For Quick Alerts
ALLOW NOTIFICATIONS  
For Daily Alerts

ಮಿತವಾಗಿ ಪಪ್ಪಾಯ ತಿಂದ್ರೂ ಸಾಕು- ಮಧುಮೇಹ ನಿಯಂತ್ರಿಸಬಹುದು!

|

ಬೇಸಿಗೆಯ ಸಮಯದಲ್ಲಿ ನಿಸರ್ಗ ಒದಗಿಸುವ ಹಲವಾರು ಫಲಗಳು ಪೋಷಕಾಂಶಗಳಿಂದ ಕೂಡಿವೆ. ಹೆಚ್ಚಿನ ಬೇಸಿಗೆಯ ಹಣ್ಣುಗಳು ನೀರಿನಂಶ ಹೊಂದಿರುವ ಫಲಗಳಾಗಿದ್ದು ಸೆಖೆಯಿಂದ ದೇಹ ಕಳೆದುಕೊಂಡಿದ್ದ ನೀರಿನಂಶವನ್ನು ಮರುಪೂರೈಸುವಲ್ಲಿ ಅತ್ಯುತ್ತಮವಾಗಿವೆ. ಬೇಸಿಗೆಯ ಫಲಗಳಲ್ಲಿ ವಿವಿಧ ಬಗೆಯ ಪೋಷಕಾಂಶಗಳೂ ಇರುತ್ತವೆ. ಬೇಸಿಗೆಯ ಬಿರು ಸೆಖೆಯ ಸಮಯದಲ್ಲಿ ಈ ಹಣ್ಣುಗಳು ಕೇವಲ ಚೇತೋಹಾರಿಯಾಗಿ ಮಾತ್ರವಲ್ಲ, ಶಕ್ತಿದಾಯಕವಾಗಿದ್ದು ತಾಜಾತನವನ್ನೂ ನೀಡುತ್ತವೆ. ಬೇಸಿಗೆಯ ಹಣ್ಣುಗಳಲ್ಲಿ ಪ್ರಮುಖವಾದವು ಎಂದರೆ ಮಾವು, ಕಲ್ಲಂಗಡಿ ತರಬೂಜ, ಚಿಕ್ಕು ಮೊದಲಾದವು ಲಭ್ಯವಿದ್ದು ವಿವಿಧ ಆಯ್ಕೆಯನ್ನು ಒದಗಿಸುತ್ತವೆ.

ಮಧುಮೇಹಿಗಳು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯವಾಗಿದ್ದು ಹಲವಾರು ಆಹಾರಗಳನ್ನು ವರ್ಜಿಸಬೇಕಾಗುತ್ತದೆ. ಏಕೆಂದರೆ ಕೆಲವು ಆಹಾರಗಳ ಸೇವನೆಯ ಬಳಿಕ ಅವರ ದೇಹದಲ್ಲಿ ರಕ್ತದ ಸಕ್ಕರೆಯ ಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ ಹೆಚ್ಚಿನ ಸಿಹಿಯಾದ ಹಣ್ಣುಗಳು ಮಧುಮೇಹಿಗಳಿಗೆ ಸೂಕ್ತವಲ್ಲ. ಆದರೆ ಮಧುಮೇಹಿಗಳು ಆಯ್ದುಕೊಳ್ಳಬಹುದಾದ ಹಣ್ಣುಗಳೂ ಕೆಲವಿವೆ. ಬೇಸಿಗೆಯಲ್ಲಿ ಲಭ್ಯವಿರುವ ಹಣ್ಣುಗಳನ್ನು ಪರಿಗಣಿಸುವುದಾದರೆ ಪಪ್ಪಾಯಿ ಮಧುಮೇಹಿಗಳಿಗೆ ಅತಿ ಸೂಕ್ತವಾದ ಫಲವಾಗಿದ್ದು ಮಧುಮೇಹವನ್ನು ನಿಯಂತ್ರಿಸಲೂ ಸಹಕರಿಸುತ್ತದೆ.

Papaya for Diabetes

ಕೆಲವು ಸಮಯದಲ್ಲಿ ಮಧುಮೇಹಿಗಳಿಗೆ ತಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ತಿಸಿಕೊಳ್ಳುವುದು ಕಷ್ಟಕರವಾಗುತ್ತದೆ. ಈ ಸಮಯದಲ್ಲಿ ಪಪ್ಪಾಯಿಯ ಸೇವನೆಯಿಂದ ಮಧುಮೇಹದ ಲಕ್ಷಣಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಪಪ್ಪಾಯಿಯ ಆರೋಗ್ಯಕರ ಪ್ರಯೋಜನಗಳು ಇತರರಂತೆಯೇ ಮಧುಮೇಹಿಗಳಿಗೂ ಪ್ರಯೋಜನಕಾರಿಯಾಗಿದೆ.

ಪಪ್ಪಾಯಿಯಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿವೆ

ಪಪ್ಪಾಯಿಯಲ್ಲಿ ಲಭ್ಯವಿರುವ ವಿವಿಧ ಆಂಟಿ ಆಕ್ಶಿಡೆಂಟುಗಳು ಮಧುಮೇಹಿಗಳ ಆಯ್ಕೆಗೆ ಕಾರಣವಾಗಿವೆ. ಮಧುಮೇಹಿಗಳಿಗೆ ಇತರ ಕಾಯಿಲೆಗಳು ಆವರಿಸುವ ಸಾಧ್ಯತೆ ಹೆಚ್ಚೇ ಇದ್ದರೂ ಪಪ್ಪಾಯಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಈ ಕಾಯಿಲೆಗಳನ್ನು ನೈಸರ್ಗಿಕವಾಗಿ ಗುಣಪಡಿಲು ನೆರವಾಗುತ್ತವೆ.

Most Read: ಮಧುಮೇಹಿಗಳು ಮೊಟ್ಟೆ ತಿನ್ನಬಹುದೇ? ಮಧುಮೇಹಿಗಳಿಗೆ ಸೂಕ್ತವಾದ 7 ಆಹಾರಗಳು

ಪಪ್ಪಾಯಿಯಲ್ಲಿ ಕಡಿಮೆ ಕ್ಯಾಲೋರಿಗಳಿವೆ

ಸ್ಥೂಲಕಾಯ ಮಧುಮೇಹ ಆವರಿಸುವ ಸಾಧ್ಯತೆಯನ್ನು ಶೀಘ್ರವಾಗಿಸುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಸೇವಿಸಲು ಪಪ್ಪಾಯಿ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವ ಕಾರಣ ತೂಕ ಏರುವ ಚಿಂತೆಯಿಲ್ಲದೇ ಪಪ್ಪಾಯಿಯನ್ನು ಸೇವಿಸಬಹುದು.

ಪಪ್ಪಾಯಿಯಲ್ಲಿ ಉತ್ತಮ ಪ್ರಮಾಣದ ನಾರಿನಂಶವಿದೆ

ಮಧುಮೇಹಿಗಳ ಆಹಾರದಲ್ಲಿ ಸಾಕಷ್ಟು ನಾರಿನಂಶವಿರಬೇಕು. ಕರಗುವ ನಾರು ಮತ್ತು ಕರಗದ ನಾರು, ಇವೆರಡೂ ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟ ಸಮತೋಲನದಲ್ಲಿರಿಸಲು ನೆರವಾಗುತ್ತವೆ. ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಪಪ್ಪಾಯಿಯನ್ನೂ ಸೇರಿಸಿಕೊಳ್ಳುವ ಮೂಲಕ ಉತ್ತಮ ಪ್ರಮಾಣದ ನಾರಿನಂಶವನ್ನು ಪಡೆಯಬಹುದು. ಅಲ್ಲದೇ ನಾರಿನಂಶವಿರುವ ಆಹಾರದ ಸೇವನೆಯಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡುತ್ತದೆ ಮತ್ತು ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಅಷ್ಟೇ ಅಲ್ಲ, ಕರುಳುಗಳಲ್ಲಿ ಆಹಾರ ಚಲನೆ ಸುಲಭಗೊಳಿಸಿ ಕರುಳುಗಳ ಆರೋಗ್ಯ ವೃದ್ಧಿಸುತ್ತದೆ ಹಾಗೂ ಮಲಬದ್ಧತೆಯಾಗದಂತೆ ತಡೆಯುತ್ತದೆ.

Most Read: ಮಧುಮೇಹಿಗಳು ಬಾಳೆಹಣ್ಣು ಸೇವಿಸಬಹುದೇ? ಇದರಿಂದ ಏನಾದರೂ ತೊಂದರೆ ಇದೆಯೇ?

ಒಂದು ವೇಳೆ ನೀವು ಮಧುಮೇಹಿಯಾಗಿದ್ದರೆ ನಿಮ್ಮ ಎರಡು ಪ್ರಮುಖ ಊಟಗಳ ನಡುವಣ ಸಮಯದಲ್ಲಿ ಸೇವಿಸುವ ಲಘು ಆಹಾರದ ರೂಪದಲ್ಲಿ ಸೇವಿಸಲು ಪಪ್ಪಾಯಿ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ಈ ಸಮಯದಲ್ಲಿ ಸೂಕ್ತ ಪ್ರಮಾಣದಷ್ಟು ಮಾತ್ರವೇ ಪಪ್ಪಾಯಿಯನ್ನು ಸೇವಿಸಬೇಕು. ಪೊಪ್ಪಾಯಿಯಲ್ಲಿಯೂ ನೈಸರ್ಗಿಕ ಸಕ್ಕರೆ ಇರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು.

English summary

Papaya for Diabetes: Here's how it can help you manage diabetes

Diabetic patient should be very careful about what to eat and what not to. He or she has to think about the effect of the food consumed on blood sugar levels. Diabetic friendly fruits are also a great option which you can choose. When it comes to summer fruits, papaya is one such fruit which will can help you control diabetes as well.
X
Desktop Bottom Promotion