For Quick Alerts
ALLOW NOTIFICATIONS  
For Daily Alerts

ಫ್ಲೆಬೈಟಿಸ್: ಕಾರಣಗಳು, ಲಕ್ಷಣಗಳು, ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ

|

ಫ್ಲೆಬೈಟಿಸ್ (Phlebitis) ಎಂಬ ಕಾಯಿಲೆ ನರದ ಉರಿಯೂತದ ಪರಿಣಾಮದಿಂದ ಎದುರಾಗುತ್ತದೆ. ಉರಿಯೂತದ ಪರಿಣಾಮವಾಗಿ ನರದಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಈ ಸ್ಥಿತಿಗೆ ಥ್ರೋಂಬೋಫ್ಲೆಬೈಟಿಸ್ (thrombophlebitis) ಎಂದು ಕರೆಯುತ್ತಾರೆ. ಒಂದು ವೇಳೆ ಈ ಹೆಪ್ಪುಗಟ್ಟಿದ ರಕ್ತ ನರದ ಆಳದಲ್ಲಿದ್ದರೆ ಇದಕ್ಕೆ ಡಿವಿಟಿ (deep vein thrombosis (DVT) ಎಂದು ಕರೆಯುತ್ತಾರೆ.
ಫ್ಲೆಬೈಟಿಸ್ ನ ವಿಧಗಳು

Phlebitis

1. ಸುಪರ್ ಫಿಶಿಯಲ್ ಫ್ಲೆಬೈಟಿಸ್ (Superficial phlebitis)

ಈ ಸ್ಥಿತಿ ಚರ್ಮಕ್ಕೆ ನಿಕಟವಾಗಿರುವ ನರಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದಾಗ ಕಾಣಿಸಿಕೊಳ್ಳುತ್ತದೆ. ಈ ಬಗೆಯ ಫ್ಲೆಬೈಟಿಸ್ ಗೆ ಚಿಕಿತ್ಸೆ ಸಾಕಾಗುತ್ತದೆ ಹಾಗೂ ಈ ತೊಂದರೆ ಗಂಭೀರ ಸ್ಥಿತಿಗೆ ತಲುಪುವ ಸಾಧ್ಯತೆ ಅತಿ ಕಡಿಮೆಯಾಗಿದೆ.

2. ಡೀಪ್ ಫ್ಲೆಬೈಟಿಸ್ (Deep phlebitis)

ಈ ಸ್ಥಿತಿ ದೇಹದ ಆಳದಲ್ಲಿ ರುವ, ದೊಡ್ಡ ಮತ್ತು ಪ್ರಮುಖ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದಾಗ ಕಂಡುಬರುತ್ತದೆ. ಈ ರಕ್ತನಾಳಗಳಲ್ಲಿದ್ದ ಹೆಪ್ಪುಗಟ್ಟಿದ ರಕ್ತ ರಕ್ತದ ಒತ್ತಡದ ಪರಿಣಾಮವಾಗಿ ಚಿಕ್ಕ ಚಿಕ್ಕ ಗಡ್ಡೆಗಳಾಗಿ ಒಡೆದು ರಕ್ತಸಂಚಾರದ ಮೂಲಕ ಶ್ವಾಸಕೋಶಕ್ಕೂ ತಲುಪಬಹುದು. ಒಂದು ವೇಳೆ ಹೀಗಾದರೆ ಈ ಸ್ಥಿತಿಗೆ ಪಲ್ಮೋನರಿ ಎಂಬೋಲಿಸಂಗೆ (pulmonary embolism) ಎಂದು ಕರೆಯಲಾಗುತ್ತದೆ.

ಯಾವ ಸ್ಥಿತಿಗಳಿಂದ ಫ್ಲೆಬೈಟಿಸ್ ಎದುರಾಗುತ್ತದೆ?

ರಕ್ತನಾಳವೊಂದರ ಒಳಪದರದಲ್ಲಿ ಪೆಟ್ಟು, ಉರಿಯೂತ ಅಥವಾ ಬೇರಾವುದೋ ಕಾರಣದಿಂದ ಗಾಯವಾಗಿ ರಕ್ತ ಹೆಪ್ಪುಗಟ್ಟಿದಾಗ ಈ ಕಾಯಿಲೆ ಎದುರಾಗುತ್ತದೆ. ಈ ತೊಂದರೆ ಗಂಭೀರವಾಗಿದ್ದರೆ Superficial phlebitis ಎಂದು ಕರೆಯಲಾಗುತ್ತದೆ ಹಾಗೂ ಚಿಕ್ಕ ಗಾತ್ರದ ಹೆಪ್ಪುಗಟ್ಟಿದ ರಕ್ತ, ಸೋಂಕು, ಉರಿಯೂತವುಂಟುಮಾಡುವ ಔಷಧಿಗಳು ರಕ್ತನಾಳಕ್ಕೆ ಆಗಮಿಸಿದಾಗ ಅಥವಾ IV catheter ಎಂಬ ಉಪಕರಣದ ಅಳವಡಿಸುವಿಕೆಯಿಂದಲೂ ಈ ತೊಂದರೆ ಎದುರಾಗುತ್ತದೆ. ಕಾಯಿಲೆ ಇನ್ನೂ ಆಳವಾಗಿದ್ದರೆ ಈ ಕಾಯಿಲೆಯನ್ನು Deep phlebitis ಎಂದು ಕರೆಯಲಾಗುತ್ತದೆ. ಈ ಸ್ಥಿತಿ ಎದುರಾಗಲು ಕಾರಣಗಳು ಇಂತಿವೆ:

ಶಸ್ತ್ರಚಿಕಿತ್ಸೆ,, ಗಂಭೀರ ಗಾಯ ಅಥವಾ ಮೂಳೆಮುರಿತ ಮೊದಲಾದ ಕಾರಣದಿಂದ ನರದ ಆಳದಲ್ಲಿ ಆಗುವ ಗಾಯ. ಕೆಲವೊಂದು ಔಷಧಿಗಳ ಪರಿಣಾಮವಾಗಿ ದೇಹ ತಾಳಿಕೊಳ್ಳುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ರಕ್ತ ಹೆಪ್ಪುಗಟ್ಟುವುದು, ಮೂಳೆ ಮತ್ತು ಸ್ನಾಯುಗಳನ್ನು ಬೆಸೆಯುವ ಅಂಗಾಶದ ತೊಂದರೆ ಅಥವಾ ವಂಶಪಾರಂಪರ್ಯವಾಗಿ ಬರುವ ರಕ್ತ ಹೆಪ್ಪುಗಟ್ಟುವ ತೊಂದರೆ, ಜಡತ್ವದಿಂದಾಗಿ ರಕ್ತಪರಿಚಲನೆ ನಿಧಾನಗೊಂಡಿರುವುದು ಮೊದಲಾದವು ಕಾರಣವಾಗುತ್ತವೆ.

ಫ್ಲೆಬೈಟಿಸ್ ನ ಲಕ್ಷಣಗಳು:

ಸಾಮಾನ್ಯವಾಗಿ ಈ ಸ್ಥಿತಿ ಕೈ ಮತ್ತು ಕಾಲುಗಳಲ್ಲಿಯೇ ಹೆಚ್ಚಾಗಿಕಾಣಿಸಿಕೊಳ್ಳುತ್ತದೆ ಹಾಗೂ ಹೊರಲಕ್ಷಣಗಳು ಹೀಗಿರುತ್ತವೆ:
ಒಂದು ಭಾಗ ಊದಿಕೊಂಡಿರುವುದು
ಈ ಭಾಗದ ಚರ್ಮ ಕೆಂಪಗಾಗಿರುವುದು
ಈ ಭಾಗದ ಚರ್ಮ ಅತಿ ತೆಳುವಾಗಿ ಸುಲಭವಾಗಿ ಹರಿಯುವಂತಾಗುವುದು
ಈ ಭಾಗದ ಚರ್ಮ ಉಳಿದ ಭಾಗಕ್ಕಿಂತ ಹೆಚ್ಚು ಬೆಚ್ಚಗಿರುವುದು
ಕೈ ಮತ್ತು ಕಾಲುಗಳಲ್ಲಿ ಸ್ಪಷ್ಟವಾದ ಕೆಂಪು ಗೀರುಗಳು ಮೂಡಿರುವುದು
ಉಬ್ಬಿರುವ ಭಾಗದ ಅಡಿಯ ನರ ಹಗ್ಗದಂತೆ ಒರಟೊರಟಾಗಿರುವುದನ್ನು ಸ್ಪರ್ಶದಿಂದ ಅರಿವು ಮಾಡಿಕೊಳ್ಳುವುದು
ಒಂದು ವೇಳೆ ಫ್ಲೆಬೈಟಿಸ್ ಗೆ ಡಿವಿಟಿ ಕಾರಣವಾಗಿದ್ದರೆ ಕಾಲಿನ ತೊಡೆಯ ಭಾಗ ಅಥವಾ ಮೀನಖಂಡದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಫ್ಲೆಬೈಟಿಸ್ ಎದುರಾಗುವ ಸಾಧ್ಯತೆ ಹೆಚ್ಚಿಸುವ ಸ್ಥಿತಿಗಳು:

*ಡಿವಿಟಿ ಹಿಂದೆ ಇದ್ದ ವೈದ್ಯಕೀಯ ಇತಿಹಾಸ
*ಗರ್ಭನಿರೋಧಕ ಗುಳಿಗೆಗಳು ಅಥವಾ ರಸದೂತ ಚಿಕಿತ್ಸೆ
*ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಇರುವ ತೊಂದರೆಗಳು
*ಗರ್ಭಾವಸ್ಥೆ
*ಸ್ಥೂಲಕಾಯ
*ಧೂಮಪಾನ
*ಮದ್ಯಪಾನದ ದುರ್ಬಳಕೆ
*ಹೆಚ್ಚಿನ ಕಾಲ ಚಲನವಿಲ್ಲದಿರುವುದು
*ಅರವತ್ತು ವರ್ಷ ದಾಟಿದ ಬಳಿಕ ಹೆಚ್ಚು ಹೊತ್ತು ಕುಳಿತೇ ಇರುವುದು

ಫ್ಲೆಬೈಟಿಸ್ ಎದುರಾದ ಬಳಿಕ ಆವರಿಸುವ ಕ್ಲಿಷ್ತತೆಗಳು:

ಫ್ಲೆಬೈಟಿಸ್ ನಿಂದ ಪ್ರಾಣಾಪಾಯವಾಗುವಂತಹ ತೊಂದರೆ ಇಲ್ಲದಿದ್ದರೂ ಈ ಸ್ಥಿತಿ ಎದುರಾದ ಭಾಗದ ಸುತ್ತದ ಚರ್ಮ, ಚರ್ಮದಲ್ಲಿರುವ ಗಾಯ ಹಾಗೂ ಈ ಮೂಲಕ ಹಾದುಹೋಗುವ ರಕ್ತದಲ್ಲಿ ಸೋಂಕು ಎದುರಾಗಬಹುದು. ಡಿವಿಟಿಯಿಂದ ಎದುರಾಗುವ ಸಾಮಾನ್ಯವಾದ ತೊಂದರೆಗಳೆಂದರೆ ಈ ಸ್ಥಿತಿ ಪಲ್ಮೋನರಿ ಎಂಬೋಲಿಸಂಗೆ ತಲುಪುವುದು. ಪಲ್ಮೋನರಿ ಎಂಬೋಲಿಸಂ ಎದುರಾದಾಗ ಎದೆನೋವು, ಕೆಮ್ಮಿನಲ್ಲಿ ರಕ್ತಸ್ರಾವ, ವಿವರಿಸಲು ಸಾಧ್ಯವಾಗದಂತಹ ಉಸಿರೆಳೆದುಕೊಳ್ಳಲು ಕಷ್ಟವಾಗುವಿಕೆ, ಉಸಿರಾಟದ ಗತಿ ಏರುವುದು, ಹೃದಯ ಬಡಿತದ ಗತಿ ಏರುವುದು ಹಾಗೂ ತಲೆಸುತ್ತು ಬರುವುದು ಮೊದಲಾದವು ಕಾಣಿಸಿಕೊಳ್ಳುತ್ತವೆ.

ಫ್ಲೆಬೈಟಿಸ್ ಪತ್ತೆಹಚ್ಚುವಿಕೆ:

ಈ ರೋಗದ ಲಕ್ಷಣಗಳನ್ನು ದಾಖಲಿಸಿ ಕೆಲವು ಪರೀಕ್ಷೆಗಳನ್ನು ನಡೆಸುವ ಮೂಲಕ ವೈದ್ಯರು ರೋಗವನ್ನು ಪತ್ತೆಹಚ್ಚುತ್ತಾರೆ. ಒಂದು ವೇಳೆ ಫ್ಲೆಬೈಟಿಸ್ ಗೆ ಹೆಪ್ಪುಗಟ್ಟಿದ ರಕ್ತ ಕಾರಣವಾಗಿದ್ದರೆ ರೋಗಿಯ ಬಾಹ್ಯ ಲಕ್ಷಣಗಳನ್ನು ಪರಿಶೀಲಿಸಿದ ಬಳಿಕ ವೈದ್ಯರು ಇನ್ನೂ ಕೆಲವು ಪರೀಕ್ಷೆಗಳನ್ನು ನಡೆಸುತ್ತಾರೆ. ಬಳಿಕ ಬಾಧಿತವಾದ ಭಾಗದ ಅಲ್ಟ್ರಾ ಸೌಂಡ್ ಪರೀಕ್ಷೆಯ ಮೂಲಕ, ಡಿ-ಡೈಮರ್ ಮಟ್ಟವನ್ನು ಅಳೆಯಲಾಗುತ್ತದೆ. ಈ ಮಟ್ಟದಲ್ಲಿ ಈಗಾಗಲೇ ಹೆಪ್ಪುಗಟ್ಟಿದ್ದ ರಕ್ತವನ್ನು ಕರಗಿಸಲು ಕೆಲವು ಔಷಧಿಗಳನ್ನು ರಕ್ತದ ಮೂಲಕ ಹಾಯಿಸಿದ ಬಳಿಕ ಎಷ್ಟು ಮಟ್ಟದಲ್ಲಿ ಕರಗಿದೆ ಎಂದು ಅಳೆಯಲಾಗುತ್ತದೆ. ಒಂದು ವೇಳೆ ಅಲ್ಟ್ರಾ ಸೌಂಡ್ ಸರಿಯಾದ ಫಲಿತಾಂಶವನ್ನು ಒದಗಿಸದೇ ಇದ್ದಲ್ಲಿ ವೈದ್ಯರು ವೆನೋಗ್ರಾಫಿ, ಎಂ ಆರ್ ಐ ಸ್ಕ್ಯಾನ್ ಅಥವಾ ಸಿಟಿ ಸ್ಕ್ಯಾನ್ ಗಳನ್ನೂ ಹೆಪ್ಪುಗಟ್ಟಿದ ರಕ್ತದ ಪತ್ತೆಹಚ್ಚಲು ಬಳಸಬಹುದು. ಹೆಪ್ಪುಗಟ್ಟಿದ ರಕ್ತದ ಇರುವಿಕೆ ಮತ್ತು ಸ್ಥಾನ ಗೊತ್ತಾದ ಬಳಿಕ ವೈದ್ಯರು ರಕ್ತದ ಮಾದರಿಯನ್ನು ಸಂಗ್ರಹಿಸಿ ಕೆಲವು ಪರೀಕ್ಷೆಗಳ ಮೂಲಕ ಈ ತೊಂದರೆಯ ಮೂಲವನ್ನು ಕಂಡುಕೊಳ್ಳುತ್ತಾರೆ.

ಫ್ಲೆಬೈಟಿಸ್ ಗೆ ಚಿಕಿತ್ಸೆ:

ಸುಪರ್ ಫಿಶಿಯಲ್ ಫ್ಲೆಬೈಟಿಸ್ ಗೆ ಸರಳ ಚಿಕಿತ್ಸೆಗಳಾಗಿ ಹಬೆಯ ಒತ್ತಡ, IV catheter ಉಪಕರಣವನ್ನು ನಿವಾರಿಸುವುದು, ಸೋಂಕು ಇರುವ ಅನುಮಾನವಿದ್ದರೆ ಪ್ರತಿಜೀವಕ ಔಷಧಿಯನ್ನು ಸೇವಿಸಲು ಸಹಲೆ ಮಾಡಲಾಗುತ್ತದೆ. ಡಿವಿಟಿ ಸ್ಥಿತಿ ಎದುರಾಗಿದ್ದರೆ ರಕ್ತ ಹೆಪ್ಪುಗಟ್ಟಿರುವುದನ್ನು ತೆಳುವಾಗಿಸುವ ಔಷಧಿಗಳನ್ನು ಸೇವಿಸಬೇಕಾಗಿ ಬರುತ್ತದೆ. ಒಂದು ವೇಳೆ ಡಿವಿಟಿ ಯಿಂದ ಇನ್ನೂ ಹೆಚ್ಚಿನ ಸಮಸ್ಯೆಗಳು ಕಂಡುಬಂದಿದ್ದಲ್ಲಿ ಥಾಂಬೆಕ್ಟಮಿ (thrombectomy) ಎಂಬ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಈ ಚಿಕಿತ್ಸೆಯಲ್ಲಿ ಹೆಪ್ಪುಗಟ್ಟಿದ ರಕ್ತದ ಸ್ಥಾನವನ್ನು ನಿಖರವಾಗಿ ಪತ್ತೆಹಚ್ಚಿ ಈ ಭಾಗದ ಮುಖ್ಯ ನರದೊಳಗೆ ಸೂಕ್ಷ್ಮ ತಂತಿ ಮತ್ತು ಹೆಪ್ಪುಗಟ್ಟಿದ ರಕ್ತವನ್ನು ಸಂಗ್ರಹಿಸುವ ಉಪಕರಣವನ್ನು ತೂರಿಸಿ ಹೆಪ್ಪುಗಟ್ಟಿದ ರಕ್ತವನ್ನು ನಿವಾರಿಸಲಾಗುತ್ತದೆ. ಸಾಧ್ಯವಾಗದಿದ್ದರೆ ಈ ಭಾಗಕ್ಕೆ ನೇರವಾಗಿ ಹೆಪ್ಪುಗಟ್ಟಿದ್ದ ರಕ್ತ ಕರಗಿಸುವ ಔಷಧಿಗಳನ್ನು ಪೂರೈಸಿ ಸಮಸ್ಯೆ ಪರಿಹರಿಸಲಾಗುತ್ತದೆ.

ಒಂದು ವೇಳೆ ರೋಗಿಯ ಡಿವಿಟಿ ಪಲ್ಮೋನರಿ ಎಂಬಾಲಿಸಂ ತಲುಪುವ ಸಾಧ್ಯತೆ ಹೆಚ್ಚಿಸುವಷ್ಟಿ ಉಲ್ಬಣಗೊಂಡಿದ್ದರೆ ರಕ್ತನಾಳದಲ್ಲಿ ಸೋಸುಕವೊಂದನ್ನು ಅಳವಡಿಸಲು ಚಿಂತನೆ ಮಾಡಲಾಗುತ್ತದೆ. ಈ ಸೋಸುಕಗಳನ್ನು ಅಗತ್ಯಬಿದ್ದರೆ ನಿವಾರಿಸಬಹುದಾಗಿದ್ದರೂ ರಕ್ತದಲ್ಲಿ ಹೆಪ್ಪುಗಟ್ಟಿಸುವ ಸಾಧ್ಯತೆಯನ್ನೇನೂ ಇದು ಕಡಿಮೆ ಮಾಡುವುದಿಲ್ಲ, ಆದರೆ ಹೀಗೆ ಉತ್ಪತ್ತಿಯಾದ ಹೆಪ್ಪುಗಟ್ಟಿದ ರಕ್ತಶ್ವಾಸಕೋಶಕ್ಕೆ ತಲುಪದಂತೆ ಮಾತ್ರ ಈ ಸೋಸುಕಗಳು ತಡೆಯುತ್ತವೆ. ಈ ಸೋಸುಕಗಳು ಪ್ರಾರಂಭದಲ್ಲಿ ಚೆನ್ನಾಗಿ ಕಾರ್ಯ ನಿರ್ವಹಿಸಿದರೂ ಕಾಲಕ್ರಮೇಣ ತನ್ನಲ್ಲಿ ಸಂಗ್ರಹಿಸಿಟ್ಟುಕೊಂಡಿರುವ ಹೆಪ್ಪುಗಟ್ಟಿದ ರಕ್ತಕಣಗಳಿಂದಾಗಿ ಸೋಂಕು, ರಕ್ತನಾಳಗಳ ಮೇಲೆ ಹೆಚ್ಚಿನ ಒತ್ತಡ ಹೇರಿ ಪ್ರಾಣಾಪಾಯದ ಸಾಧ್ಯತೆ ಹೆಚ್ಚಿಸುವುದು ಹಾಗೂ ಸೋಸುಕ ಇರುವ ರಕ್ತನಾಳದ ಭಾಗವನ್ನು ಅಪಾರವಾಗಿ ಹಿಗ್ಗಿಸುವುದು ಮೊದಲಾದ ತೊಂದರೆಗಳಿಗೆ ಕಾರಣವಾಗಬಹುದು.

English summary

Phlebitis: Causes, Symptoms, Diagnosis & Treatment

Phlebitis is caused either by an injury or irritation in the lining of a blood vessel. If the inflammation is caused due to a blood clot, it's called thrombophlebitis and if the blood clot is deep inside the vein, it's called deep vein thrombosis (DVT).There are two types of phlebitis - superficial phlebitis and deep phlebitis.
Story first published: Saturday, July 13, 2019, 12:47 [IST]
X
Desktop Bottom Promotion