For Quick Alerts
ALLOW NOTIFICATIONS  
For Daily Alerts

ನೈಲ್ ಪಾಲಿಶ್ ಆರೋಗ್ಯದ ಮೇಲೆ ಹೇಗೆ ಕೆಟ್ಟ ಪರಿಣಾಮಬೀರುತ್ತದೆ

|

ನೈಲ್ ಪಾಲಿಶ್ ಎನ್ನುವುದು ಕೈಗಳು ಮತ್ತು ಕಾಲುಗಳ ಸೌಂದರ್ಯ ವೃದ್ಧಿಸುವುದು. ಪ್ರತಿಯೊಂದು ಸಂದರ್ಭದಲ್ಲಿ ಬಟ್ಟೆಗೆ ಹೊಂದಾಣಿಕೆ ಆಗುವಂತಹ ನೈಲ್ ಪಾಲಿಶ್ ಹಾಕಿಕೊಳ್ಳುವುದು ಇಂದಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ನೈಲ್ ಪಾಲಿಶ್ ಎನ್ನುವ ಕಲೆಯನ್ನು ಹೆಚ್ಚಿನ ಹುಡುಗಿಯರು ಇಂದು ಪಾಲಿಸಿಕೊಂಡು ಹೋಗುವರು. ಇಲ್ಲಿ ವಿವಿಧ ಬಗೆಯ ನೈಲ್ ಪಾಲಿಶ್ ಗಳು ಇರುವುದು. ಇದರಲ್ಲಿ ವಿವಿಧ ಬಣ್ಣ ಹಾಗೂ ವಿನ್ಯಾಸದ ನೈಲ್ ಪಾಲಿಶ್ ಗಳು ಇರುವುದು. ಕೆಲವೊಂದು ಸಂದರ್ಭದಲ್ಲಿ ಕೃತಕ ನೈಲ್ ಪಾಲಿಶ್ ಗಳು ಕೂಡ ಇವೆ. ಕೆಲವರಿಗೆ ನೈಲ್ ಪಾಲಿಶ್ ನ ವಾಸನೆಯು ಒಂದು ಚಟವಾಗಿ ಇರಬಹುದು. ಆದರೆ ನೈಲ್ ಪಾಲಿಶ್ ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು ಎಂದು ನೀವು ಯಾವತ್ತಾದರೂ ಆಲೋಚನೆ ಮಾಡಿದ್ದೀರಾ? ನೈಲ್ ಪಾಲಿಶ್ ನ ವಾಸನೆಯು ಆರೋಗ್ಯಕ್ಕೆ ಹಾನಿಕಾರಕ. ನಿಮ್ಮ ಫೇವರಿಟ್ ನೈಲ್ ಪಾಲಿಶ್ ಆರೋಗ್ಯಕ್ಕೆ ಯಾವ ರೀತಿ ಹಾನಿ ಮಾಡುವುದು ಎಂದು ತಿಳಿಯಿರಿ.

Nail polish

ನಿಮಗೆ ತಿಳಿದಿರುವಂತೆ ಪದೇ ಪದೇ ನೈಲ್ ಪಾಲಿಶ್ ಬಳಸಿಕೊಂಡರೆ ಅದರಿಂದ ಉಗುರುಗಳು ಒಣಗುವುದು ಮತ್ತು ಉಗುರುಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ನೀವು ನೋಡಬಹುದು. ನೈಲ್ ಪಾಲಿಶ್ ನಂತಹ ಕೆಲವೊಂದು ಕಾಸ್ಮೆಟಿಕ್ ಗಳು ಆರೋಗ್ಯಕ್ಕೆ ತೀವ್ರ ಹಾನಿ ಉಂಟು ಮಾಡಬಹುದು. ಇದನ್ನು ನೀವು ಊಹಿಸಿರಲಿಕ್ಕೂ ಸಾಧ್ಯವಿಲ್ಲ. ನೈಲ್ ಪಾಲಿಶ್ ನನಿಂದ ಆಗುವಂತಹ ಹಾನಿಗಳಲ್ಲಿ ಬಂಜೆತನದಿಂದ ಹಿಡಿದು ಕ್ಯಾನ್ಸರ್ ತನಕ ಸೇರಿದೆ. ಯಾಕೆಂದರೆ ಇದರಲ್ಲಿ ಬಳಕೆ ಮಾಡಲಾಗುವಂತಹ ಕೆಲವೊಂದು ರಾಸಾಯನಿಕಗಳು ಆರೋಗ್ಯಕ್ಕೆ ತುಂಬಾ ಹಾನಿಕಾರವಾಗಿದೆ.

ಟೊಲುಯೆನ್

ಟೊಲುಯೆನ್

ಟೊಲುಯೆನ್ ಎನ್ನುವ ದ್ರಾವಕವನ್ನು ನೈಲ್ ಪಾಲಿಶ್ ನಲ್ಲಿ ಬಳಸಲಾಗುತ್ತದೆ. ಇದು ಉಗುರುಗಳಿಗೆ ಒಳ್ಳೆಯ ಫಿನಿಶಿಂಗ್ ನೀಡುವುದು ಮತ್ತು ಬಣ್ಣವನ್ನು ಕಾಯ್ದಿಡುವುದು. ಈ ದ್ರಾವಕವು ಕೇಂದ್ರ ನರ ವ್ಯವಸ್ಥೆ, ಮೆದುಳು ಮತ್ತು ನರಗಳ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ತಲೆನೋವು, ನಿಶ್ಯಕ್ತಿ, ಆಯಾಸ ಮತ್ತು ವಾಕರಿಕೆ ಬರಬಹುದು. ಅಗ್ಗದ ನೈಲ್ ಪಾಲಿಶ್ ಬಳಸಿದರೆ ಇನ್ನಷ್ಟು ಕೆಟ್ಟ ಪರಿಣಾಮಗಳು ಆಗುವುದು. ಟೊಲುಯೆನ್ ಕಿಡ್ನಿ, ಯಕೃತ್ ಮತ್ತು ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು.

Most Read: ನೇಲ್ ಪಾಲೀಷ್ ಬೇಗನೆ ಒಣಗಲು ಕೆಲ ಸಲಹೆಗಳು

ಫಾರ್ಮಾಲ್ಡಿಹೈಡ್

ಫಾರ್ಮಾಲ್ಡಿಹೈಡ್

ಫಾರ್ಮಾಲ್ಡಿಹೈಡ್ ಎನ್ನುವುದು ಬಣ್ಣವಿಲ್ಲದೆ ಇರುವಂತಹ ಗ್ಯಾಸ್ ಆಗಿದ್ದು, ಇದು ನೈಲ್ ಪಾಲಿಶ್ ಗಳು ದೀರ್ಘ ಕಾಲ ಬಾಳಿಕೆ ಬರುವಂತೆ ಮಾಡುವುದು. ಯಾವುದೆ ರೀತಿಯ ಅಲರ್ಜಿಯಿಂದ ಬಳಲುತ್ತಿದ್ದರೆ ಆಗ ಈ ನೈಲ್ ಪಾಲಿಶ್ ಗಳನ್ನು ಬಳಸಬಾರದು ಎಂದು ಸಲಹೆ ನೀಡಲಾಗುತ್ತದೆ. ಫಾರ್ಮಾಲ್ಡಿಹೈಡ್ ನಿಂದಾಗಿ ಡರ್ಮಟೈಟಿಸ್ ಮತ್ತು ಕೆಮಿಕಲ್ ಬರ್ನ್ ಉಂಟಾಗಬಹುದು. ಹೃದಯ ಬಡಿತದ ಸಮ್ಯೆ, ಸೆಳೆತ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳು ಬರಬಹುದು.

ಡಿಬುಟೈಲ್ ಫಾಥಲೇಟ್

ಡಿಬುಟೈಲ್ ಫಾಥಲೇಟ್

ಇದನ್ನು ನೈಲ್ ಪಾಲಿಶ್ ನಲ್ಲಿ ಒಂದು ದ್ರಾವಕವಾಗಿ ಬಳಸಲಾಗುತ್ತದೆ. ಇದು ಉಗುರಿನ ಬಣ್ಣಗಳೀಗೆ ಸ್ಥಿತಿಸ್ಥಾಪಕತ್ವ ನೀಡುವುದು. ಡಿಬುಟೈಲ್ ಫಾಥಲೇಟ್ ನೈಲ್ ಪಾಲಿಶ್ ಬಿರುಕು ಬಿಡುವುದನ್ನು ತಪ್ಪಿಸುವುದು. ನೈಲ್ ಪಾಲಿಶ್ ನಲ್ಲಿ ಈ ರಾಸಾಯನಿಕವು ಇರುವ ಕಾರಣದಿಂದಾಗಿ ಅಂತಃಸ್ರಾವಕ ಕಾಯಿಲೆ, ಶ್ವಾಸಕೋಶದ ಕಾಯಿಲೆ ಮತ್ತು ಗರ್ಭಕೋಶದ ಕಾಯಿಲೆ ಬರಬಹುದು.

ನೈಲ್ ಪಾಲಿಶ್ ಪರಿಣಾಮ ತಡೆಯುವುದು ಹೇಗೆ

ನೈಲ್ ಪಾಲಿಶ್ ಪರಿಣಾಮ ತಡೆಯುವುದು ಹೇಗೆ

ನೈಲ್ ಪಾಲಿಶ್ ಹಚ್ಚಿಕೊಳ್ಳುವ ಮಧ್ಯೆ ಸಮಯ ತೆಗೆದುಕೊಳ್ಳಿ. ಒಂದು ಸಂದರ್ಭಧಲ್ಲಿ ಹಚ್ಚಿಕೊಳ್ಳಿ ಮತ್ತು ಅದೇ ರಾತ್ರಿಗೆ ಅದನ್ನು ತೆಗೆಯಿರಿ. ಉಗುರುಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ತಪ್ಪಿಸಲು ತಿಂಗಳಲ್ಲಿ ಕೆಲವು ದಿನಗಳ ಕಾಲ ನೈಲ್ ಪಾಲಿಶ್ ಬಳಸಬೇಡಿ.

ಮಾರುಕಟ್ಟೆಯಲ್ಲಿ ವಿವಿಧ ರೀತಿಯ ನೈಲ್ ಪಾಲಿಶ್‌ಗಳು ಲಭ್ಯವಿದೆ. ಇದರಲ್ಲಿ ಮುಖ್ಯವಾಗಿ ಕೆಲವೊಂದನ್ನು ತುಂಬಾ ವಿಶೇಷವಾಗಿ 5-ಫ್ರೀ ಅಥವಾ 3- ಫ್ರೀ ಎಂದು ಪ್ಯಾಕ್ ಮಾಡಲಾಗಿರುತ್ತದೆ.

5-ಫ್ರೀ ಎಂದರೆ ಅದರಲ್ಲಿ ಫಾರ್ಮಾಲ್ಡಿಹೈಡ್, ಟಲ್ಯುನೆ, ಡಿಬುಟೈಲ್ ಫಾಥಲೇಟ್, ಫಾರ್ಮಾಲ್ಡಿಹೈಡ್ ರೆಸಿನ್ಸ್ ಮತ್ತು ಕರ್ಪೂರ ಇಲ್ಲವೆಂದು ಹೇಳಲಾಗುತ್ತದೆ. ಅದೇ 3-ಫ್ರೀ ಎಂದರೆ ಇದರಲ್ಲಿ ಪ್ರಮುಖ ಮೂರು ವಿಷಕಾರಿ ರಾಸಾಯನಿಕಗಳು ಇಲ್ಲ. ನೈಲ್ ಪಾಲಿಶ್ ಬಳಸುವ ಮೊದಲು ಅದರಲ್ಲಿ ಇರುವ ರಾಸಾಯನಿಕಗಳ ಬಗ್ಗೆ ಸರಿಯಾಗಿ ತಿಳಿಯಿರಿ ಮತ್ತು ನಿಮ್ಮ ಆರೋಗ್ಯ ಕಾಪಾಡಿ.

English summary

Nail polish can affect your health

Nail polish enhances the beauty of hands and feet. For every occasion you might be having a perfect shade to match with your outfit. Nail art is another trend which many girls religiously follow, where they try different arts and patterns on nails with different nail paints and sometimes on artificial nails as well. Many of you might be addicted to the smell of nail polish as well. But have you ever wondered how harmful your nail polish can be? The smell you love a lot can be so hazardous for your health. Know how your favorite nail polish can harm your health.
X
Desktop Bottom Promotion