For Quick Alerts
ALLOW NOTIFICATIONS  
For Daily Alerts

ಸುಲಭವಾದ ಮನೆ ಮದ್ದುಗಳ ಹಿಂದಿರುವ ವೈಜ್ಞಾನಿಕ ವಿಸ್ಮಯಗಳು

|

"ಮನೆ ಮದ್ದು" ಅಥವಾ "ಮನೆ ಔಷಧಿ" ಎಂದರೆ ಸಾಕು ನಮ್ಮ ಅಜ್ಜ ಅಜ್ಜಿ ನನಪಿಗೆ ಬರುತ್ತಾರೆ . ಏಕೆಂದರೆ ಅವರ ಹುಟ್ಟಿನ ಮತ್ತು ಬದುಕಿನ ಕಾಲದಲ್ಲಿ ಯಾರೇ ನುರಿತ ವೈದ್ಯರಾಗಲೀ ಅಥವಾ ಸುಸ್ಸಜ್ಜಿತ ಆಸ್ಪತ್ರೆಗಳಾಗಲೀ ಇರಲಿಲ್ಲ . ಬ್ರಿಟೀಷರ ಕಾಲವಾದರೂ ಅಥವಾ ಅದಕ್ಕಿಂತ ಹಿಂದಿನ ಕಾಲವಾದರೂ ಈ ಮನೆ ಮದ್ದುಗಳಿಗೆ ಅಷ್ಟೊಂದು ಮಹತ್ವ .

ಮನೆ ಮದ್ದುಗಳೆಂದು ಅವರೇನೂ ಯಾವುದೋ ದೂರದ ಕಾಡಿಗೆ ಹೋಗಿ ಅಲ್ಲಿಂದ ಯಾವುದೋ ಆಶ್ಚರ್ಯಕರ ಸಸಿಯನ್ನೋ ಅಥವಾ ಬೇರನ್ನೋ ತಂದು ಮಾಡುವ ಔಷಧ ಒಂದು ಕಡೆಯಾದರೆ, ತಮ್ಮ ಮನೆಯಲ್ಲೇ ಅಥವಾ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸುಲಭವಾಗಿ ಸಿಗುತ್ತಿದ್ದಂತಹ ವಸ್ತುಗಳಾದ ಜೇನುತುಪ್ಪ, ಹಣ್ಣುಗಳು, ಗಿಡಮೂಲಿಕೆಗಳು ಮತ್ತು ನೈಸರ್ಗಿಕ ತೈಲಗಳು ಇವುಗಳನ್ನು ಉಪಯೋಗಿಸಿಕೊಂಡು ತಯಾರು ಮಾಡಿಕೊಡುತ್ತಿದ್ದ ಔಷಧಿಗಳು ಬಹಳ ಪರಿಣಾಮಕಾರಿಯಾಗಿರುತ್ತಿದ್ದವು ಮತ್ತು ಧೀರ್ಘ ಕಾಲದ ವರೆಗೂ ಆ ಮದ್ದಿನ ಶಕ್ತಿ ಮನುಷ್ಯನ ದೇಹದ ಒಳಗೆ ಅಡಗಿ ಬೇರೆ ಯಾವ ಕಾಯಿಲೆಯೂ ಬರದಂತೆ ರಕ್ಷಾ ಕವಚವಾಗಿರುತ್ತಿದ್ದವು.

ಆದರೆ ಈಗಿನ ವೈದ್ಯಕೀಯ ಮತ್ತು ವೈಜ್ಞಾನಿಕ ಲೋಕ ಎಲ್ಲದಕ್ಕೂ ತರ್ಕ ಮಾಡದೇ ಬಿಡುವುದಿಲ್ಲ ಮತ್ತು ಅದರ ಹಿಂದಿನ ಕಾರಣ ತಿಳಿದುಕೊಳ್ಳದೆ ಬಿಡುವುದಿಲ್ಲ . ಹೀಗೆಯೇ ಈ ಮನೆ ಮದ್ದುಗಳ ಪರಿಣಾಮಕಾರಿ ಮಹತ್ವಗಳ ಕಾರಣಗಳನ್ನು ಕೆದಕಿ ಹೊರಟಾಗ ಹಿಂದೂಜಾ ಆಸ್ಪತ್ರೆಯ ಜನರಲ್ ವೈದ್ಯರಾದ ಡಾ.ಅನಿಲ್ ಬಲಾನಿ ಯವರು ಹೇಳುವಂತೆ ಈ ಮನೆ ಮದ್ದುಗಳು ಸಾಮಾನ್ಯ ರೋಗಗಳಿಗೆ ಉತ್ತಮ ಔಷಧಿಯಾಗಿದ್ದೂ ಇವುಗಳನ್ನು ಬುದ್ಧಿವಂತಿಕೆಯಿಂದ ಬಳಸಬೇಕೆಂದು ಹೇಳುತ್ತಾರೆ . ಈಗ ಕೆಳಗೆ ಸೂಚಿರುವ ಒಂದೊಂದೇ ಮನೆ ಮದ್ದುಗಳ ಹಿಂದಿರುವ ವೈಜ್ಞಾನಿಕ ಸತ್ಯಗಳನ್ನು ಸಂಬಂಧ ಪಟ್ಟ ವೈದ್ಯರುಗಳಿಂದ ತಿಳಿಯೋಣವೇ !!!

ಹಣ್ಣಿನ ರಸದ ಜೊತೆಗೆ ಕಲ್ಲು ಉಪ್ಪು , ಹೊಟ್ಟೆ ನೋವು ಮಾಯ

ಹಣ್ಣಿನ ರಸದ ಜೊತೆಗೆ ಕಲ್ಲು ಉಪ್ಪು , ಹೊಟ್ಟೆ ನೋವು ಮಾಯ

ಸಾಮಾನ್ಯವಾಗಿ ನಾವು ಅಡುಗೆಗೆ ಕಲ್ಲು ಉಪ್ಪಿಗಿಂತ ಪುಡಿ ಉಪ್ಪನ್ನು ಬಳಸುತ್ತೇವೆ . ಏಕೆಂದರೆ ನೋಡಲು ಬೆಳ್ಳಗೆ ಪರಿಶುದ್ಧವಾಗಿ ಕಾಣುತ್ತದೆ ಮತ್ತು ಮಾಡುವ ಅಡುಗೆಯಲ್ಲಿ ಬಹು ಬೇಗನೆ ಕರಗುತ್ತದೆ ಎಂದು . ಆದರೆ ಇದು ಕಲ್ಲು ಉಪ್ಪಿನಷ್ಟು ಆರೋಗ್ಯಕ್ಕೆ ಪರಿಣಾಮಕಾರಿಯಲ್ಲ , ನೆನಪಿರಲಿ . ಏಕೆಂದರೆ ಮಾಹಿಯ ಏಸ್ . ಎಲ್ . ರಹೇಜಾ ಫೋರ್ಟಿಸ್ ಹಾಸ್ಪಿಟಲ್ ನ ಸಾಮಾನ್ಯ ವೈದ್ಯರಾದ ಡಾ . ರಾಜೇಶ್ ಗೋಕಣಿಯವರು ಹೇಳುವಂತೆ ಕಲ್ಲು ಉಪ್ಪಿನಲ್ಲಿ ನೈಸರ್ಗಿಕ ಖನಿಜಗಳು ಅಡಗಿರುತ್ತವೆ ಮತ್ತು ಇವು ಮನುಷ್ಯನ ಜೀರ್ಣ ಕ್ರಿಯೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ . ಇನ್ನು ನಿಂಬೆ ರಸದೊಂದಿಗೆ ಸೇವಿಸಿದ ಕಲ್ಲು ಉಪ್ಪು ಶ್ವಾಸ ಕೋಶ ದಲ್ಲಿನ ಗಾಳಿಯನ್ನು ಹೊರ ಹಾಕುತ್ತದೆ ಮತ್ತು ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ .

ಚಿಕನ್ ಸೂಪ್ , ಜ್ವರ ಮತ್ತು ಸಾಮಾನ್ಯ ಶೀತ ಎರಡಕ್ಕೂ ರಾಮಬಾಣ

ಚಿಕನ್ ಸೂಪ್ , ಜ್ವರ ಮತ್ತು ಸಾಮಾನ್ಯ ಶೀತ ಎರಡಕ್ಕೂ ರಾಮಬಾಣ

ಡಾ ಬಲ್ಲಾನಿ ಯವರು ಹೇಳುವಂತೆ ಚಿಕನ್ ಸೂಪ್ ನಿಂದ ಬಹಳ ಉಪಯೋಗವಿದೆ . ಯಾವುವೆಂದರೆ , ಚಿಕನ್ ಸೂಪ್ ಗಂಟಲು ಕಟ್ಟಿಕೊಳ್ಳುವುದನ್ನು ಮತ್ತು ಮೂಗು ಕಟ್ಟಿಕೊಳ್ಳುವುದನ್ನು ತಡೆಯುತ್ತದೆ . ಇದರಿಂದ ಗಂಟಲಿನ ಕಿರಿಕಿರಿ ದೂರವಾಗುತ್ತದೆ . ಬಿಸಿಯಾದ ಚಿಕನ್ ಸೂಪ್ ನಮ್ಮ ದೇಹದಲ್ಲಿ ನೀರಿನ ಅಂಶ ಹೆಚ್ಚು ಮಾಡುತ್ತದೆ . ಇದರಿಂದ ನಮ್ಮ ದೇಹ ಸದಾ ರೀ ಹೈಡ್ರೇಟ್ ಆಗಿಯೇ ಇರುತ್ತದೆ ಮತ್ತು ಬೇಗನೆ ಹುಷಾರಾಗಲು ಸಹಾಯ ಮಾಡುತ್ತದೆ . ಇಷ್ಟಲ್ಲದೆ ಚಿಕನ್ ಸೂಪ್ ನಮ್ಮ ದೇಹದಲ್ಲಿನ ನ್ಯೂಟ್ರೋಫಿಲ್ ಎಂಬ ಬಿಳಿ ಕಣಗಳನ್ನು ಉಸಿರಾಡುವ ಶ್ವಾಸಕೋಶಕ್ಕೆ ಹೋಗಲು ತಪ್ಪಿಸುವ ಕೆಲಸ ಮಾಡಿ ನಮ್ಮ ಮೂಗಿನ ಒಳ್ಳೆಯಲ್ಲಿರುವ " ನಾಸಲ್ ಸಿಲಿಯಾ " ಗಳನ್ನು ಚೆನ್ನಾಗಿ ಕೆಲಸ ಮಾಡಲು ಪ್ರೇರೇಪಿಸಿ ಮೂಗಿನಲ್ಲಿ ನೆಗಡಿಯಾಗುವುದನ್ನು ತಪ್ಪಿಸುತ್ತದೆ.

ಹಾಲಿಗೆ ಅರಿಸಿನ ಪುಡಿ ಬೆರೆಸಿ ಕುಡಿಯುವುದರಿಂದ ಮೈ ಕೈ ನೋವು ಕಡಿಮೆಯಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಹಾಲಿಗೆ ಅರಿಸಿನ ಪುಡಿ ಬೆರೆಸಿ ಕುಡಿಯುವುದರಿಂದ ಮೈ ಕೈ ನೋವು ಕಡಿಮೆಯಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಹಾಲು ಮತ್ತು ಅರಿಶಿನ ಇಬ್ಬರೂ ಉತ್ತಮ ಗೆಳೆಯರು . ಹಾಲಿನಲ್ಲಿ ಪ್ರೋಟೀನ್ ಅಂಶ ಹೇರಳವಾಗಿರುವುದರಿಂದ ಆಗಿರುವ ಗಾಯವನ್ನು ಬಹಳ ಬೇಗನೆ ಮಾಗುವಂತೆ ಮಾಡುತ್ತದೆ . ಇನ್ನು ಅರಿಶಿನ ಪುಡಿಯಲ್ಲಿ ಆಂಟಿ ಇಂಪ್ಲಾಮೇಟರಿ ಗುಣ ಲಕ್ಷಣ ಗಳಿರುವುದರಿಂದ ಗಾಯದ ಸುತ್ತಮುತ್ತ ಉಂಟಾಗಿರುವ ಊತವನ್ನು ಕಡಿಮೆ ಮಾಡುತ್ತದೆ . ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಆಂಟಿ ಆಕ್ಸಿಡೆಂಟ್ ಅಂಶ ಕೂಡ ಇದೆ ಎಂದು ಡಾ ಬಲ್ಲಾನಿ ಯವರು ಹೇಳುತ್ತಾರೆ .

ಆಯಿಲ್ ಮಸಾಜ್ ಮಾಡಿದರೆ ಮಕ್ಕಳಿಗೆ ಮೂಳೆಗಳು ಬಲಿಷ್ಠಗೊಳ್ಳುತ್ತವೆ ಮತ್ತು ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ

ಆಯಿಲ್ ಮಸಾಜ್ ಮಾಡಿದರೆ ಮಕ್ಕಳಿಗೆ ಮೂಳೆಗಳು ಬಲಿಷ್ಠಗೊಳ್ಳುತ್ತವೆ ಮತ್ತು ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ

ಆರೋಗ್ಯ ತಜ್ಞರು ಹೇಳುವಂತೆ ಸಾಸಿವೆ ಎಣ್ಣೆ ಉಷ್ಣತೆಯಿಂದ ಕೂಡಿದೆ . ಇದರಿಂದ ಮಸಾಜ್ ಮಾಡಿದರೆ ಚರ್ಮದ ಮೇಲಿನ ಬೆವರಿನ ಗ್ರಂಥಿಗಳನ್ನು ತೆರೆಯುವಂತೆ ಮಾಡುತ್ತದೆ ಮತ್ತು ಚರ್ಮ ಬಹಳ ನುಣುಪಾಗುತ್ತದೆ ಹಾಗೆ ಮೃದುವಾಗುತ್ತದೆ . ನಮಗೆಲ್ಲಾ ತಿಳಿದಿರುವಂತೆ ಆಯಿಲ್ ಮಸಾಜ್ ಮಾಡಿದರೆ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ ಮತ್ತು ಮಗುವಿನ ದೇಹಕ್ಕೆ ಒಂದು ರೀತಿಯ ಆರಾಮವೆನಿಸುತ್ತದೆ . ಅಷ್ಟೇ ಅಲ್ಲದೆ ಸಾಸಿವೆ ಎಣ್ಣೆಯ ಕಡು ವಾಸನೆಯಿಂದ ಸೊಳ್ಳೆಗಳು ಮತ್ತು ಕೀಟಗಳು ದೂರ ಉಳಿಯುತ್ತವೆ . ಮಗುವಿಗೆ ಒಳ್ಳೆಯ ನಿದ್ದೆ ಹತ್ತುತ್ತದೆ . ಆದರೆ ಇಲ್ಲಿ ಒಂದು ಗಮನಿಸಬೇಕಾದ ಅಂಶ ಎಂದರೆ ಸಾಸಿವೆ ಎಣ್ಣೆಯನ್ನು ಎಳೆ ಮಕ್ಕಳಿಗೆ ಉಪಯೋಗಿಸಬಾರದು . ಮಗುವಿಗೆ ಕನಿಷ್ಠ ಒಂದು ವರ್ಷವಾದರೂ ಆಗಿರಬೇಕು .

ಶುಂಠಿಯ ಜೊತೆಗೆ ಜೇನುತುಪ್ಪ ತಿಂದರೆ ಕೆಮ್ಮು ಇಲ್ಲವೇ ಇಲ್ಲ

ಶುಂಠಿಯ ಜೊತೆಗೆ ಜೇನುತುಪ್ಪ ತಿಂದರೆ ಕೆಮ್ಮು ಇಲ್ಲವೇ ಇಲ್ಲ

ನೀರಿನಲ್ಲಿ ಕುದಿಸಿರುವ ಶುಂಠಿಗೆ ಒಂದು ಚಮಚ ಜೇನು ತುಪ್ಪ ಸೇರಿಸಿದರೆ ಒಂದು ರೀತಿಯ ಕಷಾಯ ತಯಾರಾಗುತ್ತದೆ . ಅದರಿಂದ ಕೆಮ್ಮು ಮತ್ತು ಗಂಟಲು ಕೆರೆತ ಶಮನವಾಗುತ್ತದೆ . ಶುಂಠಿ ಬಗ್ಗೆ ಹೇಳಬೇಕೆಂದರೆ ಅದು ಕೆಮ್ಮಿಗೆ ಪರಿಣಾಮಕಾರಿ ಮದ್ದು . ಶುಂಠಿ ಒಂದು ಆಂಟಿ ಆಕ್ಸಿಡೆಂಟ್ ಆಗಿರುವುದರಿಂದ ಖಾಯಿಲೆ ಬಹಳ ಬೇಗನೆ ಗುಣ ಹೊಂದುತ್ತದೆ . ಇದನ್ನು ಜೇನುತುಪ್ಪದ ಜೊತೆಗೆ ಉಪಯೋಗಿಸಿದರೆ ಗಂಟಲಿನ ಒಳ ಪದರದಲ್ಲಿ ಜಾರಿಕೆಯನ್ನು ಉಂಟು ಮಾಡಿ ಅಲ್ಲಿರುವ ಕೀಟಾಣುಗಳನ್ನು ಕೊಲ್ಲುತ್ತದೆ ಎಂದು ಡಾ ಸಮಧಾನಿ ಯವರು ಹೇಳುತ್ತಾರೆ . ಆದರೆ ಇದನ್ನೂ ಮಿತಿಯಾಗಿ ಉಪಯೋಗಿಸಿದರೆ ಒಳ್ಳೆಯದು ಎಂಬುದು ವೈದ್ಯರ ಸಲಹೆ. ನೋಡಿದಿರಲ್ಲ ಕಾಲ ಹೇಗೇ ಬದಲಾದರೂ ಒಂದೊಂದು ರೀತಿಯ ಮನೆ ಮದ್ದಿಗೂ ಅದರದೇ ಆದ ರೋಗ ತಡೆಗಟ್ಟುವ ಶಕ್ತಿ ಇದ್ದೇ ಇರುತ್ತದೆ ಮತ್ತು ಅದರ ಹಿಂದೆಯೇ ವೈದ್ಯಕೀಯ ಕಾರಣ ಕೂಡ ಇದೆ . ಯಾವುದನ್ನೂ ಕಡೆಗಣಿಸುವಂತಿಲ್ಲ ಅಲ್ಲವೇ ?

English summary

home remedies and the science behind them

We all know of popular homegrown remedies but how effective are they? Dr Anil Ballani, Consulting General Physician, Hinduja Hospital, says, "Home remedies offer cures with simple, ingredients such as honey, fruits, herbs and natural oils. They, at times, can cure common ailments with no side effects, but they need to be used judiciously." We look at five common home remedies and deconstruct and explain the science behind them.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X