For Quick Alerts
ALLOW NOTIFICATIONS  
For Daily Alerts

ಯಾವ ನೀರು ಆರೋಗ್ಯಕಾರಿ? ಬಿಸಿನೀರೋ ಅಥವಾ ತಣ್ಣೀರೋ?

|

ಈ ಜಗತ್ತಿನಲ್ಲಿರುವ ಪ್ರತಿ ಜೀವಿಗೂ ನೀರು ಅತ್ಯಾವಶ್ಯವಾಗಿರುವ ಜಲವಾಗಿದ್ದು ಇದೇ ಕಾರಣಕ್ಕೆ ನೀರನ್ನು 'ಜೀವಜಲ' ಎಂದು ಕರೆಯಲಾಗುತ್ತದೆ. ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ದೇಹದಲ್ಲಿ ಸುಮಾರು 70% ನೀರನ್ನು ಹೊಂದಿರಬೇಕಾಗುತ್ತದೆ. ಅಲ್ಲದೇ ನಮ್ಮ ರಕ್ತ ಪರಿಚಲನೆಯಲ್ಲಿ ನೀರಿನ ಪಾತ್ರ ಮಹತ್ತರವಾಗಿದ್ದು ಪೋಷಕಾಂಶಗಳನ್ನು, ಆಮ್ಲಜನಕ ಹಾಗೂ ಇತರ ಅವಶ್ಯಕ ಸಾಮಾಗ್ರಿಗಳನ್ನು ಮೂಲಸ್ಥಾನದಿಂದ ಪ್ರತಿ ಜೀವಕೋಶ, ಪ್ರತಿ ಅಂಗಾಂಶದವರೆಗೆ ತಲುಪಿಸಲು ರಕ್ತದಲ್ಲಿನ ನೀರು ನೆರವಾಗುತ್ತದೆ. ನಾವು ಬಿಸಿರಕ್ತದ ಜೀವಿಗಳಾಗಿದ್ದು ವಾತಾವರಣದ ತಾಪಮಾನಕ್ಕೆ ಅನುಗುಣವಾಗಿ ನಮ್ಮ ದೇಹದ ತಾಪಮಾನವನ್ನು ಕಾಪಾಡಿಕೊಳ್ಳಲು ದೇಹ ಹಲವಾರು ವ್ಯವಸ್ಥೆಗಳನ್ನು ಕೈಗೊಳ್ಳುತ್ತದೆ.

ಆಹಾರತಜ್ಞರ ಪ್ರಕಾರ

ಆಹಾರತಜ್ಞರ ಪ್ರಕಾರ

ಬೇಸಿಗೆಯಲ್ಲಿ ವಾತಾವರಣದ ಉಷ್ಣತೆ ನಮ್ಮ ದೇಹಕ್ಕಿಂತಲೂ ಹೆಚ್ಚಿರುವ ಕಾರಣ ದೇಹವನ್ನು ತಂಪುಗೊಳಿಸಲು ಬೆವರುವ ಕ್ರಮವನ್ನು ಅನುಸರಿಸುತ್ತದೆ. ಆದರೆ ಈ ಸಮಯದಲ್ಲಿ ನಾವು ಕುಡಿಯುವ ನೀರು ತಣ್ಣಗಿರಬೇಕೋ ಅಥವಾ ಬಿಸಿಯಾಗಿರಬೇಕೋ ಎಂಬ ದ್ವಂದ್ವ ಎಲ್ಲರಿಗೂ ಉಂಟಾಗುವುದು ಸಹಜ. ಹೆಚ್ಚಿನವರು ಬಿಸಿನೀರೇ ಆರೋಗ್ಯಕಾರಿ ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ಇದಕ್ಕೆ ನಿಜವಾದ ಕಾರಣವೇನೆಂದು ಹೆಚ್ಚಿನವರಿಗೆ ಗೊತ್ತಿಲ್ಲ. ಕೆಲವು ಆಹಾರತಜ್ಞರ ಪ್ರಕಾರ ಬಿಸಿನೀರಿನ ಸೇವನೆಯಿಂದ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ, ತದ್ವಿರುದ್ದವಾಗಿ ತಣ್ಣೀರಿನ ಸೇವನೆಯಿಂದ ಬಿಸಿಲಿನ ಝಳದ ಆಘಾತವನ್ನು ದೇಹ ಎದುಸಿರಲು ಸಾಧ್ಯವಾಗುತ್ತದೆ. ಅಂದರೆ ಎರಡೂ ಬಗೆಯ ನೀರು ಆರೋಗ್ಯಕರವೇ? ಈ ದ್ವಂದ್ವವನ್ನು ನಿವಾರಿಸಲು ಇಂದಿನ ಲೇಖನದಲ್ಲಿ ಆರೋಗ್ಯ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ವಿವರಿಸಲಾಗಿದೆ. ವಾಸ್ತವಾಂಶವೆಂದರೆ ಪೋಷಕಾಂಶಗಳನ್ನು ಪರಿಗಣಿಸಿದರೆ ಬಿಸಿನೀರಿಗೂ ತಣ್ಣೀರಿಗೂ ಯಾವುದೇ ವ್ಯತ್ಯಾಸವಿಲ್ಲ. ನೀರಿನಲ್ಲಿ ಯಾವುದೇ ಕ್ಯಾಲೋರಿಗಳಿಲ್ಲ ಹಾಗೂ ನಮ್ಮ ದೇಹದ ಎಲ್ಲಾ ಕ್ರಿಯೆಗಳಿಗೆ ಅಗತ್ಯವಾಗಿದೆ. ಬಿಸಿನೀರು ಅಥವಾ ತಣ್ಣೀರು, ಯಾವ ನೀರು ಆರೋಗ್ಯಕರ ಎಂಬ ವಿಷಯದಲ್ಲಿ ಯಾವುದೇ ನಿರ್ಣಯಕ್ಕೆ ಬರುವ ಮುನ್ನ ಇವೆರಡೂ ನೀರಿನ ಸೇವನೆಯಿಂದ ಪಡೆಯಬಹುದಾದ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ಪರಿಗಣಿಸೋಣ... ಬಿಸಿನೀರಿನ (ಬೆಚ್ಚನೆಯ ನೀರು) ಸೇವನೆಯ ಆರೋಗ್ಯಕರ ಪ್ರಯೋಜನಗಳು...

ನೋವನ್ನು ಉಪಶಮನಗೊಳಿಸುತ್ತದೆ

ನೋವನ್ನು ಉಪಶಮನಗೊಳಿಸುತ್ತದೆ

ಬಿಸಿನೀರಿನ ಸೇವನೆಯಿಂದ ಗಂಟಲಿನಲ್ಲಿ ಎದುರಾಗಿದ್ದ ಬಾವು ಕಡಿಮೆಯಾಗುತ್ತದೆ ಹಾಗೂ ಆ ಕ್ಷಣಕ್ಕೆ ನೋವು ಇಲ್ಲವಾಗುತ್ತದೆ. ವಿಶೇಷವಾಗಿ ಸೋಂಕಿಗೊಳಗಾಗಿರುವ ಗಂಟಲಿನ ಒಳಭಾಗವನ್ನು ಸ್ವಚ್ಛಗೊಳಿಸಿ ಒಣಗಿದ್ದ ಭಾಗವನ್ನು ಮತ್ತೆ ತೇವಗೊಳಿಸುವ ಮೂಲಕ ಅದ್ಭುತ ಎನ್ನಿಸುವ ಪರಿಹಾರವನ್ನು ಒದಗಿಸುತ್ತದೆ. ವಿಶೇಷವಾಗಿ ಬೆಳಿಗ್ಗೆದ್ದಾಗ ಗಂಟಲು ಒಣಗಿದ್ದರೆ ಹಾಗೂ ನುಂಗುವಾಗ ಗಂಟಲು ನೋವು ಎದುರಾದರೆ ಬಿಸಿನೀರು ಕುಡಿಯುವುದು ಅತ್ಯುತ್ತಮವಾದ ಪರಿಹಾರವಾಗಿದೆ.

ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ

ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ

ಬೆಚ್ಚನೆಯ ನೀರಿನ ಸೇವನೆಯಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಹಲವಾರು ಅಧ್ಯಯನಗಳ ಮೂಲಕ ಈ ಅಂಶ ಸಾಬೀತಾಗಿದ್ದು ದೇಹ ಹೆಚ್ಚಿನ ಸೆಖೆಯ ವಾತಾವರಣಕ್ಕೆ ಒಗ್ಗಬೇಕಾದಾಗ ರಕ್ತದಲ್ಲಿನ ಕಣಗಳ ಚಲನೆಯೂ ಗಣನೀಯವಾಗಿ ಹೆಚ್ಚುತ್ತದೆ,

ಜೀರ್ಣಾಂಗಗಳಲ್ಲಿ ಆಹಾರದ ಚಲನೆ ಉತ್ತಮಗೊಳ್ಳುತದೆ

ಜೀರ್ಣಾಂಗಗಳಲ್ಲಿ ಆಹಾರದ ಚಲನೆ ಉತ್ತಮಗೊಳ್ಳುತದೆ

ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಚ್ಚನೆಯ ನೀರನ್ನು ಕುಡಿಯುವ ಮೂಲಕ ಜಠರ ಹಾಗೂ ಕರುಳುಗಳಿಗೆ ಅಗತ್ಯ ಪ್ರಚೋದನೆ ದೊರಕುತ್ತದೆ ಹಾಗೂ ಇದು ಜೀರ್ಣಾಂಗಗಳಲ್ಲಿರುವ ಆಹಾರವನ್ನು ಸುಲಭವಾಗಿ ಚಲಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಅಲ್ಲದೇ ದಿನದ ಅವಧಿಯಲ್ಲಿ ಜೀರ್ಣಾಂಗಗಳಿಂದ ಪೋಷಕಾಂಶಗಳನ್ನು ಇನ್ನಷ್ಟು ಉತ್ತಮವಾಗಿ ಹೀರಿಕೊಳ್ಳಲು ಸಾಧ್ಯವಾಗುವಂತೆ ಮಾಡುತ್ತದೆ. ಬಿಸಿನೀರು ಕುಡಿಯುವುದ ಪ್ರಯೋಜನಗಳಲ್ಲಿ ಇದು ಅತ್ಯುತ್ತಮವಾಗಿದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಆರೋಗ್ಯಕರ ಕ್ರಮದ ತೂಕ ಇಳಿಯುವಿಕೆಗೂ ತೂಕ ಇಳಿಕೆಗೂ ನಿಕಟ ಸಂಬಂಧವಿದೆ. ತೂಕ ಇಳಿಸುವ ಪ್ರಯತ್ನಗಳಿಗೆ ಬಿಸಿನೀರು ಹೆಚ್ಚಿನ ಬೆಂಬಲ ನೀಡುವುದನ್ನು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾಗಿದೆ. ಬಿಸಿನೀರಿನ ಸೇವನೆ ಅನಗತ್ಯ ಹಸಿವಾಗುವುದನ್ನು ತಪ್ಪಿಸಿ ಎತ್ತರಕ್ಕೆ ತಕ್ಕ ತೂಕವನ್ನು ಪಡೆಯಲು ನೆರವಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯ ವಿವಿಧ ಹಂತಗಳಲ್ಲಿ ಬಿಸಿನೀರು ಹೆಚ್ಚಿನ ಪ್ರಯೋಜನವಾಗುವ ಫಲಿತಾಂಶಗಳನ್ನು ಒದಗಿಸಿ ಜೀರ್ಣಕ್ರಿಯೆ ಸುಲಭಗೊಳ್ಳುವಂತೆ ಮಾಡುತ್ತದೆ. ಪುರಾತನ ಚೀನಾ ವೈದ್ಯಪದ್ದತಿ ಹಾಗೂ ಭಾರತೀಯ ಪುರಾತನ ಆಯುರ್ವೇದ ವೈದ್ಯಪದ್ದತಿಯಲ್ಲಿ ವಿವರಿಸಿರುವ ಪ್ರಕಾರ ಮುಂಜಾನೆ ಖಾಲಿಹೊಟ್ಟೆಯಲ್ಲಿ ಬಿಸಿನೀರು ಕುಡಿಯುವ ವ್ಯಕ್ತಿಯ ಜೀರ್ಣಕ್ರಿಯೆ ಪ್ರಚೋದನೆಗೊಳ್ಳುತ್ತದೆ ಹಾಗೂ ಅಜೀರ್ಣತೆಯಾಗುವುದನ್ನು ತಪ್ಪಿಸುತ್ತದೆ. ಅಲ್ಲದೇ ಬಿಸಿನೀರಿನಿಂದ ಕರುಳುಗಳಲ್ಲಿ ರಕ್ತಪರಿಚಲನೆಗೆ ಪ್ರಚೋದನೆ ದೊರಕುವ ಮೂಲಕ ಮಲಬದ್ದತೆಯಾಗುವುದನ್ನೂ ತಪ್ಪಿಸುತ್ತದೆ

ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತದೆ

ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತದೆ

ಒಂದು ಲೋಟ ಬೆಚ್ಚನೆಯ ನೀರಿಗೆ ಅರ್ಧ ಲಿಂಬೆಯ ರಸವನ್ನು ಬೆರೆಸಿ ಕುಡಿಯುವ ಮೂಲಕ ದೇಹದಿಂದ ಕಲ್ಮಶಗಳು ನಿವಾರಣೆಗೊಳ್ಳುತ್ತವೆ. ಅಲ್ಲದೇ ದೇಹದಲ್ಲಿ ಪಿತ್ತದ ಪ್ರಮಾಣ ಕಡಿಮೆಯಾಗಲು ಮತ್ತು ತ್ವಚೆ ಹಾಗೂ ಮೊಡವೆಗಳ ತೊಂದರೆ ನಿವಾರಣೆಯಾಗಲೂ ನೆರವಾಗುತ್ತದೆ.

Most Read: ದೇಹದಿಂದ ಕಲ್ಮಶ ಹೊರಹಾಕಲು ಸೇವಿಸಿ ಕಲ್ಲಂಗಡಿ ಸ್ಮೂತಿ

ಕಟ್ಟಿಕೊಂಡಿರುವ ಮೂಗನ್ನು ತೆರೆಯುತ್ತದೆ

ಕಟ್ಟಿಕೊಂಡಿರುವ ಮೂಗನ್ನು ತೆರೆಯುತ್ತದೆ

ಮೂಗು ಕಟ್ಟಿಕೊಂಡಿದ್ದು ಉಸಿರಾಟ ಸರಾಗವಾಗದೇ ಇದ್ದಾಗ ಬಿಸಿನೀರು ಕುಡಿಯುವುದು ಅತ್ಯುತ್ತಮ ಪರಿಹಾರವಾಗಿದೆ. ಕಟ್ಟಿದ್ದ ಮೂಗನ್ನು ತೆರೆದು ಶ್ವಾಸನಾಳಗಳಲ್ಲಿದ್ದ ಕಫವನ್ನು ಕರಗಿಸಿ ನಿವಾರಿಸುವ ಮೂಲಕ ಉಸಿರಾಟವನ್ನು ಸರಾಗಗೊಳಿಸುತ್ತದೆ ಹಾಗೂ ಶೀತದ ವಿರುದ್ದವೂ ಹೋರಾಡುತ್ತದೆ.

ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ

ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ

ಬಿಸಿನೀರಿನ ಸೇವನೆಯಿಂದ ಮಾನಸಿಕ ಒತ್ತಡ ಮತ್ತು ಉದ್ವೇಗ ಕಡಿಮೆಯಾಗುತ್ತದೆ. ನೀರಿನ ಬಿಸಿ ದೇಹದ ಒಳಭಾಗವನ್ನು ಬೆಚ್ಚಗಾಗಿಸು ತ್ತದ್ದಂತೆಯೇ ಮೆದುಳಿಗೆ ಹರಿವ ರಕ್ತಪರಿಚನೆಯೂ ಉತ್ತಮಗೊಳ್ಳುವುದು ಇದಕ್ಕೆ ನೇರವಾದ ಕಾರಣವಾಗಿದೆ.

ಬಿಸಿನೀರು ಕುಡಿಯುವುದರಿಂದ ಎದುರಿಸಬೇಕಾದ ಅಪಾಯಗಳು

ಬಿಸಿನೀರು ಕುಡಿಯುವುದರಿಂದ ಎದುರಿಸಬೇಕಾದ ಅಪಾಯಗಳು

*ನಮ್ಮ ದೇಹ ಸದಾ ಬೆಚ್ಚಗಿರಬೇಕಾಗಿದ್ದರೂ ಅಗತ್ಯಕ್ಕೂ ಹೆಚ್ಚಿನ ಬಿಸಿ ಒಳ್ಳೆಯದಕ್ಕಿಂತಲೂ ಕೆಟ್ಟದ್ದನ್ನೇ ಮಾಡುತ್ತದೆ. ಅಗತ್ಯವಿಲ್ಲದಾದ ಬಿಸಿನೀರು ಕುಡಿಯುವುದರಿಂದ ದೇಹದ ಒಳಭಾಗದ ಅಂಗಗಳಿಗೆ ಬಿಸಿನೀರು ಬಿದ್ದಾದ ಇಲ್ಲಿ ಸುಡಬಹುದು. ಹಾಗಾಗಿ, ವ್ಯಾಯಾಮ ಮೊದಲಾದ ದೇಹವನ್ನು ಬಿಸಿಯಾಗಿಸುವ ದೈಹಿಕ ಚಟುವಟಿಕೆಗಳ ಬಳಿಕ ಎಂದಿಗೂ ಬಿಸಿನೀರು ಕುಡಿಯಬಾರದು.

*ಅಲ್ಲದೇ ಅಗತ್ಯಕ್ಕೂ ಹೆಚ್ಚಿನ ಪ್ರಮಾಣದ ಬಿಸಿನೀರು ಕುಡಿಯುವುದರಿಂದ ದೇಹ ಈಗ ಅಗತ್ಯಕ್ಕೂ ಹೆಚ್ಚು ಏರಿದ ಬಿಸಿಯನ್ನು ತಣಿಸಲು ತನ್ನೆಲ್ಲಾ ಶಕ್ತಿಯನ್ನು ಪ್ರಯೋಗಿಸಬೇಕಾಗುತ್ತದೆ. ಪರಿಣಾಮವಾಗಿ ಹೆಚ್ಚಿನ ರಕ್ತಪರಿಚಲನೆ ಜೀರ್ಣಾಂಗಗಳಿಗೆ ಹರಿದು ಮೆದುಳಿನ ರಕ್ತ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದ ಮೆದುಳಿನ ಕ್ಷಮತೆ ಕಡಿಮೆಯಾಗುತ್ತದೆ. ಅಲ್ಲದೇ ಮೆದುಳಿಗೆ ತಲುಪುವ ರಕ್ತವೂ ಬಿಸಿಯೇ ಆಗಿದ್ದು ಇದು ಮೆದುಳಿನ ಜೀವಕೋಶಗಳನ್ನು ಊದಿಕೊಳ್ಳುವಂತೆ ಮಾಡುತ್ತವೆ ಹಾಗೂ ಇದರಿಂದ ತಾರ್ಕಿಕ ಮತ್ತು ಏಕಾಗ್ರತೆಯ ಶಕ್ತಿ ಕಡಿಮೆಯಾಗುತ್ತದೆ.

ನಿದ್ದೆಗೂ ಮುನ್ನ ಕುಡಿಯುವ ಅನಗತ್ಯ ಪ್ರಮಾಣದ ಬಿಸಿನೀರು ನಿದ್ದೆಯ ಕ್ರಮವನ್ನೇ ಬದಲಿಸಬಲ್ಲುದು. ಬಿಸಿನೀರು ಮೂತ್ರಪಿಂಡಗಳಿಗೆ ಹಾನಿ ಎಸಗಬಲ್ಲುದು. ತಣ್ಣೀರು (ಫ್ರಿಜ್ಜಿನಲ್ಲಿಟ್ಟ ನೀರು) ಕುಡಿಯುವ ಪ್ರಯೋಜನಗಳು..

Most Read: ಉಗುರು ಬೆಚ್ಚಗಿನ ಬಿಸಿನೀರು ಕುಡಿದರೆ, ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ...

ಬಿಸಿಯ ಆಘಾತದಿಂದ ರಕ್ಷಿಸುತ್ತದೆ

ಬಿಸಿಯ ಆಘಾತದಿಂದ ರಕ್ಷಿಸುತ್ತದೆ

ಒಂದು ವೇಳೆ ಬಿಸಿಲು ಪ್ರಖರವಾಗಿದ್ದು ನೆತ್ತಿಯನ್ನು ಸುಡುತ್ತಾ ದೇಹದ ಒಳಗಿನ ತ್ರಾಣವನ್ನು ಉಡುಗಿಸುತ್ತಾ ಶಕ್ತಿಯನ್ನೆಲ್ಲಾ ಹೀರಿ ಹಿಪ್ಪೆಯಾಗಿಸುವ ಸಂದರ್ಭ ಎದುರಾದರೆ ತಕ್ಷಣವೇ ತಣ್ಣೀರು ಕುಡಿಯಬೇಕು. ಇದರಿಂದ ಪ್ರಮುಖ ಅಂಗಗಳು ಬಿಸಿಯ ಆಘಾತಕ್ಕೆ ಒಳಗಾಗುವುದನ್ನು ತಡೆಯಬಹುದು.

ತೂಕ ಇಳಿಕೆಗೆ ನೆರವಾಗುತ್ತದೆ

ತೂಕ ಇಳಿಕೆಗೆ ನೆರವಾಗುತ್ತದೆ

ಬಿಸಿನೀರಿನಂತೆಯೇ ತಣ್ಣೀರಿನ ಸೇವನೆಯಿಂದಲೂ ತೂಕದ ಇಳಿಕೆಗೆ ಸಮಾನವಾದ ಪ್ರಯೋಜನವಿದೆ. ಸೊಂಟದಲ್ಲಿ ತುಂಬಿಕೊಂಡ ಕೊಬ್ಬು ಕರಗಿಸುವುದೇ ಎಲ್ಲರಿಗೂ ಅತಿ ಕಷ್ಟವಾಗಿರುವ ಕಾರ್ಯವಾಗಿದೆ. ಹಾಗಾಗಿ ಇದನ್ನು ಕರಗಿಸಲು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಕೊಳಿಸಬೇಕು. ತಣ್ಣೀರಿನ ಸೇವನೆ ಮತ್ತು ತಣ್ಣೀರಿನ ಸ್ನಾನದಿಂದ ತೂಕ ಕಡಿಮೆಗೊಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಬೆಂಬಲ ದೊರಕುತ್ತದೆ.

ವ್ಯಾಯಾಮದ ಬಳಿಕ ಕುಡಿಯಲು ಉತ್ತಮವಾಗಿದೆ

ವ್ಯಾಯಾಮದ ಬಳಿಕ ಕುಡಿಯಲು ಉತ್ತಮವಾಗಿದೆ

ತೂಕ ಇಳಿಕೆಗೆ ಅಗತ್ಯವಾದ ಅಥವಾ ನಿತ್ಯದ ವ್ಯಾಯಾಮದಿಂದ ಬಳಲಿದ ದೇಹಕ್ಕೆ ಮರುಚೈತನ್ಯ ನೀಡಲು ತಣ್ಣೀರು ಉತ್ತಮ ಆಯ್ಕೆಯಾಗಿದೆ. ವ್ಯಾಯಾಮದ ಅವಧಿಯಲ್ಲಿ ನಮ್ಮ ದೇಹದ ತಾಪಮಾನ ಒಳಗಿನಿಂದ ಏರುತ್ತದೆ. ಹಾಗಾಗಿ ವ್ಯಾಯಾಮದ ಬಳಿಕ ದಣಿವಾರಿಸಿಕೊಳ್ಳುವ ಸಮಯದಲ್ಲಿ ತಣ್ಣೀರು ಕುಡಿಯುವ ಮೂಲಕ ಈ ತಾಪಮಾನವನ್ನು ಇಳಿಸಲು ಸಹಕಾರಿಯಾಗುತ್ತದೆ.

ತಣ್ಣೀರು ಕುಡಿಯುವುದರಿಂದ ಎದುರಾಗುವ ಅಪಾಯಗಳು

ತಣ್ಣೀರು ಕುಡಿಯುವುದರಿಂದ ಎದುರಾಗುವ ಅಪಾಯಗಳು

ತಣ್ಣೀರು ಹೊಟ್ಟೆಗೆ ತಲುಪಿದ ಬಳಿಕ ಇದರ ತಣಪು ರಕ್ತನಾಳಗಳನ್ನು ಕುಗ್ಗಿಸುತ್ತದೆ. ಪರಿಣಾಮವಾಗಿ ಇವುಗಳ ಮೂಲಕ ಹರಿಯುವ ರಕ್ತ ಮತ್ತು ನೀರಿನ ಪ್ರಮಾಣವೂ ಕಡಿಮೆಯಾಗುತ್ತದೆ.

ತಣ್ಣೀರು ಜಠರದಲ್ಲಿರುವ ಆಹಾರವನ್ನು ಜೀರ್ಣಿಸಿಕೊಳ್ಳುವುದನ್ನು ಕಠಿಣವಾಗಿಸುತ್ತದೆ. ಏಕೆಂದರೆ ತಣ್ಣೀರು ಬಿದ್ದ ಬಳಿಕ ತಣಿದ ಆಹಾರದಲ್ಲಿ ಕೊಬ್ಬಿನ ಕಣಗಳು ಘನೀಕೃತಗೊಂಡು ರಕ್ತಪರಿಚಲನೆಗೆ ಅಡ್ಡಿಯಾಗುತ್ತದೆ.

ತಣ್ಣೀರು ಕುಡಿಯುವುದರಿಂದ ದೇಹದ ತಾಪಮಾನವೂ ನಷ್ಟವಾಗುತ್ತದೆ. ಇದನ್ನು ಸರಿಪಡಿಸಲು ದೇಹಕ್ಕೆ ಇನ್ನಷ್ಟು ಶಾಖವನ್ನು ಉತ್ಪಾದಿಸಬೇಕಾಗಿ ಬರುತ್ತದೆ. ತಣ್ಣೀರಿನ ಸೇವನೆಯಿಂದ ಮೂಗಿನಲ್ಲಿ ಮತ್ತು ಶ್ವಾಸನಾಳಗಳಲ್ಲಿ ಕಫ ಕಟ್ಟಿಕೊಳ್ಳುವುದು ಹೆಚ್ಚುತ್ತದೆ. ಪರಿಣಾಮವಾಗಿ ಶ್ವಾಸಮಾರ್ಗ ಕಿರಿದಾಗುತ್ತದೆ ಮತ್ತು ಗಂಟಲಿನಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ.

ಬಿಸಿನೀರು - ವಿರುದ್ಧ - ತಣ್ಣೀರು : ಯಾರು ಹಿತವರು?

ಬಿಸಿನೀರು - ವಿರುದ್ಧ - ತಣ್ಣೀರು : ಯಾರು ಹಿತವರು?

ಎರಡೂ ಬಗೆಯ ನೀರನ್ನು ಕುಡಿದಾಗ ಕೆಲವು ಪ್ರಯೋಜನಗಳಿದ್ದರೆ ಕಲವು ಅಪಾಯಗಳನ್ನೂ ಎದುರಿಸಬೇಕಾದುದರಿಂದ ಎರಡರಲ್ಲಿ ಯಾವ ನೀರು ಉತ್ತಮ ಎಂದು ಹೇಳಲು ಕೆಲವಾರು ಅಧ್ಯಯನಗಳು ನಡೆದಿವೆ. ಎರಡೂ ಬಗೆಯ ನೀರಿನ ಸೇವನೆಯಿಂದ ಪ್ರಯೋಜನಗಳಿದ್ದರೂ ಆಯುರ್ವೇದ ಮತ್ತು ಪುರಾತನ ಚೀನೀ ವೈದ್ಯ ಪದ್ದತಿಯಲ್ಲಿ ತಣ್ಣೀರಿನ ಸೇವನೆಯಿಂದ ಸ್ನಾಯುಗಳು ಸಂಕುಚಿತಕೊಳ್ಳುತ್ತದೆ ಎಂದು ವಿವರಿಸಲಾಗಿದೆ. ಆದ್ದರಿಂದ, ಸಾಮಾನ್ಯ ದಿನಗಳಲ್ಲಿ ಬೆಚ್ಚನೆಯ ನೀರು ಅಂದರೆ ಹೆಚ್ಚು ಬಿಸಿಯಾಗದೇ ಕೇವಲ ಉಗುರುಬೆಚ್ಚಗಿರುವ ನೀರಿನ ಸೇವನೆಯಿಂದ ರಕ್ತಪರಿಚಲನೆ ಉತ್ತಮಗೊಂಡು ಪ್ರಮುಖ ಅಂಗಗಳನ್ನು ಘಾಸಿಗೊಳಗಾಗುವುದರಿಂದ ರಕ್ಷಿಸುತ್ತದೆ ಎಂದು ಹಲವು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ. ಆದರೆ ಅತಿಸೆಖೆಯ ದಿನಗಳಲ್ಲಿ ಸಂದರ್ಭಾನುಸಾರ ತಣ್ಣೀರನ್ನು ಅಗತ್ಯಕ್ಕೆ ತಕ್ಕಂತೆ ಸೇವಿಸುವುದು ಮತ್ತು ಉಳಿದ ಸಮಯದಲ್ಲಿ ಬೆಚ್ಚನೆಯ ನೀರನ್ನು ಸೇವಿಸುವುದು ಜಾಣತನದ ಕ್ರಮವಾಗಿದೆ.

English summary

Hot Water Or Cold Water: Which Is Healthier?

Drinking water is essential for every form of life. Water constitutes to nearly 70% of our body's buildup and is responsible for the proper functioning of all the organs. Besides, increasing blood circulation, water also helps in carrying essential nutrients derived from the food, to various organs through tissues. But with the rising temperature, this summer, many of us are confused regarding which is better for our health - warm water or cold water. A majority of people believe that warm water is beneficial for our health. But hardly anyone can tell the real reason behind it.
X
Desktop Bottom Promotion