For Quick Alerts
ALLOW NOTIFICATIONS  
For Daily Alerts

ಹೈಪೋಸ್ಮಿಯಾ: ಕಾರಣಗಳು, ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ

|

ಮೂಗಿನ ಪ್ರಮುಖ ಕಾರ್ಯಗಳೆಂದರೆ ಉಸಿರಾಟದ ವಾಯುವಿನ ದ್ವಾರವಾಗುವುದು ಮತ್ತು ವಾಸನೆಯ ಗ್ರಹಿಕೆ. ಒಂದು ವೇಳೆ ವಾಸನೆಯ ಗ್ರಹಣ ಶಕ್ತಿ ಕುಂದಿದರೆ ಈ ತೊಂದರೆಗೆ ಹೈಪೋಸ್ಮಿಯಾ (Hyposmia)ಅಥವಾ ಮೈಕ್ರೋಸ್ಮಿಯಾ (microsmia)ಎಂದು ಕರೆಯಲಾಗುತ್ತದೆ. ಘ್ರಾಣಶಕ್ತಿ ಸಂಪೂರ್ಣವಾಗಿ ಇಲ್ಲವಾದರೆ anosmiaಎಂದು ಕರೆಯಲಾಗುತ್ತದೆ. ಈ ತೊಂದರೆ ಇರುವ ವ್ಯಕ್ತಿಗಳ ಪ್ರಂಚೇಂದ್ರಿಯಗಳಲ್ಲಿ ಘ್ರಾಣಶಕ್ತಿ ಇರುವುದಿಲ್ಲ. ಸಾಮಾನ್ಯವಾಗಿ ಈ ತೊಂದರೆ ಕೆಲವು ಬಗೆಯ ಅಲರ್ಜಿ, ಮೂಗಿನ ಒಳಭಾಗದ ಅಸಹಜ ಬೆಳವಣಿಗೆ (microsmia),ತಲೆಗೆ ಬಿದ್ದ ಪೆಟ್ಟು ಅಥವಾ ವೈರಸ್ ನ ಸೋಂಕು ಕಾರಣವಾಗಿರುತ್ತವೆ.

ಕೆಲವು ಸಂದರ್ಭಗಳಲ್ಲಿ ಹೈಪೋಸ್ಮಿಯಾ ಎದುರಾದರೆ ಇದು ಮುಂದೆ ಬರಬಹುದಾದ ಸ್ಮರಣಶಕ್ತಿಗುಂದುವ ಪಾರ್ಕಿನ್ಸನ್ ಕಾಯಿಲೆ ಎದುರಾಗುವ ಕಾಯಿಲೆಯ ಮುಸ್ನೂಚನೆ ಎಂದೂ ಪರಿಗಣಿಸಬಹುದು. ಒಂದು ವೇಳೆ ವ್ಯಕ್ತಿಯೊಬ್ಬರಿಗೆ ಈ ತೊಂದರೆ ಇಡಿಯ ಜೀವಮಾನ ಕಾಡಿದರೆ ಈ ಸ್ಥಿತಿಗೆ ಕ್ಯಾಲ್ಮನ್ನ್ ಸಿಂಡ್ರೋಮ್ (Kallmann syndrome)ಎಂದು ಕರೆಯಲಾಗುತ್ತದೆ. ಈ ಕಾಯಿಲೆಯ ಲಕ್ಷಣಗಳು, ಕಾರಣಗಳು, ಚಿಕಿತ್ಸೆ ಮೊದಲಾದ ವಿವರಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.

ಹೈಪೋಸ್ಮಿಯಾ ಎಂದರೇನು?

ಒಂದು ವೇಳೆ ವ್ಯಕ್ತಿಯ ಘ್ರಾಣ ಶಕ್ತಿ ಭಾಗಶಃ ಅಥವಾ ಪೂರ್ಣವಾಗಿ ಇಲ್ಲವಾದರೆ ಈ ಸ್ಥಿತಿಗೆ ಹೈಪೋಸ್ಮಿಯಾ ಎಂದು ಕರೆಯುತ್ತಾರೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಮಾನವರ ಘ್ರಾಣವ್ಯವಸ್ಥೆ (human olfactory system)ಸುಮಾರು ಹತ್ತು ಸಾವಿರದಿಂದ ನೂರು ಬಿಲಿಯನ್ ನಷ್ಟು ಭಿನ್ನವಾದ ವಾಸನೆಗಳನ್ನು ಗ್ರಹಿಸುವ ಸಾಮರ್ಥ್ಯ ಪಡೆದಿರುತ್ತದೆ. ಈ ಸ್ಥಿತಿ ಇರುವ ಲಕ್ಷಣವೆಂದರೆ ಕೆಲವು ಬಗೆಯ ವಾಸನೆಗಳನ್ನು ಅಥವಾ ಯಾವುದೇ ಬಗೆಯ ವಾಸನೆಯನ್ನು ಘ್ರಾಣಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವುದು. ನಮ್ಮ ಪಂಚೇಂದ್ರಿಯಗಳಲ್ಲಿ ವಾಸನೆಯ ಶಕ್ತಿಯ ಅಗತ್ಯತೆ ಪ್ರಮುಖವಾಗಿ ಸುರಕ್ಷಾ ಕಾರಣಗಳಿಗಾಗಿ ಇದೆ. ಏಕೆಂದರೆ ಕೆಲವಾರು ಅಪಾಯಗಳ ಸೂಚನೆಗಳು ಗಾಳಿಯಲ್ಲಿ ವಾಸನೆಯ ರೂಪದಲ್ಲಿ ತೇಲಿಬರುತ್ತವೆ. ಉದಾಹರಣೆಗೆ ಗ್ಯಾಸ್, ಹೊಗೆ, ಹಾಳಾದ ಆಹಾರ ಇತ್ಯಾದಿ.

ಹೈಪೋಸ್ಮಿಯಾ ಕಾಯಿಲೆಗೆ ಕಾರಣಗಳು

*ಈ ಸ್ಥಿತಿ ಎದುರಾಗಲು ಕೆಲವು ಪ್ರಮುಖ ಕಾರಣಗಳೆಂದರೆ:

*ತಲೆಗೆ ಬಿದ್ದ ಗಂಭೀರ ರೂಪದ ಏಟು, ಗಾಯ

*ಕೆಲವು ಬಗೆಯ ಅಲರ್ಜಿಗಳು

*ರಸದೂತಗಳ ಮಟ್ಟದ ಅಸಮತೋಲನ

*ಹಲ್ಲಿನ ತೊಂದರೆ

*ಕೆಲವು ಬಗೆಯ ಸೋಂಕುಗಳು (ಉದಾಹರಣೆಗೆ ಫ್ಲೂ)

*ಮೂಗಿನ ಒಳಭಾಗದಲ್ಲಿ ಬೆಳೆದ ಅಸಹಜ ಬೆಳವಣಿಗೆ (Polyps in the nose)

*ಕುಹರ ಅಥವಾ ಸೈನಸ್ ನ ಗಂಭೀರತರದ ತೊಂದರೆ.

*ಕೆಲವು ಬಗೆಯ ಚಿಕಿತ್ಸೆಗಳೂ ಘ್ರಾಣಶಕ್ತಿಯ ಮೇಲೆ ಪರಿಣಾಮ ಬೀರಬಹುದು, ಇವುಗಳಲ್ಲಿ ಪ್ರಮುಖವಾದವು ಎಂದರೆ:

*ಪ್ರತಿಜೀವಕ ಔಷಧಿಗಳು (ಆಂಪಿಸಿಲ್ಲಿನ್ ಮತ್ತು ಟೆಟ್ರಾಸೈಕ್ಲಿನ್)

*ಖಿನ್ನತಾನಿವಾರಕ ಔಷಧಿಗಳು (antidepressants,ಉದಾಹರಣೆಗೆ amitriptyline)

*ಅಲರ್ಜಿ ನಿವಾರಕ ಔಷಧಿಗಳು (Antihistamines,ಉದಾಹರಣೆಗೆ loratadine)

ಹೈಪೋಸ್ಮಿಯಾ ಎದುರಾಗುವ ಕೆಲವು ಚಿಕಿತ್ಸೆಗಳು:

*ವಿಕಿರಣ ಚಿಕಿತ್ಸೆ ( Radiation treatment)

*ಕೆಲವು ಬಗೆಯ ರಾಸಾಯನಿಕಗಳನ್ನು ದೀರ್ಘಾವಧಿಗೆ ಬಳಸುವುದು

*ತಂಬಾಕು ಸೇವನೆ ಮತ್ತು ಧೂಮಪಾನ

Most Read: ಅಪೆಂಡಿಸೈಟಿಸ್: ಕಾರಣಗಳು, ಲಕ್ಷಣಗಳು, ಪತ್ತೆಹಚ್ಚುವಿಕೆ ಹಾಗೂ ಚಿಕಿತ್ಸೆ

ಹೈಪೋಸ್ಮಿಯಾ ಪತ್ತೆಹಚ್ಚುವಿಕೆ

ಒಂದು ವೇಳೆ ನಿಮಗೆ ಯಾವುದಾದರೊಂದು ಬಗೆಯ ವಾಸನೆ ಮೊದಲಿನಷ್ಟು ಸಮರ್ಥವಾಗಿ ಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದರೆ ನೀವಾಗಿಯೇ ಯಾವುದೇ ಔಷಧಿಗಳನ್ನು ಪ್ರಯತ್ನಿಸದೇ ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕು. ವೈದ್ಯರು ಈ ಸ್ಥಿತಿಗೆ ಕಾರಣವನ್ನು

ಹುಡುಕಲು ಮೊದಲಾಗಿ ಈ ಕೆಳಗಿನ ಪ್ರಶ್ನೆಗಳನ್ನು ಕೇಳುತ್ತಾರೆ:

 • ರೋಗಿ ಯಾವುದಾದರೂ ಔಷಧಿಯನ್ನು ಸೇವಿಸುತ್ತಿದ್ದಾನೆಯೇ
 • ರೋಗಿಗೆ ಆಹಾರದ ರುಚಿಯನ್ನು ಗ್ರಹಿಸಲು ಸಾಧ್ಯವೇ?
 • ರೋಗಿಗೆ ಕೆಲವು ಆಹಾರಗಳ ವಾಸನೆಗಳನ್ನು ಗ್ರಹಿಸಲು ಸಾಧ್ಯವಾಗುತ್ತಿದ್ದು ಕೆಲವು ಮಾತ್ರ ಸಾಧ್ಯವಾಗುತ್ತಿಲ್ಲವೇ?
 • ರೋಗಿಯ ಅನುಭವಕ್ಕೆ ಬರುವ ಇತರ ಲಕ್ಷಣಗಳೇನಾದರೂ ಇದೆಯೇ
 • ರೋಗಿಗೆ ಇತ್ತೀಚಿಗೆ ಯಾವುದಾದರೂ ಅಲರ್ಜಿ ಇರುವುದು ಗಮನಕ್ಕೆ ಬಂದಿತ್ತೇ?
 • ಇತ್ತೀಚೆಗೆ ಫ್ಲೂ ಮಾದರಿಯ ಜ್ವರದ ಯಾವುದಾದರೂ ಸೋಂಕು ಕಂಡುಬಂದಿತ್ತೇ?

ಈ ಪ್ರಶ್ನೆಗಳ ಜೊತೆಗೇ ರೋಗಿಯ ವೈದ್ಯಕೀಯ ಇತಿಹಾಸವನ್ನೂ ವೈದ್ಯರು ಪಡೆದುಕೊಳ್ಳಬಹುದು.ಬಳಿಕ ಮೂಗಿನ ಒಳಭಾಗವನ್ನು ಪರಿಶೀಲಿಸಿ ಇಲ್ಲೆಲ್ಲಾದರೂ ಅಥವಾ ವಾಯುಮಾರ್ಗದಲ್ಲೇನಾದರೂ ಅಸಹಜವಾದುದು ಕಾಣುತ್ತಿದೆಯೇ ಎಂದು ಪರಿಶೀಲಿಸುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ವೈದ್ಯರು ಈ ಕೆಳಗಿನ ಪರೀಕ್ಷೆಗಳನ್ನು ನಡೆಸಲು ಸಲಹೆ ಮಾಡಬಹುದು:

 • MRIಸ್ಕ್ಯಾನ್
 • CTಸ್ಕ್ಯಾನ
 • ಮೂಗಿನ ಎಕ್ಸ್ ರೇ (X-ray Nasal endoscopy) ಈ ಪರೀಕ್ಷೆಯಲ್ಲಿ ಸೂಕ್ಷ್ಮವಾದ ನಳಿಕೆಯ ತುದಿಯಲ್ಲಿ ಅತಿಚಿಕ್ಕ ಕ್ಯಾಮೆರಾವೊಂದನ್ನು ಅಳವಡಿಸಿ ಮೂಗಿನ ಒಳಭಾಗದ ಚಿತ್ರವನ್ನು ಪರದೆಯಲ್ಲಿ ವೀಕ್ಷಿಸಲಾಗುತ್ತದೆ.
 • ಸ್ಕ್ರ್ಯಾಚ್ ಅಂಡ್ ಸ್ನಿಫ್ ಪರೀಕ್ಷೆ (scratch-and-sniff test)

ಈ ಪರೀಕ್ಷೆಗಳ ಮೂಲಕ ವೈದ್ಯರಿಗೆ ರೋಗಿ ಹೈಪೋಸ್ಮಿಯಾ ಹೊಂದಿದ್ದಾನೋ ಅಥವಾ ಅನೋಸ್ಮಿಯಾ ಹೊಂದಿದ್ದಾನೋ ಎಂದು ತಿಳಿದುಬರುತ್ತದೆ. ಒಂದು ವೇಳೆ ಹೈಪೋಸ್ಮಿಯಾ ಹೊಂದಿದ್ದರೆ ಘ್ರಾಣಶಕ್ತಿ ಎಷ್ಟು ಮಟ್ಟಿಗೆ ಕುಂದಿದೆ ಎಂದು ಈ ಪರೀಕ್ಷೆಗಳಿಂದ ತಿಳಿದುಬರುತ್ತದೆ. ಹಾಗೂ ಮೂಗಿನ ಒಳಭಾಗದ ರಚನೆಯಲ್ಲಿ ಆಗಿರುವ ಬದಲಾವಣೆ, ಅಸಹಜ ಬೆಳವಣಿಗೆ ಅಥವಾ ವಾಯುಮಾರ್ಗಕ್ಕೆ ಅಡ್ಡಿಯಾಗಿರುವ ಬೇರಾವುದೋ ಅಡಚಣೆ ಇದ್ದರೆ ತಿಳಿದುಬರುತ್ತದೆ. ಅಷ್ಟೇ ಅಲ್ಲ, ಈ ಪರೀಕ್ಷೆಗಳ ಮೂಲಕ ಒಂದು ವೇಳೆ ಮೆದುಳಿನಲ್ಲಿ ಯಾವುದಾದರೂ ಗಡ್ಡೆ ಬೆಳೆಯುತ್ತದೆಯೇ, ಈ ಮೂಲಕ ಮೆದುಳು ಘ್ರಾಣಶಕ್ತಿಯನ್ನು ಗ್ರಹಿಸುವ ಸಾಮರ್ಥ ಕಳೆದುಕೊಂಡಿದೆಯೇ ಎಂದೂ ತಿಳಿದುಕೊಳ್ಳಬಹುದು.

ಹೈಪೋಸ್ಮಿಯಾ ಕಾಯಿಲೆಗೆ ಚಿಕಿತ್ಸೆ

ಈ ತೊಂದರೆಗೆ ಚಿಕಿತ್ಸೆಯಾಗಿ ವೈದ್ಯರು ಕೆಲವಾರು ಔಷಧಿಗಳನ್ನು ಸೇವಿಸಲು ಸಲಹೆ ಮಾಡಬಹುದು. ಒಂದು ವೇಳೆ ಅಸಹಜ ಬೆಳವಣಿಗೆಯಿಂದ ಈ ತೊಂದರೆ ಎದುರಾಗಿದ್ದರೆ ಶಸ್ತ್ರಚಿಕಿತ್ಸೆ ಹಾಗೂ ಸಂದರ್ಭಕ್ಕೆ ಸೂಕ್ತವಾಗುವ ಚಿಕಿತ್ಸೆಯನ್ನು ಸೂಚಿಸಬಹುದು. ಈ ಕೆಳಕಂಡ ಸ್ಥಿತಿಗಳು ಪತ್ತೆಯಾದರೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ:

 • ಮೂಗಿನ ಒಳಭಾಗದಲ್ಲಿ ಬೆಳೆದ ಅಸಹಜ ಬೆಳವಣಿಗೆ (Nasal polyps)
 • ಮೂಗಿನೊಳಗಿನ ವಾಯುಮಾರ್ಗ ಡೊಂಕಾಗಿರುವುದು (deviated septum)
 • ಇತರ ಯಾವುದೇ ಬಗೆಯ ಅಸಹಜತೆ
 • ಒಂದು ವೇಳೆ ಅಲರ್ಜಿ ಅಥವಾ ಮೂಗಿನ ಒಳಗೆ ಎದುರಾಗುವ ಸೋಂಕಿನಿಂದ ಉರಿಯೂತವುಂಟಾಗಿದ್ದರೆ ಇದನ್ನು ಗುಣಪಡಿಸಲು ಸ್ಟೆರಾಯ್ಡುಗಳು ಮತ್ತು ಅಲರ್ಜಿನಿವಾರಕ ಔಷಧಿಗಳನ್ನು ನೀಡಲಾಗುತ್ತದೆ.

ಹೈಪೋಸ್ಮಿಯಾ ಎದುರಾಗದಂತೆ ತಡೆಯುವ ಕ್ರಮಗಳು

ಈ ಸ್ಥಿತಿ ಬರದಂತೆ ತಡೆಯಲು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.ಆದರೆ ಈ ಸ್ಥಿತಿಯನ್ನು ಪ್ರಚೋದಿಸುವ ಕಾರಣಗಳ ಬಗ್ಗೆ ಅರಿತು ಎಚ್ಚರಿಕೆ ವಹಿಸಬೇಕು.ಪ್ರತಿಯೊಬ್ಬರೂ ತಮಗೆ ಆವರಿಸುವ ಶೀತ ಅಥವಾ ಬ್ಯಾಕ್ಟೀರಿಯಾಗಳ ಸೋಂಕಿನ ಬಗ್ಗೆ ಎಚ್ಚರ ವಹಿಸಬೇಕು. ಇದಕ್ಕಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ದಿನದ ಅವಧಿಯಲ್ಲಿ ಹಲವಾರು ಬಾರಿ ಕೈಗಳನ್ನು ತೊಳೆದುಕೊಂಡು ಒರೆಸಿಕೊಳ್ಳಬೇಕು. ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹಲವು ವ್ಯಕ್ತಿಗಳು ಸ್ಪರ್ಷಿಸುವ ವಸ್ತುಗಳನ್ನು ಸ್ಪರ್ಶಿಸಿದ ಬಳಿಕ ತಪ್ಪದೇ ಕೈಗಳನ್ನು ತೊಳೆದುಕೊಳ್ಳಬೇಕು. ಫ್ಲೂ ಇರುವ ವ್ಯಕ್ತಿಗಳಿಂದ ಸಾಕಷ್ಟು ದೂರವಿರಬೇಕು. ಒಂದು ವೇಳೆ ನೀವು ಬೇರೆ ಯಾವುದಾದರೂ ಕಾಯಿಲೆಗೆ ಔಷಧಿಗಳನ್ನು ಸೇವಿಸುತ್ತಿದ್ದರೆ ಇವುಗಳ ಅಡ್ಡಪರಿಣಾಮಗಳನ್ನು ಅರಿತುಕೊಂಡಿದ್ದರೆ ಒಳ್ಳೆಯದು. ಸಾಮಾನ್ಯವಾಗಿ, ಔಷಧಿಗಳ ಪೊಟ್ಟಣಗಳ ಒಳಗೆ ಈ ಔಷಧಿಯ ವಿವರಗಳಿರುವ ಕಾಗದದಲ್ಲಿಯೇ ಅಡ್ಡ ಪರಿಣಾಮಗಳ ಬಗ್ಗೆಯೂ ಬರೆದಿರಲಾಗಿರುತ್ತದೆ. ನಿಮ್ಮ ಔಷಧಿಯ ವಿವರಗಳಲ್ಲಿ ನೀಡಿರುವ ಅಡ್ಡ ಪರಿಣಾಮಗಳಲ್ಲಿ ಘ್ರಾಣಶಕ್ತಿ ಉಡುಗುವ ಬಗ್ಗೆ ಉಲ್ಲೇಖವಿದೆಯೇ ಪರಿಶೀಲಿಸಿ.

Most Read: ಅಡುಗೆ ಮಾಡುವಾಗ ಚರ್ಮ ಸುಟ್ಟುಕೊಂಡಿದ್ದೀರಾ ? ಇಲ್ಲಿವೆ ಎಮರ್ಜೆನ್ಸಿ ಟಿಪ್ಸ್

ಅಂತಿಮವಾಗಿ, ಹೈಪೋಸ್ಮಿಯಾ ಇರುವ ವ್ಯಕ್ತಿಗಳು ಕೈಗೊಳ್ಳಬೇಕಾದ ಎಚ್ಚರಿಕೆಗಳು

ಈ ವ್ಯಕ್ತಿಗಳಿಗೆ ಘ್ರಾಣಶಕ್ತಿ ಉಡುಗಿರುವ ಕಾರಣ ಈ ವ್ಯಕ್ತಿಗಳು ವಾಸಿಸುವ ಸ್ಥಳದಲ್ಲಿ ಕಾರ್ಬನ್ ಮಾನಾಕ್ಸೈಡ್ ಮತ್ತು ಹೊಗೆಯನ್ನು ಘ್ರಾಣಿಸುವ ಅಲಾರಾಂ ಉಪಕರಣಗಳನ್ನು (carbon monoxide and smoke alarms)ಅಳವಡಿಸಬೇಕು. ಅಲ್ಲದೇ ಈ ವ್ಯಕ್ತಿಗಳು ಗೃಹಬಳಕೆಯ ವಿಷಕಾರಿ ವಸ್ತುಗಳಿರುವ ಉಪಕರಣಗಳನ್ನು ಉಪಯೋಗಿಸುವಾಗ ಸಾಕಷ್ಟು ಮುಂಜಾಗ್ರತೆ ವಹಿಸಬೇಕು (ಉದಾಹರಣೆಗೆ ಜಿರಳೆ ನಿವಾರಣ ಔಷಧಿ). ಆಹಾರವಸ್ತುಗಳನ್ನು ಸೇವಿಸುವ ಮುನ್ನ ಇದರ ಮೇಲೆ ಮುದ್ರಿತವಾಗಿರುವ ಅಂತಿಮ ದಿನಾಂಕ (ಎಕ್ಸ್ಪೈರಿ ಡೇಟ್) ಪರಿಶೀಲಿಸಿಯೇ ಸೇವಿಸಬೇಕು.

English summary

Hyposmia: Causes, Diagnosis And Treatment

When a person loses all or part of their sense of smell, then the condition is known as hyposmia. According to research study data, the human olfactory system (which governs the sense of smell) can detect between 10,000 and 100 billion different odours. The only symptom of this condition is the partial or complete loss of the sense of smell.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X