For Quick Alerts
ALLOW NOTIFICATIONS  
For Daily Alerts

ಮಜ್ಜಿಗೆ ಕುಡಿದು ಕೂಡ ದೇಹದ ತೂಕ ಇಳಿಸಿಕೊಳ್ಳಬಹುದಂತೆ

|

ಹಾಲು ಹಾಗೂ ಹಾಲಿನ ಉತ್ಪನ್ನಗಳು ದೇಹಕ್ಕೆ ತುಂಬಾ ಒಳ್ಳೆಯದು ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಇದರಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ದೇಹಕ್ಕೆ ಶಕ್ತಿ ನೀಡುವುದು ಮತ್ತು ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಿಂದ ಹಾಲಿನ ಉತ್ಪನ್ನಗಳಿಗೆ ಬೇಡಿಕೆಯು ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ಬೇಸಿಗೆಯಲ್ಲಿ ಹಾಲು, ಮೊಸರು ಮತ್ತು ಮಜ್ಜಿಗೆ ತುಂಬಾ ಮಾರಾಟವಾಗುವುದು. ಮಜ್ಜಿಗೆಯು ನಮ್ಮ ದಾಹ ತಣಿಸುವುದು.

ಇದು ದಾಹ ತಣಿಸುವುದು ಮಾತ್ರವಲ್ಲದೆ, ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ದೇಹದಲ್ಲಿ ಇದು ನಿರ್ಜಲೀಕರಣವಾಗದಂತೆ ತಡೆಯುತ್ತದೆ ಎಂದು ಹೇಳಲಾಗಿದೆ. ಅದರಲ್ಲೂ ರಾಜ್ಯದ ಕೆಲವೊಂದು ಬಿಸಿಲಿನ ಪ್ರದೇಶಗಳಲ್ಲಿ ಮಜ್ಜಿಗೆಯನ್ನು ಅಧಿಕವಾಗಿ ಬಳಸುವರು. ಮಜ್ಜಿಗೆಯಿಂದ ಸಿಗುವಂತಹ ಆರೋಗ್ಯ ಲಾಭದೊಂದಿಗೆ ಇದರಿಂದ ತೂಕ ಕಳೆದುಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯಾ? ಹೌದು, ಮಜ್ಜಿಗೆಯು ದೇಹದ ತೂಕ ಇಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವುದು. ನೀವು ಮಜ್ಜಿಗೆಯನ್ನು ಕರಿದ ತಿಂಡಿ ತಿನಿಸುಗಳನ್ನು ತಿನ್ನುವ ಬದಲು ಬಳಸಿಕೊಳ್ಳಬೇಕು. ಅಧಿಕ ಕ್ಯಾಲರಿ ಇರುವಂತಹ ಹಾಲಿನ ಉತನ್ನಗಳ ಬದಲಿಗೆ ಮಜ್ಜಿಗೆ ಸೇವಿಸಿ. ಇದು ನಿಮಗೆ ಖಂಡಿತವಾಗಿಯೂ ಲಾಭಕಾರಿ ಆಗಲಿದೆ.

 ತೂಕ ಇಳಿಸುವುದು ಮತ್ತು ಕ್ಯಾಲರಿ

ತೂಕ ಇಳಿಸುವುದು ಮತ್ತು ಕ್ಯಾಲರಿ

ನಿಮ್ಮ ದೇಹವು ತೂಕ ಕಳೆದುಕೊಳ್ಳುವಂತಹ ಸಾಮರ್ಥ್ಯವನ್ನು ಹೊಂದಿರುವುದು ಎರಡು ಅಂಶಗಳ ಮೇಲೆ ನಿರ್ಧರಿಸಲ್ಪಟ್ಟಿದೆ. ನೀವು ಸೇವಿಸುವಂತಹ ಕ್ಯಾಲರಿ ಮತ್ತು ಅದರ ವಿಸ್ತರಣೆ. ನೀವು ಪ್ರತಿನಿತ್ಯ ತಿನ್ನುವ ಹಾಗೂ ಕುಡಿಯುವುದರಲ್ಲಿ ಇರುವಂತಹ ಕ್ಯಾಲರಿಯು, ನಿಮ್ಮ ದೈನಂದಿನ ಚಟುವಟಿಕೆ ಹಾಗೂ ವ್ಯಾಯಾಮ ದಿಂದ ದಹಿಸುವಂತಹ ಕ್ಯಾಲರಿಗಿಂತ ಕಡಿಮೆ ಇದ್ದರೆ ಆಗ ನಿಮಗೆ ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದು. ಯಾಕೆಂದರೆ ಮಜ್ಜಿಗೆ ಸೇವನೆ ಮಾಡುವ ಪರಿಣಾಮ ಕ್ಯಾಲರಿ ಸೇವನೆಯು ಹೆಚ್ಚಾಗುವುದು. ಆದರೆ ಇದು ನಿಮ್ಮ ತೂಕ ಇಳಿಸುವ ಕಾರ್ಯಕ್ರಮದ ಮೇಲೆ ನೇರ ಪರಿಣಾಮ ಬೀರುವುದಿಲ್ಲ.

ತಿಂಡಿಯಾಗಿ ಮಜ್ಜಿಗೆ

ತಿಂಡಿಯಾಗಿ ಮಜ್ಜಿಗೆ

ಅಧಿಕ ಕ್ಯಾಲರಿ ಹೊಂದಿರುವಂತಹ ತಿಂಡಿಗಳನ್ನು ಸೇವನೆ ಮಾಡುವ ಬದಲು ನೀವು ಮಜ್ಜಿಗೆ ಸೇವನೆ ಮಾಡಿದರೆ, ಅದರಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಿದೆ. ಒಂದು ಕಪ್ ಕಡಿಮೆ ಕೊಬ್ಬು ಇರುವಂತಹ ಮಜ್ಜಿಗೆಯಲ್ಲಿ 98 ಕ್ಯಾಲರಿ ಇದೆ. ಒಂದು ಔನ್ಸ್ ಬಟಾಟೆ ಚಿಪ್ಸ್ ನಲ್ಲಿ ಇರುವುದು ಸುಮಾರು 149 ಕ್ಯಾಲರಿ ಇದೆ. ನೀವು ಬಟಾಟೆ ಚಿಪ್ಸ್ ತಿನ್ನುವ ಬದಲು ಮಜ್ಜಿಗೆ ಕುಡಿಯಲು ನಿರ್ಧರಿಸಿದರೆ, ಆಗ ನಿಮ್ಮ ದೇಹಕ್ಕೆ ತುಂಬಾ 51 ಕಡಿಮೆ ಕ್ಯಾಲರಿ ಲಭ್ಯವಾಗುವುದು. 12 ಔನ್ಸ್ ಕೋಲಾದ ಬದಲು ನೀವು ಮಜ್ಜಿಗೆ ಸೇವನೆ ಮಾಡಿದರೆ ಅದರಿಂದ 54 ಕ್ಯಾಲರಿ ಕಡಿಮೆ ಆಗುವುದು. ನೀವು ನಿಯಮಿತವಾಗಿ ತಿಂಡಿ ಹಾಗೂ ಬೇರೆ ತಂಪು ಪಾನೀಯಗಳನ್ನು ಸೇವನೆ ಮಾಡುವ ಬದಲು ಮಜ್ಜಿಗೆ ಕುಡಿದರೆ, ಆಗ ತೂಕ ಕಳೆದುಕೊಳ್ಳಲು ಇದು ತುಂಬಾ ನೆರವಾಗುವುದು. ಕೋಲಾ ಮತ್ತು ಚಿಪ್ಸ್ ನಿಂದಾಗಿ ದೇಹಕ್ಕೆ ಹೆಚ್ಚಿನ ಕ್ಯಾಲರಿ ಮಾತ್ರ ಸಿಗುವುದು. ಇದರಿಂದ ಬೇರೆ ಯಾವುದೇ ರೀತಿಯ ಪೋಷಕಾಂಶಗಳು ಸಿಗುವುದಿಲ್ಲ. ಇದರಿಂದಾಗಿ ನೀವು ಮಜ್ಜಿಗೆ ಸೇವನೆ ಮಾಡಿದರೆ, ಅದರಲ್ಲಿ ಹೆಚ್ಚಿನ ಪ್ರೋಟೀನ್, ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ವಿಟಮಿನ್ ಗಳು ಇವೆ.

ಹಾಲಿನ ಉತ್ಪನ್ನಗಳಿಗೆ ಪರ್ಯಾಯ

ಹಾಲಿನ ಉತ್ಪನ್ನಗಳಿಗೆ ಪರ್ಯಾಯ

ಸ್ವಲ್ಪ ಹುಳಿಯಾಗಿರುವಂತಹ ಮಜ್ಜಿಗೆ ರುಚಿಯು ನಿಮಗೆ ಹಿಡಿಸದೆ ಇರಬಹುದು. ಆದರೆ ನಿಮ್ಮ ಆಹಾರ ಕ್ರಮದಲ್ಲಿ ಬೇರೆ ರೀತಿಯ ಹಾಲಿನ ಉತ್ಪನ್ನಗಳ ಬದಲಿಗೆ ನೀವು ಮಜ್ಜಿಗೆ ಕುಡಿದರೆ ಅದರಿಂದ ಖಂಡಿತವಾಗಿಯೂ ನಿಮ್ಮ ಕ್ಯಾಲರಿ ಸೇವನೆಯು ಕಡಿಮೆ ಆಗುವುದು. ಒಂದು ಕಪ್ ಕಡಿಮೆ ಕೊಬ್ಬು ಇರುವ ಮಜ್ಜಿಗೆಯಲ್ಲಿ ತುಂಬಾ ಕಡಿಮೆ ಕ್ಯಾಲರಿ ಇದೆ ಮತ್ತು ಕೊಬ್ಬು ಹಾಲಿನಲ್ಲಿ ಇರುವುದಕ್ಕಿಂತ ಶೇ. 2ರಷ್ಟು ಮಾತ್ರ ಇದೆ. ಅದೇ ಹಾಲಿನಲ್ಲಿ 122 ಕ್ಯಾಲರಿ ಇದೆ. ಚಾಕಲೇಟ್ ಹಾಲಿನಲ್ಲಿ ನಿಮ್ಮ ದೇಹಕ್ಕೆ ಸಿಗುವುದು 190 ಕ್ಯಾಲರಿ. ವಿವಿಧ ರೀತಿಯ ಮೊಸರಿಗೆ ಕಡಿಮೆ ಕ್ಯಾಲರಿ ಇರುವಂತಹ ಮಜ್ಜಿಗೆ ಒಂದು ಪರ್ಯಾಯವಾಗಿದೆ. 6 ಔನ್ಸ್ ಕಡಿಮೆ ಕೊಬ್ಬು ಇರುವಂತಹ ಹಣ್ಣಿನ ರುಚಿಯ ಮೊಸರಿನಲ್ಲಿ ಸುಮಾರು 168 ಕ್ಯಾಲರಿ ಇದೆ.

ವ್ಯಾಯಾಮ ಮತ್ತು ಮಜ್ಜಿಗೆ ಜತೆ ಸೇರಿಸಿ

ವ್ಯಾಯಾಮ ಮತ್ತು ಮಜ್ಜಿಗೆ ಜತೆ ಸೇರಿಸಿ

ಅಧಿಕ ಕ್ಯಾಲರಿ ಇರುವಂತಹ ತಿಂಡಿಗಳು ಮತ್ತು ಹಾಲಿನ ಉತ್ಪನ್ನಗಳನ್ನು ಬಳಕೆ ಮಾಡುವ ಬದಲು ನೀವು ಮಜ್ಜಿಗೆ ಸೇವನೆ ಮಾಡಿದರೆ, ನಿಮ್ಮ ಸಂಪೂರ್ಣ ಕ್ಯಾಲರಿ ಸೇವನೆಯು ಕಡಿಮೆ ಆಗುವುದು. ಇದರೊಂದಿಗೆ ನೀವು ದಿನನಿತ್ಯವು ಹೆಚ್ಚಿನ ವ್ಯಾಯಾಮ ಮಾಡುವುದರೊಂದಿಗೆ ತೂಕ ಇಳಿಕೆ ಮಾಡಬಹುದು. ತೂಕ ಇಳಿಸಿಕೊಳ್ಳಲು ವ್ಯಾಯಾಮ ಎನ್ನುವುದು ತುಂಬಾ ಪ್ರಮುಖ ಪಾತ್ರ ವಹಿಸುವುದು. ವಾರದಲ್ಲಿ ನೀವು ಸುಮಾರು 300 ನಿಮಿಷಗಳ ಕಾಲ ಹೃದಯಕ್ಕೆ ಲಾಭ ನೀಡುವಂತಹ ವ್ಯಾಯಾಮ ಮಾಡಿದರೆ ಅದರಿಂದ ಕ್ಯಾಲರಿ ದಹಿಸಲ್ಪಡುವುದು ಮತ್ತು ತೂಕ ಕಳೆದುಕೊಳ್ಳುವಲ್ಲಿ ಅದು ಪ್ರಮುಖ ಪಾತ್ರ ವಹಿಸುವುದು.

English summary

Lose Weight By Drinking Buttermilk

A glass of buttermilk doesn't serve as a magical weight-loss elixir, but this tart beverage can play a role in your effort to shed a few pounds. Don't expect that sipping buttermilk will automatically cause you to smile on the bathroom scale. Enjoying this drink as a healthy alternative to snacks or consuming it instead of higher-calorie dairy products, however, can pay dividends.
X
Desktop Bottom Promotion