For Quick Alerts
ALLOW NOTIFICATIONS  
For Daily Alerts

ಬೆಳಗಿನ ಬ್ರೇಕ್ ಫಾಸ್ಟ್‌ಗೆ ಚಿಕನ್ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದೇ?

|

ರಾತ್ರಿಯ ನಿದ್ರೆಯಿಂದ ಎದ್ದ ಬಳಿಕ ನಮ್ಮ ಹೊಟ್ಟೆಯು ಸಂಪೂರ್ಣವಾಗಿ ಖಾಲಿ ಆಗಿರುವುದು. ಈ ಕಾರಣದಿಂದಾಗಿ ಬೆಳಗ್ಗಿನ ಉಪಾಹಾರ ಎನ್ನುವುದು ಅತೀ ಮಹತ್ವದಾಗಿದೆ. ನಮ್ಮ ಸಂಪೂರ್ಣ ದಿನದ ಚಟುವಟಿಕೆಗೆ ದೇಹಕ್ಕೆ ಬೇಕಾಗಿರುವಂತಹ ಪೋಷಕಾಂಶವನ್ನು ಬೆಳಗ್ಗಿನ ಉಪಾಹಾರವು ನೀಡುವುದು. ಇದರಿಂದ ಬೆಳಗ್ಗಿನ ಉಪಾಹಾರವನ್ನು ತಪ್ಪಿಸಬಾರದು ಎಂದು ಹೇಳಲಾಗುತ್ತದೆ. ಆಯಾಯ ಹವಾಮಾನ, ದೇಶ, ರಾಜ್ಯಗಳಿಗೆ ಅನುಗುಣವಾಗಿ ಬೆಳಗ್ಗಿನ ಉಪಾಹಾರದಲ್ಲಿ ಕೂಡ ಬದಲಾವಣೆಗಳು ಆಗುವುದು.

ದಕ್ಷಿಣ ಭಾರತೀಯರು ಬೆಳಗ್ಗಿನ ಉಪಾಹಾರಕ್ಕೆ ಹೆಚ್ಚಾಗಿ ಅಕ್ಕಿಯಿಂದ ಮಾಡಿದಂತಹ ಇಡ್ಲಿ, ದೋಸೆ ಇತ್ಯಾದಿಗಳನ್ನು ಸೇವಿಸಿದರೆ, ಉತ್ತರ ಭಾರತೀಯರು ಚಪಾತಿ, ಪರೋಟಾ ಇತ್ಯಾದಿ ಸೇವಿಸುವರು. ಇನ್ನು ಗಡಿ ದಾಟಿ ವಿದೇಶಕ್ಕೆ ಹೋದರೆ ಅಲ್ಲಿ ಬೆಳಗ್ಗಿನ ಉಪಾಹಾರಕ್ಕೆ ಕೋಳಿ, ಹಂದಿ ಸಾಸೇಜ್ ಇತ್ಯಾದಿಗಳು ಇರುವುದು. ಇದು ಅಲ್ಲಿನ ಭೌಗೋಳಿಕತೆಗೆ ಅನುಗುಣವಾಗಿ ತಿಂದುಕೊಂಡು ಬಂದಿರುವಂತಹ ಆಹಾರವಾಗಿದೆ. ಎಲ್ಲಾ ಉಪಾಹಾರಗಳು ಪೋಷಕಾಂಶಗಳನ್ನು ಹೊಂದಿರುವುದು ಮತ್ತು ಆರೋಗ್ಯವಾಗಿರುವುದು ಮುಖ್ಯ. ಇದರಿಂದ ನಾವು ಎಷ್ಟೇ ಅವಸರದಲ್ಲಿ ಇದ್ದರೂ ಉಪಾಹಾರ ಮಾತ್ರ ಸೇವಿಸಲೇಬೇಕು. ಇದು ದಿನದ ಪ್ರಮುಖ ಆಹಾರ ಎಂದು ಪರಿಗಣಿಸಲಾಗಿದೆ.

breakfast

ಕೆಲವೊಂದು ಸಲ ಉಪಾಹಾರದಲ್ಲಿ ಏನು ತಿನ್ನಬೇಕು ಎನ್ನುವ ಗೊಂದಲವು ಮೂಡುವುದು. ಹೀಗೀಗ ಜಾಹೀರಾತುಗಳಿಗೆ ಮರುಳಾಗಿ ನಾವೆಲ್ಲರೂ ಅತಿಯಾಗಿ ಸಕ್ಕರೆ ಇರುವಂತಹ ಸಿರೇಲ್ ಅಥವಾ ರೆಡಿಮೇಡ್ ಆಗಿರುವಂತಹ ಉಪಾಹಾರವನ್ನು ಎರಡು ಸಲ ಪರೀಕ್ಷೆ ಮಾಡದೆ ನಮ್ಮ ಉಪಾಹಾರ ದಲ್ಲಿ ಅಳವಡಿಸಿಕೊಳ್ಳುತ್ತೇವೆ. ಆದರೆ ಪ್ಯಾಕ್ ಮಾಡಲ್ಪಟ್ಟಿರುವ ಆಹಾರ ಸೇವನೆ ಕಡೆಗಣಿಸಬೇಕು. ಉಪಾಹಾರ ಎನ್ನುವುದು ಯಾವಾಗಲೂ ತುಂಬಾ ತಾಜಾ ಮತ್ತು ಮನೆಯಲ್ಲೇ ತಯಾರಿಸಿರುವುದು ಆಗಿರಬೇಕು. ನೀವು ಮಾಂಸಾಹಾರಿಗಳು ಆಗಿದ್ದರೆ ಆಗ ನೀವು ಕೋಳಿ ಮಾಂಸವನ್ನು ತಿನ್ನಬಹುದು. ಇದು ತುಂಬಾ ಪೋಷಕಾಂಶಗಳನ್ನು ಹೊಂದಿದೆ. ಇದು ತುಂಬಾ ಆರೋಗ್ಯಕಾರಿ ಮಾಂಸ ಮತ್ತು ಯಾವುದೇ ರೂಪದಲ್ಲಿ ಇದನ್ನು ಸೇವಿಸಬಹುದು. ಉಪಾಹಾರದಲ್ಲಿ ಇದರ ಪೋಷಕಾಂಶಗಳು ಸಿಗಬೇಕಾದರೆ ಆಗ ನಾವು ಅದನ್ನು ವಿಶೇಷವಾಗಿ ತಯಾರಿಸಿಕೊಳ್ಳಬೇಕು. ಇದು ಹೇಗೆ ಎಂದು ತಿಳಿಯಲು ಸ್ಕ್ರೋಲ್ ಮಾಡುತ್ತಾ ಹೋಗಿ...

ಕೋಳಿ ಮಾಂಸದ ಅಡುಗೆ ಮಾಡಲು ಸರಿಯಾದ ವಿಧಾನ?

ಕೋಳಿ ಮಾಂಸದ ಅಡುಗೆ ಮಾಡಲು ಸರಿಯಾದ ವಿಧಾನ?

ಚಿಕನ್ ನಲ್ಲಿ ಉನ್ನತ ಮಟ್ಟದ ಒಳ್ಳೆಯ ಕೊಬ್ಬು ಮತ್ತು ಪ್ರೋಟೀನ್ ಲಭ್ಯವಿದೆ ಎಂದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ ಆಗಿದೆ. ಆದರೆ ಇದನ್ನು ನಾವು ನಮಗೆ ಇಷ್ಟ ಬಂದಂತೆ ತಯಾರಿಸಿಕೊಳ್ಳುವಂತಿಲ್ಲ. ನಾವು ಇದನ್ನು ಯಾವ ರೀತಿ ತಯಾರಿಸುತ್ತೇವೆ ಎನ್ನುವುದರ ಮೇಲೆ ಇದರಲ್ಲಿರುವಂತಹ ಕ್ಯಾಲರಿಗಳು ಹೆಚ್ಚು ಅಥವಾ ಕಡಿಮೆ ಆಗುವುದು. ಉಪಾಹಾರಕ್ಕೆ ಇದನ್ನು ಸೇವನೆ ಮಾಡುವಂತಹ ತುಂಬಾ ಆರೋಗ್ಯಕಾರಿ ವಿಧಾನ ಎಂದರೆ ಅದನ್ನು ಬೇಯಿಸಬೇಕು. ಬೇಯಿಸುವುದು ಕೋಳಿ ಮಾಂಸವನ್ನು ತಿನ್ನುವ ಅತ್ಯಂತ ಆರೋಗ್ಯಕಾರಿ ವಿಧಾನವಾಗಿದೆ. ಇದಕ್ಕೆ ಕೇವಲ ಬಿಸಿ ನೀರು ಬೇಕು. ಸ್ವಲ್ಪ ರುಚಿ ಬೇಕಿದ್ದರೆ ಆಗ ನೀವು ಕೋಳಿ ಮಾಂಸವನ್ನು ಗ್ರಿಲ್ ಮಾಡಿಕೊಂಡು ಸೇವಿಸಬಹುದು. ಆಲಿವ್ ತೈಲ ಮತ್ತು ಬೆಣ್ಣೆ ಹಾಕಿಕೊಂಡು ಗ್ರಿಲ್ ಮಾಡಿರುವ ಕೋಳಿ ಮಾಂಸವನ್ನು ಎರಡು ಕಂದು ಬ್ರೆಡ್ ನ ಮಧ್ಯದಲ್ಲಿ ಇಟ್ಟು ಸೇವಿಸಿ. ಕರಿದು ತಿನ್ನುವುದು ಕೂಡ ಒಂದು ವಿಧಾನವಾಗಿದೆ. ಆದರೆ ಇದು ಕೋಳಿ ಮಾಂಸವನ್ನು ತಿನ್ನುವ ಆರೋಗ್ಯಕಾರಿ ವಿಧಾನವಲ್ಲ. ಕೋಳಿ ಮಾಂಸವನ್ನು ಸ್ವಲ್ಪ ತರಕಾರಿಗಳ ಜತೆಗೆ ಸೇರಿಸಿಕೊಂಡು ಬೇಕ್ ಮಾಡಬೇಕು ಮತ್ತು ಅದನ್ನು ಉಪಾಹಾರದ ಜತೆಗೆ ಸೇವಿಸಬೇಕು. ಇದರೊಂದಿಗೆ ಕೊಬ್ಬು ಮುಕ್ತ ಹಾಲು ಅಥವಾ ಸಕ್ಕರೆ ಇಲ್ಲದ ಕಾಫಿ ಸೇವಿಸಿ.

ಉಪಾಹಾರಕ್ಕೆ ಒಳ್ಳೆಯದು ಯಾವುದು?

ಉಪಾಹಾರಕ್ಕೆ ಒಳ್ಳೆಯದು ಯಾವುದು?

ಗ್ರಿಲ್ ಮಾಡಿರುವಂತಹ ಚಿಕನ್ ಬ್ರೆಸ್ಟ್ ಅಥವಾ ಲಿಂಬೆ ಮತ್ತು ಗಿಡಮೂಲಿಕೆಗಳೊಂದಿಗೆ ಸೇವಿಸುವಂತಹ ಚೂರು ಚೂರು ಮಾಡಲ್ಪಟ್ಟ ಕೋಳಿ ಮಾಂಸವು ಉಪಾಹಾರಕ್ಕೆ ಒಳ್ಳೆಯದು. ಅದರಲ್ಲೂ ಇದು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ತುಂಬಾ ಪರಿಣಾಮಕಾರಿ. ಕೋಳಿ ಮಾಂಸದಲ್ಲಿ ಉನ್ನತ ಮಟ್ಟದ ಪ್ರೋಟೀನ್ ಇದೆ ಮತ್ತು ಪ್ರಮುಖವಾದ ಆಮಿನೋ ಆಮ್ಲವಿದೆ. ಇದು ದೇಹದಲ್ಲಿ ಸ್ನಾಯಗಳನ್ನು ರಚಿಸುವುದು ಮತ್ತು ಮೂಳೆಯ ಆರೋಗ್ಯ ಕಾಪಾಡುವುದು. ದೇಹದ ಸರಿಯಾದ ರಚನೆ ಮಾಡಲು ಇದು ನೆರವಾಗುವುದು. ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಚಿಕನ್ ತುಂಬಾ ಒಳ್ಳೆಯದು. ಇದು ತುಂಬಾ ಆರೋಗ್ಯಕಾರಿ ಉಪಾಹಾರ ಆಗಿದೆ. ಯಾಕೆಂದರೆ ಇದರಲ್ಲಿ ಪ್ರಮುಖ ಪ್ರೋಟೀನ್ ಗಳು ಮತ್ತು ಕಾರ್ಬ್ ಇದೆ. ತೂಕ ಸಮತೋಲನದಲ್ಲಿ ಇಡಲು ಇದು ನೆರವಾಗುವುದು. ಇದರ ಹೊರತಾಗಿ ಹೆಚ್ಚು ಸಮಯ ಹೊಟ್ಟೆ ತುಂಬಿದಂತೆ ಮಾಡುವುದು. ಇದರಿಂದ ಪದೇ ಪದೇ ಹಸಿವಾಗುವುದನ್ನು ತಪ್ಪಿಸುವುದು.

Most Read:ಕೋಳಿ VS ಟರ್ಕಿ ಕೋಳಿ ಮಾಂಸ-ಯಾವುದು ಆರೋಗ್ಯಕ್ಕೆ ಆರೋಗ್ಯಕಾರಿ?

ಚಿಕನ್ ನ ಯಾವ ಭಾಗ ಆರೋಗ್ಯಕಾರಿ

ಚಿಕನ್ ನ ಯಾವ ಭಾಗ ಆರೋಗ್ಯಕಾರಿ

ಚಿಕನ್ ನ ಯಾವ ಭಾಗವು ತುಂಬಾ ಆರೋಗ್ಯಕಾರಿ ಎನ್ನುವ ಗೊಂದಲವು ಯಾವಾಗಲು ಕಾಡುತ್ತಲೇ ಇರುತ್ತದೆ. ಅಡುಗೆ ಮಾಡುವಾಗ ಕಡಿಮೆ ಎಣ್ಣೆ ಬಳಸಿಕೊಂಡರೆ, ಆಗ ಚಿಕನ್ ಯಾವಾಗಲೂ ಆರೋಗ್ಯಕಾರಿ ಆಗಿಯೇ ಇರುವುದು ಎಂದು ಹೇಳಲಾಗುತ್ತದೆ. ಆದರೆ ಇದು ನಿಜವಲ್ಲ. ಚಿಕನ್ ತುಂಬಾ ತೆಳು ಮಾಂಸ ಆಗಿರುವ ಕಾರಣದಿಂದಾಗಿ, ಯಾವುದೇ ಭಾಗವನ್ನು ತಿಂದರೂ ಅದು ತುಂಬಾ ಆರೋಗ್ಯಕಾರಿ ಆಗಿರಲಿದೆ ಎಂದು ನಾವೆಲ್ಲರೂ ಭಾವಿಸಿಕೊಂಡಿದ್ದೇವೆ. ಯಾವಾಗಲೂ ಚಿಕನ್ ಬ್ರೆಸ್ಟ್ ಸೇವಿಸಿ ಮತ್ತು ಸಂಸ್ಕರಿಸಿದ ಅಥವಾ ಪ್ಯಾಕ್ ಮಾಡಲ್ಪಟ್ಟಿರುವಂತಹ ಯಾವುದೇ ರೀತಿಯ ಮಾಂಸವನ್ನು ಖರೀದಿ ಮಾಡಬೇಡಿ ಮತ್ತು ಸೇವಿಸಬೇಡಿ. ಕಡು ಮಾಂಸಕ್ಕಿಂತ ಬಿಳಿ ಮಾಂಸದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇರುವುದು ಎಂದು ನಾವೆಲ್ಲರೂ ತಿಳಿದುಕೊಂಡಿರಬೇಕು. ಬೆಳಗ್ಗಿನ ಉಪಾಹಾರಕ್ಕೆ ನಾವು ತಿನ್ನಬಹುದಾದ ಚಿಕನ್ ನ ಆರೋಗ್ಯಕಾರಿ ಭಾಗವೆಂದರೆ ಅದು ಚಿಕನ್ ಬ್ರೆಸ್ಟ್. ಉಪಾಹಾರಕ್ಕೆ ರೆಕ್ಕೆ ಭಾಗ ಮತ್ತು ಕಾಲಿನ ಭಾಗದ ಸೇವನೆಗೆ ಸಲಹೆ ಮಾಡುವುದಿಲ್ಲ. ಈ ಭಾಗದಲ್ಲಿ ಸ್ವಲ್ಪ ಮಟ್ಟಿನ ಪೂರ್ತಿ ಆರ್ದ್ರವಾದ ಕೊಬ್ಬು ಇರುವುದು. ಈಗ ನಿಮಗೆ ಚಿಕನ್ ನ ಯಾವ ಭಾಗ ಖರೀದಿ ಮಾಡಬೇಕು ಮತ್ತು ಉಪಾಹಾರಕ್ಕೆ ಯಾವುದನ್ನು ಸೇವಿಸಬೇಕು ಎಂದು ತಿಳಿಯಿತು ತಾನೇ. ಪ್ರತಿನಿತ್ಯ ಚಿಕನ್ ಸೇವನೆಯಿಂದ ಸಿಗುವಂತಹ ಲಾಭಗಳು ಏನು ಎಂದು ತಿಳಿಯಿರಿ.

ಪ್ರೋಟೀನ್ ಅಧಿಕವಾಗಿದೆ

ಪ್ರೋಟೀನ್ ಅಧಿಕವಾಗಿದೆ

ಚಿಕನ್ ನಲ್ಲಿ ಪ್ರೋಟೀನ್ ಮಟ್ಟವು ಅಧಿಕವಾಗಿದೆ. ಬೇಕ್ ಮಾಡಿದ, ರೋಸ್ಟ್, ಗ್ರಿಲ್ ಅಥವಾ ಬೇಯಿಸಿದ ಕೋಳಿ ಮಾಂಸವನ್ನು ಬೆಳಗ್ಗೆ ತಿಂದರೆ ತುಂಬಾ ಒಳ್ಳೆಯದು. ಇದು ದೇಹದಕ್ಕೆ ಶಕ್ತಿ ನೀಡುವುದು ಮತ್ತು ನೀವು ಆ ದಿನದ ದೈಹಿಕ ಕಾರ್ಯಗಳನ್ನು ಸರಾಗವಾಗಿ ಮಾಡಬಹುದು. ಪ್ರೋಟೀನ್ ಸ್ನಾಯುಗಳನ್ನು ಶಕ್ತಿಶಾಲಿ ಮಾಡುವುದು. ಸ್ನಾಯುಗಳ ರಚನೆ ಮತ್ತು ಅದರ ಅಂಗಾಂಶಗಳು ಹಾನಿಗೀಡಾದಾಗ ಅದನ್ನು ಸರಿಪಡಿಸಲು ಬೇಕಾಗಿರುವಂತಹ ಅಮಿನೋ ಆಮ್ಲವು ಕೋಳಿ ಮಾಂಸದಲ್ಲಿ ಇದೆ.

ಚಯಾಪಚಯ ಕ್ರಿಯೆಗೆ ಒಳ್ಳೆಯದು

ಚಯಾಪಚಯ ಕ್ರಿಯೆಗೆ ಒಳ್ಳೆಯದು

ಚಿಕನ್ ತಿನ್ನುವುದರಿಂದ ದೇಹಕ್ಕೆ ಶಕ್ತಿ ಮಾತ್ರ ಸಿಗುವುದಲ್ಲ, ಇದರಿಂದ ಸಂಪೂರ್ಣ ಚಯಾಪಚಯ ಕ್ರಿಯೆಯು ಬಲ ಪಡೆಯುವುದು. ಕೋಳಿ ಮಾಂಸದಲ್ಲಿ ಇರುವಂತಹ ಹಲವಾರು ರೀತಿಯ ವಿಟಮಿನ್ ಗಳು ಖನಿಜಾಂಸಗಳು ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಬಲಿಷ್ಠಗೊಳಿಸಲು ನೆರವಾಗುವುದು. ಕೋಳಿ ಮಾಂಸ ಸೇವನೆ ಮಾಡುವುದರಿಂದ ರಕ್ತದೊತ್ತಡವನ್ನು ಸರಿಯಾಗಿ ಇಟ್ಟುಕೊಳ್ಳಬಹುದು ಮತ್ತು ಹೃದಯದ ಕಾಯಿಲೆಯಿಂದ ಇದು ತಡೆಯುವುದು.

Most Read: ಅಚ್ಚರಿ ಜಗತ್ತು: ತಲೆ ಇಲ್ಲದೆ 18 ತಿಂಗಳು ಬದುಕುಳಿದ ಕೋಳಿ!

ವಿಟಮಿನ್ ಗಳಿಂದ ಸಮೃದ್ಧವಾಗಿದೆ

ವಿಟಮಿನ್ ಗಳಿಂದ ಸಮೃದ್ಧವಾಗಿದೆ

ಚಿಕನ್ ನಲ್ಲಿ ಹಲವಾರು ರೀತಿಯ ವಿಟಮಿನ್ ಗಳು ತುಂಬಿಕೊಂಡಿದೆ. ಮುಖ್ಯವಾಗಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಡಿ ಮತ್ತು ಕೆಲವು ಪ್ರಮುಖ ಖನಿಜಾಂಶಗಳು ಆಗಿರುವಂತಹ ಕಬ್ಬಿನಾಂಶ, ಕಾಬ್ರೋಹೈಡ್ರೇಟ್ಸ್ ಮತ್ತು ಪೋಸ್ಪರಸ್ ಇದೆ. ವಿಟಮಿನ್ ಎ ಕಣ್ಣಿನ ದೃಷ್ಟಿ ಸುಧಾರಣೆ ಗೆ ನೆರವಾಗುವುದು. ಅದೇ ಪೋಸ್ಪರಸ್ ಮೆದುಳಿನ ಕಾರ್ಯಗಳು ಸುಗಮವಾಗಲು ನೆರವಾಗುವುದು. ವಿಟಮಿನ್ ಡಿಯು ಕ್ಯಾಲ್ಸಿಯಂನ್ನು ಹೀರಿಕೊಳ್ಳಲು ನೆರವಾಗುವುದು ಮತ್ತು ನಿಶ್ಯಕ್ತಿ ಹೋಗಲಾಡಿಸುವುದು.

ಮನಸ್ಥಿತಿ ಉತ್ತಮ ಪಡಿಸುವ ಆಹಾರ

ಮನಸ್ಥಿತಿ ಉತ್ತಮ ಪಡಿಸುವ ಆಹಾರ

ಹೆಚ್ಚಿನ ಮಾಂಸಾಹಾರಿಗಳು ಚಿಕನ್ ನ್ನು ಇಷ್ಟಪಡುವರು. ಇದು ಸೆರೊಟೊನಿನ್ ಎನ್ನುವ ಪ್ರಮುಖ ರಾಸಾಯನಿಕವನ್ನು ಉತ್ಪತ್ತಿ ಮಾಡುವುದು. ಇದು ಖಿನ್ನತೆ ಹೋಗಲಾಡಿಸಲು ಅತೀ ಅಗತ್ಯವಾಗಿ ಬೇಕು. ದೇಹದಲ್ಲಿ ಸೆರೊಟೊನಿನ್ ಮಟ್ಟವು ಕಡಿಮೆ ಆದರೆ ಆಗ ಖಿನ್ನತೆ ಕಾಡುವುದು. ಇದರಿಂದ ಚಿಕನ್ ಸೇವನೆ ಮಾಡುವುದು ಕೆಲವು ಜನರ ಮನಸ್ಥಿತಿ ಸುಧಾರಣೆ ಮಾಡುವುದು. ಖಿನ್ನತೆ ಹೋಗಲಾಡಿಸಲು ಇದು ಪ್ರಮುಖ ಆಹಾರವಾಗಿದೆ. ಇದರಿಂದ ನಿಮಗೆ ತುಂಬಾ ಬೋರ್ ಅಥವಾ ಖಿನ್ನತೆ ಕಾಡಿದರೆ, ಚಿಕನ್ ನ್ನು ಬಿಂದಾಸ್ ಆಗಿ ತಿನ್ನಿ.

English summary

Is it healthy to eat chicken for breakfast?

We all know how important it is to have a healthy breakfast in the morning, no matter how busy we are, breakfast is something which should be unavoidable. It is considered as the most important meal of the day,but we often get confused about what should be eaten in the morning.Sometimes we get convinced by the advertisements and binge eat sugary cereals or ready-to-cook foods without double-checking theirs contents. But it is not always advisable to consume packaged items.
X
Desktop Bottom Promotion