Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ನೇರಳೆ ದ್ರಾಕ್ಷಿ ಜ್ಯೂಸ್ ಮತ್ತು ಕೆಂಪು ವೈನ್‌ನ ಜಬರ್ದಸ್ತ್ ಆರೋಗ್ಯಕಾರಿ ಪ್ರಯೋಜನಗಳು
ಪ್ರಕೃತಿದತ್ತವಾಗಿ ಸಿಗುವಂತಹ ಹಣ್ಣು ಹಾಗೂ ತರಕಾರಿಗಳಲ್ಲಿ ನಮ್ಮ ದೇಹಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಇದರಿಂದ ಆರೋಗ್ಯವನ್ನು ಕೂಡ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು. ಮನುಷ್ಯ ಕಾಡಿನಲ್ಲೇ ವಾಸಿಸುತ್ತಿದ್ದ ವೇಳೆ ಹಣ್ಣು ಹಾಗೂ ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಲಿದ್ದ. ಆ ಸಮಯದಲ್ಲಿ ಅವನ ಜೀವಿತಾವಧಿ ಕೂಡ ಹೆಚ್ಚಾಗಿತ್ತು. ಆದರೆ ನಾಗರಿಕತೆಗೆ ಒಗ್ಗಿಕೊಂಡ ಬಳಿಕ ಸಿಕ್ಕಿದೆಲ್ಲವನ್ನು ತಿನ್ನಲು ಆರಂಭಿಸಿದ ಪರಿಣಾಮವಾಗಿ ಹಲವಾರು ರೋಗಗಳು ಕಾಡಲು ಆರಂಭಿಸಿದವು.
ಅದರಲ್ಲೂ ಇಂದಿನ ದಿನಗಳಲ್ಲಿ ನಾವು ತಿನ್ನುವಂತಹ ಪ್ರತಿಯೊಂದು ಆಹಾರಕ್ಕೆ ಯಾವುದಾದರೂ ಒಂದು ರೂಪದಲ್ಲಿ ರಾಸಾಯನಿಕವು ಬೆರಕೆಯಾಗುವ ಕಾರಣದಿಂದಾಗಿ ನಮ್ಮ ದೇಹದೊಳಗೆ ಇದು ಬಂದೇ ಬರುತ್ತದೆ. ಆದರೂ ನಾವು ಇದನ್ನು ಕಡೆಗಣಿಸುತ್ತಲೇ ಇರುತ್ತೇವೆ. ಸಾವಯವ ಆಗಿರುವಂತಹ ಹಣ್ಣು ಹಾಗೂ ತರಕಾರಿಗಳು ಈಗಲೂ ಆರೋಗ್ಯಕ್ಕೆ ಒಳ್ಳೆಯದು. ಬನ್ನಿ ಇಂದಿನ ಲೇಖನದಲ್ಲಿ ಕೆಂಪು ವೈನ್ ಮತ್ತು ಕೆಂಪು ಅಥವಾ ನೇರಳೆ ದ್ರಾಕ್ಷಿ ಜ್ಯೂಸ್‌ನಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ....
ಕೆಂಪು ವೈನ್-ನೇರಳ ದ್ರಾಕ್ಷಿ ಜ್ಯೂಸ್
ಕೆಂಪು ವೈನ್ ಮತ್ತು ಕೆಂಪು ಅಥವಾ ನೇರಳ ದ್ರಾಕ್ಷಿ ಜ್ಯೂಸ್ ನಿಂದಾಗಿ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವು ತುಂಬಾ ಸುಧಾರಣೆ ಆಗುವುದು ಮತ್ತು ಇದರಿಂದಾಗಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯು ನಿವಾರಣೆ ಆಗುವುದು. ದ್ರಾಕ್ಷಿ ಜ್ಯೂಸ್ ನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ನ್ನು ದೇಹವು ಆಲ್ಕೋಹಾಲ್ ಗಿಂತ ಬೇಗನೆ ಹೀರಿಕೊಳ್ಳುವುದು ಎಂದು ಹೇಳಲಾಗುತ್ತದೆ. ಒಂದು ಅಥವಾ ಎರಡು ಗ್ಲಾಸ್ ಗಿಂತ ಹೆಚ್ಚು ರೆಡ್ ವೈನ್ ಸೇವನೆ ಮಾಡಿದರೆ ಅದರ ಲಾಭಗಳು ವ್ಯತಿರಿಕ್ತವಾಗಿರುವುದು ಎಂದು ಹೇಳಲಾಗುತ್ತದೆ.
ಕೆಂಪು ವೈನ್‌ನ ಆರೋಗ್ಯ ಲಾಭಗಳು
ಕೆಂಪು ವೈನ್ ನಲ್ಲಿ ಸಸ್ಯಜನ್ಯ ರಾಸಾಯನಿಕವಾಗಿರುವಂತಹ ಪಾಲಿಫೆನಾಲ್ ಇದೆ. ಇದು ಕೆಲವೊಂದು ರೀತಿಯ ಕಾಯಿಲೆಗಳಿಂದ ರಕ್ಷಣೆ ನೀಡುವುದು. ಕೆಂಪು ವೈನ್ ನಲ್ಲಿ ಇರುವಂತಹ ಒಂದು ಪಾಲಿಫೆನಾಲ್ ನ್ನು ರೆಸ್ವೆರಾಟ್ರೊಲ್ ಎಂದು ಕರೆಯಲಾಗುತ್ತದೆ. ಇದು ಹೃದಯದ ರಕ್ಷಣೆಗೆ ಹೆಚ್ಚಿನ ಲಾಭ ನೀಡುವುದು. ಇದು ರಕ್ತನಾಳಗಳಿಗೆ ಆಗುವ ಹಾನಿ, ಕೆಟ್ಟ ಕೊಲೆಸ್ಟ್ರಾಲ್ ನ್ನು ತಗ್ಗಿಸುವುದು ಮತ್ತು ರಕ್ತ ಹೆಪ್ಪುಗಟ್ಟುವುದನ್ನು ಕೂಡ ತಡೆಯುವುದು. ರೆಸ್ವೆರಾಟ್ರೊಲ್ ಆ್ಯಂಟಿಆಕ್ಸಿಡೆಂಟ್ ಕ್ಯಾನ್ಸರ್ ವಿರೋಧಿ, ವಯಸ್ಸಾಗುವ ಲಕ್ಷಣ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿದೆ ಎಂದು 2011ರಲ್ಲಿ ಇನ್ಫ್ಲಮೇಷನ್ ನಲ್ಲಿ ಪ್ರಕಟ ಗೊಂಡಿರುವಂತಹ ಪ್ರಯೋಗಾಲಯ ವರದಿಯಿಂದ ತಿಳಿದುಬಂದಿದೆ. ಕೆಂಪು ವೈನ್ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮತ್ತು ರಕ್ತ ಹೆಪ್ಪುಗಟ್ಟದಂತೆ ತಡೆಯುವುದು.
Most Read: ಕೆಮ್ಮು ಹಾಗೂ ಎದೆಯಲ್ಲಿ ಕಫ ಹೆಚ್ಚಾಗಿದ್ದರೆ- ಒಂದು ಗ್ಲಾಸ್ ಅನಾನಸ್ ಜ್ಯೂಸ್ ಕುಡಿಯಿರಿ
ಒಣದ್ರಾಕ್ಷಿಯಿಂದ ತಯಾರಾದ ರೆಡ್ ವೈನ್ ಒಳ್ಳೆಯದು
ಕೆಂಪು ವೈನ್ ನಲ್ಲಿಯೂ ಕೆಲವಾರು ವಿಧಗಳಿದ್ದು ಯಾವ ಬಗೆಯ ಕೆಂಪು ವೈನ್ ಒಳ್ಳೆಯದು ಎಂಬುದನ್ನು ಕಂಡುಕೊಳ್ಳುವುದು ಕಷ್ಟ. ಇದನ್ನು ಆರಿಸಲು ಹೀಗೆ ಮಾಡಿ. ಸಿಹಿ ವೈನ್ ಗಿಂತಲೂ ಒಣದ್ರಾಕ್ಷಿಯಿಂದ ತಯಾರಾದ ವೈನ್ ಗೆ ಆದ್ಯತೆ ನೀಡಿ. ಆಲ್ಕೋಹಾಲ್ ಪ್ರಮಾಣ ಅತ್ಯಂತ ಕಡಿಮೆ ಇರುವ ವೈನ್ ಹಾಗೂ ಟ್ಯಾನಿನ್ ಪ್ರಮಾಣ ಹೆಚ್ಚಿರುವ ಕೆಂಪು ವೈನ್ ಆರಿಸಿಕೊಳ್ಳಿ. ಇನ್ನು ಕೆಂಪು ವೈನ್ ನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ನಿರೋಧಕ ಗುಣಗಳನ್ನೂ ಹೊಂದಿವೆ ಹಾಗೂ ವಿಶೇಷವಾಗಿ ಹೃದಯವನ್ನು ರಕ್ಷಿಸಿ ಆರೋಗ್ಯವನ್ನು ವೃದ್ದಿಸುತ್ತದೆ. ಕೆಂಪು ದ್ರಾಕ್ಷಿಯ ಸಿಪ್ಪೆಯಲ್ಲಿ ಈ ಆಂಟಿ ಆಕ್ಸಿಡೆಂಟುಗಳು ಹೇರಳವಾಗಿರುತ್ತವೆ. ಹಾಗೂ ಈ ದ್ರಾಕ್ಷಿಗಳಿಂದ ತಯಾರಿಸಿದ ವೈನ್ ಸೇವನೆಯಿಂದ ಬಹುತೇಕ ಎಲ್ಲಾ ವಿಧದ ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ.
ದ್ರಾಕ್ಷಿ ಜ್ಯೂಸ್ ನ ಆರೋಗ್ಯ ಲಾಭಗಳು
ದ್ರಾಕ್ಷಿ ಜ್ಯೂಸ್ ನಲ್ಲಿ ಕೂಡ ಕೆಂಪು ವೈನ್ ನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಇದರಲ್ಲಿ ರೆಸ್ವೆರಾಟ್ರೊಲ್ ಮತ್ತು ಇತರ ಕೆಲವು ವಿಧದ ಪಾಲಿಫೆನಾಲ್, ಆಂಥೋಸಿಯಾನ್ಸಿಸ್ ಇದೆ. ವೈನ್ ನಂತೆ ಕಡು ಬಣ್ಣದ ಜ್ಯೂಸ್ ಕೂಡ ಹಲವಾರು ಆರೋಗ್ಯ ಲಾಭಗಳನ್ನು ನೀಡಲಿದೆ. ಕೆಂಪು ಮತ್ತು ನೇರಳ ಬಣ್ಣದ ದ್ರಾಕ್ಷಿ ಜ್ಯೂಸ್ ಕೆಂಪು ವೈನ್ ನಂತೆ ಹಲವಾರು ಹೃದಯಕ್ಕೆ ಲಾಭಗಳನ್ನು ನೀಡಲಿದೆ. ಇದು ರಕ್ತ ಹೆಪ್ಪುಗಟ್ಟುವ ಅಪಾಯ ತಪ್ಪಿಸುವುದು, ಕೊಲೆಸ್ಟ್ರಾಲ್ ತಗ್ಗಿಸುವುದು, ಹೃದಯದಲ್ಲಿನ ರಕ್ತನಾಳಗಳನ್ನು ಇದು ರಕ್ಷಿಸುವುದು ಮತ್ತು ರಕ್ತದೊತ್ತಡ ಕಡಿಮೆ ಮಾಡುವುದು.
ದ್ರಾಕ್ಷಿ ಜ್ಯೂಸ್ ನ ಆರೋಗ್ಯ ಲಾಭಗಳು
ದ್ರಾಕ್ಷಿ ಮತ್ತು ದ್ರಾಕ್ಷಿಯ ಸಿಪ್ಪೆಯಲ್ಲಿರುವಂತಹ ಫ್ಲಾವನಾಯ್ಡ್ ಮತ್ತು ಆ್ಯಂಟಿಆಕ್ಸಿಡೆಂಟ್ ಹೃದಯದ ಸ್ನಾಯುಗಳು ಆರಾಮವಾಗಿರುವಂತೆ ಮಾಡುತ್ತದೆ. ಇದರಿಂದ ರಕ್ತ ಸಂಚಲನವು ಸುಧಾರಣೆಯಾಗಿ ಏರುಪೇರಾಗುವ ರಕ್ತದೊತ್ತಡವನ್ನು ಸರಿಯಾಗಿ ನಿಯಂತ್ರಣದಲ್ಲಿಡುತ್ತದೆ. ಇನ್ನು ನೇರಳೆ ಬಣ್ಣದ ದ್ರಾಕ್ಷಿಯ ಜ್ಯೂಸ್ ಕುಡಿಯುವ ಜನರ ಮೂತ್ರದಲ್ಲಿ ಇತರ ಹಣ್ಣುಗಳ ಜ್ಯೂಸ್ ಕುಡಿಯುವ ಅಥವಾ ಜ್ಯೂಸ್ ಕುಡಿಯದೆ ಇರುವ ವ್ಯಕ್ತಿಗಳ ಮೂತ್ರದಲ್ಲಿ ಕಂಡುಬರುವಂತಹ ಆಮ್ಲೀಯ ಅಂಶವು ಕಡಿಮೆಯಿತ್ತು ಎಂದು ಅಧ್ಯಾಯನದಲ್ಲಿ ತಿಳಿದುಬಂದಿದೆ. ಒಂದು ಲೋಟ ದ್ರಾಕ್ಷಿ ಜ್ಯೂಸ್ ಚಯಾಪಚಾಯ ಕ್ರಿಯೆಯನ್ನು ಸುಧಾರಿಸುತ್ತದೆ.
Most Read: ದೇಹದ ಕಲ್ಮಶಗಳನ್ನು ಹೊರಹಾಕಲು ಮನೆಯಲ್ಲಿಯೇ ಮಾಡಿ- ನೈಸರ್ಗಿಕ ಜ್ಯೂಸ್
ತೂಕ ಇಳಿಸಲು ಬಯಸುವವರು
ತೂಕ ಕಳೆದುಕೊಳ್ಳಲು ಇದು ನೇರವಾಗಿ ತೂಕ ಕಳೆದುಕೊಳ್ಳುಲು ನೆರವಾಗುವುದಿಲ್ಲ. ಆದರೆ ವ್ಯಾಯಾಮದ ಬಳಿಕ ಕುಡಿಯಲು ಒಳ್ಳೆಯ ಜ್ಯೂಸ್. 12 ವಾರಗಳ ತನಕ ದ್ರಾಕ್ಷಿ ಜ್ಯೂಸ್ ನ್ನು ಕುಡಿದರೆ ಅದರಿಂದ ಯಾವುದೇ ರೀತಿಯ ತೂಕ ಹೆಚ್ಚಳವಾಗಲ್ಲ. ಆದರೆ ದ್ರಾಕ್ಷಿ ಸವಿಯ ಕೃತಕ ಪಾನೀಯ ಕುಡಿಯುತ್ತಿದ್ದವರಲ್ಲಿ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದೆ.
ಶಿಫಾರಸ್ಸುಗಳು
ಕೆಲವೊಂದು ಅನಾರೋಗ್ಯದ ಸಮಸ್ಯೆಗಳಾಗಿರುವಂತಹ ದುರ್ಬಲ ಹೃದಯ ಮತ್ತು ಗರ್ಭಿಣಿ ಮಹಿಳೆಯರು ರೆಡ್ ವೈನ್ ಕುಡಿಯಬಾರದು. ಅಮೆರಿಕಾದ ಹಾರ್ಟ್ ಅಸೋಸಿಯೇಶನ್, ನ್ಯಾಶನಲ್ ಹಾರ್ಟ್, ಲಂಗ್ ಮತ್ತು ಬ್ಲಡ್ ಇನ್ಸ್ ಸ್ಟಿಟ್ಯೂಟ್ ಗಳು ನೀವು ಈವರೆಗೆ ಕುಡಿಯದೆ ಇದ್ದರೆ ರೆಡ್ ವೈನ್ ಕುಡಿಯಿರಿ ಎಂದು ಸೂಚಿಸುವುದಿಲ್ಲ. ನೀವು ಈಗಾಗಲೇ ಆಲ್ಕೋಹಾಲ್ ಸೇವನೆ ಮಾಡುತ್ತಲಿದ್ದರೆ ಆಗ ನೀವು ಮಿತ ಪ್ರಮಾಣದಲ್ಲಿ ರೆಡ್ ವೈನ್ ಸೇವಿಸಬಹುದು. ದಿನಕ್ಕೆ ಮಹಿಳೆಯರು 1.5 ಔನ್ಸ್ ಗಿಂತ ಹೆಚ್ಚಿಗೆ ಕುಡಿಯಬಾರದು ಮತ್ತು ಪುರುಷರು 2 ಔನ್ಸ್ ಗಿಂತ ಹೆಚ್ಚು ಕುಡಿಯಬಾರದು. ಹೀಗೆ ಮಾಡಿದರೆ ಹೃದಯಕ್ಕೆ ಲಾಭವಾಗುವುದು. ಇತರ ಕೆಲವೊಂದು ಹಣ್ಣುಗಳು ಹಾಗೂ ತರಕಾರಿಗಳ ಜತೆಗೆ ದ್ರಾಕ್ಷಿ ಜ್ಯೂಸ್ ಕೂಡ ನಿಮ್ಮ ದೈನಂದಿನ ಹಣ್ಣು ಹಾಗೂ ತರಕಾರಿ ಸೇವನೆ ಪ್ರಮಾಣಕ್ಕೆ ಸರಿಹೊಂದಲು ನೆರವಾಗುವುದು.
Most Read: ಅಜೀರ್ಣ ಮತ್ತು ಹೊಟ್ಟೆಯುಬ್ಬರಿಕೆಯೇ? ಬರೀ ಎರಡೇ ನಿಮಿಷದ ಇಂತಹ ಮಸಾಜ್ ಮಾಡಿ-ತಕ್ಷಣವೇ ಗುಣವಾಗುತ್ತದೆ
ಸೂಚನೆಗಳು
ಅಧ್ಯಯನಗಳು ಕಂಡುಕೊಂಡಿರುವ ಪ್ರಕಾರ ರೆಡ್ ವೈನ್ ಮತ್ತು ದ್ರಾಕ್ಷಿ ಜ್ಯೂಸ್ ನಲ್ಲಿ ಇರುವಂತಹ ರೆಸ್ವೆರಾಟ್ರೊಲ್ ಹಲವಾರು ಆರೋಗ್ಯ ಲಾಭಗಳನ್ನು ಹೊಂದಿದೆ ಎಂದು ಹೇಳುತ್ತದೆ. ನಿಖರ ಆರೋಗ್ಯ ಲಾಭಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಆಗಿ ಇದರ ಸೇವನೆ ಮಾಡುವ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದೆ. ಇತರ ಆಲ್ಕೋಹಾಲ್ ಗಳಾಗಿರುವ ಬಿಯರ್ ಮತ್ತು ಸ್ಪಿರಿಟ್ ಗಿಂತ ಹೆಚ್ಚಿನ ಲಾಭಗಳು ರೆಡ್ ವೈನ್ ನಲ್ಲಿ ಇದೆಯಾ ಎಂದು ತಿಳಿಯಲು ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ. ಯಾವುದೇ ರೀತಿಯ ಆಲ್ಕೋಹಾಲ್ ನ್ನು ಅತಿಯಾಗಿ ಸೇವನೆ ಮಾಡುವ ಪರಿಣಾಮ ಹೃದಯ, ಮೆದುಳು, ಯಕೃತ್ ಮತ್ತು ಇತರ ಕೆಲವೊಂದು ಅಂಗಾಂಗಗಳ ಮೇಲೆ ಆಗುವುದು. ಇದರಿಂದಾಗಿ ಅಧಿಕ ರಕ್ತದೊತ್ತಡ, ರಕ್ತದಲ್ಲಿ ಅಧಿಕ ಟ್ರೈಗ್ಲಿಸರೈಡ್ ಗಳು ಮತ್ತು ಕೆಲವೊಂದು ರೀತಿಯ ಕ್ಯಾನ್ಸರ್ ಬರಲು ಕಾರಣವಾಗುವುದು.