For Quick Alerts
ALLOW NOTIFICATIONS  
For Daily Alerts

ಮೊಟ್ಟೆಯ ಬಿಳಿಭಾಗವನ್ನು ಹೆಚ್ಚಾಗಿ ತಿನ್ನಬಾರದಂತೆ! ಯಾಕೆ ಗೊತ್ತೇ?

|

ಮೊಟ್ಟೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬರು ಮೊಟ್ಟೆ ಎಂದರೆ ಇಷ್ಟಪಡುವರು. ಮೊಟ್ಟೆಯನ್ನು ಬಳಸಿಕೊಂಡು ಹಲವಾರು ರೀತಿಯ ಖಾದ್ಯಗಳನ್ನು ಮಾಡಲು ಸಾಧ್ಯವಿದೆ. ಅದೇ ರೀತಿಯಾಗಿ ಮೊಟ್ಟೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್ ಗಳು, ಪ್ರೋಟೀನ್ ಇತ್ಯಾದಿಗಳಿದೆ. ಇದರಿಂದ ಮೊಟ್ಟೆ ನಮ್ಮ ಆರೋಗ್ಯಕ್ಕೆ ಕೂಡ ಒಳ್ಳೆಯದು. ಹೆಚ್ಚಾಗಿ ಉಪಾಹಾರಕ್ಕೆ ಮೊಟ್ಟೆಯ ಬಿಳಿಭಾಗವನ್ನು ತಿನ್ನುವರು. ನೀವು ಈಗಿನಿಂದಲೇ ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದನ್ನು ಬಿಡಬೇಕು. ಇದು ಯಾಕೆ ಎಂದು ನಿಮಗೆ ನಾವು ಇಲ್ಲಿ ವಿವರವಾಗಿ ತಿಳಿಸಿಕೊಡಲಿದ್ದೇವೆ.

Egg Whites

ಮೊಟ್ಟೆಯ ಬಿಳಿಭಾಗ
ಮೊಟ್ಟೆಯ ಬಿಳಿ ಭಾಗ ಎನ್ನುವುದು ಮೊಟ್ಟೆಯ ಚಿಪ್ಪು ಮತ್ತು ಮೊಟ್ಟೆಯ ಹಳದಿ ಮಧ್ಯೆ ಇರುತ್ತದೆ. ಇದರಲ್ಲಿ ಪ್ರೋಟೀನ್, ಸೋಡಿಯಂ, ಸೆಲೆನಿಯಂ, ಫಾಲಟೆ, ಕ್ಯಾಲ್ಸಿಯಂ ಇತ್ಯಾದಿಗಳು ಇವೆ. ಮೊಟ್ಟೆಯಲ್ಲಿ ಸುಮಾರು 16 ಕ್ಯಾಲರಿ ಇದೆ ಎಂದು ನಿಮಗೆ ತಿಳಿದಿದೆಯಾ? ಹೌದು, ಮೊಟ್ಟೆಯ ಬಿಳಿ ಬಾಗದಲ್ಲಿ ಯಾವುದೇ ರೀತಿಯ ಪರ್ಯಾಪ್ತ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲ. ಆದರೆ ಇದನ್ನು ತಿನ್ನುವುದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇವೆ. ಇಲ್ಲಿ ನಾವು ನಿಮಗೆ ನಾಲ್ಕು ಕಾರಣಗಳನ್ನು ನೀಡಿದ್ದೇವೆ.

ಅಲರ್ಜಿ
ಪ್ರಕ್ರಿಯೆ ಕೆಲವೊಂದು ಜನರಿಗೆ ಮೊಟ್ಟೆಯ ಬಿಳಿ ಭಾಗದ ಅಲರ್ಜಿ ಉಂಟಾಗುವುದು, ಅದೇ ರೀತಿಯ ಅಲ್ಬುಮಿನ್ ಪ್ರೋಟೀನ್ ನಿಂದಲೂ ಅಲರ್ಜಿ ಆಗುವುದು. ಮೊಟ್ಟೆಯ ಬಿಳಿ ಭಾಗವು ಅಲರ್ಜಿ ಉಂಟು ಮಾಡಬಹುದು. ಇದರಿಂದಾಗಿ ದದ್ದು, ವಾಕರಿಕೆ, ಭೇದಿ, ವಾಂತಿ, ಉಬ್ಬಸ, ಕೆಮ್ಮು ಕಾಣಿಸಬಹುದು. ಕೆಲವೊಂದು ಸಂದರ್ಭದಲ್ಲಿ ಮೊಟ್ಟೆಯ ಬಿಳಿ ಭಾಗದಿಂದಾಗಿ ತುಂಬಾ ತೀವ್ರವಾದ ಪರಿಣಾಮ ಉಂಟಾಗ ಬಹುದು ಮತ್ತು ಉಸಿರಾಡಲು ಕಷ್ಟವಾಗಬಹುದು, ರಕ್ತದೊತ್ತಡ ತಗ್ಗಬಹುದು, ಗಂಟಲು ಮತ್ತು ಬಾಯಿಯಲ್ಲಿ ಉರಿಯೂತ ಕಾಣಿಸಬಹುದು ಮತ್ತು ಪ್ರಜ್ಞೆ ಕಳೆದುಕೊಳ್ಳಬಹುದು. ಅಲರ್ಜಿ ಇರುವಂತಹ ಜನರು ಆದಷ್ಟು ಮಟ್ಟಿಗೆ ಮೊಟ್ಟೆಯ ಬಿಳಿ ಭಾಗದಿಂದ ದೂರವಿದ್ದರೆ ತುಂಬಾ ಒಳ್ಳೆಯದು.

ಆಹಾರ ವಿಷವಾಗಬಹುದು
ಹಸಿ ಮೊಟ್ಟೆಯ ಬಿಳಿ ಭಾಗದಲ್ಲಿ ಸಾಲ್ಮೊನೆಲ್ಲಾ ಎನ್ನುವ ಬ್ಯಾಕ್ಟೀರಿಯಾವು ಇದ್ದು, ಕೋಳಿಯ ಕರುಳಿನಲ್ಲಿ ಇದು ಕಂಡುಬರುತ್ತದೆ. ಇದು ಮೊಟ್ಟೆಯ ಒಳಗೆ ಹಾಗೂ ಹೊರ ಭಾಗದಲ್ಲಿ ಕಂಡುಬರುವುದು. ಸಾಲ್ಮೊನೆಲ್ಲಾದ ಅಪಾಯ ತಪ್ಪಿಸಲು ಹಸಿ ಮೊಟ್ಟೆಯ ಬಿಳಿ ಭಾಗವನ್ನು ಸೇವಿಸಬಾರದು ಮತ್ತು ಮೊಟ್ಟೆಯನ್ನು ದೀರ್ಘಕಾಲದ ತನಕ ಹೆಚ್ಚಿನ ಉಷ್ಣಾಂಶದಲ್ಲಿ ಬೇಯಿಸಿ. ಸರಿಯಾಗಿ ಬೇಯಿಸಿದ ಮೊಟ್ಟೆ ತಿನ್ನುವುದು ತುಂಬಾ ಒಳ್ಳೆಯದು.


ನೀರು ಹೀರಿಕೊಳ್ಳಬಲ್ಲ ವಿಟಮಿನ್ ಬಿ: ಬಿಯೊಟಿನ್ ನ ಕೊರತೆ
ಬಯೋಟಿನ್ ಕೊರತೆಯನ್ನು ವಿಟಮಿನ್ ಎಚ್ ಅಥವಾ ವಿಟಮಿನ್ ಬಿ7 ಕೊರತೆ ಎಂದೂ ಕರೆಯಲಾಗುತ್ತದೆ. ಇದರಿಂದ ಚರ್ಮದ ಸಮಸ್ಯೆಯಾಗಿರುವಂತಹ ಕ್ರಾಡೆಲ್ ಕ್ಯಾಪ್, ಸೆಬೊರ್ಹೆರಿಕ್ ಡರ್ಮಟೈಟಿಸ್, ಸ್ನಾಯುಗಲು ಬಲ ಮತ್ತು ಸಹಕಾರದ ಕೊರತೆ, ಸ್ನಾಯುಗಳ ನೋವು ಮತ್ತು ಸೆಳೆತ, ಕೂದಲು ಉದುರುವಂತಹ ಸಮಸ್ಯೆ ಕಾಣಿಸಿಕೊಳ್ಳುವುದು. ಮೊಟ್ಟೆಯ ಬಿಳಿ ಭಾಗ ತಿನ್ನುವುದರಿಂದ ಬಯೋಟಿನ್ ಕೊರತೆಯು ಹೆಚ್ಚಾಗಿ ಕಾಡುತ್ತದೆ. ಮೊಟ್ಟೆಯ ಬಿಳಿ ಭಾಗದಲ್ಲಿ ಇರುವಂತಹ ಪ್ರೋಟೀನ್ ದೇಹದಲ್ಲಿರುವ ಬಯೋಟಿನ್ ನ್ನು ಉಜ್ಜುವುದು, ಇದರಿಂದ ಬಯೋಟಿನ್ ಕೊರತೆ ಕಾಣುವುದು. ಇದರಿಂದ ಅಡ್ಡಪರಿಣಾಮದ ಅಪಾಯವು ಹೆಚ್ಚಾಗುವುದು.

ಅತಿಯಾದ ಪ್ರೋಟೀನ್
ಮೊಟ್ಟೆಯ ಬಿಳಿ ಭಾಗದಲ್ಲಿ ಹೆಚ್ಚು ಪ್ರೋಟೀನ್ ಇದೆ ಮತ್ತು ವೈದ್ಯರ ಪ್ರಕಾರ ಅಧಿಕ ಮಟ್ಟದ ಪ್ರೋಟೀನ್ ಸೇವಿಸಿದರೆ ಅದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತುಂಬಾ ಅಪಾಯಕಾರಿ. ಗ್ಲೊಮೆರುಲರ್ ಸೋಸುವಿಕೆಯು ತುಂಬಾ ಕಡಿಮೆ ಇರುವಂತಹ ಜನರು ಕಿಡ್ನಿಯ ಗಂಭೀರ ಸಮಸ್ಯೆಗೆ ಗುರಿಯಾಗುವರು. ಇದಕ್ಕೆ ಪ್ರಮುಖ ಕಾರಣವೆಂದರೆ ಮೊಟ್ಟೆಯಲ್ಲಿ ಇರುವಂತಹ ಪ್ರೋಟೀನ್ ಅಂಶ. ಮೂತ್ರಪಿಂಡದ ಕಾರ್ಯದಲ್ಲಿ ತೊಂದರೆ ಅನುಭವಿಸುವಂತಹ ಜನರಿಗೆ ದಿನದಲ್ಲಿ ಕೇವಲ 0.6 ನಿಂದ 0.8 ಗ್ರಾಂನಷ್ಟು ಪ್ರೋಟೀನ್ ಸೇವಿಸಲು ಮಾತ್ರ ಸಲಹೆ ನೀಡಲಾಗುತ್ತದೆ. ಅದಾಗ್ಯೂ, ಶೇ.60ರಷ್ಟು ಪ್ರೋಟೀನ್ ಮೊಟ್ಟೆಯ ಬಿಳಿ ಭಾಗದಿಂದ ಬರುತ್ತದೆ. ಇದರಿಂದ ದಿನದಲ್ಲಿ ಒಂದೆರಡು ಮೊಟ್ಟೆ ಮಾತ್ರ ಸೇವಿಸಲು ಸೂಚಿಸಲಾಗುತ್ತದೆ. ಯಕೃತ್ ನ ತೀವ್ರ ಸಮಸ್ಯೆ ಇರುವಂತಹ ಜನರು ವೈದ್ಯರನ್ನು ಭೇಟಿ ಮಾಡಿದ ಬಳಿಕ ಮೊಟ್ಟೆಯನ್ನು ಸೇವಿಸಿ.

ಮುನ್ನೆಚ್ಚರಿಕೆಗಳು
ಮೊಟ್ಟೆಯನ್ನು ಸರಿಯಾಗಿ ಬೇಯಿಸಿ ತಿನ್ನಿ ಆಮ್ಲೆಟ್ ಮಾಡುವ ವೇಳೆ ಅದು ಸರಿಯಾಗಿ ಬೆಂದಿದೆಯಾ ಎಂದು ತಿಳಿದುಕೊಳ್ಳಿ. ಆಹಾರ ಕ್ರಮದಲ್ಲಿ ಮೊಟ್ಟೆಯ ಬಿಳಿ ಭಾಗವು ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಎರಡು ಮೊಟ್ಟೆಗಿಂತ ಹೆಚ್ಚು ಸೇವಿಸಲೇಬಾರದು.

English summary

Reasons Why You Should Avoid Eating Egg Whites

Egg lovers! Take note! Having a scrambled egg in breakfast just feels heavenly! Isn't it? But here's a reason to avoid egg whites from now on. But before elaborating it, one must know, what is actually is an egg white?Some people are allergic to egg whites as well as albumin proteins. Eating egg white may trigger allergic reactions causing symptoms such as rashes, swelling, nausea, diarrhea, vomiting, wheezing, coughing, and sneezing. In some rare cases, eating egg whites can also trigger severe symptoms such as difficulty breathing, drop in blood pressure
X
Desktop Bottom Promotion