For Quick Alerts
ALLOW NOTIFICATIONS  
For Daily Alerts

ಹುಕ್ಕಾ ಸೇದುವುದರಿಂದ ಆರೋಗ್ಯಕ್ಕೆ ಆಗುವ ಅಪಾಯಗಳು

|

ಹಳೆ ಸಿನಿಮಾಗಳು ಹಾಗೂ ಕೆಲವೊಂದು ಚಿತ್ರಗಳಲ್ಲಿ ದೊಡ್ಡ ಪೈಪ್ ನ್ನು ಬಾಯಿಗೆ ಹಿಡಿದುಕೊಂಡು ಅದರಿಂದ ಧೂಮಪಾನ ಮಾಡುವುದನ್ನು ನೋಡಿದ್ದೇವೆ. ಇದನ್ನು ಹುಕ್ಕಾ ಎಂದು ಕರೆಯಲಾಗುತ್ತದೆ. ಮಾರುಕಟ್ಟೆಗೆ ವಿವಿಧ ರೀತಿಯ ಸಿಗರೇಟ್ ಗಳು ಬಂದರೂ ಹುಕ್ಕಾದ ಜನಪ್ರಿಯತೆ ಮಾತ್ರ ಹಾಗೆ ಇದೆ. ಕೆಲವೊಂದು ಕಡೆಗಳಲ್ಲಿ ಈಗಲೂ ಹುಕ್ಕಾ ಸೇದಲಾಗುತ್ತದೆ. ಧೂಮಪಾನ ಸೇವನೆ ಮಾಡಲು ಒಂದು ರೀತಿಯ ಪೈಪ್ ಬಳಸುವುದನ್ನು ಹುಕ್ಕಾ ಎಂದು ಕರೆಯಲಾಗುತ್ತದೆ. ಇದು ದೊಡ್ಡ ಗಾತ್ರದ ಪೈಪ್ ಆಗಿರುವುದು ಮತ್ತು ಒಂದು ಕಡೆಯಲ್ಲಿ ನೀರು ಹಾಗೂ ಮತ್ತೊಂದರಲ್ಲಿ ನೀರು ತುಂಬಿಸಿರಲಾಗುತ್ತದೆ.

ಒಂದೇ ಸಲ ಹುಕ್ಕಾವನ್ನು ಕೆಲವು ಮಂದಿ ಸೇವಿಸಬಹುದು. ಹುಕ್ಕಾದಲ್ಲಿ ಬಳಸಲಾಗುವಂತಹ ತಂಬಾಕಿಗೆ ಹಣ್ಣುಗಳ ತಿರುಳು, ಜೇನುತುಪ್ಪದಿಂದ ಸಿಹಿ ನೀಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಇದಕ್ಕೆ ತೆಂಗಿನಕಾಯಿ, ಹಣ್ಣುಗಳು, ಪುದೀನಾ ಅಥವಾ ಕಾಫಿ ಸುವಾಸನೆ ನೀಡಲಾಗುವುದು. ಹುಕ್ಕಾ ತಂಬಾಕಿನಲ್ಲಿ ಬಳಸಲಾಗುವಂತಹ ಸುಗಂಧವು ಇಂದಿನ ದಿನಗಳಲ್ಲಿ ಯುವಜನತೆಯಲ್ಲಿ ಕೂಡ ತುಂಬಾ ಜನಪ್ರಿಯವಾಗುತ್ತಿದೆ. ಅದಾಗ್ಯೂ, ಇದು ತುಂಬಾ ಆನಂದ ಮತ್ತು ಖುಷಿ ನೀಡಬಹುದು. ಆದರೆ ಇದರಿಂದ ದೇಹಕ್ಕೆ ಆಗುವಂತಹ ಕೆಲವು ಆರೋಗ್ಯ ಸಮಸ್ಯೆಗಳನ್ನು ಕಡೆಗಣಿಸಬಾರದು.

ಸುಮಾರು 400 ವರ್ಷಗಳಿಂದ ಹುಕ್ಕಾವನ್ನು ಬಳಸಲಾಗುತ್ತಿದೆ. ಇದರಲ್ಲಿ ಬಳಸಲಾಗುವಂತಹ ನೀರು ಆರೋಗ್ಯಕ್ಕೆ ದುಷ್ಪರಿಣಾಮ ಉಂಟು ಮಾಡುವುದನ್ನು ಕಡಿಮೆ ಮಾಡುವುದು ಎಂದು ಇದನ್ನು ಸಂಶೋಧಿಸಿದಾತ ಹೇಳಿದ್ದಾನೆ. ಹುಕ್ಕಾದಿಂದಾಗಿ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂದು ನಾವು ಈ ಲೇಖನದಲ್ಲಿ ತಿಳಿಯುವ...

ಹುಕ್ಕಾದಲ್ಲಿರುವ ವಿಷ

ತಂಪಾದ ನೀರು ಬಲಸುವ ಕಾರಣದಿಂದಾಗಿ ಶ್ವಾಸಕೋಶದ ಮೇಲೆ ಆಗುವಂತಹ ಹಾನಿಕಾರಕ ಪರಿಣಾಮ ಕಡಿಮೆ ಮಾಡಬಹುದು. ಆದರೆ ತಂಬಾಕು ಮತ್ತು ಹೊಗೆಯಲ್ಲಿ ವಿವಿಧ ರೀತಿಯ ವಿಷಕಾರಿ ಅಂಶಗಳು ಇವೆ. ಅವುಗಳು ಯಾವುದೆಂದರೆ..

*ಪೊಲೊನಿಯಮ್ 210, ವಿಕಿರಣಶೀಲ ಐಸೊಟೋಪ್

*ಕಾರ್ಬನ್ ಮೊನೊಕ್ಸೈಡ್

*ತಾರ್

*ಅರ್ಸೆನಿಕ

*ಅಸೆಟಾಲ್ಡಿಹೈಡ್

*ಕೊಬಾಲ್ಟ್

*ಕಾಡ್ಮಿಯಮ್

*ನಿಕೆಲ್

*ಫಾರ್ಮಾಲ್ಡಿಹೈಡ್

*ಲೆಡ್

*ಅಕ್ರೊಲಿನ್

*ಕೊರೊಮಿಯಮ್

ಹುಕ್ಕಾ ಸೇದುವುದರಿಂದ ಆಗುವ ಆರೋಗ್ಯ ಅಪಾಯಗಳು

ಹುಕ್ಕಾ ಸೇವನೆ ಮಾಡುವುದರಿಂದ ಮಾತ್ರ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಅದರ ಹೊಗೆ ಉಸಿರಾಡಿದರೂ ಸಮಸ್ಯೆಯಾಗುವುದು. ಹುಕ್ಕಾ ಸೇವನೆ ಮಾಡುವ ವ್ಯಕ್ತಿಯ ಬದಿಯಲ್ಲಿ ಕುಳಿತುಕೊಂಡರೆ ಆಗ ಆರೋಗ್ಯದ ಮೇಲೆ ಪರಿಣಾಮ ಆಗಬಹುದು. ಹೆಚ್ಚಾಗಿ ಜನರು ಸಿಗರೇಟ್ ಸೇವನೆಗಿಂತ ಹುಕ್ಕಾ ಸೇವನೆ ತುಂಬಾ ಸುರಕ್ಷಿತ ಎಂದು ಭಾವಿಸಿರುವರು. ಆದರೆ ಸಿಗರೇಟ್ ಸೇದುವವರಷ್ಟೇ ಹುಕ್ಕಾ ಸೇವಿಸುವವರು ಕೂಡ ಅಪಾಯದಲ್ಲಿರುವರು.

ಹುಕ್ಕಾ ಸೇದುವುದರಿಂದ ಆಗುವ ಕೆಲವೊಂದು ಸಾಮಾನ್ಯ ಆರೋಗ್ಯ ಸಮಸ್ಯೆಗಳು

•ಅಕಾಲಿಕ ವಯಸ್ಸಾಗುವುದು, ಯಾಕೆಂದರೆ ತಂಬಾಕು ಸೇದುವುದರಿಂದ ಆಮ್ಲಜನಕವು ಚರ್ಮಕ್ಕೆ ತಲುಪುವುದು ಕಡಿಮೆ ಆಗುವುದು ಮತ್ತು ಇದರಿಂದ ಕಲೆಗಳು, ನೆರಿಗೆ ಮತ್ತು ಗೆರೆ ಮೂಡಿ ವಯಸ್ಸಾದವರಂತೆ ಕಾಣಬಹುದು.

•ಮೊನೊನ್ಯೂಕ್ಲಿಯೊಸಿಸ್ ಮತ್ತು ಬಾಯಿಯ ಹಾರ್ಪಿಸ್ ಸೋಂಕು ಬರುವಂತಹ ಅಪಾಯವು ಹೆಚ್ಚಾಗುವುದು.

•ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಹೊಟ್ಟೆ ಕ್ಯಾನ್ಸರ್ ಮತ್ತು ಓಸೋಫಾಗಲ್ ಕ್ಯಾನ್ಸರ್ ಅಪಾಯವು ಹೆಚ್ಚಾಗುವುದು.

•ಬ್ರಾಂಕೈಟಿಸ್ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಸಮಸ್ಯೆಯು ಹೆಚ್ಚಗಬಹುದು.

•ಹೃದಯದ ಕಾಯಿಲೆ ಮತ್ತು ಹೃದಯಾಘಾತದ ಅಪಾಯವು ಹೆಚ್ಚಾಗುವುದು.

ಒಂದು ಸಲಹೆ

ಹೆಚ್ಚಿನವರು ಹುಕ್ಕಾವು ಸಿಗರೇಟ್ ಸೇವನೆಗಿಂತ ತುಂಬಾ ಸುರಕ್ಷಿತ ಎಂದು ಭಾವಿಸಿದ್ದಾರೆ. ಆದರೆ ವಿವಿಧ ಅಧ್ಯಯನಗಳು ಹೇಳಿರುವ ಪ್ರಕಾರ, ವೈಜ್ಞಾನಿಕವಾಗಿ ಸಾಬೀತಾಗಿರುವಂತಹ ವಿಚಾರವೆಂದರೆ ಹುಕ್ಕಾ ಸೇದುವುದು ಕೂಡ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಮತ್ತು ಅಪಾಯ ತರಬಹುದು. ಇದರಿಂದ ನೀವು ಮುಂದಿನ ಸಲ ಹುಕ್ಕಾ ಬಾರ್ ಕಡೆಗೆ ತೆರಳುವ ವೇಳೆ ನಿಮ್ಮ ಆರೋಗ್ಯದ ಬಗ್ಗೆ ಯೋಚಿಸಿ.

English summary

Health Risks Of Smoking Smoking Risky

Be it in movies or in ancient art, we have all seen people holding a long pipe and blowing out smokes for merriment. The traditional form of cigarettes, hookah is something that has not lost its popularity over the years. Even with the advent of various other innovations, hookah still remains a favourite among the masses. So basically, a hookah is a water pipe that is used for smoking tobacco.The pipe is normally large in size and consists of a water chamber, a tobacco chamber, and one or more tubes that are flexible, allowing more than one smokers to use the hookah at the same
X