For Quick Alerts
ALLOW NOTIFICATIONS  
For Daily Alerts

ಈಜುವಿಕೆಯಿಂದ ಬರುವ ಕಣ್ಣಿನ ಸಮಸ್ಯೆ- ನೀವು ತಿಳಿಯಲೇಬೇಕಾದ ಸಂಗತಿಗಳು

|

ಬೇಸಗೆಯಲ್ಲಿ ಒಮ್ಮೆ ಹೋಗಿ ನೀರಿನ ಕೊಳಕ್ಕೆ ಧುಮುಕಬೇಕು ಎಂದು ಅನಿಸುವುದು. ಬಿಸಿಲಿನ ತಾಪದಿಂದ ತಡೆದುಕೊಳ್ಳಲು ಸಾಧ್ಯವೇ ಇರದಂತಹ ಸಂದರ್ಭದಲ್ಲಿ ಸ್ವಚ್ಛಂದವಾಗಿರುವ ನೀರಿನ ಕೊಳ ಸಿಕ್ಕಿದರೆ ಆಗ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ಅದರಲ್ಲೂ ಮಕ್ಕಳು ಬೇಸಗೆಯಲ್ಲಿ ಯಾವಾಗಲೂ ಈಜುಕೊಳದಲ್ಲಿ ಸಮಯ ಕಳೆಯಲು ಬಯಸುವರು. ಇಂತಹ ಸಮಯದಲ್ಲಿ ಮಕ್ಕಳನ್ನು ಈಜುಕೊಳದಲ್ಲಿ ಆಡಲು ಬಿಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವಂತಹ ಪ್ರಶ್ನೆ ಕೂಡ ಮನದಲ್ಲಿ ಮೂಡುವುದು.

ಈಜುಕೊಳದಲ್ಲಿ ಮಕ್ಕಳಿಗೆ ಹಲವಾರು ರೀತಿಯ ಬ್ಯಾಕ್ಟೀರಿಯಾ ಹಾಗೂ ಸೋಂಕುಗಳು ಬರುವಂತಹ ಸಾಧ್ಯತೆಗಳು ಹೆಚ್ಚಾಗಿರುವುದು. ಯಾಕೆಂದರೆ ಹಲವಾರು ಮಂದಿ ಈಜುಕೊಳದಲ್ಲಿ ಈ ನೀರನ್ನು ಬಳಸಿರುವ ಕಾರಣದಿಂದಾಗಿ ನೀರು ಮೇಲಿನಿಂದ ಸ್ವಚ್ಛವಾಗಿ ಕಂಡರೂ ಅದು ಒಳಗಿಂದೊಳಗೆ ಬ್ಯಾಕ್ಟೀರಿಯಾ, ಕೀಟಾಣುಗಳನ್ನು ಹೊಂದಿರುವುದು. ಅದೇ ರೀತಿಯಾಗಿ ಇದರಲ್ಲಿ ರಾಸಾಯನಿಕಗಳು ಕೂಡ ಸೇರಿರುವುದು. ಇಂತಹ ರಾಸಾಯನಿಕಗಳು ಕಣ್ಣಿಗೆ ತುಂಬಾ ಹಾನಿ ಉಂಟು ಮಾಡಬಹುದು.

Swimmer’s Eye

ಸ್ವಿಮ್ಮರ್ ಹೈ ಪರಿಚಯ

ಈಜುಕೊಳದಿಂದಾಗಿ ಮಗುವಿನ ಕಣ್ಣುಗಳು ಕೆಂಪು ಆಗಿದೆ ಎಂದು ನೀವು ಯಾವತ್ತಾದರೂ ಆಲೋಚನೆ ಮಾಡಿದ್ದೀರಾ? ಈ ಪರಿಸ್ಥಿತಿಯನ್ನು ಸ್ವಿಮ್ಮರ್ಸ್ ಹೈ ಎಂದು ಕರೆಯಲಾಗುತ್ತದೆ. ಇದು ರಾಸಾಯನಿಕಗಳಿಂದಾಗಿ ಉಂಟಾಗುತ್ತದೆ. ನೀರಿನಲ್ಲಿ ಇರುವಂತಹ ರಾಸಾಯನಿಕದಿಂದಾಗಿ ಕಣ್ಣೀರಿನ ಪದರ ಮತ್ತು ನೀರನ್ನು ಅದು ತೆಗೆದುಕೊಂಡು ಹೋಗುವುದು. ಇದನ್ನು ಕಡೆಗಣಿಸಿದರೆ ಆಗ ಅದು ಕಣ್ಣಿನಲ್ಲಿ ಅಲ್ಸರ್ ಉಂಟು ಮಾಡಬಹುದು. ಸ್ವಿಮ್ಮರ್ಸ್ ಹೈ ಸಿಂಡ್ರೋಮ್ ಒಂದು ಅಥವಾ ಎರಡೂ ಕಣ್ಣುಗಳಲ್ಲಿ ಒಂದೇ ಸಲ ಕಾಣಿಸಿಕೊಳ್ಳಬಹುದು.

ಈ ಕೆಳಗಿನ ಸ್ವಿಮ್ಮರ್ಸ್ ಹೈನ ಕೆಲವು ಲಕ್ಷಣಗಳು

*ನಿರಂತರ ಕಿರಿಕಿರಿ

*ಅತಿಯಾಗಿ ನೀರು ಬರುವುದು

*ಕೆಂಪಾಗುವುದು ಮತ್ತು ಉರಿಯ ಭಾವನೆ

*ತುರಿಕೆ

*ತೊಂದರೆ ಮತ್ತು ಮಂದ ದೃಷ್ಟಿ

*ಕಣ್ಣಿನ ರೆಪ್ಪೆಗಳು ಊದಿರುವುದು

*ಕೀವು ಹೋಗುವುದು

Most Read: ಹೆಚ್ಚು ಕಾಲ ನೀರಿನಲ್ಲಿ ಸಮಯ ಕಳೆದರೆ ಹೀಗೂ ಆಗುವುದು..!

ಇದನ್ನು ನಿಭಾಯಿಸುವುದು ಹೇಗೆ?

ಯಾವಾಗಲೂ ಈಜುತ್ತಿರುವಂತಹ ಮಕ್ಕಳ ಕಣ್ಣುಗಳು ಒಣಗಿ ಹೋಗಿರುವುದು. ಯಾಕೆಂದರೆ ಇದು ಕಣ್ಣೀರಿನ ಪೊರೆಯನ್ನು ತುಂಬಾ ತೆಳು ಮಾಡುವುದು ಅಥವಾ ತೆಗೆದುಹಾಕುವುದು. ಈ ಮಕ್ಕಳು ಯಾವಾಗಲೂ ತಮ್ಮ ದೃಷ್ಟಿ ಮಂದವಾಗುತ್ತಿದೆ ಎಂದು ಹೇಳಬಹುದು. ಸ್ವಿಮ್ಮರ್ಸ್ ಹೈ ಸಮಸ್ಯೆಯನ್ನು ತುಂಬಾ ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಇದಕ್ಕಾಗಿ ಸರಿಯಾದ ಆರೈಕೆ ಮತ್ತು ಮನ್ನೆಚ್ಚರಿಕೆ ತೆಗೆದುಕೊಳ್ಳಬೇಕು.

ಮಕ್ಕಳ ಕಣ್ಣುಗಳನ್ನು ತುಂಬಾ ಸುರಕ್ಷಿತವಾಗಿ ಇಡಬೇಕಾದ ವಿಧಾನವೆಂದರೆ ಮಕ್ಕಳಿಗೆ ಈಜುವ ವೇಳೆ ಸರಿಯಾಗಿ ಕನ್ನಡಕ ಧರಿಸಲು ಸೂಚಿಸಬೇಕು. ಇದು ಈಜುವುದಕ್ಕಾಗಿ ಮಾಡಿರುವಂತಹ ಕೆಲವೊಂದು ಕನ್ನಡಕಗಳು ಮಾರುಕಟ್ಟೆಯಲ್ಲಿ ಲಭ್ಯವಾಗುವುದು.

ಮಕ್ಕಳಿಗೆ ಸಿಗುವಂತಹ ಕನ್ನಡಕವು ಕ್ಲೋರಿನ್ ಮತ್ತು ನೀರಿನಲ್ಲಿ ಇರುವಂತಹ ರಾಸಾಯನಿಕಗಳಿಂದ ಮಕ್ಕಳನ್ನು ದೂರವಿಡುವುದು. ಹೆಚ್ಚಿನ ಸುರಕ್ಷತೆಗಾಗಿ ಯುವಿ ಸುರಕ್ಷತೆ ನೀಡುವಂತಹ ಕನ್ನಡಕಗಳನ್ನು ಮಾರುಕಟ್ಟೆಯಿಂದ ಖರೀದಿಸಬಹುದು. ಖಾಸಗಿ ಈಜುಕೊಳ ಹೊಂದಿರುವಂತಹ ಜನರು ನೀರಿನ ಸಮತೋಲನವನ್ನು ಪಿಚ್ ಮಟ್ಟಕ್ಕೆ ಸರಿಯಾಗಿ ಇಡಬೇಕು. ಪಿಎಚ್ ಮಟ್ಟವು 7.0 ಇದ್ದರೆ ಆಗ ಮನುಷ್ಯನ ಕಣ್ಣುಗಳು ನೀರನ್ನು ಸುರಿಸುವುದು. ವೈಜ್ಞಾನಿಕವಾಗಿ ಹೇಳುವುದಾದರೆ ಪಿಎಚ್ ಮಟ್ಟವು ಕಡಿಮೆ ಇದ್ದರೆ ಆಗ ತುರಿಕೆ ಮತ್ತು ಕಿರಿಕಿರಿ ಉಂಟಾಗುವುದು. ಸರಿಯಾದ ಪಿಎಚ್ ಮಟ್ಟವಿದ್ದರೆ ಆಗ ಅದು 7.3ರಿಂದ 7.8 ಇರಬೇಕು.

ನೀರಿನಲ್ಲಿ ಬೆಳಕಿನ ಪ್ರತಿಫಲನವು ಕಾಣಿಸಿಕೊಳ್ಳುವ ಕಾರಣದಿಂದಾಗಿ ಅಲ್ಲಿ ಮಕ್ಕಳು ಸನ್ ಗ್ಲಾಸ್ ಧರಿಸಬೇಕು. ಇದರಿಂದ ಕಣ್ಣುಗಳು ಯುವಿ ಕಿರಣಗಳಿಂದ ರಕ್ಷಣೆ ಪಡೆಯುವುದು ಮತ್ತು ಬಿಸಿಲಿನಿಂದ ಆಗುವಮತಹ ತೊಂದರೆ ತಡೆಯುವುದು.ಹೆಚ್ಚು ನೀರನ್ನು ಕುಡಿದು ತೇವಾಂಶದಿಂದ ಇರುವುದರಿಂದ ಕಣ್ಣಿನ ಆರೋಗ್ಯ ಕಾಪಾಡಬಹುದು. ಸರಿಯಾದ ತೇವಾಂಶವಿದ್ದರೆ ಆಗ ಕಣ್ಣಿನ ಪೊರೆಯು ಆರೋಗ್ಯವಾಗಿ ಇರುವುದು. ಬೇರೆ ದಿನಗಳಿಗಿಂತ ಈಜುಕೊಳಕ್ಕೆ ಹೋಗುವ ದಿನದಂದು ಮಕ್ಕಳು ಹೆಚ್ಚು ನೀರು ಕುಡಿಯಲು ನೀರು ಪ್ರೋತ್ಸಾಹ ನೀಡಿ.

Swimmer’s Eye

ಈ ಪರಿಸ್ಥಿತಿಗೆ ಚಿಕಿತ್ಸೆ ಹೇಗೆ?

*ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೂ ಆಗ ಮಕ್ಕಳು ರಾಸಾಯನಿಕಕ್ಕೆ ಒಗ್ಗಿಕೊಳ್ಳುವುದು ಸಾಮಾನ್ಯ. ಇದಕ್ಕೆ ನೀವು ಚಿಂತೆ ಮಾಡಬಾರದು. ಈ ಸಿಂಡ್ರೋಮ್ ನ್ನು ಸರಳವಾಗಿ ನಿವಾರಣೆ ಮಾಡುವಂತಹ ಕೆಲವೊಂದು ವಿಧಾನಗಳು ಇವೆ.

*ಈಜು ಮುಗಿಸಿಬಂದ ಕೂಡಲೇ ಕಣ್ಣುಗಳನ್ನು ತಣ್ಣೀರಿನಿಂದ ತೊಳೆಯಿರಿ. ಇದರ ಬಳಿಕ ಕಣ್ಣಿನ ಡ್ರಾಪ್ ಹಾಕಿ.

*ತುರಿಕೆ ಮತ್ತು ಕಣ್ಣಿನಲ್ಲಿ ಪದೇ ಪದೇ ಕಿರಿಕಿರಿ ಆಗುತ್ತಲಿದ್ದರೆ ಆಗ ನೀವು ಇದಕ್ಕೆ ತಂಪಾದ ಶಾಖ ನೀಡಬೇಕು. ಇದರಿಂದ ಸಮಸ್ಯೆ ನಿವಾರಣೆ ಆಗುವುದು.ಮಕ್ಕಳ ಕಣ್ಣೀಗೆ ಹೈ ಡ್ರಾಪ್ ಒಳ್ಳೆಯ ಲ್ಯುಬ್ರಿಕೆಂಟ್ ನೀಡುವುದು. ಅದಾಗ್ಯೂ ನೀವು ಮೊದಲು ವೈದ್ಯರನ್ನು ಸಂಪರ್ಕಿಸಿ ಅವರಿಂದ ಸಲಹೆ ಪಡೆಯಿರಿ.

English summary

Know Everything About the Swimmer’s Eye

Come summers and everyone longs for that one refreshing dip in the pool. For kids, it is said to be one of the most effective forms of exercise with several benefits associated with it. It not just a great full body workout but also gives much-needed relief from the scorching heat. However, this fun activity can also pose a great deal of threat to your child if not given extra care. Even though the excessive amount of saline and chlorine is said to be important to keep the water clean, the high level of chemicals can give a tough time to your kid’s sensitive eyes.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X