For Quick Alerts
ALLOW NOTIFICATIONS  
For Daily Alerts

ಕೀಟನಾಶಗಳಿಂದಾಗಿ ಖಿನ್ನತೆ ಸಮಸ್ಯೆ ಬರಬಹುದು!

|

ಬೆಳೆಗಳಿಗೆ ಹಾನಿ ಉಂಟು ಮಾಡುಂತಹ ಕೀಟಗಳನ್ನು ಕೊಲ್ಲಲು ಬಳಸುವ ಕೀಟನಾಶಗಳು ತುಂಬಾ ಹಾನಿಕಾರ. ಇದಕ್ಕೆ ಒಗ್ಗಿಕೊಳ್ಳುವ ಮನುಷ್ಯರಿಗೆ ಇದು ಹಲವಾರು ರೀತಿಯ ಆರೋಗ್ಯ ಪರಿಣಾಮಗಳನ್ನು ಉಂಟು ಮಾಡುತ್ತದೆ. ಕೇರಳದಲ್ಲಿ ಗೋಡಂಬಿ ಬೆಳೆಯನ್ನು ರಕ್ಷಿಸಲು ಬಳಸಲಾಗುತ್ತಿದ್ದ ಎಂಡೋಸಲ್ಫಾನ್ ಕೀಟನಾಶಕವು ಅದನ್ನು ಬಳಸಿದ ಹಾಗೂ ಅದರ ಸುತ್ತಮುತ್ತಲಿನ ಊರಿನಲ್ಲಿ ಉಂಟು ಮಾಡಿರುವಂತಹ ಅನಾಹುತವನ್ನು ನಾವು ನೋಡಿದ್ದೇವೆ. ಇಂತಹ ಕೀಟನಾಶಗಳು ನಮ್ಮ ಆರೋಗ್ಯಕ್ಕೆ ಮಾರಕವಾಗಿದೆ. ಇದನ್ನು ಬಳಕೆ ಮಾಡುವ ಮೊದಲು ಸರಿಯಾದ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.

Pesticides

ಕೀಟನಾಶಗಳು ಎಂದರೇನು?

ಕೀಟಗಳೆಂದು ಪರಿಗಣಿಸಲ್ಪಟ್ಟಿರುವಂತಹ ಕೆಲವೊಂದು ಹಾನಿಕಾರಕ ಕೀಟಗಳು, ಪ್ರಾಣಿಗಳು ಮತ್ತು ಸಸ್ಯಗಳನ್ನು ಕೊಲ್ಲಲು, ದೂರ ಮಾಡಲು, ನಿಯಂತ್ರಿಸಲು ಬಳಸಲಾಗುವಂತಹ ವಸ್ತುವನ್ನು ಕೀಟನಾಶಕವೆಂದು ಕರೆಯಲಾಗುತ್ತದೆ. ಇದನ್ನು ಸಿಂಪಡಣೆ ಮಾಡುವ ಕಾರಣದಿಂದಾಗಿ ಕೀಟಗಳು ನಾಶವಾಗುವುದು ಮತ್ತು ಬೆಳೆಗಳ ಮಧ್ಯೆ ಬೆಳದಿರುವಂತಹ ಕಳೆಗಳು ದೂರವಾಗುವುದು. ಹಲವಾರು ರೀತಿಯ ಶಿಲೀಂಧ್ರ ಮತ್ತು ಸೂಕ್ಷ್ಮಾಣು ಜೀವಿಗಳನ್ನು ಇದು ನಾಶ ಮಾಡುವುದು ಮತ್ತು ಅದೇ ರೀತಿಯಾಗಿ ಇಲಿಗಳನ್ನು ಇದು ನಿಯಂತ್ರಣದಲ್ಲಿ ಇಡುತ್ತದೆ.

ಕೀಟನಾಶಕವು ವಿಷಕಾರಿಯಾಗಿದ್ದು, ಇದನ್ನು ಸರಿಯಾಗಿ ಬಳಕೆ ಮಾಡದೆ ಇದ್ದರೆ ಅಥವಾ ನಾಶ ಮಾಡದಿದ್ದರೆ ಆಗ ಅದು ಮನುಷ್ಯರಿಗೆ ಪರಿಣಾಮ ಬೀರುವುದು. ಬೆಳೆಗಳಿಗೆ, ಸಸ್ಯಗಳಿಗೆ ಮತ್ತು ಧಾನ್ಯಗಳಿಗೆ ಕೀಟನಾಶ ಸಿಂಪಡಣೆ ಮಾಡುವಂತಹ ಕೃಷಿಕರು ಮತ್ತು ಕೃಷಿ ಕಾರ್ಮಿಕರು ಯಾವಾಗಲೂ ಕೀಟನಾಶಕಕ್ಕೆ ಒಗ್ಗಿಕೊಳ್ಳುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ಮನೆಗಳು ಹಾಗೂ ಪ್ಯಾಕ್ಟರಿಗಳಿಗೆ ಕೀಟನಾಶಕ ಸಿಂಪಡಣೆ ಮಾಡುವಂತಹ ಜನರು ಕೂಡ ಇದರ ಅಪಾಯಕ್ಕೆ ಒಳಗಾಗುವರು. ಕೀಟನಾಶಗಳನ್ನು ಪಾರ್ಕ್, ಆಡುವ ಮೈದಾನ ಮತ್ತು ಇನ್ನಿತರ ಸ್ಥಳಗಳಲ್ಲಿ ಸಿಂಪಡಣೆ ಮಾಡಿದ ವೇಳೆ ಕೂಡ ಜನರಿಗೆ ಇದರ ಪರಿಣಾಮವಾಗುವುದು. ಹೆಚ್ಚಿನವರು ಇದನ್ನು ತೋಟದ ಉಪಯೋಗಕ್ಕೆ ಎಂದು ಖರೀದಿ ಮಾಡುವರು. ಆದರೆ ತಾವು ಬೆಳೆಯುವ ಬೆಳಗಳಿಗೆ ಇದನ್ನು ಬಳಸಿಕೊಂಡು ಅಪಾಯವನ್ನು ಆಹ್ವಾನಿಸುವರು.

ಕೀಟನಾಶಗಳು ಸಾಮಾನ್ಯವಾಗಿ ಮಲೇರಿಯಾ, ಡೆಂಗ್ಯೂ ಮತ್ತು ಇತರ ಕೆಲವೊಂದು ಮಾರಕ ಕಾಯಿಲೆಗಳನ್ನು ನಿವಾರಣೆ ಮಾಡಲು ನೆರವಾಗುವುದು. ಸೊಳ್ಳೆಗಳನ್ನು ನಾಶ ಮಾಡಲು ಇಂತಹ ಕೀಟನಾಶಗಳು ಉಪಯುಕ್ತವಾಗಿರುವುದು. ಆದರೆ ಇದನ್ನು ದೀರ್ಘಕಾಲದ ತನಕ ಬಳಕೆ ಮಾಡುವ ಕಾರಣದಿಂಧಾಗಿ ಇದು ಸಂತಾನೋತ್ಪತ್ತಿ ವ್ಯವಸ್ಥೆ, ನರ ಸಮಸ್ಯೆ ಮತ್ತು ಕ್ಯಾನ್ಸರ್ ಗೂ ಕಾರಣವಾಗಬಹುದು.
ಕೀಟನಾಶಕ್ಕೆ ಒಗ್ಗಿಕೊಂಡರೆ ಆಗ ನರವ್ಯವಸ್ಥೆಯ ಪ್ರದರ್ಶನವು ತುಂಬಾ ಕುಗ್ಗುವುದು ಮತ್ತು ನರ ವ್ಯವಸ್ಥೆಯು ಅಸಾಮಾನ್ಯವಾಗಿರುವುದು. ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೀಟನಾಶಕ್ಕಕೆ ಒಗ್ಗಿಕೊಳ್ಳುವುದು ಕೂಡ ನರಗಳಿಗೆ ಹಾನಿ ಉಂಟು ಮಾಡುವುದು.

ಇಂಟರ್ ನ್ಯಾಶನಲ್ ಜರ್ನಲ್ ಆಫ್ ಹೈಜಿನಿ ಆಂಡ್ ಎನ್ವಿರಾರ್ನಮೆಂಟಲ್ ಹೆಲ್ತ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಅತಿಯಾಗಿ ಕೀಟನಾಶಕ ಬಳಸುವಂತಹ ಕೃಷಿ ಪ್ರದೇಶಗಳಲ್ಲಿ ವಾಸಿಸುವಂತಹ 13-19ರ ಹರೆಯದ ಮಕ್ಕಳಲ್ಲಿ ಅತಿಯಾಗಿ ಮೆದುಳಿನ ಸಮಸ್ಯೆಯು ಕಾಣಿಸಿಕೊಳ್ಳುವುದು ಎಂದು ವರದಿಯು ಹೇಳಿದೆ. ಮೆದುಳಿನ ಮೇಲೆ ಕೀಟನಾಶಕದ ಪರಿಣಾಮಗಳು

1.ಖಿನ್ನತೆ ಉಂಟು ಮಾಡುವುದು

ಹಲವಾರು ಅಧ್ಯಯನಗಳಿಂದ ಕೀಟನಾಶಗಳಿಗೆ ಒಗ್ಗಿಕೊಳ್ಳುವುದರಿಂದ ಖಿನ್ನತೆ ಉಂಟಾಗುತ್ತದೆ ಎಂದು ತಿಳಿದುಬಂದಿದೆ. ಫ್ರಾನ್ಸ್ ನಲ್ಲಿ 1998-2000ದ ತನಕ ಸುಮಾರು 567 ಮಂದಿ ಕೃಷಿಕರನ್ನು ಈ ಅಧ್ಯಯನಕ್ಕೆ ಒಳಪಡಿಸಿದ ವೇಳೆ ಅವರಲ್ಲಿ ಖಿನ್ನತೆಯ ಸಮಸ್ಯೆಯು ಕಾಣಿಸಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2000 ಮಂದಿಯಲ್ಲಿ ಖಿನ್ನತೆಯು ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡದೆ ಇರಲು ಪ್ರಮುಖ ಕಾರಣವಾಗಿದೆ. ಇದು ಕೊನೆಗೆ ನರದ ಸಮಸ್ಯೆಯನ್ನು ಉಂಟು ಮಾಡುತ್ತದೆ.

ವಿವಿಧ ರೀತಿಯ ಕೀಟನಾಶಗಳನ್ನು ಬಳಸುತ್ತಿದ್ದ ಸುಮಾರು 21000 ಕೀಟನಾಶಕ ಬಳಕೆದಾರರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಯಿತು. ಮಾನಸಿಕ ಅನಾರೋಗ್ಯ ಮತ್ತು ಖಿನ್ನತೆಗೆ ಕೀಟನಾಶಕದ ವಿಷವು ಪ್ರಮುಖ ಕಾರಣವಾಗಿದೆ ಎಂದು ಇಲ್ಲಿ ಹೇಳಲಾಗಿದೆ.

2.ಸಣ್ಣ ವಯಸ್ಸಿನವರ ಮೆದುಳಿನ ಮೇಲೆ ಪರಿಣಾಮ

ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸ್ ನಲ್ಲಿ ಪ್ರಕಟಗೊಂಡಿರುವಂತಹ ವರದಿಯ ಪ್ರಕಾರ ಕ್ಲೋರ್ಪಿರಿಫೋಸ್ ಎನ್ನುವ ಬೆಳೆಗಳು, ಕಟ್ಟಡಗಳು ಮತ್ತು ಪ್ರಾಣಿಗಳು ಮತ್ತು ಕೀಟಗಳ ಮೇಲೆ ಬಳಸಲ್ಪಡುವಂತಹ ಕೀಟನಾಶದಿಂದಗಿ ಸುಮಾರು 20 ಮಕ್ಕಳ ಸೆರೆಬ್ರಲ್ ಕಾರ್ಟೆಕ್ಸ್ ತಾಯಿಯ ಭ್ರಣದಲ್ಲಿ ಅಗತ್ಯಕ್ಕಿಂತ ಹೆಚ್ಚು ಬೆಳದಿದೆ ಎಂದು ಹೇಳಿದೆ. ಇನ್ನೊಂದು ವರದಿಯ ಪ್ರಕಾರ ಈ ಕೀಟನಾಶಕಕ್ಕೆ ಒಗ್ಗಿಕೊಂಡಿರುವಂತಹ ಮಕ್ಕಳು ಹೆಚ್ಚು ಮಾನಸಿಕ ಸಮಸ್ಯೆ, ಸ್ವಖಲೀನತೆ, ಏಕಾಗ್ರತೆ ಕೊರತೆ, ಸೈಕೋಮೀಟರ್ ವಿಳಂಬ ಮತ್ತು ಇತರ ಕೆಲವೊಂದು ನರ ಸಮಸ್ಯೆಗೆ ಒಳಗಾಗುವರು ಎಂದು ಹೇಳಲಾಗಿದೆ.

3.ಸಂವೇದನಾ ಮತ್ತು ಅಪಸಾಮಾನ್ಯ ಕ್ರಿಯೆಗೆ ಕಾರಣವಾಗುವುದು

ವಿವಿಧ ರೀತಿಯ ಕೀಟನಾಶಗಳಿಗೆ ಒಗ್ಗಿಕೊಳ್ಳುವ ಕೃಷಿಕರು ಹೆಚ್ಚಾಗಿ ಸಂವೇದನಾಶೀಲತೆ ಕೊರತೆ ಮತ್ತು ಬಾಹ್ಯ ನರರೋಗದ ಹಲವಾರು ಸಮಸ್ಯೆಗಳಿಗೆ ತುತ್ತಾಗುವರು ಎಂದು ಹೇಳಿದೆ.

4.ಪರ್ಕಿಸನ್ ಕಾಯಿಲೆಗೆ ಕಾರಣ

ಕೀಟನಾಶಕಗಳಿಗೆ ಒಗ್ಗಿಕೊಳ್ಳುವ ಕಾರಣದಿಂದಾಗಿ ಪರ್ಕಿಸನ್ ಕಾಯಿಲೆಯ ಸಮಸ್ಯೆಯು ಹೆಚ್ಚಾಗಬಹುದು. ಪರ್ಕಿಸನ್ ಕಾಯಿಲೆ ಅಪಾಯ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮಾಡುವಂತಹ ಮತ್ತು ಸ್ಥಳೀಯ ನೀರಿನ ಮೂಲಗಳಿಂದ ನೀರನ್ನು ಸೇವಿಸುವವರಿಗೆ ಈ ರೋಗದ ಸಂಬಂಧವಿದೆ ಎಂದು ಅಧ್ಯಯನಗಳು ಹೇಳಿವೆ.

5.ದೇಹದ ಬೇರೆ ಭಾಗಗಳ ಮೇಲೆ ಕೂಡ ಪರಿಣಾಮ

ಮೆದುಳಿಗೆ ಹಾನಿ ಮಾಡುವುದು ಮಾತ್ರವಲ್ಲದೆ ಇದು ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರಬಹುದು. ಇದರಿಂದ ಶ್ವಾಸಕೋಶದ ಸಮಸ್ಯೆ, ಯಕೃತ್ ಗೆ ಹಾನಿ, ಹುಟ್ಟು ವೈಕಲ್ಯ, ಪ್ರತಿರೋಧಕ ವ್ಯವಸ್ಥೆ ಕುಂದುವುರು ಮತ್ತು ಇತರ ಕೆಲವೊಂದು ವಿಷಕಾರಿ ಸಂಬಂಧಿಸಿದ ಅಲರ್ಜಿಗಳು, ಚರ್ಮ ಮತ್ತು ಕಣ್ಣಿನ ಕಿರಿಕಿರಿ, ವಾಂತಿ, ತಲೆನೋವು, ವಾಕರಿಕೆ ಮತ್ತು ನಿಶ್ಯಕ್ತಿಯು ಬರಬಹುದು.

ಕೀಟನಾಶಗಳನ್ನು ತಡೆಯಲು ಕೆಲವೊಂದು ಸಲಹೆಗಳು

•ಸಾವಯವ ಆಹಾರ ಮತ್ತು ತರಕಾರಿಗಳನ್ನು ಖರೀದಿಸಿ
•ತಿನ್ನುವ ಮೊದಲು ಸರಿಯಾಗಿ ತರಕಾರಿ ಮತ್ತು ಹಣ್ಣುಗಳನ್ನು ತೊಳೆಯಿರಿ.
•ಸಾಧ್ಯವಾದರೆ ನಿಮ್ಮದೇ ತೋಟದಲ್ಲಿ ತರಕಾರಿ ಬೆಳೆಯಿರಿ.
•ಆದಷ್ಟು ವಾಣಿಜ್ಯ ಕೀಟನಾಶಕ ಬಳಕೆ ಮಾಡಬೇಡಿ.
•ಮನೆಯ ಒಳಗೆ ಪ್ರವೇಶಿಸುವ ಮೊದಲು ನೀವು ಸರಿಯಾಗಿ ಕೈಕಾಲುಗಳನ್ನು ತೊಳೆದುಕೊಂಡರೆ ಆಗ ಕೀಟನಾಶಕ ಮನೆಯ ಒಳಗೆ ಹೋಗುವುದು ತಪ್ಪುವುದು.

ಕೀಟನಾಶಕಕ್ಕೆ ಪರ್ಯಾಯಗಳು

ಕೀಟನಾಶಕಗಳು ಯಾವಾಗಲೂ ಪರಿಸರ ಮತ್ತು ಮನುಷ್ಯರ ಆರೋಗ್ಯಕ್ಕೆ ತುಂಬಾ ಮಾರಕ. ಇದು ವಿಷಕಾರಿ ಆಗಿರುವ ಕಾರಣದಿಂದಾಗಿ ಕಳೆಗಳಿಗೆ ಪರಿಣಾಮಕಾರಿ. ಕೆಲವೊಂದು ಹಾನಿಕಾರಕವಲ್ಲದ ಮತ್ತು ಕೀಟಗಳನ್ನು ನಿಯಂತ್ರಣ ಮಾಡುವಂತಹ ಇತರ ಕೆಲವೊಂದು ಕೀಟನಾಶಕಗಳು ಕೂಡ ಇದೆ. ಇದಕ್ಕೆ ಪರ್ಯಾಯವೆಂದರೆ.

•ಬೆಳೆ ಆವರ್ತನ
•ವೈವಿಧ್ಯಮಯ ಬೆಳೆ
•ಜೈವಿಕ ನಿಘಟನೀಯ ಕೀಟನಾಶಕ
•ಸಸ್ಯ ಬಲೆ ವಿಧಾನ

English summary

Pesticides Cause Depression!

Pesticides are poisonous and can cause severe damage to plants and animals. When humans are exposed to it, they develop many health conditions like depression, neurological diseases, Parkinson disease, liver damage, lung cancer, nausea, skin irritation, and many more. Go for alternatives of pesticides and take necessary prevention.
Story first published: Friday, July 19, 2019, 15:51 [IST]
X
Desktop Bottom Promotion