For Quick Alerts
ALLOW NOTIFICATIONS  
For Daily Alerts

ಟ್ಯುಬೆರ್ ಕ್ಯುಲೋಸಿಸ್ ಇದ್ದರೆ ಅಣಬೆ ತಿಂದು ಗುಣ ಪಡಿಸಿಕೊಳ್ಳಿ

|

ಮಳೆಗಾಲ ಶುರುವಾಯಿತೆಂದರೆ ಹಣಬೆಗಳದ್ದೇ ಕಾರುಬಾರು . ರಸ್ತೆಯ ಇಕ್ಕೆಲಗಳಲ್ಲಿ ಎತ್ತ ನೋಡಿದರೂ ಅತ್ತ ಮಣ್ಣಿನ ಮೇಲೆ ಸಣ್ಣ ಸಣ್ಣ ಕೊಡೆಯಾಕಾರದಲ್ಲಿ ನೋಡಲು ಸುಂದರವಾಗಿ ಕಾಣುವ ಅಣಬೆ ವಿವಿಧ ಗಾತ್ರದಲ್ಲಿ ಬೆಳೆದಿರುತ್ತವೆ . ಇವು ತಿನ್ನಲು ಸಹ ಬಲು ರುಚಿ . ಬಗೆ ಬಗೆಯ ಖಾದ್ಯಗಳಿಗೆ ಅಣಬೆ ಸಾಕ್ಷಿಯಾಗುತ್ತದೆ . ಕರಿದ ಮಶ್ರೂಮ್ ಮಂಚೂರಿ ಕೂಡ ಇದಕ್ಕೆ ಒಳ್ಳೆಯ ಉದಾಹರಣೆ .

ಅಣಬೆ ಮತ್ತು ಟಿ . ಬಿ

ಅಣಬೆ ಕೇವಲ ತಿನ್ನಲು ರುಚಿ ಎಂದು ತಿನ್ನುವುದರ ಜೊತೆಗೆ ಅದರಲ್ಲಿರುವ ಆರೋಗ್ಯಕ್ಕೆ ಉಪಯುಕ್ತವಾದ ಮಾಹಿತಿಯನ್ನು ಕಲೆ ಹಾಕೋಣ . ಹಣಬೆಯಲ್ಲಿರುವ ಕೆಲವು ಅಂಶಗಳು ಆರೋಗ್ಯಕ್ಕೆ ಬಹಳ ಸಹಕಾರಿ . ಅದರಲ್ಲೂ ಬಿಸಿಲಲ್ಲಿ ಒಣಗಿಸಿದ ಒಯ್ಸ್ಟರ್ ಮಶ್ರೂಮ್ ಟ್ಯೂಬರ್ಕ್ಯುಲೋಸಿಸ್ ಗೆ ರಾಮ ಬಾಣ ಎಂದು ನಂಬಲಾಗಿದೆ . ಇದೆಲ್ಲಾ ಹೇಗೆ ಏನು ಎಂದು ತಿಳಿಯುವ ಮೊದಲು ಟ್ಯೂಬರ್ಕ್ಯುಲೋಸಿಸ್ ( ಟಿ . ಬಿ . ) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ .

Tuberculosis

ಟ್ಯುಬೆರ್ ಕ್ಯುಲೋಸಿಸ್ ಅಂದರೆ ಟಿ . ಬಿ . ಯ ಬಗ್ಗೆ ಒಂದು ಕಿರು ನೋಟ

ಟ್ಯೂಬರ್ಕ್ಯುಲೋಸಿಸ್ ಒಂದು ದೀರ್ಘಕಾಲಿಕ ಕಾಯಿಲೆ ಯಾಗಿದ್ದು , ಶ್ವಾಸಕೋಶಗಳಿಗೆ ಮೊದಲು ತೊಂದರೆ ಉಂಟು ಮಾಡುತ್ತದೆ . " ಮೈಕೋ ಬ್ಯಾಕ್ಟೇರಿಯಂ ಟ್ಯುಬೆರ್ ಕ್ಯುಲೋಸಿಸ್ ಬ್ಯಾಕ್ಟೇರಿಯಂ " ಎಂಬ ಬ್ಯಾಕ್ಟೇರಿಯಾ ಟ್ಯುಬೆರ್ ಕ್ಯುಲೋಸಿಸ್ ಗೆ ಕಾರಣವಾಗುತ್ತದೆ . ಟಿ . ಬಿ . ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಗಾಳಿಯ ಮುಖಾಂತರ ತನ್ನ ಸುತ್ತಮುತ್ತ ಇರುವ ಇತರರಿಗೂ ಹರಡುತ್ತದೆ . ವಿಪರೀತ ಕೆಮ್ಮು ಬಹಳ ಕಾಲದಿಂದ ಆ ವ್ಯಕ್ತಿಯನ್ನು ಬಳಲಿಸುತ್ತಿದ್ದರೆ ಜೊತೆಗೆ ಕಫ ಹೆಚ್ಚಾಗಿದ್ದರೆ ಅದು ಟಿ . ಬಿ . ಇದ್ದರೂ ಇರಬಹುದು ಎಂದು ವೈದ್ಯರು ಕಫ ಪರೀಕ್ಷೆಗೆ ಬರೆದು ಕೊಡುತ್ತಾರೆ . ಈಗ ಅನೇಕ ಸರ್ಕಾರೀ ಆಸ್ಪತ್ರೆಗಳಲ್ಲಿ ಉಚಿತವಾಗಿ ಟಿ . ಬಿ . ಕಾಯಿಲೆ ಗೆಂದು ಉಚಿತವಾಗಿ ಕಫ ಪರೀಕ್ಷೆ ಮಾಡುತ್ತಾರೆ . ಹಾಗೆ ಇದಕ್ಕೆ ಉಚಿತವಾಗಿ ಚಿಕಿತ್ಸೆ ಕೂಡ ಕೊಡುತ್ತಾರೆ . ಆದರೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಕೊಡದೇ ಹೋದರೆ ಆ ವ್ಯಕ್ತಿ ಬಹಳ ಕಠಿಣವಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ . ಟಿ . ಬಿ . ಕಾಯಿಲೆ ಗೆ ಗುಣ ಕಾಣಲು ಆಂಟಿ ಬೈಯೋಟಿಕ್ಸ್ ನ ಅವಶ್ಯಕತೆ ಬಹಳ ಮುಖ್ಯವಾಗಿದ್ದು , ತಪ್ಪದೆ ಮತ್ತು ಯಾವುದೇ ನಿರ್ಲಕ್ಷ್ಯವಿಲ್ಲದೆ ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳ ಬೇಕಾಗುತ್ತದೆ . ಇದರ ಜೊತೆಗೆ ಕೆಲವು ನೈಸರ್ಗಿಕ ಪರಿಹಾರಗಳು ಮತ್ತು ಕೆಲವು ಆಹಾರ ಪದ್ದತಿಗಳು ಟಿ . ಬಿ . ರೋಗಿಯನ್ನು ಆದಷ್ಟು ಬೇಗನೆ ಗುಣ ಕಾಣುವಂತೆ ಮಾಡುತ್ತವೆ .

ವಿಟಮಿನ್ ' ಡಿ ' v/s ಟ್ಯುಬೆರ್ ಕ್ಯುಲೋಸಿಸ್

ಟಿ . ಬಿ . ಕಾಯಿಲೆ ಗೆ ಹಲವಾರು ನೈಸರ್ಗಿಕ ಮನೆ ಮದ್ದುಗಳು ತಯಾರಿದ್ದು ಅದರಲ್ಲಿ ಅಣಬೆ ಬಹಳ ಪ್ರಮುಖ ಆಹಾರ ಎಂದು ನಂಬಲಾಗಿದೆ . ಇದು ಧೀರ್ಘ ಕಾಲದ ಟಿ. ಬಿ. ಕಾಯಿಲೆ ಯಿಂದ ಬಳಲುತ್ತಿರುವ ಮನುಷ್ಯನನ್ನು ಬಹಳ ಬೇಗನೆ ಮ್ಯಾಜಿಕ್ ನ ರೀತಿಯಲ್ಲಿ ಹುಷಾರಾಗುವಂತೆ ಮಾಡುತ್ತದೆ . ಅದರಲ್ಲೂ ಸೂರ್ಯನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದ ಒಯ್ಸ್ಟರ್ ಮಶ್ರೂಮ್ ಟಿ . ಬಿ . ಗೆ ಬಹಳ ಉಪಯುಕ್ತ . ಏಕೆಂದರೆ ಭೂಮಿಯ ಮೇಲಿನ ಅಣಬೆ ಯಾವ ವಿಟಮಿನ್ ' ಡಿ ' ಅಂಶವನ್ನೂ ಹೊಂದಿರುವುದಿಲ್ಲ . ಅದೇ ಹಣಬೆಯನ್ನು ಬಿಸಿಲಿನಲ್ಲಿ ಒಣಗಿಸಿದರೆ ಸೂರ್ಯನ ಕಿರಣಗಳು ತಾಗಿ ವಿಟಮಿನ್ ' ಡಿ ' ತಾನಾಗಿಯೇ ಹಣಬೆಯೊಳಗೆ ಸೇರುತ್ತದೆ . ಸಾಮಾನ್ಯವಾಗಿ ವಿಟಮಿನ್ ' ಡಿ ' ಟಿ . ಬಿ . ರೋಗಿಗಳಿಗೆ ಅತ್ಯಂತ ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ . ಇದು ಆಂಟಿ ಟಿ .ಬಿ . ಡ್ರಗ್ ನ ವಿರುದ್ಧ ಬಹಳ ಚೆನ್ನಾಗಿ ಹೋರಾಡುತ್ತದೆ .

ಹಣಬೆಗೂ ಜರ್ಮನಿ ಗೂ ಇರುವ ನಂಟು

ಈ ರೀತಿಯ ಸೂರ್ಯನ ಬಿಸಿಲಿನಲ್ಲಿ ಒಣಗಿಸಿದ ಒಯ್ಸ್ಟರ್ ಅಣಬೆ ಗಳು ಟಿ . ಬಿ . ಕಾಯಿಲೆ ಹೊಂದಿರುವ ರೋಗಿಗೆ ಒಳ್ಳೆಯ ಮದ್ದು ಎಂಬುದನ್ನು ಮೊದಲು ಜರ್ಮನ್ ವಿಜ್ಞಾನಿಗಳು ಪ್ರಯೋಗ ನಡೆಸಿದರು . ಏಕೆಂದರೆ ಆಗಿನ ಕಾಲದಲ್ಲಿ ಟಿ . ಬಿ . ಕಾಯಿಲೆ ಬಂದು ವರ್ಷಕ್ಕೆ ಸುಮಾರು 1.6 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದರು . ಇದಕ್ಕೆ ಕಾರಣ ಆ ದೇಶದ ಆದಾಯ . ಆದಾಯ ಕಡಿಮೆ ಇರುವ ರಾಷ್ಟ್ರಗಳಲ್ಲಿ ಸಹಜವಾಗಿಯೇ ವಿಟಮಿನ್ ಸಪ್ಲಿಮೆಂಟ್ ಗಳ ಕೊರತೆ ಎದ್ದು ಕಾಣುತ್ತದೆ . ಪ್ರತಿ ಕುಟುಂಬದ ಆದಾಯ ಕೂಡ ಕಡಿಮೆ ಇರುವುದರಿಂದ ದುಬಾರಿ ಔಷಧಿಗಳನ್ನು ಕೊಳ್ಳುವುದಿರಲೀ ಅದರ ಕುರಿತು ಯೋಚನೆ ಕೂಡ ಮಾಡುವ ಹಾಗಿಲ್ಲ . ಇಂತಹ ಸಮಯದಲ್ಲಿ ವಿಜ್ಞಾನಿಗಳ ಗಮನ ಸೆಳೆದಿದ್ದು ರಸ್ತೆ ಬದಿಯಲ್ಲಿ ಸುಂದರವಾಗಿ ಬೆಳೆದಿದ್ದಂತಹ ಪುಟ್ಟ ಪುಟ್ಟ ಹಣಬೆಗಳು . ಅಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ವಿಜ್ಞಾನಿಗಳು ಧೈರ್ಯ ಮಾಡಿ ಅಲ್ಲಿನ ಸರ್ಕಾರದ ಜೊತೆ ಮಾತನಾಡಿ ಇಂತಹದೊಂದು ಸಾಹಸಕ್ಕೆ ಕೈ ಹಾಕಿಯೇ ಬಿಟ್ಟರು . ರಸ್ತೆ ಬದಿಯಲ್ಲಿದ್ದ ಹಣಬೆಗಳನ್ನು ಸಂಗ್ರಹಿಸಿದರು . ನಂತರ ಅವುಗಳನ್ನು ಚೆನ್ನಾಗಿ ಒಣಗಿಸಿ ಟಿ . ಬಿ . ರೋಗಿಗಳಿಗೆ ಕೊಡಲು ಪ್ರಾರಂಭ ಮಾಡಿದರು . ಅವರ ನಿರೀಕ್ಷೆಗೂ ಮೀರಿ ಟಿ . ಬಿ . ರೋಗಿಗಳು ಬಹಳ ಬೇಗನೆ ಚೇತರಿಕೆ ಕಂಡು ಕೊಂಡರು . ಇದರಿಂದ ವಿಜ್ಞಾನಿಗಳು ಸಂತೋಷದಿಂದ ಮತ್ತು ದೃಢ ನಿರ್ಧಾರ ಮಾಡಿ ಟಿ . ಬಿ . ಕಾಯಿಲೆ ಗೆ ಬಿಸಿಲಿನಲ್ಲಿ ಒಣಗಿಸಿದ ಒಯ್ಸ್ಟರ್ ಅಣಬೆ ನಿಜಕ್ಕೂ ಒಳ್ಳೆಯ ಔಷಧಿ ಎಂದು ತಮ್ಮ ವರದಿ ಸಿದ್ದ ಪಡಿಸಿದರು .

Tuberculosis

ಒಯ್ಸ್ಟರ್ ಹಣಬೆಯಿಂದ ನಾಪತ್ತೆಯಾಯಿತು ಟ್ಯುಬೆರ್ ಕ್ಯುಲೋಸಿಸ್

ಬಿಸಿಲಿನಲ್ಲಿ ಒಣಗಿಸಿದ ಒಯ್ಸ್ಟರ್ ಹಣಬೆಯನ್ನು ಟಿ . ಬಿ . ರೋಗಿಗಳು ಟಿ . ಬಿ . ಕಾಯಿಲೆ ಗೆ ಔಷಧಿ ತೆಗೆದುಕೊಳ್ಳುತ್ತಿರುವ ಸಂಧರ್ಭದಲ್ಲಿ ಕೇವಲ ಹಾಗೆ ತಿನ್ನುವ ಬದಲು ಸ್ಯಾಂಡ್ವಿಚ್ ಬ್ರೆಡ್ ನ ಜೊತೆಗೆ ಸ್ಟಫ್ ಮಾಡಿ ಬೆಳಗಿನ ತಿಂಡಿಯಲ್ಲಿ ಇದನ್ನು ಸೇರಿಸಿ ತಿಂದರೆ ಬಹಳ ಒಳ್ಳೆಯದು . ಕೇವಲ ಮೊದಲ 4 ತಿಂಗಳಲ್ಲೇ ಟಿ . ಬಿ . ರೋಗಿಯ ರೋಗ ನಿರೋಧಕ ಶಕ್ತಿಯಲ್ಲಿ ಚೇತರಿಕೆ ಕಂಡು ಬರುವುದನ್ನು ಗಮನಿಸಬಹುದು . ಇದಕ್ಕೆ ಕಾರಣ ಬಿಸಿಲಿನಲ್ಲಿ ಒಣಗಿಸಿದ ಅಣಬೆ ಆದ್ದರಿಂದ ಅದರಲ್ಲಿರುವ ವಿಟಮಿನ್ ' ಡಿ ' ಮನುಷ್ಯನ ದೇಹವನ್ನು ಆಂಟಿ ಮೈಕ್ರೋ ಬಿಯಲ್ ಕಾಂಪೌಂಡ್ ಅನ್ನು ತಯಾರಿಸಲು ಸಿದ್ದಗೊಳಿಸಿ , ಟಿ . ಬಿ . ಕಾಯಿಲೆ ಉಂಟು ಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವಂತೆ ಮಾಡುತ್ತದೆ .

English summary

How mushrooms help in Tuberculosis

Tuberculosis is a potentially serious infection that affects the lungs. The bacteria that cause tuberculosis spread quite easily through the air when an infected person sneezes or coughs. Being a chronic disease, tuberculosis can be fatal if not treated properly. No doubt you need to take antibiotics to treat active tuberculosis but a few natural remedies and the right nutrition can help speed up the treatment.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more