For Quick Alerts
ALLOW NOTIFICATIONS  
For Daily Alerts

ಪುರುಷರು ಪ್ರತೀ ದಿನ ಒಂದು ಕಪ್ ಮೊಸರು ತಿಂದ್ರೆ 'ಕರುಳಿನ ಕ್ಯಾನ್ಸರ್' ತಡೆಗಟ್ಟಬಹುದಂತೆ!

|

ಹಾಲಿನ ಪ್ರತಿಯೊಂದು ಉತ್ಪನ್ನಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಆದರೆ ಇದನ್ನು ಹಿತಮಿತವಾಗಿ ಬಳಕೆ ಮಾಡಿಕೊಳ್ಳಬೇಕು. ಬೆಣ್ಣೆ, ತುಪ್ಪದಂತಹ ಆಹಾರವನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅದರಿಂದ ಕೊಬ್ಬು ಶೇಖರಣೆ ಆಗಿ ಇನ್ನಿಲ್ಲದ ಸಮಸ್ಯೆ ಉಂಟು ಮಾಡಬಹುದು. ಇದರಿಂದ ಯಾವುದೇ ಆಹಾರವಾದರೂ ಮಿತವಾಗಿ ಇರಬೇಕು. ಮೊಸರಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದು ಉರಿಯೂತವನ್ನು ಕಡಿಮೆ ಮಾಡುವ ಗುಣ ಹೊಂದಿದೆ ಮತ್ತು ಹೊಟ್ಟೆಯಲ್ಲಿನ ಸೋರಿಕೆ ಕಡಿಮೆ ಮಾಡುವುದು. ಈ ಬಗ್ಗೆ ಅಧ್ಯಯನಗಳು ಏನು ಹೇಳುತ್ತವೆ ಎಂದು ನೀವು ತಿಳಿಯಿರಿ.

ಮೊಸರಿನಲ್ಲಿ ಉನ್ನತ ಮಟ್ಟದ ಪೋಷಕಾಂಶಗಳು ಇವೆ. ಇದರಿಂದ ನೀವು ಮೊಸರನ್ನು ಆಹಾರ ಕ್ರಮದಲ್ಲಿ ಬಳಸಿಕೊಳ್ಳಬಹುದು. ಮೊಸರು ಹಿಂದಿನ ಕಾಲದಿಂದಲೂ ಭಾರತದಲ್ಲಿ ಹಸಿವು ನಿವಾರಕವಾಗಿ ಬಳಸಿಕೊಳ್ಳಲಾಗುತ್ತಿತ್ತು. ಇದಕ್ಕೆ ಹಲವಾರು ಸಂಸ್ಕೃತಿ ಹಾಗೂ ಸಂಪ್ರದಾಯದ ಸಂಬಂಧವೂ ಇದೆ. ಮೊಸರನ್ನು ಹಾಲಿಗೆ ಹುದುಗು ಬರಿಸುವ ಮೂಲಕವಾಗಿ ತಯಾರಿಸಲಾಗುತ್ತದೆ. ಮೊಸರು ಕ್ಯಾನ್ಸರ್ ನಿವಾರಣೆ ಮಾಡುವುದು ಎಂದು ನಿಮಗೆ ತಿಳಿದಿದೆಯಾ? ಇದನ್ನು ಕೇಳಿ ನೀವು ಅಚ್ಚರಿಪಡಬೇಡಿ. ಯಾಕೆಂದರೆ ಅಧ್ಯಯನಗಳು ಹೇಳಿರುವ ಪ್ರಕಾರ ಮೊಸರು ಪುರುಷರಲ್ಲಿ ಕ್ಯಾನ್ಸರ್ ಪೂರ್ವ ಹೊಟ್ಟೆಯ ಗಡ್ಡೆ ಬೆಳೆಯುವುದನ್ನು ತಡೆಯುವುದು.

Most Read: ಆರೋಗ್ಯ ಟಿಪ್ಸ್: ದಿನನಿತ್ಯ 'ಮೊಸರು' ಸೇವಿಸಿ ಆರೋಗ್ಯ ವೃದ್ಧಿಸಿ

cancer

ವಾರದಲ್ಲಿ ಎರಡು ಸಲ ಮೊಸರು ಸೇವಿಸಿದರೆ ಅದರಿಂದ ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗುವಂತಹ ಅಸಾಮಾನ್ಯವಾದ ಅಂಗಾಂಶಗಳು ಬೆಳವಣಿಗೆ ಆಗುವುದನ್ನು ಇದು ತಡೆಯುತ್ತದೆ ಎಂದು ಅಧ್ಯಯನಗಳು ಹೇಳಿವೆ. ಬಲಿಷ್ಠವಾಗಿರುವಂತಹ ಅಸಾಮಾನ್ಯ ಅಂಗಾಂಶಗಳು ಕ್ಯಾನ್ಸರ್ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ಇದು ಕರುಳಿನಲ್ಲಿ ಬೆಳೆಯುವ ಅಸಾಮಾನ್ಯ ಅಂಗಾಂಶವನ್ನು ತಡೆಯುವುದು. ಜರ್ನಲ್ ಗಟ್ ನಲ್ಲಿ ಈ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ.

ವೈಜ್ಞಾನಿಕ ಕೋನ

ಮೊಸರು ಅಪಾಯವನ್ನು ಹೇಗೆ ತಗ್ಗಿಸುವುದು ಎಂದು ನಿಮಗೆ ಅಚ್ಚರಿಯಾಗಬಹುದು. ಇದಲ್ಲಿ ವಿವರಣೆ ನೀಡಲಾಗಿದೆ. ನೀವು ದಿನನಿತ್ಯವು ಮೊಸರು ಸೇವಿಸಿದರೆ ಆಗ ಅದು ಹೊಟ್ಟೆಯಲ್ಲಿನ ಬ್ಯಾಕ್ಟೀರಿಯಾವನ್ನು ಬದಲಾವಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಅದಾಗ್ಯೂ, ಮೊಸರು ಸೇವನೆ ಮಾಡುವ ಪರಿಣಾಂದಿಂದಾಗಿ ಕ್ಯಾನ್ಸರ್ ಪೂರ್ವ ಗಡ್ಡೆಗಳು ಬೆಳವಣಿಗೆ ಆಗುವುದು ಕಡಿಮೆ ಆಗುತ್ತದೆಯಾ ಎನ್ನುವುದು ಮಾತ್ರ ಅಷ್ಟು ಸ್ಪಷ್ಟವಾಗಿಲ್ಲ. ಲ್ಯಾಕ್ಟೋಬಾಸಿಲಸ್ ಬಲ್ಗರಿಕಸ್ ಮತ್ತು ಸ್ಟ್ರೆಪ್ಟೋಕೊಕಸ್ ಥರ್ಮೋಫಿಲಸ್ ಎನ್ನುವ ಎರಡು ರೀತಿಯ ಬ್ಯಾಕ್ಟೀರಿಯಾಗಳು ಮೊಸರಿನಲ್ಲಿದೆ. ಈ ಬ್ಯಾಕ್ಟೀರಿಯಾಗಳು ಹೊಟ್ಟೆಯಲ್ಲಿ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳನ್ನು ಕಡಿಮೆ ಮಾಡುವುದು.

ವಿವಿಧ ರೀತಿಯ ಜನರೊಂದಿಗೆ ಈ ಅಧ್ಯಯನವನ್ನು ಮಾಡಲಾಗಿದೆ. ವಿಜ್ಞಾನಿಗಳು ಅವರ ಆಹಾರ ಕ್ರಮವನ್ನು ಕೂಡ ಸರಿಯಾಗಿ ಪರಿಶೀಲನೆ ಮಾಡಿದ್ದಾರೆ. ಈ ಅಧ್ಯಯನಕ್ಕಾಗಿ ಸುಮಾರು 30000 ಪುರುಷರು ಮತ್ತು 55000ಕ್ಕೂ ಮಿಕ್ಕಿ ಮಹಿಳೆಯರನ್ನು ಒಳಪಡಿಸಲಾಗಿದೆ. ಈ ಅಧ್ಯಯನಕ್ಕಾಗಿ ಭಾಗಿಯಾದವರ ಎಂಡೋಸ್ಕೋಪಿ ಕೂಡ ಮಾಡಲಾಗಿದೆ. ಇದರಿಂದ ವೈದ್ಯರಿಗೆ ಹೊಟ್ಟೆಯ ಪದರವನ್ನು ನೋಡಲು ಸಾಧ್ಯವಾಗುತ್ತದೆ. ಸಂಪೂರ್ಣ ಆಹಾರ ಸೇವನೆಯ ಮಾಹಿತಿ ಪಡೆಯಲಾಯಿತು ಮತ್ತು ಇದರಲ್ಲಿ ಮೊಸರಿನ ಸೇವನೆ ಪ್ರಮಾಣವು ಒಳಗೊಂದಿದೆ. ಪ್ರತೀ ನಾಲ್ಕು ವರ್ಷಕ್ಕೊಮ್ಮೆ ಇದನ್ನು ನಡೆಸಲಾಗುತ್ತದೆ. ಪುರುಷರಲ್ಲಿ ಅಧ್ಯಯನ ವೇಳೆ 5811 ಅಸಾಮಾನ್ಯ ಅಂಗಾಂಶಗಳು ಪತ್ತೆಯಾಗಿದೆ ಮತ್ತು ಮಹಿಳೆಯರಲ್ಲಿ ಸುಮಾರು ಎಂಟು ಸಾವಿರಕ್ಕೂ ಅಧಿಕ ಅಂಗಾಂಶವು ಪತ್ತೆಯಾಗಿದೆ.

Most Read: ನೆನಪಿಡಿ ಅಪ್ಪಿತಪ್ಪಿಯೂ ರಾತ್ರಿ ಹೊತ್ತು ಮೊಸರು ಸೇವಿಸಬೇಡಿ...

ವಿಶ್ಲೇಷಣೆ

ಮೊಸರು ಸೇವನೆ ಮಾಡುವಂತಹ ಪುರುಷರಲ್ಲಿ ಬೇರೆ ಪುರುಷರಿಗಿಂತ ಅಸಾಮಾನ್ಯ ಅಂಗಾಂಶಗಳು ಬೆಳವಣಿಗೆ ಆಗುವಂತಹ ಸಾಧ್ಯತೆಯು ಶೇ. 19ರಷ್ಟು ಕಡಿಮೆ ಇರುವುದು. ಆದರೆ ತುಂಬಾ ಅಪಾಯಕಾರಿ ಅಂಗಾಂಶಗಳು ಮತ್ತು ಇದಕ್ಕೆ ಸಂಬಂಧವಿದೆಯಾ ಎಂದು ಅಧ್ಯಯನಗಳಿಗೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಒಂದು ಅಥವಾ ಒಂದು ಸೆ.ಮೀ.ಗಿಂತ ಸ್ವಲ್ಪ ಹೆಚ್ಚಿದ್ದರೂ ಇದು ಅಪಾಯವನ್ನು ಕಡಿಮೆ ಮಾಡಿದೆ ಎಂದು ಅಧ್ಯಯನಗಳು ತಿಳಿಸಿವೆ.

English summary

Men who eat yogurt may have lower colon cancer risk

Yogurt vs curd has always been a fight. Some people prefer yogurt while others may like curd, but the best thing is both are rich in nutrients. So whatever you opt for you will be benefitted. Curd is one of the ancient appetizers in India. Many of our customs and traditions are linked to it. Also, the curd is made up of coagulating milk, meanwhile, yogurt is made up of bacterial fermentation of milk. Yogurt comes in various tastes as well which is a way to trick your children to eat it. But have you ever heard that yogurt cures cancer? Don't be surprised, as new research has indicated that having yogurt could decrease the pre-cancerous bowel growth risk in men.
X
Desktop Bottom Promotion