ ಕೂಡ ಅನೇಕ ರೀತಿಯಲ್ಲಿ ಮನುಷ್ಯನಿಗೆ ಉಪಯೋಗವಾಗುತ್ತದೆ . ಹೇಗೆಂದರೆ ನಿಮ್ಮ ಹಳದಿ ಬಣ್ಣಕ್ಕೆ ತಿರುಗಿದ ಹಲ್ಲುಗಳು ಎಷ್ಟೇ ಟೂತ್ ಪೇಸ್ಟ್ ಹಾಕಿ ಉಜ್ಜಿದರೂ ಬೆಳ್ಳಗಾಗುತ್ತಿಲ್ಲವೇ ? ಹಾಗಿದ್ದರೆ ನೀವು ಬಾಳೆ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಹಾಕುವ ಬದಲು ಅದರ ಬೆಳ್ಳಗಿನ ಭಾಗವನ್ನು ನಿಮ್ಮ ಹಲ್ಲುಗಳ ಮೇಲೆ ನಿಧಾನವಾಗಿ ಒಮ್ಮೆ ಉಜ್ಜಿ ನೋಡಿ . ಖಂಡಿತ ನಿಮ್ಮ ಹಲ್ಲಿನ ಮೇಲಿನ ಹಳದಿ ಬಣ್ಣ ಮಾಯವಾಗಿ , ಹಲ್ಲು ಶುಭ್ರವಾಗಿ ಬೆಳ್ಳಗೆ ಪಳಪಳನೆ ಹೊಳೆಯುತ್ತವೆ . ಅಷ್ಟೇ ಅಲ್ಲದೆ ನಿಮ್ಮ ಮೈ ಚರ್ಮದ ಮೇಲೆ ಸುಟ್ಟಿರುವ ಗಾಯವೇನಾದರೂ ಇದ್ದರೂ ಕೂಡ ಬಾಳೆ ಹಣ್ಣಿನ ಸಿಪ್ಪೆಯನ್ನು ಗಾಯದ ಮೇಲಿಟ್ಟರೆ ಸಾಕು . ಗಾಯದ ನೋವನ್ನು ಕಡಿಮೆ ಮಾಡಿ ಗಾಯ ಮಾಗುವಂತೆ ಮಾಡುತ್ತದೆ . ಇನ್ನು ಕಾಲಿನ ಹಿಮ್ಮಡಿ ಒಡೆದು ಕೊಂಡಿರುವ ಸಮಸ್ಯೆ ಎದುರಿಸುತ್ತಿರುವವರು ಬಾಳೆ ಹಣ್ಣಿನ ಸಿಪ್ಪೆಯನ್ನು ರುಬ್ಬಿ ರಸ ತೆಗೆದು ಅದನ್ನು ಒಡೆದುಕೊಂಡಿರುವ ಹಿಮ್ಮಡಿಗೆ ಪ್ರತಿದಿನವೂ ಮಸಾಜ್ ಮಾಡುತ್ತಿದ್ದರೆ 1 ವಾರದೊಳಗೆ ನಿಮ್ಮ ಹಿಮ್ಮಡಿ ನುಣುಪಾಗುತ್ತದೆ.

Most Read: ಬಾಳೆ ಹಣ್ಣಿನ ಸಿಪ್ಪೆಯ ಚಮತ್ಕಾರೀ ಉಪಯೋಗ!

ದಾಳಿಂಬೆ ಹಣ್ಣಿನ ಸಿಪ್ಪೆ

ದಾಳಿಂಬೆ ಹಣ್ಣಿನ ಸಿಪ್ಪೆ

ದಾಳಿಂಬೆ ಹಣ್ಣಿಗೆ ಔಷಧೀಯ ಗುಣಗಳು ಮತ್ತು ಅನೇಕ ಪೋಷಕಾಂಶಗಳಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ . ಆದರೆ ಮೇಲಿರುವ ಸಿಪ್ಪೆಗೆ ದೇವರು ಉಪಯೋಗಕ್ಕೆ ಬರುವಂತಹ ವರ ಕೊಟ್ಟಿರುವುದು ಯಾರಿಗೂ ತಿಳಿಯದ ವಿಚಾರ. ಹೌದು ದಾಳಿಂಬೆ ಹಣ್ಣಿನ ಸಿಪ್ಪೆ ಅನೇಕ ಆರೋಗ್ಯಕರ ಮತ್ತು ಮುಖದ ಸೌಂದರ್ಯ ವನ್ನು ಕಾಪಾಡುವಂತಹ ಗುಣಗಳನ್ನು ಹೊಂದಿದೆ. ಮುಖದ ಮೇಲಿನ ಮೊಡವೆಗಳು ಗುಳ್ಳೆಗಳು ಮತ್ತು ಮುಖದ ಮೇಲೆ ಮೂಡುವಂತಹ ಭಂಗು ದಾಳಿಂಬೆ ಸಿಪ್ಪೆಯಿಂದ ಗುಣ ಕಾಣುತ್ತದೆ . ಕೂದಲು ಉದುರುವಿಕೆ ಮತ್ತು ತಲೆಯಲ್ಲಿನ ಹೊಟ್ಟು ನಿವಾರಣೆಗೂ ದಾಳಿಂಬೆ ಸಿಪ್ಪೆ ಉಪಯೋಗಕ್ಕೆ ಬರುತ್ತದೆ. ದೇಹದ ಮೇಲೆ ಇಷ್ಟೊಂದು ಪ್ರಭಾವ ಬೀರಿದರೆ, ದೇಹದ ಒಳಗೆ ದಾಳಿಂಬೆ ಸಿಪ್ಪೆ ಇನ್ನೂ ಅನೇಕ ರೀತಿಯಲ್ಲಿ ತನ್ನ ರಕ್ಷಣೆಯನ್ನು ಮನುಷ್ಯನ ದೇಹಕ್ಕೆ ಒದಗಿಸುತ್ತದೆ. ಹೃದಯ ಸಂಬಂಧಿ ಸಮಸ್ಯೆ , ಗಂಟಲು ಕೆರೆತ , ಮೂಳೆಗಳ ಆರೋಗ್ಯ ರಕ್ಷಣೆ, ಹಲ್ಲುಗಳ ಹಾಗು ವಸಡಿನ ರಕ್ಷಣೆ ಮತ್ತು ಕರುಳಿನ ಖಾಯಿಲೆಗೂ ದಾಳಿಂಬೆ ಸಿಪ್ಪೆ ಬಹಳ ಸಹಕಾರಿ .

ಕಲ್ಲಂಗಡಿ ಹಣ್ಣಿನ ಸಿಪ್ಪೆ

ಕಲ್ಲಂಗಡಿ ಹಣ್ಣಿನ ಸಿಪ್ಪೆ

ಕಲ್ಲಂಗಡಿ ಹಣ್ಣಿನ ಸಿಪ್ಪೆ ನೋಡಲು ಗಟ್ಟಿಯಾಗಿದ್ದರೂ ಅದರಲ್ಲೂ ಸಹ ಅನೇಕ ರೀತಿಯ ಪೋಷಕಾಂಶಗಳು ಅಡಗಿವೆ. ಇವುಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಸಹಕಾರಿ. ಕಲ್ಲಂಗಡಿ ಹಣ್ಣಿನ ಸಿಪ್ಪೆ ದೇಹದ ತೂಕ ಕಡಿಮೆ ಮಾಡುವಲ್ಲಿ ಪ್ರಮಖ ಪಾತ್ರ ವಹಿಸುತ್ತದೆ . ಜೊತೆಗೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಚರ್ಮದ ಮೇಲೆ ಉಜ್ಜಿಕೊಂಡರೆ ಚರ್ಮದ ಮೇಲಿನ ಕೊಳಕನ್ನು ಅತ್ಯಂತ ಪರಿಣಾಮಕಾರಿಯಾಗಿ ತೆಗೆಯುತ್ತದೆ . ಚರ್ಮದ ಮೇಲಿನ ಫ್ರೀ ರಾಡಿಕಲ್ ಗಳನ್ನು ಕಡಿಮೆ ಮಾಡಿ ಚರ್ಮ ಹಾಳಾಗದಂತೆ ನೋಡಿಕೊಳ್ಳುವ ಗುಣ ಕಲ್ಲಂಗಡಿ ಹಣ್ಣಿನ ಸಿಪ್ಪೆಯಲ್ಲಿದೆ .

ಸೌತೆಕಾಯಿ ಸಿಪ್ಪೆ

ಸೌತೆಕಾಯಿ ಸಿಪ್ಪೆ

ಸಾಮಾನ್ಯವಾಗಿ ನಮಗೆ ಸೌತೆಕಾಯಿ ತಿನ್ನಲು ಕೊಟ್ಟರೆ ಸಿಪ್ಪೆ ತೆಗೆದು ಬಿಸಾಡಿ ತಿನ್ನುತ್ತೇವೆ ಮತ್ತು ನಮ್ಮ ಪ್ರಕಾರ ಸೌತೆಕಾಯಿಯ ತಿರುಳಿನಲ್ಲಿ ಇದ್ದಷ್ಟು ಆಂಟಿ ಒಕ್ಸಿಡಾಂಟ್ ಮತ್ತು ಇತರೆ ಪೋಷಕಾಂಶಗಳು ಸೌತೆಕಾಯಿ ಸಿಪ್ಪೆಯಲ್ಲಿರುವುದಿಲ್ಲ ಎಂದು ನಂಬಿರುತ್ತೇವೆ . ಆದರೆ ಅದು ತಪ್ಪು ಕಲ್ಪನೆ . ಏಕೆಂದರೆ ಸೌತೆಕಾಯಿಯ ಸಿಪ್ಪೆಯಲ್ಲಿ ಫೈಬರ್ ನ ಅಂಶ ಹೆಚ್ಚಾಗಿ ಇದ್ದು , ಕ್ಯಾಲೋರಿ ಕಡಿಮೆ ಇದೆ . ಇದರಿಂದ ದೇಹದ ತೂಕ ಕಡಿಮೆ ಆಗುತ್ತದೆ ಮತ್ತು ಮಲಬದ್ಧತೆ ಏನಾದರೂ ಇದ್ದರೆ ಅದೂ ಕೂಡ ನಿವಾರಣೆ ಆಗುತ್ತದೆ . ಅಷ್ಟೇ ಅಲ್ಲದೆ ಸೌತೆಕಾಯಿಯ ಸಿಪ್ಪೆಯಲ್ಲಿ ಬೀಟಾ ಕ್ಯಾರೋಟೀನ್ ಅಂಶವಿದ್ದು (ವಿಟಮಿನ್ ' ಎ ' ಮತ್ತು ವಿಟಮಿನ್ ' ಕೆ ' ನ ಒಂದು ಭಾಗ ) , ಇದು ಸಾಮಾನ್ಯವಾಗಿ ಮೂಳೆಗಳ ಆರೋಗ್ಯವನ್ನು ಕಾಪಾಡುವುದಲ್ಲದೆ ರಕ್ತ ಹೆಪ್ಪುಗಟ್ಟುವುದನ್ನು ತಡೆದು ಕಣ್ಣಿನ ದೃಷ್ಟಿಯ ಶಕ್ತಿಯನ್ನು ಹೆಚ್ಚಾಗಿಸುತ್ತದೆ .

ಸೇಬು ಹಣ್ಣಿನ ಸಿಪ್ಪೆ

ಸೇಬು ಹಣ್ಣಿನ ಸಿಪ್ಪೆ

ಆಪಲ್ ಅಥವಾ ಸೇಬು ಹಣ್ಣು ನಮಗೆ ಬಹಳ ರೀತಿಯಲ್ಲಿ ಸಹಕಾರಿ ."ದಿನಕ್ಕೊಂದು ಆಪಲ್ ತಿನ್ನಿ ಡಾಕ್ಟರ್ ರಿಂದ ದೂರವಿರಿ " ಎಂಬ ಮಾತಿನಂತೆ ಆಪಲ್ ನಮ್ಮ ಹೃದಯದ ಆರೋಗ್ಯ ಕಾಪಾಡುವುದರ ಜೊತೆಗೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗಿಸುತ್ತದೆ.ಸೇಬು ಹಣ್ಣಿನ ಸಿಪ್ಪೆಯಲ್ಲಿ ಪ್ಲಾವನೋಯ್ಡ್ ಅಂಶವಿದ್ದು,ದೇಹದಲ್ಲಿ ಒಂದು ವೇಳೆ ಕ್ಯಾನ್ಸರ್ ರೋಗ ತರಿಸುವಂತಹ ಕೋಶಗಳು ಯಾವುದಾದರೂ ಇದ್ದರೂ ಅವನ್ನು ಮೊದಲು ನಾಶಪಡಿಸುತ್ತದೆ ಮತ್ತು ಕ್ಯಾನ್ಸರ್ ರೋಗ ಬರದಂತೆ ತಡೆಯುತ್ತದೆ . ಇನ್ನೊಂದು ಮುಖ್ಯ ವಿಷಯ ಎಂದರೆ ಸೇಬು ಹಣ್ಣಿನ ಸಿಪ್ಪೆಯಲ್ಲಿ ಅರ್ಸಲಿಕ್ ಆಸಿಡ್ ಇದ್ದು ಸ್ತೂಲಕಾಯ ದೇಹ ಹೊಂದಿರುವವರಿಗೆ ಇದು ಅವರ ದೇಹದ ತೂಕ ಇಳಿಸುವಲ್ಲಿ ಬಹಳ ಸಹಕಾರಿ .

ನಿಂಬೆ ಹಣ್ಣಿನ ಸಿಪ್ಪೆ

ನಿಂಬೆ ಹಣ್ಣಿನ ಸಿಪ್ಪೆ

ನಿಂಬೆ ಹಣ್ಣಿನ ಸಿಪ್ಪೆ ಒಂದು ರೀತಿಯ ಸೌಂದರ್ಯ ವರ್ಧಕ . ಇದರಲ್ಲಿ ನೈಸರ್ಗಿಕವಾಗಿ ಮೊಯಿಶ್ಚರೈಸಿಂಗ್ ಗುಣ ಇದ್ದು ಚರ್ಮದ ರಕ್ಷಣೆ ಮಾಡುತ್ತದೆ . ಅಷ್ಟೇ ಅಲ್ಲದೆ ದೇಹದ ತೂಕ ಕಡಿಮೆ ಮಾಡಿ ಸ್ಕರ್ವಿ ಮತ್ತು ಗಿಂಜಿವೈಟಿಸ್ ಎಂಬ ಬಾಯಿಗೆ ಮತ್ತು ವಸಡಿಗೆ ಸಂಬಂಧಿತ ಖಾಯಿಲೆಗಳನ್ನು ದೂರ ಮಾಡುತ್ತದೆ ಹಾಗೂ ದೇಹದಲ್ಲಿನ ಮೂಳೆಗಳ ಆರೋಗ್ಯ ರಕ್ಷಣೆ ಕೂಡ ಮಾಡುತ್ತದೆ . ಇದರಲ್ಲಿ ಲಿಮೋನೀನ್ ಮತ್ತು ಸಾಲ್ವೆಸ್ಟ್ರಾಲ್ Q40 ಎಂಬ ಕ್ಯಾನ್ಸರ್ ನಿವಾರಕ ಔಷಧೀಯ ಗುಣಗಳಿದ್ದು ಆಂಟಿ ಒಕ್ಸಿಡಾಂಟ್ ಗಳ ಸಹಾಯದಿಂದ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಕಡಿಮೆ ಮಾಡಿ ಮಾನಸಿಕ ಒತ್ತಡವನ್ನೂ ನಿವಾರಿಸುತ್ತದೆ .

English summary

Seven fruit peels that have amazing health benefits!

Fruits are a storehouse of nutrients that render myriad health and beauty benefits. However like the fruit, the peel too has lots to offer. Here are some surprising health benefits of fruit peels. Orange peels: Orange peels are an excellent weight loss aid and act as an effective natural scrubber and bleach for the skin. They also improve oral health, relieve respiratory problems, prevent constipation and heartburn. Orange peels protect against cancer and lower your risk of heart disease.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X