For Quick Alerts
ALLOW NOTIFICATIONS  
For Daily Alerts

ರಾತ್ರಿ ವೇಳೆ ಏಳು ಗಂಟೆಗಿಂತ ಕಡಿಮೆ ಮಲಗುವಂತಹ ಜನರಲ್ಲಿ ಹೃದಯದ ಕಾಯಿಲೆ ಸಾಧ್ಯತೆ ಹೆಚ್ಚಂತೆ!

|

ನಾವು ಯಾವುದೇ ವಿಚಾರವಾಗಲಿ, ವಸ್ತುವಾಗಲಿ ಹಲವಾರು ರೀತಿಯ ಸಂಶೋಧನೆಗಳನ್ನು ನೋಡುತ್ತೇವೆ. ದಿನಕ್ಕೊಂದು ಅಧ್ಯಯನ ವರದಿಗಳು ನಮಗೆ ಸಿಗುತ್ತಲೇ ಇರುತ್ತದೆ. ಆದರೆ ಪ್ರತಿಯೊಂದು ಅಧ್ಯಯನ ವರದಿಯ ಬಗ್ಗೆಯೂ ಪರ ಹಾಗು ವಿರೋಧ ಎನ್ನುವುದು ಇದ್ದೇ ಇರುತ್ತದೆ. ಇಲ್ಲಿ ಇತ್ತೀಚೆಗೆ ನಡೆಸಿರುವ ಅಧ್ಯಯನ ವರದಿಯೊಂದರಲ್ಲಿ ನಾವು ಏಳು ಗಂಟೆಗಿಂತ ಕಡಿಮೆ ನಿದ್ರಿಸಿದರೆ ಆಗ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆಯು ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ.

ಎಕ್ಸ್ ಪೆರಿಮೆಂಟಲ್ ಸೈಕಾಲಜಿಯಲ್ಲಿ ಈ ಅಧ್ಯಯನ ವರದಿಯು ಪ್ರಕಟಗೊಂಡಿದೆ. ಏಳು ಗಂಟೆಗಿಂತ ಕಡಿಮೆ ಮಲಗುವಂತಹ ಜನರಲ್ಲಿ ರಕ್ತದ ಮಟ್ಟವು ಮೂರು ಶಾರೀರಿಕಶಾಸ್ತ್ರ ನಿಯಂತ್ರಕದಿಂದ ಕಡಿಮೆ ಇರುವುದು. ಈ ನಿಯಂತ್ರಕವು ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ರಾತ್ರಿ ವೇಳೆ ಏಳು ಗಂಟೆಗಿಂತ ಕಡಿಮೆ ಮಲಗುವಂತಹ ಜನರಲ್ಲಿ ಹೃದಯದ ಕಾಯಿಲೆ(ಸಿವಿಡಿ) ಸಾಧ್ಯತೆಯು ಹೆಚ್ಚಾಗಿರುವುದು ಮತ್ತು ಹೃದಯದ ಕಾಯಿಲೆಯು ಬರುವುದು ಎಂದು ಅಧ್ಯಯನಗಳು ತಿಳಿಸಿವೆ.

Most Read: ಹೃದಯಾಘಾತದ ಮುನ್ನ ಕಂಡುಬರುವ 4 ಲಕ್ಷಣಗಳು

heart diseases

ಎಕ್ಸ್ ಪೆರಿಮೆಂಟಲ್ ಸೈಕಾಲಜಿಯಲ್ಲಿ ಈ ಅಧ್ಯಯನ ವರದಿಯು ಪ್ರಕಟಗೊಂಡಿದೆ. ಏಳು ಗಂಟೆಗಿಂತ ಕಡಿಮೆ ಮಲಗುವಂತಹ ಜನರಲ್ಲಿ ರಕ್ತದ ಮಟ್ಟವು ಮೂರು ಶಾರೀರಿಕ ನಿಯಂತ್ರಕ ಅಥವಾ ಮೈಕ್ರೋಆರ್ ಎನ್ ಎ ಗಿಂತಲೂ ಕಡಿಮೆ ಇರುವುದು. ಇದು ಜಿನ್ ಗಳ ಭಾವನೆ ಮತ್ತು ಹೃದಯದ ಆರೋಗ್ಯದಲ್ಲಿ ತುಂಬಾ ಪ್ರಮುಖ ಪಾತ್ರ ನಿರ್ವಹಿಸುವುದು.

ಹೊಸ ಅಧ್ಯಯನವು ಕಂಡುಕೊಂಡಿರುವ ವಿಚಾರವೆಂದರೆ ನಿದ್ರೆಯಿಂದಾಗಿ ಹೃದಯದ ಆರೋಗ್ಯವು ಉತ್ತಮವಾಗುವುದು ಮತ್ತು ಸಂಪೂರ್ಣ ದೇಹಶಾಸ್ತ್ರ ಕೂಡ ಎಂದು ಅಮೆರಿಕಾದ ಕೊಲೊರಾಡೊ ಯೂನಿವರ್ಸಿಟಿಯ ಪ್ರೊಪೆಸರ್ ಕ್ರಿಸ್ಟೋಪರ್ ಡಿ ಸೋಜಾ ತಿಳಿಸಿದರು.
ಈ ಅಧ್ಯಯನಕ್ಕಾಗಿ ಸಂಶೋಧನಾ ತಂಡವು ಸುಮಾರು 44ರಿಂದ 62ರ ಹರೆಯದ ವಯಸ್ಸಿನ ಪುರುಷರು ಹಾಗೂ ಮಹಿಳೆಯರ ರಕ್ತದ ಮಾದರಿಯನ್ನು ಸಂಗ್ರಹಿಸಿತು ಮತ್ತು ಅವರ ನಿದ್ರೆಯ ಬಗ್ಗೆ ಪ್ರಶ್ನೆಗಳನ್ನು ಕೂಡ ಕೇಳಲಾಯಿತು.

Most Read: ಹೃದಯಾಘಾತದ 7 ಲಕ್ಷಣಗಳು-ಯಾವುದಕ್ಕೂ ಎಚ್ಚರಿಕೆಯಿಂದಿರಿ!

ಇದರಲ್ಲಿ ಭಾಗಿಯಾದ ಅರ್ಧದಷ್ಟು ಮಂದಿ ದಿನಕ್ಕೆ 8.5 ಗಂಟೆ ನಿದ್ರೆ ಮಾಡಿದರೆ, ಇನ್ನು ಕೆಲವರು ದಿನಕ್ಕೆ 6.8 ಗಂಟೆ ನಿದ್ರೆ ಮಾಡುತ್ತಿದ್ದರು.
ಉರಿಯೂತ, ಪ್ರತಿರೋಧಕ ಕಾರ್ಯನಿರ್ವಹಣೆ ಮತ್ತು ಹೃದಯದ ಆರೋಗ್ಯದ ಬಗ್ಗೆ ಮೈಕ್ರೊಆರ್ ಎನ್ ಎ ಯ 9 ರೀತಿಯ ಭಾವನೆಗಳನ್ನು ಸಂಶೋಧನಾ ತಂಡವು ಈ ವೇಳೆ ಪರಿಶೀಲಿಸಿತು.

ಸರಿಯಾದ ನಿದ್ರೆ ಇಲ್ಲದೆ ಇರುವಂತಹ ಜನರಲ್ಲಿ ತುಂಬಾ ಕಡಿಮೆ ಎಂಐಆರ್-125ಎ, ಎಂಐಆರ್-126 ಮತ್ತು ಎಂಐಆರ್-146ಎ ಇರುವುದು ಕಂಡುಬಂದಿದೆ. ಇದು ಸರಿಯಾದ ನಿದ್ರೆ ಮಾಡುವವರಲ್ಲಿ ಹೆಚ್ಚಾಗಿದೆ. ಆದರೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದು ಸರಿಯಾದ ಕ್ರಮವೇ ಎಂದು ಮಾತ್ರ ಇದುವರೆಗೆ ಸರಿಯಾಗಿ ತಿಳಿದಿಲ್ಲ. ಆದರೆ ದೇಹಶಾಸ್ತ್ರದ ನಿಯಂತ್ರಕವನ್ನು ಸರಿಯಾದ ಮಟ್ಟದಲ್ಲಿ ಇಟ್ಟುಕೊಳ್ಳಲು ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆಯು ಅಗತ್ಯವಾಗಿ ಬೇಕು ಎಂದು ಡಿಸೋಜಾ ತಿಳಿಸಿದರು. ಇದು ಸೆಲ್ಯೂಲರ್ ಬ್ರೇಕ್ಸ್ ನಂತೆ ಇದೆ, ಮೈಕ್ರೋಆರ್ ಎನ್ ಎ ಕಡಿಮೆ ಇದ್ದರೆ ಆಗ ನಮ್ಮ ಸಂಪೂರ್ಣ ಆರೋಗ್ಯದ ಕೋಶದ ಮೇಲೆ ಅದು ಪರಿಣಾಮ ಬೀರಬಹುದು ಎನ್ನುತ್ತಾರೆ ಡಿಸೋಜಾ ಸರಿಯಾದ ನಿದ್ರೆ ಮಾಡದೆ ಇರುವಂತಹ ಜನರಲ್ಲಿ ಮೈಕ್ರೋಆರ್ ಎನ್ ಎ ರಕ್ತವನ್ನು ಹೃದಯದ ಕಾಯಿಲೆಯ ಗುರುತಾಗಿ ಬಳಸಿಕೊಳ್ಳಬಹುದು ಎಂದು ಈ ವರದಿಯು ತಿಳಿಸಿದೆ.

English summary

Less than 7 hours of sleep may increase risk of heart diseases

According to a new study published in the journal Experimental Physiology, people who sleep fewer than seven hours per night have lower blood levels of three physiological regulators, which play a key role in maintaining vascular health.
X
Desktop Bottom Promotion