For Quick Alerts
ALLOW NOTIFICATIONS  
For Daily Alerts

ಸುಡುವ ಬಿಸಿಲಿನ ಆಘಾತ ತಪ್ಪಿಸಲು ಕೆಲವು ಮನೆಮದ್ದುಗಳು

|

ಬಿಸಿಲಿನ ಝಳ ತಾಳಲಾರದೆ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಎಲ್ಲಿ ನೋಡಿದರೂ ಬಿಸಿಲಿನ ತಾಪ, ನೀರಿಗಾಗಿ ಹಾಹಾಕಾರ ಕಾಣಿಸುತ್ತಿದೆ. ಇಂತಹ ಸಮಯದಲ್ಲಿ ಬಿಸಿಲಿನಿಂದಾಗಿ ಕೆಲವೊಂದು ಸಲ ಆಘಾತವಾಗುವುದು ಸಹಜ. ಯಾಕೆಂದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗಿ ಆಘಾತವು ಆಗಬಹುದು. ಮುಖ್ಯವಾಗಿ ಬಿಸಿಲಿನಲ್ಲಿ ಹೊರಗಡೆ ಸುತ್ತಾಡುವುದು ಮತ್ತು ಕೆಲಸ ಮಾಡುವಂತಹ ಜನರಿಗೆ ಇಂತಹ ಆಘಾತ ಆಗುವುದು ಸಹಜ ಇದಕ್ಕಾಗಿ ಸರಿಯಾಗಿ ನೀರು ಕುಡಿಯಬೇಕು.

heat-stroke

ನೀರಿನೊಂದಿಗೆ ಬೇಸಗೆಯಲ್ಲಿ ಬಿಸಿಲಿನ ಆಘಾತ ತಪ್ಪಿಸಲು ಕೆಲವೊಂದು ಪಾನೀಯ ಸೇವನೆ ಮಾಡುವುದು ಕೂಡ ಅತೀ ಅಗತ್ಯವಾಗಿರುವುದು. ಬಿಸಿಲಿನಿಂದಾಗಿ ತುಂಬಾ ಬಳಲಿಕೆ ಮತ್ತು ನಿಶ್ಯಕ್ತಿ ಕಂಡುರುವುದು. ಅತಿಯಾಗಿ ನಿರ್ಜಲೀಕರಣವಾದ ಸಂದರ್ಭದಲ್ಲಿ ಬಿಸಿಲಿನ ಆಘಾತವು ಉಂಟಾಗುವುದು. ಇದರಿಂದ ಪಾರಾಗಲು ಏನು ಮಾಡಬೇಕು ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ.

ಮಜ್ಜಿಗೆ

ಮಜ್ಜಿಗೆ

ಮಜ್ಜಿಗೆ ತುಂಬಾ ತಾಜಾತನ ಉಂಟು ಮಾಡುವ ಪಾನೀಯವಾಗಿದೆ ಮತ್ತು ಇದು ದೇಹವನ್ನು ತಂಪಾಗಿ ಇಡುವುದು. ಇದರಲ್ಲಿ ಪ್ರೊಬಯೋಟಿಕ್, ಪ್ರೋಟೀನ್ ಮತ್ತು ವಿಟಮಿನ್ ಗಳು ಇದೆ ಮತ್ತು ಇದು ದೇಹದಲ್ಲಿ ತಾಪಮಾನವನ್ನು ಸಮತೋಲನದಲ್ಲಿ ಇಡುವುದು.

ತಯಾರಿಸುವುದು ಹೇಗೆ: ಎರಡು ಚಮಚ ಮೊಸರನ್ನು ಒಂದು ಲೋಟ ನೀರಿಗೆ ಸೇರಿಸಿ ಸರಿಯಾಗಿ ಕಲಸಿಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು ಮತ್ತು ಜೀರಿಗೆ ಹುಡಿ ಹಾಕಿ. ಇದು ರುಚಿ ಹೆಚ್ಚಿಸುವುದು. ಬೇಸಿಗೆಯಲ್ಲಿ 1-2 ಲೋಟ ಮಜ್ಜಿಗೆ ಕುಡಿಯಲು ಮರೆಯಬೇಡಿ.

Most Read: ಇಂತಹ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿ ಬೇಸಿಗೆಯ ಬಿಸಿಯನ್ನು ತಣಿಸಿ

ಹೆಸರು ಕಾಳಿನ ಪಾನೀಯ

ಹೆಸರು ಕಾಳಿನ ಪಾನೀಯ

ಚೀನಾದ ಸಾಂಪ್ರದಾಯಿಕ ಔಷಧಿಯ ಪ್ರಕಾರ ಹೆಸರು ಕಾಳಿನ ಪಾನೀಯವು ಬಿಸಿಲಿನ ಆಘಾತ ತಪ್ಪಿಸಲು ಪ್ರಮುಖ ಪಾತ್ರ ವಹಿಸುವುದು. ಬೇಯಿಸಿದ ಹೆಸರು ಕಾಳೂಗಳು ದೇಹಕ್ಕೆ ತೇವಾಂಶ ನೀಡುವುದು ಮತ್ತು ದೇಹದ ಉಷ್ಣತೆ ಕಡಿಮೆ ಮಾಡಲು ಇದು ನೆರವಾಗುವುದು.

ತಯಾರಿಸುವುದು ಹೇಗೆ? ಮೂರು ಕಪ್ ಹೆಸರು ಕಾಳು ಮತ್ತು ಮೂರು ಕಪ್ ನೀರನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ ಮತ್ತು ಇದನ್ನು ಬೇಯಿಸಿ. ಬೇಯಿಸಿದ ಬಳಿಕ ನೀರನ್ನು ಬೇರೆ ತೆಗೆದಿಡಿ ಮತ್ತು ಅದು ತಣ್ಣಗಾಗಲಿ. ದಿನದಲ್ಲಿ ಎರಡು ಸಲ ಈ ನೀರನ್ನು ಕುಡಿಯಿರಿ.

ಬಿಸಿಲಿನ ಆಘಾತ ತಪ್ಪಿಸಲು ಕೆಲವು ಸಾರಭೂತ ತೈಲಗಳು

ಬಿಸಿಲಿನ ಆಘಾತ ತಪ್ಪಿಸಲು ಕೆಲವು ಸಾರಭೂತ ತೈಲಗಳು

ಬಿಸಿಲಿನ ಆಘಾತ ತಡೆಯಲು ಕೆಲವೊಂದು ಸಾರಭೂತ ತೈಲಗಳು ತುಂಬಾ ಅದ್ಭುತವಾಗಿ ಕೆಲಸ ಮಾಡುವುದು. ಲ್ಯಾವೆಂಡರ್ ತೈಲವು ಚರ್ಮ ಹಾಗೂ ನರಗಳಿಗೆ ಶಮನ ನೀಡುವುದು. ಪುದೀನಾ ಎಣ್ಣೆಯು ದೇಹದ ಉಷ್ಣತೆ ಕಡಿಮೆ ಮಾಡಲು ನೆರವಾಗುವುದು. ಬಳಸುವ ವಿಧಾನ: 2-3 ಹನಿ ಪುದೀನಾ ಎಣ್ಣೆಯನ್ನು ತೆಗೆದುಕೊಳ್ಳಿ ಮತ್ತು 1-2 ಹನಿ ಲ್ಯಾವೆಂಡರ್ ಎಣ್ಣೆಯ ಜತೆಗೆ ಇದರ ಮಿಶ್ರಣ ಮಾಡಿ. ಇದಕ್ಕೆ ಎರಡು ಚಮಚ ಆಲಿವ್ ಎಣ್ಣೆ ಹಾಕಿ. ಈ ಮಿಶ್ರಣವನ್ನು ಕುತ್ತಿಗೆಯ ಹಿಂಭಾಗ, ಪಾದದ ಅಡಿ ಮತ್ತು ಮಣಿಕಟ್ಟಿಗೆ ಹಚ್ಚಿಕೊಳ್ಳಿ.

ಈರುಳ್ಳಿ ರಸ

ಈರುಳ್ಳಿ ರಸ

ಬಿಸಿಲಿನ ಆಘಾತ ತಡೆಯಲು ಈರುಳ್ಳಿ ರಸವು ಅತ್ಯುತ್ತಮ ಮನೆಮದ್ದು ಆಗಿದೆ. ಆಯುರ್ವೇದ ಪ್ರಕಾರ ಬಿಸಿಲಿನ ಆಘಾತದ ಲಕ್ಷಣಗಳು ಕಂಡುಬಂದಾಗ ಈರುಳ್ಳಿ ರಸವನ್ನು ಬಳಸಬೇಕು ಎಂದು ಆಯುರ್ವೇದವು ಹೇಳುತ್ತದೆ. ಬಳಸುವ ವಿಧಾನ: ಈರುಳ್ಳೀ ರಸವನ್ನು ಕಿವಿಯ ಹಿಂದುಗಡೆ, ಪಾದದ ಕೆಳಗೆ ಮತ್ತು ಎದೆಗೆ ಹಚ್ಚಿಕೊಳ್ಳಬೇಕು ಮತ್ತು ಸ್ವಲ್ಪ ಸಮಯ ಹಾಗೆ ಬಿಡಬೇಕು. ಜೇನುತುಪ್ಪ ಬೆರೆಸಿಕೊಂಡು ಒಂದು ಚಮಚ ಈರುಳ್ಳಿ ರಸವನ್ನು ಕುಡಿಯಬಹುದು.

ಹುಣಸೆ ಹುಳಿ ರಸ

ಹುಣಸೆ ಹುಳಿ ರಸ

ಹುಣಸೆ ಹುಳಿಯಲ್ಲಿ ಉನ್ನತ ಮಟ್ಟದ ವಿಟಮಿನ್ ಗಳು, ಖನಿಜಾಂಶಗಳು ಮತ್ತು ವಿದ್ಯುದ್ವಿಚ್ಛೇದಗಳು ಇವೆ. ಇದು ದೇಹಕ್ಕೆ ತುಂಬಾ ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ನಿರ್ಜಲೀಕರಣದ ಸಮಸ್ಯೆಯಿಂದ ಇದು ದೂರ ಮಾಡುತ್ತದೆ.

ಬಳಸುವುದು ಹೇಗೆ: ಸ್ವಲ್ಪ ಹುಣಸೆ ಹುಳಿಯನ್ನು ಕುದಿಯು ನೀರಿಗೆ ಹಾಕಿಕೊಳ್ಳಿ. ಇದನ್ನು ಸೋಸಿಕೊಂಡು ರಸ ತೆಗೆಯಿರಿ ಮತ್ತು ಇದಕ್ಕೆ ಸಕ್ಕರೆ ಅಥವಾ ಜೇನುತುಪ್ಪ ಹಾಕಿ ಕುಡಿಯಿರಿ. ಇದು ತಂಪಾದ ಬಳಿಕ ಕುಡಿಯಿರಿ.

Most Read: ಅರಿಶಿನ ಬೆರೆಸಿದ ನೀರು: ತಯಾರಿಸುವ ವಿಧಾನ ಹಾಗೂ ಆರೋಗ್ಯ ಪ್ರಯೋಜನಗಳು

ಮಾವಿನ ಜ್ಯೂಸ್

ಮಾವಿನ ಜ್ಯೂಸ್

ಬಿಸಿಲಿನ ಆಘಾತದಿಂದ ತಡೆಯಲು ಹಸಿ ಮಾವುಗಳು ತುಂಬಾ ಪರಿಣಾಮಕಾರಿ. ಇದು ತುಂಬಾ ತಾಜಾತನ ಉಂಟು ಮಾಡುವ ಪಾನೀಯ ಮತ್ತು ಆರೋಗ್ಯಕಾರಿ ಪಾನೀಯ. ಬಳಸುವುದು ಹೇಗೆ: ನೀರಿಗೆ ಹಾಕಿ ಹಸಿ ಮಾವಿನ ಕಾಯಿಯನ್ನು ಬೇಯಿಸಿ. ಕಾಯಿ ಬೆಂದ ಬಳಿಕ ಇದಕ್ಕೆ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಸ್ವಲ್ಪ ನೀರು, ಜೀರಿಗೆ ಮತ್ತು ಸಕ್ಕರೆ ಹಾಕಿಕೊಳ್ಳಿ.

ಎಳನೀರು

ಎಳನೀರು

ಬಿಸಿಲಿನಿಂದ ದೇಹದಿಂದ ಹೆಚ್ಚಿನ ಪ್ರಮಾಣದ ನೀರು ಬೆವರಿನ ಮೂಲಕ ಆವಿಯಾಗುತ್ತದೆ. ಇದನ್ನು ಮರುತುಂಬಿಕೊಳ್ಳಲು ಎಳನೀರು ಮತ್ತು ಮಜ್ಜಿಗೆಯನ್ನು ಕುಡಿದಷ್ಟೂ ಉತ್ತಮ. ಇದು ದೇಹ ಕಳೆದುಕೊಂಡಿದ್ದ ನೀರನ್ನು ಮತ್ತೆ ತುಂಬಿಸಿ ದೇಹ ಕಳೆದುಕೊಂಡಿದ್ದ ಖನಿಜಗಳನ್ನು ಮತ್ತೆ ಒದಗಿಸುತ್ತವೆ.ಎಳನೀರಿನಲ್ಲಿಯೂ ಉತ್ತಮ ಪ್ರಮಾಣದ ಎಲೆಕ್ಟ್ರೋಲೈಟುಗಳಿವೆ.

English summary

here is how you can treat heat-stroke at home

The scorching summer sun does not only makes us uncomfortable and sweaty but can also cause heat stroke. The sunlight sucks away all the energy and makes you feel weak and lethargic. Heat stroke is caused due to extreme dehydration and staying outdoors in the sun for a very long time. Here are a few things that you can do at home to get relief from heat stroke.
X
Desktop Bottom Promotion