For Quick Alerts
ALLOW NOTIFICATIONS  
For Daily Alerts

ಪುರುಷರ ಟೆಸ್ಟೋಸ್ಟೆರಾನ್- ವೀರ್ಯದ ಗುಣಮಟ್ಟ ಹೆಚ್ಚಿಸುವ ಶಿಶ್ನ ಸ್ನೇಹಿಯಾಗಿರುವ ಆಹಾರಗಳು

|

ನಾವು ಯಾವಾಗಲೂ ಹೃದಯ ಮತ್ತು ಹೊಟ್ಟೆಯಲ್ಲಿ ಗಮನದಲ್ಲಿಟ್ಟುಕೊಂಡು ತಿನ್ನುತ್ತೇವೆ. ನಮ್ಮ ದೇಹದ ಕೆಲವೊಂದು ಅಂಗಾಂಗಗಳ ಮೇಲೆ ಆಹಾರವು ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯಾ? ಮೊದಲ ವಿಚಾರವೆಂದರೆ ನಾವು ಏನೇ ತಿಂದರೂ ಅದರ ಸಮಗ್ರ ಲಾಭವು ನಮಗೆ ಲಭ್ಯವಾಗುವುದು. ದೇಹದ ಯಾವ ಭಾಗಕ್ಕೆ ಬೇಕೋ ಅದು ಅಲ್ಲಿಗೆ ಹೋಗಿ ತಲುಪುವುದು. ಇಲ್ಲಿ ಹೇಳಬೇಕಾಗಿರುವಂತಹ ವಿಚಾರವೆಂದರೆ ಸೇಬು ಮತ್ತು ಕ್ಯಾರೆಟ್ ವೃಷಣ ಹಾಗೂ ಶಿಶ್ನದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣುಗಳನ್ನು ನೀವು ಹೆಚ್ಚಿಗೆ ತಿನ್ನಲು ಬಯಸುವುದಿಲ್ಲವೇ? ಇಲ್ಲಿ ನಾವು ಅಂತಹ ಕೆಲವೊಂದು ಆಹಾರದ ಪಟ್ಟಿಯನ್ನು ನೀಡಿದ್ದೇವೆ.

ಶಿಶ್ನಗಳಿಗೆ ವಿಶೇಷವಾಗಿ ಕಾಳಜಿ ವಹಿಸಿ ನೀವು ಯಾವುದೇ ಆಹಾರವನ್ನು ತಿನ್ನುವ ಬದಲು ದೇಹಕ್ಕೆ ಸಂಪೂರ್ಣವಾಗಿ ಪೋಷಕಾಂಶಗಳನ್ನು ನೀಡುವಂತಹ ಆಹಾರ ಸೇವನೆ ಮಾಡಿ. ಇದರಿಂದ ರಕ್ತವು ಪೋಷಕಾಂಶ, ವಿಟಮಿನ್ ಗಳು ಮತ್ತು ಖನಿಜಾಂಶಗಳನ್ನು ಜನನೇಂದ್ರೀಯಕ್ಕೆ ಸಾಗಿಸಿ, ಅದು ಸರಿಯಾಗಿ ಕೆಲಸ ಮಾಡಲು ನೆರವಾಗುವುದು.(ಹದಿಹರೆಯದ ಪುರುರಲ್ಲಿ ನಿಮಿರು ದೌರ್ಬಲ್ಯವು ಹೆಚ್ಚಾಗುತ್ತಿದೆ ಮತ್ತು ಪುರುಷರಲ್ಲಿ ಜೀವಮಾನದಲ್ಲಿ 9ರಲ್ಲಿ ಒಬ್ಬರು ಪ್ರೊಸ್ಟೇಟ್ ಕ್ಯಾನ್ಸರ್ ಗೆ ತುತ್ತಾಗುವರು). ಉತ್ತಮವಾದ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಆದರಿಂದ ಹೃದಯದ ಕಾಯಿಲೆ, ಹಾರ್ಮೋನು ಅಸಮತೋಲನ, ಕೊಬ್ಬು ಕರಗುವುದು ಮತ್ತು ಇತರ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಪ್ರೊಸ್ಟೇಟ್ ಕ್ಯಾನ್ಸರ್, ಇಡಿ, ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗುವುದು ಮತ್ತು ಫಲವತ್ತತೆ ಕಡಿಮೆಯಾಗುವುದಕ್ಕೆ ಈ ಆಹಾರಗಳು ನೆರವಾಗುವುದು.

ಪಾಲಕ್ ನಿಮ್ಮ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿಸುವುದು

ಪಾಲಕ್ ನಿಮ್ಮ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿಸುವುದು

ಪಾಲಕ್ ಸೊಪ್ಪಿನಲ್ಲಿ ಉತ್ತಮ ಗುಣಮಟ್ಟದ ಪಾಲಟ್ ಇದ್ದು, ಇದು ರಕ್ತ ಸಂಚಾರವನ್ನು ಉತ್ತಮಪಡಿಸುವುದು. ಪುರುಷರ ಲೈಂಗಿಕ ಕ್ರಿಯೆಯಲ್ಲಿ ಫಾಲಿಕ್ ಆಮ್ಲವು ಪ್ರಮುಖ ಪಾತ್ರ ವಹಿಸುವುದು ಮತ್ತು ಫಾಲಿಕ್ ಆಮ್ಲದಲ್ಲಿ ಕೊರತೆ ಕಂಡುಬಂದರೆ ಅದರಿಂದ ನಿಮಿರು ದೌರ್ಬಲ್ಯದಂತಹ ಸಮಸ್ಯೆಯು ಕಾಣಿಸುವುದು. ಒಂದು ಕಪ್ ಬೇಯಿಸಿದ ಬಸಳೆಯಲ್ಲಿ ನಿಮ್ಮ ದೈನಂದಿನ ಅಗತ್ಯತೆಗೆ ಬೇಕಾಗಿರುವ ಶೇ. 66ರಷ್ಟು ಫಾಲಿಕ ಆಮ್ಲವನ್ನು ಹೊಂದಿದೆ. ಆಹಾರಗಳಲ್ಲಿ ಬಸಳೆಯು ಅತೀ ಹೆಚ್ಚು ಫಾಲಿಕ್ ಆಮ್ಲವನ್ನು ಹೊಂದಿರುವಂತಹ ಆಹಾರವಾಗಿದೆ. ಅದೇ ರೀತಿಯಾಗಿ ಬಸಳೆಯಲ್ಲಿ ಉನ್ನತ ಮಟ್ಟದ ಮೆಗ್ನಿಶಿಯಂ ಕೂಡ ಇದೆ. ಇದು ರಕ್ತ ಸಂಚಾರವನ್ನು ಸುಧಾರಣೆ ಮತ್ತು ಉತ್ತೇಜಿಸುವುದು. ಇದರಿಂದಾಗಿ ಟೆಸ್ಟೊಸ್ಟೆರಾನ್ ಮಟ್ಟವು ಹೆಚ್ಚಾಗುವುದು.

ದಿನನಿತ್ಯದ ಕಾಫಿಯು ಒಳ್ಳೆಯ ಸೆಕ್ಸ್ ಗೆ ನೆರವಾಗುವುದು

ದಿನನಿತ್ಯದ ಕಾಫಿಯು ಒಳ್ಳೆಯ ಸೆಕ್ಸ್ ಗೆ ನೆರವಾಗುವುದು

ನೀವು ದಿನನಿತ್ಯವು ಕಾಫಿ ಕುಡಿಯುವವರಾದರೆ ನಿಮಗೊಂದು ಶುಭ ಸುದ್ದಿಯಿದೆ. ಅಧ್ಯಯನಗಳ ಪ್ರಕಾರ ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಕುಡಿಯುವ ವ್ಯಕ್ತಿಗಳಲ್ಲಿ ನಿಮಿರು ದೌರ್ಬಲ್ಯ ಸಮಸ್ಯೆಯು ಕಡಿಮೆಯಾಗಿರುವುದು. ಕಾಫಿಯಲ್ಲಿ ಇರುವಂತಹ ಕೆಫಿನ್ ಅಂಶವೇ ಇದಕ್ಕೆ ಕಾರಣವೆಂದು ಹೇಳಲಾಗುತ್ತದೆ. ಕೆಫಿನ್ ರಕ್ತ ಸಂಚಾರವನ್ನು ಸುಧಾರಣೆ ಮಾಡುವುದು. ಇದರಿಂದ ಜನನೇಂದ್ರಿಯದ ಸ್ನಾಯುಗಳು ಮತ್ತು ನಾಳಗಳು ಆರಾಮವಾಗುವುದು. ಈ ಕಾರಣದಿಂದ ನಿಮಿರುವಿಕೆ ಬಲವಾಗುವುದು.

ಪ್ರೊಸ್ಟೇಟ್ ಕ್ಯಾನ್ಸರ್ ತಡೆಯಲು ಸೇಬಿನ ಸಿಪ್ಪೆ

ಪ್ರೊಸ್ಟೇಟ್ ಕ್ಯಾನ್ಸರ್ ತಡೆಯಲು ಸೇಬಿನ ಸಿಪ್ಪೆ

ಸೇಬಿನಲ್ಲಿ ಎಲ್ಲಾ ರೀತಿಯ ಆರೋಗ್ಯ ಲಾಭಗಳು ಇವೆ. ಆದರೆ ಇದರಿಂದ ಶಿಶ್ನದ ಆರೋಗ್ಯಕ್ಕೆ ಹೆಚ್ಚಿನ ಲಾಭವಾಗುವುದು ಎಂದು ತಿಳಿದಿಲ್ಲ. ಸೇಬಿನ ಸಿಪ್ಪೆಯಲ್ಲಿ ರ್ಸಾಲಿಕ್ ಆಮ್ಲವಿದೆ. ಈ ಅಂಶವು ಪ್ರೊಸ್ಟೇಟ್ ಕ್ಯಾನ್ಸರ್ ನ ಕೋಶಗಳು ಬೆಳೆಯದಂತೆ ತಡೆಯುವುದು ಎಂದು ಕೆಲವೊಂದು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ. ಆದರೂ ಪ್ರೊಸ್ಟೇಟ್ ಕ್ಯಾನ್ಸರ್ ಬಂದರೆ ಆಗ ನೀವು ವೈದ್ಯರಿಂದ ಸರಿಯಾದ ರೀತಿಯ ಚಿಕಿತ್ಸೆ ಪಡೆದುಕೊಳ್ಳುವುದು ಅತೀ ಅಗತ್ಯವಾಗಿರುವುದು.

ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ

ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ

ದ್ರಾಕ್ಷಿ, ಬೆರ್ರಿಗಳು ಮತ್ತು ಅರಶಿನವು ಒಂದೇ ರೀತಿಯ ಪರಿಣಾಮ ಉಂಟು ಮಾಡುವುದು. ಹೆಚ್ಚು ಹಣ್ಣುಗಳು ಹಾಗೂ ತರಕಾರಿ ಸೇವನೆ ಮಾಡುವಂತಹ ಪುರುಷರು ಬೇರೆ ಪುರುಷರಿಗಿಂತ ಹೆಚ್ಚಿಗೆ ಪ್ರೊಸ್ಟೇಟ್ ಕ್ಯಾನ್ಸರ್ ನ್ನು ನಿಭಾಯಿಸುವ ಶಕ್ತಿ ಹೊಂದಿರುವರು ಎಂದು ವರದಿಗಳು ಹೇಳಿವೆ.

ಶಿಶ್ನದ ಆರೋಗ್ಯಕ್ಕೆ ಸೇಬು

ಶಿಶ್ನದ ಆರೋಗ್ಯಕ್ಕೆ ಸೇಬು

ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಪ್ರೊಸ್ಟೇಟ್ ಕ್ಯಾನ್ಸರ್ ನ ಕೋಶಗಳು ಹಸಿವಿನಿಂದ ಬಳಲುವಂತೆ ಮಾಡುವುದು. ಹೆಚ್ಚು ಹಣ್ಣುಗಳು ಹಾಗೂ ತರಕಾರಿ ತಿನ್ನುವ ವ್ಯಕ್ತಿಯು ಪ್ರೊಸ್ಟೇಟ್ ಕ್ಯಾನ್ಸರ್ ನಿಂದ ಬದುಕುಳಿಯುವ ಸಾಧ್ಯತೆಯು ಹೆಚ್ಚಾಗಿರುವುದು. ಸಲಹೆ: ಕ್ಯಾನ್ಸರ್ ವಿರುದ್ಧ ಹೋರಾಡುವಂತಹ ಅಂಶವು ಸೇಬಿನ ಸಿಪ್ಪೆಯಲ್ಲಿ ಇರುವುದು. ಇದರಿಂದ ನೀವು ಸಿಪ್ಪೆ ತೆಗೆಯದೆ ಸೇಬನ್ನು ಸೇವಿಸಿ. ಸೇಬಿನ ಚಿಪ್ಸ್ ಮತ್ತು ಅದರ ಸಿಪ್ಪೆಯ ಚಹಾ ಮಾಡ ಬಹುದು.

ಅವಕಾಡೋದಿಂದ ಕಾಮಾಸಕ್ತಿ ಹೆಚ್ಚಿಸಿ

ಅವಕಾಡೋದಿಂದ ಕಾಮಾಸಕ್ತಿ ಹೆಚ್ಚಿಸಿ

ಕೆಲವೊಂದು ಸಲ ಅವಕಾಡೋವನ್ನು ವೃಷಣದ ಮರವೆಂದು ಕೂಡ ಕರೆಯುತ್ತಾರೆ. ಇದು ಯಾಕೆಂದರೆ ನಿಮಗೆ ಅಚ್ಚರಿಯಾಗ ಬಹುದು. ಅವಕಾಡೋದಲ್ಲಿ ಇರುವಂತಹ ಉನ್ನತ ಮಟ್ಟದ ಆರೋಗ್ಯಕರ ಕೊಬ್ಬು, ಪೊಟಾಶಿಯಂ ಮತ್ತು ವಿಟಮಿನ್ ಗಳು ನಿಮ್ಮ ಕಾಮಾಸಕ್ತಿ ಹೆಚ್ಚಿಸುವುದು. ಇದರಲ್ಲಿ ವಿಟಮಿನ್ ಇ ಮತ್ತು ಸತು ಕೂಡ ಇದೆ. ಇದೇ ಕಾರಣದಿಂದ ಇದು ಪುರುಷರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸುವುದು ಮತ್ತು ಫಲವತ್ತತೆ ಕೂಡ ಹೆಚ್ಚಾಗುವುದು. ಸತು ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚು ಮಾಡುವುದು. ಅದೇ ವಿಟಮಿನ್ ಇ ವೀರ್ಯದ ಗುಣಮಟ್ಟವನ್ನು ಉತ್ತಮಪಡಿಸುವುದು.

ಶಿಶ್ನದ ಆರೋಗ್ಯಕ್ಕೆ ಅವಕಾಡೋ

ಶಿಶ್ನದ ಆರೋಗ್ಯಕ್ಕೆ ಅವಕಾಡೋ

ಇದರಲ್ಲಿ ಇರುವಂತಹ ಸತು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುವುದು. ಇದರಲ್ಲಿ ಇರುವಂತಹ ವಿಟಮಿನ್ ಇ ವೀರ್ಯದ ಗುಣಮಟ್ಟ ವೃದ್ಧಿಸುವುದು.

ಮೆಣಸು ತಿಂದು ಲೈಂಗಿಕ ಶಕ್ತಿ ವೃದ್ಧಿಸಿ

ಮೆಣಸು ತಿಂದು ಲೈಂಗಿಕ ಶಕ್ತಿ ವೃದ್ಧಿಸಿ

ಹೆಚ್ಚು ಖಾರ ತಿನ್ನುವಂತಹ ವ್ಯಕ್ತಿಗಳಲ್ಲಿ ಸಾಮಾನ್ಯ ವ್ಯಕ್ತಿಗಳಿಗಿಂತ ಹೆಚ್ಚಿನ ಟೆಸ್ಟೋಸ್ಟೆರಾನ್ ಇರುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ಇದರ ಅರ್ಥವೇನು? ಖಾರದ ಆಹಾರವು ಟೆಸ್ಟೋಸ್ಟೆರಾನ್ ನೀಡುತ್ತದೆಯಾ? ಇದರಲ್ಲಿ ಇರುವಂತಹ ಕ್ಯಾಪ್ಸೈಸಿನ್ ಎನ್ನುವ ರಾಸಾಯನಿಕ ಅಂಶವು ಕಾಮಾಸಕ್ತಿಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ತುಂಬಾ ಖಾರವಾಗಿರುವಂತಹ ಮೆಣಸಿನಲ್ಲಿ ಕ್ಯಾಪ್ಸೈಸಿನ್ ಅಂಶವು ಅಧಿಕವಾಗಿದ್ದು, ಇದು ಎಂಡ್ರೊಪಿನ್ಸ್ ಎನ್ನುವ ಹಾರ್ಮೋನ್ ನ್ನು ಬಿಡುಗಡೆ ಮಾಡುವುದು.

ಕ್ಯಾರೆಟ್ ನಿಂದ ವೀರ್ಯವು ಆರೋಗ್ಯವಾಗಿರುವುದು

ಕ್ಯಾರೆಟ್ ನಿಂದ ವೀರ್ಯವು ಆರೋಗ್ಯವಾಗಿರುವುದು

ವೀರ್ಯದ ಗಣತಿಯನ್ನು ಸುಧಾರಿಸಲು ಬಯಸುತ್ತಿದ್ದೀರಾ? ಹೆಚ್ಚು ಕ್ಯಾರೆಟ್ ತಿನ್ನಿ ಎಂದು ವಿಜ್ಞಾನವು ಹೇಳುತ್ತದೆ. ಈ ಆಹಾರವು ನಿಮ್ಮ ವೀರ್ಯ ಗಣತಿ ಮತ್ತು ಚಲನಶೀಲತೆಯನ್ನು ಹೆಚ್ಚಿಸುವುದು ಎಂದು ಅಧ್ಯಯನಗಳು ಹೇಳಿವೆ. ಕ್ಯಾರೆಟ್ ನಲ್ಲಿ ಇರುವಂತಹ ಕ್ಯಾರೊಟನಾಯ್ಡ್ ಎನ್ನುವ ರಾಸಾಯನಿಕವು ಇದಕ್ಕೆ ಕಾರಣವಾಗಿದೆ. ಈ ರಾಸಾಯನಿಕವು ತರಕಾರಿಗೆ ಕೇಸರಿ ಬಣ್ಣ ನೀಡುವುದು.

ಟೊಮೆಟೋ

ಟೊಮೆಟೋ

ಒಂದೇ ಸಲಕ್ಕೆ ನಿಮಗೆ ಲಾಭಗಳು ಸಿಗಬೇಕೇ? ಹಾಗಾದರೆ ನೀವು ಆಹಾರದಲ್ಲಿ ಟೊಮೆಟೋ ಸೇವನೆ ಮಾಡಿ. ಟೊಮೆಟೋದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಟೊಮೆಟೋ ವನ್ನು ಹಲವಾರು ರೀತಿಯಿಂದ ನಾವು ಸೇವಿಸಬಹುದಾಗಿದೆ. ಲೈಕೊಪೆನೆ ಹೆಚ್ಚಾಗಿರುವಂತಹ ಟೊಮೆಟೋದಂತಹ ಆಹಾರಗಳು ಪ್ರೊಸ್ಟೇಟ್ ಕ್ಯಾನ್ಸರ್ ನ್ನು ತಡೆಯುವುದು. ಟೊಮೆಟೋವು ಪುರುಷರಲ್ಲಿನ ಫಲವತ್ತತೆ ಮತ್ತು ವೀರ್ಯದ ಗುಣಮಟ್ಟಕ್ಕೆ ತುಂಬಾ ಲಾಭಕಾರಿಯಾಗಿರುವುದು. ಟೊಮೆಟೋವು ಗಣನೀಯವಾಗಿ ವೀರ್ಯದ ಕ್ಷಮತೆ, ಚಲನಶೀಲತೆ ಮತ್ತು ರೂಪವಿಜ್ಞಾನವನ್ನು ಹೆಚ್ಚಿಸುವುದು.

English summary

Penis Friendly Foods to Boost Testosterone- Sperm Count

We often eat with our hearts and stomachs in mind, but how often do we consider how foods affect extremely specific body parts? First things first though: no matter what we eat, the benefits are holistic — it goes where our bodies need it.But, let’s say, if you know, that apples and carrots are good for your prostate and penis health, wouldn’t you be inclined to eat these foods more often?
X
Desktop Bottom Promotion