For Quick Alerts
ALLOW NOTIFICATIONS  
For Daily Alerts

ಊಟದ ಬಳಿಕ ಜ್ಯೂಸ್ ಕುಡಿಯಬೇಕೇ ಅಥವಾ ಮಜ್ಜಿಗೆ ಕುಡಿಯುವುದು ಒಳ್ಳೆಯದೇ?

|

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಹಾಲು ಹಾಗೂ ಹಾಲಿನ ಪ್ರತಿಯೊಂದು ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಸಿಗುವಂತಹ ಹಾಲು, ಮೊಸರು ಹಾಗೂ ಮಜ್ಜಿಗೆಯಲ್ಲಿ ಯಾವುದೇ ರೀತಿಯ ಕಲಬೆರಕೆ ಇಲ್ಲದೆ ಇರುವ ಕಾರಣದಿಂದಾಗಿ ಅದರಿಂದ ದೇಹವು ಹೆಚ್ಚಿನ ಪೋಷಕಾಂಶಗಳನ್ನು ಪಡೆಯುತ್ತದೆ. ಹಾಲು ಹಾಗೂ ಮೊಸರಿನಂತೆ ಮಜ್ಜಿಗೆ ಕೂಡ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಮನೆಯಲ್ಲೂ ಒಂದು ಸಲವಾದರೂ ಮಜ್ಜಿಗೆ ಕುಡಿಯುತ್ತಾರೆ.

ಇನ್ನು ಹಣ್ಣಿನ ಜ್ಯೂಸ್ ಬಗ್ಗೆ ಹೇಳುವುದಾದರೆ, ಜ್ಯೂಸ್ ಗೆ ಬಳಸುವ ಹಣ್ಣು ತಾಜಾ ಇದೆಯೋ ಇಲ್ಲವೋ, ಕೊಳೆತಿದ್ದನ್ನೆಲ್ಲಾ ಗೊಟಾಯಿಸಿ ಕೊಟ್ಟಿದ್ದಾರೋ (ಹೆಚ್ಚಿನ ಹಣ್ಣಿನ ಅಂಗಡಿಗಳಲ್ಲಿ ತಾಜಾ ಇರುವುದನ್ನು ಗಿರಾಕಿಗೆ ಕಾಣುವ ತರಹ ಇಟ್ಟು ರಸ ತೆಗೆಯುವಾಗ ಬೇರಾವುದೋ ಹಳೆಯ, ಧಕ್ಕೆ ಬಂದಿರುವ ಅರ್ಧ ಹಾಳಾದ ಭಾಗವನ್ನು ತುಂಡರಿಸಿ ಉಳಿದರ್ಧ ಭಾಗವನ್ನೇ ರಸಹಿಂಡಿ ಚೆನ್ನಾಗಿ ಸಕ್ಕರೆ ಸೇರಿಸಿ ಸುಂದರವಾದ ಗಾಜಿನ ಬಾಟಲಿಯಲ್ಲಿ ಹಾಕಿ ಕೊಡುತ್ತಾರೆ) ಆದರೆ ಆಹಾರ ಪರಿಣಿತರ ಪ್ರಕಾರ ದೇಹಕ್ಕೆ ದ್ರವದ ಅಗತ್ಯವನ್ನು ನೀರು ಹಾಗೂ ಮಜ್ಜಿಗೆಗಿಂತ ಚೆನ್ನಾಗಿ ಪೂರೈಸುವ ದ್ರವ ಈ ಜಗತ್ತಿನಲ್ಲಿಯೇ ಇಲ್ಲ. ಆದರೆ ಪ್ರಶ್ನೆ ಇರುವುದೇ ಇಲ್ಲಿ, ಉಪಾಹಾರ ಅಥವಾ ಮಧ್ಯಾಹ್ನದ ಊಟದ ಬಳಿಕ ಹಣ್ಣಿನ ಜ್ಯೂಸ್ ಸೇವಿಸಬೇಕೇ ಅಥವಾ ಮಜ್ಜಿಗೆ ಸೇವಿಸಬೇಕೇ? ಇದಕ್ಕೆ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.. ಮುಂದೆ ಓದಿ

ಮಧ್ಯಾಹ್ನ ಅಥವಾ ರಾತ್ರಿ ಊಟದ ಮಧ್ಯೆ ಅಥವಾ ಊಟವಾದ ಬಳಿಕ ಜ್ಯೂಸ್ ಅಥವಾ ಮಜ್ಜಿಗೆ ಕುಡಿಯಬಹುದೇ?

ಮಧ್ಯಾಹ್ನ ಅಥವಾ ರಾತ್ರಿ ಊಟದ ಮಧ್ಯೆ ಅಥವಾ ಊಟವಾದ ಬಳಿಕ ಜ್ಯೂಸ್ ಅಥವಾ ಮಜ್ಜಿಗೆ ಕುಡಿಯಬಹುದೇ?

ಊಟದ ಬಳಿಕ ಲಿಂಬೆ ಜ್ಯೂಸ್ ಅಥವಾ ಮಜ್ಜಿಗೆಯನ್ನು ಉಪಾಹಾರ ಮತ್ತು ಊಟದ ಬಳಿಕ ಸೇವಿಸಬಹುದು. ಲಿಂಬೆ ಜ್ಯೂಸ್ ಜೀರ್ಣಕ್ರಿಯೆಯನ್ನು ವೇಗಗೊಳಿಸುವುದು. ಮಜ್ಜಿಗೆಯಲ್ಲಿ ಇರುವಂತಹ ಕೆಲವೊಂದು ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಗೆ ಸಹಕಾರಿಯಾಗಿ ಇರುವುದು.

ಪಾನೀಯಗಳು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದೇ?

ಪಾನೀಯಗಳು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದೇ?

ಲಿಂಬೆ ಜ್ಯೂಸ್ ಮತ್ತು ಮಜ್ಜಿಗೆಯು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ವೇಗಗೊಳಿಸುವುದು. ಆದರೆ ಕೆಲವೊಂದು ಪಾನೀಯಗಳು ಊಟದ ಬಳಿಕ ಕುಡಿದರೆ ಅದರಿಂದ ಜೀರ್ಣ ಕ್ರಿಯೆ ವ್ಯವಸ್ಥೆಗೆ ತೊಂದರೆ ಆಗುವುದು. ಕೃತಕ ಪಾನೀಯಗಳನ್ನು ನೀವು ಉಪಾಹಾರ ಮತ್ತು ಊಟದ ಬಳಿಕ ಸೇವನೆ ಮಾಡುವುದನ್ನು ಕಡೆಗಣಿಸಬೇಕು.

Most Read:ಹೊಟ್ಟೆಯ ತೊಂದರೆಗಳನ್ನು ಸರಿಪಡಿಸಲು ಹೆಣಗಾಡಬೇಕಾಗಿಲ್ಲ, ಇದಕ್ಕೆ ಚಿಕಿತ್ಸೆ ಅಡುಗೆ ಮನೆಯಲ್ಲಿಯೇ ಇದೆ!

ಪಾನೀಯಗಳು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದೇ?

ಪಾನೀಯಗಳು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದೇ?

ಯಾವ ಪಾನೀಯವನ್ನು ಊಟದೊಂದಿಗೆ ಸೇವಿಸಬಹುದು. ಅದರಲ್ಲೂ ಮುಖ್ಯವಾಗಿ ಉಪಾಹಾರದ ವೇಳೆ. ಯಾಕೆಂದರೆ ಬೇಸಿಗೆಯಲ್ಲಿ ಹೆಚ್ಚಿನ ಜನರು ಉಪಾಹಾರದೊಂದಿಗೆ ಏನಾದರೂ ತಂಪಾಗಿರುವುದನ್ನು ಬಯಸುವರು. ಬೇಸಿಗೆಯಲ್ಲಿ ಮಜ್ಜಿಗೆಯು ಸೇವಿಸಬಹುದಾದ ಅತ್ಯುತ್ತಮ ಪಾನೀಯವಾಗಿದೆ. ನಿಮ್ಮ ಆಹಾರದೊಂದಿಗೆ ಮಜ್ಜಿಗೆ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ಯಾವ ರೀತಿಯ ಲಾಭಗಳು ಸಿಗಲಿದೆ ಎಂದು ಈ ಕೆಳಗೆ ಹೇಳಲಾಗಿದೆ.

1.ಮಜ್ಜಿಗೆಯಲ್ಲಿ ಕೆಲವೊಂದು ನೈಸರ್ಗಿಕ ಅಂಶಗಳು ಇವೆ ಮತ್ತು ಇದು ಹೊಟ್ಟೆಯನ್ನು ಶುದ್ಧ ಮಾಡುವುದು ಮತ್ತು ಜೀರ್ಣಕ್ರಿಯೆ ಪ್ರಕ್ರಿಯೆಗೆ

ವೇಗ ನೀಡುವುದು.

2.ಮಜ್ಜಿಗೆಯು ಬೇಸಿಗೆಗೆ ಹೇಳಿ ಮಾಡಿಸಿರುವಂತಹ ಪಾನೀಯವಾಗಿದೆ. ಯಾಕೆಂದರೆ ಇದು ದೇಹದ ಉಷ್ಣತೆ ಕಡಿಮೆ ಮಾಡುವುದು.

3.ದೇಹದಲ್ಲಿ ಇದು ನೀರಿನಾಂಶವನ್ನು ಹೆಚ್ಚು ಮಾಡುವ ಕಾರಣದಿಂದಾಗಿ ನಿರ್ಜಲೀಕರಣಕ್ಕೆ ಹೇಳಿ ಮಾಡಿಸಿದ ಮದ್ದಾಗಿದೆ.

4.ಮಜ್ಜಿಗೆಯಲ್ಲಿ ವಿದ್ಯುದ್ವಿಚ್ಛೇದಗಳು ಇವೆ ಮತ್ತು ಇದು ಅಲ್ಸರ್ ನ್ನು ನಿವಾರಣೆ ಮಾಡುವುದು.

5.ಮಜ್ಜಿಗೆಯನ್ನು ವಿಟಮಿನ್ ಬಿ12 ಸಮೃದ್ಧವಾಗಿದೆ.

ಪಾನೀಯಗಳು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದೇ?

ಪಾನೀಯಗಳು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದೇ?

ಆಹಾರ ಸೇವನೆ ವೇಳೆ ನೀರನ್ನು ಕುಡಿಯದೆ ಇರುವುದು ಕೂಡ ತಪ್ಪು. ಯಾಕೆಂದರೆ ಆಹಾರವು ಹೊಟ್ಟೆಗೆ ಸರಿಯಾಗಿ ಸಾಗಲು ಅನ್ನನಾಳಕ್ಕೆ ಸರಿಯಾದ ತೇವಾಂಶವು ಬೇಕಾಗಿರುವುದು. ಇದರಿಂದಾಗಿ ನೀವು ಆಹಾರದ ಮಧ್ಯೆ ಸ್ವಲ್ಪ ನೀರನ್ನು ಸೇವಿಸಿದರೆ ಅದು ಒಳ್ಳೆಯದು. ಅದಾಗ್ಯೂ, ನಾವು ಸೇವಿಸುತ್ತಾ ಇರುವಂತಹ ಆಹಾರವು ತುಂಬಾ ಖಾರ ಅಥವಾ ಉಪ್ಪು ಹೆಚ್ಚಾಗಿದ್ದರೆ ಆಗ ನಾವು ನೀರು ಕುಡಿಯಲು ಹಂಬಲಿಸುತ್ತೇವೆ. ಹೀಗೆ ನೀರು ಕುಡಿಯುವ ಕಾರಣದಿಂದಾಗಿ ಗಂಟಲು ಮತ್ತು ಅನ್ನನಾಳ ಮತ್ತು ಹೊಟ್ಟೆಯು ತುಂಬಾ ಆರಾಮ ಮತ್ತು ಶಮನವಾಗುವುದು. ಬೇಸಿಗೆ ಕಾಲದಲ್ಲಿ ದಾಹವು ಅತಿಯಾಗುವ ಕಾರಣದಿಂದಾಗಿ ನೀವು ದಾಹ ತಣಿಸಲು, ತುಂಬಾ ನೀರಿರುವ ಮಜ್ಜಿಗೆಗೆ ಸ್ವಲ್ಪ ಉಪ್ಪು, ಒಂದು ತುಂಡು ಶುಂಠಿ, ಕರಿಬೇವಿನ ಎಲೆಗಳು ಮತ್ತು ಹಸಿ ಮೆಣಸು ಹಾಕಿಕೊಂಡು ಸೇವಿಸಬೇಕು. ನಿಮಗೆ ಅಗತ್ಯವೆಂದು ಅನಿಸಿದರೆ ಕೆಲವು ಹನಿ ಲಿಂಬೆ ರಸ ಹಾಕಿಕೊಳ್ಳಬಹುದು. ಇದನ್ನು ನೀವು ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ವೇಳೆ ಸೇವಿಸಬಹುದು. ಇದನ್ನು ನೀವು ಫ್ರಿಡ್ಜ್ ನಲ್ಲಿ ಇಡದೆ ಮತ್ತು ಐಸ್ ಹಾಕದೆ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಆದರೆ ನಿಮಗೆ ಫ್ರಿಡ್ಜ್ ನಲ್ಲಿ ಇರುವಂತಹ ಪಾನೀಯಗಳನ್ನೇ ಕುಡಿದು ಅಭ್ಯಾಸವಾಗಿದ್ದರೆ ಆಗ ನೀವು ಮಜ್ಜಿಗೆಯನ್ನು ಕೂಡ ತಂಪು ಮಾಡಿ ಕುಡಿಯಬಹುದು.

ಮಜ್ಜಿಗೆಯ ಪ್ರಯೋಜನಗಳು

ಮಜ್ಜಿಗೆಯ ಪ್ರಯೋಜನಗಳು

ಮಜ್ಜಿಗೆಯು ಹಲವಾರು ರೀತಿಯ ಒಳ್ಳೆಯ ಪರಿಣಾಮವನ್ನು ನೀಡುವುದು. ಇದು ಹೊಟ್ಟೆ ಹಾಗೂ ಬಾಯಿಯಲ್ಲಿ ಇರುವಂತಹ ಅಲ್ಸರ್ ನ್ನು ಶಮನ ಮಾಡುವುದು ಮತ್ತು ನಿವಾರಿಸುವುದು. ಇದು ದಾಹ ತಣಿಸುವುದು ಮತ್ತು ಹಸಿವನ್ನು ಕೂಡ ಕಡಿಮೆ ಮಾಡುವುದು. ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುವುದು. ಆಹಾರದೊಂದಿಗೆ ನೀವು ಇದರ ಸೇವನೆ ಮಾಡಿದರೆ, ಆಗ ಅತಿಯಾಗಿ ತಿನ್ನುವುದು ತಪ್ಪುವುದು. ಇದರಿಂದಾಗಿ ನಿಮಗೆ ತೂಕ ಕಾಪಾಡಿಕೊಳ್ಳಲು ಸಾಧ್ಯವಾಗುವುದು. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಇದನ್ನು ತೆಳು ಅಥವಾ ದಪ್ಪ ಮಾಡಿಕೊಂಡು ಕುಡಿಯ ಬಹುದು. ಆದರೆ ದಾಹ ತಣಿಸಲು ನೀವು ತೆಳುವಾಗಿರುವಂತಹ

ಮಜ್ಜಿಗೆ ಸೇವನೆ ಮಾಡಿದರೆ ತುಂಬಾ ಒಳ್ಳೆಯದು

ಮಜ್ಜಿಗೆ ಸೇವನೆ ಮಾಡಿದರೆ ತುಂಬಾ ಒಳ್ಳೆಯದು

ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿ ಇಡುವುದು ತುಂಬಾ ಅಗತ್ಯವಾಗಿದೆ. ದಾಹ ತಣಿಸಲು ಮತ್ತು ದೇಹವನ್ನು ತೇವಾಂಶ ದಿಂದ ಇಡಲು ನೀವು ದಿನದಲ್ಲಿ ಹಲವಾರು ಸಲ ಜ್ಯೂಸ್ ಮೊರೆ ಹೋಗಬಹುದು. ಇದಕ್ಕಾಗಿ ನೀವು ಪ್ಯಾಕ್ ಮಾಡಿದ ಜ್ಯೂಸ್ ಗಿಂತಲೂ ತಾಜಾವಾಗಿ ತಯಾರಿಸಲ್ಪಟ್ಟಿರುವಂತಹ ಜ್ಯೂಸ್ ಕುಡಿದರೆ ತುಂಬಾ ಒಳ್ಳೆಯದು. ನಿಮಗೆ ಸೈನಸ್ ಸಮಸ್ಯೆ ಇದ್ದರೆ ಆಗ ನೀವು ಅತಿಯಾಗಿ ಜ್ಯೂಸ್ ಕುಡಿಯಬಾರದು. ಇದರಿಂದ ನಿಮಗೆ ಶೀತ ಕಾಡಬಹುದು.

Most Read:ನೀವು ಕುಡಿಯಬೇಕಾದ ಅತ್ಯಂತ ಆರೋಗ್ಯಕರ 5 ಹಣ್ಣಿನ ಜ್ಯೂಸ್‌ಗಳು

ಮಜ್ಜಿಗೆ ಸೇವನೆ ಮಾಡಿದರೆ ತುಂಬಾ ಒಳ್ಳೆಯದು

ಮಜ್ಜಿಗೆ ಸೇವನೆ ಮಾಡಿದರೆ ತುಂಬಾ ಒಳ್ಳೆಯದು

ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಸಲು ಮಜ್ಜಿಗೆ ತುಂಬಾ ಉಪಯುಕ್ತ ಪಾನೀಯವಾಗಿದೆ. ದೇಹಕ್ಕೆ ಬೇಕಾಗಿರುವಂತಹ ಕೆಲವೊಂದು ಪ್ರಮುಖ ಖನಿಜಾಂಶಗಳು ಮಜ್ಜಿಗೆಯಿಂದ ನಮಗೆ ಸಿಗುವುದು. ಇದು ದೇಹದ ತಾಪಮಾನವನ್ನು ಕಾಪಾಡುವುದು ಮತ್ತು ದೇಹವನ್ನು ತಂಪಾಗಿ ಇಡುವುದು. ಶೀತ ಬರದಂತೆ ತಡೆಯಲು ನೀವು ಮಜ್ಜಿಗೆಗೆ ಸಾಸಿವೆ ಕಾಳು, ಶುಂಠಿ, ಕರಿಬೇವಿನ ಎಲೆ ಮತ್ತು ಕೆಲವು ತುಂಡು ಹಸಿ ಮೆಣಸು ಹಾಕಿ. ಮಜ್ಜಿಗೆಯು ಹೊಟ್ಟೆಯಲ್ಲಿ ಅಸಿಡಿಟಿ ಕಡಿಮೆ ಮಾಡುವುದು ಮತ್ತು ಅಲ್ಸರ್ ನ್ನು ಕೂಡ ನಿವಾರಣೆ ಮಾಡುವುದು.

ಮಜ್ಜಿಗೆ ಸೇವನೆ ಮಾಡಿದರೆ ತುಂಬಾ ಒಳ್ಳೆಯದು

ಮಜ್ಜಿಗೆ ಸೇವನೆ ಮಾಡಿದರೆ ತುಂಬಾ ಒಳ್ಳೆಯದು

ಇದು ದೇಹಕ್ಕೆ ಪ್ರತಿರೋಧಕ ಶಕ್ತಿ ನೀಡುವುದು ಮತ್ತು ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ಪ್ರತಿಕಾಯಗಳನ್ನು ಉತ್ಪತ್ತಿ ಮಾಡಲು ನೆರವಾಗುವುದು. ನೀವು ಊಟವಾದ ಬಳಿಕ ಕೆಲವೊಂದು ರೀತಿಯ ಜ್ಯೂಸ್ ನ್ನು ಕುಡಿಯಬಹುದು. ಅದರಲ್ಲಿ ಮುಖ್ಯವಾಗಿ ಲಿಂಬೆ ಜ್ಯೂಸ್ ಅಥವಾ ಕಿತ್ತಳೆ ಜ್ಯೂಸ್ ಇತ್ಯಾದಿ. ಇದು ಆಹಾರವನ್ನು ಸರಿಯಾಗಿ ಜೀರ್ಣ ಮಾಡಲು ನೆರವಾಗುವುದು ಮತ್ತು ಊಟದ ಬಳಿಕ ಮಜ್ಜಿಗೆ ಕುಡಿಯುವುದು ಕೂಡ ತುಂಬಾ ಲಾಭಕಾರಿ. ಊಟವಾದ ಬಳಿಕ ನೀವು ತುಂಬಾ ಭಾರದ ಪಾನೀಯವಾಗಿರುವಂತಹ ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿದೆ. ಇದರಿಂದ ಮಲಬದ್ಧತೆ ಮತ್ತು ಅಸಿಡಿಟಿ ಉಂಟಾಗುವುದು.

English summary

Is it good to drink juice or buttermilk after meals or not?

Wondering whether it is ok to have juice or lassi after breakfast or a meal? Get expert feedback from the responses in this thread.We all know that it is not advisable to drink water in-between or after meals, But what about other drinks? Can we drink juice or buttermilk (lassi) in-between or after breakfast and/or lunch? Do these drinks also affect digestion process? Which drinks can be consumed with meals, especially breakfast, as I like to have something cold on summer mornings?
Story first published: Tuesday, March 26, 2019, 13:09 [IST]
X
Desktop Bottom Promotion