For Quick Alerts
ALLOW NOTIFICATIONS  
For Daily Alerts

ಕಿವಿಯ ರಂಧ್ರದಲ್ಲಿ ಪದೇ ಪದೇ ಕಾಡುವ ತುರಿಕೆಗೆ ಪರಿಣಾಮಕಾರಿ ಮನೆಮದ್ದುಗಳು

|

ನಮ್ಮ ಮುಖದ ಮೇಲಿರುವಂತಹ ಹೆಚ್ಚಿನ ಅಂಗಾಂಗಗಳು ತುಂಬಾ ಸೂಕ್ಷ್ಮವಾಗಿ ಇರುವಂತದ್ದಾಗಿದೆ. ಮುಖ್ಯವಾಗಿ ಕಣ್ಣುಗಳು, ಮೂಗು ಹಾಗೂ ಕಿವಿಗಳು. ಇದರಲ್ಲಿ ಕಿವಿಯಲ್ಲಿ ಸ್ವಲ್ಪ ಏನಾದರೂ ಕಿರಿಕಿರಿ ಆದರೆ ನಮಗೆ ತುಂಬಾ ಸಮಸ್ಯೆಯಾಗುವುದು. ಸಣ್ಣ ಇರುವೆ ಕಿವಿಯೊಳಗೆ ಹೋದರೂ ನಮಗೆ ದೊಡ್ಡದೇನೋ ಹೋಗಿದೆ ಎನ್ನುವಂತಹ ಭಾವನೆ ಆಗುವುದು. ಯಾಕೆಂದರೆ ಕಿವಿಯ ರಂಧ್ರವು ತುಂಬಾ ಸೂಕ್ಷ್ಮವಾಗಿರುವಂತ್ದದಾಗಿದೆ. ಕಿವಿಗಳು ತುಂಬಾ ಸಣ್ಣದಾಗಿದ್ದರೂ ಅದರ ಮೇಲೆ ಧೂಳು ಮತ್ತು ಸೋಂಕು ಪರಿಣಾಮ ಬೀರುವುದು. ತುರಿಕೆ ಉಂಟು ಮಾಡುವಂತಹ ಕಿವಿಯ ರಂಧ್ರಗಳು ಯಾರಿಗಾದರೂ ಸಮಸ್ಯೆ ಉಂಟು ಮಾಡಬಹುದು.

ಕಿವಿಯಲ್ಲಿ ಆಗಾಗ ಉಂಟಾಗುವಂತಹ ತುರಿಕೆ ಅಥವಾ ಸಮಸ್ಯೆಯಿಂದಾಗಿ ನೀವು ಕೈಬೆರಳು ಅಥವಾ ಬೇರೆ ಏನಾದರೂ ಸಾಮಗ್ರಿ ಹಾಕಿಕೊಂಡು ಕೆರೆದುಕೊಳ್ಳಬಹುದು. ಆದರೆ ನೀವು ಇಂತಹ ಸಾಮಗ್ರಿ ಬಳಕೆ ಮಾಡಿದರೆ ಅದರಿಂದ ಕಿವಿ ತಮಟೆ ಮೇಲೆ ತೊಂದರೆ ಆಗುವ ಸಾಧ್ಯತೆಯು ಇದೆ. ನೀವು ಕಿವಿಯನ್ನು ಅತಿಯಾಗಿ ತುರಿಸಿಕೊಂಡರೆ ಆಗ ಕಿವಿಯ ಒಳಗಿನ ಪದರವು ಕೆಂಪಾಗಬಹುದು ಮತ್ತು ನೋವು ಕಾಣಿಸಿಕೊಳ್ಳಬಹುದು. ಕಿವಿಯ ರಂಧ್ರದಲ್ಲಿ ಪದೇ ಪದೇ ತುರಿಕೆ ಕಾಣಿಸಿಕೊಳ್ಳುತ್ತಾ ಇದ್ದರೆ ಆಗ ನೀವು ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾಕೆಂದರೆ ಕಿವಿಯ ಒಳಗಿನ ಉರಿಯೂತ, ತೀವ್ರ ತುರಿಕೆ ಮತ್ತು ನೋವಿನಿಂದ ಹೀಗೆ ಆಗಬಹುದು.

ಕಿವಿಯ ರಂಧ್ರ ತುರಿಸಿಕೊಳ್ಳಲು ಕೆಲವು ಕಾರಣಗಳು

ಕಿವಿಯ ರಂಧ್ರ ತುರಿಸಿಕೊಳ್ಳಲು ಕೆಲವು ಕಾರಣಗಳು

*ಕಿವಿ ಒಣಗಿರುವುದು

*ಮೇಣವು ಸಂಗ್ರಹವಾಗಿರುವುದು

*ಸೋಂಕು

*ಅಲರ್ಜಿ

*ಇಸಬು ಅಥವಾ ಸೋರಿಯಾಸಿಸ್

Most Read: ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ಕಿವಿಯ ರಂಧ್ರವು ತುರಿಕೆ ಉಂಟು ಮಾಡುತ್ತಲಿದ್ದರೆ ಕೆಲವೊಂದು ನೈಸರ್ಗಿಕ ಪರಿಹಾರಗಳು

ಕಿವಿಯ ರಂಧ್ರವು ತುರಿಕೆ ಉಂಟು ಮಾಡುತ್ತಲಿದ್ದರೆ ಕೆಲವೊಂದು ನೈಸರ್ಗಿಕ ಪರಿಹಾರಗಳು

ಕಿವಿ ಸ್ವಚ್ಛ ಮಾಡಿಕೊಳ್ಳಿ

*ಕಿವಿಯಲ್ಲಿ ಯಾವುದೇ ರೀತಿಯ ಅನಗತ್ಯ ಸಂವೇದನೆಯು ಉಂಟಾಗದೆ ಇರದಂತೆ ಮಾಡಲು ಆಗಾಗ ಕಿವಿ ಸ್ವಚ್ಛ ಮಾಡಿಕೊಳ್ಳಿಸುತ್ತಾ ಇರಬೇಕು. ನಿಯಮಿತವಾಗಿ ಕಿವಿ ಸ್ವಚ್ಛ ಮಾಡಿಕೊಳ್ಳುತ್ತಾ ಇದ್ದರೆ ಆಗ ಅದರಿಂದ ಕಿವಿಯ ಸ್ವಚ್ಛತೆ ಕಾಪಾಡಲು ಸಾಧ್ಯವಾಗುವುದು ಮಾತ್ರವಲ್ಲದೆ ಕಿವಿಯಲ್ಲಿ ಯಾವುದೇ ರೀತಿಯ ಮೇಣವು ಸಂಗ್ರಹವಾಗದಂತೆ ತಡೆಯಲು ಸಾಧ್ಯವಾಗುವುದು. ಕಿವಿಯಲ್ಲಿ ಸಂಗ್ರಹವಾಗಿರುವಂತಹ ಮೇಣವನ್ನು ತೆಗೆಯಲು ಇಯರ್ ಬಡ್ಸ್ ಬಳಸಿಕೊಳ್ಳಿ. ಮೇಣವು ಸಂಗ್ರಹವಾದರೆ ಅದರಿಂದ ಕಿವಿಯ ರಂಧ್ರವು ತುರಿಕೆ ಉಂಟು ಮಾಡಲು ಆರಂಭವಾಗುವುದು. ಮೇಣವು ಸಂಗ್ರಹವಾಗುವುದನ್ನು ತಡೆಯಲು ಸಾಧ್ಯವಾದರೆ ಆಗ ತುರಿಕೆ ಕೂಡ ದೂರವಿಡಬಹುದು.

ಬೆಳ್ಳುಳ್ಳಿ ಎಣ್ಣೆ

ಬೆಳ್ಳುಳ್ಳಿ ಎಣ್ಣೆ

ಬೆಳ್ಳುಳ್ಳಿ ಎಣ್ಣೆಯು ಒಳ್ಳೆಯ ಸೂಕ್ಷ್ಮಾಣು ವಿರೋಧಿ ಗುಣವನ್ನು ಹೊಂದಿದೆ. ಇದು ಕಿವಿ ಒಳಗಡೆ ಇರುವಂತಹ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವನ್ನು ತುಂಬಾ ಸೂಕ್ಷ್ಮವಾಗಿ ಕೊಂದು ಹಾಕುವುದು. ಸ್ವಲ್ಪ ಬೆಳ್ಳುಳ್ಳಿ ಎಣ್ಣೆಯನ್ನು ಬಿಸಿ ಮಾಡಿ ಅದು ಉಗುರು ಬೆಚ್ಚಗೆ ಇರುವ ವೇಳೆ ಅದನ್ನು ಕಿವಿಗೆ ಹನಿ ಹನಿಯಾಗಿ ಹಾಕಿಕೊಳ್ಳಿ.

ಕಿವಿಯಲ್ಲಿರುವ ತೇವಾಂಶ ತೆಗೆಯಿರಿ

ಕಿವಿಯಲ್ಲಿರುವ ತೇವಾಂಶ ತೆಗೆಯಿರಿ

ನೀವು ಈಜುವ ವೇಳೆ ಮತ್ತು ಸ್ನಾನ ಮಾಡುವ ವೇಳೆ ಕಿವಿಯೊಳಗೆ ನೀರು ಹೋಗದಂತೆ ಎಚ್ಚರಿಕೆ ವಹಿಸುವುದು ಅತೀ ಅಗತ್ಯವಾಗಿರುವುದು. ಈಜುಗಾರರ ಕಿವಿಯ ಒಳಗಡೆ ಹೆಚ್ಚಾಗಿ ತೇವಾಂಶವು ಇರುವುದು. ಇದರಿಂದಾಗಿ ಕಿವಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವು ನಿರ್ಮಾಣವಾಗುವುದು. ಯಾಕೆಂದರೆ ತೇವಾಂಶವಿದ್ದರೆ ಆಗ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವು ಬೇಗನೆ ಬೆಳೆಯುವುದು. ಇದರಿಂದಾಗಿ ಕಿವಿಯಲ್ಲಿನ ತುರಿಕೆ ಮತ್ತು ತೀವ್ರವಾದ ಸೋಂಕು ನಿವಾರಣೆ ಮಾಡಲು ಸಾಧ್ಯವಾಗುವುದು.

Most Read: ಏಳು ದಿನಗಳ ಕಾಲ ಬ್ರೇಕ್‌ಫಾಸ್ಟ್‌ಗೆ ಕೇವಲ ಮೊಟ್ಟೆಗಳನ್ನು ಮಾತ್ರ ತಿಂದ ಮಹಿಳೆಗೆ ಏನಾಯಿತು ಗೊತ್ತೇ?

ಬಿಳಿ ವಿನೇಗರ್

ಬಿಳಿ ವಿನೇಗರ್

ಕಿವಿ ರಂಧ್ರವು ತುಂಬಾ ತುರಿಸುತ್ತಿದ್ದರೆ ಆಗ ನೀವು ಬಿಳಿ ವಿನೇಗರ್ ನ್ನು ಬಳಸಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಬಿಳಿ ವಿನೇಗರ್ ತುಂಬಾ ಸುಲಭವಾಗಿ ಸಿಗುವುದು. ವಿನೇಗರ್ ಮತ್ತು ನೀರನ್ನು ಸಮ ಪ್ರಮಾಣದಲ್ಲಿ ಸೇರಿಸಿಕೊಳ್ಳಿ. ಈ ಮಿಶ್ರಣವನ್ನು ಮೂರು ದಿನಗಳ ಕಾಲ ಪ್ರತೀ ದಿನ ಕಿವಿಗೆ ಹಾಕಿಕೊಳ್ಳಿ. ಒಂದು ಸಲ ನೀವು ಎರಡು ಹನಿ ಮಾತ್ರ ಹಾಕಿಕೊಳ್ಳಿ. ಇದರಿಂದ ಕಿವಿಯಲ್ಲಿ ಉಂಟಾಗಿರುವಂತಹ ತುರಿಕೆ ಕಡಿಮೆ ಆಗುವುದು.

ಹಬೆ ಮತ್ತು ಮುಕ್ಕಳಿಸುವುದು

ಹಬೆ ಮತ್ತು ಮುಕ್ಕಳಿಸುವುದು

ಹಬೆ ಮತ್ತು ಮುಕ್ಕಳಿಸುವುದರಿಂದ ಕಿವಿಯ ತುರಿಕೆ ಕಡಿಮೆ ಮಾಡಿಕೊಳ್ಳಬಹುದು. ನೀವು ದಿನವೂ ಹಬೆ ತೆಗೆದುಕೊಂಡು ತುರಿಕೆ ಕಡಿಮೆ ಮಾಡಬಹುದು. ಮುಕ್ಕಳಿಸಿಕೊಳ್ಳಲು ನೀವು ಒಂದು ಲೋಟ ನೀರು ಬಿಸಿ ಮಾಡಿ ಅದಕ್ಕೆ ಉಪ್ಪು ಹಾಕಿಕೊಳ್ಳಿ. ನೀವು ಈ ನೀರಿನಿಂದ ಮಲಗುವ ಮೊದಲು ಬಾಯಿ ಮುಕ್ಕಳಿಸಿದರೆ ಪರಿಣಾಮಕಾರಿ ಫಲಿತಾಂಶ ಸಿಗುವುದು.

ಟ್ರೀ ಟ್ರೀ ಮರದ ಎಣ್ಣೆ

ಟ್ರೀ ಟ್ರೀ ಮರದ ಎಣ್ಣೆ

ಟ್ರೀ ಟ್ರೀ ಮರದ ಎಣ್ಣೆಯು ಸೂಕ್ಷ್ಮಾಣು ವಿರೋಧಿ ಗುಣಗಳನ್ನು ಹೊಂದಿರುವಂತಹ ಸಾರಭೂತ ತೈಲವಾಗಿದೆ. ಇದು ಎಲ್ಲಾ ರೀತಿಯ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ವೈರಸ್ ನಿಂದ ಕಾಪಾಡುವುದು. ಟ್ರೀ ಟ್ರೀ ಮರದ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಇದರ ಕೆಲವು ಹನಿಯನ್ನು ನೀವು ಕಿವಿಗೆ ಬಿಟ್ಟುಕೊಳ್ಳಿ. ಸ್ವಲ್ಪ ಸಮಯ ತಲೆಯನ್ನು ಹಾಗೆ ಬಗ್ಗಿಸಿಕೊಳ್ಳಿ. ಇದರ ಬಳಿಕ ನೀವು ಅತಿಯಾಗಿರುವಂತಹ ಎಣ್ಣೆಯನ್ನು ಹೊರಗೆ ತೆಗೆಯಿರಿ. ಕೆಲವು ನಿಮಿಷ ಬಿಟ್ಟು ಸರಿಯಾದ ರೀತಿಯಲ್ಲಿ ಕಿವಿಯನ್ನು ಸ್ವಚ್ಛ ಮಾಡಿ. ಇನ್ನು ಹೆಚ್ಚು ಪರಿಣಾಮಕಾರಿಯಾಗಿರಲು ಕೆಲವು ಹನಿ ಆಲಿವ್ ತೈಲವನ್ನು ಇದನ್ನು ಸೇರಿಸಿಕೊಳ್ಳಬಹುದು.

English summary

Home Remedies for Itchy Ear Canal

Ears might be small but they can get affected by dust or infection. An itchy ear canal can happen to anyone irrespective of age. You continuously feel like scratching your ears to decrease the discomfort. If you use any object to scratch your ears, you could damage your inner membrane as well the tiny bone that helps you to hear. Frequent scratching can lead to redness around the opening of the ear and pain.
X
Desktop Bottom Promotion