For Quick Alerts
ALLOW NOTIFICATIONS  
For Daily Alerts

ಒಸಡು ಊದಿಕೊಂಡ ಸಮಸ್ಯೆಗೆ ಪರಿಣಾಮಕಾರಿ ಮನೆಮದ್ದುಗಳು

|

ದೇಹದ ಸ್ವಚ್ಛತೆಯಂತೆ ಬಾಯಿಯ ಸ್ವಚ್ಛತೆಯು ಅತೀ ಅಗತ್ಯವಾಗಿ ಇರುವುದು. ಬಾಯಿಯ ಸ್ವಚ್ಛತೆ ಕಡೆ ಹೆಚ್ಚಿನ ಜನರು ಗಮನ ಹರಿಸುವುದೇ ಇಲ್ಲ. ಇದರಿಂದಾಗಿ ಹಲವಾರು ರೀತಿಯ ದಂತ ಸಮಸ್ಯೆಗಳು ಕಂಡುಬರುವುದು. ಇದರಲ್ಲಿ ಮುಖ್ಯವಾಗಿ ಹಲ್ಲು ನೋವು, ಒಸಡು ನೋವು, ಬಾಯಿಯ ದುರ್ವಾಸನೆ ಇತ್ಯಾದಿಗಳು. ಅದರಲ್ಲೂ ಒಸಡು ಹಾಗೂ ಹಲ್ಲಿನ ನೋವು ತುಂಬಾ ಸಮಸ್ಯೆಯನ್ನು ಉಂಟು ಮಾಡುವುದು. ಕೆಲವೊಂದು ಸಲ ಒಸಡು ಊದಿಕೊಂಡು ತುಂಬಾ ನೋವು ನೀಡುವುದು.

ಒಸಡು ಊದಿಕೊಂಡು ನೋವು ಕಾಣಿಸಿಕೊಂಡರೆ, ಅದಕ್ಕಿಂತ ದೊಡ್ಡ ತಲೆನೋವು ಮತ್ತೊಂದು ಇಲ್ಲ. ಏನೂ ತಿನ್ನಲು ಆಗದೆ ತುಂಬಾ ಕಷ್ಟಪಡಬೇಕಾಗುತ್ತದೆ. ಒಸಡಿನ ನೋವಿನಿಂದಾಗಿ ಹೊಟ್ಟೆಗೂ ಉಪವಾಸ. ಹೀಗಾಗಿ ವಸಡು ಊದಿಕೊಂಡರೆ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಅತೀ ಅಗತ್ಯ. ಒಸಡು ನೋವು ನಿವಾರಣೆ ಮಾಡಲು ನೀವು ದಂತ ವೈದ್ಯರ ಬಳಿಗೆ ಹೋಗುವ ಮೊದಲು ಮನೆಯಲ್ಲೇ ಕೆಲವು ಮನೆಮದ್ದುಗಳನ್ನು ಪರೀಕ್ಷೆ ಮಾಡಿ ನೋಡಬಹುದು. ಇದು ಒಸಡಿನ ನೋವಿಗೆ ಪರಿಹಾರ ನೀಡುವುದು. ಇಂತಹ ಮನೆಮದ್ದುಗಳು ಯಾವುದು ಎಂದು ನಾವು ನಿಮಗೆ ಈ ಲೇಖನ ಮೂಲಕ ತಿಳಿಸಿಕೊಡಲಿದ್ದೇವೆ. ಅದು ಯಾವುದು ಎಂದು ನೀವು ತಿಳಿಯಿರಿ.

ಉಪ್ಪು ನೀರು

ಉಪ್ಪು ನೀರು

ಬಿಸಿ ನೀರಿಗೆ ಒಂದು ಚಮಚ ಉಪ್ಪು ಹಾಕಿದರೆ, ಅದು ಹಲವಾರು ರೀತಿಯ ದಂತ ಸಮಸ್ಯೆಗಳಿಗೆ ಪರಿಹಾರ ನೀಡುವುದು. ಒಂದು ಲೋಟ ಬಿಸಿ ನೀರು ತೆಗೆದುಕೊಳ್ಳಿ ಮತ್ತು ಅದಕ್ಕೆ ಒಂದು ಚಮಚ ಉಪ್ಪು ಹಾಕಿ. ಇದರಿಂದ ನೀವು ಬಾಯಿ ಮುಕ್ಕಳಿಸಿಕೊಳ್ಳಿ. ವಾರದಲ್ಲಿ ಎರಡು ಸಲ ಊಟವಾದ ಬಳಿಕ ನೀವು ಈ ವಿಧಾನವನ್ನು ಅಳವಡಿಸಿಕೊಳ್ಳಬಹುದು.

Most Read: ಒಸಡಿನ ನೋವಿಗೆ ಸಾಂತ್ವನ ನೀಡುವ ಫಲಪ್ರದ ಮನೆಮದ್ದು

ಅಡುಗೆ ಸೋಡಾ

ಅಡುಗೆ ಸೋಡಾ

ಊದಿಕೊಂಡಿರುವ ಒಸಡಿನ ನಿವಾರಣೆಗೆ ಅಡುಗೆ ಸೋಡಾ ಬಳಸಿಕೊಳ್ಳಬಹುದು. ಒಂದು ಚಮಚ ಅಡುಗೆ ಸೋಡಾ ಮತ್ತು ಚಿಟಿಕೆ ಅರಶಿನ ತೆಗೆದುಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಕೆಲವು ನಿಮಿಷ ಕಾಲ ನೋವಿರುವ ಒಸಡಿಗೆ ಮಸಾಜ್ ಮಾಡಿ. ಇದರ ಬಳಿಕ ಬಾಯಿಯನ್ನು ಸರಿಯಾಗಿ ತೊಳೆಯಿರಿ. ಪ್ರತೀ ದಿನ ಬೆಳಗ್ಗೆ ಈ ವಿಧಾನವನ್ನು ಪಾಲಿಸಿ.

ಅಲೋವೆರಾ

ಅಲೋವೆರಾ

ಅಲೋವೆರಾವು ತುಂಬಾ ಅದ್ಭುತ ಗಿಡವಾಗಿದ್ದು, ಇದು ಹಲವಾರು ರೀತಿಯ ಆರೋಗ್ಯ ಸಮಸ್ಯೆ ನಿವಾರಣೆ ಮಾಡುವುದು. ಊದಿಕೊಂಡಿರುವ ಒಸಡಿನ ನಿವಾರಣೆ ಮಾಡಲು ತಾಜಾ ಅಲೋವೆರಾ ಲೋಳೆ ತೆಗೆದುಕೊಳ್ಳಿ ಮತ್ತು ಇದನ್ನು ಒಸಡಿಗೆ ಹಚ್ಚಿಕೊಳ್ಳಿ. ಕೆಲವು ನಿಮಿಷ ಹಾಗೆ ಬಿಡಿ ಮತ್ತು ಬಳಿಕ ಬಾಯಿ ತೊಳೆಯಿರಿ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಇದು ಕೊಲ್ಲುವುದು. ವಾರದಲ್ಲಿ ಎರಡು ಸಲ ನೀವು ಇದನ್ನು ಬಳಸಿಕೊಳ್ಳಿ.

ಲವಂಗದ ಎಣ್ಣೆ

ಲವಂಗದ ಎಣ್ಣೆ

ಲವಂಗದ ಎಣ್ಣೆಯು ಬಾಯಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಎರಡು ಅಥವಾ ಮೂರು ಹನಿ ಲವಂಗದ ಎಣ್ಣೆ ತೆಗೆದುಕೊಳ್ಳಿ. ಇದನ್ನು ನಿಧಾನವಾಗಿ ಒಸಡುಗಳಿಗೆ ಮಸಾಜ್ ಮಾಡಿ. ದಂತ ಸಮಸ್ಯೆಯಿದ್ದರೆ, ಆಗ ನೀವು ಲವಂಗವನ್ನು ಹಲ್ಲಿನ ಮಧ್ಯೆ ಇಟ್ಟುಬಿಡಿ. ದಿನದಲ್ಲಿ ಎರಡು ಸಲ ನೀವು ಎಣ್ಣೆ ಹಚ್ಚಿಕೊಳ್ಳಬಹುದು.

Most Read: ವಸಡಿನ ರಕ್ತಸ್ರಾವ ನಿವಾರಣೆಗೆ ಮನೆಮದ್ದು

ಶುಂಠಿ

ಶುಂಠಿ

ಒಂದು ಸಣ್ಣ ತುಂಡು ಶುಂಠಿ ತೆಗೆದುಕೊಳ್ಳಿ ಮತ್ತು ಸರಿಯಾಗಿ ಜಜ್ಜಿ. ಇದಕ್ಕೆ ಅರ್ಧ ಚಮಚದಷ್ಟು ಉಪ್ಪು ಹಾಕಿಕೊಳ್ಳಿ. ಇದರ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ ಮತ್ತು ಅದನ್ನು ಒಸಡಿಗೆ ಹಚ್ಚಿಕೊಳ್ಳಿ. ಊತ ಇರುವ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. 10-12 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ನೀರಿನಿಂದ ಬಾಯಿ ತೊಳೆಯಿರಿ. ದಿನದಲ್ಲಿ ಎರಡು ಸಲ ನೀವು ಹೀಗೆ ಮಾಡಿ.

ಕ್ಯಾಲ್ಸಿಯಂ ಹೆಚ್ಚಿರುವ ಆಹಾರ ಸೇವಿಸಿ

ಕ್ಯಾಲ್ಸಿಯಂ ಹೆಚ್ಚಿರುವ ಆಹಾರ ಸೇವಿಸಿ

ನಮ್ಮ ದೇಹದ ಅತಿ ಗಡಸು ಭಾಗಗಳಾದ ಮೂಳೆ ಮತ್ತು ಹಲ್ಲುಗಳ ದೃಢತೆಗೆ ಕ್ಯಾಲ್ಸಿಯಂ ಅಗತ್ಯವಾಗಿದೆ. ಹಲ್ಲುಗಳು ಗಟ್ಟಿಗೊಳ್ಳಲು ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳನ್ನು ಸೇವಿಸಿ. ಹಸುವಿನ ಹಾಲು, ಒಣಫಲಗಳು,ಮೊಸರು, ಹಸಿರಾದ ಮತ್ತು ದಪ್ಪನಾದ ಎಲೆಗಳಿರುವ ಸೊಪ್ಪು (ಪಾಲಕ್ ಮತ್ತು ಬಸಲೆ) ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸಿ. ಇದರಿಂದ ದೇಹಕ್ಕೆ ಹೆಚ್ಚಿನ ಕ್ಯಾಲ್ಸಿಯಂ ದೊರೆತು ಹಲ್ಲು ಮತ್ತು ಮೂಳೆಗಳನ್ನು ದೃಢಗೊಳಿಸಲು ನೆರವಾಗುತ್ತದೆ. ಜೊತೆಗೇ ರೋಗನಿರೋಧಕ ಶಕ್ತಿಯು ಹೆಚ್ಚಿ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

English summary

Home Remedies To Treat Swollen Gums

Swollen gums are relatively common. The good news is, there’s a lot you can do at home to help alleviate swelling and minimize discomfort. If your gums remain swollen for more than a week, make an appointment with your dentist. They can diagnose the exact cause of the swelling, and recommend a treatment plan.
X
Desktop Bottom Promotion