Latest Updates
-
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು!
ಸಪಾಟಾದ ಹೊಟ್ಟೆ ಪಡೆಯಲು, ಇಂತಹ ಪ್ರೋಟೀನ್‌ಯುಕ್ತ ಆಹಾರಗಳನ್ನು ಡಯಟ್‌ನಲ್ಲಿ ಸೇರಿಸಿಕೊಳ್ಳಿ
ಪ್ರೋಟೀನ್ ವ್ಯಕ್ತಿಯೊಬ್ಬನ ಚಯಾಪಚಯವನ್ನು ವೃದ್ಧಿಸಲು ಪ್ರೋಟೀನ ಅತೀ ಅಗತ್ಯವಾಗಿರುವುದು. ತೂಕ ಕಡಿಮೆ ಮಾಡಿಕೊಂಡು ಹೊಟ್ಟೆಯನ್ನು ಕರಗಿಸಬೇಕು ಎಂದಿರುವಂತಹ ಜನರಿಗೆ ಪ್ರೋಟೀನ್ ಮುಖ್ಯವಾಗಿರುವುದು. ಅಧ್ಯಯನಗಳ ಪ್ರಕಾರ ಅಧಿಕ ಪ್ರೋಟೀನ್ ಸೇವಿಸಿದರೆ ಆಗ ಬಿಎಂಐ ಕಡಿಮೆ ಆಗುತ್ತದೆ ಮತ್ತು ಸೊಂಟ ಕೂಡ ಎಂದು ಹೇಳಲಾಗಿದೆ. ತೂಕ ಇಳಿಸಿಕೊಂಡು ಫಿಟ್ ಆಗಿರಲು ಸ್ನಾಯುಗಳ ಮಾಂಸವನ್ನು ಕಾಪಾಡಿಕೊಂಡು ಪ್ರೋಟೀನ್ ಇರುವಂತಹ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುವುದು ಅತೀ ಅಗತ್ಯವಾಗಿ ಇರುತ್ತದೆ. ವ್ಯಾಯಾವು ಹೆಚ್ಚಾಗುತ್ತಾ ಹೋದಂತೆ ಆಗ ಅಧಿಕ ಮಟ್ಟದ ಪ್ರೋಟೀನ್ ಬೇಕಾಗುತ್ತದೆ ಮತ್ತು ಇದಕ್ಕಾಗಿ ಪ್ರೋಟೀನ್ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳಬೇಕು. ಇದರೊಂದಿಗೆ ಹೊಟ್ಟೆ ಕರಗಿಸಲು ನೀವು ಕೆಲವೊಂದು ಪ್ರೋಟೀನ್ ಇರುವಂತಹ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಒಳ್ಳೆಯದು. ಆ ಆಹಾರಗಳು ಯಾವುದು ಎಂದು ನೀವು ಇಲ್ಲಿ ತಿಳಿಯಿರಿ.

ಕೋಳಿ ಮಾಂಸ
ಪ್ರೋಟೀನ್ ಅದ್ಭುತ ಮೂಲವಾಗಿರುವಂತಹ ಕೋಳಿಮಾಂಸವನ್ನು ಚರ್ಮರಹಿತವಾಗಿ ತಿಂದರೆ ತೂಕ ಕಳೆದುಕೊಳ್ಳಲು ಸಹಕಾರಿ. ಇದು ತೂಕ ಹೆಚ್ಚಿಗೆ ಮಾಡದೆ ತೂಕ ಇಳಿಸುವಂತೆ ಮಾಡುವುದು. ಚರ್ಮರಹಿತವಾಗಿರುವ ಕೋಳಿ ಮಾಂಸವನ್ನು ಸೇವನೆ ಮಾಡಬೇಕು. ಯಾಕೆಂದರೆ ಇದರಲ್ಲಿ ಕೊಬ್ಬು ಇರುವುದಿಲ್ಲ. ಕೋಳಿ ಚರ್ಮದಲ್ಲಿ ಇರುವಂತಹ ಕೊಬ್ಬನ್ನು ಅನಾರೋಗ್ಯಕರವಾದ ಕೊಬ್ಬು ಎಂದು ಹೇಳಲಾಗುತ್ತದೆ. ಬೇಯಿಸಿ ಅಥವಾ ಗ್ರಿಲ್ ಮಾಡಿಕೊಂಡು ಚರ್ಮ ರಹಿತ ಕೋಳಿ ಮಾಂಸವನ್ನು ಸೇವಿಸಿ. ಸ್ವಲ್ಪ ಎಣ್ಣೆಯನ್ನು ಇದಕ್ಕೆ ಚಿಮುಕಿಸಿ.
ಮೊಟ್ಟೆಯ ಬಿಳಿಭಾಗ
ತೂಕ ಇಳಿಸಲು ಬಯಸುತ್ತಿರುವಂತಹ ಜನರು ಮೊಟ್ಟೆಯ ಬಿಳಿಭಾಗವನ್ನು ಬೆಳಗ್ಗಿನ ಉಪಾಹಾರಕ್ಕೆ ಸೇವಿಸಬೇಕು. ಇದು ಹೊಟ್ಟೆಯು ತುಂಬಿದಂತೆ ಮಾಡುವುದು ಮತ್ತು ಅತಿಯಾಗಿ ತಿನ್ನುವುದನ್ನು ಇದು ಕಡಿಮೆ ಮಾಡುವುದು. ಮೊಟ್ಟೆಯ ಬಿಳಿ ಭಾಗದಲ್ಲಿ ಹೆಚ್ಚಿನ ಮಟ್ಟದ ಶಕ್ತಿ ಇದೆ. ಇದು ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅತೀ ಅಗತ್ಯವಾಗಿದೆ. ಇದು ಮೂಳೆಗಳನ್ನು ಬಲಗೊಳಿಸುವುದು, ದೇಹದ ಒಳಗಿನ ಶಮನಕಾರಿ ಪ್ರಕ್ರಿಯೆ ವೇಗಗೊಳಿಸುವುದು ಮತ್ತು ದೇಹಕ್ಕೆ ಶಕ್ತಿ ನೀಡುವುದು. ಮೊಟ್ಟೆಯ ಬಿಳಿಭಾಗದ ಆಮ್ಲೆಟ್, ಬ್ರೌನ್ ಬ್ರೆಡ್ ಮತ್ತು ತಾಜಾ ಹಣ್ಣಿನ ಜ್ಯೂಸ್ ಉಪಾಹಾರಕ್ಕೆ ಒಳ್ಳೆಯದು.
ಸಮುದ್ರಾಹಾರ
ಒಮೆಗಾ-3 ಕೊಬ್ಬಿನಾಮ್ಲದಿಂದ ಸಮೃದ್ಧವಾಗಿರುವಂತಹ ಸಮುದ್ರಾಹಾರವು ಮೊಟ್ಟೆ ಮತ್ತು ಕೋಳಿಗೆ ಪರ್ಯಾಯವಾಗಿದೆ. ಇದರಲ್ಲಿ ಕೊಬ್ಬು ಕಡಿಮೆ ಇದ್ದು, ದೇಹದ ತೂಕ ಇಳಿಸಿಕೊಂಡು ಹೊಟ್ಟೆ ಕರಗಿಸಬೇಕು ಎಂದಿರುವವರಿಗೆ ಇದು ಅತ್ಯುತ್ತಮ ಆಹಾರವಾಗಿದೆ. ತಾಜಾ ಮೀನು ಅಥವಾ ಸಾಲ್ಮನ್ ಗೆ ಸ್ವಲ್ಪ ಆಲಿವ್ ತೈಲ ಹಾಕಿದರೆ ಅದು ಅದ್ಭುವಾದ ಆಹಾರವಾಗಿರುವುದು. ಸಮುದ್ರಾಹಾರದಲ್ಲಿರುವಂತಹ ಪೋಷಕಾಂಶಗಳು ಕಣ್ಣು ಮತ್ತು ಹೃದಯದ ಆರೋಗ್ಯವನ್ನು ಕಾಪಾಡುವುದು. ಸಮುದ್ರಾಹಾರವು ಕ್ಯಾಲರಿ ದಹಿಸುವಂತೆ ಮಾಡುತ್ತದೆ ಮತ್ತು ದೇಹದಲ್ಲಿ ರಕ್ತಸಂಚಾರವು ಸರಾಗವಾಗಲು ನೆರವಾಗುವುದು.
ಸೋಯಾ
ತೂಕ ಕಳೆದುಕೊಳ್ಳಬೇಕು ಎಂದು ಬಯಸುತ್ತಿರುವವರಿಗೆ ಸೋಯಾ ಅದ್ಭುತವಾದ ಆಹಾರವಾಗಿದೆ ಮತ್ತು ಇದು ಹೊಟ್ಟೆಯ ಕೊಬ್ಬನ್ನು ಕರಗಿಸುವುದು. ಇದು ಸಸ್ಯಾಹಾರಿಗಳಿಗೆ ತುಂಬಾ ಒಳ್ಳೆಯದು ಮತ್ತು ದೇಹಕ್ಕೆ ಬೇಕಾಗಿರುವ ಪ್ರೋಟೀನ್ ಒದಗಿಸುವುದು. ಸೋಯಾ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೆರವಾಗುವುದು ಮತ್ತು ಒಳ್ಳೆಯದ ಕೊಲೆಸ್ಟ್ರಾಲ್ ನ್ನು ವೃದ್ಧಿಸುವುದು.
ಬೀಜಗಳು
ಕೆಲವೊಂದು ಸಲ ನಮಗೆಲ್ಲರಿಗೂ ತುಂಬಾ ಸಲ ಹಸಿವು ಕಾಡುವುದು ಇದೆ. ಈ ವೇಳೆ ಬೀಜಗಳನ್ನು ತಿಂದರೆ ಅದರಿಂದ ಹಸಿವು ನಿಯಂತ್ರಿಸಬಹುದು. ಹೊಟ್ಟೆ ಕರಗಿಸಬೇಕು ಎಂದಿದ್ದರೆ ಆಗ ನೀವು ಅಗತ್ಯವಾಗಿ ತಿನ್ನದೆ ಇರುವುದು ಅತೀ ಅಗತ್ಯವಾಗಿರುವುದು ಮತ್ತು ನಿಮ್ಮ ಆಹಾರ ಕ್ರಮದ ಮೇಲೆ ನಿಗಾ ಇಡಬೇಕು. ಟ್ರಾಫಿಕ್ ನಲ್ಲಿ ಸಿಲುಕಿದ್ದ ವೇಳೆ ನಿಮಗೆ ಏನಾದರೂ ತಿನ್ನಬೇಕು ಎಂದಿದ್ದರೆ ಆಗ ಬೀಜವು ಅತ್ಯುತ್ತಮ ಪರ್ಯಾಯವಾಗಿದೆ. ಒಂದು ಹಿಡಿಯಷ್ಟು ಬೀಜಗಳನ್ನು ತಿಂದರೆ ಅದರಿಂದ ದೇಹಕ್ಕೆ ಹೆಚ್ಚಿನ ಕೊಬ್ಬು ಕೂಡ ಸಿಗಬಹುದು. ಅದಾಗ್ಯೂ ಸಂಸ್ಕರಿತ ಮತ್ತು ಸಕ್ಕರೆಯಲ್ಲಿ ಅದ್ದಿರುವ ಬೀಜಗಳನ್ನು ಕಡೆಗಣಿಸಬೇಕು. ಇದು ಕ್ಯಾಲರಿಯನ್ನು ಹೆಚ್ಚಿಸುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
